ಇರುವಾರ : ಶುದ್ದಿ ಹೇಳುಗಾ..?

ಚತುಷ್ಪದಿಲಿ “ಶುದ್ದಿ ಹೇಳುಗಾ..?” ಮೊದಲ್ನೇ ತುಂಡು ಬರದು ಪಷ್ಟುಪ್ರೈಸು ಬಂದದು ಬೈಲಿಂಗೆಲ್ಲ ಮರದಿರ. ಅಲ್ಲದೋ?
ಮುಳಿಯಭಾವನ ಭಾಮಿನಿ ಹೇಂಗೆ ಚೆಂದವೋ, ನೀರ್ಕಜೆ ಅಪ್ಪಚ್ಚಿಯ ದ್ವಿಪದಿಗೊ ಹೇಂಗೆ ಚೆಂದವೋ, ನೆಗೆಮಾಣಿಯ ಚತುಷ್ಪದಿಯೂ ಚೆಂದ ಆವುತ್ತು – ಹೇಳಿ ಬೋಚಬಾವಂದ ತೊಡಗಿ ಎಲ್ಲೋರುದೇ ಹೇಳಿಗೊಂಡಿತ್ತಿದ್ದವು.
ಮೊದಲಾಣದ್ದಕ್ಕೆ ಒಪ್ಪ ಬಂದದರಿಂದ ಪ್ರೇರಿತ – ಈಗ ಇದಾ, ಎರಡ್ಣೇ ತುಂಡು.

ಓದಿ, ಲಾಯಿಕಿದ್ದು ಹೇಳಿಕ್ಕಿ. 😉
ಆತೋ?

ಸಂಕೊಲೆ: ಶುದ್ದಿ ಹೇಳುಗಾ – 01

ಈಗ ನೋಡಿ, ಎರಡ್ಣೇ ಸರ್ತಿ!
ಶುದ್ದಿ ಹೇಳುಗಾ – 02
ನೆಗೆ  ಚೆಂದಸ್ಸು – ತಿಂದರಾಗ – ಅಷ್ಟತ್ರಿಒಡೆ ತಾಳ (/ ಜಂಬೆರೂಪಕ್ಕ° ತಾಳ)

ಬಲ್ಲನಾಡು ಮಾಣಿಗೆಂತ
ಎಲ್ಲಿನೋಡು ಬೈಲಶುದ್ದಿ
ಹಲ್ಲುತೋರಿ ನೆಗೆಯ ಮಾಡಿ
ಶುದ್ದಿ ಹೇಳುಗಾ..

ಉಂಬೆ ಮಾವ ಹೆಗಲಚೀಲ
ದಂಬೆಯಷ್ಟು ದೊಡ್ಡ ಇದ್ದು!
ತುಂಬ ಜೋರು ಮಾತನಾಡಿ
ಶುದ್ದಿ ಹೇಳುಗಾ..

ಚೂರಿಬೈಲು ದೀಪ ಅಕ್ಕ
ಬಾರಿ ಗಟ್ಟಿ ಹಲುವ ಮಾಡಿ
ಆರು ಹಲ್ಲು ಮುರುದ ಮತ್ತೆ
ಶುದ್ದಿ ಹೇಳುಗಾ..

ಬಟ್ಟಮಾವ ಬರದು ಕೊಟ್ಟ
ಕಟ್ಟ ಶುದ್ದಿ ಚೆನ್ನೆಯಣ್ಣ
ಬಿಟ್ಟು ಹೋದ ಹನ್ಸು ಸೇರ್ಸಿ
ಶುದ್ದಿ ಹೇಳುಗಾ..

ಒಪ್ಪಕ್ಕನ ಲೇಬು ಮುಗುದು
ಬಪ್ಪ ಒರಿಶ ಕ್ಳಾಸು ಮುಗುದು
ಇಪ್ಪ ಸಮಯ ಓದಿ ಆಗಿ
ಶುದ್ದಿ ಹೇಳುಗಾ..

ಜೋರು ನೆಗೆಯ ದೊಡ್ಡ ಅಳಿಯ
ಹಾರಿ ಹಾರಿ ನಿಂದುಗೊಂಡು
ಮೋರೆ ಪೂರ ಜೇನು ಅರುಶಿ
ಶುದ್ದಿ ಹೇಳುಗಾ..

ಸರ್ಪಮಲೆಯ ಮಾವ ಇನ್ನು
ಚೆರ್ಪುಮೆಟ್ಟಿ ಬಂದು ಪೈಶೆ-
ತುರ್ಪು ಅಪ್ಪ ಕೆಣಿಯ ಎಲ್ಲ
ಶುದ್ದಿ ಹೇಳುಗಾ..

ಸರ್ತ ಕೂದ ಸುಭಗ ಅಣ್ಣ
ಇರ್ತಲೇಯ ಶುದ್ದಿ ಹುಡ್ಕಿ
ಮೂರ್ತ ನೋಡಿ ಪ್ರಕಟ ಮಾಡಿ
ಶುದ್ದಿ ಹೇಳುಗಾ..

ದೊಡ್ಡಜ್ಜನ ಮನೆಗೆ ಹೋದ
ದೊಡ್ಡತ್ತೆಯ ಕಾದು ಕೂದು
ಬಡ್ಡು ಹಿಡುದ ದೊಡ್ಡಮಾವ
ಶುದ್ದಿ ಹೇಳುಗಾ..

ಮಕ್ಕೊಗಪ್ಪ ಶುದ್ದಿಯೆಲ್ಲ
ಶೆಕ್ಕರೇಯ ಹಾಂಗೆ ಮಾಡಿ
ಸಿಕ್ಕುವಾಂಗೆ ಶಾಂತ ಅತ್ತೆ
ಶುದ್ದಿ ಹೇಳುಗಾ..

ತುಪ್ಪೆಕಲ್ಲು ತಮ್ಮ ನೋಡಿ
ಕೆಪ್ಪೆ ತೂಗಿದಾಂಗೆ ಮಾಡಿ
ಚೆಪ್ಪೆ ಅಲ್ಲ, ಖಾರದೊಂದು
ಶುದ್ದಿ ಹೇಳುಗಾ…

ಯೇನಕೂಡ್ಳು ಕೆಮರದಣ್ಣ
ಯೇನೆಮಾಡ್ಳಿ ಪಟವ ತೆಗದು
ಆನೆ ಕುಂಞಿ – ಜಿಂಕೆ ಮಾಡಿ
ಶುದ್ದಿ ಹೇಳುಗಾ..

ಶೇಡಿಗುಮ್ಮೆ ಬಾವ ಇನ್ನು
ಮೋಡಿ ಮಾಡಿ ಬೈಲ ಕರೆಲಿ
ಸೂಡಿ ಸೂಡಿ ಕಟ್ಟಿ ಹಾಕಿ
ಶುದ್ದಿ ಹೇಳುಗಾ…

ಸಿಂದು ನದಿಯ ಹತ್ರೆ ಚಳಿಲಿ
ಸಿಂಧೂರದ ಬೆಶಿಯ ಗ್ರೇಶಿ
ಬಂದು ಭಾಶೆ ಚೊಕ್ಕಾಡಿಲಿ
ಶುದ್ದಿ ಹೇಳುಗಾ..

ಸುವರ್ಣಿನೀ ಅಕ್ಕ ಅಂತು
ಪವರು ಮಾತ್ರೆ ಕೊಟ್ಟುಗೊಂಡು
ಕವರು ಮಾಡ್ತ ಪ್ರಕೃತಿ ಬಗ್ಗೆ
ಶುದ್ದಿ ಹೇಳುಗಾ…

ಡಾಗುಟ್ರೇಟು ಮಹೇಶಣ್ಣ
ಸಾಗುಸೀವು ತಿಂದ ನಮುನೆ
ಮೂಗು ಬೆರಳು ಮಡಗುವಂತ
ಶುದ್ದಿ ಹೇಳುಗಾ…

ತೆಕ್ಕುಂಜೆ ಕುಮಾರಣ್ಣ
ಸುಕ್ರುಂಡೆ ತಿಂಬ ಪ್ರೈಸು
ತೆಕ್ಕೊಂಡು ಮನೆಗೆ ಹೋಪ
ಶುದ್ದಿ ಹೇಳುಗಾ…

ಬಿಟ್ಟ ಹಲ್ಲಿನೊಳವೆ ನೆಗೆಲಿ
ಲಟ್ಟಣೀಗೆ ಕುಟ್ಟಿಕೊಡಿಲಿ
ಪೆಟ್ಟು ತಿಂದ ಶ್ರೀಶ ಅಣ್ಣ
ಶುದ್ದಿ ಹೇಳುಗಾ…

ಬೈಲ ಕರೆಯ ಕಿಟ್ಟ ಅಣ್ಣ
ಜೈ ಜೈ ಹೇಳಿಗೊಂಡು
ಬೈಲು-ದೇಶ ಉದ್ಧಾರದ
ಶುದ್ದಿ ಹೇಳುಗಾ..

~*~*~

(ಇನ್ನೂ ಶುದ್ದಿ ಹೇಳುಗೋ..?)

ಸೂ:

  • ಇದು ಕೇವಲ ನೆಗೆ(ಬಂದರೆ) ಮಾಡ್ಳೆ, ಅಷ್ಟೇ. ಆರಿಂಗಾರು ಬೇಜಾರಾದರೆ ಗುರಿಕ್ಕಾರ್ರ ಹತ್ರೆ ಚಾಡಿ ಹೇಳಿಕ್ಕೆಡಿ, ಆತೋ? 😉

ನೆಗೆಗಾರ°

   

You may also like...

12 Responses

  1. mankuthimma says:

    idu first aaydu negegaaranna,
    bosabhavaa, enta kaanadde sumaaru dina aatanne?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *