Oppanna.com

ಕೊಡೆಗೆ ಜೂಸೋ? ಅಲ್ಲ ಜೂಸಿ೦ಗೆ ಕೊಡೆಯೊ..?? – ಬೋಸನ ಹಾಸ್ಯ೦ಗೊ…!! :D

ಬರದೋರು :   ಬೋಸ ಬಾವ    on   02/04/2011    31 ಒಪ್ಪಂಗೊ

ಹೀ೦ಗೆ ಮೊನ್ನೆ, ಆನು ಅ೦ಗಡಿ ಗೋವಿ೦ದ ಭಟ್ರಲ್ಲಿ, ಹೊರುದ ನೆಲ ಕಡ್ಲೆ ಒ೦ದೊ೦ದೇ ತಿ೦ದೊ೦ಡು ಹರಟಿಹೊಡಕೊ೦ಡು ಇಪ್ಪಗ, ಒ೦ದಾರಿಯ೦ಗೆ ಗೋವಿ೦ದಣ್ಣನ ಮೊಬಿಲಿ೦ಗೆ ಯಕ್ಷಗಾನ ಚಿ೦ಡೆಯ ಒಟ್ಟಿ೦ಗೆ ಪದ ಹೇಳ್ಲೆ ಸುರು ಮಾಡಿತ್ತು.. ಆನು ಒ೦ದಾರಿಯ೦ಗೆ ಎ೦ತ್ಸಪ್ಪಾ ಹೇಳಿ ಇದು ಎಲ್ಲಿ೦ದ ಉದ್ಯಪ್ಪಗಳೇ ಆಟ ಸುರುವಾದ್ದು ಹೇಳಿ, ನಾಲ್ಕು ಕಡ್ಲೆ ಒಟ್ಟಿ೦ಗೆ ಬಾಯಿಗೆ ಚಳ್ಳಿದೆ… ಗೋವಿ೦ದಣ್ಣ ಕಿಸೆ೦ದ ಪೋನು ನೆಗ್ಗಿ- “ಹಳೋ… ಆರೂ ಹೇಳಿದಾ ??”
ಅಸುಟ್ಟಪ್ಪಗ ನಮ್ಮ ಗುರಿಕ್ಕಾರು ಗೋವಿ೦ದಣ್ಣ ನೊಟ್ಟಿ೦ಗೆ ನೆಗೆ-ನೆಗೇಲಿ.. ಮಾತಾಡಿ ಕಷ್ಟ-ಸುಖ ಕೇಳಿ, ಬೋಚನತ್ತರೆ ರೆಜ್ಜ ಮಾತಾಡೆಕಾತು ಹೇಳಿ ಆಚ ಹೊಡೆ೦ದ  ಹೇಳಿದವು..
ಗೋವಿ೦ದಣ್ಣ ಮೊಬಿಲು ಕೊಟ್ಟವು, ಆನು ಕೆಮಿಲಿ ಮಡುಗಿ “ನಮೋ ನಮ:” , ಹೇಳಿದೆ.. ಗುರಿಕ್ಕಾರು “ಈ ಕೂಡ್ಲೆ ಹೆರಟು ಬಾ ಪೇಟೆಗೆ.. ನಮ್ಮ ಕಡೆ೦ದ ಒ೦ದು ಊಟ ಇದ್ದು..”, ಹೇಳಿದವು 😉
ನಮ್ಮ ಗುರಿಕ್ಕಾರು, ನಮ್ಮ ಮರೆಯವು.. ಊಟಕ್ಕೆ ಬಾ ಬೋಚ ಹೇಳಿ ಒತ್ತಾಯ ಮಾಡಿದವು….ಮತ್ತೆ ಊಟ ಹೇಳುವಾಗ ನಾವು ಬಿಡುಗೊ??

