ನೆಗೆ ಸುಪ್ರಭಾತ: ಇವು ಬೈಲಿನ ಶುದ್ದಿಲಿ ರೈಸುಗಿದಾ..

June 12, 2011 ರ 6:45 amಗೆ ನಮ್ಮ ಬರದ್ದು, ಇದುವರೆಗೆ 64 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಭಾವಯಾಮಿ ರಘುರಾಮಂ – ಹೇಳಿ ಜೋರು ಪದ್ಯ ಕೇಳಿಗೊಂಡಿತ್ತು, ಮೊನ್ನೆ ಬೈಲಿನ ಕಟ್ಟಪುಣಿಲಿ ನೆಡಕ್ಕೊಂಡೋಪಗ.
ಉದಿಉದಿಯಪ್ಪಗ ಆರಪ್ಪ ಈ ಅಜ್ಜಿಕೆಸೆಟ್ಟು ಹಾಕಿದ ಹೇಳಿ ನೋಡಿರೆ – ಮುಳಿಯಭಾವನ ಮನೆಂದ!
ಅವು ನಿನ್ನೆ ಒಂದು ಭಾಮಿನಿ ಮದುವೆ ಗವುಜಿಯ (ಭೋಜನಕಾಲೇ – 02) ಮುಗುಶಿ, ಬೌಶ್ಷ ನಿದಾನಕ್ಕೆ ಎದ್ದದಾಯಿಕ್ಕು ಗ್ರೇಶಿಗೊಂಡೆ.
ಅವರ ಬಾಮಿನಿ ಚೆಂದ ಇದ್ದು ಹೇಳಿ ಎಲ್ಲೋರಿಂಗೂ ಕೊಶಿ ಆಯಿದು. “ನೆತ್ತರಿಲೇ ಬಂದದಾಯಿಕ್ಕು” – ಹೇಳಿ ಕೇಜಿಮಾವ
° ರಕ್ತಪರೀಕ್ಷೆ ಮಾಡಿ ಧೃಡಮಾಡಿಗೊಂಡವು! 😉

ಅಜ್ಜಿಹೇಳಿದ ಸುಪ್ರಭಾತ ಹೇಳುಲೆ ಎನಗೆ ನಾಲಗೆ ತೆರಚ್ಚುತ್ತಿಲ್ಲೆ. ಎನ್ನದೇ ಒಂದು ಬರದರೆಂತ?
ವಿಶಯ ಎಂತದೂ ಸಿಕ್ಕದ್ದರೆ ಬೈಲಿನೋರ ಬಗ್ಗೆಯೇ ಬರದರಾತು. ಹಾಂಗೆ ಸುರುಮಾಡಿಯೇ ಬಿಟ್ಟೆ.

ನೋಡಿ, ಲಾಯಿಕಾಯಿದು ಹೇಳಿಕ್ಕಿ, ಆತೋ?
(ಇದಾ, ರಾಗಬರುಸುಲೆ ಕೆಲವು ಜೆನರ ಹೆಸರು ರಜ್ಜೆ ವಿತ್ಯಾಸ ಆಯಿಕ್ಕು, ಆದರೆ ಆರ ಹೇಳ್ತದು ಹೇಳಿ ಗುರ್ತ ಗೊಂತಾವುತ್ತು. ಅಷ್ಟು ಸಾಕು ನವಗೆ, ಅಲ್ಲದೋ, ಹಿ ಹಿ!)

ಬೈಲ ಸುಪ್ರಭಾತ:
(ರಾಗ: ಕಮಲಾಕುಚ ಚೂಚುಕ..)

ಮನೆದೇವರ ನೆಂಪಿನ ಮಾಡಿದರೇ
ಸುಬಗಣ್ಣನ ಮೈ ಬೆಶಿ ಏರುಗಿದಾ |
ದಿನನಿತ್ಯವು ದೇವರ ಮಂಕಡುಸೀ
ಇವು ಬೈಲಿನ ಶುದ್ದಿಲಿ ರೈಸುಗಿದಾ || :-) ||

ನೆಗೆನೆಗೆ ಸೂರ್ಯ ಸುಪ್ರಭಾತ ಕೇಳಿದ°

ರಘುಭಾವನ ಕಾಕತ ಓದಿದವೂ
ಹಳೆ ಹೋಷ್ಟೆಲು ವಾರ್ಡನು ಕೋಲೆಜಿಲೀ |
ಶಿವನೇ ಗ್ರಹಚಾರವ ಬೈದರುದೇ
ಇವು ಬೈಲಿನ ಶುದ್ದಿಲಿ ರೈಸುಗಿದಾ || :-) ||

ಬೊಚಬಾವನ ಚೆಂದಕೆ ಮೀಶಿದರೇ
ಕರಿನೀರಿಡಿ ಸಾರಡಿ ತೋಡಿಲಿಯೇ |
ಮದಿಮಾಯನೆ ಅಕ್ಕಿದ ಬಾವನುದೇ
ಇವ° ಬೈಲಿನ ಶುದ್ದಿಲಿ ರೈಸುಗಿದಾ || :-) ||

ಬೆಶಿಬೇಸಗೆ ಆಸರ ನಿಲ್ಲುಸಲೇ
ಚೆನೆಭಾವನ ಬೊಂಡದ ಅಂಗುಡಿಯೂ |
ದಿನನಿತ್ಯವು ಒಳ್ಳೆಯ ಕಾಯಿಸಿಲೀ
ಇವು ಬೈಲಿನ ಶುದ್ದಿಲಿ ರೈಸುಗಿದಾ || :-) ||

ಮಳೆಗಾಲವು ಬಂದರೆ ಬೈಲಿಲಿಯೇ
ಹೆರಟತ್ತಿದ ಬಟ್ಯ° ಕಿಡಿಂಜೆಲಿಲೇ |
ತರವಾಡಿನ ತೋಟದ ಕಾರ್ಯದೊಳಾ
ಇದು ಬೈಲಿನ ಶುದ್ದಿಲಿ ರೈಸುಗಿದಾ || :-) ||

ಮಗುಮಾವನ ಬೈಕಿಲಿ ಕೂಪ ಕೆಣೀ
ಅಜಕಾನದ ಮಾಣಿಗೆ ಬಾರಿಕೊಶೀ |
ಅನುಪತ್ಯದ ಊಟವ ತಪ್ಪುಸದೇ
ಇವ° ಬೈಲಿನ ಶುದ್ದಿಲಿ ರೈಸುಗಿದಾ || :-) ||

ದೊಡಬಾವನ ಶಾಲೆಲಿ ಗಂಟೆಯುದೇ
ಎಡೆಡೇಲಿ ಪರಂಚುವ ಅಜ್ಜಿಯುದೇ |
ಕಲಿಶುತ್ತ ಕಲಿತ್ತ ಸರಸ್ವತಿಯೇ –
ಇವು ಬೈಲಿನ ಶುದ್ದಿಲಿ ರೈಸುಗಿದಾ || :-) ||

ಅಡುಕತ್ತಿಯ ಮಾರಿನ ಮಾವನುದೇ
ಶರುಮಪ್ಪಚಿ ಸಿಕ್ಕಿದವೊಂದುದಿನಾ|
ನೆಗೆಮಾಣಿಯ ಕಂಡರೆ ಜೋರುನೆಗೇ
ಇವು ಬೈಲಿನ ಶುದ್ದಿಲಿ ರೈಸುಗಿದಾ || :-) ||

ಉದಿಯಪ್ಪಗ ಹೇಳುವ ರಾಗದೊಳಾ
ನೆಗೆಮಾಣಿಯ ಪದ್ಯವ ಕೇಳಿದಿರೋ |
ಪ್ರತಿಯೊಬ್ಬನು ಎದ್ದವು ಬೈಲಿನೊಳಾ
ಇವು ಬೈಲಿನ ಶುದ್ದಿಲಿ ರೈಸುಗಿದಾ || :-) ||

ದಿನಾಲೂ ಉದೀಲೀ ಇದೊಂದೂ ಪ್ರಭಾತಾ |
ಭಕುತ್ತೀಲಿ ಹೇಳೀ ಇ ಬೈಲೀನೊರೆಲ್ಲಾ ||
ಲಡಾಯೀ-ಬಡಾಯೀ ಇದೊಂದೂ ಇಲಿಲ್ಲೇ
ಬೆಳೇಕೂ ಇ-ಬೈಲೂ ತಮಾಶೇ ಕೊಶಾಲೂ || :-) ||

~**~ಇಂದ್ರಾಣದ್ದು ಉದಿಯಾತು, ಇನ್ನೊಂದರಿ ನೋಡುವೊ°~**~

ಗಮನುಸಿಕ್ಕಿ:

 • ಇದು ಕೇವಲ ಕೊಶಾಲಿಂಗೆ ಮಾಂತ್ರ. ಆರಾರು ಪರಂಚಿರೆ ಆ° ಕೇಳೆ.
 • ಹೇಳಿರೆ ನಂಬೆಯಿ ನಿಂಗೊ, ಸುಪ್ರಭಾತ ಇಡೀ ಸಗಣ..!
  ಅಪ್ಪು – ಇಡೀ ಸುಪ್ರಭಾತಲ್ಲಿ ’ಸ’ಗಣ (ಸಲಗಂ) ಬರೇಕಡ, ಮುಳಿಯಭಾವ° ಹೇಳಿತ್ತಿದ್ದವು.
 • ಬಾಕಿ ಒಳುದೋರ ಶುದ್ದಿ ಬರೆತ್ತಿರೋ ನಿಂಗೊ ಆರಾರು? ಎನಗೆ ಇಂಗ್ಳೀಶು ಕಲಿವಲೆ ಹೋಪಲಿದ್ದು. :-)

~
ನೆಗೆನೆಗೆಮೋರೆಯ
ನೆಗೆಮಾಣಿ

ನೆಗೆ ಸುಪ್ರಭಾತ: ಇವು ಬೈಲಿನ ಶುದ್ದಿಲಿ ರೈಸುಗಿದಾ.. , 5.0 out of 10 based on 5 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 64 ಒಪ್ಪಂಗೊ

 1. ಬಂಡಾಡಿ ಅಜ್ಜಿ
  ಬಂಡಾಡಿ ಅಜ್ಜಿ

  ದೊಡ್ಡಪುಳ್ಳಿಗೆ ಪರೀಕ್ಷೆ ಮುಗಿಯದ್ದೆ ಬೈಲಿಂಗೆ ಬಪ್ಪಲೇ ಎಡಿಗಾತಿಲ್ಲೆ ಅದ… ನೆಗೆಮಾಣಿ ಎಂತೆಲ್ಲ ಕಾರ್ಬಾರು ಮಾಡಿದನೊ ಅರಡಿಯ… ಇದೆಂತರ ಸುಪ್ರಭಾತ ಹೇಳಿಗೊಂಡು ಕೂದ್ದದೋ.. ಅವ ಏಳೊಗ ಮದ್ಯಾನದ ಬೆಂದಿ ಮಾಡಿ ಆಗಿರ್ತಡಪ್ಪ ಶಾಂತಕ್ಕಂಗೆ… ಮತ್ತೆ ಈ ಸುಪ್ರಭಾತ ಹೇಳಿಕ್ಕಿ ಮಾಷ್ಟರಣ್ಣನಲ್ಲಿಗೆ ಎತ್ತೊಗ ಅವು ಉಂಡು ಒರಗಿರ್ತವೊ ಎಂತೊ.. ಅಂತೂ ಕಲಿವದು ಬಾಕಿಯೇ.. ಹಪ್ಪಾ ಮಾಣಿ, ನಿನಗೆ ಪರೀಕ್ಷೆ ಎಲ್ಲ ಎಂತೂ ಇಲ್ಲೆಯೋ..?
  ಅಂದರೂ ಪದ್ಯ ಲಾಯಿಕಾಯಿದಪ್ಪ.. ಇದನ್ನಾದರೂ ನೇರ್ಪಕ್ಕೆ ಕಲುತ್ತರಕ್ಕೇ…

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°

  ಪೋಕ್ರಿ ನೆಗೆ ಮಾಣಿ,

  ಒಂದು ಹೊಸ ಸುಪ್ರಭಾತ ಬರದೆ. ಬಹುಶ ನಾವೆಲ್ಲ ಅಜ್ಜಿಯ ಸುಪ್ರಭಾತಕ್ಕೆ ಎಷ್ಟು ಒಗ್ಗಿ ಹೋಯಿದು ಹೇಳಿದರೆ ಬೇರೆ ಸುಪ್ರಭಾತ ಬರವಲಕ್ಕು ಹೇಳಿದೇ ಯೋಚನೆ ಮಾಡಿದ್ದಿಲ್ಲೆ. ಅದರನ್ನೂ ಮಾಡಿದೆ ನೀನು!! ಇದನ್ನೇ ಅಲ್ಲದಾ ಹೇಳುದು ಆಡ್ತಾ ಆಡ್ತಾ ಕಲಿವದು ಹೇಳಿ!!! ‘ಸ’ಗಣದ ಸುಪ್ರಭಾತ ತುಂಬಾ ಲಾಯ್ಕಾಯಿದು ಆತೋ.

