ಹಲ್ಲಿದ್ದರೂ ನೆಗೆ ಮಾಡಿ, ಹಲ್ಲಿಲ್ಲದ್ರೂ ನೆಗೆ ಮಾಡಿ…!

ಬಾಯಿ ಇಲ್ಲದ್ರೂ ಜೆನಂಗೊ ಬದುಕ್ಕುಗು. ನೆಗೆ ಇಲ್ಲದ್ರೆ ಬದುಕ್ಕುಗೊ?
ಸಾಧ್ಯವೇ ಇಲ್ಲೆ!

ಮನುಷ್ಯಂಗೆ ಊಟ-ಆಹಾರ- ಒರಕ್ಕು ಎಷ್ಟು ಅಗತ್ಯವೋ, ನೆಗೆಯೂ ಅಷ್ಟೇ ಅಗತ್ಯ.
ಹಾಂಗಾಗಿ – ದಿನಲ್ಲಿ ರಜ ಆದರೂ ನೆಗೆ ಮಾಡೆಕ್ಕಿದಾ.

ನೆಗೆಯೇ ಮೂಲವಾಗಿ ಇಪ್ಪ, ತಮಾಷೆತಪ್ಪ ಸಣ್ಣ ಸಣ್ಣ ಸಾಹಿತ್ಯಂಗೊಕ್ಕೆ ’ಜೋಕುಗೊ’ ಹೇಳುದಡ.ಈ ಜೋಕುಗೊ ಕೆಲವು ವೆಗ್ತಿತ್ವದ ಮೇಲೆಯೂ ಇರ್ತು – ಕೆಲವು ಘಟನೆಯ ಮೇಲೆಯೂ ಇರ್ತು.
ನಮ್ಮ ಊರಿನ ಬಿಂಗಿ ಮಾಣಿಯಂಗಳ ಬಾಯಿಲಿ ’ರಾಂಪ’ನ ಜೋಕುಗೊ ತಿರುಗುತ್ತಲ್ದಾ, (ತುಳುವಿಲಿ ಅದರ ’ರಾಂಪನ ಜೋಕುಲು’ ಹೇಳುದಡ) ಅದೇ ನಮುನೆ ಮೇಗೆ ಹೋದರೆ ಸರ್ದಾರ್ಜಿ ಜೋಕುಗೊ ಹೇಳಿ ಒಂದಿದ್ದಡ. ಇಲ್ಲಿ ರಾಂಪ ಹೇಂಗೆ ವಸ್ತುವೋ ಹಾಂಗೇ ಮೇಗೆ ಹೋದರೆ ಸರ್ದಾರ್ಜಿಗಳ ಬಗ್ಗೆ. ಇಪ್ಪ ಜೋಕು ಒಂದೇ ಆದೂ ವೆಗ್ತಿ ವೆತ್ಯಾಸ.!!
ಒಪ್ಪಕ್ಕ ಅಂತೂ ಅದಕ್ಕೆ ಬಂದ ಮೆಸೇಜುಗಳಲ್ಲಿ ಸರ್ದಾರ್ಜಿ ಹೇಳಿ ಇಪ್ಪಲ್ಲಿ ಎಲ್ಲ ’ಬೆಪ್ಪಣ್ಣ’ ಹೇಳಿ ಮಾಡಿಕ್ಕಿ ಕಳುಸುತ್ತು. ಯೇವರೀತಿ ಒಪ್ಪಣ್ಣ ಹೇದರೆ ಉಶಾರಿಯೋ, ಬೆಪ್ಪಣ್ಣ ಹೇದರೆ ಹೆಡ್ಡ ಹೇಳ್ತ ಅರ್ತ ಬತ್ತು.! )
ಇದೆಲ್ಲ ಈಗಾಣ ನಮುನೆ ನೆಗೆಗೊ ಆತನ್ನೆ.

ಇದೆಲ್ಲದಕ್ಕೆ ಹೊರತಾಗಿ, ಹಳೆಕಾಲಲ್ಲೇ ಸುಮಾರು ನೆಗೆಗೊ ಇತ್ತಡ.
ಎಂತಾರು ಒಂದು ಘಟನೆಯ ನವಿರು ನವಿರಾಗಿ ವಿವರುಸಿ ನೆಗೆ ತರುಸುತ್ತವು ನಮ್ಮ ಹಿರಿಯೋವು ಕೆಲವು ಜೆನ – ಮಂಜಳಗಿರಿ ಬೇಂಕುಮಾವನ ಹಾಂಗಿಪ್ಪವು. ಎರಡನ್ನೂ ಒಪ್ಪಣ್ಣ ಹೇಳುಗು.

ಅದು ನಂಬೂರಿ ಸಂಶಯ ಕೇಳಿದ್ದಾಯಿಕ್ಕು, ಮಾಪ್ಳೆ ಅದರ ಅಪ್ಪನತ್ರೆ ಹೇಳಿದ್ದಾಯಿಕ್ಕು, – ಎಂತದೇ ಆಯಿಕ್ಕು…
ನಿಂಗೊಗೆ ಗೊಂತಿದ್ದದಿದ್ದರೆ ಇಲ್ಲಿ ಹೇಳಿ…
ಎಲ್ಲೊರು ನೆಗೆ ಮಾಡುವೊ°.

ಆಗದೋ?


Admin | ಗುರಿಕ್ಕಾರ°

   

You may also like...

18 Responses

 1. Anantanna says:

  Havigannada Gellali!

  Nagegondu mudde illiddu –

  Navavivahita Ganda Rasteli hogta ippaga vand katte kandu hendtige helda-
  ” Nodu, ninn nentanna! holas tinta idda! ”
  Aaga avn Hendti andlu – ” Ayyo haudenri! Madve aadmelin nentru heli kaantu!
  Gurta maadsi kodi aata. “

 2. RavikumaraKADUMANE says:

  Idu hasya alla.Indu devaringe pooje madikki devara taleli madugida 1 gulabi hoo ammange prasada heli koduvaga,Adu devara taleli irali maga enna taleliddare enage kanutto?Devara taleliddare nodi santosha padlakku heli helittu. Enage idu olle moral heli ansittu.

 3. Anantanna says:

  TAHA TAHISI BAHALA SIHI TINDIGALA TINDU
  GAHAHISI NAGUUTIDDE SANTASADOLANDU
  BOJJU MAI, SIHIMOOTRA BANDA MELARITE NAA
  SIHIGINTA KAHIYU INNONDILLAVENDU !

  – ANANTANNA

 4. pakalakunja gopalakrishna says:

  ಜೋಕು ಕೆಲವು ಜನ ಮಾದಡಿದರೆ …. ನೆಗೆ ಎಲ್ಲರೂ ಮಾಡುಗು !!

  ಹಾಂಗಾಗಿ ಇದು ಜೋಕಲ್ಲ…ನೈಜ ಘಟನೆ…

  ಬೊಕ್ಕ ತಲೆ ಯ ಭಾವಯ್ಯ ನ ಒಬ್ಬ್ಬ ಕೇಳಿದನಡ ಇದರಿಂದಾಗಿ ಏನಾದರು ಸಮಸ್ಯೆ ಎದ್ದೋ ಹೇಳಿ….??

  ಆ ಭಾವಯ್ಯ ಹೇಳಿದನಡ ….ಹಂಗೆಂತಿಲ್ಲೆ….ಉದಿಯಪ್ಪಗ ಮೋರೆ ತೊಳವಲೆ ಸೀರು ಹೆಚ್ಹು ಬೇಕವುತ್ತು …..

  ಎಂತಕೆ ಹೇಳಿದರೆ … ಎಷ್ಟು ತೊಳಯಕ್ಕು ಹೇಳಿ ಅಂದಾಲು ಆವುತ್ತಿಲ್ಲೆ …..

  ನೆಗೆ ಬಂದರೆ ಮಾಡಿ .. .. ಟೇಕ್ಸ್ ಫ್ರೀ….ಜೋಕು ಮುಗುದ್ದು…

 5. jayashree.neeramoole says:

  ಈ ಘಟನೆಯ ಸರಿಯಾಗಿ ಕಲ್ಪಿಸಿಗೊಂಡು ಓದೆಕ್ಕು.
  ಒಂದರಿ ಒಂದು ಹಾವಿಂಗೂ ಮುಂಗುಸಿಗೂ ಜಗಳ ಆತಡ. ಜಗಳ ಜೋರು ಜೋರು ಆತಡ. ಮುಂಗುಸಿ ಹಾವಿನ ಬೀಲ ನುಂಗುಲೆ ಶುರು ಮಾಡಿತ್ತಡ,ಹಾವು ಮುಂಗುಸಿಯ ಬೀಲ ನುಂಗುಲೆ ಶುರು ಮಾಡಿತ್ತಡ… ಹೀಂಗೆ ನುಂಗಿಗೊಂಡು ಹೋಗಿ… ಹೋಗಿ… ಹೋಗಿ… ಕೊನೆಗೆ ಹಾವೂ ಮಾಯ ಅಡ!!! ಮುಂಗುಸಿಯೂ ಮಾಯ ಅಡ!!!

  ಸೂ: ಉಜಿರೆ ಕಾಲೆಜಿಲಿ ಕಲ್ತವು ಇದ್ದರೆ ಇದು P.P. ಯ ಜೋಕು ಹೇಳಿ ನೆನಪು ಮಾಡಿಗೊಂಡು ಓದಿರೆ ಇನ್ನೂ ಜಾಸ್ತಿ ನೆಗೆ ಬಕ್ಕು.

  • ಚೆನ್ನೈ ಭಾವ says:

   ಛೆ! ಹಾವುದೇ ಮುಂಗಿಸಿಯ ಬೀಲವ ನುಂಗಲೆ ಸುರುಮಾಡಿಕ್ಕಲಾವ್ತಿತ್ತಪ್ಪೋ ! ಅಲ್ಲಾ, ಹಾವಿನ ಬೀಲ ಅಲ್ಲದೋ ನುಂಗಲೆ ಸುರುಮಾಡಿದ್ದು., ಅದೇಕೆ ಹಾವು ಆಚ ಹೊಡೆಂದ ಮುಂಗಿಸಿಯ ನುಂಗಲೆ ಸುರುಮಾಡದ್ದು. ಉಮ್ಮಾ ., ಈ ಲಾಜಿಕ್ ಎಂತರ ಎನಗರ್ಥ ಆಯ್ದಿಲ್ಲೆಪ!!

   • jayashree.neeramoole says:

    ಇಂದು ನಾವು ವಿಜ್ಹಾನವ ನುಂಗುತ್ತಾ ಇದ್ದು… ವಿಜ್ಹಾನ ನಮ್ಮ ನುಂಗುತ್ತಾ ಇದ್ದು… ಹೀಂಗೆ ಬಿಟ್ಟರೆ ಕೆಲವು ಸಮಯಲ್ಲಿ ಭೂಮಿಯೇ ನಾಶ ಆಗಿ ನಾವೂ ಇರ!!! ವಿಜ್ಹಾನವೂ ಇರ!!!

    ಇದೇ ಲಾಜಿಕ್ ನ P.P. ಜೋಕ್ ನ ಮೂಲಕ ಹೇಳಿದ್ದದೋ ಏನೋ!!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *