ನೆಗೆಗಾರನ ಇಂಗ್ಳೀಶು – 02

ಅಮ್ಮಬ್ಬ!
ಮೂರು ಶಬ್ದ ಕಳುದ ವಾರ ಕಲ್ತಾತು, ನಿಂಗೊಗೆ ಗೊಂತಿದ್ದು.

ಕಲ್ತಾದ್ದದರ ಮಾಷ್ಟ್ರುಮಾವನತ್ರೆ ಒಪ್ಪುಸಲೆ ಹೇಳಿಗೊಂಡು ಹೋಗಿತ್ತಿದ್ದೆ.
ಆಯಿತ್ಯವಾರ ಉದಿಯಪ್ಪಗ ಇದಾ, ಮೋರೆ ಇಡೀ ಬೆಳಿಬೆಳಿ – ಗೆಡ್ಡಂದಲೂ ಬೆಳಿ!
ಎಡದ ಕೈಲಿ ಹಿಡುಕ್ಕೊಂಡ ಕನ್ನಾಟಿಯ ನೋಡಿಗೊಂಡು ಗೆಡ್ಡ ತೆಗಕ್ಕೊಂಡು ಇತ್ತಿದ್ದವು.
ಗೆಡ್ಡ ತೆಗವಗ ಮಾತಾಡ್ತವಿಲ್ಲೆ ಇದಾ – ಅದೊಂದು ಒಳ್ಳೆದಾತು ನವಗೆ! 😉

ಹೀಂಗೀಂಗೆ, ಇಂಗ್ಳೀಶು ಕಲಿವಲೆ ಸುರು ಮಾಡಿದೆ, ಬೈಲಿನವರ ಒಟ್ಟಿಂಗೆ – ಮೂರು ಶಬ್ದ ಕಲ್ತಾತು, ಹೀಂಗೀಂಗೆ – ಹೇಳಿದೆ.
ಮಾತಾಡಿದ್ದವಿಲ್ಲೆ!
ಮವುನಮ್ ಸಮ್ಮತಿ ಲಕ್ಷಣಮ್ – ಅಡ, ಡಾಮಹೇಶಣ್ಣ ಹೇಳಿತ್ತಿದ್ದ ಯೇವಗಳೋ ಒಂದರಿ.
ಗೆಡ್ಡ ತೆಗದು ಅಪ್ಪ ಮೊದಲೇ ಒಪಾಸು ಹೆರಟು ಬಂದೆ. 😉

—————
ಇಂದ್ರಾಣ ಪಾಟ:

4. ಬಟ್ರು:
But-True
ಡಿಕಿಶ್ನರಿಯ ಅರ್ತಂಗೊ:
But = ಆದರೆ
True = ನಿಜವಾಗಿಯೂ

ನೆಗೆಗಾರನ ಅರ್ತ: ಆದರೆ, ನಿಜವಾಗಿಯೂ ನೋಡಿರೆ ಅವು ಭಟ್ರು!
(ಈಗಾಣೋರ ಪರಿಸ್ಥಿತಿ ಕಂಡ್ರೆ ಅವು ಬಟ್ಟಕ್ಕೊ ಹೇಳಿ ಗೊಂತಾವುತ್ತಿಲ್ಲೆ ಇದಾ, ಅದಕ್ಕೆ ಹಾಂಗೆ ಹೇಳಿದ್ದೋ ಏನೋ!)

5. ಕೇಸರಿಬಾತ್:
Case-Re-Bath
ಡಿಕಿಶ್ನರಿಯ ಅರ್ತಂಗೊ:
Case = ನಂಬ್ರ
Re = ಪುನಾ
Bath = ಮೀತ್ತದು

ನೆಗೆಗಾರನ ಅರ್ತ: ನಂಬ್ರ ಮುಗುಶಿ ಪುನಾ ಬಂದ ಮೀತ್ತದೋ ಏನೋ!

6. ಬನ್ನಿ:
Bun-Knee
ಡಿಕಿಶ್ನರಿಯ ಅರ್ತಂಗೊ:
Bun = ಬನ್ಸು (- ಕೇಶವಣ್ಣನ ಹೋಟ್ಳಿಲಿ ಸಿಕ್ಕುತ್ತದು!)
Knee = ಮೊಳಪ್ಪು

ನೆಗೆಗಾರನ ಅರ್ತ: ಬನ್ಸು ತಿಂಬಗ ಮೊಳಪ್ಪಿಂಗೆ ಹಿಡುದತ್ತು ಹೇಳಿಯೋ?! ಆಗಿರದೋಳಿ!
—————
ಅದು ಸರಿ, ಕಳುದವಾರ ನೆಗೆಗಾರ ಕಲಿತ್ತದರ ನೋಡಿ ಬೈಲಿನೋರುದೇ ಒಪ್ಪಲ್ಲಿ ಕೆಲವು ಶಬ್ದಂಗಳ ಹೇಳಿಕೊಟ್ಟಿದವು.
ಸರೀ ಅರ್ತ ಆದ ಕೆಲವು ಶಬ್ದಂಗಳ ಮತ್ತಾಣ ವಾರ ಬರೆತ್ತೆ.

ಕಳುದವಾರ ಬೈಲಿನೋರು ಕಲಿಶಿದ ಶಬ್ದಂಗೊ:

a) ಎಲ್ಲೊರಿಂಗೂ
Yellow-Ring
Yellow = ಅರಿಶಿನ
Ring = ಉಂಗಿಲು

ಮುಳಿಯಬಾವನ ಅರ್ತ: ಅಪ್ಪಟ ಚಿನ್ನದ ಅರುಶಿನ ಉಂಗಿಲು.

b) ಹುಳಿಅಡರು:
ಹಿಂದಿಲಿ ಪದವಿಂಗಡಣೆ ಮಾಡಿದ್ಸು:
Who: ओ
Lia: लिय
Dar: डर

ಹೊಸಬೆಟ್ಟು ಶ್ರೀಶಣ್ಣನ ಅರ್ತ: ಶ್ರೀಶಣ್ಣಂಗೆ ಇಂಗ್ಳೀಶು ಅಷ್ಟು ಅರಡಿಯ ಅಡ. ಅದಕ್ಕೆ ಹಿಂದಿಲಿ ಶಬ್ದಾರ್ತ ಬರದವು. ನವಗೆ ಅದುದೇ ಕಲ್ತಾಯೆಕ್ಕಷ್ಟೆ.
(ವಿವರಣೆ ಕೊಟ್ಟಿದವಿಲ್ಲೆ. ನಿಂಗೊ ಕೇಳಿ, ಕೊಡ್ಳೂ ಸಾಕು)

c) ಗೋಣಿಚೀಲ:
Gone = ಹೋತು
Itchy = ತೊರುಸುತ್ತದು
Law = ನಿಯಮ

ಸುವರ್ಣಿನಿ ಅಕ್ಕನ ಅರ್ತ: ಎಷ್ಟೇ ತೊರುಸುತ್ತರೂ ಅದು ಹೋಗಿಯೇ ಹೋವುತ್ತಡ, ಅದು ನಿಯಮ ಅಡ!
(ಅವು ಬೈಲಿಲಿ ಹೇಳಿದ್ದವಿಲ್ಲೆ, ಆದರೆ ಎನಗೆ ಸಿಕ್ಕಿಪ್ಪಗ ಹೇಳಿತ್ತಿದ್ದವು.)

—————

ನಿಂಗಳೂ ನೆಗೆಗಾರಂಗೆ ಹೇಳಿಕೊಡಿ,
ಎಲ್ಲೋರೂ ಕಲಿವ°, ಎಲ್ಲೋರೂ ಬೆಳವ°, ಆಗದೋ?
ಏ°?


ನಿಂಗಳ ನೆಗೆಯ,
ನೆಗೆಗಾರ°

<< ನೆಗೆಗಾರನ ಇಂಗ್ಳೀಶು 01

ನೆಗೆಗಾರನ ಇಂಗ್ಳೀಶು 03 >>

ನೆಗೆಗಾರ°

   

You may also like...

21 Responses

 1. {ಮವುನಮ್ ಸಮ್ಮತಿ ಲಕ್ಷಣಮ್ – ಅಡ,}

  ಓ ಮಾರಾಯ, ಅದು ವಧುಪರೀಕ್ಷೆ ಆದ ಮತ್ತೆ ಕೂಸಿಂಗೆ ಮಾಣಿ ಇಷ್ಟ ಆತಾ ಇಲ್ಲೆಯ ಹೇಳಿ ಕೇಳುವ ಸಂಧರ್ಭಕ್ಕೆ ಮಾತ್ರ ಅಪ್ಪ ಮಾತು !! 😉 ಮಾವ ಗಡ್ಡ ತೆಗವಾಗ ಅಲ್ಲ,, ಹಿ ಹಿ ಹಿ 😉

  • { ಅದು ವಧುಪರೀಕ್ಷೆ ಆದ ಮತ್ತೆ ಕೂಸಿಂಗೆ ಮಾಣಿ ಇಷ್ಟ ಆತಾ ಇಲ್ಲೆಯ ಹೇಳಿ ಕೇಳುವ ಸಂಧರ್ಭಕ್ಕೆ ಮಾತ್ರ ಅಪ್ಪ ಮಾತು }
   – ನಿನಗೆ ಹೇಂಗೆ ಗೊಂತೂ…????!!! 😉 😉 😛
   ಅದಕ್ಕೇ ಹೇಳುದು, ದೊಡ್ಡೋರ ಒಯಿವಾಟಿಲಿ ಎಡೇಲಿ ಬಾಯಿ ಹಾಕಲೆ ಹೆರಟ್ರೆ ಹೀಂಗೆ ಸಿಕ್ಕಿ ಬೀಳ್ತು ಹೇಳಿಗೊಂಡು!!
   ಗೊಂತಾತೋ? 😉

   • ದೊಡ್ಡೋರು ಹೇಳಿಯೇ ಎನಗುದೆ ಗೊಂತಾದ್ದು ಮಾರಾಯನೆ.. 🙂 ತಪ್ಪು ತಿಳಿಯೆಡ ಕುಂಞ??

    • ಶ್ರೀಶ ಹೊಸಬೆಟ್ಟು says:

     ಸ್ವಂತ ಅನುಭವ ಹೇಳಿ ದೈರ್ಯಲ್ಲಿ ಹೇಳು ಬಲ್ನಾಡು ಮಾಣಿ. ನೀನೆಂತ ಇನ್ನೂ ಸಣ್ಣ ಬಾಬೆಯೋ ನಾಚಿಗೆ ಮಾಡ್ಲೆ.

     • 🙂 ಎಲಾ ಕತೆಯೇ, ಆನು ಸತ್ಯ ಹೇಳಿರುದೆ ನಂಬುತ್ತಿಲ್ಲಿಯನ್ನೆ ನಿಂಗೊ!! ಆನು ಬಲ್ನಾಡು ಮಾಣಿ ಹೇಳ್ತಾ ಇದ್ದೆ, ನನ್ನನ್ನು ನಂಬಿ ಪ್ಲೀಸ್!!! 😉

     • ಶ್ರೀಶ ಹೊಸಬೆಟ್ಟು says:

      [ಆನು ಬಲ್ನಾಡು ಮಾಣಿ ಹೇಳ್ತಾ ಇದ್ದೆ]
      ನೀನು ಬಲ್ನಾಡು ಮಾಣಿ ಹೇಳುವದು ಸತ್ಯವೇ. ಸಂಶಯವೇ ಇಲ್ಲೆ ಮಾಣಿ

     • ಶ್ರೀಶಣ್ಣ,, ಎನಗೆ ಪಕ್ಕ ರವಿ ಬೆಳೆಗೆರೆಯ ನೆಂಪಾತು. ಹಾಂಗಾಗಿ ಅವನ ಡಯಲಾಗಿನ ಕಾಪಿ(!) ಮಾಡ್ಲೆ ನೋಡಿದ್ದು.. 😉 ಅಷ್ಟೆ..

