Oppanna.com

ನೀರುಳ್ಳಿ ಕ್ರಯ ಏರಿದ್ಸಕ್ಕೆ ಬೈಲಿನೋರ ಪ್ರತಿಕ್ರೊಯೆಗೊ:

ಬರದೋರು :   ನೆಗೆಗಾರ°    on   25/08/2015    13 ಒಪ್ಪಂಗೊ

ನೆಗೆಗಾರ°

ಬೊಂಡಕ್ಕೆ ಹದಿನೈದು ಇಪ್ಪತ್ತು ರುಪಾಯಿ ಇಪ್ಪಗ ದಿನಾ ಒಂದು ಬೊಂಡ ತರುಸಿ ಕುಡ್ಕೊಂಡಿತ್ತಿದ್ದ ಚೆನ್ನೈಬಾವ ಬೊಂಡಕ್ಕೆ ನಲ್ವತ್ತು ರುಪಾಯಿ ಆದಮತ್ತೆ ಒಂದೇ ಬೊಂಡ ತಂದು ಅದರ ನಾಕು ದಿನಲ್ಲಿ ಕುಡುದು ಮುಗುಶುದು; ಅಲ್ಲದ್ದರೆ ಇಂದು ಕುಡುದ ಬೊಂಡಕೆ ಮತ್ತೆ ನಾಕು ದಿನ ನೀರಾಕಿ ಅಳಂಚಿಸಿ ಕುಡಿವದು – ಹೀಂಗೆಲ್ಲ ಮಾಡ್ಯೊಂಡಿದ್ದವು ಹೇದು ಬೈಲಿಲಿ ಶುದ್ದಿ.

ಬೊಂಡದ ಕ್ರಯ ಏರಿದ ಸಂಗತಿ ಕರೆಂಗೆ ಇರಳಿ, ಈಗ  ನೀರುಳ್ಳಿ ಕ್ರಯ ಏರಿದ್ಸಕ್ಕೆ ಬೈಲಿನೋರ ಪ್ರತಿಕ್ರೊಯೆಗೊ ಹೇಂಗಿಕ್ಕು?:

  • ಮಗುಮಾವ:
    “ಇದು ಸಸ್ಯಾಹಾರದ ಪಟ್ಟಿಗೆ ಸೇರ್ತಿಲ್ಲೆ, ಹಾಂಗಾಗಿ ಇದರ ತತ್ತಿಲ್ಲೆ!” 🙁
  • ದೊಡ್ಡಕ್ಕ:
    ನೀರುಳ್ಳಿ ಹೆಸರು ಕೇಳಿರೇ ಬಾಯಿಲಿ ಅಲ್ಲ ಕಣ್ಣಿಲ್ಲಿ ನೀರು ಬತ್ತು! 🙁
  • ಹೋಟ್ಳಜ್ಜ° :
    ಅದು ಆತೇ ಇಲ್ಲೆ ನವಗೆ. ನವಗದರ ತಂದು ಏಪಾರ ದಕ್ಕುಸಿಗೊಂಬಲೆಡಿಯ! 🙁
  • ಪೋಡಿ ತ್ಯಾಂಪಣ್ಣ :
    ನಾಣ ದಿನಾ ಬರ್ಪುಣಾಕ್ಳೆಗ್ ಯಾನ್ ದಾಯ್ತ ಸಯ್ಪುಣ! 🙁
  • ಹರಿಪ್ರಸಾದ ಹೊಳ್ಳಣ್ಣ :
    ನೀರುಳ್ಳಿ ಬಿಡಿ , ನೀರುಳ್ಳಿ ಚೋಲಿ ಸಾನ ಹಾಕುವಾಂಗಿಲ್ಲೆ ಇನ್ನು ! 🙁
  • ಗಣೇಶಪ್ರಸಾದ ಮಯ್ಯಣ್ಣ° :
    ಒಂದು ನೀರುಳ್ಳಿ ಬಳ್ಳಿಲಿ ಕಟ್ಟಿ ನೆಡೂಕೆ ನೇಲ್ಸಿ ಬಿಟ್ರಾತು ಇನ್ನು. ಕೂದೊಂಡು ಅದರ ನೋಡ್ಯೊಂಡು ತಿಂದರಾತು ಇನ್ನು! 🙁
  • ಸೋಜಿ ಗಂಗಣ್ಣ :
    ಪೋಲಿಸರಿಗೆ ನಿತ್ಯದ ಮಾಮೂಲಿ ಕೊಟ್ಟೇ ಪೂರೈಸುದಿಲ್ಲ. ಇನ್ನೀ ನೀರುಳ್ಳಿ ಇಟ್ರೆ ದಿವಸಕ್ಕೆರಡು ಸಲ ಬಂದಾರು ಇವ್ರು! 🙁
  • ಪಾನಿಪೂರಿ ಪಾಪಣ್ಣ :
    ಎಂಚಿನ ಮರ್ಳ್ ಇಂದು ಯಾ. ನೀರುಳ್ಳಿ ಅಂಗುಡಿಗ್ ಪೋನಾಗ ಪ್ಯಾನ್ ಕಾರ್ಡ್ ತೋಜಾಲ ಪಣ್ಪೇರ್ . ಎವ್ವು ಎನ್ನಟ ಓಳುಂಡು! 🙁
  • ರಿಕ್ಷಾ ಬಾಬು :
    ಎನ್ನ ರಿಕ್ಷಟು ನೀರುಳ್ಳಿ ಪಾಡ್ಯರ ಇದ್ದಿ ಇತ್ತೆ. ಸಾದಿಟ್ ಏರಾಂಟ ಅಡ್ಡಗಟ್ಟುಂಡ ! 🙁

ಆದರೆ,

ಅಡಿಗೆ ಸತ್ಯಣ್ಣ° : ಸದ್ಯ ಎನಗೆ ಅದು ತಲೆಬೆಶಿ ಇಲ್ಲೆ. ಮನೆಲಿ ಬೇಕಾವುತ್ತಿಲ್ಲೆ, ಹೋದಲ್ಲಿ ಉಪಯೋಗುಸುತ್ತವಿಲ್ಲೆ.. 😀

ನಿಂಗಳ ಹೊಡೆಲಿ ಹೇಂಗಿದ್ದು ಒಯಿವಾಟು?

ಹೊಸ ಮದಿಮ್ಮಾಯಂಗೆ ಆಟಿಲಿ ಕೊಟ್ಟ ಉಂಗಿಲು!

13 thoughts on “ನೀರುಳ್ಳಿ ಕ್ರಯ ಏರಿದ್ಸಕ್ಕೆ ಬೈಲಿನೋರ ಪ್ರತಿಕ್ರೊಯೆಗೊ:

  1. ನೆಗೆಮಾಣಿ ಬಂದು ಬೈಲಿಲಿ ಹಲ್ಲು ಬಿಟ್ಟಪ್ಪಗ ಬೈಲಿಲ್ಲಿ ಒಂದು ಪ್ರಜ್ವಲ ಬೆಳಕು ಬಂದ ಹಾಂಗಾತದ. ಬೈಲಿನವೆಲ್ಲ ಮೈ ಕೊಡವಿ ಎದ್ದು ಕೂದ ಹಾಂಗಾತು. ಎಲ್ಲೋರಿಂಗು ಒರಕ್ಕು ಬಿಟ್ಟತ್ತೋ ಹೇಳಿ. ಹಾಸ್ಯಕ್ಕೆ ಅಷ್ಟು ಬೆಲೆ ಇದ್ದು. ಹಾಸ್ಯವ, ಜೆನಂಗೊ ಜಾಸ್ತಿ ಡಿಮಾಂಡ್ ಮಾಡ್ತವು. ಹಾಸ್ಯ ಇದ್ದಲ್ಲಿ ಜೆನ ಇದ್ದು.

  2. ಈ ತಿಂಗಳಿಂಗೆ ತಕ್ಕ ಉಗ್ರಾಣಲ್ಲಿ ನೇಲುಸಿಗೊ೦ಡು ಇಪ್ಪ ಗೊಂಚಲಿಲಿ ಇದ್ದು ಭಾವ .. ಬಪ್ಪ ತಿಂಗಳಿಲಿ ನೋಡಿಗೊಂಬ.. ಹೀಂಗೇ ಮುಂದುವರುದರೆ “ಶುದ್ಧ” ಸಸ್ಯಾಹಾರಿಗೊಕ್ಕೆ ನೀರುಳ್ಳಿ ವರ್ಜ್ಯ ಹೇಳಿ ಬಿಟ್ಟತ್ತಯ್ಯ..
    ವಿಷಯ ಗೊಂತಿದ್ದೋ ?! ಟೀಕೆ ಮಾವ೦ಗೆ ಬೆಳ್ಳುಳ್ಳಿ ಕಂಡರಾಗ .. ಅಂದೇ ಬಿಟ್ಟಿದವು..

    1. ನೀರುಳ್ಳಿ ತಿಂಬದು ಬೇಡ ಹೇದು ಫೋರ್ಟಿಸಿನವು ಹೇಳಿದ್ದವು.

  3. ನೆಗೆಮಾಣಿ ಬೈಲಿಲಿ ಬಂದದು ಕೊಶೀ ಆತು ಆತೋ. 🙂
    ಅಪ್ಪು ಮಾಣಿ, ಈಗ ನೀರುಳ್ಳಿ ನೋಡಿದರೆ ಎಲ್ಲೋರಿಂಗೂ ಬೆಗರು ಬಿಚ್ಚುತ್ತಡ್ಡ! 🙁
    ಮನ್ನೆ ಗ.ಪ್ರ. ಗೋಪಣ್ಣನ ಹತ್ತರೆ ಈವತ್ತಿನ ಸ್ಪೆಷಲ್ಲು ಏನು ಕೇಳಿದ್ದಕ್ಕೆ, ನಮ್ಮಲ್ಲಿ ಈಗ ಎಲ್ಲವೂ ಸ್ಪೆಷಲ್ಲೇ ಆಗಿದೆ!! ನೀರುಳ್ಳಿ ಹಾಕಿದ್ದು ಸಾದಾ ಲೆಕ್ಕಕ್ಕೆ ಬರೂದಿಲ್ಲ. ನೀರುಳ್ಳಿ ಬಜೆ ಯಾರಾದ್ರು ಕೇಳಿದ್ರೆ ಅವರನ್ನು ಒಳಗಿನ ಏಸೀ ಕೋಣೆಯಲ್ಲಿ ಕೂತುಕೊಳ್ಳಿಸಿ, ಸ್ಪೆಷಲ್ಲು ಮಾಡಿ ಕೊಡುವುದು!! ಹೇದವು.

  4. ಮದ್ದು ….ತೆಕ್ಕೊಳ್ಳದ್ದೇ ಇಪ್ಪವು ಕಮ್ಮಿ ಅದಾ …. ಎಂತಾರೂ ಒಂದು ಮದ್ದು ತೆಕ್ಕೊಳ್ಳದ್ದರೆ …ಕಳಿಯ ….. ಈ ವರ್ಶ ಎಲ್ಲವೂ ಹೋಮಿಯೋಪತಿ ಮದ್ದು ಮಾಡುದು ಒಳ್ಳೆದು …. ಆ ಮದ್ದು ತೆಕ್ಕೊಂಬಾಗ ….ನೀರುಳ್ಳಿ ತಿನ್ನದ್ದರೆ ಒಳ್ಳೆದಡ್ಡ …… ” ಆಚಾರೋಂಕ್ಲಾ ಆನ್ ….. ಸುಕೊಂಕ್ಲಾ ಆನ್ ….” ಎಂಥಾ ….??

  5. ಇಲ್ಯಾಣ ಮಾಪಣ್ಣನ ಹೋಟೇಲಿಲಿ ಇಷ್ಟರವರೆಗೆ ನೀರುಳ್ಳಿಬಜೆ ಹೇಳುದಕ್ಕೆ ಕ್ಯಾಬೇಜಿನೊಟ್ಟಿಂಗೆ ಪರಿಮ್ಮಳಕ್ಕೆ ತಕ್ಕ ಎರಡಾದರೂ ನೀರುಳ್ಳಿ ಹಾಕಿಯೊಂಡು ಇತ್ತಿದ್ದವಡ್ಡ. ಈಗ ನೋಡಿರೆ ಲಾಡು ಕಟ್ಟುವಾಗ ಕಾಂಬಲೆ ಹೇಳಿ ಒಂದು ತುಂಡು ಬೀಜಬೊಂಡು ಸಿಕ್ಕಿಸುತ್ತ ಹಾಂಗೆ ಒಂದು ತುಂಡು ನೀರುಳ್ಳಿಯೋ… ಅದರ ಚೋಲಿಯೋ ಎಂತದೋ ಕಂಡಾಂಗೆ ಆವ್ತಡ….

  6. ದಿನಾಗಿಳೂ ನಾಕು ಘಂಟೆಗೆ ದೇವಿಪ್ರಸಾದಲ್ಲಿ ಕೂದು ನೀರುಳ್ಳಿ ಬಜೆ ತಿಂದ ಮತ್ತೆಯೇ ಎಲೆಯಡಕ್ಕೆ ತಿಂದೊಂಡಿತ್ತಿದ್ದ ಆಡಿಟರು ಭಟ್ರಿಂಗೆ ತಲೆಬೇಶಿ ಶುರುವಾಯಿದಡ. ದೇವಿಪ್ರಸಾದಲ್ಲಿ “ನೀರುಳ್ಳಿ ಬಜೆ ಇಲ್ಲ” ಹೇದು ಬೋರ್ಡು ಹಾಕಿದ್ದವಾಡ, ಅಪ್ಪೋ ಸುಭಾವ..?

    1. ಟೀಕೆಮಾವ° ಹೇಳಿದ್ದು ಆಡಿಟ್ರು ಕೇಯೆಸ್ಸು ಭಟ್ರ ಶುದ್ದಿಯೋ??
      ನೀರುಳ್ಳಿ ಬಜೆ ತಿನ್ನದ್ರೆ ಛಾಯ ಕುಡಿವಲೆ ಇಲ್ಲೆ-
      ಛಾಯ ಕುಡಿಯದ್ರೆ ಎಲೆತಿಂಬಲೂ ಇಲ್ಲೆ – ಹೇಳ್ತದು ಆಡಿಟ್ರ ನೇಮ.
      ಹಾಂಗಾಗಿ ಹದ್ನೈದಿನ ಲಾಗಾಯ್ತು ಆಡಿಟ್ರು ಚಮಕ್ಕುದು ರಜ ಕಮ್ಮಿ ಮಾಡಿದ್ದವು ಹೇದು ಆ ಊರಿನವು ಆರೋ ಹೇದ ವರ್ತಮಾನ!

  7. ಮಧು ಭಾವಯ್ಯ “ಬಿರಿಂಡ ಎಸೆನ್ಸು, ಕೇಶ್ಯೂ ಏಪುಲು ಎಸೆನ್ಸು ತೆಗದು ಕುಪ್ಪಿಲಿ ತುಂಬುಸಿ ಮಡುಗಿದಾಂಗೆ ನೀರುಳ್ಳಿ ಎಸೆನ್ಸು ತೆಗದುಮಡುಗದ್ದೆ ಸೋತತ್ತನ್ನೇ ಅಯ್ಯನ ಮಂಡೆ..!” ಹೇದು ಪಶ್ಚಾತ್ತಾಪಪಡ್ತಾ ಇದ್ದವಡ ಅಪ್ಪೋ ಚೆನ್ನೈಭಾವಾ..?

  8. ಹ್ಹ ಹ್ಹ …. ಹಸಿಮದಿಮ್ಮಾಯಂಗೆ ಆಟಿ ಸಮ್ಮಾನ ವಿಶೇಷ ಉಡುಗೊರೆ ಆತು.

    ಆನುದೆ ಜಾಲಕರೆ ಬಾವಂದೆ ನೀರುಳ್ಳಿ ಪರಿಮ್ಮಳ ಬತ್ತ ಮನಗೊಕ್ಕೆ ಪಟ್ಟಾಂಗಕ್ಕೆ ಹೋವ್ಸು ಹೇದು ನಿಘಂಟು ಮಾಡಿದ್ದೆಯೋ° 😛

    ನೆಗೆಗಾರಂಗೆ ಇಂಗ್ಲೀಶು ಕಲಿವಲೆ ಹೋದಲ್ಲಿ ನೀರುಳ್ಳಿ ಕಾಸಿ ಸಿಕ್ಕುಗೋ ಏನೋ 😛

    1. ಅಪ್ಪೂ … ಎಲ್ಲರೂ ನಿಂಗಳ ಕೆಣಿಯೇ ಮಾಡಿರೋಂ ….!!!

      1. ಮೊದಲು ಗೋಶ್ಟಿ ಆಯಿದಿಲ್ಲೆ …. ಚೆನ್ನೈ ಭಾವ ಬೊಂಡ ಕುಡುದ ಶುದ್ದಿ …… ಬೊಂಡ ಕ್ಕೆ ನೀರಾಕಿ …ಅಳಂಚ್ಸಿ ಕುಡುದ್ದಲ್ಲದೋ …. ಈ ಕೆಲಾವು ಜನ …ಭಾಗೋತಂಗೊ …. ಪದ ಹೇಳುವಾಗ … ಬೊಂಡಕ್ಕೆ “ಬೇರೆ ಎಂತದೋ” ಹಾಕಿ ಕುಡಿತ್ತವು ..ಹೇಳಿ ಶುದ್ದಿ ಇದ್ದು … ನವಗೊಂತಿಲ್ಲೆ …. !!! ಚೆನ್ನೈ ಭಾವನ ನಂಬುಲಕ್ಕು … ಎಷ್ಟು ಬೇಕಾದರೂ ಜಾಮೂನು …ಅಲ್ಲಲ್ಲ …ಜಾಮೀನು
        ಸಿಕ್ಕುಗು ….ನಾವುದೇ ರೆಡಿ ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×