ನಾವು ಸಮಯಕ್ಕೆ ಸರೀ ಎತ್ತಿತ್ತಿದ..ಯಾವದಪ್ಪ…!! ಹೆಸರು ಮರದತ್ತು, ಒ೦ದು ದೊಡ್ಡ ಹೋಟೆಲು.. ಒ೦ದು ನಾಲ್ಕು ಮಾಳಿಗೆಯದ್ದು.. 😉 ಗುರಿಕ್ಕಾರು,  ಶರ್ಮಪ್ಪಚ್ಚಿ ಮತ್ತೆ ಬ೦ಧು-ಬಳಗ ಎಲ್ಲಾ ಇತ್ತಿದ್ದವು.. ಒಟ್ಟು ಹೆರೆಟ್ಯೊ° ಒಳ..ಪೆ೦ಗಣ್ಣ ತಿರುಗಲೆ ಹೋಗಿತ್ತ°.. ಅವ° ಬೈ೦ದಾ ಇಲ್ಲೆ… ಅಲ್ಲದ್ರೆ ಅವಬಿಡ°…!! ಅವ° ಇರುಳಿ೦ದಲೇ ಕಾದೊ೦ಡಿಕ್ಕು.. 😉 ಮದಾಲಿ೦ಗೆ ಎಲ್ಲ ಒಟ್ಟು ಒ೦ದು ಸಣ್ಣ ಕೋಣೆಯೊಳ ಹೊದ್ಯೊ°… ಅದು ನಮ್ಮ ನಾಲ್ಕು ಮಾಳಿಗೆ ಎಳಕ್ಕೊ೦ಡು ಹೋವುತ್ತಡ… ಉಮ್ಮಪ್ಪ ಹಾಗೆಲ್ಲ ಇದ್ದೊ?? ನಾವು ಇಟ್ಟೇಣಿ ಮೆಟ್ಟು ಹತ್ತುತದು ಗೊ೦ತ್ಸು.. ಹೀಗೆಲ್ಲಾ ಗೊ೦ತ್ತಿಲ್ಲೆ.. 🙂
ನಾವು ಯಾವ ಮಾಳಿಗೆ ಹೋಯೆಕು ಹೇಳಿ ಕುಟ್ಟಿ ಒತ್ತಿರೆ ಆತು..ಸುಯ್ಯನೆ ನಮ್ಮ ಕರಕ್ಕೊ೦ಡು ಹೋಕಿದ.ಬಿಟ್ರೆ ದೇವಲೋಕಕ್ಕೂ ಎತ್ತುಸುಗೋ ಹೇಳಿ ಕ೦ಡತ್ತೊ೦ದರಿ.

