ಹೀಂಗೆ ಒಂದು ರಜೆಯ ದಿನ…

March 3, 2011 ರ 9:30 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೀಂಗೆ ಒಂದು ರಜೆಯ ದಿನ ಉದಿಯಪ್ಪಗ ಎಲ್ಲಾ ಫ್ರೆಂಡ್ಸ್ ಗಳ ಒಟ್ಟಿಂಗೆ ತಿಂಡಿ ತಿಂದುಗೊಂಡಿಪ್ಪಗ, ಒಬ್ಬನ ತಲೇಲಿ ಕೆಟ್ಟ ಆಲೋಚನೆ ಬಂತು; `ಹೇ,ನಾವೆಲ್ಲಾ ಎಲ್ಲಿಗಾದರು ಪಿಕ್ ನಿಕ್ ಹೋಪನಾ’ ಹೇಳಿ!
ಪ್ಲೇಟಿಲ್ಲಿತ್ತ ವಡೆಲಿಪ್ಪ ಮೆಣಸಿನ ತಿಂಬದಾ ಬಿಡುದಾ ಹೇಳಿ ಗಂಭೀರವಾಗಿ ಚಿಂತಿಸಿಗೊಂಡಿತ್ತ ಆನು, ಇವಂಗೆ ಈ ಹೋಟ್ಲಿನ ತಿಂಡಿ ತಿಂದ ಕಾರಣ ಹೆಚ್ಚೂ ಕಡಮ್ಮೆ ಆಯಿದು ಹೇಳಿ ಗ್ರೇಶಿದೆ,ಅಲ್ಲದೆ ಮತ್ತೆಂತ?
ರಜೆ ದಿನ ಸುಮ್ಮನೆ ಕಾಲು ಕುತ್ತ ಮಾಡಿ ಹಾಸಿಗೆಲಿ ಮನುಕ್ಕೊಂಡು ಟಿ.ವಿ. ನೋಡಿಗೊಂಡು ಕಳೆವ ಅಮೂಲ್ಯ ಸಮಯವ ಹಾಳು ಮಾಡುದಾ?
ಅದೇ ಸಮಯಕ್ಕೆ ಸರಿಯಾಗಿ ಇನ್ನೊಬ್ಬಂದೇ ರಾಗ ಎಳೆದ° ’ಅಪ್ಪು ಮಾರಾಯ,ಈ ಜೀವನವೇ ಬೇಡ ಹೇಳಿ ಕಾಣುತ್ತು. ಅದೇ ಕೆಲಸ,ಅದೇ ಶಿಫ್ಟ್, ಅದೇ ಜನ’ ಹೇಳಿ; ಸನ್ನಿ ಹಿಡಿದವರಾಂಗೆ ಎಲ್ಲರೂ `ಅಪ್ಪು,ಅಪ್ಪು’ ಹೇಳಿ ಬೊಬ್ಬೆ ಹೊಡವಲೆ ಶುರು ಮಾಡಿದವು. ತನ್ನ ಹೋಟ್ಲಿನ ತಿಂಡಿಯ ಯಾವತ್ತಿಂಗೂ ರುಚಿ ನೋಡದ್ದ ಮತ್ತು ಆ ಕಾರಣಕ್ಕೇ ಆರೋಗ್ಯವಾಗಿದ್ದ ಹೋಟ್ಲಿನ ಓನರ್ ಬಂದು ’ಬೇರೆಂತಾದರು ಬೇಕಾ?’ ಹೇಳಿ ಕೇಳಿತ್ತು; ಇದರ ಕರ್ಮ!
ಇದು ಕೊಟ್ಟದ್ದನ್ನೇ ಮುಗುಶುಲೆ ಎಡಿಯದ್ದೆ, ಅದರ ಪರಿಣಾಮ ಪಿಕ್ ನಿಕ್ ಹೇಳಿ,ತಲೇಲಿ ಹುಳು ಬಿಟ್ಟ ಕಾರಣ, ಎನ್ನ ಸುಖವಾದ ರಜೆ ನಾಶವಾಗಿ ಹೋಪ ಸ್ಥಿತಿಲಿತ್ತು. ಆನು `ಎಂಥ ಬೇಡ’ ಹೇಳುಲೆ ಬಾಯಿ ತೆಗವ ಮೊದಲೇ ಈ ಮಂಗಂಗೊ ಆರ್ಡರ್ ಮಾಡ್ಲೆ ಸುರು ಮಾಡಿದವು..
ಹಾಂಗಾರೆ ಇಂದು ರಜೆ ಸರ್ವನಾಶ ಆತು ಹೇಳಿ ಎನಗೆ ಗಟ್ಟಿಯಾತು.

’ಸರಿ,ಎಲ್ಲಿಗೆ ಹೋಪ°?’ ಕೇಳಿದೆ; ಹೋಪ° ಹೇಳಿ ಸುರು ಮಾಡಿದ ಮನುಷ್ಯ ಇನ್ನು ಎನಗೂ ಈ ವಿಷಯಕ್ಕೂ ಸಂಬಂಧವೇ ಇಲ್ಲೆ ಹೇಳುವಾಂಗೆ ತಿಂದುಗೊಂಡಿತ್ತು.
ಹತ್ತರೆ ಯಾವುದಾದರು ಜಾಗೆ ಇದ್ದ ಹೇಳಿ ಯೋಚಿಸಿದೆ. ಬೇಗ ಹೋಗಿ, ಬೇಗ ಬಂದರೆ ಲಾಯ್ಖಲ್ಲಿ ರೂಮಿಲ್ಲಿ ಬಿದ್ದುಗೊಂಬಲಕ್ಕಲ್ದ ಹೇಳಿ; ಹತ್ತರೆ ಮಧೂರಿಂಗೆ ಹೋಪ° ಹೇಳಿದ ಒಬ್ಬ. ಇವನ ತಲೆ!
ಇಲ್ಲಿಂದ 50-60- ಕಿಲೋ ಮೀಟರ್ ಹೋಗಿ ಬಪ್ಪಗ ಸೊಂಟದ ಕಥೆ ಎಂತ ಅಕ್ಕು, ಅವನ ಬೈಯೆಕ್ಕು ಹೇಳಿ ಬಾಯಿ ತೆಗವಗ ಮತ್ತೊಬ್ಬ `ಕನ್ಯಾಕುಮಾರಿ’ ಹೇಳಿದ; ಎನಗೆ ಕಾಲಡಿಂದ ಉರಿ ತಲೆಗೆ ಹತ್ತಿತ್ತು. `ಅಲ್ಲ ಮಾರಾಯ,ನಿನಗೆ ತಲೆ ಸರಿ ಇದ್ದ? ಇಪ್ಪದು ಒಂದು ದಿನ ರಜೆ. ಈಗಲೇ ಗಂಟೆ 9 ಆತು, ಹನುಮಂತನಾಂಗೆ ಹಾರಿಗೊಂಡು ಹೋದರೂ ಅಲ್ಲಿಗೆ ಮುಟ್ಟುಲೆಡಿಗಾ? ನಾಳೆ ಡ್ಯೂಟಿ ಮಾಡ್ಲೆ ನಿನ್ನ ಅಪ್ಪನ ಕರ್ಕೊಂಡು ಬತ್ತೆಯಾ?’ ಹೇಳಿ ಬೈದೆ.
`ರಜೆ ಮಾಡಿಗೊಂಡು ಹೋಪ°’ ಹೇಳಿದ ಅವ°. ಆ ಬುದ್ದಿವಂತನ ತಲೆಗೆ ಬಡುದು,’ ಇನ್ನಾರೂ ಉಚಿತ ಸಲಹೆ ಕೊಡೆಡಿ, ಸೀದಾ ಪಿಲಿಕುಳಕ್ಕೆ ಹೋಪ,ಅಲ್ಲಿ ಬೋಟಿಂಗ್ ಎಲ್ಲಾ ಇದ್ದಡ,ಹಾಂಗೆ ಇಂದು ರಜೆ ಅಲ್ಲದ’ ಹೇಳಿದೆ.
ಅಪೀಲೇ ಇಲ್ಲೆ..ಎಲ್ಲರ ಕೆಮಿ ಕುತ್ತ ಆಗಿ, `ಹೋಪ°, ಹೋಪ°’ ಹೇಳಿ ಬೇಗ ಬೇಗ ತಿಂದು ಮುಗುಶಿದವು. ಬಿಲ್ ಕೊಡುವಾಗ ಮಾತ್ರ ,ಬದುಕ್ಕುದು ಎಷ್ಟು ಖರ್ಚಿನ ಕೆಲಸ ಅಲ್ಲದ ಹೇಳಿ ಬೇಜಾರಾತು!