   • ಶ್ರೀಶ ಹೊಸಬೆಟ್ಟು says:

    ಅವ ಎಂತ ಸಣ್ಣ ಮಾಣಿ, ಬಾಯಿಗೆ ಬೆರಳು ಹಾಕಿರೆ ಕಚ್ಚಲೆ ಕೂಡಾ ಅರಡಿಯ ಜಾನ್ಸಿದ್ದೆಯಾ?
    ರಾಮಜ್ಜನ ಕಾಲೇಜಿನ ಹತ್ರೆ ಆಫೀಸ್ ಮಡುಗಿದ್ದು ಎಂತಕೆ?

    • ಛೇ ಛೆ,,, ಅಲ್ಲಿ ಬಾಡಿಗೆ ಕಮ್ಮಿ ಶ್ರೀಶಣ್ಣ,,, 🙂 ಹಾಂಗಾಗಿ ಅಲ್ಲಿ ಆಫೀಸ್ ಮಡಗಿದ್ದು!!

     • ಶ್ರೀಶ ಹೊಸಬೆಟ್ಟು says:

      ಕಾಲೇಜ್ ಬಿಡ್ತ ಸಮಯಲ್ಲಿ ಹೆರ ನಿಂದೊಂಡು ಇತ್ತಿದ್ದೆ ಅಡ

     • ಅಲ್ಲ ಶ್ರೀಶಣ್ಣ, ಹಾಂಗಲ್ಲ, ಆನು ಹೆರ ನಿಂದೊಂಡಿತ್ತಿದ್ದೆ, ಅಷ್ಟಪ್ಪಗ ಕಾಲೇಜು ಬಿಟ್ಟತ್ತು.. ಆನೆಂತ ಮಾಡುದು??????? 😉

     • { ಆನೆಂತ ಮಾಡುದು }
      ಕೋಲೇಜು ಬಿಟ್ಟದಕ್ಕೆ ನೀನೆಂತ ಮಾಡ್ಳೆಡಿಯ, ಆದರೆ ಆಪೀಸು ಬಿಟ್ಟದಕ್ಕೆ ಎಂತಾರು ಮಾಡ್ಲಕ್ಕನ್ನೇ! 😉

 2. ಶ್ರೀದೇವಿ ವಿಶ್ವನಾಥ್ says:

  ನೆಗೆಗಾರಣ್ಣೋ, ಈ ವಾರದ ಇಂಗ್ಳೀಶು ಲಾಯ್ಕಿದ್ದಾತಾ…
  But-True, ಬಟ್ರು ಹೇಳಿದರೆ ನಿನ್ನ ಅರ್ಥ ಸರಿಯೇ ಆವುತ್ತಾ ಹೇಳಿ ಅಲ್ಲದಾ? ಭಟ್ರು ಹೇಳಿದ್ದೆಲ್ಲಾ ಸತ್ಯವೇ ಅಲ್ಲದೋ (ಕ್ರಿಯಲ್ಲಿ ಆದರೂ)….
  Case-Re-Bath, ಕೇಸ್-ರಿ-ಬಾತ್ ದೇ ನೀನು ಹೇಳಿದ ಉತ್ತರವೆಯೋ!
  ಒಪ್ಪಣ್ಣ ಅಂದು ಹೇಳಿದ್ದ° ಅಲ್ಲದಾ? ನಂದಾದೀಪದ ಹಾಂಗೆ ಇಪ್ಪದು ನಂಬ್ರ ಹೇಳಿ.. ಅದು ಮುಗುದಪ್ಪಗ ಇಲ್ಲದ್ದರೂ ಪುನಾ ಮೀಯೆಕ್ಕಷ್ಟೆ ಅಲ್ಲದೋ?
  Bun-Knee, ಇದು ಕೇಶವಣ್ಣನ ಹೋಟ್ಲಿನ ಬನ್ನು ತಿಂದರೆ ಹೊಟ್ಟೆ ಬನ್ನಿನ ಹಾಂಗೆ ಆಗಿ ಮೊಳಪ್ಪಿಂಗೆ ದೇಹ ತಾಂಗುಲೆ ಕಷ್ಟ ಹೇಳೀಯೇ ಆದಿಕ್ಕೋ ತೋರ್ತು!!!! 😉

  • ನೆಗೆಗಾರಂಗೇ ನೆಗೆ ಬಂತು ನಿಂಗಳ ಒಪ್ಪ ನೋಡಿ.
   ಬಪ್ಪ ವಾರ ಒಪ್ಪುಸಲೆ ಹೋದಪ್ಪಗ ಸರಿಯಾಗಿ ಅರ್ತಮಾಡಿ ತಿಳ್ಕೊಳ್ತೆ, ಆತೋ?

 3. ಶ್ರೀಶ ಹೊಸಬೆಟ್ಟು says:

  ऒ =ಅವ, ಅದು
  लिया= ತೆಕ್ಕೊ
  डर= ಹೆದರಿಕೆ
  ಅದು (ಹುಳಿ ಅಡರು)ಇದ್ದರೆ ಹೆದರಿಕೆ ತೆಕ್ಕೊಂಡ ಹಾಂಗೆ 🙂

 4. ಹೀಂಗಿಪ್ಪ ಶಬ್ದಂಗಳ ಸರ್ಕಸ್ ಎಂಗೊ ಕೋಲೇಜಿಂಗೆ ಹೋಗಿಯೊಂಡಿಪ್ಪಗ ಸುಮಾರು ಮಾಡಿಯೊಂಡಿತ್ತಿದ್ದೆಯೊ°. ಅದು ಬೇರೆ ಬೇರೆ ಭಾಷೆ ಸೇರ್ಸಿ ಮಾಡುದು. ಅದರಲ್ಲಿ ಕನ್ನಡ, ಇಂಗ್ಲೀಷು, ಹಿಂದಿ, ಸಂಸ್ಕೃತ ಎಲ್ಲ ಬಕ್ಕು. ಅಂತೂ ಹೀಂಗಿಪ್ಪದು ಒಪ್ಪಣ್ಣನ ಬೈಲಿಲ್ಲಿಯೂ ಬತ್ತು ಹೇಳಿ ಗೊಂತಾಗಿ ಕೊಶಿ ಆತು. ಹನಿಗವನಗಳ ರಾಜ° ಡುಂಡಿರಾಜ° (ಗಣಪತಿಯ ಇನ್ನೊಂದು ಹೆಸರು – ಅವನೂ ಕವಿಗಳ ಕವಿ ಅಡ) ಬರೆತ್ತ ಕೆಲಾವು ಹನಿಗವನಂಗೊ ಹೀಂಗಿಪ್ಪ ಶಬ್ದಂಗಳ ಸರ್ಕಸ್ ಮಾಡಿಯೇ ಬರವದು.

 5. Krishnamohana Bhat says:

  huli adro naagara bethavo tegavanna madale jage bittadu olledaatu elladre ee eradne pata kaltadara oppusale edittito elliyo.antu eradne paata oppusida negegara manige jai.Mohananna.oppa bittu hopalaagane.

  • { antu eradne paata oppusida negegara manige jai. }
   ಇಲ್ಲೆ ಮೋಹನಣ್ಣಾ,
   ಎರಡ್ಣೇ ಪಾಟ ಕಲ್ತಾತು ಅಷ್ಟೇ. ಮಾಷ್ಟ್ರುಮಾವಂಗೆ ಒಪ್ಪುಸುದು ಬಪ್ಪ ಆಯಿತ್ಯವಾರ.
   ಎನಗೆ ಈಗಳೇ ಪುಕುಪುಕು ಅಪ್ಪಲೆ ಸುರು ಆಯಿದು. ಬಯಿದರೆ ಹೇಳಿಗೊಂಡು! 😉 🙁

 6. Krishnamohana Bhat says:

  hedareku heli elle bagilu varege aanu batte huli adrinaddo naagara bethaddo shabda kelire matte enna mayipadyliye kaanekakku.ondu salaheyu eddu hopaaga benninge ondu hale kattiyondu hopadu aarogyada drustinda olledu.oppangalottinge mohananna

 7. Subrahmannya Bhat says:

  Enta Nagegaara anna ningoge udaasina appadu? Kalivike munde hogali. Baililli ellaru kaytha iddeyo ningala English kaliyuvike bagge thilivale.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *