ನೆಗೆ ಚಟಾಕಿಗೊ

July 24, 2014 ರ 10:30 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

1. ಎಡಿಯದ್ದೆ ಆದಿಪ್ಪಗ ಡಾಕ್ಟ್ರಲ್ಲಿಂಗೆ ಹೋಪಲಾಗ, ಇಂಗ್ಲೀಶು ಮದ್ದುಗಳ ತೆಕ್ಕೊಂಬಲಾಗ ಹೇಳಿ ಪುಟ್ಟಣ್ಣ ಎಲ್ಲೋರ ಹತ್ತರೆ ಹೇಳ್ಯೊಂಡಿತ್ತಿದ್ದ°. ಒಂದು ದಿನ ಅವ° ಡಾಕುಟ್ರಲ್ಲ್ಯಂಗೆ ಹೋದ°. ಮದ್ದಿನ ಚೀಟು ಹಿಡ್ಕೊಂಡು ಮದ್ದಿನ ಅಂಗಡಿಂದ ಮಾತ್ರೆಗಳ ತೆಕ್ಕೊಂಡು ಬಂದು ಮಾತ್ರೆಗಳ ತೆಗದ್ದು ಹೆರ ಇಡುಕ್ಕಿದ°. ಅದರ ನೋಡಿದ ಹತ್ತರಾಣ ಮನೆಯ ಕಿಟ್ಟಣ್ಣಂಗೂ ಪುಟ್ಟಣ್ಣಂಗೂ ಆದ ಸಂಭಾಷಣೆ ಹೀಂಗೆ ಇತ್ತಿದ್ದು –

ಕಿಟ್ಟಣ್ಣ° – ಇಂಗ್ಳೀಶು ಮದ್ದುಗಳ ತಿಂಬಲಾಗ ಹೇಳ್ವ ನೀನು ಆ ಡಾಕುಟ್ರನತ್ರಂಗೆ ಹೋದ್ದೆಂತಕ್ಕೆ?nege chatakigo
ಪುಟ್ಟಣ್ಣ° – ಡಾಕ್ಟ್ರ ಬದುಕ್ಕೆಡದೋ?
ಕಿಟ್ಟಣ್ಣ° – ಆತು, ಡಾಕ್ಟ್ರನ ಬದುಕ್ಕಸಲೇಳಿ ಹೋದೆ., ಮತ್ತೆ ಮದ್ದು ತಿನ್ನದ್ದಮತ್ತೆ ಮದ್ದಿನಂಗಡಿಂದ ಮದ್ದು ತೆಕ್ಕೊಂಡದೆಂತದಕೆ?!
ಪುಟ್ಟಣ್ಣ° – ಮದ್ದಿನ ಅಂಗಡಿಯಂವ ಬದುಕ್ಕೆಡದೊ?
ಕಿಟ್ಟಣ್ಣ° – ಮದ್ದು ತಂದೆ, ತಂದ ಮದ್ದಿನ ತಿನ್ನದ್ದೆ ಇಡ್ಕಿದೆಂತದಕ್ಕೆ?
ಪುಟ್ಟಣ್ಣ° – ಆನು ಬದುಕ್ಕೆಡದೋ ಮಾರಾಯ!! 😀

2. ಒಂದು ಕಾರ್ಟೂನು (ನೆಗೆಚಿತ್ರ) ಹೀಂಗಿತ್ತು –
ಒಂದ್ನೆ ಚಿತ್ರ – ದೇವಸ್ಥಾನದ ಮುಂಭಾಗ – ಪೂಜೆಯ ಅರ್ಚಕ ದೇವಸ್ಥಾನದ ಒಳ ಹೋಪ ದೃಶ್ಯ
ಎರಡ್ನೆ ಚಿತ್ರ – ದೇವಸ್ಥಾನದ ಹಿಂಭಾಗ – ದೇವರು ದೇವಸ್ಥಾನಂದ ಹೆರಹೋವುತ್ತ ದೃಶ್ಯ
ಮೂರ್ನೆ ಚಿತ್ರ – ದೇವಸ್ಥಾನದ ಮುಂಭಾಗ – ಅರ್ಚಕ ಪೂಜೆಮುಗಿಶಿಕ್ಕಿ ದೇವಸ್ಥಾನಂದ ಹೆರ ಹೋವುತ್ತ ದೃಶ್ಯ
ನಾಲ್ಕನೆ ಚಿತ್ರ – ದೇವಸ್ಥಾನದ ಹಿಂಭಾಗ – ದೇವರು ದೇವಸ್ಥಾನದ ಒಳ ಹೋಪ ದೃಶ್ಯ 😀

3. ಇನ್ನೊಂದು ಕಾರ್ಟೂನು ಹೀಂಗಿತ್ತು
ಒಂದನೆ ಚಿತ್ರ – ದೊಡ್ಡದೊಂದು ಹೋಟೆಲು. ಸಾಲುಗಟ್ಟಿ ಜೆನಂಗೊ ಹೋಟೆಲಿಂಗೆ ಹೋಪ ದೃಶ್ಯ
ಎರಡ್ನೆ ಚಿತ್ರ – ಹೋಟೆಲಿನ ಹಿಂಭಾಗಂದ ಜೆನ ಹೆರಹೋಪ ದೃಶ್ಯ
ಮೂರ್ನೆ ಚಿತ್ರ – ಜೆನಂಗೊ ಹತ್ರೆ ಇಪ್ಪ ಆಸ್ಪತ್ರಗೆ ಹೋಪ ದೃಶ್ಯ
ನಾಲ್ಕನೆ ಚಿತ್ರ – ಜೆನಂಗೊ ಆಸ್ಪತ್ರೆಂದ ಹೆರ ಹೋಪ ದೃಶ್ಯ
ಐದನೆ ಚಿತ್ರ – ದೂರಲ್ಲಿಪ್ಪ ಸ್ಮಶಾನದತ್ತಂಗೆ ಜೆನ ಹೋಪ ದೃಶ್ಯ 😀

4. ಸೀರೆ ಅಂಗಡಿಗೆ ಹೋದ ಹೆಮ್ಮಕ್ಕೊ – “ಬೆಳಿ ಸೀರೆ ಕೊಡಿ ಹೇಳಿರೆ ನಿಂಗೊ ಬಣ್ಣದ ನಿಂಗೊ ಬಣ್ಣ ಬಣ್ಣದ ಸೀರೆಗಳನ್ನೇ ತೋರುಸುತ್ತಾ ಇದ್ದಿರನ್ನೇ!
ಅಂಗಡಿಯವ° – ಎರಡು ಸರ್ತಿ ನೀರಿಲ್ಲಿ ಅದ್ದಿ ತೆಗದು ನೋಡಿ. ಸೀರೆ ಬೆಳಿ ಆಗದ್ದರೆ ಅದರ ಆನು ವಾಪಾಸು ತೆಕ್ಕೊಂಡು ನಿಂಗಳ ಪೈಸೆ ಹಿಂದೆ ಕೊಡುತ್ತೆ 😀

5. ಅಂಗಡಿಂದ ಪೈಸೆ ಕೊಟ್ಟು ಸೈಕಲ್ಲು ತೆಕ್ಕೊಂಡವ° – ಸೈಕಲ್ಲು ತೆಕ್ಕೊಂಬಗ ಎಂತಾರು ಮುರುದರೆ ರಿಪೇರಿಮಾಡಿ ಕೊಡುತ್ತೆ ಹೇಳಿ ನೀನು ಹೇಳಿದ್ದನ್ನೆ!
ಅಂಗಡಿಯವ° – ಎಂತಾರ ಮುರುದ್ದು? ಹೇಳು.
ಸೈಕಲ್ಲು ತೆಕ್ಕೊಕ್ಕೊಂಡವ° – ಎನ್ನ ಸೊಂಟದ ಎಲುಬು. 😀

6. ಡಾಕ್ಟ್ರನ ಕೈಂದ ಅಜ್ಜಿಗೆ ಮದ್ದು ತೆಕ್ಕೊಂಡು ಹೋದ ರಾಮಣ್ಣ° ಮರದಿನ ಓಡಿಗೊಂಡು ಬಂದ°.
ಡಾಕ್ಟ್ರೇ.. ಡಾಕ್ಟ್ರೇ!, ನಿಂಗೊ ಮದ್ದು ತೆಕ್ಕೊಂಬ ಮದಲು ಕುಲುಕ್ಕುಸೆಕ್ಕು ಹೇಳಿದ ಹಾಂಗೆ ಮದ್ದು ಕೊಡುವ ಮದಲು ಸರೀ ಕುಲುಕ್ಕಿಸಿದ್ದೆ. ಅಂದರೂ ಅಜ್ಜಿಗೆ ಜೋರಾಯಿದು.
ಡಾಕ್ಟ್ರ° – ಎಂತಾರ ಕುಲುಕ್ಕಿಸಿದ್ದು ?
ರಾಮಣ್ಣ° – ಅಜ್ಜಿಯ ಸರೀ ಕುಲುಕಿಸಿ ಮದ್ದು ಕೊಟ್ಟಿದೆ 😀

7. ಒಬ್ಬ° ಗಿರಾಕಿ ಒಂದು ಸ್ಟೇಶನರಿ ಅಂಗಡಿಗೆ ಹೋಗಿ ಕೇಳಿದ° – ಟೂತ್ ಪೇಶ್ಟ್ ಇದ್ದೋ?
ಅಂಗಡಿಯವ° – ಇಲ್ಲೆ
ಗಿರಾಕಿ – ಟೂತ್ ಬ್ರೆಶ್ ಇದ್ದೋ?
ಅಂಗಡಿಯವ° – ಇಲ್ಲೆ
ಗಿರಾಕಿ – ಫೇಸ್ ಪೌಡರ್ ಇದ್ದೋ?
ಅಂಗಡಿಯವ° – ಇಲ್ಲೆ
ಗಿರಾಕಿ – ಹೋಗಲಿ, ಹೇರ್ ಆಯಿಲ್ ಇದ್ದೋ?
ಅಂಗಡಿಯವ° – ಇಲ್ಲೆ.
ಗಿರಾಕಿ – ಇಲ್ಲೆಯೋ, ಸ್ನೋ, ಸಾಬೂನು, ಹಣಿಗೆ, ಕನ್ನಾಟಿ, ಪೆನ್ನು ಪೆನ್ಸಿಲು ಏವದಾರೂ ಇದ್ದೋ?
ಅಂಗಡಿಯವ° – ಏವದೂ ಇಲ್ಲೆ
ಗಿರಾಕಿ – ಸರಿ, ಬೀಗ ಆದರೂ ಇದ್ದೋ?
ಅಂಗಡಿಯವ° – ಹ್ಹಾಂ°.. ಹೇಳಿದಾಂಗೆ ಬೀಗ ಇದ್ದು
ಗಿರಾಕಿ – ಹಾಂಗಾರೆ ಕೂದ್ದೆಂತಕೆ?!, ಅಂಗಡಿಗೆ ಬೀಗ ಹಾಕಿ ಮನಗೆ ಹೋಪಲಕ್ಕನ್ನೆ?! 😀

8. ಪುಸ್ತಕ ಮಾರಾಟಗಾರ° – ಈ ಪುಸ್ತಕ ನಿನ್ನ ಅರ್ಧ ಕೆಲಸವ ಕಮ್ಮಿ ಮಾಡುತ್ತು.
ಗಿರಾಕಿ – ಹಾಂಗಾರೆ ಎರಡು ಪುಸ್ತಕ ಕೊಡು. 😀

9. ರಾಮಣ್ಣಂಗೆ ಕೆಲವು ಶಬ್ದಂಗಳ ಅರ್ಥ ನೋಡ್ಳೆ ಶಬ್ದಕೋಶ ಬೇಕಾತು. ಹತ್ತರಾಣ ಮನೆಲಿಪ್ಪ ಈಶ್ವರಣ್ಣನ (ಜಿಗುಟು ಅಸಾಮಿ) ಹತ್ತರೆ ಹೋಗಿ – “ಒಂದಾರಿ ಶಬ್ದಕೋಶ ಬೇಕಾತನ್ನೆ, ಕೊಡುವಿರೊ?!, ನಾಳ ವಾಪಸು ಕೊಡುವೆ” ಹೇಳಿ ಕೇಳಿದ°
ಅದಕ್ಕೆ ಈಶ್ವರಣ್ಣ° – “ಶಬ್ದಕೋಶ ಕೊಡ್ಳಕ್ಕು, ಆದರೆ ಒಂದು ಶರತ .. – ಅದರ ಇಲ್ಲೇ ಉಪಯೋಗಿಸಿ ಮಡುಗಿಕ್ಕಿ ಹೋಯೆಕ್ಕು“ – ಹೇಳಿದ°
ಎಲ ಕತೆ ಆತನ್ನೇ! ಎಂತ ಮಾಡುದು?! – ರಾಮಣ್ನಂಗೆ ಅಗತ್ಯ ಆದ ಕಾರಣ ಅಲ್ಲೇ ಕೂದು ಬೇಕಾದ ಪದಂಗಳ ಅರ್ಥವ ನೋಡಿ ಬರಕ್ಕೊಂಡು ಬಂದ°.
ಮತ್ತೊಂದರಿ ಈಶ್ವರಣ್ಣನ ಹೆಂಡತ್ತಿ ಮಕ್ಕೊ ಊರಿಂಗೆ ಹೋಗಿತ್ತಿದ್ದವು. ಮನೆಲಿ ತುಂಬ ಕಸವು ತುಂಬಿದ್ದು, ಒಂದಾರಿ ಉಡಿಗಿಕ್ಕುವೊ° ಹೇಳಿ ಗ್ರೇಶಿರೆ ಹಿಡಿಸೂಡಿ ಅಲ್ಲಿ ಕಂಡತ್ತಿಲ್ಲೆ. ಹಿಡಿಸೂಡಿ ರಾಮಣ್ಣನ ಮನೆಲಿಕ್ಕು ಹೇಳಿ ಅಲ್ಲಿಗೆ ಹೋಗಿ “ಒಂದಾರಿ ಹಿಡಿಸೂಡಿ ಕೊಡುವೆಯೋ ರಾಮಣ್ಣ°” ಹೇಳಿ ಕೇಳಿದ°.
ಅದಕ್ಕೆ ರಾಮಣ್ಣ° ಹೇಳಿದ° – “ಧಾರಾಳ ಹಿಡಿಸೂಡಿ ಕೊಡ್ಳಕ್ಕು., ಆದರೆ ಒಂದು ಶರತ – “ಇಲ್ಲೇ ಉಪಯೋಗುಸಿ ಮಡಿಗಿಕ್ಕಿ ಹೋಯೆಕ್ಕು”
ಈಶ್ವರಣ್ಣ° – !!!!
(ಈಶ್ವರಣ್ಣಂಗೆ ತಲಗೆ ಎರದ್ದು ಕಾಲಿಂಗೆ ಇಳುದಾಂಗೆ ಆತು) 😀

10. ಕ್ಷೌರಿಕ° ತಲೆಕುಚ್ಚಿ ತೆಗೆಶಲೆ ಬಂದು ಕೂದ ಗಿರಾಕಿ ಹತ್ತರೆ – “ಹೇರ್ ಕಟ್ಟಿಂಗ್ ಹೇಂಗೆ ಮಾಡಲಿ?” ಹೇಳಿ ಕೇಳಿದ°
ಅದಕ್ಕೆ ಗಿರಾಕಿ ಹೇಳಿದ° – “ಒಂದಕ್ಷರವನ್ನೂ ಮಾತಾಡದ್ದೆ ಬಾಯಿಮುಚ್ಚಿಯೊಂಡು ಮಾಡು” 😀

***

ನೆಗೆ ಚಟಾಕಿಗೊ
[ ಸಂಗ್ರಹ : ಅರ್ತಿಕಜೆ ಮಾವ° ]
***

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. K.Narasimha Bhat Yethadka

  ನೆಗೆ ಚಟಾಕಿ ಚಟಚಟನೆ ನೆಗೆಯ ಸ್ಫೋಟಿಸಿತ್ತು.

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಹರೇರಾಮ, ಅರ್ತಿಕಜೆ ಮಾವನ ಕಿಸೇಲಿ ತುಂಬ ಒಳ್ಳೊಳ್ಳೆ ನೆಗೆ ಚಟಾಕಿ ಇದ್ದನ್ನೇ ಲಾಯಿಕಿದ್ದು ಎಡಿಯದ್ದೆ ಅಪ್ಪಗ ಡಾಕುಟ್ರ ಮದ್ದು ತಿಂದಪ್ಪಗ ಹೀಂಗಿದ್ದು ಬೇಕೇ ಬೇಕು.

  [Reply]

  VN:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಪಷ್ಟಿದ್ದು

  [Reply]

  VN:F [1.9.22_1171]
  Rating: 0 (from 0 votes)
 4. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ನಗೆ ಚಾಟಕಿ ಹೇ೦ಗಿರೇಕು ಹೇಳುವದಕ್ಕೆ ಒಳ್ಳೆ ಉದಾಹರಣೆ ಕೊಡುವ ಹಾ೦ಗೆ ಬಯಿ೦ದಣ್ಣ.ಧನ್ಯವಾದ೦ಗೊ.

  [Reply]

  VN:F [1.9.22_1171]
  Rating: 0 (from 0 votes)
 5. ಮಣಿಲ ಮಾದಣ್ಣ
  ಸಿ.ಮಹಾದೇವ ಶಾಸ್ತ್ರಿ.. ಮಣಿಲಾ

  ಲಾಯಿಕಿತ್ತು.. ಇಲ್ಲಿ ನಾವು ಬರೆತ್ತರೆ ಹೇಂಗೆ ಬರವದು…

  [Reply]

  ಗೋಪಾಲಣ್ಣ

  GOPALANNA Reply:

  ನಿಂಗಳ ಹೆಸರು ನೋಂದಾವಣೆ ಮಾಡಿ ;ಇಲ್ಲೇ ಬಲ ಬದಿಗೆ ಮೇಲೆ ಅದಕ್ಕಾಗಿ ಜಾಗೆ ಇದ್ದು. ನಿಂಗಳ ಜೋಕುಗೋ ಬರಲಿ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಹಳೆಮನೆ ಅಣ್ಣಕಾವಿನಮೂಲೆ ಮಾಣಿಶಾಂತತ್ತೆಡಾಗುಟ್ರಕ್ಕ°ಎರುಂಬು ಅಪ್ಪಚ್ಚಿಪುಣಚ ಡಾಕ್ಟ್ರುವಿನಯ ಶಂಕರ, ಚೆಕ್ಕೆಮನೆಮಾಷ್ಟ್ರುಮಾವ°ಜಯಗೌರಿ ಅಕ್ಕ°ಪುಟ್ಟಬಾವ°ಬಟ್ಟಮಾವ°ಕಜೆವಸಂತ°ವಸಂತರಾಜ್ ಹಳೆಮನೆಬಂಡಾಡಿ ಅಜ್ಜಿಶಾ...ರೀಪುತ್ತೂರಿನ ಪುಟ್ಟಕ್ಕಶ್ರೀಅಕ್ಕ°ಸರ್ಪಮಲೆ ಮಾವ°ಪವನಜಮಾವಗಣೇಶ ಮಾವ°ಶೀಲಾಲಕ್ಷ್ಮೀ ಕಾಸರಗೋಡುಶುದ್ದಿಕ್ಕಾರ°ನೀರ್ಕಜೆ ಮಹೇಶಅಜ್ಜಕಾನ ಭಾವವಿಜಯತ್ತೆಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