ಸರಿ, ಹೆರಪ್ಪಯಣದ ಕಾರ್ಯಕ್ರಮ ಸುರು ಆತು. ಮೀವಂತಹ ಪುಣ್ಯ ಕಾರ್ಯ ಮತ್ತೆ ಬಂದಿಕ್ಕಿ ಮಾಡುವ ಹೇಳಿ ಸೆಂಟ್ ಹಾಕಿಗೊಂಡು, ಎಂಗಳ ಮೂಗಿನ ತಾಕತ್ತು ಪರೀಕ್ಷಿಸುವ ಕೆಲಸವೂ ಆತು, ದಾರಿಯಿಡೀ ಧೂಳು,ಎಂತಕೆ ಸುಮ್ಮನೆ ಹೇಳಿ ಕೆಲವು ಜನ ಮೋರೆ ತೊಳವ ಪಾಪ ಕಾರ್ಯವೂ ಮಾಡಿದ್ದವಿಲ್ಲೆ. ಹಾಂಗೂ ಹೀಂಗೂ ಇವರ ಹೆರಡಾಣ ಮುಗಿವಗ ಹೊತ್ತು ಸುಮಾರಾಗಿತ್ತು. ಆದರೆ ಎಲ್ಲರೂ ಮಾಣಿಯಂಗಳೇ ಆದ ಕಾರಣ ನಮ್ಮ ಹೆಮ್ಮಕ್ಕಳ ರೇಂಜಿಂಗೆ ಬೈಂದಿಲ್ಲೆ!
ಬಸ್ಸಿಲ್ಲಿ ಆರಾಮಲ್ಲಿ ಹೋಗಿ ಬಪ್ಪ° ಹೇಳಿ (ಒರಗುಲಕ್ಕಲ್ಲದ ಬಸ್ಸಿಲ್ಲಿ) ಆನು ಹೇಳುಲೆ ಹೆರಡುವಾಗ, ಹೇಳಿದ ಒಬ್ಬ ಸುಂದರಾಂಗ, ’ಯೇ, ನಾವು ಬೈಕಿಲ್ಲಿ ಹೋಪನ? ಆರಾರು ಚೆಂದದ ಕೂಸುಗೊ ಸಿಕ್ಕಿರೆ ನಮ್ಮ ನೋಡುಗು’ ಹೇಳಿ; ಅವನ ಮೂಲೆಗೆ ಕರ್ಕೊಂಡು ಹೋಗಿ ಸರೀ ಬಡಿಯೆಕ್ಕು ಹೇಳಿ ಆದರೂ ತಡಕ್ಕೊಂಡು, ’ಮಾರಾಯ, ನೀನು ಹೆಲ್ಮೆಟ್ ಹಾಕಿದ ಮೇಲೆ ನಿನ್ನ ಮೋರೆ ನೋಡಿದರೂ ಒಂದೇ, ನೋಡದ್ರೂ ಒಂದೇ; ಮತ್ತೆ ಈ ಧೂಳಿಲ್ಲಿ ನೀನು ಬೂದಿ ಮೆತ್ತಿದ ನಾಯಿ ಹಾಂಗೆ ಕಾಂಬೆ.
ಬೇಕಾ ಅದು?’ ಹೇಳಿ ನೋಡಿದೆ. ಎಂಗಳ ಗ್ರೂಪಿಲ್ಲಿ ಒಬ್ಬಂಗೆ ಎಂಥಾದರು ಆಲೋಚನೆ ಬಂದರೆ, ಅದು ಸರಿಯೋ ತಪ್ಪೋ ನೋಡದ್ದೆ ಎಲ್ಲಾರೂ ಅದರ ಅನುಸರುಸುದು ಮಾಮೂಲಾದ ಕಾರಣ, ಎಂಗೊ ಲಾಸ್ಟಿಂಗೆ ಬೈಕ್ಕಿಲ್ಲೆ ಹೋದೆಯೊ°.

ಆ ಸುರತ್ಕಲ್ಲಿಂದ ಮಂಗಳೂರಿಂಗೆ ಹೋಪಗಾಣ ಕಥೆ ಹೇಳಿ ಪ್ರಯೋಜನ ಇಲ್ಲೆ; ಬೈಕ್ಕಿನ ತಳ್ಳಿಗೊಂಡು ಹೋಪಾಂಗಿಪ್ಪ ಟ್ರಾಫಿಕ್; ದಾರಿ ಎಲ್ಲಿ,ಜನಂಗೊ ಹೋಪದು ಹೇಳಿ ಗೊಂತಾಗದ್ದ ರೋಡ್; ಓವರ್ ಟೇಕ್ ಮಾಡ್ರೆ ಗುದ್ದುತ್ತೆ ಹೇಳುವ ಬಸ್, ಲಾರಿಗೊ; ಧೂಳು..ಶಿವ,ಶಿವ ಎಂತಗಾದರೂ ಬೈಕ್ಕಿಲ್ಲಿ ಹೆರಟೆಯೊ° ಹೇಳಿ ಆತು. ಹಾಂಗೂ ಹೀಂಗೂ ಸೊಂಟ ಬೇನೆ ಬರಿಸಿಗೊಂಡು ಪಿಲಿಕುಳ ಮುಟ್ಟಿದೆಯೊ°.

ಫಸ್ಟಿಂಗೆ ಅಲ್ಲಿಪ್ಪ ಪ್ರಾಣಿ,ಪಕ್ಷಿಗಳ ನೋಡುವ ಹೇಳಿ ನೋಡುವಾಗ ಒಬ್ಬ, ’ಎಂಥ ಇದ್ದ° ಇಲ್ಲಿ? ನಾಲ್ಕು ಕುರೆ ಪ್ರಾಣಿಗೊ,ಚಿರಿ ಚಿರಿ ಪಕ್ಷಿಗೊ..
ನಾವು ಪಾರ್ಕಿಂಗೆ ಹೋಪ°’ ಹೇಳಿದ. ’ಈಗ ಆರೂ ಅಲ್ಲಿ ಇರ್ತವಿಲ್ಲೆ,ಕೂಸುಗೊಕ್ಕೆ ಪ್ರಾಣಿ,ಪಕ್ಷಿಗೊ ಹೇಳಿರೆ ಇಷ್ಟ ಅಲ್ಲದ.ಹಾಂಗೆ ಎಲ್ಲ ಇಲ್ಲೇ ಇಕ್ಕು’ ಹೇಳಿ ಅವನ ಮಂಕಾಡಿಸಿ ಒಳಾಂಗೆ ಕರ್ಕೊಂಡು ಹೋದೆ, ಒಳ ಯಾವ ಕಡೆಂದ ನೋಡ್ಲೆ ಸುರು ಮಾಡುದು ಹೇಳಿ ಗೊಂತಾಗದ್ದೆ, ಮಂಗಂಗಳ ಹಾಂಗೆ ಅತ್ಲಾಗಿ ಇತ್ಲಾಗಿ ನೋಡುವಾಗ, ಇವ° ಒಬ್ಬ ’ ಹೇ, ನೋಡ ಅಲ್ಲಿ ಜೋಡಿ ಹಕ್ಕಿ’ ಹೇಳಿ ಎನ್ನ ಚೂಂಟಿದ°, ಅವ° ಹೇಳಿದ ಕಡೆ ಎಷ್ಟು ನೋಡಿರೂ ಒಂದು ಕಾಕೆಯೂ ಕಾಣದ್ದೆ, ಅವನ ತಲೆಗೆ ಬಡುದು ,’ಎಲ್ಲಿಯಾ°?’ ಹೇಳಿ ಕೇಳಿದರೆ ’ಅಲ್ಲಿ…’ ಹೇಳಿ ಕೈ ತೋರ್ಸಿದ..ಅವ° ಹೇಳಿದ ಕಡೆ ಒಂದು ಕೂಸೂ,ಮಾಣಿಯೂ ಇತ್ತವು. ಇವನ ಅಜ್ಜಿ!
ಹೇಳಿ ಬೈಕೊಂಡು,ಅವನ ಎಳಕೊಂಡು ಹಾಂಗೆ ಇಡೀ ಜಾಗೆ ಸುತ್ತಿದೆಯೊ..
ಯಾವ ಯಾವುದೋ ಹೆಸರಿನ ಪಕ್ಷಿಗೊ,ನರಿ,ಹುಲಿ,ಆನೆ,ಚಿರತೆ ಎಲ್ಲಾ ಇತ್ತು; ಹುಲಿಯ ನೋಡಿ ಒಬ್ಬ°,’ಎನಗೆ ಹುಲಿಯೊಟ್ಟಿಂಗೆ ಫೋಟೊ ತೆಗೆಯೆಕ್ಕು’ ಹೇಳಿ ಹೇಳಿದ..ಅದಕ್ಕೆ ಮತ್ತೊಬ್ಬ° ‘ ಫೋಟೊ ಎಲ್ಲಾ ತೆಗವಲಕ್ಕು, ಆದರೆ ಆಮೇಲೆ ನಿನ್ನ ಅದೇ ಫೋಟೊಕ್ಕೆ ಫ್ರೇಮ್ ಹಾಕಿ ಮನೇಲಿ ನೇತಾಡ್ಸುಲಕ್ಕು’ ಹೇಳಿದ°.. ಎಂಗಳ ಮುಖ್ಯ ಕಾರ್ಯಕ್ರಮವಾದ ಕೂಸು ವೀಕ್ಷಣೆ ಅಲ್ಲಿ ನಡದ್ದೇ ಇಲ್ಲೆ. ಸುಮ್ಮನೆ ಅಲ್ಲಿಂದ ಹೆರ ಬಪ್ಪಗ ಪಾಪದ ಮಕ್ಕೊಗೆ ಹಶು ಅಪ್ಪಲೆ ಶುರುವಾತು!

ಅಲ್ಲಿ ಇಲ್ಲಿ ವಿಚಾರಿಸಿದಪ್ಪಗ ,ಬೋಟಿಂಗ್ ಇಪ್ಪ ಜಾಗೆ ಹತ್ರೆ ಒಂದು ರೆಸ್ಟೋರೆಂಟ್ ಇದ್ದು ಹೇಳಿ ಗೊಂತಾತು,ಅಲ್ಲಿಗೆ ಹೇಂಗೊ ಹೋಗಿ,’ಎಂತರ ತಿಂಬದಪ್ಪ’ ಹೇಳಿ ಗಂಭೀರವಾಗಿ ಚರ್ಚೆ ಮಾಡುವಾಗ, ಸಪ್ಲಯರ್ ಬಂದು ಒಂದೂವರೆ ಕಿಲೋ ಮೀಟರ್ ಉದ್ದದ ಮೆನು ಕಾರ್ಡ್ ಕೊಟ್ಟಿಕ್ಕಿ ಹೋತು. ಅದರಲ್ಲಿಪ್ಪ ಐಟಮ್ ಓದುತ್ತಾ ಹೋದಾಂಗೆ ಬಾಯಿಲ್ಲಿ ಮಳೆ ಬಪ್ಪಲೆ ಶುರು ಆತು; ಆನೊಂದು ವೆಜ್ ಬಿರಿಯಾನಿ ಆರ್ಡರ್ ಮಾಡಿದೆ..ಫ್ರೆಂಡುಗೊ ಆರ್ಡರ್ ಮಾಡುವ ಕೆಲಸ ಮತ್ತೆ ಕಾಲು ಗಂಟೆ ನಡತ್ತು,ಬೇಗ ಹೇಳಿದ ಕಾರಣ ಎನಗೆ ಬೇಗ ಬಂತು..
ಒಂದು ಚೂರು ತೆಗದು ಬಾಯಿಗೆ ಮಡುಗಿದನೋ ಇಲ್ಲೆಯೋ ಎನಗೆ ದೇವರ ಮೇಲೆ ನಂಬಿಕೆಯೇ ಹೋತು!
ಅದರ ಖಾರಕ್ಕೆ ಎನ್ನ ಮೆದುಳು ತಲೆಂದ ಆಚೆ ಬಂದು ಡ್ಯಾನ್ಸ್ ಮಾಡ್ಲೆ ಶುರು ಮಾಡಿತ್ತು, ಕಣ್ಣು,ಮೂಗಿಲ್ಲೆಲ್ಲ ಪ್ರವಾಹ; ’ಎಂಥದಾ ತೊಂದರೆ ಇಲ್ಲೆ,ಎಂಗೊಗೂ ಈಗ ಬತ್ತು ಊಟ.
ಎಂಗಳ ಬಿಟ್ಟಿಕ್ಕಿ ತಿಂಬದು ಹೇಳಿ ನೀನು ಕೂಗುದು ಬೇಡ’ ಹೇಳಿದ ಒಬ್ಬ°. ’ಇಲ್ಲೆಯಾ°, ಅವಂಗೆ ಜೋರು ಹಶು ಆಗಿತ್ತು..ಊಟ ಬಂತು ಹೇಳಿ ಪಾಪ ಖುಷಿ’ ಮತ್ತೊಬ್ಬನ ಕಮೆಂಟ್.
ಆನು ಚಂದ್ರಲೋಕಕ್ಕೆ ಹೋಗಿ ವಾಪಾಸ್ ಬತ್ತಾ ಇದ್ದ ಕಾರಣ ಎಂತ ಹೇಳುವ ಸ್ಥಿತಿಲಿ ಇತ್ತಿಲ್ಲೆ!
ಆ ಹೋಟ್ಲಿನವಂಗೆ ಎಂಥ ದ್ವೇಷ ಇತ್ತೊ ಎಂಗಳ ಮೇಲೆ; ಅವನನ್ನೂ, ಅವನ ವಂಶವನ್ನೂ ಬೈಕೊಂಡು ಹೇಂಗೊ ಅಲ್ಲಿಂದ ಬದುಕಿ ಹೆರ ಬಂದೆಯೊ°.

ಪಾರ್ಕಿನ ಒಳ ಹೋಪ ಮೊದಲು ಎಂಗಳ ಸೊಟ್ಟ ಪಟ್ಟ ಮೋರೆಯ ಸರಿ ಮಾಡಿಗೊಂಡೆಯೊ°..
ಒಬ್ಬರನೊಬ್ಬರು ನೋಡಿಗೊಳ್ಳುತ್ತಾ, ಅವಂಗಿಂತ ಆನೇ ಚಂದ ಹೇಳಿ ಮನಸಿಲ್ಲೇ ಹೆಮ್ಮೆ ಪಟ್ಟುಗೊಳ್ಳುತ್ತಾ ಒಳ ಹೋದರೆ…
ಒಂದೇ ಒಂದು ಕೂಸುಗೊ ಇಲ್ಲೆ! ಇದ್ದ ನಾಲ್ಕಾರುದೇ ಎಂಗೇಜ್ಡ್; ಆತಲ್ದ.. ಎಂಗಳ ದುರದೃಷ್ಟವ ಬೈಕ್ಕೊಳ್ತಾ ಆ ಜೋಡಿಗಳ ಎದುರು ಕ್ಯಾಟ್ ವಾಕ್ ಮಾಡಿರೂ,ಅವು ಈ ಹುಲುಮನುಷ್ಯರ ಕಡೆ ತಿರುಗಿ ಕೂಡ ನೋಡಿದ್ದವಿಲ್ಲೆ, ’ಹಾಳಾಗಿ ಹೋಗಲಿ’ ಹೇಳಿ ಬೋಟಿಂಗ್ ನ ಕಡೆ ಹೋದೆಯೊ°; ’ ಇಬ್ಬರಿಂಗೆ ಒಂದು ಬೋಟ್, ಪೆಡಲ್ ತೊಳ್ಕೊಂಡು ಬೇಕು,ಲೈಫ್ ಜಾಕೆಟ್ ಹಾಕೆಕ್ಕು, ಆಚ ಕಡೆ ರೆಸ್ಟ್ರಿಕ್ಡೆಡ್ ಏರಿಯ ಹೋಪಲಾಗ’ ಹೇಳಿ ಎಲ್ಲಾ ಕೇಳುವಾಗ ಹೋಪದು ಬೇಕಾ ಹೇಳಿ ಎನಗೆ ಹೆದರಿಕೆ ಆತು. ಆದರೆ ತೋರ್ಸಿಗೊಂಬಲೆಡಿಗಾ?
ಆತು, ಹತ್ತಿ ಕೂದೆ; ಇನ್ನೊಬ್ಬ ಶತ್ರುದೆ ಹತ್ತಿ ಕೂದ! ಒಂಚೂರು ದೂರ ಹೋಗಿ,ಖುಷೀಲಿ ಅತ್ಲಾಗಿ ಇತ್ಲಾಗಿ ನೋಡುತ್ತಾ ಇಪ್ಪಗ ಅವ ಎನ್ನ ಹತ್ತರೆ ’ ಇಲ್ಲೇ ಅಲ್ಲದ ಅಂದು ನಾಲ್ಕು ಜನ ಸತ್ತದು’ ಹೇಳಿ ಕೇಳಿದ°. ಎನ್ನ ಕಥೆಯೋ ದೇವರಿಂಗೇ ಪ್ರೀತಿ!

ಬೇಗ ಕರೇ೦ಗೆ ಸೇರುವ ಹೇಳಿ ಆನು ಪೆಡಲ್ ಮೆಟ್ಟಿದೆ. ಅವ° ಡೈರೆಕ್ಷನ್ ಚೇಂಜ್ ಮಾಡಿ, ನಡೂಕಂಗೆ ಕರ್ಕೊಂಡು ಹೋದ.
ಆನು ಸೀರಿಯಸ್ಸಾಗಿ ಕೇಳಿದೆ ’ ಮಾರಾಯ ನಿನಗೆ ಎನ್ನ ಕಂಡರೆ ದ್ವೇಷವಾ? ಆನು ನಿನಗೆ ಎಂಥ ಅಪಕಾರ ಮಾಡಿದ್ದೆ?’. ನೆಗೆ ಮಾಡಿದ°, ಪಾಪಿ! ಹಾಂಗೂ ಹೀಂಗೂ ದಡ ಮುಟ್ಟಿದಪ್ಪಗ ಪುನಹ ಬದುಕಿ ಬಂದಾಗಾತು. ಇಡೀ ಪಾರ್ಕಿಂಗೆ ನಾಲ್ಕು ಸುತ್ತು ಹಾಕಿದರೂ ಎಂಥದ್ದೂ ಆಯಿದಿಲ್ಲೆ.. ಕೂಸುಗಳ ವಂಶವ ಬೈಕೊಂಡು ’ಬಂದ ದಾರಿಗೆ ಟ್ಯಾಕ್ಸ್ ಇಲ್ಲೆ’ ಹೇಳಿ ವಾಪಾಸ್ ಬಂದೆಯೊ..

ರೋಡಿನ ಧೂಳು ತಿಂದುಗೊಂಡು ರೂಮಿಂಗೆ ಮುಟ್ಟುವಗ ಹೊತ್ತೊಪ್ಪಗ ಆಗಿತ್ತು, ಐಡಿಯ ಕೊಟ್ಟವನ ಮನಪೂರ್ತಿಯಾಗಿ ಬೈದೆಯೊ°..ಅದೇ ರೂಮ್ ಬಂದೀರಾ ಮಕ್ಕಳೇ ಹೇಳಿ ವೆಲ್ ಕಮ್ ಮಾಡಿತ್ತು..

ಮರುದಿನಾಣ ಡ್ಯೂಟಿ ಗ್ರೇಶಿ ತಲೆ ಹಪ್ಪಳ ಆತು.ಇನ್ನು ಗೋಣನ ಹಾಂಗೆ ಮನುಗುಲೆ ಒಂದು ವಾರ ಕಾಯೆಕ್ಕಲ್ಲ ಹೇಳುದು ಗ್ರೇಶಿ ,ಎನಗಂತೂ ಕೂಗುಲೇ ಬಂತು!!!

ಹೀಂಗೆ ಒಂದು ರಜೆಯ ದಿನ…, 4.5 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ಚೊಕ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ವಿಷ್ಣು ನಂದನ
  vishnunandana

  Olle lekhana. Bere oorili kelasa madiyondu ippa brahmachari maniyangala yellara kathe idu.

  Yenagudu hange aararu weekend trip, Cinema heli suddi thegadare kopa batthu. Friend go dinigeledare batthille heli helule avutthille.

  [Reply]

  VA:F [1.9.22_1171]
  Rating: 0 (from 0 votes)
 3. ಶ್ರೀಶಣ್ಣ
  ಶ್ರೀಶಣ್ಣ

  ಪ್ರಶಾಂತೋ.
  ಭಾರೀ ಲಾಯಿಕ ಆಯಿದು ಬರದ ಶೈಲಿ ಮತ್ತೆ ವಸ್ತು. Real bachelor.
  [ಹೋಪ° ಹೇಳಿ ಸುರು ಮಾಡಿದ ಮನುಷ್ಯ ಇನ್ನು ಎನಗೂ ಈ ವಿಷಯಕ್ಕೂ ಸಂಬಂಧವೇ ಇಲ್ಲೆ ಹೇಳುವಾಂಗೆ ತಿಂದುಗೊಂಡಿತ್ತು.]
  [ಬಿಲ್ ಕೊಡುವಾಗ ಮಾತ್ರ ,ಬದುಕ್ಕುದು ಎಷ್ಟು ಖರ್ಚಿನ ಕೆಲಸ ಅಲ್ಲದ ಹೇಳಿ ಬೇಜಾರಾತು!]-ಈಗಳೇ ಹೀಂಗೆ ಆದರೆ ಇನ್ನು ಹೆಂಡತಿ ಬಂದ ಮತ್ತೆ?
  ಕೊಶೀ ಆದ ತಮಾಶೆಗೊ:
  [ದಾರಿಯಿಡೀ ಧೂಳು,ಎಂತಕೆ ಸುಮ್ಮನೆ ಹೇಳಿ ಕೆಲವು ಜನ ಮೋರೆ ತೊಳವ ಪಾಪ ಕಾರ್ಯವೂ ಮಾಡಿದ್ದವಿಲ್ಲೆ]
  [ಮತ್ತೆ ಈ ಧೂಳಿಲ್ಲಿ ನೀನು ಬೂದಿ ಮೆತ್ತಿದ ನಾಯಿ ಹಾಂಗೆ ಕಾಂಬೆ].
  [ಅವ° ಹೇಳಿದ ಕಡೆ ಎಷ್ಟು ನೋಡಿರೂ ಒಂದು ಕಾಕೆಯೂ ಕಾಣದ್ದೆ, ಅವನ ತಲೆಗೆ ಬಡುದು ,’ಎಲ್ಲಿಯಾ°?’ ಹೇಳಿ ಕೇಳಿದರೆ ’ಅಲ್ಲಿ…’ ಹೇಳಿ ಕೈ ತೋರ್ಸಿದ..ಅವ° ಹೇಳಿದ ಕಡೆ ಒಂದು ಕೂಸೂ,ಮಾಣಿಯೂ ಇತ್ತವು]
  [ನಿನ್ನ ಅದೇ ಫೋಟೊಕ್ಕೆ ಫ್ರೇಮ್ ಹಾಕಿ ಮನೇಲಿ ನೇತಾಡ್ಸುಲಕ್ಕು’]
  [ಒಬ್ಬರನೊಬ್ಬರು ನೋಡಿಗೊಳ್ಳುತ್ತಾ, ಅವಂಗಿಂತ ಆನೇ ಚಂದ ಹೇಳಿ ಮನಸಿಲ್ಲೇ ಹೆಮ್ಮೆ]
  [ಅದೇ ರೂಮ್ ಬಂದೀರಾ ಮಕ್ಕಳೇ ಹೇಳಿ ವೆಲ್ ಕಮ್ ಮಾಡಿತ್ತು..]
  [ಇನ್ನು ಗೋಣನ ಹಾಂಗೆ ಮನುಗುಲೆ ಒಂದು ವಾರ ಕಾಯೆಕ್ಕಲ್ಲ]
  ***
  [ಕೂಸುಗಳ ವಂಶವ ಬೈಕೊಂಡು ’ಬಂದ ದಾರಿಗೆ ಟ್ಯಾಕ್ಸ್ ಇಲ್ಲೆ’ ಹೇಳಿ ವಾಪಾಸ್ ಬಂದೆಯೊ].
  ಇನ್ನೊಂದು ಸರ್ತಿ ಪಿಲಿಕ್ಕುಳಕ್ಕೆ ಹೋವ್ತ ಕಷ್ಟ ತೆಕ್ಕೊಳೆಕ್ಕು ಹೇಳಿ ಇಲ್ಲೆ.
  ಹೊತ್ತೋಪಗ ಕೆನರಾ ಕಾಲೇಜ್, ಬೆಸೆಂಟ್ ಕಾಲೇಜ್ ಬಿಡುವ ಹೊತ್ತಿಂಗೆ ಅಲ್ಲಿ ನಿಂದರೂ ಸಾಕು. ಇಲ್ಲದ್ದರೆ ಬೈಕಿಲ್ಲಿ ಒಂದರಿ ಜುಮ್ಮನೆ ಅಲ್ಲಾಂಗೆ ಹೋದರೂ ಸಾಕು
  ಅವೂದೆ ಕಾಯ್ತಾ ಇರ್ತವು. ಮತ್ತೆ ನೀನು ಕೂಸುಗಳ ವಂಶವ ಹೊಗಳಲೆ ಸುರುಮಾಡದ್ದರೆ ಕೇಳು!!!

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ಅನುಶ್ರೀ ಬಂಡಾಡಿಅನಿತಾ ನರೇಶ್, ಮಂಚಿಶುದ್ದಿಕ್ಕಾರ°ಹಳೆಮನೆ ಅಣ್ಣದೀಪಿಕಾಜಯಶ್ರೀ ನೀರಮೂಲೆಮಂಗ್ಳೂರ ಮಾಣಿಪೆಂಗಣ್ಣ°ದೇವಸ್ಯ ಮಾಣಿಉಡುಪುಮೂಲೆ ಅಪ್ಪಚ್ಚಿಬೋಸ ಬಾವಶ್ಯಾಮಣ್ಣವೇಣೂರಣ್ಣಎರುಂಬು ಅಪ್ಪಚ್ಚಿಚೂರಿಬೈಲು ದೀಪಕ್ಕಪುತ್ತೂರಿನ ಪುಟ್ಟಕ್ಕಕಾವಿನಮೂಲೆ ಮಾಣಿಒಪ್ಪಕ್ಕಪ್ರಕಾಶಪ್ಪಚ್ಚಿಪಟಿಕಲ್ಲಪ್ಪಚ್ಚಿಚೆನ್ನೈ ಬಾವ°ಕೊಳಚ್ಚಿಪ್ಪು ಬಾವವಿನಯ ಶಂಕರ, ಚೆಕ್ಕೆಮನೆಕಳಾಯಿ ಗೀತತ್ತೆಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