ಕೊದಿಲ ಗೀಟು

ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದುಹೇಳಿ ಮಾಷ್ಟ್ರಮಾವ0 ಕಲಿಶಿದ ಗಾದೆ ನಮ್ಮೋರಿಂಗೆ ಭಾರೀ ತಡವಾಗಿಯಾದರುದೇ,ಸರಿಯಾಗಿ ಅರ್ಥ ಆದಾಂಗಿದ್ದು. ಹಾಂಗಾಗಿ ಜೆಂಬ್ರಂಗಳಲ್ಲಿ ‘ಬಫೆ ಸಿಸ್ಟಮು’ ಹೇಳ್ತಬೋಜನ ಕ್ರಮಲ್ಲಿ ನಿಂದುಗೋಂಡೇ ಉಂಬದು.

ಊ…ದ್ದಕ್ಕೆ ಬೆಳದ ‘ಕ್ಯೂ’ವಿನ ಮಧ್ಯಲ್ಲಿ ಆರಾರು ಗುರ್ತದೋರು ಇದ್ದವಾ ಹುಡುಕ್ಕಿ, ಅವರ ಕಷ್ಟ ಸುಖ ವಿಚಾರ್ಸಿಗೋಂಡು ಅವರೊಟ್ಟಿಂಗೆ ಸಾಲಿಲಿ ನುರ್ಕಿತ್ತು. ಮುಂದಾಣ ಎಲ್ಲೋರು ಖಾಲಿ ಪ್ಲೇಟು ತೊಳದ ನೀರಿನ ಕಟಾರಲ್ಲೇ ಹಾಳೆ ಪ್ಲೇಟು ಅದ್ದಿತ್ತು. ಒಂದರಿ ಕುಡುಗಿಗೊಂಡು ಪ್ಲೇಟು ಒಡ್ಡಿ ಉಪ್ಪಿನಕಾಯಿ,ತಾಳ್ಳುಗ,ಮೆಣಸ್ಕಾಯಿ,ಕೋಸಂಬರಿ,ಅವಿಲು ಹೀಂಗಿಪ್ಪದರೆಲ್ಲಾ ಪ್ಲೇಟಿನ ನಾಲ್ಕು ಸುತ್ತಲೂ ಹಾಯ್ಕೊಂಡತ್ತು. ನಡೂಗೆ ಒಂದು ಕರೇಲಿ ಪಲಾವುದೇ; ಅದರ ಮೇಲೆ ಗೊಜ್ಜಿದೇ ಹಾಕಿಗೊಂಡತ್ತು. ನಡುಗಣ ಒಳುದ ಜಾಗೆಲಿ ಒಂದು ಸೌಟು ಅಶನವನ್ನೂ ತುಂಬುಸಿತ್ತು.ಅಶನದ ಒಂದು ಹೊಡೆಂಗೆ ಸಾರುದೇ, ಇನ್ನೊಂದು ಹೊಡೇಂಗೆ ಸಾಂಬಾರುದೇ ಹಾಕಿತ್ತು.

ಮೇಲಂಗೆ ಒಂದು ಹಪ್ಪಳ ಹಾಕಿಗೊಂಡು ಮುಂದೆ ಬಪ್ಪಗ ಪುಟ್ಟಭಾವ0 ಸಿಕ್ಕಿದ0. “ಎಂತಕ್ಕು ಭಾವ ಗವರ್ಮೆಂಟು? ಬೀಳುಗಾ? “ಹೇಳಿ ಉಂಬಲೆ ಸುರು ಮಾಡಿತ್ತು. ಅದಲ್ಲಿತ್ತ ಬೇಡದ್ದ ಬೇನ್ಸೊಪ್ಪು, ಹಸಿಮೆಣಸಿನ ನೆಲಕ್ಕೆ ಇಡ್ಕಿತ್ತು. ಉಂಡುಗೋಂಡು ಇಪ್ಪಗ ಶಾಲು ಹೆಗಲಿಂದ ಜಾರಿತ್ತು. ಒಂದು ಕೈಲಿ ಸರಿ ಮಾಡ್ಲೆ ಹೋಪಗ ಸಾರು ನೆಲಕ್ಕೆ ಅರುತ್ತು. ಛೇ.ಸಾರ ಇಲ್ಲೆಪ್ಪಾ” ಹೇಳಿ ಭಾವ0 ಹೇಳಿದ0. ಮತ್ತೆ ಒಳುದ್ದರ ಎಲ್ಲ ಉಂಡು ಮುಗಿಶಿತ್ತು.

