Oppanna.com

ಮಸ್ತಕಾಭಿಷೇಕ…!?!

ಬರದೋರು :   ಬೊಳುಂಬು ಮಾವ°    on   09/10/2015    2 ಒಪ್ಪಂಗೊ

ಬೊಳುಂಬು ಮಾವ°

ಎನ್ನ ಮಗ ಚಿನ್ಮಯ, ಎರಡು ವರ್ಷ ಹಿಂದೆ ಒಪ್ಪಣ್ಣ ಪ್ರತಿಷ್ಟಾನದ ವಿ.ವಿ.ಸ್ಪರ್ಧಗೆ ಕಳುಸಿದ ಒಂದು ಶುದ್ದಿ ಇದು. ಸಣ್ಣಾದಿಪ್ಪಗ ಅವಂಗೆ ಆದ ರಸಾನುಭವದ ಘಟನೆ ಇಲ್ಲಿದ್ದು.  ಹೀಂಗಿಪ್ಪ ಅನುಭವ ನಿಂಗೊಗೂ ಆಗಿಕ್ಕು. ಅದರ ಅವನ ಮಾತಿಲ್ಲೇ ಕೇಳಿ.

ಬೇಸಗೆ ರಜೆ ಬಂತೂ ಹೇಳಿರೆ ಮಕ್ಕೊಗೆಲ್ಲ ಗಮ್ಮತ್ತೇ ಗಮ್ಮತ್ತು. ಪರೀಕ್ಷೆ ಮುಗುದ್ದದೇ ತಡ, ಶಾಲೆ ಚೀಲವ ಮೂಲಗೆ ಇಡುಕ್ಕಿ ಆತು. ಮತ್ತೆ ಅದರ ಅಗತ್ಯ ಬತ್ತದು ಮುಂದಾಣ ಜೂನ್ ಒಂದಕ್ಕೇ !  ಪೇಟೆಲಿಪ್ಪ ಹಾಂಗೆ ಬೇಸಿಗೆ ಶಿಬಿರದ ರಗಳೆ ಇವಕ್ಕಿಲ್ಲೆ. ಪೇಟೆಯ ಸಮ್ಮರ್ ಕ್ಯಾಂಪಿಂದಲು ಹೆಚ್ಚಿನ ಕಲಿಯುವಿಕೆ, ಗಮ್ಮತ್ತು ಹಳ್ಳಿಯ ಮಕ್ಕಳ ಬೇಸಗೆ ರಜೆಲಿ ಇರ್ತು. ಕುಂಟಾಂಗಿಲ ಹಣ್ಣು, ಪೂಚೆ ಹಣ್ಣೂ, ಬೀಜದ ಹಣ್ಣು, ಮಾವಿನ ಹಣ್ಣು, ಹಲಸಿನ ಹಣ್ಣು, ಇನ್ನೂ ಎಂತೆಂತ ಹಣ್ಣುಗೊ ಬೇಕು ಎಲ್ಲವೂ ಆವ್ತ ಸಮಯ ಅದು. ಗುಡ್ಡೆ ಇಡೀ ತಿರುಗಿ, ಗೇರು ಬೀಜದ ಮರಕ್ಕೆ ಮುಜುಗಳ ಹಾಂಗೆ ಹತ್ತಿ ನೇತು ಹಾರ್ಲೆ ಅದೆಂತಾ ಕೊಶಿ .. !

“ಇದಾ ಚಿನ್ನು, ಹಲಸಿನಡ್ಕಕ್ಕೆ ಹೋಗಿ ಮಾವಿನ ಹಣ್ಣು ತೆಕ್ಕೊಂಡು ಬತ್ತಿಯೋ, ಮಾಂಬಳ ಮಾಡುವೊ ಹೇಳಿ ಅಜ್ಜಿ ಹೇಳಿ ಅಪ್ಪಗ ಇಲ್ಲೆ ಹೇಳ್ಲೆ ಆತಿಲ್ಲೆ. ಉದಿಯಪ್ಪಗ ಕಾಪಿ ಕುಡುದುದೆ ಆದಿಲ್ಲೆ. ಮನಗೆ ಸಾಮಾನು ತತ್ತ ಒಂದು “ಟಂಗಿಸ್” ಚೀಲವ ತೆಕ್ಕೊಂಡು ಗುಡ್ಡೆ ಹತ್ತಿದೆ. ಎಂಗಳ ಮನೆಂದ ಒಂದು ಮೈಲು ದೂರ ಹಲಸಿನಡ್ಕ. ಕುತ್ತ ಗುಡ್ಡೆ ಹತ್ತಿ, ಹತ್ತಿ ಬಚ್ಚಿ ಅಪ್ಪಗ ಸಿಕ್ಕುತ್ತ ಎಂಗಳದ್ದೇ ಜಾಗೆ. ಹಲಸು, ಮಾವು, ತೆಂಗು, ಬೀಜ ಇನ್ನೂ ಎಂತೆಂತದೋ ಮರಂಗೊ ಅಲ್ಲಿದ್ದು. ಎಂಗಳ ಮನಗೆ ಕೆಲಸಕ್ಕೆ ಬತ್ತ ಎಂಗಳ ಒಕ್ಕಲು, “ಕೊರಪ್ಪಾಳು” ಹೇಳ್ತ ತೊಂಡಿ ಹೆಣ್ಣು ಅಲ್ಯಾಣ ಓನರು! ಅದರ ಮುಳಿ ಮನೆ. ಸಗಣ ಉಡುಗಿದ ಜಾಲು, ಜಾಲಿಲ್ಲಿ ಓಡುತ್ತ ಕೋಳಿಗೊ, ಕೋಳಿ ಕುಙಿಗೊ. ಅಲ್ಲಿ ನೆಡವಗ ಜಾಗ್ರತೆ ಬೇಕು ! ಕೆಲವೊಂದರಿ ಕಾಲಿಂಗೆ ಎಂತಾರು ಅಂಟಿರೂ ಆತು ! ಚೂಂಯಿಂಗ್ ಗಮ್ಮಿನ ಹಾಂಗೆ. ಎನ್ನ ಕಂಡು ಕೊರಪ್ಪಾಳಿಂಗೆ ಕೊಶಿ ಆತು. “ಅಣ್ಣ ಅಣ್ಣ” ಹೇಳಿ ಪ್ರೀತಿಲಿ ಚೋರೆ (ಎಳತ್ತು ಗೇರು ಬೀಜ) ಕಡುದು ಕೊಟ್ಟತ್ತು. ಬೀಜದ ಸೊನೆಯ ಚಡ್ಡಿಗೆ ಉದ್ದೆಂಡು ಚೋರೆ ಮುಗುಶಿದೆ. ಗಾಳಿ ಬೀಸಿರೆ ಸಾಕು. ಅಲ್ಲೇ ಹತ್ರಾಣ ಎರಡು ಮಾವಿನ ಮರಂದ ಬುಡು ಬುಡನೆ ಮಾವಿನ ಹಣ್ಣುಗೊ ಬಿದ್ದೊಂಡಿದ್ದತ್ತು. ಕೊರಪ್ಪಾಳು ಎನ್ನ ಟಂಗಿಸ್ ಚೀಲ ತುಂಬಾ ಮಾವಿನ ಹಣ್ಣು ತುಂಬುಸಿತ್ತು. ಚೀಲ ಭರ್ತಿ ಆತು.

“ಅಣ್ಣ ಇದರ ಹೇಂಗೆ ತೆಕ್ಕೊಂಡು ಹೋಪಿ ? ಇಂದು ಆನು ಕೆಲಸಕ್ಕೆ ಬತ್ತಿಲ್ಲೆ. ಇದರ ತಲಗೆ ಮಡಗಲಿಯೊ” ಕೊರಪ್ಪಾಳು ಕೇಳಿತ್ತು. ಕೆಲಸಕ್ಕೆ ಬಪ್ಪಲಿದ್ದರೆ ಅದೆ ತತ್ತಿತೋ ಎಂತೊ. ಚೀಲವ ಕೈಲಿ ನೇಲುಸಲೆ ಎನಗೆಡಿಯ ಅಪ್ಪಾ ! ಅದೆಂತ ಕೈಲಿ ನೇಲುಸಲೆ ಹೊರಿಯಕ್ಕಿ ಕಟ್ಟವೊ ?! ಆನು ನಾಕನೇ ಕ್ಲಾಸಿನ ಮಾಣಿ. ಮೂರು ಫೀಟು ಉದ್ದ ಇದ್ದನೋ ಎಂತೊ. ಹೆಗಲಿಂಗೆ ಮಡಗಿರೆ ಚೀಲವ  ಹಿಡಿಯಲೆ ಕೈ ಎತ್ತ. ಅಕ್ಕು ತಲೆಲಿ ಮಡಗು ಹೇಳಿದೆ. ಮಡಗಿತ್ತು.

ಯಬ್ಬ ! ಆನು ಗ್ರೇಶಿದ ಹಾಂಗಿಲ್ಲೆ. ಎನ್ನ ಅರ್ಧದಷ್ಟು ಚೀಲವೇ ಇದ್ದು. ಅದುದೆ ಎಂತಾ ಭಾರ? ಒಂದು ಮಣವೇ ಆಗಿ ಹೋಕೋ ಹೇಳಿ. ಕಟ್ಟವ ತಲೆಲಿ ಮಡಗಿ ಅಪ್ಪಗ ಚಕ್ಕನೆ ಕೊರಳು ಜಗ್ಗಿದ ಹಾಂಗಾತು.

“ಹೇಂಗೆ ಎಡಿಗಲ್ಲದೊ ?” ಎಡಿಯ ಹೇಳಿರೆ ಎನ್ನ ಮರ್ಯಾದೆಗೆ ಕಡಮ್ಮೆ ಅಕ್ಕು ಹೇಳಿ “ಓ, ಎಡಿಗು” ಹೇಳಿದೆ !

ಕೊರಪ್ಪಾಳು ಕೈಯ ಬಿಟ್ಟತ್ತು. ಅದು ಕೈ ಬಿಟ್ಟ ಕೂಡ್ಳೇ ಬೀಸರಿಸಿದ ಹಾಂಗಾತು. “ಆನು ಬತ್ತೆ” ಹೇಳಿಯೂ ಹೇಳಿದ್ದಿಲ್ಲೆ. ಭಾರ ಕಾಲು ಮಡಗಿ ಜಾಲು ದಾಂಟಿದೆ, ದಡಮ್ಮೆ ತೆಗಕ್ಕೊಂಡೇ ಇತ್ತು ಸದ್ಯ. ಕುಂಬಳೆ ಬೆಡಿದಿನ ದೊಡ್ಡಬೊಟ್ಟಿನ ಅಡಿಗಳು ದೇವರು ಹೊತ್ತು ಓಡಿದ ಹಾಂಗೆ !  ಕೈ ಬಿಟ್ಟಿಕ್ಕಲೆ ಧೈರ್ಯ ಸಾಲ. ಕಾಲಿಲ್ಲಿ ಮೆಟ್ಟಂತೂ ಮದಲೇ ಇಲ್ಲೆ. ಶಬರಿಮಲಗೆ ಹೆರಟು ಪಾದಯಾತ್ರೆ ಮಾಡ್ತವರ ನೆಂಪು ಬಂತು. ಪಾರೆಯ ಮುಳ್ಳುಗಳ ಮೆಟ್ಟೆಂಡು, ತಲೆಗೆ ಒತ್ತೆಂಡಿದ್ದಿದ್ದ ಮಾವಿನ ಹಣ್ಣುಗಳ ದೂಡ್ಯೊಂಡು ಬೀಸ ನೆಡದೆ. ಗುಡ್ಡೆ ಇಳಿವಲೆ ಸುರು ಆತು. ಕೊರಳೂ ಬಗ್ಗಲೆ ಸುರು ಆತು. ಬಚ್ಚುತ್ತರೂ ಕಟ್ಟವ ಕೆಳ ಮಡಗುವೋ ಹೇಳಿರೆ ಎಡಿಯೆಕಾನೆ, ಕೆಳ ಮಡಗಿರೆ ಇರುವಾರ ಎನ್ನ ತಲಗೆ ಮಡಗುತ್ತವ ಆರು ? ಅದಾ, ಒಂದು ಎತ್ತರದ ಕಲ್ಲಿನ ಕೋಟೆ ಸಿಕ್ಕಿತ್ತು. ಬಚಾವ್! ಕೋಟೆ ಹತ್ರಂಗೆ ಹೋಗಿ ಮೆಲ್ಲಂಗೆ ಕಟ್ಟವ ತಲೆಂದ ಜಾರುಸಿ ಅದರ ಮೇಗೆ ಮಡಗಿದೆ. ಒಂದರಿ ಕೈ ಕಾಲು ಎಲ್ಲ ಕುಡುಗಿ ಸರಿ ಮಾಡಿದೆ. ಮೈ ಇಡೀ ಬೆಗರಿ ಚೆಂಡಿ ಆಗಿತ್ತು. ಬೆಗರು ಉದ್ದುವೋ ಹೇಳಿರೆ ಹರ್ಕಿನ ತುಂಡುದೆ ಇಲ್ಲೆ. ಎರಡು ನಿಮಿಷ ಸುದಾರುಸೆಂಡು ಕಟ್ಟವ ತಲಗೆ ಜಾರುಸಿದೆ. ನೆಡದೆ, ನಡೆ ಮುಂದೆ ನಡೆಮುಂದೆ ನುಗ್ಗಿ ನಡೆಮುಂದೆ . . . ಇನ್ನು ಎಲ್ಲಿಯೂ ಮಡಗಲಿಲ್ಲೆ. ಯಬ್ಬೋ, ಎಂತಾ ಭಾರ. ಗುಡ್ಡೆ ಇಳುದು, ಮಾಲೆಂಡು ಮನೆಯ ಜಾಲಿಂಗೆ ಎತ್ತಿದೆ. ಅಜ್ಜಿ ಕಟ್ಟವ ತೆಗದು ಜಾಲಿಲ್ಲಿ ಮಡಗಿದವು.

“ಯೋ ಚಿನ್ನು, ನಿನಗೆ ಎಡಿಗಾತೋ ತಪ್ಪಲೆ ಇದರ, ಆ ಕೊರಪ್ಪಾಳಿನ ಹತ್ರೆ ಹೇಳ್ಲೆ ಆವ್ತಿತಿಲ್ಲೆಯೊ ?” ಆನು ಉತ್ತರ ಕೊಡ್ತ ಪರಿಸ್ಥಿತಿಲಿ ಇತ್ತಿದ್ದಿಲ್ಲೆ. ಅಪ್ಪನೂ ಅಮ್ಮನೂ ಕಾದು ಕೂದೊಂಡಿದ್ದಿದ್ದವು ಹೇಳಿ ಕಾಣ್ತು. ಎನ್ನ ಅವತಾರವ ನೋಡಿ ಅವು ನೆಗೆ ಮಾಡ್ಳೆ ಸುರುಮಾಡಿದವು.

ಚೀಲಲ್ಲಿದ್ದ ಮಾವಿನ ಹಣ್ಣುಗೊ ಅಪ್ಪಚ್ಚಿ , ಜ್ಯೂಸು ಆಗಿ ಹರುದು ಎನ್ನ ತಲೆ ಇಡೀ ಚೆಂಡಿ, ಕೆಮಿ ಕರೆಲಿ ಹಣ್ಣಿನ ರಸ ಕೆಳ ಇಳುದು ಅಂಗಿ ಚೆಂಡಿ ಆಗಿ ಚಡ್ಡಿಗುದೆ ಎತ್ತಿದ್ದು. ಎಸರು ಎನ್ನ ಬಾಯಿಗೆ ತಾಗಿದ್ದಿಲ್ಲೆ. ಹಾಂಗಾಗಿ ಎನಗೆ ಗೊಂತಾತಿಲ್ಲೆಯೋ ಹೇಳಿ, ಉಮ್ಮಪ್ಪ. ರಜಾ ಸಾಸಮೆಕಾಳೂ, ತೆಂಗಿನ ಕಾ ಕಡದು ಹಾಕಿದ್ದಿದ್ರೆ ಎನ್ನ ಮೈಯ್ಯೇ ಸಾಸಮೆ ಆವ್ತಿತು ! ಶ್ರವಣ ಬೆಳಗೊಳಲ್ಲಿ ಹನ್ನೆರಡು ವರ್ಷಕ್ಕೊಂದಾರಿ ಗೊಮ್ಮಟಂಗೆ ಗಂಧ, ಅರುಶಿನ, ಸಕ್ಕರೆ, ಜೇನ, ಹೇಳಿ ಮಹಾಮಸ್ತಕಾಭಿಷೇಕ ಮಾಡ್ತವಾಡ. ಇದುದೆ ಹಾಂಗಾತಾನೆ, ಅಬ್ಬೆ ನೆಗೆ ಮಾಡಿತ್ತು. ಇಲ್ಲೆಪ್ಪ. ಇದು ಮಹಾ ಮಸ್ತಕಾಭಿಷೇಕ ಹೇಳ್ಲೆ ಎಡಿಯ, ಏಕೆ ಹೇಳಿರೆ, ಆನು ಅಂಗಿ ಚಡ್ಡಿ ಹಾಕೆಂಡಿದ್ದಿದ್ದೆ !! ಅಂದು ಮಾಂಬಳ ಅಂತೂ ಸೂಪರ್ ಆತು. ಎನ್ನ ಕೊರಳ ಬೇನೆ ಮಾಂತ್ರ ಒಂದು ವಾರ ಸತಾಸಿತ್ತು ! ಅಂದ್ರಾಣ ಮಕ್ಕಳಾಟಿಕೆ ಎಲ್ಲ ಒಂದೊಂದೇ ಗ್ರೇಶಿರೆ ಈಗಳೂ ನೆಗೆ ಬತ್ತು.

2 thoughts on “ಮಸ್ತಕಾಭಿಷೇಕ…!?!

  1. ಮಾಣಿ ಕಂಡ ಹಾಂಗಲ್ಲ;ಗೋಣಿ ಎತ್ತಿಂಡು ಬಂದೇ ಬಿಟ್ಟ! ಶಹಾಬಾಸ್

  2. ಒಪ್ಪ ಶುದ್ಧಿ. ಹಳ್ಳಿಮಕ್ಕಗೇ ಈ ತಾಕತ್ತು ಇಕ್ಕಟ್ಟೆ. ಪೇಟೆಮಕ್ಕ ಜೆಪ್ಪಿ ದೂಡಿರೂ ಹೀಂಗಿರ್ತ ಕೆಲ್ಸ ಬಿಡಿ ಕಾಕೆ ಕಾವ ಕೆಲಸಕ್ಕೂ ಹೆರಡವಪ್ಪ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×