ಹೀಂಗೊಂದು ಲೋಕಾಭಿರಾಮ

March 9, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಯಲಿಲ್ಲಿ ಜೆಂಬಾರಂಗಳದ್ದೇ ಗೌಜಿ ಅಡ, ಪೇಟೆಲಿ ಎಂತ ಕಮ್ಮಿಯೋ ?
ಉದೀಯಪ್ಪಗ 5 ಘಂಟೆಗೇ ಎಲ್ರಾಮ್ ಅಪ್ಪಗ ಏಳದ್ದೆ ನಿವೃತ್ತಿ ಇಲ್ಲೆ.  ಒಂದು ಐದು ನಿಮಿಶ ಕಳುದಿಕ್ಕಿ ಏಳ್ತೆ ಹೇಳಿ ಉದಾಸೀನ ಮಾಡಿರೆ,ಏಳುಸಲೆ ಜೆನ ಇಲ್ಲದ್ರೆ  ಅಂತೂ ಮುಗುದತ್ತು.
ಹಾಂಗಿಪ್ಪ ಸುಮಾರು ಐದು ನಿಮಿಶ ಕಳುದು ಮತ್ತೆ ಏಳುವಾಗ 7 ಘಂಟೆ ಯೇ ಕಳಿಗು. ರಜೆಯೇ ಹಾಕೆಕ್ಕಷ್ಟೆ.  ಶಿಫ್ಟ್ ಕೆಲಸಕ್ಕೆ ಹೋಪಗ ಅಷ್ಟು ಹೊತ್ತಿಂಗೆ ಏಳದ್ರೆ ಅಲ್ಲಿಗೆ 6 ಘಂಟೆಗೆ ಎತ್ತಲೆ ಎಡಿತ್ತಿಲ್ಲೆ.

ಆದರೆ ಇಂದು ರಜೆ ದಿನ ಕೂಡಾ ಇದೇ ಅವಸ್ಥೆಯಾ. ಛೆ ಒಂದು ದಿನ ಆದರೂ ಉದಿಯಪ್ಪಗಾಣ “ಸವಿ ನಿದ್ದೆ” ಅನುಭವಿಸಲೆ ಇಲ್ಲೆಯಾ. ಪರಂಚಿಯೊಂಡು ಎದ್ದಪ್ಪಗ ನೆಂಪಾತು ಇಂದು ಎರಡು ಜೆಂಬ್ರ ಸುದರ್ಸಲೆ ಇದ್ದಲ್ಲದ.
ಎಲ್ಲರೂ ನಿತ್ಯಾ ಆಫೀಸಿಲ್ಲಿ ಕಾಂಬವೇ. ಒಬ್ಬನದ್ದಕ್ಕೆ ಮಾತ್ರ ಹೋದರೆ ಇನ್ನೊಬ್ಬಂಗೆ ಬೇಜಾರು. ಬಾರದ್ದಕ್ಕೆ ಎಂತಾರೂ ಲೊಟ್ಟೆ ಕಾರಣ ಹುಡ್ಕೆಕ್ಕು ಎಂತ ಮಾಡುವದು ಹೇಳಿ ಅರಡಿಯದ್ದೆ ಗೊಂದಲಲ್ಲಿ ಇತ್ತಿದ್ದೆ.
ಮದಿಮ್ಮಾಳ ಅಣ್ಣ ಶ್ರೀವತ್ಸನೂ ಆನೂ ಒಂದೇ ವಿಭಾಗಲ್ಲಿ ಕೆಲಸ ಮಾಡುವದು.

ತಂಗೆಯನ್ನೂ ಅಮ್ಮನನ್ನೂ ಕರಕ್ಕೊಂಡು ಮನೆಗೆ ಬಂದು ಹೇಳಿಕೆ ಬೇರೆ ಹೇಳಿದ್ದ. ಮೂರ್ತಕ್ಕಾದರೂ ಎತ್ತೆಡೆದ. ಸಾಲದ್ದಕ್ಕೆ ಮಧ್ಯಾಹ್ನ ಇನ್ನೊಂದು ಜೆಂಬಾರಕ್ಕೂ ಹೋಪಲೆ ಇತ್ತಿದ್ದು.
ತಂಗೆ ಅಸ್ಸೈನ್ಮೆಂಟ್ ಇದ್ದು ಬತ್ತಿಲ್ಲೆ ಹೇಳಿತ್ತು. ಎಂಗೊ ಇಬ್ರು ಬೇಗ ಬೇಗ ರೆಡಿ ಆಗಿ ಉಡುಪಿಗೆ ಎತ್ತುವಾಗ ಘಂಟೆ ಎಂಟು. ಕಾಫಿ ಕುಡಿವಲೆ ಸರಿಯಾದ ಸಮಯ. ಉದಿಯಪ್ಪಗ ಖಾಲಿ ಕಾಪಿ ಮಾತ್ರ ಕುಡುದಿಕ್ಕಿ ಹೆರಟದಲ್ಲದ, ಹೊಟ್ಟೆ ತಾಳ ಹಾಕಲೆ ಸುರು ಮಾಡಿದ್ದು.

ಹಾಲ್ ನ ಎದೂರು ನಿಂದೊಂಡೇ ಇತ್ತಿದ್ದ ಶ್ರೀವತ್ಸ. ಶೆರ್ವಾನಿಯೂ ಶಾಲೂ ಹಾಕಿ ಇನ್ನಾಣ ಮದಿಮ್ಮಾಯನ ಹಾಂಗೇ ಕಂಡೊಂಡು ಇತ್ತಿದ್ದ.
ರಾಮಣಿನು ಉಳೆತ್ತೊಂದು ಬತ್ತಾರು ಅತ್ತ, ಭಾರೀ ಸಂತೋಷ ಆಣ್” ಹೇಳಿ ಮೊರೆ ಅರಳಿಸಿ ಹೇಳುವಾಗ  ಕೊಶಿ ಆತು.

