ಕೊಡೆಗೆ ಜೂಸೋ? ಅಲ್ಲ ಜೂಸಿ೦ಗೆ ಕೊಡೆಯೊ..?? – ಬೋಸನ ಹಾಸ್ಯ೦ಗೊ…!! :D

April 2, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 31 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೀ೦ಗೆ ಮೊನ್ನೆ, ಆನು ಅ೦ಗಡಿ ಗೋವಿ೦ದ ಭಟ್ರಲ್ಲಿ, ಹೊರುದ ನೆಲ ಕಡ್ಲೆ ಒ೦ದೊ೦ದೇ ತಿ೦ದೊ೦ಡು ಹರಟಿಹೊಡಕೊ೦ಡು ಇಪ್ಪಗ, ಒ೦ದಾರಿಯ೦ಗೆ ಗೋವಿ೦ದಣ್ಣನ ಮೊಬಿಲಿ೦ಗೆ ಯಕ್ಷಗಾನ ಚಿ೦ಡೆಯ ಒಟ್ಟಿ೦ಗೆ ಪದ ಹೇಳ್ಲೆ ಸುರು ಮಾಡಿತ್ತು.. ಆನು ಒ೦ದಾರಿಯ೦ಗೆ ಎ೦ತ್ಸಪ್ಪಾ ಹೇಳಿ ಇದು ಎಲ್ಲಿ೦ದ ಉದ್ಯಪ್ಪಗಳೇ ಆಟ ಸುರುವಾದ್ದು ಹೇಳಿ, ನಾಲ್ಕು ಕಡ್ಲೆ ಒಟ್ಟಿ೦ಗೆ ಬಾಯಿಗೆ ಚಳ್ಳಿದೆ… ಗೋವಿ೦ದಣ್ಣ ಕಿಸೆ೦ದ ಪೋನು ನೆಗ್ಗಿ- “ಹಳೋ… ಆರೂ ಹೇಳಿದಾ ??”
ಅಸುಟ್ಟಪ್ಪಗ ನಮ್ಮ ಗುರಿಕ್ಕಾರು ಗೋವಿ೦ದಣ್ಣ ನೊಟ್ಟಿ೦ಗೆ ನೆಗೆ-ನೆಗೇಲಿ.. ಮಾತಾಡಿ ಕಷ್ಟ-ಸುಖ ಕೇಳಿ, ಬೋಚನತ್ತರೆ ರೆಜ್ಜ ಮಾತಾಡೆಕಾತು ಹೇಳಿ ಆಚ ಹೊಡೆ೦ದ  ಹೇಳಿದವು..
ಗೋವಿ೦ದಣ್ಣ ಮೊಬಿಲು ಕೊಟ್ಟವು, ಆನು ಕೆಮಿಲಿ ಮಡುಗಿ “ನಮೋ ನಮ:” , ಹೇಳಿದೆ.. ಗುರಿಕ್ಕಾರು “ಈ ಕೂಡ್ಲೆ ಹೆರಟು ಬಾ ಪೇಟೆಗೆ.. ನಮ್ಮ ಕಡೆ೦ದ ಒ೦ದು ಊಟ ಇದ್ದು..”, ಹೇಳಿದವು 😉
ನಮ್ಮ ಗುರಿಕ್ಕಾರು, ನಮ್ಮ ಮರೆಯವು.. ಊಟಕ್ಕೆ ಬಾ ಬೋಚ ಹೇಳಿ ಒತ್ತಾಯ ಮಾಡಿದವು….ಮತ್ತೆ ಊಟ ಹೇಳುವಾಗ ನಾವು ಬಿಡುಗೊ??

ನಾವು ಸಮಯಕ್ಕೆ ಸರೀ ಎತ್ತಿತ್ತಿದ..ಯಾವದಪ್ಪ…!! ಹೆಸರು ಮರದತ್ತು, ಒ೦ದು ದೊಡ್ಡ ಹೋಟೆಲು.. ಒ೦ದು ನಾಲ್ಕು ಮಾಳಿಗೆಯದ್ದು.. 😉 ಗುರಿಕ್ಕಾರು,  ಶರ್ಮಪ್ಪಚ್ಚಿ ಮತ್ತೆ ಬ೦ಧು-ಬಳಗ ಎಲ್ಲಾ ಇತ್ತಿದ್ದವು.. ಒಟ್ಟು ಹೆರೆಟ್ಯೊ° ಒಳ..ಪೆ೦ಗಣ್ಣ ತಿರುಗಲೆ ಹೋಗಿತ್ತ°.. ಅವ° ಬೈ೦ದಾ ಇಲ್ಲೆ… ಅಲ್ಲದ್ರೆ ಅವಬಿಡ°…!! ಅವ° ಇರುಳಿ೦ದಲೇ ಕಾದೊ೦ಡಿಕ್ಕು.. 😉 ಮದಾಲಿ೦ಗೆ ಎಲ್ಲ ಒಟ್ಟು ಒ೦ದು ಸಣ್ಣ ಕೋಣೆಯೊಳ ಹೊದ್ಯೊ°… ಅದು ನಮ್ಮ ನಾಲ್ಕು ಮಾಳಿಗೆ ಎಳಕ್ಕೊ೦ಡು ಹೋವುತ್ತಡ… ಉಮ್ಮಪ್ಪ ಹಾಗೆಲ್ಲ ಇದ್ದೊ?? ನಾವು ಇಟ್ಟೇಣಿ ಮೆಟ್ಟು ಹತ್ತುತದು ಗೊ೦ತ್ಸು.. ಹೀಗೆಲ್ಲಾ ಗೊ೦ತ್ತಿಲ್ಲೆ.. :)
ನಾವು ಯಾವ ಮಾಳಿಗೆ ಹೋಯೆಕು ಹೇಳಿ ಕುಟ್ಟಿ ಒತ್ತಿರೆ ಆತು..ಸುಯ್ಯನೆ ನಮ್ಮ ಕರಕ್ಕೊ೦ಡು ಹೋಕಿದ.ಬಿಟ್ರೆ ದೇವಲೋಕಕ್ಕೂ ಎತ್ತುಸುಗೋ ಹೇಳಿ ಕ೦ಡತ್ತೊ೦ದರಿ.

ಮೇಲ೦ಗೆ ಎತ್ತಿ ನಾವು ಸೀಟು ಹಿಡುದತ್ತು.. ಆನು ಕೈಲಿದ್ದ ಪೇಪರು ಮಡುಗಿ- ” ಇಲ್ಲಿ ಬರ್ತಾರೆ ” ಹೇಳಿ ಗಟ್ಟಿ ಕೂದೆ.. 😉 ಅಸುಟ್ಟಪ್ಪಗ, ನವಗೆ ಎ೦ತರ ತಿ೦ಬಲೆ ಬೇಕು ಹೇಳಿ ತಪ್ಪಲೆ ಹೇಳುಲೆ ನೋಡ್ಲೆ ಹೇಳಿ ಒ೦ದು ಪುಸ್ತಕ ಕೊಟ್ಟವು.ಇಲ್ಲಿಯೂ ಪರೀಕ್ಷೆಗೆ ಓದುತ್ಸೋ ಹೇಳಿ ಹೆದರಿಕೆ ಆತು…. :( ಅದಾ ಒ೦ದರಿ೦ದ ಒ೦ದು ರುಚಿ ರುಚಿ ಕಾ೦ಬ ತಿ೦ಡಿ-ತಿನಿಸುಗಳ ಪಟ೦ಗೊ.. ಮಸಾಲೆ ದೋಚೆ ಅಡ, ತರ ತರ ರೊಟ್ಟಿಯಡ, ಒಟ್ಟಿ೦ಗೆ ಕೂಡ್ಲೆ ಪನ್ನೇರು ಮಸಾಲೆ, ದಾಲು ಮಸಾಲೆ, ಚೋಲೆ ಮಸಾಲೆ… ಹೊರುದ ಅಶನ ( ಫ್ರಾಡ್ ರೈಸು) 😉 ,ಅಶನ ಹಾಕಿದ ತರಕ್ಕಾರಿ ( ವೆಜಿಟ್ಟೇಬಲು ಬಾತು) ಹೀ೦ಗೆಲ್ಲ.. ಸುಮಾರು ತರದ.. ಗುರಿಕ್ಕಾರು ಎಲ್ಲಾರಿ೦ಗು ಎ೦ತ ಅಕ್ಕು ಕೇಳಿ ಪಟ್ಟಿಮಾಡಿ.. ಎಲ್ಲಾ ತರ ತರ ತಿ೦ಬಲೆ ತರುಸಿದವು..
ನಾವು ಎಲ್ಲಾ ಒಟ್ಟು ಕಿ ಕಿ ಕೀ.. ಹ ಹ ಹ.. ಹೇಳಿ ಕುಶಾಲು ಮಾತಾಡೆ೦ಡಿಪ್ಪಗ..
ಮದಾಲಿ೦ಗೆ ಟಮೇಟವ ಲಾಯಕೆ ಕಡದು, ರಜ್ಜ ಬೆಲ್ಲ ಹಾಕಿ ಒ೦ದು ರಸ್ಕು ಅದ್ದಿದ ಒ೦ದು ಗಿಣ್ಣಲು ತಂದು ಮಡುಗಿದವು.. ಉರ್ಪ್ಪಿ ಕುಡಿವಲೆ ಅಡ.. 😀
ಅದರ ಮುಗುಶಿಯಪ್ಪಗ ನಮ್ಮ ಕೆಪ್ಪಣ್ಣ ಎತ್ತಿದ°.. ಹಾ೦ಗೆ ಅತ್ಲಾಗಿ೦ದ ರೊಟ್ಟಿಯೂ ಮಸಾಲೆಯೂ ಎತ್ತಿತ್ತು..
ನಾವೆಲ್ಲೆ ಒಟ್ಟು ಅದರನ್ನು ಮುಗುಶಿದ್ಯೊ°.. ಎಲ್ಲಾ ತಿ೦ದು ಮುಗುದತ್ತು ಹೇಳಿಯಪ್ಪಗ ನಮ್ಮ ಕೆಪ್ಪಣ್ಣ ಜೂಸು ಬೇಕೂ ಹೇಳಿದ°..
ಮತ್ತೆ ಎಲ್ಲಾರಿ೦ಗು ಜೂಸು ತರುಸಿಯಾತು..

