ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಅದಪ್ಪು, ಓ ಮೊನ್ನೆ ಮಾಷ್ಟ್ರುಮಾವ° ಬೈದ್ದಲ್ಲದೋ – ನೆಗೆಗಾರಂಗೆ..
![]()
ಸದಾಕುಟ್ಟಿಬದನೆ ಹೇಳಿದ್ದಲ್ಲದೋ ನೀರ್ಕಜೆ ಚಿಕ್ಕಮ್ಮ – ಅದೇ ದಿನ ಹೊತ್ತೋಪಗ.
ಹೀಂಗೇ ಎಂತದೋ ಬಿಂಗಿ ಮಾತಾಡಿಗೊಂಡು ಬೈಲಿಲೇ ತಿರುಗಿ ತಿರುಗಿ ಮಾಷ್ಟ್ರುಮಾವನ ಮನಗೆ ಹೋದೆ..
ಅಲ್ಲಿ ಗಣೇಶ ಮಾವಂದೇ, ಮಾಷ್ಟ್ರುಮಾವಂದೇ ಇಂಗ್ಳೀಶು ವ್ಯಾಕರಣದ ಬಗ್ಗೆ ಚರ್ಚೆ ಮಾಡಿಗೊಂಡು ಇತ್ತಿದ್ದವು.
ಎಂತದೋ ಮಾತಾಡುವಗ ಎಡೇಲಿ ಬಾಯಿ ಹಾಕಿದೆ, ಯೇವತ್ರಾಣ ಹಾಂಗೆ.
ಮಾಷ್ಟ್ರುಮಾವಂಗೆ ಅಪುರೂಪಲ್ಲಿ ರಜಾ ಅಂಬೆರ್ಪು ಆತು, ಎರಾಡು ಹೇಳಿದವು – ಅಂತೇ ಬಿಂಗಿ ಮಾಡಿ ಹೊತ್ತು ಕಳವದಲ್ಲ, ರಜ ಏನಾರು ಓದು,
ಇಂಗ್ಳೀಶೋ ಮಣ್ಣ ಕಲಿ,ಇನ್ನಾರೂ ಮುಂದಕ್ಕೆ ಒಳ್ಳೆದಾವುತ್ತರೆ ಆಗಲಿ - ಹೇಳಿಗೊಂಡು.
ಹಾಂಗೆ ರಜಾ ಇಂಗ್ಳೀಶು ಕಲಿವೊ° ಹೇಳಿ ಕಂಡತ್ತು, ಅಪುರೂಪಲ್ಲಿ.
ಕಲಿವಲೆಂತ ಇದ್ದು, ಶಬ್ದಂಗೊ ರಜ ರಜ ಗೊಂತಿದ್ದು.
ವಾಕ್ಯ ಮಾಡ್ಳೆ ಕಲ್ತರಾತು. ಅಷ್ಟೆ.
ಎಲ್ಲೋರತ್ರೂ ಹೇಳಿಗೊಂಡು ಬಂದೆ, ಎನಗೆ ಇಂಗ್ಳೀಶು ಕಲಿಯೆಕ್ಕು – ಹೇಳಿಗೊಂಡು.
ಅದರ ಸತ್ಯ ನಂಬಿದ ಅಕ್ಷರದಣ್ಣ ಒಂದು ಡಿಕಿಶ್ನರಿ ತಂದುಕೊಟ್ಟವು, ಇಷ್ಟು ದಪ್ಪದ್ದು. ![]()
ಯಬೋ -ಯೇವ ಗೆರೆ ಓದಿರೂ ಇಂಗ್ಳೀಶು, ಕನ್ನಡ- ಎರಡೂ ಬರಕ್ಕೊಂಡಿದ್ದು! ಅದರ ಹೇಂಗೆ ನೋಡುದು ಹೇಳಿಯೂ ಹೇಳಿಕೊಟ್ಟವು.
ಅಲ್ಲಿಂದ ಮತ್ತೆ ನಾವು ದಿನನಿತ್ಯಲ್ಲಿ ಕಾಣ್ತ ಮಾತುಕತೆಲಿ ಇಂಗ್ಳೀಶುಗೊ ಎಲ್ಲೆಲ್ಲಿ ಇದ್ದು ಹೇಳಿ ನೋಡುದೇ ಕೆಲಸ. ಅದರ ಅರ್ತ ಡಿಕಿಶ್ನರಿಲಿ ನೋಡುದು.
ಆನು ಕಲ್ತ ಹಾಂಗೆ ನಿಂಗೊಗೂ ಹೇಳ್ತೆ ಆತಾ? (ತಪ್ಪಿದ್ದರೆ ಹೇಳಿಕೊಡಿ)
ನಿಂಗಳೂ ಕಲೀರಿ, ಮಾಷ್ಟ್ರುಮಾವ° ಜೋರುಮಾಡುವ ಮೊದಲೇ.. ![]()
ಅಕ್ಕಂಬಗ, ಮಾತಾಡುವೊ°.
ಪ್ರತಿ ಆಯಿತ್ಯವಾರ ಒಂದು ಶೆಬ್ದ ಕಲ್ತು, ಸೋಮವಾರ ಉದಿಯಪ್ಪಗ ಹೊಸ ಶಬ್ದ ಹೇಳ್ತೆ ನಿಂಗೊಗೆ.
ಅಕ್ಕಲ್ಲದಾ?
~
ನಿಂಗಳ,
ನೆಗೆಗಾರ°
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ನೆಗೆಗಾರ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಒಳ್ಳೆದು ಒಪ್ಪಣ್ಣ.
ಇಂಗ್ಲೀಶ್ ಶಬ್ದಕ್ಕೆ ನಮ್ಮ ಭಾಶೆಲಿ ಅರ್ಥ ಕೊಟ್ಟರೆ ಎಲ್ಲರಿಂಗೂ ಅನುಕೂಲವೇ. ಇಂಗ್ಲೀಶ್ ಶಬ್ದ ಬರವಲ್ಲಿಗೆ ಎಲ್ಲ ನಮ್ಮ ಭಾಶೆಯೇ ಉಪಯೋಗ ಅಕ್ಕು
[ಉತ್ತರುಸಿ]
ಹೊತ್ತುವೇಳೆ: 29 August,2010ರ 1:16 PM ಗೆ. (ಒಪ್ಪಸಂಕೊಲೆ)
adaa… enage doubt baindu ande… adu oppannane heli, ega sikki bidda negegara la la la !!!!!!!
[ಉತ್ತರುಸಿ]
ಏ ನಗೆಗಾರ….
ನಿನಗೆ ಬರೆಕಾದ್ದರ ಒಪ್ಪಣ್ಣಂಗೆ ಬರದೆ. ಬೇಜಾರು ಮಾಡೆಡ ಆತ?
ನಿನ್ನ ಮರತ್ತು ಹೋಗಿ ಹಾಂಗೆ ಆದ್ದು ಅಲ್ಲ ಅತ?
ಕನ್ನಡಕ ಮಡುಗದ್ದೆ ಓದಿದೆ ನೋಡು. ಹೀಂಗೆಲ್ಲಾ ಆವುತ್ತು.
[ಉತ್ತರುಸಿ]
ಇದು ತುಂಬಾ ಲಾಯ್ಕ ಶುದ್ದಿ ನೆಗೆಗಾರಣ್ಣ
ಎಲ್ಲೋರಿಂಗೂ ಉಪಕಾರ ಅಕ್ಕು
ಎಷ್ಟಾರೂ ಇಂಗ್ಲೀಶು ನಮ್ಮ ಭಾಷೆ ಅಲ್ಲ, ಹಾಂಗಾಗಿ ಕಲಿವಲೆ ತುಂಬಾ ಇದ್ದು
ಅದರ ಅಗತ್ಯವೂ ತುಂಬಾ ಇದ್ದು ಇಂದ್ರಾಣ ದಿನಂಗಳಲ್ಲಿ
[ಉತ್ತರುಸಿ]
ನೆಗೆಗಾರೋ, ಮಾಷ್ಟ್ರುಮಾವ° ನಿನಗೆ ಒಂದರಿ ಬೈದರೂ ಈಗ ಬೈಲಿಂಗೆ ಉಪಕಾರ ಆತು ನೋಡು. ಇನ್ನು ನಿನ್ನ ಇಂಗ್ಳೀಶು ಎಂಗಳೂ ಕಲಿತ್ತೆಯಾ°. ಒಳ್ಳೇದಾತು.
ಇನ್ನು ಎಂಗೊ ತಪ್ಪಿದರೆ ಮಾಷ್ಟ್ರು ಮಾವನ ಹತ್ತರೆ ಹೇಳಿ ಬೈಶಿಕ್ಕೆಡಾ ಆತೋ?;-)
[ಉತ್ತರುಸಿ]
ಅದಾ!!!!!!!!!ಒಳ್ಳೇದಾತು.ಎನ್ನ ಪುಳ್ಳಿಅಂದು ಮಾಷ್ಟ್ರು ಮಾವನಲ್ಲಿ ಸರೀ ಕಲ್ತಿದ.ಈಗ ಅವನಹತ್ರೆ ಕೇಳಿರೆ ಬೆಬ್ಬೆಬ್ಬೆ ಹೇಳ್ತಾ..ಆಗಲಿ,ನೀನು ಹೇಳುವದು ಕೇಳಿಯಾರೂ ಅವಂಗೆ ರಜ ಇಂಗ್ಲೀಷು ಬರಲಿ…
[ಉತ್ತರುಸಿ]
ನಗೆಗಾರಣ್ಣ,
[ಮಾಷ್ಟ್ರುಮಾವ° ಬೈದ್ದಲ್ಲದೋ – ನೆಗೆಗಾರಂಗೆ]
ಮರ್ಲು ಕಟ್ಟೆಡ, ರೆಜ ಎಂತಾರೂ ಓದಿ ಕಲಿ ಹೇಳಿದ್ದರ ಕೇಳಿದ್ದರೆ, ಮಾಷ್ಟ್ರು ಮಾವನ ಕೈಂದ ಬೈಗಳು ತಿನ್ನೆಕ್ಕಾತಾ. ಆದರೂ ಎಂಗೊಗೆ ಒಳ್ಳೆದಾತಿದ. ಆ ಲೆಕ್ಕಲ್ಲಿ ಆದರೂ ಬಾಷೆ ಕಲಿವಲೆ ಅಕ್ಕನ್ನೆ
[ಒಂದು ಡಿಕಿಶ್ನರಿ ತಂದುಕೊಟ್ಟವು, ಇಷ್ಟು ದಪ್ಪದ್ದು]. ಆದಿತ್ಯವಾರ ರಜೆ ಹೇಳಿ ಇದರ ತಲೆದಿಂಬು ಮಾಡಿ ಒರಗಿಕ್ಕೆಡ.
ಮತ್ತೆ ಎಂಗೊ ಎಲ್ಲ ಇಂಗ್ಲೀಶ್ ಕಲ್ತ ಹಾಂಗೆ.
[ಉತ್ತರುಸಿ]
ಹೊತ್ತುವೇಳೆ: 4 September,2010ರ 4:44 PM ಗೆ. (ಒಪ್ಪಸಂಕೊಲೆ)
ತಲೆಕ್ಕೊಂಬು ಮಾಡಿರೆ ಬೇಗ ತಲೆಗೆ ಹೋಗಿ ಬೇಗ ಹೇಳಿಕೊಡುಗು!!!!
[ಉತ್ತರುಸಿ]
ಏ ನಗೆಗಾರಣ್ಣೋ!!
ಎನ್ನತ್ರೆ ಒಂದು ಡಿಕ್ಷನರಿ ಇದ್ದು. ಅದರ್ಲಿ ಬಾಬಣ್ಣಂಗೆ ಇಂಗ್ಲೀಷಿಲಿ come-color ಹೇಳಿ, ಹಸ್ತೋದಕಕ್ಕೆ hand-water ಹೇಳಿ ಹೇಳ್ತವು ಹೇಳಿದ್ದು. ನಿನ್ನತ್ರೆ ಇಪ್ಪದುದೆ ಇದೇ ನಮೂನೆಯ ಡಿಕ್ಷನರಿಯೋ ಹೆಂಗೆ?
[ಉತ್ತರುಸಿ]
ಬೈದ ಮೇಲೆ ಬುದ್ಧಿ ಬಂತು.
[ಉತ್ತರುಸಿ]