ಇವ° ಬರೇ ಸಹೋದ್ಯೋಗಿ ಮಾತ್ರ ಅಲ್ಲ, ಆತ್ಮೀಯ ಕೂಡಾ.
ಕಾಪಿಗೆ ಎಂಗಳ ಒಳ ಕರಕ್ಕೊಂಡು ಕೂರ್ಸಿಕ್ಕಿ ಅವನ ಸಂಬಂಧಿಕರಿಂಗೆ ಪರಿಚಯ ಮಾಡಿ ಕೊಟ್ಟ.
ಎಲ್ಲರ ಕೈಂದಲೂ ಬಗೆ ಬಗೆ ಉಪಚಾರ ಆತು.
ಅಶನ ಆಂತೊಂದೇ ಪೋವೊಡು” ಹೇಳಿ ಅಮ್ಮ ಹೇಳುವಾಗ ಆತ್ಮೀಯ ಸಂಬಂಧಿಕರ ಹಾಂಗೇ ಆತು. ಊಟಕ್ಕೆ ನಿಂಬಲೆ ಪುರುಸೊತ್ತು ಇಲ್ಲೆ ಹೇಳ್ಲೆ ಮನಸ್ಸು ಒಪ್ಪಿತ್ತಿಲ್ಲೆ.
“ಅಶನವ ಆಂತೊಂಡು ಉಂಡಿಕ್ಕಿ ಹೋಯೆಕ್ಕಡವೋ?” ಕೇಳಿತ್ತು ಎನ್ನ ಹೆಂಡತಿ.
ಒಂದು ಊರಿಲ್ಲಿ ಇಪ್ಪಗ ಅವರ ಭಾಷೆ ಬಾರದ್ದರೆ ಬಪ್ಪ ದೋಷ ಇದುವೇ. ಮಧ್ಯಾಹ್ನ ಊಟ ಆಗಿಯೇ ಹೋಯೆಕ್ಕು ಹೇಳಿದ್ದು-ವಿವರಿಸಿದೆ.

ಕೆಲವು ದಿಕ್ಕೆ ಬಫೆಲಿ ಆಂತೊಂಡು ಉಣ್ಣೆಕ್ಕಾವುತ್ತೂದೆ. ಹೊಟ್ಟೆ ಗಟ್ಟಿ ಮಾಡಿ ಮದುವೆ ಹಾಲಿಂಗೆ ಬಂದು ಎದೂರಾಣ ಕುರ್ಚಿಲಿ ಕೂದೆಯೊ.
ಬೇಗ ಮೂರ್ತ. ಮದಿಮ್ಮಾಯನ ಮಂಟಪಕ್ಕೆ ಕರಕ್ಕೊಂಡು ಬಂದವು. ಕಚ್ಚೆ ಪಂಚೆ, ಉತ್ತರೀಯ, ಮುಂಡಾಸು, ಬಾಸಿಂಗ, ಕೈಲಿ ದಂಡ, ಅದರ ಕೊಡಿಂಗೆ ಸಿಂಗಾರ, ಅಡಕ್ಕೆ.

ಒಂದೊಂದು ಕಡೆ ಒಂದೊಂದು ಅನುಭವಂಗೊ ಆವುತ್ತು. ಚೆಂದಕೆ ಮದುವೆ ಕಳುದತ್ತು. ಅಕ್ಷತೆ ಹಾಕಿ ಆಶೀರ್ವಾದ ಮಾಡಿ ಶ್ರೀ ವತ್ಸನ ಹತ್ರೆ ಹೇಳಿಕ್ಕಿ ಅಲ್ಲಿಂದ ಜಾರಿದೆಯೊ°.
ಮತ್ತೊಂದು ಮದುವೆ, ಮನೆ ಹತ್ರವೇ ಇಪ್ಪ ಹಾಲಿಲ್ಲಿ. ಮಧ್ಯಾಹ್ನದ ಊಟಕ್ಕೆ ಅಪ್ಪಗ ನಾವು ಹಾಜರ್.

ಉಡುಪಿಂದ ಅಲ್ಲಿಗೆ ಎತ್ತೆಡದೋ. ಎಲ್ಲ ಕೇಟರರ್ಸ್ ಆದ ಮತ್ತೆ ನವಗೆ ಎಂತ ಕೆಲಸ ಇದ್ದು.

ಜಾಗೆ, ಪುರುಸೊತ್ತು ಎರಡೂ ಇದ್ದರೆ ಹಂತಿ, ಇಲ್ಲದ್ದರೆ ಇದ್ದನ್ನೆ ಬಫೆ. “ಭವತಿ ಭಿಕ್ಷಾಂ ದೇಹಿ” ಹೇಳಿ ತಟ್ಟೆ ಹಿಡ್ಕೊಂಡು ನಿಂದರೆ ತೋಡಿ ಹಾಕುತ್ತವು. ರಷ್ ಜಾಸ್ತಿ ಇತ್ತಿದ್ದು. ಎಂಜಲು ತಟ್ಟೆಯ ಇನ್ನೊಬ್ಬಂಗೆ ತಾಗದ್ದ ಹಾಂಗೆ ಸರ್ಕಸ್ ಮಾಡಿಂಡು ನವಗೆ ಬೇಕಾದ್ದರ ಹಾಕ್ಸೆಕ್ಕಾರೆ ಸಾಕು ಬೇಕು ಆತು. ಊಟದ ಶಾಸ್ತ್ರ ಮುಗುಸಿ ವಧೂ ವರರಿಂಗೆ ಆಶೀರ್ವಾದ ಮಾಡಿ ಮನೆಗೆ ಬಂದೆಯೊ.  ಅಂಗಿ ಪೇಂಟ್ ಬದಲುಸುವಾಗಲೇ ಗೊಂತಾದ್ದು ಬಫೆಲಿ ಆನು ಮಾತ್ರ ಉಂಡದಲ್ಲ. ಹಾಕಿದ ಡ್ರೆಸ್ಸ್ ಕೂಡಾ ಉಂಡಿದು ಹೇಳಿ. ತೊಳದರೆ ಹೋವ್ತೋ ಇಲ್ಲೆಯೋ ಹೇಳಿ ಪರಂಚಿಯೊಂಡರೂ ಇನ್ನೊಂದು ಸರ್ತಿಗೆ ಅನುಭವಕ್ಕೆ ಆತು ಹೇಳುವ ಸಮಾಧಾನ.

ಎನ್ನ ಪಟ್ಟೆ ಸೀರೆಗೂ ಪಾಯಸ ಬಿದ್ದಿದೋ ಕಾಣ್ತು. ಹೇಳಿತ್ತು ಅರ್ಧಾಂಗಿ.
ಅಪ್ಪು ಅದು ಪಟ್ಟೆ ಸೀರೆ ಅಲ್ಲದೋ ಪಾಯಸ ಉಂಡತ್ತು, ಎನ್ನದು ಪೋಲಿಸ್ಟೆರ್ ಡ್ರೆಸ್ಸ್ ಅಲ್ಲದ ಹಾಂಗೆ ಸಾರು ಸಾಂಬಾರು ಉಂಡತ್ತಾಯಿಕ್ಕು.
ಹೀಂಗಿಪ್ಪ ಜೆಂಬಾರಕ್ಕೆ ಇನ್ನು ಲೊಟ್ಟೆ ಸೀರೆಯೇ ಸಾಕು ಹೇಳಿ ಠರಾವು ಪಾಸ್ ಮಾಡಿತ್ತು.

ಹಾಂಗೆಲ್ಲ ಮಾಡಿಕ್ಕೆಡ, ಆ ಶ್ರೀಶ ಹೆಂಡ್ತಿಗೆ ಒಂದು ಗೆನಾ ಸೀರೆ ಕೂಡಾ ತೆಗದು ಕೊಟ್ಟಿದಾ ಇಲ್ಲೆ ಹೇಳಿ ಹೆಮ್ಮಕ್ಕೊ ಎನ್ನ ಮರ್ಯಾದೆ ತೆಗಗು ಹೇಳಿದೆ.
ಮನೆಗೆ ಬಂದು ಒರಗಿದವಂಗೆ ಲೋಕ ಇಲ್ಲೆ. ಜೆಂಬ್ರದ ಊಟ, ಉದಿಯಪ್ಪಗಾಣ ಕಮ್ಮಿ ಆದ ಒರಕ್ಕಿನ ಬಡ್ಡಿ ಸಮೇತ ತೀರ್ಸಿತ್ತು.

* * *

ಹೊತ್ತೋಪಗ “ಶರ್ಮಪ್ಪಚ್ಚಿ”  ಫೋನ್ ಬಂತು. ನೀನು ಇದ್ದರೆ ಶುದ್ದಿ ಮಾತಾಡ್ಲೆ ಮನೆಗೆ ಬತ್ತೆ, ಹೇಳಿದ (ಮನೆ ಜೆಂಬಾರಲ್ಲಿ ಹಿರಿಯರ ಕಾಲು ಹಿಡಿವಗ ಮಾತ್ರ ಎನಗೆ ಅವ ಶರ್ಮಪ್ಪಚ್ಚಿ, ಅಲ್ಲದ್ದರೆ ಎಲ್ಲದಕ್ಕೂ ಎಂಗಳ ಒಳ ಏಕವಚನವೇ).
ಎನ್ನ ಮನೆಗೆ ಬರೆಕಾರೆ ಎಂತ ಫೋನ್ ಮಾಡಿ appointment ತೆಕ್ಕೊಳೆಕ್ಕಾ. ಆನು ನಿಂಗಳಲ್ಲಿಗೆ ಬಪ್ಪಗ ಸೀದಾ ಬತ್ತಾ° ಇಲ್ಲೆಯಾ-ಅಕ್ಷೇಪಿಸಿದೆ
ಹಾಂಗಲ್ಲ ಮಾರಾಯ, ರಜೆ ಅಲ್ಲದಾ ಹೆಂಡತಿ ಕರಕ್ಕೊಂಡು ತಿರುಗಲೆ ಹೋಗಿದ್ದರೆ ಸುಮ್ಮನೆ ಅಲ್ಲಿಗೆ ವರೆಗೆ ಬಪ್ಪದು ಎಂತಕೆ.  ಆ ಕಾಲಿಂಗ್ ಬೆಲ್ ಸರಿ ಮಾಡ್ಸಿದ್ದೆಯೋ ಇಲ್ಲೆಯೋ. ಮೊನ್ನೆ ಬಂದು ಬೆಲ್ ಮಾಡಿ ವಾಪಾಸ್ ಹೋದ ಕತೆ ಗೊಂತಿದ್ದನ್ನೆ.

ಅಪ್ಪು ಆನು ಒಳ ಒರಗಿಂಡು ಇತ್ತಿದ್ದೆ. ಹೆಸರು ಹಿಡಿದು ದೆನುಗೊಳಿರೆ ಆನು ಬಾಗಿಲು ತೆಗೆತ್ತಿತ್ತ ಇಲ್ಲೆಯಾ. ಇರುಳಾಣ ಡ್ಯೂಟಿ ಮುಗಿಸಿ ಮನುಗಿರೆ ಆರಾರು ಬಂದು ಬೆಲ್ ಮಾಡುವದು. ಬಾಗಿಲು ತೆಗದರೆ ಮನೆ ಮನೆ ಮಾರಾಟ ಮಾಡುವವರ ಮುಖ ದರ್ಶನ. ಬೇಗಕ್ಕೆ ಹೆರಡವು. ನಮ್ಮ ಒರಕ್ಕು ಹಾಳು. ಅದಕ್ಕೆ ಬೆಲ್ ನ ಸ್ವಿಚ್ ಆಫ್ ಮಾಡಿ ಮಡುಗುವದಿದ. ಅವನತ್ರೆ ಹೇಳ್ಲೆ ಮರದ್ದು.