ಖಾಲಿ ಆದ ತಟ್ಟೆಗೆ ಒಂದು ಸೌಟು ಪಾಯಸವುದೇ ಅದರ ಮೇಲಂಗೆ ಹೋಳಿಗೆದೇ ಹಾಕಿದವು. ಅರ್ದ ಸಾಕು ಹೇಳಿ ಕೈ ಅಡ್ಡ ಹಿಡಿವಗ ಅದರ ಮೇಲಂಗೆ ತುಪ್ಪ ಹಾಕಿದ್ದು ಗೊಂತೇ ಆಯ್ದಿಲ್ಲೆ. ತುಪ್ಪ ಆಗ; ಇರ್ಲಿ ತೊಂದರೆ ಇಲ್ಲೆ; ಕಾಯಿಹಾಲು ಹಾಕಿ ” ಹೇಳಿ ರಜ ಮಿಕ್ಶರ್ ಹಾಯ್ಕೊಂಡಪ್ಪಗ, ಪದವಿನ ಅತ್ತಿಗೆ ಸಿಕ್ಕಿತ್ತು. ಅದರತ್ತರೆ, “ಶುಗರ್ ಕಂಡಾಬಟ್ಟೆ ಇದ್ದು ಅತ್ತಿಗೆ. 240; ಕಂಟ್ರೋಲಿಂಗೇ ಬತ್ತಿಲ್ಲೆ” ಹೇಳಿಗೊಂಡು ತಿಂದು ಮುಗಿಶಿತ್ತು.

ಪುನಾ ಒಂದು ಸೌಟು ಅಶನ ಹಾಯಿಕ್ಕೊಂಡು ಪಾಲು ಮಾಡಿ, ‘ಪ್ರಾಚೀನ ಕರ್ಮವದು ಬಿಡಲರಿಯದು ಹೇಳಿ ಅರ್ದಕ್ಕೆ ಮೇಲಾರದೇ; ಇನ್ನರ್ದಕ್ಕೆ ಮಜ್ಜಿಗೆದೇ ಹಾಕಿ ಉಂಬಲೆ ಸುರು ಮಾಡಿತ್ತು. ದೂರಲ್ಲಿ ಉಂಡುಗೊಂಡಿತ್ತ ಮುದ್ದಣ್ಣಪ್ಪಚ್ಚಿ ಬಲದ ಕೈನೆಗ್ಗಿ ದಿನಿಗೇಳಿದ0. ಅವನತ್ತರೆ ಮಾತಾಡಿಗೊಂಡು “ಈಗಾಣವಕ್ಕೆ ನಮ್ಮ ಸಂಸ್ಕೃತಿ,ಪರಂಪರೆಯ ಬಗ್ಗೆ ಎಂತದೂ ಗೊಂತಿಲ್ಲೆ” ಹಾಂಗೆ ಹೀಂಗೆ ಹೇಳಿ, ಒಳುದ ಮಜ್ಜಿಗೆಯ ಬುರೂನೆ ಕುಡ್ಕೋಂಡು, ತಟ್ಟೆಯ ಬಟ್ಟಿಂದ ಹೆರ ಇಡ್ಕಿ, ಕೈ ತೊಳದು, ಅಲ್ಲಿಂದಲೇ ಬೈಕು ಸ್ಟಾರ್ಟು ಮಾಡಿ ಆಫೀಸಿಂಗೆ ಹೋತು.

ಹೊತ್ತೋಪಗ ಮನೆಗೆ ಬಂದಪ್ಪಗ ಹೆಂಡತ್ತಿ ಕೇಳಿತ್ತು “ಇದೆಂತರ ನಿಂಗಳ ಅಂಗಿಯ ಬೆನ್ನಿಲಿ ಕೊದಿಲಿನ ಗೀಟು?”!

ಇದು ಎಂಥಾ ಊಟವಯ್ಯಾ !” ಎಂತ ಹೇಳ್ತಿ ಬೈಲಿನೋರು?

ದೇವಿಕುರ್ನಾಡು

   

You may also like...

15 Responses

  1. ಪ್ರದೀಪ ಶರ್ಮ says:

    ಕೈ ನೀರು ತೆಗತ್ತ ಕ್ರಮದೇ ಮರತ್ತು ಹೋವ್ತು ಅಲ್ಲದ ಕುರ್ನಾಡು ಭಾವ…………..

  2. shylaja says:

    ambaga bypaneli “bhojana kale………..” hakudu hengada??

  3. ಬಫೆ ಊಟದ ನೈಜ ಚಿತ್ರಣ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *