Oppanna.com

ನೆಗೆ ಗೊಂಚೆಲು

ಬರದೋರು :   ಅರ್ತಿಕಜೆ ಮಾವ°    on   31/07/2014    3 ಒಪ್ಪಂಗೊ

1. ಪ್ರಿಯಕರ° – ಎನಗೆ ಎರಡುಸಾವಿರರೂಪಾಯಿ ಸಂಬಳ ಇದ್ದು. ಅದರಲ್ಲಿ ನಿನಗೆ ಸಂಸಾರ ಮಾಡ್ಳೆ ಎಡಿಯದೋ? ಮದುವಗೆ ಇನ್ನು ತಡಮಾಡುವದು ಎಂತಕೆ?

ಪ್ರೇಯಸಿ – ಅದರ್ಲಿ ಆನು ಹೇಂಗಾರು ಎನ್ನ ಖರ್ಚಿನ ಮಾಡಿಗೊಂಬೆ. ಆದರೆ ಇಪ್ಪ ಸಮಸ್ಯೆ ಎಂತ ಹೇಳಿರೆ .. ನಿಂಗೊ ನಿಂಗಳ ಖರ್ಚಿಗೆಂತ ಮಾಡುವಿ ಹೇಳಿ! 😀

2. ಒಬ್ಬ° ಭಾಷಣಗಾರ° ತುಂಬ ಉದ್ದದ ಭಾಷಣ ಮಾಡ್ಯೊಂಡು ನಿಲ್ಲುಸದ್ದೆ ಸಭಿಕರಿಂಗೆ ಕೋಪ ಬಪ್ಪ ಹಾಂಗೆ ಮಾಡಿದ°. ಭಾಷಣ ಮಾಡಿಗೊಂಡು ಅವ° ಹೇಳಿದ° – ಆನು ಹೇಳುವದೆಲ್ಲ ಮುಂದಾಣ ಪೀಳಿಗಗೆ.

ಅಷ್ಟಪ್ಪಗ ಸಭಿಕರಲ್ಲಿ ಒಬ್ಬ° ಎದ್ದು ನಿಂದು ಹೇಳಿದ° – ಹಾಂಗಾರೆ ಹೊಸ ಪೀಳಿಗೆಯವು ಹುಟ್ಟಿ ಬಪ್ಪಲ್ಲಿವರೆಂಗೂ ನೀನು ಭಾಷಣ ನಿಲ್ಲುಸುತ್ತಿಲ್ಲೆಯೋ?! 😀

3. ಮಂತ್ರಿ ಮಹಾಶಯ° ಒಬ್ಬ° ಇಂಗ್ಲೀಷು ಭಾಷಣದ ಸುರುವಿಲ್ಲಿ ಅವನ ಇಂಗ್ಲೀಷು ಪಾಂಡಿತ್ಯದ ಬಗ್ಗೆ ಕ್ಷಮೆ ಕೇಳಿ – “ಎನಗೂ ಇಂಗ್ಲೀಷು ಭಾಷಗೂ ಇಪ್ಪ ಸಂಬಂಧ ಎನ್ನ ಮತ್ತೆ ಎನ್ನ ಹೆಂಡತ್ತಿಯ ಸಂಬಂಧವನ್ನೇ ಹೋಲುತ್ತು. ಆನು ಇಂಗ್ಲೀಷಿನ ಪ್ರೀತಿಸುತ್ತೆ. ಆದರೆ ಅದರ ಮೇಲೆ ಹಿಡಿತ ಮಾಂತ್ರ ಎನಗೆ ಇಲ್ಲೆ.” 😀

4. ಡಾಕ್ಟರ್ :– ನೋಡಿ.. ಎರಡೇ ಚಪಾತಿ, ಸೊಪ್ಪಿನ ಪಲ್ಯ ತಿನ್ನೆಕ್ಕು, ರಜ ಕಷ್ಟ ಅಕ್ಕು. ಆದರೂ ಪಥ್ಯ ಮಾಡ್ಳೇ ಬೇಕು.nege gonchalu

ರೋಗಿ :-  ಅದೆಷ್ಟು ಕಷ್ಟ ಆದರೂ ಆನು ಮಾಡಿಯೇ ಮಾಡುವೆ. ಆದರೆ ನಿಂಗೊ ಈಗ ಹೇಳಿದ್ದರ ಊಟಂದ ಮದಲು ತಿನ್ನೆಕ್ಕೋ ಅಲ್ಲ ಊಟದ ಮತ್ತೆ ತಿನ್ನೆಕ್ಕ್ಕೊ ಹೇಳಿಕ್ಕಿ. 😀

5. ರೋಗಿ ಹೆಮ್ಮಕ್ಕೊ:– ಡಾಕ್ಟ್ರೇ!, ನಿಂಗೊ ಕೋಣೆಲಿ ಎನ್ನ ಪರೀಕ್ಷೆ ಮಾಡುವಗ ಆ ನರ್ಸನ್ನೂ ಒಳಂಗೆ ಬಪ್ಪಲೆ ಹೇಳಿ

ಡಾಕ್ಟ್ರ°: – ಹಾಂಗಾರೆ ಎನ್ನ ಮೇಗೆ ನಿಂಗೊಗೆ ನಂಬಿಕೆ ಇಲ್ಲೆಯೋ?!

ಹೆಮ್ಮಕ್ಕೊ: – ಹಾಂಗಲ್ಲ, ಹೆರ ಎನ್ನ ಗೆಂಡ° ಕೂದುಗೊಂಡಿರ್ತವನ್ನೇ! 😀

6. ಡಾಕ್ಟ್ರ° – ಎನ್ನ ಕೆಲಸದ ಸಮಯ ಹೊತ್ತೋಪಗ 5 ರಿಂದ 8 ಗಂಟೆ ವರೆಂಗೆ ಹೇಳಿ ನಿನಗೆ ಗೊಂತಿಲ್ಲೆಯ. ಇಷ್ಟು ಹೊತ್ತಿಂಗೆ ಬಂದರೆ ಹೇಂಗೆ?!

ರೋಗಿ – ಅಪ್ಪು , ಗೊಂತಿದ್ದು. ಆದರೆ ಎನ್ನ ಕಚ್ಚಿದ ನಾಯಿಗೆ ಅದು ಗೊಂತುಬೇಡದೋ! 😀

7. ಹೆಮ್ಮಕ್ಕೊ (ಫೋನಿಲ್ಲಿ) – ಡಾಕ್ಟ್ರೇ!, ಎನ್ನ ಎಜಮಾನ್ರು ಪೆನ್ನು ನುಂಗಿಬಿಟ್ಟಿದವು

ಡಾಕ್ಟ್ರ° – ಆತು , ಆದಷ್ಟು ಬೇಗ ಬತ್ತೆ

ಹೆಮ್ಮಕ್ಕೊ – ನಿಂಗೊ ಬಪ್ಪಲ್ಲಿವರೆಂಗೆ ಆನು ಎಂತ ಮಾಡ್ಳಿ?

ಡಾಕ್ಟ್ರ° – ಪೆನ್ಸಿಲಿಲಿ ಬರಕ್ಕೊಂಡಿರಿ. 😀

8. ಒಬ್ಬ° – ಎಂತಪ್ಪ ಇದು! ಈ ದಾರಿ ಪೋಸ್ಟಾಪೀಸಿಂಗೆ ಹೋವುತ್ತೋ?

ಇನ್ನೊಬ್ಬ° – ಇಲ್ಲೆಪ್ಪ, ಬಹಳ ವರ್ಷಂದ ಇದು ಇಲ್ಲ್ಯೇ ಇದ್ದು 😀

9. ಬಾಡಿಗೆದಾರ° – ಸರ್, ಈ ತಿಂಗಳು ಎನ್ನಂದ ಬಾಡಿಗೆ ಕೊಡ್ಳೆ ಎಡಿಯ

ಮನೆ ಎಜಮಾನ° – ಎಂತ ಅದು?!, ಹೋದ ತಿಂಗಳೂ ಅದೇ ಹೇಳಿದ್ದೆ. ಅದರಿಂದ ಹಿಂದಾಣ ತಿಂಗಳೂ ಅದನ್ನೇ ಹೇಳಿದ್ದೆನ್ನೇ?!

ಬಾಡಿಗೆದಾರ° – ಎನ್ನದು ಏವಾಗಲೂ ಒಂದೇ ಮಾತು. ಒಂದೊಂದಾರಿ ಒಂದೊಂದು ಹೇಳ್ತ ಕ್ರಮ ಇಲ್ಲೆ. 😀

10. ಒಂದು ಚಿತ್ರಪ್ರದರ್ಶನಲ್ಲಿ ಒಂದು ಹೆಮ್ಮಕ್ಕೊ ಒಂದು ಚಿತ್ರದ ಹತ್ತರೆ ನಿಂದು ಕಲಾವಿದನ ಹತ್ರೆ ಹೇಳಿತ್ತು – ಈ ಚೆಂದ ಇಲ್ಲದ್ದ ಕೊಳಕ್ಕು ಚಿತ್ರವ ನೀನೇ ಮಾಡಿದ್ದೋ?!”

ಕಲಾವಿದ° ಹೇಳಿದ° – ನೋಡಮ್ಮಾ.., ನೀನು ಕನ್ನಾಟಿಯ ನೋಡ್ತಾ ಇದ್ದೆ. 😀

11. “ಮದುವೆ ಹೇಳಿರೆ ಒಂದು ಲಾಟರಿ” – ಮದುವೆ ಆದ ಒಬ್ಬ° ಗೃಹಸ್ಥ° ನಿರಾಶೆಂದ ಹೇಳಿದ°.

ಅದರ ಕೇಳಿ ಮತ್ತೊಬ್ಬ° ಹೇಳಿದ° – ಲೊಟ್ಟೆ, ಲಾಟರಿಲಿ ಆದರೆ ಅಪರೂಪಕ್ಕೊಂದೊಂದಾರಿ ಗೆಲ್ಲುವದಿದ್ದು. 😀

12. ಒಬ್ಬ° – ನಿಂಗಳ ದೀರ್ಘಾಯುಷ್ಯ ಮತ್ತೆ ಬಾಳಿನ ಗೆಲುವಿಂಗೆ ಕಾರಣ ಎಂತರ?

ಇನ್ನೊಬ್ಬ° – ಅವೆರಡಕ್ಕೂ ಎನ್ನ ಹೆಂಡತ್ತಿಯೇ ಕಾರಣ. ಅದು ಇಪ್ಪತ್ತು ವರ್ಷದ ಹಿಂದೆಯೇ ತೀರಿ ಹೋಯಿದು. 😀

13. ಅವ° – ಎಂಗೊಗೆ ಈಗ ಬಾತ್ ರೂಮಿಲ್ಲಿ ಹಾಡು ಹೇಳುವದು ಅಭ್ಯಾಸ ಆಗಿ ಹೋಯಿದು.

ಇವ° – ಕೆಲವು ಜೆನಕ್ಕೆ ಹಾಂಗೆ ಲಾಯಕಲ್ಲಿ ಮೀವಾಗ ಸ್ಫೂರ್ತಿ ಉಕ್ಕಿ ಬತ್ತು.

ಅವ° – ಛೇ ಛೇ ಅದೆಂತೆಲ್ಲಾ, ಎಂಗಳ ಬಾತ್ ರೂಮು ಬಾಗಿಲಿಂಗೆ ಚಿಲಕವೇ ಇಲ್ಲೆ. ಅದಕ್ಕೆ. 😀

14. ಜೋಯಿಶ° ಒಬ್ಬ° ಜವ್ವನಿಗಂಗೆ ಹೇಳಿದ° – ನಿನ್ನ ಜೀವನಲ್ಲಿ ಏರಿಳಿತ ತುಂಬಾ ಇರುತ್ತು.

… ಭವಿಷ್ಯ ನಿಜ ಆತು. ಅವ° ಈಗ ಲಿಫ್ಟ್ ಮೇನ್. 😀

15. ಅವ° – ನೀನು ಎಷ್ಟು ಬದಲಾಯಿದೆ!, ಗುಂಗುರು ಗುಂಗುರು ತಲೆಕಸವು ಇತ್ತು, ಒಳ್ಳೆ ತೋರ ಇತ್ತಿದ್ದೆ. ಆದರೆ ಈಗ ತಲೆ ಬೋಳಾಯಿದು. ಸಪೂರ ಆಯಿದೆ. ನಿನ್ನ ಗುರ್ತ ಸಿಕ್ಕುವದೇ ಕಷ್ಟ ಕೇಶವಣ್ಣ!

ಇವ° – ಆನು ಕೇಶವ° ಅಲ್ಲಪ್ಪಾ!

ಅವ° – ನೋಡು! ಅಂಬಗ ನೀನು ಹೆಸರನ್ನೂ ಬದಲಾವಣೆ ಮಾಡಿಗೊಂಡಿದೆಯೋ?!! 😀

*** 😀 😀 😀 ***

ನೆಗೆ ಗೊಂಚೆಲು
[ಸಂಗ್ರಹ : ಅರ್ತಿಕಜೆ ಮಾವ°]

ಅರ್ತಿಕಜೆ ಮಾವ°
Latest posts by ಅರ್ತಿಕಜೆ ಮಾವ° (see all)

3 thoughts on “ನೆಗೆ ಗೊಂಚೆಲು

  1. ಒಳ್ಳೆದಾಯಿದು.ಹಳೆ ಜೋಕುಗಳೇ ಆದರೂ ಒಂದಾರಿ ಓದಲೆ ಆವುತ್ತಿದ.

  2. ನೆಗೆ ಗೊಂಚಲು ರೈಸಿದ್ದು ಅರ್ತಿಕಜೆ ಅಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×