* * *

ಮೂರ್ಸಂಧಿ ಅಪ್ಪಗ ದಂಪತಿ ಸಮೇತ ಮಗಳು ಅಳಿಯನ ಎಲ್ಲಾ ಕೂಡಿಗೊಂಡ ಶರ್ಮಪ್ಪಚ್ಚಿ ಬಂದವು. ಹೆಂಡತಿ ಗ್ರೀನ್ ಟೀ  ಮಾಡ್ತೆ ಹೇಳಿ ಒಳ ಹೊಕ್ಕತ್ತು.
ಹೆಮ್ಮಕ್ಕೊಗೆ ಅವರ ಶುದ್ದಿ ಮಾತಾಡ್ಲೆ ಇರ್ತಲ್ಲದ. ಎಲ್ಲರೂ ಅಡಿಗೆ ಕೋಣೆಗೆ ನುಗ್ಗಿದವು.
ಒಳದಿಕಾಣ ಮಾತುಕತೆ, ಮಂದ್ರಲ್ಲಿ ಸುರು ಆದ್ದು ಮಧ್ಯಮಕ್ಕೆ ಎತ್ತುತ್ತಾ ಇದ್ದು.
ಚಾ ಇಲ್ಲಿಗೆ ವರೆಗೆ ಎತ್ತುಗಾಯಿಕ್ಕು. ಅಲ್ಲ ಮಾತಿನ ಭರಲ್ಲಿ ಮರತ್ತು ಹೋಕೋ ಗೊಂತಿಲ್ಲೆ.

ಶರ್ಮಪ್ಪಚ್ಚಿ, ಸೋಫಾಲ್ಲಿ ಕೂದವನೇ ಭಾರೀ ಕೊಶೀಲಿ “ಮಾವರವೆಲ್ಲೋ ಕೋಗಿಲೆಯೆಲ್ಲೋ” ಹೇಳಿ ವಿಶಲ್ ಲ್ಲಿ ರಾಗ ಎಳವಲೆ ಸುರು ಮಾಡಿದ!!!

ಅರೆ, ಮೂರು ಮೂರು ಜೆಂಬಾರಕ್ಕೆ ಹೋದವಂಗೆ ಬಚ್ಚಲು ಎಂತ ಇಲ್ಲದ್ದೆ ಕೊಶೀಲಿ ಇದ್ದೆನ್ನೆ  ಕೇಳಿದೆ.|
ಒಪ್ಪಣ್ಣನ ಬಯಲಿನವು ಕೆಲಾವು ಜೆನಂಗೊ ಸಿಕ್ಕಿದವು. ಮಾತಾಡಿ ಕೊಶಿ ಆತು. ಮೊನ್ನೆ ಮೊನ್ನೆ ವರೆಗೆ ಆರು ಹೇಳಿ ಗೊಂತಿಲ್ಲದ್ದವೆಲ್ಲ ಈಗ ಒಂದೇ ಬಯಲಿಲ್ಲಿ ಸೇರಿದ್ದೆಯೊ. ಒಂದೇ ಮನೆಲಿ ಇಪ್ಪವರ ಹಾಂಗೆ. ಎಲ್ಲರೂ ಅಪ್ಪಚ್ಚಿ, ಚಿಕ್ಕಮ್ಮ, ಅತ್ತೆ, ಮಾವ, ಭಾವ, ಅಣ್ಣ, ಅಕ್ಕ ಹೇಳಿಯೇ ಮಾತಾಡ್ಸುವದು. ಎಲ್ಲರೂ ಒಂದೇ ಮಾವಿನ ಮರದ ಕೋಗಿಲೆಗೊ. ಅದಕ್ಕೇ ಮಾಮರವೆಲ್ಲೋ…. ನೆಂಪಾತು ಹೇಳಿದ.

ಆರೆಲ್ಲಾ ಬಯಿಂದವು ತಿಳಿವ ಕುತೂಹಲ. ಕೇಳಿದೆ

ಒಪ್ಪಣ್ಣನೂ ಬಯಿಂದ. ಬಯಲಿಲ್ಲಿ ಬಂದ ಲೇಖನಂಗೊಕ್ಕೆ ನೀನು ಒಪ್ಪ ಕೊಡ್ತಾ ಇದ್ದೆ ಅಲ್ಲದಾ? ಲಾಯಿಕ ಆವುತ್ತಡ ಹಾಂಗೆ  ಹೇಳಿದ ಮಾತ್ರ ಅಲ್ಲದ್ದೆ ಎಂತಾರೂ ಶುದ್ದಿ ಬರದು ಕಳುಸೆಕ್ಕಡ ಹೇಳಿ ವಿಶೇಷ ಹೇಳಿಕೆ ಕೊಟ್ಟಿದ.|
ಬಯಲಿಂಗೆ ಬಂದು ಶುದ್ದಿ ಹೇಳಲೆ ಎಡಿಗೋ ಕೇಳಿದ್ದವು ಗುರಿಕ್ಕಾರ್ರು. ಗೌರಮ್ಮಜ್ಜಿ ಕೂಡಾ ಹಾಂಗೇ  ಹೇಳಿದ್ದವಡ. ಅಂಬಗ ನಿನಗೆ ಗುರಿಕಾರ್ರು, ಗೌರಮ್ಮಜ್ಜಿ, ಸಿಕ್ಕಿದ್ದವಿಲ್ಲೆಯಾ? ಕೇಳಿದೆ.

