ನಮ್ಮ ಮಾಣಿಗೊಂದು ಕೂಸು ಬೇಕು

April 21, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 40 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ  ಕುಂಞಿಮಾಣಿ ಡಿಗ್ರಿ, ವೇದಪಾಠ ಎಲ್ಲ ಮಾಡ್ಕೊಂಡಿದ್ದ. ಬೆಂಗಳೂರಿಲಿ ಪೌರೋಹಿತ್ಯ ಮಾಡ್ಕೊಂಡಿದ್ದ. ಒಳ್ಳೆ ಸಂಪಾದನೆನೂ ಇದ್ದು. ಆದ್ರೆ ಅವಂಗೆ ಮದ್ವೆ ಅಪ್ಪಲೆ ಕೂಸೇ ಸಿಕ್ಕಿದ್ದಿಲ್ಲೆ.  ಪ್ರಾಯ 35 ದಾಟುತ್ತ ಬಂತು. ಎಂತ ಮಾಡೊದೂಳಿ ತಲೆ ಕೆರಕ್ಕೊಂಡು ಕೆರಕ್ಕೊಂಡು ಸಾಕಾತು. ಎಲ್ಲ ದೇವಸ್ಥಾನಂಗೊಕ್ಕೆ ಹೋಗಿ ತುಲಭಾರ ಎಲ್ಲ ಮಾಡ್ಸಿ ಆತು. ಎಲ್ಲ ಕೂಸುಗಕ್ಕೂ ಐಟಿಲಿ ಕೆಲ್ಸ ಮಾಡೊ ಮಾಣಿನೇ ಆಯೆಕ್ಕು. ಕುಂಞಿಮಾಣಿ ಅವನ ಭಾವನತ್ರ ಇದಕ್ಕೆಂತ ಮಾಡೊದೂಳೀ ಕೇಳಿದ. ನೀನು ಇಂಟರ್‌ನೆಟ್‌ಲಿ ಇಪ್ಪ ವೆವ್‌ಸೈಟಿಲಿ ರಿಜಿಸ್ಟರ್ ಮಾಡ್ಸೂಳಿ ಹೇಳ್ಕೊಟ್ಟ. ಕುಂಞಿಮಾಣಿಗೆ ಅದ್ರ ಪೂರ್ತಿ ವಿವರ ಗೊತ್ತಿಲ್ಲೆ. ಪುಣ್ಯಕ್ಕೆ ಆ ವೈವಾಹಿಕ ಬ್ಯೂರೋ ಟೆಲಿಫೋನಿನ ಮೂಲಕವೂ ಕೆಲ್ಸ ಮಾಡ್ತೂಳಿ ಗೊಂತಾತು. ನಂಬರ್ ಪತ್ತೆ ಹಚ್ಚಿದ. ಮೊಬೈಲ್ ಫೋನಿಗೆ ಇಪ್ಪತೈದು ರೂಪಾಯಿ ಕರೆನ್ಸಿ ಹಾಕಿ ನಂಬರ್ ಒತ್ತಿದ.

“ಹವ್ಯಕ ವೈವಾಹಿಕ ಬ್ಯೂರೋಗೆ ತಮಗೆ ಸ್ವಾಗತ. ಕನ್ನಡ ಭಾಷೆಗೆ ಸಂಖ್ಯೆ ಒಂದನ್ನು ಒತ್ತಿ. For English press 2.”

ಕುಂಞಿಮಾಣಿ ಒಂದು ಒತ್ತಿದ.

“ಕನ್ನಡ ಭಾಷೆಗೆ ಸಂಖ್ಯೆ ಒಂದನ್ನು ಒತ್ತಿ. ಹವ್ಯಕ ಭಾಷೆಗೆ ಸಂಖ್ಯೆ ಎರಡನ್ನು ಒತ್ತಿ.”

ಇದು ಹವ್ಯಕ ಭಾಷೆಲಿಯೂ ಇದ್ದು ಹೇಳಿ ನಮ್ಮ ಮಾಣಿಗೆ ತುಂಬ ಖುಷಿ ಆತು. ಅವ ಎರಡು ನಂಬರ್ ಒತ್ತಿದ.

