Oppanna.com

ನೆಗೆಚತುಷ್ಪದಿಲಿ “ಶುದ್ದಿ ಹೇಳುಗಾ..?”

ಬರದೋರು :   ನೆಗೆಗಾರ°    on   02/03/2011    69 ಒಪ್ಪಂಗೊ

ನೆಗೆಗಾರ°

ಮುಳಿಯಬಾವನ ಭಾಮಿನಿಲಿ ಪದ್ಯ ಬರದು ಎಲ್ಲೋರಿಂಗೂ ಕೊಶಿ ಕೊಡುಸುತ್ತನಡ ಬೈಲಿಲಿ.
ನೀರ್ಕಜೆ ಅಪ್ಪಚ್ಚಿ ದ್ವಿಪದಿ ಬರದು ಎಲ್ಲೋರಿಂಗೂ ಜ್ವರ ಹಿಡುಶುತ್ತವಾಡ..
ಎಬೆ! ಎನಗೆಡಿಯದಾ?
ಇದಾ, ಆನುದೇ ಬರದ್ದೆ. ನೋಡಿ, ಲಾಯ್ಕಿದ್ದು ಹೇಳಿ ಆತಾ? 😉

ಹೇಳಿದಾಂಗೆ, ಈಗ ಆನೊಬ್ಬನೇ ಬರದು ಕೊಟ್ಟ ಕಾರಣ ಇದಕ್ಕೆ ಪಷ್ಟುಪ್ರೈಸು ಕೊಡ್ಳಕ್ಕು ಹೇಳಿದ್ದವು ಗುರಿಕ್ಕಾರ್ರು.
ಮುಳಿಯಬಾವ ಎಷ್ಟೇ ಚೆಂದ ಬರದರೂ ಪಷ್ಟು ಸಿಕ್ಕ, ಬೇಕಾರೆ ಮಾತಾಡಿ ಸೆಕೆಂಡು ಪ್ರೈಸು ಕೊಡುಸುವೆ! 😉
ನಿಂಗಳದ್ದು ಅಭಿಪ್ರಾಯ ವಿತ್ಯಾಸ ಇದ್ದರೆ ಹೇಳಿಕ್ಕಿ  😉

~
ನೆಗೆಮಾಣಿ

=================================

ಶುದ್ದಿ ಹೇಳುಗಾ..?

ಬೋಸಬಾವ° ಹಲ್ಲುತಿಕ್ಕಿ
ಗ್ಲಾಸುತುಂಬ ಮಿಂದುಗೊಂಡು
ಮೀಸೆಯೆಡೆಲಿ ಚಾಯಕುಡುದು
ಶುದ್ದಿ ಹೇಳುಗಾ..

ಮುಳಿಯ ಭಾವ° ಬಂದು ಕಾಯಿ
ಸುಳಿಯ ಬೆಲ್ಲ ತಿಂದುಗೊಂಡು
ಹೊಳೆಯ ಹಾಂಗೆ ಪದ್ಯ ಬರದು
ಶುದ್ದಿ ಹೇಳುಗಾ..

ದೊಡ್ಡಬಾವ° ಬೈಕ್ಕಿಲಿಪ್ಪ
ಹೆಡ್ಡುಲೈಟು ಹಾಕಿಗೊಂಡು
ದೊಡ್ಡಶೆಬ್ದ ಹೋರ್ನುಮಾಡಿ
ಶುದ್ದಿ ಹೇಳುಗಾ..

ಅಜ್ಜಕಾನ ಬಾವ° ಮೊನ್ನೆ
ಪಿಜ್ಜನಕ್ಕಿದವರ ಕಂಡು
ಬೊಜ್ಜು ಬಕ್ಕು ಹೇಳಿ ಬೈದು
ಶುದ್ದಿ ಹೇಳುಗಾ..

ಬೇಂಕಿನೊಳ ಬೊಳುಂಬುಮಾವ°
ಸೇಂಕಿಗೊಂಡು ಪೈಶೆ ಎಣುಸಿ
ಪೀಂಕಿಬಂದ ನೆಗೆಯ ತಡದು
ಶುದ್ದಿ ಹೇಳುಗಾ..

ಹಳೇಮನೆಯ ಅಣ್ಣ ಒಂದು
ಬೆಳೀ ಹನಿಯ ಪಟವ ಹಾಕಿ
ಮಳೇಗಾಲ ಬಂದುಬಿಡುವ
ಶುದ್ದಿ ಹೇಳುಗಾ…

ದೊಡ್ಡಕೆರೆಯ ಕಾನಾವಿನ
ಗುಡ್ಡೆ ಕೊಡಿಲಿ ಕೂದುಗೊಂಡು
ದೊಡ್ಡ ಸೊರದ ಶ್ರೀ ಅಕ್ಕ°
ಶುದ್ದಿ ಹೇಳುಗಾ..?

ಬಂಡಾಡಿಯ ಅಜ್ಜಿಗೆಂತ
ಚೆಂಡಾಟವೆ ಅರಡಿಯದ್ದೆ
ಬೆಂಡುಓಲೆ ತೊಳದು ಬಂದು
ಶುದ್ದಿ ಹೇಳುಗಾ..

ನೀರುಕಜೆಯ ಅಪ್ಪಚ್ಚಿಗೆ
ಊರು ಭಾರಿ ನೆಂಪಪ್ಪಗ
ಜೋರು ಜೋರು ತೊಟ್ಳು ತೂಗಿ
ಶುದ್ದಿ ಹೇಳುಗಾ..

ಆ ಬೊಳುಂಬು ಬಾವ° ನೋಡಿ
ಸಾಬೊನಿಂದ ಹೆಚ್ಚು ನೈಸು
ಲಾಬ ನಷ್ಟ ನೋಡಿಗೊಂಡು
ಶುದ್ದಿ ಹೇಳುಗಾ..

ಶರ್ಮಪಚ್ಚಿ ಪಿಸುರು ಬಂದು
ಚರ್ಮ ಎಳವ ಹಾಂಗೆ ಬೀಸಿ
ಕರ್ಮ-ಜೆಪವ ಹೇಳಿಕೊಡ್ತ
ಶುದ್ದಿ ಹೇಳುಗಾ..

ಕೇಜಿ ಮಾವ° ಒಂದು ಸರ್ತಿ
ರಾಜಿ ಮಾಡಿ ಬೈಲಕರೆಲಿ
ಸೂಜಿ ತುಂಬ ಮದ್ದು ಕೊಟ್ಟು
ಶುದ್ದಿ ಹೇಳುಗಾ..

ಚುಬ್ಬ ಅಣ್ಣ ಕೆಮರ ಹಿಡುದು
ಕಬ್ಬಿನಾಲು ತೆಗವ ಪಟವ
ಉಬ್ಬಿದಾಂಗೆ ಮಾಡಿ ಹಾಕಿ
ಶುದ್ದಿ ಹೇಳುಗಾ..

ಡಾಗುಟ್ರೂ ಅಕ್ಕ ಇನ್ನು
ಹೂಗು-ಕಾಯಿ-ಎಸರು ತಂದು
ಮೂಗು ಬೇನೆಗಿಪ್ಪ ಮದ್ದು
ಶುದ್ದಿ ಹೇಳುಗಾ..

ಬೈಲಕರೆ ಗಣೇಶ ಮಾವ°
ಕೈಲಿ ಮಣಿಯ ಹಿಡುದು ನಮ್ಮ
ಶೈಲಿಗಪ್ಪ ಪೂಜೆ ಮಂತ್ರ
ಶುದ್ದಿ ಹೇಳುಗಾ..

ಈ ಕಳಾಯಿ ಗೀತ ಅತ್ತೆ
ನಾಕು ಸರ್ತಿ ಓಮ್ನಿ ಬಿಟ್ಟು
ಸಾಕು ಬೇಕು ಹೇಳಿಗೊಂಡು
ಶುದ್ದಿ ಹೇಳುಗಾ..

ಉಂಡೆಮನೆಯ ಕುಮಾರಣ್ಣ
ಉಂಡೆ ಹೆಜ್ಜೆ ಉಂಡುಗೊಂಡು
ಸಂಡೆ ಮಂಡೆ ನೋಡಿಗೊಂಡು
ಶುದ್ದಿ ಹೇಳುಗಾ..

ನೆಗೆಯ ಶುದ್ದಿ ಓದುಸಿರುದೆ
ಬಗೆತ್ತರಲಿ ಹೇಳಿದರುದೆ
ನೆಗೆಯೆ ಇಲ್ಲೆ ಚೆನ್ನೈಯಣ್ಣ
ಶುದ್ದಿ ಹೇಳುಗಾ..

ಕೋಲು ಹಿಡುದ ಮಾಷ್ಟ್ರುಮಾವ°
ಕಾಲು ಗಂಟೆ ಇಂಗುಳೀಶು
ಕೇಳುವಾಂಗೆ ಪಾಟಮಾಡಿ
ಶುದ್ದಿ ಹೇಳುಗಾ..

ಕೊಳಚ್ಚಿಪ್ಪು ಬಾವನಲ್ಲಿ
ಹಳತ್ತೆಲ್ಲ ಪುಸ್ತಕಲ್ಲಿ
ಹುಳುಗಳೆಡೆಲಿ ಕಂಡ ಒಳ್ಳೆ
ಶುದ್ದಿ ಹೇಳುಗಾ..

ಚೆನ್ನ ಬೆಟ್ಟು ಅಣ್ಣ ಅಂದು
ಬೆನ್ನು ಕಾದ ಬೆಶಿಗೆ ಹೆದರಿ
ಚಿನ್ನ ತಂದು ಮನಗೆ ಕೊಟ್ಟ
ಶುದ್ದಿ ಹೇಳುಗಾ..

ಸೂ:

  • ನೆಗೆ  ಚೆಂದಸ್ಸು – ತಿಂದರಾಗ – ಅಷ್ಟತ್ರಿಒಡೆ ತಾಳ (/ ಜಂಬೆರೂಪಕ್ಕ° ತಾಳ)
  • ಇದು ಬರೇ ಷಟ್ಪದಿ ಮಾಂತ್ರ ಅಲ್ಲ.
    ಒಂದೊಂದೇ ಗೆರೆಲಿ ಬರಕ್ಕೊಂಡು ಹೋದರೆ ಏಕಪದಿಯೂ ಅಪ್ಪು, ಎರಡು ಗೆರೆಲಿ ಬರದರೆ ದ್ವಿಪದಿಯೂ ಆವತ್ತು,… ಆರು ಗೆರೆಲಿ ಬರದರೆ ಷಟ್ಪದಿಯೂ ಅಕ್ಕು… ನಿಂಗೊಗೆ ಬೇಕಾದ ಹಾಂಗೆ. 😉
  • ಸಹಸ್ರಪದಿ ಅಪ್ಪದು ಬೇಡ ಅಷ್ಟೆ. ಮತ್ತೆ ಬೋಸಬಾವ ಹಿಡುದು ತಿಂಗು! 😉
  • ಇದು ಕೇವಲ ನೆಗೆಗಾಗಿ.

(ಇನ್ನೂ ಇದ್ದು, ಇನ್ನಾಣ ಸರ್ತಿ, ಕಾದೊಂಡಿರಿ..)

69 thoughts on “ನೆಗೆಚತುಷ್ಪದಿಲಿ “ಶುದ್ದಿ ಹೇಳುಗಾ..?”

  1. negegaarana hosa shuddi bhari laikaidu.odule koshi aavuttu.negaarana parichaya oppannanatre kelekku.
    koshi aathu comentgalannu odi.
    good luck.

    1. ಇದೀಗ ಯಾವ ಟೂತ್ ಪೇಸ್ಟಿಂಗೆ ನಿಂಗಳದ್ದು ಪೋಸ್!!

      1. ಗೋಪಾಲನ್ ಹಲ್ಲುಪುಡಿ ಇದ್ದ ಹಾಂಗೆ, “ಶ್ರೀಕೃಷ್ಣನ ಹಲ್ಲುಹೊಡಿ” (ಕಾರಣ ಗೊಂತಿಲ್ಲೆ!) 😉

        1. ಶ್ರೀಕೃಷ್ಣಣ್ಣನ ಹಲ್ಲು ‘ಇಡಿ’ ಕಾಣ್ತಾ ಇದ್ದನ್ನೆ ನೆಗೆಗಾರೋ…ಮತ್ತೆ ಹಲ್ಲು’ಹೊಡಿ’ ಹೇದ್ಸು ಯೆಂತ್ಸಕೋ..?

  2. ಚೆನ್ನೈ ಭಾವ..ಇದಕ್ಕೆ ಹೇಳುದು ಗೋಪಾಲಕೃಷ್ಣ ಅಡಿಗರ ಕೃಪೆ ಹೇಳಿ…ನವ್ಯಕಾವ್ಯ ಹೇಳಿರೆ ಮುಗುತ್ತು …ಅಲ್ಲದೋ?

    1. ‘ಹಗುರ ತ್ರಿಪದಿ’ ಹೇಳಿ ಹೇಳಲಕ್ಕು ಹೇಳ್ತವನ್ನೇ ಇಲ್ಲಿ ಕೆಲವರು ಶ್ರಿಕೃಷ್ಣಣ್ಣ!

  3. ಚೆನ್ನೈ ಭಾವನ ಪದ್ಯ ಬಾರಿ ಲಾಯಕ್ಕ ಇದ್ದು

  4. ನೆಗೆಗಾರ ಹೋಗಿ ಬಂದು
    ಪ್ರೀತಿಲಿ ಬೈಗಾಳು ತಿಂದು
    ಕಾದುಗೊಂಡು ಇದ್ದೆ ಎನ್ನ
    ಶುದ್ದಿ ಹೇಳುಗಾ…?

    ಭಾವ…ಭಾರೀ “ಲೈಕ್” ಆಯ್ದು..

    1. ಶುದ್ದಿ ಮೊದಲೆ ಸುಮರು ಜನಗೊ ಹೆಳಿದ್ದವು…….ಭಾಗವಥಲ್ಲಿ. ಭಗವದ್ಗೀಥೆ ಒದಿದರೆ ಸರೀ ಆರ್ಥ ಅಕ್ಕು.

  5. (ನಮ್ಮ ಬೈಲಿನ “ಸ್ನೇಹ ಕೂಟ”ದ ದಿನ ) – ಇದು ಏವಾಗ…
    ಬರೆಕ್ಕಾರೆ…
    ಒಂದು ಗ್ಲಾಸು ನೀರು – ಬೋಸ ಭಾವ್ಂಗೆ
    ಬೆಲ್ಲ ಕಾಯಿಸುಳಿ – ರಘುವಿಂಗೆ
    ಬೆಂಡೊಲೆ – ಬಂಡಾಡಿ ಅಜ್ಜಿಗೆ
    ಕಬ್ಬಿನಾಲು – ಚುಬ್ಬಣ್ಣಂಗೆ
    ಹೂಗು-ಕಾಯಿ-ಎಸರು – ಡಾಗುಟ್ರೂ ಅಕ್ಕಂಗೆ
    ಉಂಡೆ ಹೆಜ್ಜೆ – ಕುಮಾರಣ್ಣಂಗೆ
    ಇಶ್ಟೆಲ್ಲ ವ್ಯವಸ್ತೆ ಆಯೆಕ್ಕಕ್ಕು ಅಲ್ಲದಾ ?

    1. ಈ ಸರ್ತಿ ಬೊಳುಂಬು ಮಾವನ ಸ್ಪೋನ್ಸರ್ ಡಾ ಕುಮಾರ ಭಾವ. ಹಾಂಗೇಳಿ ಇಲ್ಲಿ ಮಾತಾಡಿಗೊಂಡಿದ್ದವಪ್ಪ.!

      1. ಯೇ ಖೆಣಿಯಾ…ಯೆಲ್ಲೊರಿಂಗು ಸೆಕೆಂಡು ಪ್ರೈಸು ಹೇಳೀಗೊಂಡು ನೀನೆ ಫ್ಹಸ್ಟ್ ಪ್ರೈಸು ಮಡಿಕ್ಕೊಂಡು ಈಗ
        ಎನಗೆಂತ್ಸೂ ಇಲ್ಲೆಯೋ ಹೇಳಿದರೆ….!!!

        ಯೆಂತಾಯೆಕ್ಕು ನಿನಗೆ..?

      2. ನೆಗೆಗಾರನ್ಗೆಃ

        ಭಾಮಿನಿಯ ಬಲೆಯ ಬೀಸಿ
        ಚೆಂಡಿನ ಆರು ಹೊಡೆಶಿ
        ಕ್ಷೇತ್ರವ ರಕ್ಷಿಸುವ
        ಗುಪ್ತನ ಮಂತ್ರಿಗೆ
        ತಂತ್ರ ಸಿಕ್ಕದಾ ?

        ಸೂಚನೆ ; ಇಲ್ಲಿ ಬರದ್ದು ಮಾತ್ರಗನುಸಾರ ಇಲ್ಲೆ . ತಪ್ಪಿ ಮಾತ್ರೆ ಸರಿ ಆದರೆ ಅದಕ್ಕೆ ಆನು ಜವ್ವಬ್ದಾರಿ ಅಲ್ಲ. ಚೆಂಡಿನ ಜ್ವರ ಹಿಡುದೊರು ಒವೆರಿನ್ಗನುಸರ ಮಾತ್ರೆ ಸೇರ್ಸಿಗೊಮ್ಬಲಕ್ಕು .
        .

  6. ಬೈಲಿನ ಸದಸ್ಯರ ಹಿಡುದು, ಬರದ ನೆಗೆಗಾರನ ಚತುಷ್ಪದಿ ಒಂದು ಅದ್ಭುತ ಪ್ರಯೋಗ. ಒಳ್ಳೆ ಶೋಕು ಆಯಿದು. ಇದಕ್ಕೆ ಪ್ರಥಮ ಬಹುಮಾನ ಕೊಡದ್ದೆ ಮತ್ಯಾವುದಕ್ಕೆ ಕೊಡ್ಳಿ. (ಮುಳಿಯ ಭಾವ ಬೈದಿಕ್ಕೆಡ ಎನ್ನ, ನಿನಗೆ ನಿರ್ಣಾಯಕನಾಗಿ ಪ್ರಮೋಶನ್ ಆಯಿದು). ಶರ್ಮಪ್ಪಚ್ಚಿ ಹೇಳಿದ ಹಾಂಗೆ, ಈ ಪದ್ಯಕ್ಕೆ ಲೈಫ್ ಇಷ್ಟೇನೆ ಟ್ಯೂನು ಬಹಳ ಹೊಂದಿಕೆ ಆವುತ್ತು. ಪ್ರಾಸ ಸೇರುಸಿ ಸರಳವಾಗಿಪ್ಪ ಪ್ರತಿಯೊಂದು ಗೆರೆಯೂ ಅರ್ಥ ಕೊಡುತ್ತ ಹಾಂಗಿರುತ್ತ ಈ ಪದ್ಯ ಎಲ್ಲೋರಿಂಗು ಇಷ್ಟ ಆಯಿದು ಹೇಳಿ ಅವರವರ ಒಪ್ಪಲ್ಲೇ ಗೊಂತಾವುತ್ತು. ಶ್ರೀ ಅಕ್ಕ ಅಂತೂ, ಪದ್ಯದ ಬಗ್ಗೆ ವಿಮರ್ಶೆ ಮಾಡಿ ಡಾಕ್ಟರೇಟು ಮಾಡ್ಳೆ ಪ್ರಯತ್ನ ಮಾಡಿದ್ದು. ಅಂತೂ ನೆಗೆಗಾರನ ನಾಲ್ಕು ಕಾಲಿನ ಪದ್ಯಕ್ಕೆ ಕಾದು ಕೂದ್ದದು ಸಾರ್ಥ ಆತು. ಅವನಿಂದಲಾಗಿ ಬೈಲಿಡೀ ನೆಗೆ ನೆಗೆ ಮಾಡ್ಯೆಂಡು ಇರಳಿ. ನೆಗೆಗಾರನ ಪದ್ಯದ ಮುಂದಾಣ ಕಂತು ಬೇಗನೆ ಬರಳಿ, ಬೈಲಿನವರ ಮನಸ್ಸಿನ ತಣಿಸಲಿ. ನೆಗೆಗಾರನ ಈ ಪದ್ಯಂಗಳ ನಮ್ಮ ಬೈಲಿನ “ಸ್ನೇಹ ಕೂಟ”ದ ದಿನ ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಹಾಡುತ್ತ ಏರ್ಪಾಟಾಗಲಿ.

    1. ಬೊಳುಂಬು ಮಾವ°,
      [ನೆಗೆಗಾರನ ಈ ಪದ್ಯಂಗಳ ನಮ್ಮ ಬೈಲಿನ “ಸ್ನೇಹ ಕೂಟ”ದ ದಿನ ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಹಾಡುತ್ತ ಏರ್ಪಾಟಾಗಲಿ]

      ಇದು ಅಭಿಪ್ರಾಯ ಒಳ್ಳೆದೇ!! ಆದರೆ, ಆ ದಿನ ಹಾಡುತ್ತ ಏರ್ಪಾಡು ಇದ್ದೋ ಹೇಳಿ ಮೊದಾಲು ಕೇಳಿಕ್ಕಿ. ಹಾಡ್ತಾರೆ ನಮ್ಮ ಕುಡ್ಪಲ್ತಡ್ಕ ಭಾವನೇ ಆಯೆಕ್ಕಟ್ಟೇ. ಅವ ಒಂದು ಗಳಿಗೆಲಿ ತಯಾರು ಮಾಡುಗು ರಾಗ ಹಾಕಿ!! ಅವ° ತಯಾರು ಮಾಡಿ ಹಾಡುಲಪ್ಪಗ ಮತ್ತೆ ನಾಳ್ದು ಬೇರೆ ಕಾರ್ಯಕ್ರಮದ ಒಟ್ಟಿಂಗೆ ಪುರುಸೊತ್ತಿಲ್ಲೇ ಹೇಳಿ ಆದರೆ ಕಷ್ಟ!!!! ಅವ° ಇದರ ಕಲಿತ್ತ ಹೊತ್ತಿಲಿ ನಾಲ್ಕು ಮಕ್ಕೊಗೆ ಸಂಗೀತ ಪಾಟ ಹೇಳಿಕೊಡುಗು!! 😉 😉

  7. “ಧರಣಿ ಮಂಡಲ ಮಧ್ಯದೊಳಗೆ” ರಾಗ ಹಾಕಿ ಓದುಲೆ ಶುರು ಮಾಡಿದೆ… ಮತ್ತೆ ಎಡಿಗಾಯಿದಿಲ್ಲೆ. ಆದರು ಬಿಟ್ಟಿದಿಲೆ ಚೆನ್ನೈಭಾವಯ್ಯ. ಶುರೂವಿಂದ ಅಕೇರಿವರೆಗೆ ಓದಿದೆ. ತಾಳ ..ಟೆಟ್ಟೆಟ್ಟೇ…

    1. ಹಾಂಗೆ ಆಯೆಕ್ಕು ನಿಂಗೊಗೆ. ಆನು ಆ ಧಾಟಿಲಿ ಬರದ್ದಿಲ್ಲೆ ಇದರ ನಿಂಗೊಗೆ. ಬೇರೆ ಒಪ್ಪ ಪದ್ಯಂಗೋ ನಿಂಗೊ ಟ್ರೈ ಮಾಡಿ ಕುಮಾರ ಭಾವ. (ಇದು ಕೇವಲ ನಗೆಗಾಗಿ, – ಅಂತೆ ನಕ್ಕಿ ಬಿಡಿ).

  8. ಮಂಗ್ಲೂರ ಹೋಬಳಿ ಮಧ್ಯಲಿಪ್ಪ
    ದಕ್ಷಿಣಕನ್ನಡ ವ್ಯಾಪ್ತಿಯೊಳವೇ
    ಒಪ್ಪಣ್ಣ ಹೇಳ್ವ ವಿಪ್ರನು.

    ಬಿಡದೆ ತನ್ನ ಕೆಲಸವೆಲ್ಲವ
    ಬಿಡುವಿನೆಡೆಲಿ ಮಾಡಿಗೊಂಡ
    ಒಪ್ಪಣ್ಣ ಹೇಳಿ ಸೈಟಿನ.

    ಶ್ರೀ ಗುರುಗಳ ಕೃಪೆಯ ಫಲದಿ
    ಹತ್ತು ಜನರ ಪ್ರೋತ್ಸಾಹಲ್ಲಿ
    ಮೂಡಿ ಬಂತು ಒಪ್ಪಕೆ.

    ಶುದ್ದಿ ಬರವಲೆ ಮಾತ್ರವಲ್ಲ
    ಬಾಕಿ ಇತರ ನೋಡಿಗೊಂಬಲೂ
    ಸೇರಿಗೊಂಡವು ಬಂಧುಗೋ.

    ಒಪ್ಪಒಪ್ಪಕೆ ಹೆಸರು ಮಡಿಗ್ಯೊಂಡು
    ಚಂದ ಚಂದಕೆ ಬರೆತ್ತ ಇದ್ದವು
    ಮೆಚ್ಚಿಗೊಂಡವು ಕಾರ್ಯವ.

    ಗೆಣಗು ಸುಡುವದರಿಂದ ಹಿಡುದು
    ಖಸಾಯಿ ಖಾನೆ ವರೇಗೆ ಇದ್ದು
    ಹಲವು ಬಗೆಯ ಸುದ್ದಿಗೋ.

    ಭಟ್ಟಮಾವಂದ ತೊಡಗಿ ಇಲ್ಲಿ
    ಸಹಿತ ಬಂಡಾಡಿ ಅಜ್ಜಿ ಪುಳ್ಳಿ
    ಲಾಯಕ್ಕ ಬರೆತ್ತವು ಶುದ್ಧಿಯಾ.

    ಇದು ನವಗೆ ಇದುವೂ ನಮ್ಮದು
    ಗ್ರೇಶಿಗೊಂಡು ಸೇರಿಯೊಂಡವು
    ಖುಷಿಲಿ ನಮ್ಮ ನೆಂಟ್ರುಗೋ.

    ನೋಡಿಬಿಡುವೋ ಅವರ ಶುದ್ಧಿಯ
    ಬರದು ಬಿಡುವೋ ನಮ್ಮ ಶುದ್ಧಿಯ
    ಎತ್ತಿ ಕಟ್ಟುವೋ ಈ ಹವ್ಯಕ.

    ‘ನೆಗೆಗಾರ’ ಹೇಳಿ ಒಬ್ಬ
    ಹೆಸರು ಮಡಿಗ್ಯೊಂಡು ಬರದ ಇಂದು
    ಚತುಷ್ಪದಿ ಹೇಳ್ವ ಏಕಪದಿಯ.

    ಅಷ್ಟಪದಿಯೂ ಸೋಲೆಕು ಇದಕೆ
    ಬರವಲೇಡಿಗೋ ಮೇಲೆ ಇದಕೆ
    ಕೊಟ್ಟೇ ಬಿಡುವ ಒಪ್ಪ ಇದಕ್ಕೆ..

    ವಿ.ಸೂ: ಇದ ಭಾವ, ಇದಕ್ಕೆ ರಾಗ ಇಲ್ಲೆ, ಛಂದಸ್ಸು ಇಲ್ಲೆ, ಅಂದರೂ ಇದು ಎನ್ನ ಪದ್ಯ ಆತೋ. ನೋಡಿ ಎಷ್ಟು ಸುಲಭಕ್ಕೆ ನಿಂಗಳದ್ದೇ ರಾಗಲ್ಲಿ ತಾಳಲ್ಲಿ ಹಾಡ್ಲೆ ಎಡಿತ್ತು. ಬೋಸ ಹೇಳುಗು ಇಲ್ಲೆ ಎಡಿತ್ತಿಲ್ಲೆನ್ನೇ ಹೇದು. ಬೇಡ , ನೋಡ್ವೋ ಭೂಪ ಹೇಳ್ತನೋ ಎಡಿತ್ತು ಹೇಳಿ. ಆರಿಂಗೂ ಎಡಿತ್ತಿಲ್ಯೋ ಬಿಟ್ಟು ಬಿಡಿ – ‘ಎನಗೂ ಬೇಡ – ನಿಂಗೊಗೂ’ ಈ ತಲೆ ಹರಟೆ.

      1. ಅಬ್ಬ!. ನಿಂಗೊ ಒಬ್ಬ ಆದ್ರೂ ಸಿಕ್ಕಿದಿರನ್ನೆ ಎನಗೆ.

    1. ಚೆನ್ನೈ ಭಾವಾ.. ರಾಗ ಸರಾಗ, ತಾಳ ಬೇತಾಳಲ್ಲಿ ಪ್ರಯತ್ನಿಸಿ ನೋಡಿರೆ ಸರೀ ಆವ್ತು.. 😉

      (ತಮಾಶೆಗೆ ಹೇಳಿದ್ದು.. ಇನ್ನು ಬಡಿಗೆ ತೆಕ್ಕೊ೦ಡು ಬ೦ದಿಕ್ಕೆಡಿ.. ಹಾ.. )

  9. ಓಹ್! ಇದೆಂತ ಹೊಸ ಬಗೆ?
    ಅಂಬಗ ಈಗ ಇಂಗ್ಳೀಶ್ ಕಲಿವಲೆ ಇಲ್ಲೆಯಾ?

    ಆಗಲಿ, ಪದ್ಯಂಗೊ ಓದಲೆ ಕೊಶಿ ಆವುತ್ತು. ಚೆನ್ನೈ ಅಣ್ಣಂಗೆ ನೆಗೆ ಬಯಿಂದೋ ಇಲ್ಲೆಯೋ? 🙂

    1. ಚೆನ್ನೈಲಿ ಇಪ್ಪವಂಗೆ ಎಂತಕೆ , ಇಂದ್ರಾಣ ಈ ಸಿಕ್ಷರ್ ಸತ್ತ ಹೆಣಕ್ಕೂ ನೆಗೆ ಬಕ್ಕು ಕಂಡರೆ ಕೇಳಿರೆ . ಹೆ ಹೆ ಹಿ ಹಿ !!

      ಸರಾಗಲ್ಲಿ ಹಾಡ್ಲೆ ಆವ್ತು. ಬೊಳುಂಬು ಭಾವಂಗೆ ಎಷ್ಟು ಕೇಸೆಟ್ಟು ಬೇಕೋ!!

    2. { ಅಂಬಗ ಈಗ ಇಂಗ್ಳೀಶ್ ಕಲಿವಲೆ ಇಲ್ಲೆಯಾ? }
      ಒಪ್ಪಣ್ಣ ಯಾವಗಳೂ ಹಾಂಗೆ, ಆನು ಮಾಡಿದ್ದರ ಒಳ್ಳೆದಾಯಿದು ಹೇಳುಲಿಲ್ಲೆ. ಮಾಡದ್ದರ ಬಾಕಿ ಆಯಿದು ಹೇಳಿಯೇ ಹೇಳುದು. 🙁
      ಎನಗೆ ಪಷ್ಟುಪ್ರೈಸು ಬಂದದಕ್ಕೆ ಹೊಟ್ಟೆ ಉರಿತ್ತಾ? 😉

  10. ನೆಗೆಮಾಣಿ ಲಾಯ್ಕಾ ಆಯಿದು ಪದ್ಯ…
    ಏವ ರಾಗಲ್ಲಿ ಹೇಳೆಕ್ಕೋಳಿ ಗೊಂತಾಯಿದಿಲ್ಲೆ….:)

  11. ನೆಗೆಮಾಣಿ!
    ನೀನು ಕವಿತಾ ಕಾಮಿನಿಯ ಒಲುಸಿದ್ದೆ!!

    1. ಈ ಒಪ್ಪ ಓದಿ ತಲೆತಿರುಗಿದ ಅಜ್ಜಕಾನಬಾವ “ಅದಾರು?” ಹೇಳಿ ಗುಟ್ಟಿಲಿ ಕೇಳಿದ° ನಿನ್ನೆರುಳು ಪೆರ್ಡಾಲಲ್ಲಿ. 😉 😉 😉

  12. ಓಹ್! ಭಾರೀ ಪಷ್ಟಾಯಿದು ಪದ್ಯಂಗೊ! 😀
    ನೆಗೆಗಾರಂಗೂ ಒಂದಿರಳಿಃ

    ನೆಗೆಯ ಗಾರ ಅಜ್ಜಿಮನೆಲಿ
    ಬಿಂಗಿ ಮಾಡಿ ಬಡಿಗೆ ಕಂಡು
    ಓಡಿ ಓಡಿ ಬಂದು ಇಲ್ಲಿ
    ಶುದ್ದಿ ಹೇಳುಗಾ…

  13. ನೆಗೆಮಾಣೀ….!!!!! 🙂 🙂

    ಗುರಿಕ್ಕಾರ್ರು ಇದರ ಓದಿಯೇ ಆದಿಕ್ಕು ಪಷ್ಟುಪ್ರೈಸು ಕೊಡ್ಲಕ್ಕು ಹೇಳಿದ್ದು!!!!!
    ಆರಿಂಗುದೇ ಎಡಿಯಪ್ಪಾ… ನಿನ್ನ ಸೋಲುಸುಲೆ!!! ಲಾಯ್ಕಾಯಿದು ಆತೋ… 🙂

    [ಗ್ಲಾಸುತುಂಬ ಮಿಂದುಗೊಂಡು] ಬೋಸಭಾವಂಗೆ ಇಷ್ಟು ನೀರು ಹೆಚ್ಚಾಗದಾ? 😉

    [ಹೊಳೆಯ ಹಾಂಗೆ ಪದ್ಯ ಬರದು] ಮುಳಿಯ ಭಾವ ಸಣ್ಣ ಹೊಳೆಯಷ್ಟಕೆ ಇಪ್ಪ ಪದ್ಯ ಅಲ್ಲ ಬರವದು.. ಗಂಗಾನದಿಯ ಹಾಂಗಿರ್ತದು!!! ಉದ್ದವೂ, ಅಗಲವೂ,ಆಳವೂ ಆದ ಪದ್ಯಂಗೋ!!!!

    [ಹೆಡ್ಡುಲೈಟು ಹಾಕಿಗೊಂಡು] ದೊಡ್ಡಭಾವನ ಶುದ್ದಿಗ ಎಲ್ಲ ಹೆಡ್ ಲೈಟಿನ ಹಾಂಗೆ ಇರ್ತು!!! ಬೈಲಿಂಗೆ ಬಪ್ಪಗ ಬೈಕ್ಕಿನ ಸ್ಪೀಡೇ ಇರ್ತು ಶುದ್ದಿದುದೇ!! 🙂

    [ಪಿಜ್ಜನಕ್ಕಿದವರ ಕಂಡು] ಅಜ್ಜಕಾನ ಭಾವ ಎಲ್ಲಿ ನೋಡಿದ್ದು? ಒಟ್ಟಿಂಗೆ ತಿಂದಿದನೋ? 😉

    [ಪೀಂಕಿಬಂದ ನೆಗೆಯ ತಡದು] ಬೊಳುಂಬು ಮಾವಂಗೆ ‘ನಗದು’ ಬೋರ್ಡು ಕಾಂಬದಡ್ಡ ನೆಗೆ ಪೀಂಕುಲಪ್ಪಗ!!!

    ಅಪ್ಪೋ ಮಾಣಿ!!!! [ದೊಡ್ಡ ಸೊರದ ಶ್ರೀ ಅಕ್ಕ°]
    ಇದೆಂತದಾ°? ಶ್ರೀ ಅಕ್ಕಂಗೆ ಅಪ್ಪಗ ನಿನ್ನದು ಸೊರ ದೊಡ್ಡ ಆದ್ದದು?
    ಆನು ದೊಡ್ಡ ಸೊರ ತೆಗದ್ದದರ ಕೇಳಿದ್ದೆಯಾ ನೀನು? x-( 😉
    (ಅದು ಬೇಕಾದಲ್ಲಿ, ಬೇಕಾದೋರ ಹತ್ತರೆ ಮಾಂತ್ರ ಅಲ್ಲದಾ ಬಪ್ಪದು? ;-))

    [ಚರ್ಮ ಎಳವ ಹಾಂಗೆ ಬೀಸಿ] ಮಾಡುವ ಕ್ರಮ ಮಾಡೆಕ್ಕಾದ ಹಾಂಗೆ ಮಾಡದ್ದರೆ, ಮಾಡದ್ದೋರ ಚರ್ಮ ಎಳಗು ಅಪ್ಪಚ್ಚಿ. ಅದು ನಿಗಂಟು!!!!!

    [ಕೋಲು ಹಿಡುದ ಮಾಷ್ಟ್ರುಮಾವ°
    ಕಾಲು ಗಂಟೆ ಇಂಗುಳೀಶು
    ಕೇಳುವಾಂಗೆ ಪಾಟಮಾಡಿ]
    ಅಪ್ಪೋ ಮಾಣಿ, ಮಾಷ್ಟ್ರು ಮಾವ° ಎಷ್ಟು ಹೊತ್ತಿಂಗೆ ಮೌನಲ್ಲಿ ಇರ್ತವು, ಅವಕ್ಕೆ ಮಾತಾಡ್ಲೆ ಎಡಿತ್ತಿಲ್ಲೆ ಹೇಳಿ ನೋಡಿ ಇಂಗ್ಳೀಶು ಪಾಠ ಒಪ್ಪುಸುಲೆ ಹೋಪದು ನೀನು!!! ಅವು ಕೇಳುವ ಹಾಂಗೆ ಪಾಠ ಮಾಡುವಾಗ ಯಾವ ಕಳಲ್ಲಿ ಇರ್ತೆ ನೀನು? ಮತ್ತೆ ಅವ್ವು ಕೋಲು ಹಿಡಿಯದ್ದೆ ಇಕ್ಕೋ?? 😉

    [ಚೆನ್ನ ಬೆಟ್ಟು ಅಣ್ಣ ಅಂದು
    ಬೆನ್ನು ಕಾದ ಬೆಶಿಗೆ ಹೆದರಿ] ಅಪ್ಪೋ ಚೆನ್ನಬೆಟ್ಟಣ್ಣ? 😉 😉

    ಅಕೇರಿಯಾಣ ಸೂಚನೆಯ ಸಾಲುಗೋ ತುಂಬಾ ಚೆಂದ ಆಯಿದು ಆತಾ. 🙂 🙂

    ನೆಗೆಮಾಣಿ, ನೀನು ಎಷ್ಟೇ ಪೋಕ್ರಿ ಮಾಡಿ ಕಾಲೆಳದು, ಆರ ಬಗ್ಗೆ ಬರದರೂ ನಿನ್ನ ಮೇಲಿನ ಪ್ರೀತಿ ಹೆಚ್ಚಾವುತ್ತಷ್ಟೇ ಹೊರತು ಕಮ್ಮಿ ಆವುತ್ತಿಲ್ಲೆ ಆತಾ? ತುಂಬಾ ಚೆಂದ ಆಯಿದು ಬರದ್ದದು ನಿನ್ನ ಹಾಂಗೇ!!!
    ಪ್ರತಿಯೊಂದು ಅಕ್ಷರ, ಮಾತ್ರೆಗಳ ಹೊಂದುಸಿ ಬರದ್ದದರಲ್ಲಿ ಮಾತ್ರೆ ಲೆಕ್ಕ ಮಾಡಿ ಕೊಡುವ ಡಾಗುಟ್ರಕ್ಕಳೇ ಸೋಲುಗು!!

    ಬೈಲಿಡೀ ನೆಗೆಲಿ ತೇಲಿತ್ತು ಇಂದು!! ಬರಲಿ ಯಾವಾಗಲೂ ನಿನ್ನ ‘ಲೆಕ್ಕದ’ ನೆಗೆ ಮಾತ್ರೆಗೋ!!! 🙂

      1. ಚೆನ್ನಬೆಟ್ಟಣ್ಣನ ಉಮ್ಮಪ್ಪ.. ಕೇಳಿ,ಬೆನ್ನಿ೦ಗೆ ಬಿದ್ದದು ಬೆಶಿ ಗೊ೦ತಾಯಿದಿಲ್ಲೆ ಹೇಳಿದ್ದೋ ಗ್ರೇಶಿದೆ !

          1. ಕಳ್ಳಾ°..
            ಹೇಳು ಹೇಳು, ಯಾವಗ? ಓ ಮೊನ್ನೆ, ಅದಾ… ರಜೆಯ ಮರದಿನ…. ಢಿಬ್!! 😉 😉 😉
            ನೆಂಪಾತೋ? ಶಬ್ದ ಕೇಳುವಗ ಆಗಿಕ್ಕು, ಅಲ್ದಾ?

    1. ಆನು ಬರದ ಚತುಷ್ಪದಿಲಿ ಹೇಳಿದ್ದರ ನೋಡಿಕ್ಕಿ, ಹೇಳದ್ದರ ಎಲ್ಲ ತಿಳುಶಿಕೊಟ್ಟು ದೊಡಾ ಒಪ್ಪ ಕೊಟ್ಟಿ….
      ಬೊಳುಂಬುಮಾವ ಕೋಪ ಬಂದು ನೆಗೆಮಾಡಿದವದ.
      ಅವು ಕೋಪಲ್ಲೇ ನಿಂಗಳ ಡಾಗ್ಟ್ರುಏಟು ಹೇಳಿದ್ದು …. 🙁

      ಶ್ರೀಅಕ್ಕಂದು ದೊಡ್ಡ ಸೊರವೇ ಅಲ್ಲದೋ?
      ಅದಾ, ಮೊನ್ನೆ ಒಂದರಿ ಬೈಲಿನ ಕಟ್ಟಪುಣಿಲಿ ಜೋರು ಮಾಡಿದ್ದು, ದೊಡಾಕೆ, ಎಲ್ಲೋರಿಂಗೆ ಕೇಳ್ತಹಾಂಗೆ! 🙁 😉

    2. {ಅಜ್ಜಕಾನ ಭಾವ ಎಲ್ಲಿ ನೋಡಿದ್ದು? ಒಟ್ಟಿಂಗೆ ತಿಂದಿದನೋ? ;-)}
      ಶ್ರೀ ಅಕ್ಕ ಎನಗೆ ಹಾಂಗೆ ಹೇಳಿರೆ ಎಂತ ಹೇಳಿಯೇ ಗೊಂತಿಲ್ಲೆ. ಇನ್ನು ತಿಂಬದು ಹೇಂಗೆ.
      ಓ ಅಂದು ಬೆಂಗಳೂರಿಂಗೆ ಹೋಗಿಪ್ಪಗ ಪೆರ್ಲದನ್ನ ಒಂದು ಕನ್ನಟಿ ಹೋಟೆಲಿನ ತೋರಿಸಿ ಅಲ್ಲಿ ಅಂತದ್ದು ಸಿಕ್ಕುತ್ತು ಹೇಳ್ತ ನೆಂಪು.. ಅಪ್ಪೋ..

  14. ಏ ಶುದ್ದಿಕಾರಣ್ಣ, ಒಪ್ಪಣ್ಣ & ಬೈಲಿನ ಹತ್ತು ಸಮಸ್ತರೆ- ಒಂದು ವಿಜ್ಞಾಪನೆ :

    ನಮ್ಮಲ್ಲಿ ಇಟ್ಟು ಒಳ್ಳೆ ಗಟ್ಟಿಗಾರಂಗೋ ಇದ್ದವನ್ನೆ. ಹೀಂಗಿಪ್ಪವರ (ನೆಗೆಗಾರ , ಸುಭಗಣ್ಣ, ರಘು ಭಾವ …etc etc) ಇವರೆಲ್ಲಾ ಹಿಡುದು ಕೂರ್ಸಿ ನಿಶೇಧಾಕ್ಷರಿ ಪದ್ಯ ಬರವಲೆ ಕೇಳಿಕೊಳ್ಳೆಕ್ಕಪ್ಪ.

    ಇದು ಒಂದು ಪುಬ್ಲಿಕ್ ಕಾಂಪಿಟೀಷನ್ ಆಗಿ ಮಾಡಿಕ್ಕೊಂಬೊ. ಹೆಂಗೂ ಬೋಸಣ್ಣ ಪ್ರತ್ಯೇಕ ಪರಿಸು ಕೊಡದ್ದೆ ಬಿಡವು. ಒಪ್ಪ ಇದ್ದರೆ ನಾವೂ ಒಪ್ಪ ಕೊಡುವೋ.

    ಆಲೋಚನೆ ಮಾಡಿ – ಕಾರ್ಯಗತ ಮಾಡಿ.

    1. ಚೆಲ ಈ ಚೆನ್ನೆಯಣ್ಣನ ಕೆಣಿಯೇ.
      ಎಲ್ಲೋರ ಹತ್ತರೆ ಪದ್ಯ ಬರೆಶಿ, ಮತ್ತೆ ಸೆಟ್ಟು ಸೆಟ್ಟು ಕೆಸೆಟ್ಟು ಮಾಡಿ ಬೊಳುಂಬು ಭಾವಂಗೆ ಕೊಡ್ತದು.

      ಆನು ಪದ್ಯ ಬರೆಯೆ. 🙁

      1. ಹೇ., ಇಲ್ಲೇ . ಇದಾಗ ಭಾವ. ಬೊಳುಂಬು ಭಾವಂಗೆ ಕಾಸೆಟ್ಟು ಪ್ರೀ ಗೆ ಆಯೆಕ್ಕಡಾ. ನಮ್ಮಂದಾಗ ಇದು ಅಪ್ಪೋ?!

  15. ಅಪ್ಪೋ ನೆಗೆಗಾರ, ಇಷ್ತು ದಿನ ಹೀಂಗಿಪ್ಪದರ ಕೊಡದ್ದೆ ಸುಮ್ಮನೆ ಕೂದ್ದು ಎಂತಕೆ?
    ಲೈಫ್ ಇಷ್ಟೇನೇ ರಾಗಲ್ಲಿ ಹಾಡಿರೆ ಲಾಯಿಕ ಆವುತ್ತು.

  16. ರಘು ಭಾವ, ಈ ಸರ್ತಿಯಾಣ ಕಪ್ ನೆಗೆಗಾರಣ್ಣ ನ ಕೈಲಿ ಕೊಟ್ಟಿಕ್ಕುವನೋ?

    1. ಹಾ.. ಕಪ್ಪು ಕೋಡುವೊ.. ಅ೦ಬಗ.. ಬೇಳಿ ಗೋಡೆಗೆ ಕೂಡುತ್ತೊ.. ಆಗಲಿ.. 😉

      1. ಇಲ್ಲೆ ಇಲ್ಲೆ. ಇಂದು ನೆಗೆ ಬಯಿಂದು. ದೊಡ್ಡ ಕನ್ನಟಿ ಎದುರು ನಿಂದು ಕನ್ಫರ್ಮ್ ಮಾಡಿಗೊಂಡೆ.

        ಪುಣ್ಯ ., ಹತ್ರೆ ಆರೂ ಇತ್ತಿದ್ದವಿಲ್ಲೆ ನೆಗೆ ಮಾಡ್ವಾಗ.

        1. ಆಚ ಹೊಡೆ ಕಾಣ್ತ ಕನ್ನಾಟಿ ಅಲ್ಲದೋ ಅದು!

          ನಿಂಗೆ ಆಪೀಸಿನ ಗೂಡಿನೊಳದಿಕೆ ತುಂಬ ಹೊತ್ತು ನೆಗೆಮಾಡಿದಿ ಅಡ, ಆಚ ಹೊಡಿಲಿ ಕೂದ ಹೆಮ್ಮಕ್ಕೊ ಬಂದು ಜೋರಿಮಾಡಿ ಅಪ್ಪಗ ನಿಲ್ಲುಸಿದಿರಾಡ.. ಅಪ್ಪೋ……..?
          ಹಾಂಗೊಂದು ಲೊಟ್ಟೆಶುದ್ದಿ, ಅಜ್ಜಕಾನಬಾವ° ಹಬ್ಬುಸಿದ್ದ°.. 🙁 🙁 🙁 🙁

          1. {ಅಜ್ಜಕಾನಬಾವ° ಹಬ್ಬುಸಿದ್ದ°}
            ಅದಾ.. ಅಜ್ಜಕಾನ ಬೈಲಿಂಗೆ ಲಾಗ ಹಾಕಿದ್ದನಿಲ್ಲೆ ಹೇಳಿ ಲೊಟ್ಟೆ ಶುರು ಮಾಡಿದ್ದು.
            ಕೊಡೆಯಾಲಕ್ಕೆ ಹೋಗಿಪ್ಪಗ ಅಂಟಿದ ಕೀಟಾಣುವಿಂದ ಮೈ ಬೆಶಿ ಕಡಮ್ಮೆ ಆಗಿತ್ತಿಲ್ಲೆ ಇದಾ..
            ಇರಳಿ ಚೆನ್ನೈ ಬಾವ.. ನೆಗೆಗಾರ ಕೆಲವು ಸರ್ತಿ ಮಾಷ್ಟ್ರು ಮಾವಂಗೆ ಪಾಠ ಒಪ್ಪಿಸಿದ ಹಾಂಗೆ ಮಾಡ್ತ ಆತೋ..

  17. ವಾಹ ವಾಹ್ ಭಲೇ . ಪ್ರತಿಯೊಂದು ಗೆರೇಲಿಯೂ ಗಮ್ಮತಿದ್ದು.

    ಒನ್ಸ್ ಮೋರ್ ಅಲ್ಲ. ಇನ್ನೂ ಬೇಕು.

    ಕಾದು ಕೂದ್ದು ಸಾರ್ಥಕ ಆತು. ಧಾರವಾಹಿ ಹಾಂಗಿ ಬತ್ತಾ ಇರಲಿ.

  18. ಏ ನೆಗೆಗಾರ ಮಾಣಿ ಬಾರೀ ಪಸ್ಟ್ಟುಆಯಿದು..ಮತ್ತೆ ಗುರಿಕ್ಕಾರ್ರ್ ಹೇಳಿದ ಮತ್ತೆ ಅಪೀಲು ಇಲ್ಲೆ..ಕೊಡುದಂತೂ ನಿನಗೆ..ಈಗ ಮಾಂತ್ರ ಒಂದು ಒಳ್ಳೆ ಒಪ್ಪ ಕೊಟ್ಟಿಕ್ಕುವ..ಆಗದಾ..??

    1. ಹಾ೦ಗೂ ಹೀ೦ಗು.. ಶುದ್ದಿ ಬಯಲು ಮುಟ್ಟಿದ್ದು…
      ಬಯಲಿನೋವು ಎಲ್ಲಾ ಪಿಸುಕ್ಕನೆ ನೆಗೆ ಮಾಡಿದ್ದು…
      ನೆಗೆಗಾರನ ಪದ್ಯ ರೈಸಿದ್ದು.. 😉

      1. ಅಪ್ಪು ಬೋಚ ಭಾವಾ..ನೀನು ಗ್ಲಾಸು ತು೦ಬ ಮಿ೦ದ ಶುದ್ದಿ ಓದಿಯಪ್ಪಗ ನೆಗೆ ಬಾರದ್ದೆ ಇಕ್ಕೋ??

    1. ಸೆಕೆಂಡು ಪ್ರೈಸು ಮುಳಿಯಬಾವಂದಕ್ಕೆ ಕೊಡುಸುತ್ತನ್ನೇ;;; ಇದಕ್ಕೆ ಎಂತ್ಸ ಮಾಡುತ್ಸೂ…….?????????

    1. ನಿಂಗೊ ಶಾಲಗೆ ಹೋಪ ಕಾಲಲ್ಲಿ ಕೋಪಿ ಬರಕ್ಕೊಂಡು ಇದ್ದಿದ್ದಿರೋ?
      ಇಲ್ಲಿಯೂ ಹಾಂಗೆ ಮಾಡಿದಿ, ಅಲ್ಲದೋ?
      ಕೊಶಿ ಆತು 😉

      1. ಹಹ್ಹಾಹ್ಹಾ… ಒಪ್ಪ ಕೊಡ್ಳೆ ಇದರ ನಕಲು ಮಾಡಿ ರೆಡೀ…. ಇತ್ತಿದ್ದೆ. ನಿ೦ಗಳ ಪದ್ಯ ಬ೦ದ ಕೂಡ್ಳೇ ಒಪ್ಪ ಕೊಟ್ಟದೇ….
        ಶಾಲೆಗೆ ಹೋಪಗ ಕೋಪಿ ಬರಕ್ಕೊ೦ಡು ಇತ್ತಿದ್ದೆ.. (ಪರೀಕ್ಷೆಲಿ ಅಲ್ಲ..) ಎನ್ನ ಒಪ್ಪ೦ಗಳಲ್ಲಿ ಇಪ್ಪ ಅಕ್ಷರ ನೋಡಿರೆ ಗೊ೦ತಾವುತ್ತಿಲ್ಯಾ..ಎಷ್ಟು ಉರುಟುರುಟು ಇದ್ದು ನೋಡಿ..
        ನಿಜವಾಗಿ ಹೇಳ್ತರೆ ನಿ೦ಗಳ ಚತುಷ್ಪದಿಗೊ ಭಾರೀ ಲಾಯಿಕಾಯಿದು.. ನಿ೦ಗಲ ಎಲ್ಲಾ ಲೇಖನ೦ಗಳೂ ಒಪ್ಪ೦ಗಳೂ ಎನಗೆ ತು೦ಬಾ ತು೦ಬಾ ಇಷ್ಟ.. ಅದರ ಓದಿ ಫಕ್ಕನೆ ನೆಗೆ ಬಪ್ಪಗ ಎನ್ನ ಫ್ರೆ೦ಡುಗೊ ಮರುಳು ಹಿಡುದತ್ತೋ ಕೇಳ್ತ ಕ್ರಮ ಇದ್ದು..
        ನೆಗೆಗಾರ೦ಗೆ ನೆಗೆಗಾರನೇ ಸಾಟಿ.. (ನೆಗೆಮಾಣಿಯೂ ಆಗದ್ದೆ ಇಲ್ಲೆ..)

  19. ಏ ನೆಗೆಮಾಣೀ,
    ಕಾದು ಕೂದ್ದದಕ್ಕೆ ಸಾರ್ಥಕ ಆತು.

    ನೆಗೆಯೆ ಬ೦ತು ಶುದ್ದಿ ನೋಡಿ
    ಬಗೆಲಿ ಕಾಲಿನೆಳದ ಮೋಡಿ
    ಮುಗುದ ಮೋರೆ ನೆಗೆಯಮಾಣಿ
    ಬರದ ಪದ್ಯವೇ !!!

  20. ಪದ್ಯ ಪಷ್ಟಾಯಿದು.
    ನೆರೆಕರೆಲಿಪ್ಪ ಎಲ್ಲೋರನ್ನುದೆ ಗಾಳಿಗೆ ಹಿಡುದಾಂಗಿದ್ದು 🙂
    (ಮುಳಿಯಬಾವ ಎಷ್ಟೇ ಚೆಂದ ಬರದರೂ ಪಷ್ಟು ಸಿಕ್ಕ, ಬೇಕಾರೆ ಮಾತಾಡಿ ಸೆಕೆಂಡು ಪ್ರೈಸು ಕೊಡುಸುವೆ!)
    ಎಂತ? ಮ್ಯಾಚು ಪಿಕ್ಸಿಂಗಾ?

    1. ಮೇಚೂ ಅಲ್ಲ, ಪಿಸ್ಕೂ ಅಲ್ಲ ಶಾಮಣ್ಣಾ…………
      ಎನಗೆ ಪಷ್ಟು ಪ್ರೈಸು ಹೇಳಿ ಮೊದಲೇ ಗುರಿಕ್ಕಾರ್ರು ಹೇಳಿದ್ದವಲ್ಲದೋ – ಹಾಂಗೆ 😉

      ನಿಂಗಳ ಕೆಮಿ ಎಂಗೊಗೆ ಕಾಣದ್ದರೂ, ಶುದ್ದಿ ನಿಂಗೊಗೆ ಪಷ್ಟು ಕೇಳಿದ್ದಿದಾ..
      ಅದು ಕೊಶೀ ಆತು 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×