ಗುರಿಕ್ಕಾರ್ರಿಂಗೆ ಬಯಲಿಲ್ಲಿ, ಸಾರಡಿ ಪುಳ್ಳಿ ಮಾಣಿ ಮನೆ ಹತ್ರೆ ಒಂದು ಜೆಂಬಾರಲ್ಲಿ ಗುರಿಕ್ಕಾರ್ತಿಗೆ ಮಾಡ್ಲೆ ಇತ್ತಿದ್ದಡ. ನಗೆಗಾರಂಗೆ ಒಂದು ಹಾಸ್ಯ ಕವಿ ಸಮ್ಮೇಳನಲ್ಲಿ ನೆಗೆ ಮಾಡ್ಸಲೆ ಮತ್ತೆ ನೆಗೆ ಮಾಡ್ಲೆ ಇದ್ದು ಹೇಳಿ ಬೆಂಗಳೂರಿಂಗೆ ಹೋಯಿದಡ, ಗೌರಮ್ಮಜ್ಜಿಗೆ ಪುಳ್ಳಿ ಬಾಣಂತನ,  ಹಾಂಗೆ ಅವೆಲ್ಲ ಬಯಿಂದವಿಲ್ಲೆ, ಹೇಳಿದ.
ತಂಗೆ ಚಾ ತೆಕ್ಕೊಂಡು ಬಂತು. ಹೆಮ್ಮಕ್ಕಳ ಪಟ್ಟಾಂಗ ಒಳ ರೈಸುತ್ತಾ ಇದ್ದು. ಮಾತುಕತೆ ಮಧ್ಯಮಂದ ತಾರಕಕ್ಕೆ ಎತ್ತುತ್ತಾ ಇದ್ದು.
ಎಂತ ಶರ್ಮಪ್ಪಚ್ಚಿ, ಕಾಣದ್ದೆ ರೆಜಾ ಸಮಯ ಆತು. ಬಯಲಿಲ್ಲಿ ಬರೆತ್ತ ಗೌಜಿಲಿ ಇತ್ಲಾಗಿ ಬಪ್ಪಲೆ ಪುರುಸೊತ್ತು ಆಯಿದಿಲ್ಲೆಯಾ ಕೇಳಿತ್ತು ತಂಗೆ ಅವನತ್ರೆ.

ಹ್ಮ್. ನಿನಗಾರೂ ಬಪ್ಪಲೆ ಅವ್ತಿತ್ತಿಲ್ಲೆಯಾ ಮನೆಗೆ. ಮಾತಾಡದ್ದೆ ಅಸಕ್ಕ ಅವ್ತಿದ
ಪರೀಕ್ಷೆ ಗೌಜಿ ಅಲ್ಲದ ಅಪ್ಪಚ್ಚಿ. ಮೊನ್ನೆ ಮುಗುದ್ದಷ್ಟೆ. ಇನ್ನು ಬಂದೊಂಡು ಇರ್ತೆ ಹೇಳಿತ್ತು.

ಅಪ್ಪಲ್ಲದ. ಎನಗೆ ನೆಂಪಿಲ್ಲೆ ಇದಾ. ನಿನ್ನ ಅಣ್ಣನ ಹತ್ರೆ ಎಂತಾರೂ ಬರದು ಒಪ್ಪಣ್ಣನ ಬಯಲಿಂಗೆ ಕಳುಸು ಹೇಳ್ತಾ ಇದ್ದೆ.
ಈ ತಂಗೆಯ ಕೆಮಿಗೆ ಬಿದ್ದತ್ತಾ. ಇನ್ನು ಕೇಳೆಕ್ಕ. ಅದು ಸುಮ್ಮನೆ ಕೂಬ ಜಾತಿ ಅಲ್ಲ.

ಸುಮ್ಮನೆ ಎನ್ನ ತಲೆ ತಿಂಬ ಬದಲು ಅಪ್ಪಚ್ಚಿ ಹೇಳಿದ ಹಾಂಗೆ ಬರವಲಾಗದ ಹೇಳಿತ್ತು.
ನೀನು ಹೇಳಿದಷ್ಟು ಸುಲಭ ಅಲ್ಲ. ಶಾಲೆಲಿ ಒಂದು ಪ್ರಬಂಧ ಬರವಲೆ ನೀನೆಷ್ಟು ಬಙ ಬಂದೊಂಡು ಇತ್ತಿದ್ದೆ. ಕೇಳಿದೆ

ಅಕ್ಷರ ಚೆಂದ ಇದ್ದು, ಶಾಲೆಲಿ ಎನಗೆ ಯಾವಗಲೂ ಕೋಪಿ ಬರದ್ದಕ್ಕೆ 10ಕ್ಕೆ 10 ಸಿಕ್ಕಿಂಡು ಇತ್ತಿದ್ದು ಹೇಳಿ ಎನ್ನ ಹತ್ರೆ ಜಂಭ ಕೊಚ್ಚಿಂಡು ಇತ್ತಿದ್ದೆ. ಬರೆ ಈಗ.  ರೆಜಾ ಕಾಲು ಹನುಸಿತ್ತು. ಕಾಲೆಳೆತ್ತರ ಸುರುವಾಣ ಸ್ಟೆಪ್ ಅನುಭವ ಆತು.

ಆನು ಬರವಲ ಹೆರಟರೆ “ಕಾಮಧೇನು” ಪ್ರಬಂಧ ಬರದ ಕತೆ ಗೊಂತಿದ್ದಲ್ಲದ ಹಾಂಗೇ ಅಕ್ಕು ಹೇಳಿದೆ.

