ಮದುವೆ ವೆಡ್ಡಿಂಗಿಗೆ ನೇಟಿವ್ ಪ್ಲೇಸ್ ಸ್ವಂತ ಊರಿಂಗೆ ಹೋಯೆಕು!!

May 16, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಸಮಾಜಲ್ಲಿ ಕೆಲವು ಜನ ಮಾತಿನೆಡೆಲಿ ಅನಗತ್ಯ ಇಂಗ್ಳೀಶ್ ಸೇರುಸಿ, ನಮ್ಮ ಭಾಶೆಯ ಮೂಲತನವ ಕೊಲ್ಲುತ್ತುವು.
ಅವರ ಮಾತಿನ ಅನುಕರುಸುವ ಹಾಂಗೆ, ಒಂದು ತಮಾಶೆಯ ಶುದ್ದಿ ನಮ್ಮ ಚೆನ್ನೈ ಭಾವಂದು.
ಎಲ್ಲೋರು ಓದಿ, ತಮಾಶೆಗೆ ನೆಗೆಮಾಡಿ, ಶುದ್ದಿಗೆ ಒಪ್ಪ ಕೊಡೇಕು ಹೇಳ್ತದು ಬೈಲಿನ ಆಶಯ.

ನಾವಿದ ಓ ಮನ್ನೆ ಒಂದು ಮದುವೆ ವೆಡ್ಡಿಂಗಿಗೆ ನೇಟಿವ್ ಪ್ಲೇಸ್ ಸ್ವಂತ ಊರಿಂಗೆ ಹೋಯೆಕು ಹೇಳಿ ಹೆರಟತ್ತು.
ಹೆರಡುವ ದಿನ ತಡವಾತು ಹೇಳಿ ಗಡಿಬಿಡಿ ಅರ್ಜೆಂಟ್ ಮಾಡಿಯೊಂಡು ಬ್ಯಾಗ್ ಚೀಲ ತುಂಬಿಸಿ  ಹೆಗಲಿಂಗೆ ಹಾಕ್ಯೊಂಡು ರಿಕ್ಷ ಹಿಡ್ಕೊಂಡು ಸ್ಟೇಶನಿಂಗೆ ಹೋತು.
ಟ್ರಾಫಿಕ್ ಹೆವ್ವಿ ವಿಪರೀತ ಇದ್ದು ಹೇಳಿ ಸಂದು ಗೊಂದಿಲ್ಲಿ ನುಸುಳಿಯೊಂಡು ಹೋಪಗ ಒಂದಿಕ್ಕೆ ನೆಡು ಸೆಂಟರ್ ಮಾರ್ಗಲ್ಲಿ ಒಂದು ಬಸ್ಸು ಹಾಳಾಗಿ ಬಾಕಿ ಆಗಿತ್ತು .
ಅಲ್ಲಿಂದ ಪಕ್ಕದ ಬಲದ ಹೊಡೆ ರೈಟ್ ಸೈಡ್ ಮಾರ್ಗ ರೋಡಿಲ್ಲ್ಯಾಗಿ ಹೇಂಗೋ ಕರೆಕ್ಟ್ ಕ್ಲಪ್ತ ಸಮಯಕ್ಕೆ ಎತ್ತಿಗೊಂಡತ್ತು ರೈಲ್ವೆ ಸ್ಟೇಷನ್ ನಿಲ್ದಾಣಕ್ಕೆ .
ಟ್ರೈನ್ ಹೆರಟು ಎತ್ತೆಕ್ಕಾದಲ್ಯಂಗೆ ರೀಚ್ ಆಗಿ ಎತ್ತಿಯಪ್ಪಗ ನಾವು ಟ್ರೈನ್ ರೈಲು ಬಿಟ್ಟು ಇಳುದತ್ತು. ಅಲ್ಲಿಂದ ಬಸ್ಸು ಹಿಡ್ಕೊಂಡು ನಮ್ಮ ನಿಜ ಊರಿಂಗೆ ಎತ್ತಿತ್ತಪ್ಪ. ಮತ್ತೆ ನಮ್ಮತ್ರ ಭಾರ ಲಗ್ಗೇಜ್ ಸಾಮಾನು ದಣಿಯ ತುಂಬ ಇಲ್ಲದ್ದ ಕಾರಣ ನಡಕ್ಕೊಂಡೇ ಹೋಪೋ ಹೇಳಿ ವಾಕಿಂಗ್ ನಡೆ ಸುರುಮಾಡಿತ್ತು ಮನೆಕಡೆಂಗೆ. ನಡಕೊಂಡು ಹೋಪಗ ಇದಾ.. ಅಣ್ಣಾ., ಎದುರು ಫ್ರಂಟಿನ್ದ  ಒಂದು ಮೋಟರ್ ಸೈಕಲ್ ಬೈಕು ಎಂಥಾ ಪಾಷ್ಟು ಸ್ಪೀಡಾಗಿ ಬಂತು ಗೊಂತಿದ್ದೋ..