  ನೀನು ಇನ್ನು ಈ ಸುಪ್ರಭಾತವ ಪೂರ್ತಿ ಮಾಡಿಕ್ಕಿಯೇ ಇಂಗ್ಳೀಷು ಕಲ್ತರೆ ಸಾಕು. ಅಲ್ಲದ್ದರೂ ಈಗ ದಿನ ಸುಮಾರಾಗಿ ದಿಕಿಶ್ಣರಿ ಬೂಸರು ಬಯಿಂದೋ ಏನೋ? ಅಲ್ಲದ್ದರೆ ಒರಗಿದ ಪುಚ್ಚೆ ಅದರ ತಲೆ ಅಡಿಯಂಗೆ ಮಡಗಿಕ್ಕು. ಅಕೇರಿ ಅಕ್ಷರವೂ ಕಲ್ತದು ಯೇವುದು ಹೇಳಿ ಮರದಿಕ್ಕು ಈಗ!!!

  ರಘು ಭಾವಂಗೆ ನೆಂಪು ಮಾಡಿದ್ದದಾ ‘ರಘು ರಾಮಾಯಣ’ ಬರವಲೆ? 😉 ಹಾಂಗಾದರೂ ಬರವಲೆ ಸುರು ಮಾಡಲಿ..

  [Reply]

  VN:F [1.9.22_1171]
  Rating: +1 (from 1 vote)
 3. ಮೋಹನಣ್ಣ

  ಶ್ರೀಗಳೇ ಹರಸಿ ಆಶೀರ್ವದಿಸಿದ ಮತ್ತೆ ಇನ್ನೆ೦ತರ ಬೆರೆ ಸರ್ಟಿಪಿಕೇಟು ಬೇಡ.
  ಅ೦ದರೂ ನೆಗೆಗಾರಮಾಣಿ ಎ೦ಗಳ ಊರಿಲ್ಲಿ ’ಮದಲಿ೦ಗೆ ಒ೦ದು ಬ೦ಟನ ಮಗ° ಇ೦ಗ್ಲೀಷು ಕಲ್ತ ಹಾ೦ಗೆ’ ಆಗದ್ದೆ.
  ಹೇಳೀರೆ, ಬ೦ಟ ಮಗನ ಕೋಲೇಜಿ೦ಗೆ ಕಳುಸಿತ್ತದ. ಮಗ° ಆವರೆಗೆ ಕನ್ನಡಲ್ಲಿ ಕಲ್ತದು ನಮ್ಮ ಹಾ೦ಗೆ.
  ಕೋಲೇಜಿ೦ಗೆ ಹೋದ ಮಗ° ನಾಲ್ಕು ತಿ೦ಗಳು ಮನಗೆ ಬೈ೦ದಿಲ್ಲೆ. ಮತ್ತೆ ಬಪ್ಪಗ ಪೇ೦ಟು ಸೂಟು ಬೂಟ್ಸು ಎಲ್ಲ ಆತು, ಕೈಲಿ ಸಿಗ್ರೇಟು.
  ಅಪ್ಪ° ಕೇಳಿರೆ ’ಕೋಲೇಜುಕು ಪೋನಕ ಅವ್ವು ಮಾ೦ತ ಬೋಡು’ ಹೇಳಿತ್ತು. ಅಪ್ಪ° ’ಅ೦ದ ಮಗ?’ಹೇಳಿ ಒಪ್ಪಿಯೊ೦ಡತ್ತು.

  ಅ೦ಬಗ ದಾರಿಗೊ ಎಲ್ಲ ಈಗಾಣ ಹಾ೦ಗಲ್ಲದ. ಕಟ್ಟಪ್ಪುಣಿಗೊ ಜಾರ್ಕಟೆ ದಾರಿಗೊ. ಮಗನ ಕರಕ್ಕೊ೦ಡು ಬ೦ಟ° “ಒರ ಬಟ್ರೆ ಆಡೆಕು ಪೋವೋಡು. ಆರ್ನ ಮಗೆ ಮಾ೦ತ್ರ ಅತ್ತು, ಎನ್ನ ಮಗೆಲಾ ಇ೦ಗ್ಲಿಷು ಕಲ್ಪುವೆ- ಎ೦ದು ತೋಜಾವೋಡು” ಹೇಳಿ ಬ೦ಟೆತ್ತಿ ಹತ್ರೆ ಹೇಳಿಕ್ಕಿ ಹೆರಟತ್ತು.
  ದಾರೀಲಿ ಮಗನತ್ರೆ ’ಅ೦ದ ಮಗ ಈ ಕಟ್ಟಪ್ಪುಣಿಕ್ಕು ಇ೦ಗ್ಲೀಷುಟು ದಾದ ಪನ್ಪೇರು?’ ಹೇಳಿ ಕೇಳಿತ್ತು.
  “ಅವ್ವು ದಾಲ ಇಜ್ಜಿ ಅಮ್ಮ.. (ತುಳುವರು ಅಬ್ಬೆಯ ಅಪ್ಪ° ಹೇಳಿಯೂ ಅಪ್ಪನ ಅಮ್ಮ ಹೇಳಿಯು ಹೇಳುವದು – ಅಳಿಯ ಕಟ್ಟಲ್ಲದೊ!)
  ಕಾಟ್-ಪುಣಿ ಎ೦ದು ಪ೦ಡು೦ಟ ಆ೦ಡು” ಹೇಳಿತ್ತು.

  ’ಅ೦ದ ಮಗ, ಆಪಗ ಈ ಲತ್ತು ಬಜಯಿಕು ದಾದಾ ಪನ್ಪುನೆ?’ ಹೇಳಿ ಕೇಳಿತ್ತು.
  ’ಅವ್ವು ಇ೦ಚನೆ – ಲಾತ್ ಬಜಾಯಿ ಎ೦ದು ಪ೦ಡು೦ಟ ಆ೦ಡು’ ಹೇಳಿತ್ತು.

  ಅಪ್ಪ೦ಗೆ ಕೊಶಿಯೋ ಕೊಶಿ ಸೀದ ಬಟ್ರಲ್ಲಿ ಹೋಗಿ ಮಗನ ಇ೦ಗ್ಲೀಷಿನ ವಿವರ್ಸಿದ್ದೆ ವಿವರ್ಸಿದ್ದು.
  ಅ೦ತೂ ನೀನೂದೆ ಹಿ೦ಗೆಲ್ಲ ಕಲಿಯೇಡ ಹೇಳಿ ತಾತ್ಪರ್ಯ.
  ಒಪ್ಪ೦ಗಳೊಟ್ಟಿ೦ಗೆ.

  [Reply]

  VA:F [1.9.22_1171]
  Rating: 0 (from 0 votes)
 4. ಪೆಂಗ

  ನಮ್ಮ ಶುದ್ದಿ ಇಲ್ಲೆ ಬಚಾವ್! ಅಲ್ಲದೋ ಗೆಂಟು ಬಾವ!

  [Reply]

  VA:F [1.9.22_1171]
  Rating: 0 (from 0 votes)
 5. shobhalakshmi

  ha ha ha ha ………….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ಮುಳಿಯ ಭಾವಪುಣಚ ಡಾಕ್ಟ್ರುಡಾಗುಟ್ರಕ್ಕ°ಬಟ್ಟಮಾವ°ಶ್ರೀಅಕ್ಕ°ನೆಗೆಗಾರ°ವೇಣಿಯಕ್ಕ°ಅನು ಉಡುಪುಮೂಲೆಶ್ಯಾಮಣ್ಣಅಕ್ಷರ°ವೇಣೂರಣ್ಣವಿನಯ ಶಂಕರ, ಚೆಕ್ಕೆಮನೆಪ್ರಕಾಶಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಪವನಜಮಾವಪೆರ್ಲದಣ್ಣಪೆಂಗಣ್ಣ°ಪುತ್ತೂರಿನ ಪುಟ್ಟಕ್ಕದೊಡ್ಮನೆ ಭಾವಮಾಲಕ್ಕ°ನೀರ್ಕಜೆ ಮಹೇಶಮಾಷ್ಟ್ರುಮಾವ°ಪಟಿಕಲ್ಲಪ್ಪಚ್ಚಿಚೆನ್ನಬೆಟ್ಟಣ್ಣಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