ಪರಿಭಾಷೆಗಳ ಬಗ್ಗೆ ಇನ್ನಷ್ಟು…

March 26, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಧ್ವನಿಗೆ ವಿಶೇಷ ಅರ್ಥ ಇಲ್ಲದ್ದರೂ, ಮಾತಿನ ಭಾವಕ್ಕೆ ಅರ್ಥ ಇಪ್ಪಂಥಾ ಪರಿಭಾಷೆಗಳ ಶುದ್ದಿ ಅಂದೊಂದರಿ ಬೈಲಿಲಿ ಮಾತಾಡಿದ್ದು: ಸಂಕೊಲೆ
ಪರಿಭಾಷೆಗಳ ಇನ್ನಷ್ಟು ಸಂಗ್ರಹವ ಗೋಪಾಲಣ್ಣ ಮಾಡಿದ್ದವು.
ಓದಿನೋಡಿ, ನೆಗೆಮಾಡಿ…

ಒಂದೊಂದು ವೃತ್ತಿಯವು ಮಾತಾಡುವಾಗ ಅವರ ಕೆಲಸಕ್ಕೆ ಸಂಬಂಧಿಸಿದ ಶಬ್ದಂಗಳ ಉಪಯೋಗ ಮಾಡುದು ಕೇಳುಲೆ ಚೆಂದ ಇರುತ್ತು.

  • ಯಕ್ಷಗಾನ ಭಾಗವತ ಸುಬ್ಬಣ್ಣ:
    ಈ ವರ್ಷ ಕಾಚಲು ಬಂದು ತೋಟಲ್ಲಿ ಅಡಕ್ಕೆ ಮರ ಎಲ್ಲಾ ಹೋತು. ಇನ್ನು ಮುದದಿಂದ… ಹೇಳಿ ಸೆಸಿ ಹಾಕೆಕ್ಕಷ್ಟೆ.
  • ಮದ್ದಳೆಗಾರ ರಾಮಣ್ಣ :
    ಆನು ಮೊನ್ನೆ ಗುರುವಾಯೂರಿಂಗೆ ಹೋದ್ದಪ್ಪಾ.. ಬಪ್ಪಾಗ ಕಣ್ಣೂರು ವರೆಗೆ ಬಂಡಿ ಎಷ್ಟು ಮೆಲ್ಲಂಗೆ ಬಂತು ಹೇಳಿರೆ ಸಾಕು ಸಾಕಾತು.
    ಮತ್ತೆ ಮಾತ್ರ ಮೂರನೇ ಕಾಲಲ್ಲಿ ಓಡಿತ್ತು. ಸರೀ ಸಮಯ ಕೊಡೆಯಾಲ ಮುಟ್ಟುವಾಗ!
  • ಚೆಂಡೆಯ ಸುಂದರಣ್ಣ :
    ಆನು ಮನೆಂದ ಬೇಗ ಹೆರಡೆಕ್ಕು ಹೇಳಿ ಗ್ರೇಶಿದ್ದು. ಅದೇ ಸಮಯಲ್ಲಿ ಅಂಗಡಿ ಸೋಜನ ಪೊರಪ್ಪಾಡಾತು.
    ಸಾಲದ ಪೈಸೆ ಕೊಡದ್ದೆ ಕಳಿಯ ಹೇಳಿ ಜೋರು ಮಾಡಿತ್ತು. ಅದರ ವೇಷ ಹೋಗದ್ದೆ ಹೆರಡುದು ಹೇಂಗೆ?
  • ಸಂಗೀತಗಾರ ಶಿವಣ್ಣ :
    ಉದಿಯಪ್ಪಗ ಹೆರಡುವಾಗ ಹಶು ಆಗಿ ಹೊಟ್ಟೆ ತಾಳ ಹಾಕುತ್ತು. ಹೆಂಡತಿಯ ಹತ್ತರೆ ಹೇಳಿರೆ, ಇಡ್ಲಿ ಇನ್ನೂ ಆಯಿದಿಲ್ಲೆ ಹೇಳಿ ತಾರ ಸ್ಥಾಯಿಲಿ ಪರಂಚಿತ್ತು.
    ಅದರ ಮನೋಧರ್ಮ ಹೀಂಗೆ ಹೇಳಿ ಹೇಳುಲೆ ಎಡಿತ್ತಿಲ್ಲೆ, ಒಂದೊಂದರಿ ಭಾರೀ ದ್ರುತ ಗತಿ,ಕೆಲವು ಸರ್ತಿ ಭಾರೀ ವಿಳಂಬ
  • ದರ್ಜಿ ಪುಟ್ಟಣ್ಣ:
    ಅದಕ್ಕೇ ಹೇಳುದು ಒಂದೋ ಆರು ಮೊಳ,ಅಲ್ಲದ್ದರೆ ಮೂರು ಮೊಳ ಹೇಳಿ!
  • ಸರಕಾರಿ ನೌಕರ ಶಿಂಗಣ್ಣ:
    ಹಾಂಗೆ ಮಾಡುತ್ತರೆ ಕೂಡಲೇ ಎಂತಾರೂ ಶಿಸ್ತು ಕ್ರಮ ತೆಕ್ಕೊಳದ್ದೆ ಆಗ. ಎಂತಗೆ ತಡ ಆತು ಹೇಳಿ ಕಾರಣ ಕೇಳೆಕ್ಕು. ಅವರ ಅಪ್ಪ ಅಮ್ಮಂಗೆ ರಿಪೋರ್ಟು ಮಾಡೆಕ್ಕು…
  • ಕೃಷಿಕ ಅನಂತಣ್ಣ:
    ನಿನ್ನೆ ಎಂತಾತು ಹೇಳಿರೆ,ಅಡಕ್ಕೆ ತೆಕ್ಕೊಂಡು ಕಾಂಪ್ಕೊಗೆ ಹೋದೆ. ಬಪ್ಪಾಗ ಬೆಗರು ಬಿಚ್ಚಿ ಚೆಂಡಿಮುದ್ದೆ, ಮೈಯಿಡೀ ಡ್ರಿಪ್ಪಿನ ಪೈಪು ಸಿಕ್ಕಿಸಿದ್ದೋ ತೋರಿತ್ತು. ಮನೆಗೆ ಬಂದು ಬೆಲ್ಲನೀರು ಕುಡಿವಲ್ಲಿ ವರೆಗೆ ಬಚಾವಾದ್ದು ದೊಡ್ದದು..
    ಗಾವು ಅಷ್ಟು ಬಲ ಇದ್ದು. ಮಾರ್ಗ ಹೇಳಿರೆ ಪಂಪಿನ ಹೊಗೆನಳಿಗೆಯ ಹಾಂಗೆ ಕಾದು ಕರಿತ್ತು..
  • ಇಸ್ಪೇಟು ಮರುಳ ಸುಬ್ಬಣ್ಣ:
    ಈ ವರ್ಷ ಹೀಂಗೆ ಬೆಶಿಲು ಕಾದರೆ ನಮ್ಮ ತುರ್ಪು ಔಟಕ್ಕು.ಅಡಕ್ಕೆ ಒಂದೂ ಒಳಿಯ.
  • ಜ್ಯೋತಿಷ್ಯಪ್ರೇಮಿ ವಾಸುಅಣ್ಣ:
    ಮನುಷ್ಯರ ಗ್ರಾಚಾರದ ಹಾಂಗೆ ಊರಿಂಗೂ ಗ್ರಾಚಾರ ಹಿಡಿತ್ತು. ಇದಕ್ಕೆಂತ ನಿವೃತ್ತಿ? ಒಂದೂ ಗೊಂತಾಗ. ಮರ ಹತ್ತುವವರ ಅಂಜನ ಹಾಕಿರೂ ಕಾಣುತ್ತಿಲ್ಲೆ; ಇಲ್ಲದ್ದರೆ ಅಡಕ್ಕೆ ಉದುರುದಕ್ಕೆ ಮದ್ದು ಬಿಡಲಾವ್ತಿತ್ತು.
  • ಕಾಲೇಜು ಕನ್ಯೆ ಸರಳಕ್ಕ:
    ಎನ್ನ ಅಜ್ಜಿಗೆ ಸುಮ್ಮನೆ ಕೂಪಲೆಡಿಯ, ರೇಡಿಯದ ಹಾಂಗೆ ಹರಟೆ ಮಾಡಿಂಡೇ ಇಕ್ಕು. ಬಾಯಿಗೆ ಕ್ಲಿಪ್ ಹಾಕಿರೆ ಅಕ್ಕೋ ಏನೊ?
  • ಅದರ ಗೆಳತಿ ವನಜಕ್ಕ:
    ಕೆಲವು ಮುದುಕಿಗೊ ಹಾಂಗೆ, ಒಂದೇ ರೆಕಾರ್ಡಿನ ಮತ್ತೆ ಮತ್ತೆ ಹಾಕಿದ ಹಾಂಗೆ,ಹಾಂಗೆ ಮಾಡೆಡ – ಹೀಂಗೆ ಮಾಡೆಡ ಹೇಳಿಂಡೆ ಇಕ್ಕು.

– ಹೀಂಗೆ ಒಬ್ಬೊಬ್ಬರ ಮಾತು ಸುಮ್ಮನೆ ಕೂದು ಕೇಳಲೆ ಚಂದ.
ಹಳೆ ಅಜ್ಜಿಯಕ್ಕಳ ಅಜ್ಜಂದ್ರ ಮಾತು ಮತ್ತೂ ಚೆಂದ ಇರುತ್ತು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

  1. ಮುಳಿಯ ಭಾವ
    ರಘು ಮುಳಿಯ

    ಗೋಪಾಲಣ್ಣ.ಶುದ್ದಿ ಮುಗುದಪ್ಪಗ ಒ೦ದರಿ ಬ್ರೇಕ್ ಹಾಕಿ ಗಾಡಿ ಗಡಕ್ಕನೆ ನಿ೦ದು ಇ೦ಜಿನು ಬ೦ದ್ ಆದ ಹಾ೦ಗಾತನ್ನೇ !!

    [Reply]

    VA:F [1.9.22_1171]
    Rating: 0 (from 0 votes)
  2. ಗೋಪಾಲಣ್ಣ
    ಎಸ್.ಕೆ.ಗೋಪಾಲಕೃಷ್ಣ ಭಟ್ಟ

    ಅದು ಸಡನ್ ಬ್ರೇಕು,
    ಅದು ಇಲ್ಲಿ ಬೇಕು,
    ಅಷ್ಟು ಬರೆದಪ್ಪಗ ತೋರಿತ್ತು
    ಇನ್ನು ಸಾಕೋ ಸಾಕು!
    ಅದು ಯಾಕೋ ಎನಗೆ ಗೊಂತಿಲ್ಲೆ.

    [Reply]

    VA:F [1.9.22_1171]
    Rating: 0 (from 0 votes)
  3. ಸುವರ್ಣಿನೀ ಕೊಣಲೆ
    Suvarnini Konale

    ಅಪ್ಪು, ನಮ್ಮ ವೃತ್ತಿ -ಅಲ್ಲಿ ನಾವು ವ್ಯವಹರಿಸುವ ಭಾಷೆ , ನಮ್ಮ ನಿತ್ಯದ ಮಾತಿನ ಮೇಲೆ ಪ್ರಭಾವ ಬೀರುದಪ್ಪು…
    ಶುದ್ದಿ ಲಾಯ್ಕಾಯ್ದು :)

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆರ್ಲದಣ್ಣಚೆನ್ನೈ ಬಾವ°ಅನಿತಾ ನರೇಶ್, ಮಂಚಿಮಾಷ್ಟ್ರುಮಾವ°ಕಾವಿನಮೂಲೆ ಮಾಣಿದೀಪಿಕಾಹಳೆಮನೆ ಅಣ್ಣಉಡುಪುಮೂಲೆ ಅಪ್ಪಚ್ಚಿಎರುಂಬು ಅಪ್ಪಚ್ಚಿಕಳಾಯಿ ಗೀತತ್ತೆಜಯಗೌರಿ ಅಕ್ಕ°vreddhiಸುಭಗಯೇನಂಕೂಡ್ಳು ಅಣ್ಣವಿಜಯತ್ತೆಪೆಂಗಣ್ಣ°ಪುಟ್ಟಬಾವ°ಚೂರಿಬೈಲು ದೀಪಕ್ಕಸಂಪಾದಕ°ಶುದ್ದಿಕ್ಕಾರ°ಪಟಿಕಲ್ಲಪ್ಪಚ್ಚಿಚುಬ್ಬಣ್ಣಶೀಲಾಲಕ್ಷ್ಮೀ ಕಾಸರಗೋಡುಪುತ್ತೂರುಬಾವಬೊಳುಂಬು ಮಾವ°ತೆಕ್ಕುಂಜ ಕುಮಾರ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