ಅಬ್ಬಾ ., ಎನಗೇ ಫೀಯರ್ ಹೆದರಿಕೆ ಆತಪ್ಪ. ಅಂತೂ ಅಲ್ಲಿಂದ ಸೈಡ್ ಕರೇಲಿ ಇಪ್ಪ ಶಾರ್ಟ್ ರೂಟ್ ದಾರಿಲ್ಲಿ ಫಾರೆಸ್ಟ್ ಕಾಡು ಕರೇಲಿಯಾಗಿ ನಡಕೊಂಡು ಮನಗೆ ಸೇರಿತ್ತು. ಎನ್ನ ಕಂಡಪ್ಪಗ ಆ ಡಾಗ್ ನಾಯಿ ಒಂದರಿ ವಿಪರೀತ ಕೊರಪ್ಪಿತ್ತು ಬಿಡಿ. ಹೆಂಗಾರು ಅಪರೂಪಕ್ಕೆ ಹೊಪವ ಆದಕಾರಣ ಎನ್ನ ಗುರ್ತ ಪರಿಚಯ ಸಿಕ್ಕಿರ ಅದಕ್ಕೆ. ಮತ್ತೆ ಶುಭ್ರ ಕ್ಲೀನ್ ಆಗಿ ಮಿಂದುಗೊಂಡು ಅಂಗಿ ವಸ್ತ್ರ ಡ್ರೆಸ್ ಬದಲ್ಸಿ ಚೇಂಜ್ ಮಾಡಿ ಮದುವೆ ಕಲ್ಯಾಣ ಮಂಟಪಕ್ಕೆ ಹೋತು.
ಹಳ್ಳಿ ಕೂಸು ಪೇಟೆ ಮಾಣಿ..!

ಜೆನ ಒಂದು ಐನ್ನೂರ್ ಕ್ರಾಸ್ ಆಗಿ ದಾಂಟಿಕ್ಕು. ಪೇಟೆಂದ ಬಂದ ಮಾಣಿ ಕಡೆಯವು ಪಾಂಟ್ ಅಂಗಿ ಡ್ರೆಸ್ ಹಾಕಿ ಭಾರೀ ಸಂಸ್ಕಾರವಂತ ನಾಗರೀಕರ ಹಾಂಗೆ ಇತ್ತಿದ್ದವಯ್ಯ.
ಅವ್ವು ನಮ್ಮವ್ವೆಪ . ಅಂದರೂ ಅವ್ವು ಮಾತ್ನಾಡುವ ಭಾಷೆ ಲಾಂಗುವೇಜ್ ಏವುದು ಹೇಳಿ ಡಿಸೈಡ್ ತೀರ್ಮಾನ ಮಾಡ್ಲೆ ಎಡಿಗಾಯ್ದಿಲ್ಲೆ ಎನಗೆ.
ಇಂಗ್ಲೀಶ್ ಮಾತಾಡಿದ್ದೋ ನಮ್ಮ ಭಾಷೆ ಮಾತಾಡಿದ್ದೋ ಉಮ್ಮಪ್ಪ. ಅನ್ ಲಕ್ಕಿಲಿ ಅಭಾಗ್ಯವಶಾತ್, ಬಪೆ ಇತ್ತಿಲ್ಲೆ ಊಟಕ್ಕೆ.