ಒಬ್ಬ°, ತೆಂಗಿನ ಮರದ ಬಗ್ಗೆ  “ಕಲ್ಪ ವೃಕ್ಷ” ಪ್ರಬಂಧವ ಸರಿಯಾಗಿ ಕಲ್ತೊಂಡು ಶಾಲೆಗೆ ಹೋದಡ. ಅದುವೇ ಪರೀಕ್ಷೆಗೆ ಕೇಳುಗು ಹೇಳಿ ಅವಂಗೆ ಗ್ಯಾರಂಟಿ. ಅವನ ದುರಾದೃಷ್ಟಕ್ಕೆ ಅಂದು “ಕಾಮಧೇನು” ಬಗ್ಗೆ ಬರವಲೆ ಹೇಳಿದವಡ. ಎಂತ ಮಾಡುವದು. ಆಲೋಚನೆ ಮಾಡಿದ. ಪ್ರಬಂಧಲ್ಲಿ ಮೊದಾಲು ಕಾಮಧೇನುವಿನ ಕಲ್ಪ ವೃಕ್ಷಕ್ಕೆ ಕಟ್ಟಿ ಹಾಕಿದ. “ಕಲ್ಪ ವೃಕ್ಷ” ದ ಪ್ರಬಂಧವ ಬರದ.
ನೀನು ಹಾಂಗೆಲ್ಲ ಕತೆ ಹೇಳಿ ಎನ್ನ ಬಾಯಿ ಮುಚ್ಚುಸಲೆ ಎಡಿಯ. ಇನ್ನೊಂದು ವಿಶಯ ಹೇಳೆಕ್ಕಾ?. ಕಾಲೆಳವಲೆ ಸುರುಮಾಡಿತ್ತು.

ಬೇಡಪ್ಪಾ ಬೇಡ.
ಅದರ, ಅತ್ತಿಗೆ ಅಪ್ಪದಕ್ಕೆ ಅದರ ಮೂಲಕ ಪೋಸ್ಟ್ ಮಾಡ್ಲೆ ಕೊಟ್ಟ ಕಾಗದಂಗಳ ಕತೆ ಬಾಯಿಂದ ಹೆರಟರೆ ಎಲ್ಲರ ಎದುರು ಎನ್ನ ಮರ್ಯಾದೆ ಹೋಕು. ಶರ್ಮಪ್ಪಚ್ಚಿಯ ಅಳಿಯ ಬೇರೆ ಇದ್ದ.

ಬರವಲೆ ಪ್ರಯತ್ನ ಮಾಡ್ತೆ ಹೇಳಿ ಅಲ್ಲಿಂದ ಚಾ ಕುಡುದ ಗ್ಲಾಸಿನ ಕೊಟ್ಟು ಕಳಿಸಿದೆ.

* * *

ಹೀಂಗೊಂದು ಲೋಕಾಭಿರಾಮ, 4.0 out of 10 based on 2 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಶ್ರೀಶಣ್ಣ ಗಡಿಬಿಡಿ ಮಾಡಿ ಹೆರಟಿಕ್ಕೆಡಿ ಉದಿಯಪ್ಪಗ ಎದ್ದು. ಎಂತಕೂ ಇಂದು ಜೆಂಬಾರ ಇದ್ದೋ ಹೇಳಿ ತಿಳುದು ಕನ್ಫ್ರ್ ರ್ಮ್ ಮಾಡಿಕ್ಕಿ ಹೆರಟರೆ ಸಾಕಡ ಹೇಳಿ ಟಿ ವಿ ಶುದ್ದಿ.

  ‘ ತಂಗೆಯನ್ನೂ ಅಮ್ಮನನ್ನೂ ಕರಕ್ಕೊಂಡು ಮನೆಗೆ ಬಂದು ಹೇಳಿಕೆ ಬೇರೆ ಹೇಳಿದ್ದ. ಮೂರ್ತಕ್ಕಾದರೂ ಎತ್ತೆಡೆದ’ – ಖಂಡಿತಾ ಹೋಯೇಕೇ ರಜಾ ಮದಲೇ.

  ‘ಉದಿಯಪ್ಪಗಾಣ ಕಮ್ಮಿ ಆದ ಒರಕ್ಕಿನ ಬಡ್ಡಿ ಸಮೇತ ತೀರ್ಸಿತ್ತು.’ – ಉಂಡನೊ ಬಿದ್ದು ಒರಗಿದನೋ ಬಸವ ಹೇಳಿ ಮಾಡಿದಿ ಅಂತೂ.

  ‘ಬೆಲ್ ನ ಸ್ವಿಚ್ ಆಫ್ ಮಾಡಿ ಮಡುಗುವದಿದ’ – ಇಲ್ಲದ್ರೂ ಒಳ ಬಿದ್ದು ಒರಗಿರೆ ಬಾಂಬು ಹೊಟ್ಟಿರೂ ಕೇಳಡಾ – ನೆರೆಕರೆವು ಹೇಳ್ತವನ್ನೆ !

  ‘ಎಂತಾರೂ ಶುದ್ದಿ ಬರದು ಕಳುಸೆಕ್ಕಡ ಹೇಳಿ ವಿಶೇಷ ಹೇಳಿಕೆ ಕೊಟ್ಟಿದ.’ – ಶರ್ಮಪ್ಪಚ್ಚಿ ಒಳ್ಳೆ ಪ್ರಚಾರ ಮಾಡ್ತಾ ಇದ್ದವಪ್ಪೋ ನಮ್ಮಾಂಗೆ.

  ಎಂತದೇ ಆಗಲಿ. ಲಾಯಕ್ಕ ಬರದ್ದಿ. ಕೆಲವೊಂದು ದೃಶ್ಯಾವಳಿ ಕಣ್ಣೆದಿರು ವಾಕ್ಯ ರೂಪಲ್ಲಿ ತೋರ್ಸುವಲ್ಲಿ ನಿಂಗೊ ‘ಭೇಷ್’ ಹೇಳ್ಸಿದಿ ಇದಾ ಎಂಬಲ್ಯಂಗೆ ನಮ್ಮದಿಲ್ಲಿಂದ ಒಂದು ಒಪ್ಪ.