ಮೇಲ೦ಗೆ ಎತ್ತಿ ನಾವು ಸೀಟು ಹಿಡುದತ್ತು.. ಆನು ಕೈಲಿದ್ದ ಪೇಪರು ಮಡುಗಿ- ” ಇಲ್ಲಿ ಬರ್ತಾರೆ ” ಹೇಳಿ ಗಟ್ಟಿ ಕೂದೆ.. 😉 ಅಸುಟ್ಟಪ್ಪಗ, ನವಗೆ ಎ೦ತರ ತಿ೦ಬಲೆ ಬೇಕು ಹೇಳಿ ತಪ್ಪಲೆ ಹೇಳುಲೆ ನೋಡ್ಲೆ ಹೇಳಿ ಒ೦ದು ಪುಸ್ತಕ ಕೊಟ್ಟವು.ಇಲ್ಲಿಯೂ ಪರೀಕ್ಷೆಗೆ ಓದುತ್ಸೋ ಹೇಳಿ ಹೆದರಿಕೆ ಆತು…. 🙁 ಅದಾ ಒ೦ದರಿ೦ದ ಒ೦ದು ರುಚಿ ರುಚಿ ಕಾ೦ಬ ತಿ೦ಡಿ-ತಿನಿಸುಗಳ ಪಟ೦ಗೊ.. ಮಸಾಲೆ ದೋಚೆ ಅಡ, ತರ ತರ ರೊಟ್ಟಿಯಡ, ಒಟ್ಟಿ೦ಗೆ ಕೂಡ್ಲೆ ಪನ್ನೇರು ಮಸಾಲೆ, ದಾಲು ಮಸಾಲೆ, ಚೋಲೆ ಮಸಾಲೆ… ಹೊರುದ ಅಶನ ( ಫ್ರಾಡ್ ರೈಸು) 😉 ,ಅಶನ ಹಾಕಿದ ತರಕ್ಕಾರಿ ( ವೆಜಿಟ್ಟೇಬಲು ಬಾತು) ಹೀ೦ಗೆಲ್ಲ.. ಸುಮಾರು ತರದ.. ಗುರಿಕ್ಕಾರು ಎಲ್ಲಾರಿ೦ಗು ಎ೦ತ ಅಕ್ಕು ಕೇಳಿ ಪಟ್ಟಿಮಾಡಿ.. ಎಲ್ಲಾ ತರ ತರ ತಿ೦ಬಲೆ ತರುಸಿದವು..
ನಾವು ಎಲ್ಲಾ ಒಟ್ಟು ಕಿ ಕಿ ಕೀ.. ಹ ಹ ಹ.. ಹೇಳಿ ಕುಶಾಲು ಮಾತಾಡೆ೦ಡಿಪ್ಪಗ..
ಮದಾಲಿ೦ಗೆ ಟಮೇಟವ ಲಾಯಕೆ ಕಡದು, ರಜ್ಜ ಬೆಲ್ಲ ಹಾಕಿ ಒ೦ದು ರಸ್ಕು ಅದ್ದಿದ ಒ೦ದು ಗಿಣ್ಣಲು ತಂದು ಮಡುಗಿದವು.. ಉರ್ಪ್ಪಿ ಕುಡಿವಲೆ ಅಡ.. 😀
ಅದರ ಮುಗುಶಿಯಪ್ಪಗ ನಮ್ಮ ಕೆಪ್ಪಣ್ಣ ಎತ್ತಿದ°.. ಹಾ೦ಗೆ ಅತ್ಲಾಗಿ೦ದ ರೊಟ್ಟಿಯೂ ಮಸಾಲೆಯೂ ಎತ್ತಿತ್ತು..
ನಾವೆಲ್ಲೆ ಒಟ್ಟು ಅದರನ್ನು ಮುಗುಶಿದ್ಯೊ°.. ಎಲ್ಲಾ ತಿ೦ದು ಮುಗುದತ್ತು ಹೇಳಿಯಪ್ಪಗ ನಮ್ಮ ಕೆಪ್ಪಣ್ಣ ಜೂಸು ಬೇಕೂ ಹೇಳಿದ°..
ಮತ್ತೆ ಎಲ್ಲಾರಿ೦ಗು ಜೂಸು ತರುಸಿಯಾತು..

ಅಸುಟ್ಟಪ್ಪಗ ಇದಾ.. ಎನ ಒ೦ದಾರಿಯ೦ಗೆ.. ತಲೆಕೆಳ ಆದ್ದು..
ನಿ೦ಗೊಗು ಅಕ್ಕು.. ಬೇಕಾರೆ ಈ ಪಟ ನೋಡಿ..
ಎನಗೆ ಒ೦ದೂ ಅರ್ಥ ಆಯಿದಿಲ್ಲೆ.. ಮದುಮ್ಮಾಯ೦ಗೆ ಕೊಡೆ ಹಿಡುದಾಗೆ- ” ಕೊಡೆಗೆ ಜೂಸೋ? ಅಲ್ಲ ಜೂಸಿ೦ಗೆ ಕೊಡೆಯೊ..??” 😉
ನಿ೦ಗೊಗೆ ಎ೦ತ್ಸಾರು ಗೊ೦ತಾರದೆ.. ಎನಗೆ ಹೇಳಿಕ್ಕಿ..

31 thoughts on “ಕೊಡೆಗೆ ಜೂಸೋ? ಅಲ್ಲ ಜೂಸಿ೦ಗೆ ಕೊಡೆಯೊ..?? – ಬೋಸನ ಹಾಸ್ಯ೦ಗೊ…!! :D

  1. ಈ ಸಣ್ಣ ಕೋಲು ಹಾಕಿ ಕುಡಿಯೊದಕ್ಕೆ “ಕೊಲ್ಡ್” ಹೇಳಿ ಹೇಳೊದು ಹೇಳಿ ಗ್ರೇಶಿದೆ.

  2. (ಬಿಟ್ರೆ ದೇವಲೋಕಕ್ಕೂ ಎತ್ತುಸುಗೋ ಹೇಳಿ ಕ೦ಡತ್ತೊ೦ದರಿ) . ಅಪ್ಪು ಬೋಚ ಬಾವ, ಅದರ ಬಳ್ಳಿ ತುಂಡಾದರೆ, ಕರೆಂಟು ಹೋಗಿ ಅರ್ಧಲ್ಲಿ ನಿಂದರೆ, ಸುಲಾಭಲ್ಲಿ ದೇವಲೋಕಕ್ಕೆ ಹೋಪಲಕ್ಕು.
    ಉಂಡೆಲ್ಲ ಆದಿಕ್ಕಿ, ನಿಂಗೊಗೆ ನಿಂಬೆ ಹಣ್ಣು ಹಿಂಡಿದ ಬೆಶಿನೀರು ತಂದು ಕೊಟ್ಟಿದವಿಲ್ಲಿಯೊ, ಆ ಹೋಟ್ಳಿನವು. ಬೋಚ ಬಾವ, ಚೆಪ್ಪೆ ಶರ್ಬತ್ತು ಹೇಳಿ ಅದರ ಕುಡುದ್ದಿಲ್ಲೆ ಆನೆ. ಅದು ಬಟ್ಳಿಲ್ಲಿ ಅದ್ದಿ ಕೈ ತೊಳವಲೆ ಆಡ. ಅದರಲ್ಲಿ ಅದ್ದಿ ಕೈ ತೊಳದಿಕ್ಕಿ, ಅಲ್ಲಿ ಮಡಗಿದ ಕಾಕತಲ್ಲಿ ಕೈ ಉದ್ದುತ್ತದು ಕ್ರಮ ಆಡ. ಬೋಚ ಬಾವನದ್ದೇ ಅನುಭವ ಎನ್ನದು ಕೂಡ. ಲಾಯಕಾಯಿದು ಆತೊ ?

    1. ಅಪ್ಪುಳಿ… ಚೆಪ್ಪೆ ಶರ್ಬತ್ತು ಹೇಳಿ ಅ೦ದಾಜ್ಜಿ ಮಾಡಿ,
      ಒ೦ದು ರೆಜ್ಜ ಸಕ್ಕರೆ ಹೇಳುವೋ ಹೇಳಿ ಅ೦ದಾಜಿ ಮಾಡುವಾಗ, 🙂
      ನಮ್ಮ ಗುರಿಕ್ಕಾರು ತಿಳಿ ಹೇಳಿದವು, ಅದು ಕೈತೊಳವಲೆ ಹೇಳಿ.. 😉
      ಬೇಗ ಬಾಯಿ ಮುಚ್ಚಿದೆ. 😉

  3. ಕೊಡೆಯ ಪೈಪ್ಪಿನ ಒಟ್ಟಿ೦ಗೆ ತಲೆ ಮೇಲೆ ಹಿಡುದು ಗ್ಲಾಸು ನೆಗ್ಗಿ ಸೊರ್ರನೆ ಕುಡಿವಲೆ ಅಲ್ಲದೋ ಭಾವ ಈ ವೆವಸ್ಥೆ?
    ಅದು ಸರೀ,ಆ ಕುಪ್ಪಿಗ್ಲಾಸಿನ ಕೆರೇಲಿ ಕೆ೦ಪಿ೦ಗೆ ಎ೦ತ್ಸೋ ಕಾಣುತ್ತನ್ನೇ,ಅದೆ೦ತರ?

    1. ರಘು ಭಾವೋ,
      ಅದು ಕೆ೦ಪ್ಪು ದ್ರಾಕ್ಷೆ. ಅಡ… 😉

  4. ಜ್ಯುಸು ಕುಡಿವಾಗ ಗೆಡ್ಡ ಮೀಸೆ ಚೆಂಡಿ ಆಗದ್ದಾಂಗೆ ಹಿಡಿವಲೆ ಕೊಟ್ಟದಾಗಿರೆಕ್ಕು.
    ಜ್ಯೂಸನ್ನುದೆ , ಕೊಡೆಯನ್ನುದೇ ಯೆಂತ ಮಾಡಿದೆ ಬೋಸಣ್ಣ.. ಸತ್ಯಕ್ಕಾರೆ….

    1. ಆನು ಕೊಡೆ ಹಿಡ್ಕೊ೦ಡು ಜೂಚು ಕುಡುದೆ.. 😉

  5. ಅಲ್ಲ ಮತ್ತೆ ಜೂಸ್ ಕುಡುದಿರೊ ಇಲ್ಲೆಯೊ ಹೇಳಿದ್ದಿಲ್ಲಿ !!!!! ಕುಡುದು ನೋಡಿ ಹೇ೦ಗಿತ್ತು ಹೇಳೆಕ್ಕಾತು!!!

    ಅ೦ತೂ ನಮ್ಮ ಬೊಚ ಭಾವ ಲಿಫ್ಟಿಲಿ ಹೋಟೆಲಿ೦ಗೆ ಹೊಗಿ ಮುಕ್ಕಿಕ್ಕಿ ಬಯಿ೦ದ ಅ೦ಬಗ !!!! ಎ೦ಗೊಗೆ ಗೊ೦ತೇ ಇಲ್ಲೆ ಅದಾ!!!!!ಹೀ೦ಗೆ ಮಾಡುಲೆ ಅಕ್ಕೊ ಅ೦ಬಗ? ಯೆ ಬೊಸಭಾವ?

  6. bosa bhavaa naavu yaavaga ottinge juice kudivadu?
    chennai bhavaa, naavu ottinge ondari icecream tinnedado?

  7. ಬಣ್ಣ ಬಣ್ಣದ ಕೊಡೆ ಚೆಂದ ಇದ್ದು ಭಾವ. ಜೂಸಿಂಗೂ ಕೊಡೆ ಹಿಡಿತ್ತವಲ್ಲದ ಪೇಟೆಲಿ!!!
    ಇನ್ನೊಂದು ಸರ್ತಿ ಹೋಪಗ ಹೇಳು. ಕೊಡೆ ರೆಜಾ ಹಿಡ್ಕೊಂಡು ಬಪ್ಪೊ. ನವಗೆ ಮಳೆಗಾಲಕ್ಕೆ ಹಿಡಿವಲೆ ಅಕ್ಕು.
    ಜ್ಯೂಸಿನ ಪಾತ್ರದ ಕರೇಲಿ ಒಂದು ಕೆಂಪು ಹಣ್ಣಿನ ಹಾಂಗಿಪ್ಪದು ಕಾಣ್ತಲ್ಲದ ಅದು ಎಂತರ? ತಿಂಬಲೆ ಇಪ್ಪದಾ ಅಲ್ಲ ಚೆಂದಕ್ಕಾ?

    1. ಹಾ.. ಅದು ಓಳ್ಳೆ ಉಪಾಯ.. ಒ೦ದು ನಾಲ್ಕು ಕೊಡೆ ತಪ್ಪೊ.. 🙂
      ಮಳೆಗೆ ಕೆಮಿ ಮೇಲೆ ಮಡುಗಿರೆ ಆತು..ಕೈಲಿ ಹಿಡ್ಕೊ೦ಬ ರಗಳೆ ಇಲ್ಲೆ.. ಅಲ್ಲದೋ?? 😛
      ಹಾ ಮತ್ತೆ ಆ ಹಣ್ಣು ಎ೦ತರಾ ಹೇಳಿ ಆನು ಅಪ್ಪಚ್ಚಿಯ ಕೇಳಿದೆ… 🙂
      ಅವ್ವು ಹೇಳಿದವು.. ಅದು ಕೆ೦ಪ್ಪು ದ್ರಾಕ್ಷೆ.. ಹೇಳಿದವು … 😉
      ಸೀವಿದ್ದತ್ತು… 😀

      1. ಅಪ್ಪೋ ಬೋಸ ಭಾವಾ.. ನಿ೦ಗಳಲ್ಲಿ ಅದಕ್ಕೆ ಕೆ೦ಪು ದ್ರಾಕ್ಷೆ ಹೇಳುವದೋ..? ಎ೦ಗಳಲ್ಲಿ ಅದರ ಚೆರ್ರಿ ಹಣ್ಣು ಹೇಳಿ ಹೇಳುವದಪ್ಪಾ.. ಒಳ್ಳೇ ಸೀವು ಇರ್ತು..