ಎಲ್ಲೋರಿಂಗೂ ಕೆಳ ಚಕ್ಕನಾಟಿ ಕೂದೆ ಊಟ ವ್ಯವಸ್ಥೆ .
ಪಾಪ, ಪೇಂಟ್ ಹಾಕಿಯೊಂಡಿದ್ದ ಆ ಪೇಟೆ ಹಲವು ಮಕ್ಕೊಗೆ ಸರೀ ಕೂಬಲೂ ಅರಡಿಯದ್ದೆ ಕಾಲು ಹಿಂದಂತಾಗಿ ಫೋಲ್ಡ ಮಾಡಿ ಮಡಚಿ ಕೂದು ಊಟ ಲಂಚ್ ಮುಗಿಸಿದವಪ್ಪ .
ಐ  ಥಿಂಕ್, ಆನೆಂತ ಗ್ರೇಶುತ್ತೆ ಹೇಳಿರೆ, ಪೇಟೆಲಿ ಹೋಗಿ  ಹಲವು ವರ್ಷ ಊರಿನ ಟಚ್ ಸಂಪರ್ಕ ಬಿಟ್ಟು ಹೀಂಗಾದ್ದದಾಯ್ಕು. ಸೋ ಆದಕಾರಣ , ವಾಟ್ ಯು ಸೇ ಈಗ ನಿಂಗೊ ಎಂತ ಹೇಳುತ್ತಿ?

ಮದುವೆ ವೆಡ್ಡಿಂಗಿಗೆ ನೇಟಿವ್ ಪ್ಲೇಸ್ ಸ್ವಂತ ಊರಿಂಗೆ ಹೋಯೆಕು!!, 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಪವನಜಮಾವ

  ಶುರು ಶುರವಿಂಗೆ ಈ ಇಂಗ್ಲಿಶ್ ಪಿತ್ತ ಬೆಂಗಳೂರು ಮೈಸೂರು ಕನ್ನಡಿಗರಿಂಗೆ ಮಾತ್ರ ಇತ್ತು. ಶತಾವಧಾನಿ ಡಾ| ರಾ ಗಣೇಶ ಯಾವಾಗಲೂ ಹವ್ಯಕರ ಹೊಗಳುತ್ತ. ಅದಕ್ಕೆ ಅವ ಕೊಡುವ ಕಾರಣ “ಕನ್ನಡ ಭಾಷೆಯ, ಅದ್ರಲ್ಲೂ ಸ್ವಚ್ಚ ಭಾಷೆಯ ಜೀವಂತ ಇರ‍್ಸಿದವು” ಹೇಳಿ. ಈಗೀಗ ನಮ್ಮವಕ್ಕೂ ಈ ಇಂಗ್ಲಿಶ್ ಪಿತ್ತ ಶುರು ಆಯಿದೂಳಿ ಬೇಜಾರಾಗ್ತು. ಆದ್ರೂ ಬಾಕಿಯವಕ್ಕೆ ಹೋಲ್ಸಿದ್ರೆ ನಮ್ಮವಕ್ಕೆ ಈ ಪಿತ್ತ ಕಮ್ಮಿಯೇ.

  [Reply]

  VN:F [1.9.22_1171]
  Rating: 0 (from 0 votes)
 2. ಗಣೇಶ ಪೆರ್ವ
  ಗಣೇಶ

  ಹ್ಹಹ್ಹಾಹ್ಹಹ್ಹಹ್ಹಾಹ್ಹಾ….

  ಚೂರು ಅತಿಶಯೋಕ್ತಿ ಇದ್ದರೂ ವ್ಯ೦ಗ್ಯ ಲಾಯಿಕ ಆಯಿದು. ಎನ್ನ ಸಹೋದ್ಯೋಗಿ ಒ೦ದು ತಮಿಳಿನ ಜನ ಇದ್ದತ್ತು. ಯಾವತ್ತೂ ‘ಸರಿ, ರೈಟ್, ಓಕೆ ಸರ್’ ಹೇಳಿಯೇ ಹೇಳುಗಷ್ಟೆ. ಇದರಲ್ಲಿ ಯಾವುದಾದರೂ ಒ೦ದರ ಮಾ೦ತ್ರ ಹೇಳಿರೆ ಸಾಕು ಹೇಳಿ ಆ ಜನ ಕೆಲಸಕ್ಕೆ ಸೇರಿದ೦ದಿನಿ೦ದ ಬಿಟ್ಟು ಹೋಪ ವರೇ೦ಗೆಯುದೆ ಹೇಳುತ್ತಲೇ ಇತ್ತಿದ್ದೆ, ಅದು ಮಾ೦ತ್ರ ಕಡೇವರೇ೦ಗುದೆ ತಿದ್ದಿಗೊ೦ಬ ಗೋಜಿ೦ಗೇ ಹೋಯಿದಿಲ್ಲೆ!!

  [Reply]

  VA:F [1.9.22_1171]
  Rating: +1 (from 1 vote)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಚೆನ್ನೈ ಭಾವನ ಲೇಖನ ಲಾಯಿಕ ಆಯಿದು.
  ಈ ಇಂಗ್ಲಿಶ್ ವ್ಯಾಮೋಹ ಪೇಟೆಲಿ ಜಾಸ್ತಿ. ಹಳ್ಳಿಲಿ ಹೋಗಿ ಹೀಂಗೆ ಮಾತಾಡಿರೆ ಮೋರೆ ಮೋರೆ ನೋಡಿ ಗೆಬ್ಬಾಯಿಸುಗು. ಅಲ್ಲಿ ಈ ರೀತಿ ಮಾತಾಡುವವು ಸಿಕ್ಕವು ಹೇಳಿಯೇ ಹೇಳ್ಲಕ್ಕು. ಅನಿವಾರ್ಯವಾಗಿ ಕೆಲವು ಇಂಗ್ಲಿಶ್ ಶಬ್ದಂಗೊ ನಮ್ಮ ಭಾಶೆಗಳಲ್ಲಿ ಹಾಸು ಹೊಕ್ಕಾಗಿ ಬಯಿಂದು. ಅದರ ಹವ್ಯಕೀಕರಿಸುವದು ಸಮಂಜಸ ಆವ್ತೋ ಇಲ್ಲೆಯೋ ಹೇಳ್ಲೆ ಎಡಿತ್ತಿಲ್ಲೆ.
  ಒಪ್ಪಣ್ಣ ಬೈಲು ಅ ನಿಟ್ಟಿಲ್ಲಿ ಒಳ್ಳೆ ಪ್ರಯತ್ನಲ್ಲಿ ಇದ್ದು. “ಸಮೋಸ” ಹೇಳ್ತ ಶಬ್ದವ SMS ಬದಲಾಗಿ ಹೇಳುವಾಗ ಮೊದ ಮೊದಲು ಅರ್ಥ ಆಯಿದಿಲ್ಲೆ. ಆದರೆ ಈಗ ಅದೇ ಸರಾಗವಾಗಿ ಬತ್ತು. ಮಾತ್ರ ಅಲ್ಲದ್ದೆ ಹಲವಾರು ಹಳೆ ಹವ್ಯಕ ಭಾಷೆಯ ಶಬ್ದಂಗಳು ಸಿಕ್ಕುತ್ತಾ ಇದ್ದು
  ಬೈಲಿಲ್ಲಿ ಬರವಲೆ ಹೆರಟ ಎನಗೆ ಸುರು ಸುರುವಿಂಗೆ ಕನ್ನಡ (ಹವ್ಯಕ) ಶಬ್ದಂಗಳ ಹಾಕಲೆ ಪರಡಿಗೊಂಡು ಇತ್ತಿದ್ದೆ. ಒಂದು ಡಿಕ್ಷನರಿ ತಂದು ಮಡ್ಕೊಂಡಿದೆ. ಸಂಶಯ ಬಂದಪ್ಪಗ ಆಂಗ್ಲ ಭಾಷೆಂದ ಕನ್ನಡಕ್ಕೆ ತರ್ಜುಮೆ ಮಾಡಿ ಅರ್ಥ ಮಾಡಿಗೊಂಬಲೆ.
  [ಎನಿ ಹೌ ನಿಂಗಳ ಆರ್ಟಿಕಲ್ ಆನು ಅಪ್ರಿಶಿಯೇಟ್ ಮಾಡಿ ಒಂದು ಕಮೆಂಟ್ ಪ್ಲೇಸ್ ಮಾಡ್ತಾ ಇದ್ದೆ]

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  [ಎನಿ ಹೌ ನಿಂಗಳ ಆರ್ಟಿಕಲ್ ಆನು ಅಪ್ರಿಶಿಯೇಟ್ ಮಾಡಿ ಒಂದು ಕಮೆಂಟ್ ಪ್ಲೇಸ್ ಮಾಡ್ತಾ ಇದ್ದೆ]

  – ಇದು ಚಂದ ಆಯ್ದೀಗ ಹೇ ಹೇ ಹೇ…

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  Gopalakrishna BHAT S.K.

  ಕೈಲಾಸಂ ನಾಟಕಲ್ಲಿ ಇಂಗ್ಲಿಷ್ ಮಿಶ್ರ ಮಾಡಿ ತಮಾಷೆ ಮಾಡಿದ ಹಾಂಗೆ,ನಿಜಕ್ಕೂ ಆಯಿದು ಈಗ.
  ಉತ್ತಮ,ಫಷ್ಟ್ ಕ್ಲಾಸು.

  [Reply]

  VA:F [1.9.22_1171]
  Rating: 0 (from 0 votes)
 5. Heenge obba (amambady@gmail.com)

  ಸೂಪೆರ್ರಾ ಇರುಕ್ಕು ತಲೈವರೆ
  ಎಲ್ಲಾ ಅಪ್ಪಡಿದಾ. ಪೆಸು೦ಬೊದು ನೆರಿಯ ಇ೦ಗ್ಲಿಸ್ ಮಿಕ್ಸ್ ಪ೦ದ್ರಾ೦ಗೆ.

  [Reply]

  ಪೆಂಗಣ್ಣ° Reply:

  ಯೆ ಬಾವಾ

  ಊರು ಬಿಟ್ಟಪ್ಪಗ ಬಾಷೆಯೂ ಬಿಟ್ಟತ್ತೋ ಹೇಂಗೆ?

  ಎಂತ್ಸೊ? ಕೊಳಚಿಪ್ಪು ಬಾವಾನೂ ಅದನ್ನೇ ಹೇಳ್ತಪ್ಪಾ !

  ಇದಾ ಆ ಭಾಷೆ ಎಂಗೊಗೆ ಅರಡಿಯಾ.. ಚೆನ್ನೈ ಬಾವಾ ಹೇಳೆಕಸ್ಟೆ..

  [Reply]

  Heenge obba (amambady@gmail.com) Reply:

  ಭಾಶೆ ಮರವಲೆ ಇಪ್ಪದಲ್ಲ ಭಾವಾ.
  ‘ನಮ್ಮ ಅಮ್ಮ ಅಮ್ಮನೆ, ಬೇರೆ ಅಮ್ಮ ಸುಮ್ಮನೆ’ ಹೇಳುವ ಕವಿ ವಾಣಿಯ ರಜ್ಜ ಬದಲುಸಿ, ‘ನಮ್ಮ ಅಮ್ಮ ಅಮ್ಮನೆ, ಬೇರೆ ಅಮ್ಮನೂ ಅಮ್ಮನೆ’ ಹೇಳುದು ಎನ್ನ ಅನಿಸಿಕೆ.
  ಎಲ್ಲೋರ ಹಾ೦ಗೆ ಆನುದೆ ತಮಾಶೆಗೆ ನೆಗೆ ಮಾಡಿ ಒಪ್ಪ ಕೊಟ್ಟದು ತಮಿಳಿ೦ಗೆ ಇ೦ಗ್ಲಿಶ್ ಸೆರುಸಿ

  ನಮ್ಮ ಭಾಶೆಯ ಬಗ್ಗೆ ನಾವು ಅಭಿಮಾನ ಪಟ್ತುಗೊ೦ಡು, ಹಾ೦ಗೆ ಬೇರೆ ಭಾಷೆಗೊಕ್ಕೂ ನಮ್ಮ ನಾವು ಅನಾವರಣಗೊಳುಸಿಗೊ೦ಬದು ಒಳ್ಳೆದು ಹೇಳಿ ಕಾಣ್ತು ಎನಗೆ.
  ಮತ್ತೆ ಆ೦ಗ್ಲ ಭಾಷಾ ವ್ಯಾಮೋಹ ಪೇಟೆಲಿ ಮಾ೦ತ್ರ ಅಲ್ಲ, ಹಳ್ಳಿಲಿಯೂ ಕ೦ಡಿದೆ ಆನು.

  [Reply]

  VA:F [1.9.22_1171]
  Rating: 0 (from 0 votes)
  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಹೀಂಗೂ ನಿಂಗಳ (ಎಲ್ಲೋರ) ಒಪ್ಪ ಪ್ರೋತ್ಸಾಹಕ್ಕೆ ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°
  ಚೆನ್ನೈ ಭಾವ

  ಎಂತದೇ ಆದರೂ ನವಗೆ ಇಲ್ಲಿಗೇ ನಮ್ಮ ಹವ್ಯಕ ಭಾಷೇ ಸಾಕು. ಇದರ ಉಳಿಸಿ ಬೆಳೆಸುವೋ ಇಲ್ಲಿ. ಬೇಕಾರೆ ನೆರೆಕರೆಲಿ ಕೂದೊಂಡು ಬಾಕಿದ್ದರ ಚರ್ಚೆ ಮಾಡುವೋ ಆಗದೋ ಏ.

  [Reply]

  VA:F [1.9.22_1171]
  Rating: +2 (from 2 votes)
 7. ಮುಳಿಯ ಭಾವ

  ಹಾಯ್ ಚೆನ್ನೈಭಾವಾ,
  ನಮ್ಮ ಭಾಷೆಲಿ ಮಾತಾಡಿರೆ ಸಣ್ಣ ಅಕ್ಕು ಹೇಳುವ ಭ್ರಾ೦ತು ಕೆಲವು ಜಾಗೆಲಿ ಎನಗೂ ಕ೦ಡಿದು ಭಾವ.
  ಈ ಐಟಮ್ ಫಷ್ತ್ ಕ್ಲಾಸ್ ಆಯಿದು. ವಾಟ್ ನೆಕ್ಷ್ಟ್ ?

  [Reply]

  VN:F [1.9.22_1171]
  Rating: +1 (from 1 vote)
 8. drmahabala
  anile dagtru

  ningala writing baravanige good olledaydu heli enna comment oppa.

  [Reply]

  VA:F [1.9.22_1171]
  Rating: 0 (from 0 votes)
 9. ವಿವೇಕ ಮುಳಿಯ

  ನಿ೦ಗಳ ಲೇಖನ ಆರ್ಟಿಕಲ್ಲು ಒಳ್ಳೆದಾಯ್ದು ಭಾವ :)
  ———————
  ವಿವೇಕ್ ಮುಳಿಯ
  ———————

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಬಂಡಾಡಿ ಅಜ್ಜಿಶಾ...ರೀಚೆನ್ನೈ ಬಾವ°ಜಯಗೌರಿ ಅಕ್ಕ°ಮುಳಿಯ ಭಾವಗೋಪಾಲಣ್ಣಅಜ್ಜಕಾನ ಭಾವಪಟಿಕಲ್ಲಪ್ಪಚ್ಚಿವಿಜಯತ್ತೆಡೈಮಂಡು ಭಾವವೇಣಿಯಕ್ಕ°ಎರುಂಬು ಅಪ್ಪಚ್ಚಿದೊಡ್ಮನೆ ಭಾವಸಂಪಾದಕ°ಅಕ್ಷರ°ಅನಿತಾ ನರೇಶ್, ಮಂಚಿದೀಪಿಕಾಯೇನಂಕೂಡ್ಳು ಅಣ್ಣಶುದ್ದಿಕ್ಕಾರ°ಪೆಂಗಣ್ಣ°ಚೂರಿಬೈಲು ದೀಪಕ್ಕನೀರ್ಕಜೆ ಮಹೇಶಶೇಡಿಗುಮ್ಮೆ ಪುಳ್ಳಿಕೇಜಿಮಾವ°ಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