  [Reply]

  ಶ್ರೀಶಣ್ಣ

  ಶ್ರೀಶ Reply:

  [ಎಂತಾರೂ ಶುದ್ದಿ ಬರದು ಕಳುಸೆಕ್ಕಡ ಹೇಳಿ ವಿಶೇಷ ಹೇಳಿಕೆ ಕೊಟ್ಟಿದ.’ – ಶರ್ಮಪ್ಪಚ್ಚಿ ಒಳ್ಳೆ ಪ್ರಚಾರ ಮಾಡ್ತಾ ಇದ್ದವಪ್ಪೋ ನಮ್ಮಾಂಗೆ] ಅವರತ್ರೆ ಕೇಳಿರೆ “ಇಲ್ಲೆಪ್ಪಾ” ಹೇಳುಗು.
  “ನಮ್ಮೂರು ನಮ್ಮೋರು” ಒಂದರಿ ನೋಡಿಕ್ಕಿ :)

  [Reply]

  VA:F [1.9.22_1171]
  Rating: +1 (from 1 vote)
 2. ಮುಳಿಯ ಭಾವ
  ರಘುಮುಳಿಯ

  ಉಡುಪಿಲಿ ಶಿವಳ್ಳಿ ಬ್ರಾಮ್ಮರ ಮದುವೆ೦ದ ಶುರುವಾಗಿ ಬೈಲಿಲಿ ಬರವದರ ವರೇಗೆ ಚೆ೦ದದ ಲೇಖನ ಶ್ರೀಶಣ್ಣಾ.
  ಅಲ್ಲಾ,ನಿನಗೂ ಪ್ರಶಾ೦ತಣ್ಣನ ಹಾ೦ಗೆ ರಜೆ ದಿನ ಪರ೦ಚುತ್ತ ಅಭ್ಯಾಸ ಇದ್ದೋ ಹಾ೦ಗಾರೆ?

  [Reply]

  ಶ್ರೀಶಣ್ಣ

  ಶ್ರೀಶ Reply:

  ಧನ್ಯವಾದ ಮುಳಿಯ ಭಾವಯ್ಯ
  [ನಿನಗೂ ಪ್ರಶಾ೦ತಣ್ಣನ ಹಾ೦ಗೆ ರಜೆ ದಿನ ಪರ೦ಚುತ್ತ ಅಭ್ಯಾಸ]. ಒಪ್ಪಣ್ಣ ಹೇಳ್ತ “ಜೇನೊರಕ್ಕು” ಹಾಳಪ್ಪಗ ಎಲ್ಲರೂ ಪರಂಚುಗೋ ಹೇಳಿ ಎನಗೊಂದು ಸಂಶಯ.
  ಪರಂಚುವದರ ಕೇಳ್ಲೆ ಜೆನ ಇಲ್ಲದ್ದರೆ ಆರತ್ರೆ ಪರಂಚುವದು ಅಲ್ಲದೋ :)

  [Reply]

  VA:F [1.9.22_1171]
  Rating: +1 (from 1 vote)
  ಶ್ರೀಶಣ್ಣ

  ಶ್ರೀಶ Reply:

  [ನಿನಗೂ ಪ್ರಶಾ೦ತಣ್ಣನ ಹಾ೦ಗೆ ರಜೆ ದಿನ ಪರ೦ಚುತ್ತ ಅಭ್ಯಾಸ ]-ಒಪ್ಪಣ್ಣ ಹೇಳ್ತ “ಜೇನೊರಕ್ಕು” ಹಾಳಪ್ಪಗ ಆರಾದರೂ ಪರಂಚುಗು ಅಲ್ಲದಾ- ಪರಂಚುವದರ ಕೇಳುವವು ಇದ್ದರೆ !!!
  ಧನ್ಯವಾದಂಗೊ ಮುಳಿಯ ಭಾವಯ್ಯಂಗೆ

  [Reply]

  VA:F [1.9.22_1171]
  Rating: 0 (from 0 votes)
 3. ಶ್ರೀಅಕ್ಕ°

  ಶ್ರೀಶಣ್ಣಾ, ಬೈಲಿಲಿ ಶುದ್ದಿ ಈಗ ಆದರೂ ಬಂತನ್ನೇ!! ಕಾದು ಕಾದು ಸಾಕಾತು. ಗೌರಮ್ಮಜ್ಜಿಯ ಪುಳ್ಳಿಯ ಬಾರ್ಸವೂ ಕಳುತ್ತಡ್ಡ!!! 😉
  ಒಪ್ಪಣ್ಣ ಮೊನ್ನೆ ಹೇಳಿದ್ದಲ್ಲದಾ ಇಷ್ಟು ಅಪ್ರೂಪ ಆಗೆಡಾ ಹೇಳಿ!! ಅಂತೂ ಅವ° ಹೇಳಿದ್ದಕ್ಕಾದರೂ ಬಂದೆನ್ನೇ!!

  ಚಿಕ್ಕಮ್ಮ ಇಲ್ಲದಿಪ್ಪಗ ನೀನುದೇ ಅಪ್ಪಚ್ಚಿದೇ ಬೇರೆ ಬೇರೆ ಪ್ರಯೋಗ ಮಾಡುದು ಎಲ್ಲೋರಿಂಗೂ ಗೊಂತಿಪ್ಪದೇ!! ಅಪ್ಪಚ್ಚಿ ಕೆಲವು ಹೇಳಿದ್ದವು.. ಒಳುದ್ದದು ನಿನ್ನ ಬಾಯಿಂದಲೇ ಹೆರ ಬರಲಿ ಆತೋ!!!! ಒಂದೊಂದಾಗಿ…!!!

  ತಂಗೆ ಹೇಳ್ಳೆ ಹೆರಟ ‘ಇನ್ನೊಂದು ವಿಷಯ’ ಬೈಲಿಂಗೆ ಬರಲಿ..(ಬಪ್ಪ ಹಾಂಗೆ ಇದ್ದರೆ!!;-)) ‘ರಘು ರಾಮಾಯಣ’ ದ ಒಟ್ಟಿಂಗೆ ಬೇಡ ಆತಾ… ಅದು ಬಂದ ಮೇಲೆ ಸಾಕದಾ!!! 😉 😉

  ಶುದ್ದಿ ಲಾಯ್ಕಾಯಿದು. ಅತ್ತಿಗೆಗೆ ಹೊಸ ಸೀರೆ ಸಿಕ್ಕಿದ್ದಾಯಿಕ್ಕು!! ನಿನ್ನ ಶರ್ಟಿನ ತೊಳವಲೆ ಆವುತ್ತನ್ನೇ!!! ಹಾಂಗಾಗಿ ನಿನಗೆ ಬೇಡ. ಇನ್ನುದೇ ಶುದ್ದಿಗೋ ಬರಲಿ..

  [Reply]

  ಶ್ರೀಶಣ್ಣ

  ಶ್ರೀಶ Reply:

  ಶ್ರೀ ಅಕ್ಕಾ,
  [ಇಷ್ಟು ಅಪ್ರೂಪ ಆಗೆಡಾ] ಅಪ್ರೂಪ ಅಪ್ಪ ವಸ್ತುಗೊಕ್ಕೆ ಬೆಲೆ ಜಾಸ್ತಿ ಅಡ !!!
  [ಒಳುದ್ದದು ನಿನ್ನ ಬಾಯಿಂದಲೇ ಹೆರ ಬರಲಿ] – ಬಾಯಿಂದ ಹೆರೆ ಬಂದರೆ ತೊಂದರೆ ಇಲ್ಲೆ ಅಲ್ಲದಾ?
  [‘ರಘು ರಾಮಾಯಣ’ ದ ಒಟ್ಟಿಂಗೆ ಬೇಡ ಆತಾ… ಅದು ಬಂದ ಮೇಲೆ ಸಾಕದಾ!!! 😉 ;-)]-ಹಾಂಗಾರೆ ರಘು ರಾಮಾಯಣ ಬೇಗ ಬತ್ತಾಯಿಕ್ಕು ಅಲ್ಲದಾ?
  [ಅತ್ತಿಗೆಗೆ ಹೊಸ ಸೀರೆ ಸಿಕ್ಕಿದ್ದಾಯಿಕ್ಕು!]- ನಾಡಿದ್ದು ಚೆನ್ನೈ ಭಾವನಲ್ಲಿಗೆ ಹೋಗಿಪ್ಪಗ “ನಲ್ಲಿ ” ಪಟ್ಟೇ ಸೀರೆ ತೆಗದು ಕೊಡ್ತೆ ಹೇಳಿದ್ದೆ. “ನಾಡಿದ್ದು” ಯಾವಾಗ ಹೇಳಿ ಕೇಳಿಕ್ಕೆಡ.

  [Reply]

  VA:F [1.9.22_1171]
  Rating: +1 (from 1 vote)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಶ್ರೀಶಣ್ಣನ ಮನಸ್ಸಿಲ್ಲಿ ಬಂದ ಆಲೋಚನೆಗೊ ಎಲ್ಲ ಹರಟೆಯ ಶೈಲಿಯ ಲೋಕಾಭಿರಾಮಲ್ಲಿ ಹರುದು ಬಯಿಂದು, ಲಾಯಕಾಯಿದು. ಬರೆತ್ತಾ ಇರು ಶ್ರೀಶಣ್ಣ.

  [Reply]

  VA:F [1.9.22_1171]
  Rating: 0 (from 0 votes)
 5. ಶ್ರೀಶಣ್ಣ
  ಶ್ರೀಶ

  ಧನ್ಯವಾದ ಬೊಳುಂಬು ಮಾವಂಗೆ

  [Reply]

  VA:F [1.9.22_1171]
  Rating: 0 (from 0 votes)
 6. ಶ್ರೀಶಣ್ಣ
  ಶ್ರೀಶ

  ಧನ್ಯವಾದ ಬೊಳುಂಬು ಮಾವಂಗೆ. ನಿಂಗಳ support ಹೀಂಗೆ ಇರಳಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಕೆದೂರು ಡಾಕ್ಟ್ರುಬಾವ°ಎರುಂಬು ಅಪ್ಪಚ್ಚಿಬೊಳುಂಬು ಮಾವ°ಬಂಡಾಡಿ ಅಜ್ಜಿಗಣೇಶ ಮಾವ°ವಿಜಯತ್ತೆಶ್ಯಾಮಣ್ಣಡಾಗುಟ್ರಕ್ಕ°ಮುಳಿಯ ಭಾವಪೆಂಗಣ್ಣ°ಜಯಗೌರಿ ಅಕ್ಕ°ದೊಡ್ಮನೆ ಭಾವಮಾಷ್ಟ್ರುಮಾವ°ದೇವಸ್ಯ ಮಾಣಿವೆಂಕಟ್ ಕೋಟೂರುಬಟ್ಟಮಾವ°ಸುವರ್ಣಿನೀ ಕೊಣಲೆಡಾಮಹೇಶಣ್ಣವಾಣಿ ಚಿಕ್ಕಮ್ಮಕಾವಿನಮೂಲೆ ಮಾಣಿಅನಿತಾ ನರೇಶ್, ಮಂಚಿಅಕ್ಷರದಣ್ಣಅಡ್ಕತ್ತಿಮಾರುಮಾವ°ದೊಡ್ಡಭಾವಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