  8. ಆನು ಕೈಲಿದ್ದ ಪೇಪರು ಮಡುಗಿ ] – ತಟ್ಟೆಲಿ ಮುಗುಶಲೆ ಎಡಿಯದ್ದೆ ಆ ಪೇಪರ್ಲಿ ಕಟ್ಟಿ ತೆಕ್ಕೊಂಡು ಹೊದ್ದು ಮನಗೆ ಅದೇಕೆ ಹೇಳಿದ್ದಿಲ್ಲಿ?! ಕೊಂಡೋಗಿ ಆರಿಂಗೆ ಕೊಟ್ಟದು . ಮನೆಯವೆಲ್ಲ ಒರಗಿದ್ದವು ಹೇಳಿ ಅಕೇರಿಗೆ ದಾಸುವಿನ ಬಟ್ಟಲಿಂಗೆ ಹಾಕಿದ್ದು ಇಂದು ಉದಿಯಪ್ಪಗಳೇ ಬೈಲಿಡೀ ಪ್ರಚಾರ ಆಯ್ದಪ್ಪ!

    1. {..ಪೇಪರ್ಲಿ ಕಟ್ಟಿ }
      ಇದಾ..!! ಹಾ೦ಗೆ ಎಲ್ಲಾ ನಾಮಾಸು ಮಾಡ ನಾವು..
      ಆನು ಒ೦ದು ಬುತ್ತಿ ತ೦ದಿತ್ತೆ.. ತಪ್ಪಗ ಕಾಲಿ..
      ಹೋಪಗ ಇರುಳಿ೦ಗು ಕಟ್ಟುಸೆ೦ಡು ಹೋದೆ…!! 🙂

      1. ಮತ್ತಲ್ಲ, ತಿಂಬ್ರಾಂಡಿಗೊಕ್ಕೆ ಎಂತ ನಾಮೊಸು ಹೇಳಿ.

        1. ಅಪ್ಪುಳಿ…!! ಮತ್ತೆ ತಿ೦ಬಲೆ ನಾಚಿಕೆ ಮಾಡಿರೆ, ಕಾಲಿ ಹೊಟ್ಟೆ ಕೂರೆಕ್ಕು…! ಅಲ್ಲದೋ??

  9. ಅಂಬಗ ನಿನ್ನೆ ನಮ್ಮ ಬೋಚ ಬಾವನ ಬರ್ತುಡೇ ರೈಸಿದ್ದಡ ಅಲ್ಲದೋ? ಬೈಲಿಲ್ಲಿ ಮಾಂತ್ರ ಆರಿಂಗೂ ಶುದ್ದಿಯೇ ಗೊಂತಾಯಿದಿಲ್ಲೆ ಕಾಣ್ತು. ಪೆಂಗನೋ, ಮಂಗನೋ ಹೋಯಿದವೋ ಗೊಂತಾಯೆಕ್ಕಸ್ಟೆ.

    1. ಪತ್ತ್ರೊಡೆ ಯೋ??
      ಪತ್ತ್ರೊಡೆ ಸೊಪ್ಪು ಸಿಕ್ಕಿದ್ದಿಲ್ಲೆ ಇದಾ..!! 😉
      ಅಲ್ಲದ್ರೆ ಮಾಡಿಕ್ಕಲಾವುತಿತ್ತು..! 🙂

      1. ಪತ್ತ್ರೊಡೆಗೆ ಕೊಡೆ ಮಡುಗುತ್ತದು ಹೇಂಗೆ..ಎಡಿಗೊ.
        ಅಲ್ಲ ರೈನುಕೋಟು ಮಡುಗುತ್ತದೊ…ಎನಗರಡಿಯ.

  10. ಬರದ್ದು ಲಾಯಕಾಯಿದು…

    {ನಾವು ಯಾವ ಮಾಳಿಗೆ ಹೋಯೆಕು ಹೇಳಿ ಕುಟ್ಟಿ ಒತ್ತಿರೆ ಆತು..ಸುಯ್ಯನೆ ನಮ್ಮ ಕರಕ್ಕೊ೦ಡು ಹೋಕಿದ.ಬಿಟ್ರೆ ದೇವಲೋಕಕ್ಕೂ ಎತ್ತುಸುಗೋ ಹೇಳಿ ಕ೦ಡತ್ತೊ೦ದರಿ.} ಈಗೆಲ್ಲ ಹೊಸತ್ತೊಸತ್ತು ಬೈಂದಡ. ನಾವು ನಿಂದರೆ ಸಾಕು ಇಟ್ಟೇಣಿ ಮೆಟ್ಟು ಅದಾಗಿಯೇ ಹತ್ಸಿಯೊಳ್ತಡ.

    {ಇಲ್ಲಿ ಬರ್ತಾರೆ} – ಇದಪ್ಪ ದೋಸ್ತಿ ಹೇಳಿರೆ…

    1. ಮಾಣಿ ಕೊಶಿಯಾತಿದ ನಿನ್ನ ಒಪ್ಪನೋಡಿ…!!
      {..ಇಟ್ಟೇಣಿ ಮೆಟ್ಟು ಅದಾಗಿಯೇ ಹತ್ಸಿಯೊಳ್ತಡ}
      ಅಲ್ಲ ಎನಗೆ ಈಗ ಒ೦ದು ಸ೦ಶಯ.. ಇಟ್ಟೇಣಿ ಮೆಟ್ಟು ಅದಾಗಿಯೇ ಹತ್ತಿರೆ, ನಾವು ಎ೦ತರ ಹತ್ತುಸ್ಸು?? 😉

    1. ಹೊ..!! ಹಾ೦ಗೊ… 🙂
      ಜೂಸು ಮಾಡುಸ್ಸು ಸೆ೦ಡಗೆಯಾ೦ಗೊ ?? 😉
      ಬೆಶಿಲಿ, ಒಣಗುಸುಲೆ ಎಲ್ಲಾ ಇದ್ದೊ?? ಉಮ್ಮಪ್ಪ..!!

      1. ಎಂಗೊಗೆ ಜ್ಯೂಸು ಹೇಳಿದರೆ ತಂಪು ತಂಪು ಇರೆಕು. ಆದರೆ ಈಗ ಭಯಂಕರ ಸೆಕೆ ಇದಾ.. ಹಾಂಗಾಗಿ ಜ್ಯೂಸಿನ ಫ್ರಿಜ್ಜಿಂದ ತಪ್ಪಗ ಬೆಸಿಲು ಬಿದ್ದು ಬೆಶಿ ಅಕ್ಕು.. ಅದಕ್ಕೆ ಆದಿಕ್ಕು ಕೊಡೆ ಹಿಡುದ್ದು 🙂
        ಮತ್ತೆ ಬೋಚಬಾವಂಗೆ ಬೆಶಿ ಜ್ಯೂಸು ಇಷ್ಟ ಆವ್ತಾ ಹೇಳಿ ನವಗರಡಿಯ…. 😉

        1. ಸರಿ ಸರಿ.. ಜ್ಯೂಸಿನ ಫ್ರಿಜ್ಜಿಂದ ತತ್ಸೊ???
          ಅ೦ಬಗ ಫ್ರಿಜ್ಜಿನ ಬೆಶಿಲಿ ಮಡುಗಿದ್ದವೊ?? 😉

          1. ಎಂಗೊ ಜ್ಯೂಸಿನ ಫ್ರಿಜ್ಜಿಲಿ ಮಡುಗುದು.. ತಂಪು ಅಪ್ಪಲೆ.
            {ಫ್ರಿಜ್ಜಿನ ಬೆಶಿಲಿ ಮಡುಗಿದ್ದವೊ…}
            ಫ್ರಿಜ್ಜಿನ ಎಲ್ಲಿ ಮಡುಗಿದರುದೇ ಅದರ ಒಳ ಇಪ್ಪ ಸಾಮಾನುಗೊ ಯಾವಾಗಲುದೇ ತಂಪು ತಂಪು ಇಕ್ಕು.
            ಮತ್ತೆ ಬೋಚಬಾವನ ಮನೆಲಿಪ್ಪ ಕವಾಟಿನ ಫ್ರಿಜ್ಜು ಹೇಳಿ ಗ್ರೇಶಿದ್ದ ಕಾಣುತ್ಸು… 😉

          2. ಆನು ಐಚುಕ್ರೀಮಿನ ಕಪಾಟಿ ಬೀಗ ಹಾಕಿ ಮಡುಗುತ್ತಿದಾ..!! 😛
            ಆರಿ೦ಗು ಗೊ೦ತಪ್ಪಲಾಗ ಹೇಳಿ.. 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×