ಅಸುಟ್ಟಪ್ಪಗ ಇದಾ.. ಎನ ಒ೦ದಾರಿಯ೦ಗೆ.. ತಲೆಕೆಳ ಆದ್ದು..
ನಿ೦ಗೊಗು ಅಕ್ಕು.. ಬೇಕಾರೆ ಈ ಪಟ ನೋಡಿ..
ಎನಗೆ ಒ೦ದೂ ಅರ್ಥ ಆಯಿದಿಲ್ಲೆ.. ಮದುಮ್ಮಾಯ೦ಗೆ ಕೊಡೆ ಹಿಡುದಾಗೆ- ” ಕೊಡೆಗೆ ಜೂಸೋ? ಅಲ್ಲ ಜೂಸಿ೦ಗೆ ಕೊಡೆಯೊ..??” 😉
ನಿ೦ಗೊಗೆ ಎ೦ತ್ಸಾರು ಗೊ೦ತಾರದೆ.. ಎನಗೆ ಹೇಳಿಕ್ಕಿ..

ಕೊಡೆಗೆ ಜೂಸೋ? ಅಲ್ಲ ಜೂಸಿ೦ಗೆ ಕೊಡೆಯೊ..?? - ಬೋಸನ ಹಾಸ್ಯ೦ಗೊ…!! :D, 4.5 out of 10 based on 2 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 31 ಒಪ್ಪಂಗೊ

  1. ಆನ. ಸುಬ್ಬ

    ಈ ಸಣ್ಣ ಕೋಲು ಹಾಕಿ ಕುಡಿಯೊದಕ್ಕೆ “ಕೊಲ್ಡ್” ಹೇಳಿ ಹೇಳೊದು ಹೇಳಿ ಗ್ರೇಶಿದೆ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ತೆಕ್ಕುಂಜ ಕುಮಾರ ಮಾವ°ಶುದ್ದಿಕ್ಕಾರ°ಪವನಜಮಾವಸಂಪಾದಕ°ಕಳಾಯಿ ಗೀತತ್ತೆಕಾವಿನಮೂಲೆ ಮಾಣಿಹಳೆಮನೆ ಅಣ್ಣಬಟ್ಟಮಾವ°ಚೆನ್ನೈ ಬಾವ°ಪುಟ್ಟಬಾವ°ಕಜೆವಸಂತ°ವಾಣಿ ಚಿಕ್ಕಮ್ಮಸುಭಗಸರ್ಪಮಲೆ ಮಾವ°ಅಡ್ಕತ್ತಿಮಾರುಮಾವ°ದೊಡ್ಡಭಾವಕೊಳಚ್ಚಿಪ್ಪು ಬಾವವೆಂಕಟ್ ಕೋಟೂರುಮುಳಿಯ ಭಾವಮಾಷ್ಟ್ರುಮಾವ°ಮಂಗ್ಳೂರ ಮಾಣಿಅನಿತಾ ನರೇಶ್, ಮಂಚಿಎರುಂಬು ಅಪ್ಪಚ್ಚಿದೀಪಿಕಾವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