“ದಕ್ಷಿಣ ಕನ್ನಡ ಹವ್ಯಕ ಭಾಷೆಗೆ ಸಂಖ್ಯೆ ಒಂದರ ಒತ್ತಿ. ಸಾಗರ ಸಿರ್ಸಿ ಹವ್ಯಕ ಭಾಷೆಗೆ ಸಂಖ್ಯೆ ಎರಡು ಒತ್ತಿ. ಗೋಕರ್ಣ ಕುಮಟ ಹವ್ಕಯ ಭಾಷೆಗೆ ಸಂಖ್ಯೆ ಮೂರು ಒತ್ತಿ.”

ಕುಂಞಿಮಾಣಿಗೆ ಇನ್ನೂ ಆಶ್ಚರ್ಯ ಆತು. ಇರ್ಲೀಳಿ ಸಂಖ್ಯೆ ಒಂದು ಒತ್ತಿದ.

“ನಿಂಗೊಗೆ ಕೂಸು ಬೇಕಾದ್ರೆ ಒಂದು ಒತ್ತಿ. ಮಾಣಿ ಬೇಕಾದ್ರೆ ಎರಡು ಒತ್ತಿ.”

ಒಂದು ಒತ್ತಿದ.

“ನಿಂಗೊಗೆ ಇದು ಸುರುವಿನ ಮದುವೆ ಆದ್ರೆ ಒಂದು ಒತ್ತಿ. ಮರುಮದುವೆ ಆದ್ರೆ ಎರಡು ಒತ್ತಿ.”

ಒಂದು ಒತ್ತಿದ.

“ನಿಂಗೊಗೆ ಸುರು ಮದುವೆಪ್ಪ ಕೂಸು ಬೇಕಿದ್ರೆ ಒಂದು ಒತ್ತಿ. ಮರುಮದುವೆ ಅಪ್ಪ ಕೂಸು ಬೇಕಿದ್ರೆ ಎರಡು ಒತ್ತಿ.”

ಒಂದು ಒತ್ತಿದ.

“ನಿಂಗೊಗೆ ಕೆಲಸಲ್ಲಿಪ್ಪ ಕೂಸು ಬೇಕಿದ್ರೆ ಒಂದು ಒತ್ತಿ. ಮನೇಲೆ ಇಪ್ಪ ಕೂಸು ಬೇಕಿದ್ರೆ ಎರಡು ಒತ್ತಿ.”

ಕುಂಞಿಮಾಣಿ ಆಲೋಚನೆ ಮಾಡಿದ. ಮನೇಲೆ ಇಪ್ಪ ಕೂಸಿಂದ ಕೆಲಸಕ್ಕೆ ಹೋಪ ಕೂಸಾದ್ರೆ ಒಳ್ಳೆದೂಳಿ ಆಲೋಚನೆ ಮಾಡಿ ಒಂದು ಒತ್ತಿದ.

“ನಿಂಗೊಗೆ ದಕ್ಷಿಣ ಕನ್ನಡದ ಕೂಸು ಬೇಕಿದ್ರೆ ಒಂದು ಒತ್ತಿ. ಸಾಗರ ಸಿರ್ಸಿ ಕಡೆಯ ಕೂಸು ಬೇಕಿದ್ರೆ ಎರಡು ಒತ್ತಿ. ಗೋಕರ್ಣ ಕುಮಟ ಕಡೆಯ ಕೂಸು ಬೇಕಿದ್ರೆ ಮೂರು ಒತ್ತಿ.”

ಒಂದು ಒತ್ತಿದ.

“ನಿಂಗೋಗೆ ಪ್ರೈವೆಟ್ ಕಂಪೆನಿಲಿ ಕೆಲಸ ಮಾಡುವ ಕೂಸು ಬೇಕಿದ್ರೆ ಒಂದು ಒತ್ತಿ. ಗವರ್ನಮೆಂಟ್ ಕೆಲಸಲ್ಲಿಪ್ಪ ಕೂಸು ಬೇಕಿದ್ರೆ ಎರಡು ಒತ್ತಿ.”

ಪ್ರೈವೇಟ್ ಕಂಪೆನಿಲಿ ಆದ್ರೆ ಸಂಬಳ ಜಾಸ್ತೀಲಿ ಆಲೋಚನೆ ಮಾಡಿದ ಕುಂಞಿಮಾಣಿ ಒಂದು ಒತ್ತಿದ.

“ನಿಂಗೊಗೆ ಫುಲ್‌ಟೈಮ್ ಕೆಲಸ ಮಾಡುವ ಕೂಸು ಬೇಕಿದ್ರೆ ಒಂದು ಒತ್ತಿ. ಪಾರ್ಟ್‌ಟೈಮ್ ಕೆಲಸ ಮಾಡುವ ಕೂಸು ಬೇಕಿದ್ರೆ ಎರಡು ಒತ್ತಿ.”

ಮಾಣಿ ಆಲೋಚನೆ ಮಾಡಿದ. ಫುಲ್‌ಟೈಮ್ ಆದ್ರೆ ಒಳ್ಳೆದೂಳಿ ಒಂದು ಒತ್ತಿದ.

“ನಿಂಗೊಗೆ ಐಟಿಲಿ ಕೆಲಸ ಮಾಡುವ ಕೂಸು ಬೇಕಿದ್ರೆ ಒಂದು ಒತ್ತಿ. ಬೇರೆ ಪ್ರೈವೇಟ್ ಕಂಪೆನಿಲಿ ಕೆಲಸ ಮಾಡುವ ಕೂಸು ಬೇಕಿದ್ರೆ ಎರಡು ಒತ್ತಿ.”

ಈಗ ಐಟಿ ಕೂಸುಗೊಕ್ಕೆ ಡಿಮ್ಯಾಂಡ್ ಜಾಸ್ತಿ. ಅಷ್ಟೇ ಅಲ್ಲ. ನಮ್ಮೂರಿನ ಕೂಸುಗೊ ಎಲ್ಲ ಬೆಂಗಳೂರಿಲಿ ಐಟಿಲಿಯೇ ಇಪ್ಪೊದು. ಹಾಂಗಾಗಿ ಐಟಿ ಹೇಳಿದ್ರೆ ಕೂಸು ಸಿಕ್ಕುವ ಚಾನ್ಸ್ ಜಾಸ್ತೀಳಿ ಆಲೋಚನೆ ಮಾಡಿದ ನಮ್ಮ ಮಾಣಿ ಒಂದು ಒತ್ತಿದ.

“ನಿಂಗೊಗೆ ಬೆಂಗಳೂರಿಲಿ ಕೆಲಸಲ್ಲಿಪ್ಪ ಕೂಸು ಬೇಕಿದ್ರೆ ಒಂದು ಒತ್ತಿ. ಬೇರೆ ಕಡೆ ಇಪ್ಪ ಕೂಸು ಬೇಕಿದ್ರೆ ಎರಡು ಒತ್ತಿ.”

ಒಂದು ಒತ್ತಿದ.

“ನಿಂಗೊಗೆ ಸಾಫ್ಟ್‌ವೇರ್‌ಲಿ ಇಪ್ಪ ಕೂಸು ಬೇಕಿದ್ರೆ ಒಂದು ಒತ್ತಿ. ಹಾರ್ಡ್‌ವೇರಿಲಿ ಇಪ್ಪ ಕೂಸು ಬೇಕಿದ್ರೆ ಎರಡು ಒತ್ತಿ. ಕಾಲ್‌ಸೆಂಟರಿಲಿ ಇಪ್ಪ ಕೂಸು ಬೇಕಿದ್ರೆ ಮೂರು ಒತ್ತಿ.”

ಈಗ ನಮ್ಮ ಮಾಣಿಗೆ ನಿಜಕ್ಕೂ ಮಂಡೆ ಬಿಸಿ ಆತು. ಇದೆಂತದಪ್ಪಾಳಿ. ಪುಣ್ಯಕ್ಕೆ ಅವನ ಹತ್ರ ಅವನ ಭಾವ ಅವ ಐಟಿಲಿಯೇ ಇಪ್ಪವ ಕೂತಿತ್ತಿದ್ದ. ಅವ ಹೇಳಿದ “ಬೆಂಗಳೂರಿಲಿ ಸಾಫ್ಟ್‌ವೇರಿಲಿಯೇ ಜಾಸ್ತಿ ಜನ ಇಪ್ಪೊದು”. ನಮ್ಮ ಮಾಣಿ ಒಂದು ಒತ್ತಿದ.

“ನಿಂಗೊಗೆ ಎಲೆಕ್ಟ್ರಾನಿಕ್ ಸಿಟಿಲಿ ಕೆಲಸಲ್ಲಿಪ್ಪ ಕೂಸು ಬೇಕಿದ್ರೆ ಒಂದು ಒತ್ತಿ. ವೈಟ್‌ಫೀಲ್ಡ್ ಐಟಿ ಪಾರ್ಕಿಲಿ ಕೆಲಸಲ್ಲಿಪ್ಪ ಕೂಸು ಬೇಕಿದ್ರೆ ಎರಡು ಒತ್ತಿ. ಗ್ಲೋಬಲ್ ವಿಲೇಜಿಲಿ ಕೆಲಸಲ್ಲಿಪ್ಪ ಕೂಸು ಬೇಕಿದ್ರೆ ಮೂರು ಒತ್ತಿ.”

ಮಾಣಿಗೆ ಇಷ್ಟೊತ್ತಿಗೆ ಸಾಕಾಗಿತ್ತು. ಸುಮ್ನೆ ಒಂದು ಒತ್ತಿದ.

“ನಿಂಗೊಗೆ ಪ್ರೋಗ್ರಾಮ್ಮರ್ ಕೂಸು ಬೇಕಿದ್ರೆ ಒಂದು ಒತ್ತಿ. ಟೆಸ್ಟಿಂಗಿಲಿ ಇಪ್ಪ ಕೂಸು ಬೇಕಿದ್ರೆ ಎರಡು ಒತ್ತಿ. ಡಾಟಾಬೇಸಿಲಿ ಇಪ್ಪ ಕೂಸು ಬೇಕಿದ್ರೆ ಮೂರು ಒತ್ತಿ. ಸಿಸ್ಟಮ್ ಸಪೋರ್ಟಿಲಿ ಇಪ್ಪ ಕೂಸು ಬೇಕಿದ್ರೆ ನಾಲ್ಕು ಒತ್ತಿ. ಗ್ರಾಫಿಕ್ ಡಿಸೈನಿಲಿ ಇಪ್ಪ ಕೂಸು ಬೇಕಿದ್ರೆ ಐದು ಒತ್ತಿ.”

ಮಾಣಿಗೆ ಈಗ ನಿಜಕ್ಕೂ ಸಾಕಾಗಿತ್ತು. ಸುಮ್ನೆ ಒಂದು ಒತ್ತಿದ.

ಅಷ್ಟೊತ್ತಿಗೆ ಮೊಬೈಲ್ ಕಂಪೆನಿಂದ ಎಡೇಲಿ ಸ್ವರ ಕೇಳಿ ಬಂತು – “ನಿಮ್ಮ ಕರೆನ್ಸಿ ಮುಗಿಯಿತು. ಪುನ ಕರೆನ್ಸಿ ಲೋಡ್ ಮಾಡಿ ಮತ್ತೆ ಕರೆ ಮಾಡಿ.”

ನಮ್ಮ ಮಾಣಿಗೊಂದು ಕೂಸು ಬೇಕು, 4.1 out of 10 based on 9 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 40 ಒಪ್ಪಂಗೊ

 1. ಸುಭಗ
  ಸುಭಗ

  ಪವನಜಣ್ಣ, ಸೊಗಸಾಗಿ ಬಯಿಂದು ಶುದ್ದಿ.

  ಸದ್ಯ, ಮಾಣಿ ಇಪ್ಪತ್ತೈದೇ ರುಪಾಯಿ ಕರೆನ್ಸಿ ಹಾಕಿ ಅಷ್ಟೇ ಕಳಕ್ಕೊಂಡ. ನೂರೊ ಇನ್ನೂರೊ ಹಾಕಿದ್ದರೆ ಅಷ್ಟೂ ಮುಗಿವನ್ನಾರ ಒತ್ತುವ option ಇರ್ತಿತ್ತೋ ಏನೋ!

  ನಿಂಗಳ ಶುದ್ದಿ ಓದಿಯಪ್ಪಗ ನೆಂಪಾತು.. “ಮೊದಲನೇ ಮದುವೆ ಆಕಾಂಕ್ಷಿಗಳು ಒಂದು ಒತ್ತಿ; ಎರಡನೇ ಮದುವೆ ಆಕಾಂಕ್ಷಿಗಳು ಮೊದಲನೇ ಹೆಂಡತಿಯ ಕೊರಳು ಒತ್ತಿ..!” ಈ ಅಮೋಘ ಉಚಿತ ಸಲಹೆ ಎನಗೆ ಹೇಳಿದ್ದು ಆರಪ್ಪಾ- ತೆಕ್ಕುಂಜ ಕುಮಾರಣ್ಣನೋ ಚೆನ್ನೈ ಭಾವನೋ- ಆರೂಳಿ ಸರೀ ನೆಂಪು ಬತ್ತಿಲ್ಲೆ. 😉

  [Reply]

  ಪವನಜಮಾವ

  ಪವನಜಮಾವ Reply:

  “ಮೊದಲನೇ ಮದುವೆ ಆಕಾಂಕ್ಷಿಗಳು ಒಂದು ಒತ್ತಿ; ಎರಡನೇ ಮದುವೆ ಆಕಾಂಕ್ಷಿಗಳು ಮೊದಲನೇ ಹೆಂಡತಿಯ ಕೊರಳು ಒತ್ತಿ..!” – ಹ್ಹಾ ಹ್ಹಾ. ಲಾಯಕ್ಕಿದ್ದು.
  ಆದ್ರೆ ಇತ್ತೀಚೆಗೆ ನಮ್ಮ ಜಾತಿಲೇ ಅದರ ಉಲ್ಟ ಆಯಿದು :(

  [Reply]

  VN:F [1.9.22_1171]
  Rating: +1 (from 1 vote)
  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಛೆ ಛೆ ಚೆನ್ನೈ ಭಾವ ಆಗಿರ. ಹೀಂಗಿಪ್ಪ ಐಡಿಯಾ ಎಲ್ಲಾ ಅವಂಗೆ ಆರಡಿಯಾ. ನಿಂಗಳ ಓಟ್ಟಿನ್ಗೇ ಇಪ್ಪ ಆರೋ ನಿಂಗಳ ಕೆಣಿಚ್ಚಿಸಿ ಹಾಕಲೆ…?! ಶ್ರೀಶಣ್ಣನೋ, ಪೊಸವಣಿಕೆ ಚುಬ್ಬಣ್ಣನೋ ಅಲ್ಲಾ ಅದ್ವೈತಕೀಟ … ನೆಂಪು ಮಾಡಿ.

  [Reply]

  ಅದ್ವೈತ ಕೀಟ

  ಅದ್ವೈತ ಕೀಟ Reply:

  ಆನುವೇ ಹೇಳಿದ್ದೋದು….. ನೆಂಪಾವ್ತಾ ಇಲ್ಲೆ…. ಮಾಡ್ತರೆ ಮಾಡಿ. ಆದರೆ ಎಂಗಳ ಮರೆಯೆಡಿ…. :-)

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಪವನಜಣ್ಣ,
  ಚೆನ್ನೆಮಣೆಯ ಬೀಳದ್ದಜ್ಜಿ ಆಟದ ಹಾ೦ಗಾತು,ಈ ವಧು ಅನ್ವೇಷಣೆ.ಗ೦ಭೀರ ಸಮಸ್ಯೆಯ ಹಾಸ್ಯರೂಪಲ್ಲಿ ನಿರೂಪಿಸಿದ ರೀತಿ ತು೦ಬಾ ಲಾಯ್ಕಾಯಿದು.
  ಒ೦ದು ವೇಳೆ ಕುಂಞಿಮಾಣಿ, ಮನೆಲಿಪ್ಪ ಕೂಸು ಅಕ್ಕು ಹೇಳಿ ಎರಡು ಒತ್ತಿದ್ದರೆ ‘ಸದ್ಯಕ್ಕೆ ಈ ನಮುನೆಲಿ ಆರೂ ಇಲ್ಲೆ,ಕರೆ ನೀಡಿದ್ದಕ್ಕೆ ಧನ್ಯವಾದ’ ಹೇಳಿ ಮುಕ್ತಾಯ ಆವುತ್ತಿತ್ತೋ ಏನೋ ..

  [Reply]

  VA:F [1.9.22_1171]
  Rating: +1 (from 1 vote)
 3. ಪವನಜಮಾವ

  ಈ ಲೇಖನಕ್ಕೆ ಇದುವರೆಗೆ ಒಂದೇ ಒಂದು ಕೂಸು ಕಮೆಂಟ್ ಹಾಕಿದ್ದಿಲ್ಲೆ. ಎಂತಕೆ?

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ Reply:

  ಬಚಾವಾದೆ ಮಾರಯ ನೀನು..ಅಲ್ಲದ್ದರೆ ನೀನು ” ಪುಲ್ಲಿಂಗ – ಸ್ತ್ರೀಲಿಂಗ” ವ ಬರದ ಹಾಂಗೆ ಇನ್ನೊದು ಲೇಖನ ಬರೆಯಕ್ಕಾಗಿ ಬತ್ತಿತ್ತು. ಹ್ಹೆ…ಹ್ಹೆ…ಹ್ಹೆ..!

  [Reply]

  VN:F [1.9.22_1171]
  Rating: 0 (from 0 votes)
 4. ಚೆನ್ನಬೆಟ್ಟಣ್ಣ

  ಲೇಖನ ಭಾರೀ ಲಾಯ್ಕ ಆಯ್ದು. ಓದುವಾಗ ನೆಗೆ ಬಂದರೂ ಮನಸ್ಸಿಲಿ ಬೇಜಾರಾತು.
  ಪವನಜಮಾವ ಆ ಫೋನ್ ನಂಬರ್ ಯಾವದು ಹೇಳಿ ಹೇಳಿದ್ದೆ ಇಲ್ಲೇ, ಕೊಟ್ರೆ ಆರಿಂಗಾರು ಉಪಯೋಗ ಆಕ್ಕೋ ಎಂತದೋ.
  ಇದರ ಟೋಲ್ ಫ್ರೀ ಮಾಡ್ಲೆ ಎಡಿಯದ ?

  [Reply]

  ಪವನಜಮಾವ

  ಪವನಜಮಾವ Reply:

  ಎನಿಗೆ ಗೊತ್ತಿದ್ದ ಹಾಂಗೆ ಟೋಲ್ ಫ್ರೀ ನಂಬರುಗೊ ಮೊಬೈಲಿಲಿ ಕೆಲಸ ಮಾಡ್ತಿಲ್ಲೆ

  [Reply]

  VN:F [1.9.22_1171]
  Rating: 0 (from 0 votes)
 5. rhalemane

  ಸೋತವನ ಮತ್ತೂ ಮತ್ತೂ ಹಿಂಡುವದು ಇಂತಹವು. ವಾಸ್ತವತೆ ಬಗ್ಗೆ ಬೆಳಕು ಚೆಲ್ಲಿದ್ದೀರಿ. ಅಭಿನಂದನೆಗಳು.

  [Reply]

  VN:F [1.9.22_1171]
  Rating: 0 (from 0 votes)
 6. ಪೆರ್ಮುಖ ಈಶ್ವರ ಭಟ್ಟ

  ಸಮಾಜದ ಕಠೋರ ಸತ್ಯದ ಪ್ರತಿಬಿಂಬ…

  [Reply]

  VA:F [1.9.22_1171]
  Rating: 0 (from 0 votes)
 7. ಜಯಶ್ರೀ ನೀರಮೂಲೆ
  jayashree.neeramoole

  ಹಾಸ್ಯದ ಮೂಲಕ ವಾಸ್ತವಿಕತೆಯ ಮೇಲೆ ಬೆಳಕು ಚೆಲ್ಲಿದ ಲೇಖನ ಲಾಯಕ ಆಯಿದು…

  ಕಾಲಾಯ ತಸ್ಮೈ ನಮ: ನಿರಂತರವಾಗಿ ಒಂದಲ್ಲ ಒಂದು ಸಮಸ್ಯೆ… ಸ್ತ್ರೀ ಶೋಷಣೆ, ಮೇಲ್ವರ್ಗದವರಿಂದ ಕೆಳವರ್ಗದವರ ಶೋಷಣೆ, ಅತ್ತೆ ಸೊಸೆ ಜಗಳ… ಎಲ್ಲ ಕಳುದು ಈಗ ಪುರುಷರ ಶೋಷಣೆಯ ಕಾಲಕ್ಕೆತ್ತಿತ್ತೋ…

  ದೇವರೇ ಎಲ್ಲ ಕಡೆ ಪ್ರೀತಿ,ಸಮಾನತೆ,ಆನಂದಗಳಿಂದ ತುಂಬಿ ತುಳುಕುವ ರಾಮ ರಾಜ್ಯವ ನೋಡುವ ಸೌಭಾಗ್ಯ ಈ ದೇಹಕ್ಕೆ ಸಿಕ್ಕಲಿ… ಎಲ್ಲರ ಮೇಲೆ ಕೃಪೆ ತೋರು ರಾಮ… ಹೊಸ ಯುಗ ಪ್ರಾರಂಭವಾಗಲಿ… ಆರಂಭ ನಮ್ಮಿಂದಲೇ…

  [Reply]

  VA:F [1.9.22_1171]
  Rating: +1 (from 1 vote)
 8. ಸುಭಾಷಿಣಿ ಹಿರಣ್ಯ

  ಬರದ್ದು ಲಾಯಿಕಾಯಿದು, ಬೇಜಾರುದೇ ಆತು.  ಎಂಗಳ ಬಾಯಾರು ಹೊಡೆಲಿ ಹೀಂಗೆ ಬಾಕಿ ಆದ ಮಾಣಿಗೊ 50ರಂದ ಮೇಲೆ ಇದ್ದವಡ, ಇನ್ನು ಅಪ್ಪಲೂ ಇಲ್ಲೆ .

  [Reply]

  VA:F [1.9.22_1171]
  Rating: 0 (from 0 votes)
 9. ಪವನಜಮಾವ

  ಹಳತ್ತಿಗೆ ಮಡಗಿದ್ದರ ತೆಗೆದು ಓದಿ ಕಮೆಂಟಿಸಿದ ಎಲ್ಲವಕ್ಕು ಧನ್ಯವಾದಂಗೊ

  [Reply]

  ಪೆಂಗಣ್ಣ° Reply:

  ಮಾವಾ ಈಗ ಹಳತ್ತಿಂಗೆ ಒಳ್ಳೆ ರೇಟಿದ್ದಡ

  [Reply]

  M. Ganapathi.Kanugodu. Reply:

  ಬಹಳ ಚೆನ್ನಾಗಿ ಸಂಭಾಷಣೆ ಬಂದಿದೆ. ಕುಂಗ್ ಮಾಣಿ ಕತೆ ಒಟ್ಟು ” ನರಿಯು [ಕಾಡಿನಲ್ಲಿ] ಹೋತನ ಕಾಲುಗಳ ಸಂಧಿಯ ಮಾಂಸಕ್ಕಾಗಿ — ಈಗ ಬೀಳುತ್ತದೆ ….. ಇದೀಗ ಬೀಳುತ್ತದೆ…….. ಈಗ ಬಿದ್ದೇಹೋಯಿತು……… — ಸಂಜೆಯವರೆಗೂ ಹೋತನ ಹಿಂದೆಯೇ ವ್ಯರ್ಥ ತಿರುಗಿ —– ಹೋತ ತನ್ನ ಗೂಡು ಸೇರಿತು, ನರಿ ಹ್ಯಾಪು ಮೋರೆಯಿಂದ ತನ್ನ ಗೂಡನ್ನು ಸೇರಲೇಬೇಕಲ್ಲ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪ್ರಕಾಶಪ್ಪಚ್ಚಿಜಯಶ್ರೀ ನೀರಮೂಲೆದೊಡ್ಡಮಾವ°ಸುವರ್ಣಿನೀ ಕೊಣಲೆವಿದ್ವಾನಣ್ಣಗೋಪಾಲಣ್ಣವಸಂತರಾಜ್ ಹಳೆಮನೆಶ್ಯಾಮಣ್ಣಶಾಂತತ್ತೆಬಂಡಾಡಿ ಅಜ್ಜಿಶಾ...ರೀಪೆರ್ಲದಣ್ಣಹಳೆಮನೆ ಅಣ್ಣಅಡ್ಕತ್ತಿಮಾರುಮಾವ°ಸುಭಗನೆಗೆಗಾರ°ಸಂಪಾದಕ°ಕಳಾಯಿ ಗೀತತ್ತೆಒಪ್ಪಕ್ಕಪವನಜಮಾವಶ್ರೀಅಕ್ಕ°ಚುಬ್ಬಣ್ಣಕಾವಿನಮೂಲೆ ಮಾಣಿಕಜೆವಸಂತ°ಚೆನ್ನೈ ಬಾವ°vreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