Oppanna.com

ಅಜ್ಜಕಾನ ಭಾವನ “ಅಭಾವ”

ಬರದೋರು :   ಅಜ್ಜಕಾನ ಭಾವ    on   02/01/2010    2 ಒಪ್ಪಂಗೊ

ಅಜ್ಜಕಾನ ಭಾವ

ಒಪ್ಪಣ್ಣನ ಬೈಲಿಲಿ ಹೊತ್ತೋಪಗ ಮಾಡ್ತ ಕಟ್ಟೆಪುರಾಣಲ್ಲಿ ಸಕ್ರಿಯವಾಗಿ ಇಪ್ಪ ಕೆಲವು ಪುಳ್ಳರುಗಳಲ್ಲಿ ಅಜ್ಜಕಾನ ಬಾವನೂ ಒಬ್ಬ.
ಆಚಕರೆಮಾಣಿಯತ್ರೆ ಯೇವತ್ತೂ ಜಗಳ ಮಾಡಿಗೊಂಡು,  ಪುಟ್ಟಕ್ಕ, ಒಪ್ಪಕ್ಕ ಇವರತ್ರೆಲ್ಲ ಕುಶಾಲು ಮಾತಾಡಿಗೊಂಡು, ಬೈಕ್ಕಿಲಿ ತಿರುಗಿಗೊಂಡು, ಎಲ್ಲೊರತ್ರೂ ಕುಶಾಲು ಮಾತಾಡಿಗೊಂಡು ನೆಗೆಮೋರೆಲಿ ಇಪ್ಪದು ಈ ಭಾವನ ವಿಶೇಷತೆ. ಎಂತಾರು ಕಷ್ಟಕಾಲಲ್ಲಿ  ಉಪಕಾರಕ್ಕೆ ಸಿಕ್ಕೆಕ್ಕಾರೆ ತೆಯಾರು. ಅಡಿಗೆಲಿ ಒಂದು ಕೈ ಮೇಲೆ! ಓ ಮೊನ್ನೆ ಬೆಂಗ್ಳೂರಿಂಗೆ – ಪೆರ್ಲದಣ್ಣನ ಮನೆಗೆ- ಹೋಗಿಪ್ಪಗ ಅಲ್ಲಿ ತೆಳ್ಳವು ಮಾಡಿ ಎಲ್ಲೊರಿಂಗುದೇ ಕುಶಿ ಆಯಿದಡ. ’ನಿನ್ನ ಮದುವೆ ಅಪ್ಪ ಕೂಸಿಂಗೆ ಚಾನ್ಸು ಮಾರಾಯ’ ಹೇಳಿ ಪೆರ್ಲದಣ್ಣ ಹೇಳಿದ್ದಕ್ಕೆ ಎರಡು ದಿನ ನಾಚಿಗೆ ಮಾಡಿದ್ದನಡ. ಹತ್ತರಾಣೋರತ್ರೆ ಎಷ್ಟುದೇ ಮಾತಾಡುಗು. ರೂಪತ್ತೆಯ ಹಾಂಗೆ ’ಹೇಳಿಗೊಂಬವು’ ಸಿಕ್ಕಿರೆ ಎಷ್ಟುದೇ ಹೇಳುಸುಗು. ಬಾಯಿ ಬಿಡುಸುಗು. ಗುಣಾಜೆಮಾಣಿಗೆ ಎಂತಾರು ಟೋಂಟು ಮಡುಗೆಕ್ಕಾರೆ, ಪಕ್ಕನೆ ಬದಿಯಡ್ಕಂದ ಎಂತಾರು ತರೆಕ್ಕಾರೆ, ದೊಡ್ಡಭಾವಂಗೆ ಬೈಕ್ಕು ಬೇಕಾರೆ, ಶೇಡಿಗುಮ್ಮೆ ಭಾವಂಗೆ ಎರಡು ಹೆಟ್ಟೆಕ್ಕಾರೆ – ಎಲ್ಲ ಈ ಅಜ್ಜಕಾನಭಾವನೇ ಆಯೆಕ್ಕು. ಈ ಭಾವನತ್ರೆ ಎಂತಾರು ಶುದ್ದಿ ಹೇಳು, ಶುದ್ದಿ ಹೇಳು – ಹೇಳಿ ಎಂಗೊ ಎಲ್ಲ ಒತ್ತಾಯ ಮಾಡಿದ್ದಕ್ಕೆ ಈಗ ಶುರು ಮಾಡಿದ. ಇದಾ, ಇಲ್ಲಿ ಬರೆತ್ತನಡ.
-ಜ್ಜಕಾನ ಭಾವ ಅಭಾವ ಆಗಿ ನಿಂಗಳ ಮುಂದೆ, ಈ ಅಂಕಣಲ್ಲಿ.

ಓದಿ, ಇವಂಗೂ ಒಪ್ಪಕೊಡ್ಳೆ ಮರೇಡಿ…!!! ಆತೋ? ಏ°?

ಪೀಠಿಕೆ :

ಅವಾಗಾವಾಗ ಜೀವ ಇಪ್ಪ ದೂರವಾಣಿ ಬಡಕ್ಕೊಂಬಗ , ಆರು ಹೇಳಿ ಕೇಳಿದ ಅಬ್ಬೆ ‘ ಮಗಾ ಒಪ್ಪಣ್ಣಡ ಬೇಗ ಬಾ ಒಂದರಿ’ ಹೇಳಿಯಪ್ಪಗ ಅತ್ಲಾಗಿ ಓಡಿದೆ. ಒಪ್ಪಣ್ಣ ಒಂದೇ ಉಸಿರಿಂದ ‘ಬಾವ ಆನು ಒಪ್ಪಣ್ಣ. ಇದಾ ಎನ್ನ ಬ್ಲಾಗು ಈಗ ವೆಬ್‌ಸೈಟು ಆಯಿದು. ಎನ್ನೊಟ್ಟಿಂಗೆ ನಿಂಗಳೂ ಬರೆಯಿಕ್ಕಿದಾ” ಹೇಳಿದ.

’ಎಂತ ಬಾವ, ರಜ್ಜ ವಿವರ್ಸಿ ಹೇಳು’ ಹೇಳಿಯಪ್ಪಗ ವಿವರ್ಸಿದ. ಅವಗ ಮನಸ್ಸಿಲಿ ಬಂತು ಚಿಂತೆ: ’ಆತು ಬರೆತ್ತೆ ಹೇಳಿದ್ರೆ – ಎಂತ ಬರೆವದು. ಮತ್ತೆ ಅವನ ಹಾಂಗೆ ಪ್ರತಿವಾರ ಬರೆವಲೆ ಈ ಕಷ್ಟ ಕಲಿಕಾಲಲ್ಲಿ ಸಮಯ ಎಲ್ಲಿದ್ದು! ಎಂತ ಮಾಡುದಪ್ಪ!!’ ಇಲ್ಲೆ ಹೇಳುವ ಹಾಂಗೆ ಇಲ್ಲೆ. ನಿಂಗಳ ಹಾಂಗೆ ಎನಗೂ ತುಂಬಾ ಬೇಕಾದವ ಇದಾ. ಅಖೇರಿಂಗೆ ಹೇಳಿದೆ ‘ಆತು ಬರೆತ್ತೆ ಆದರೆ ನಿನ್ನ ಹಾಂಗೆ ಪ್ರತಿವಾರ ಬರೆವಲೆಡಿಗು ಹೇಳುವ ಧೈರ್ಯ ಇಲ್ಲೆ. ಅವಾಗಾವಾಗ ಎವದಾದರೊಂದು ವಿಷ್ಯ ತೆಕ್ಕೊಂಡು ಬರೆತ್ತೆ.  ಒಂದು ಕೈ ನೋಡುವ. ಎಂತದಕ್ಕು ಇದು ನಮ್ಮ ಭಾಷೆ, ಸಂಸ್ಕೃತಿ ಉಳುಸುಲೆ ಗುರುಗಳ ಆದೇಶ ಆಯಿದನ್ನೆ’.

ಮತ್ತೆ ನಾಕು ದಿನ ಪುರುಸೊತ್ತಿಲ್ಲೆ. ಇಂದಿಂಗೆವರೆಗೆ ಒಪ್ಪಣ್ಣನು ಸಿಕ್ಕಿದ್ದನಿಲ್ಲೆ. ಯೋಚಿಸುವಾಗ ಮತ್ತೆ ಬಂತಿದಾ ಕರೆ. ಒಂದೆ ಪ್ರಶ್ನೆ ‘ಯಾವಾಗ ಶುರು’ ಹೇಳಿ. ಅದಕ್ಕೆ ’ಶುಭಸ್ಯ ಶೀಘ್ರಂ’ ಹೇಳಿ ಇಂದೇ ಬರೆತ್ತಾ ಇಪ್ಪದು. ಬರೆವಗ ಒಂದು ‘ಹೆಡ್ಡಿಂಗು’ ಇಡೆಕ್ಕು ಹೇಳ್ತವು ಎಲ್ಲ ಬರೆವ ಮಿತ್ರಂಗ (ದೊಡ್ಡ ದೊಡ್ಡ ಪೇಪರಿಲಿ ಬರೆವವು ನಮ್ಮ ಮುಳಿಯಾಲ ಅಪ್ಪಚ್ಚಿಯಂತವು). ನವಗೆ ‘ಪುಡ್ಡಿಂಗು'(ಪೇಟೆ ಭಾಷೆಲಿ) ಇದ್ದಾಂಗೆ ಬರೆತಕ್ಕೆ ‘ಹೆಡ್ಡಿಂಗು’. ನವಗೆಂತರ ಯೋಚಿಸಿದೆ. ಹೇಂಗೂ ಅಜ್ಜಕಾನ ಬಾವ ಆನು.
ಅದಕ್ಕೆ ‘ಅಭಾವ‘ ಕಾಲಂ ಹೇಳಿ ಮಡಗುವನ ಹೇಳಿ..
ಕೆಳ ಒಂದು ಸಣ್ಣ ಗೆರೆ ‘ಅಬಾವ ಆದ್ದರ ಅರೆವಲೆ’ ಹೇಳಿ. ಹೇಂಗೆ? ಅಕ್ಕನ್ನೆ.?!!

ಒಪ್ಪಣ್ಣಂಗೆ ಕೊಟ್ಟ ಸಹಕಾರ ಎನಗೂ ಕೊಡ್ತಿ ಹೇಳುವ ನಂಬಿಕೆ ಇದ್ದು. ಮತ್ತೆ ಒಂದೊಂದೆ Replique Montres Pas Cher ವಿಚಾರಂಗಳ ಮಾತಾಡ್ತ ಬೇಟಿ ಅಪ್ಪ.

ಪ್ರೀತಿಂದ ನಿಂಗಳ,
ಅಜ್ಜಕಾನ ಬಾವ.
‘ಸಂಪರ್ಕ’ ಇಲ್ಲದ್ದೆ ಸಂಪರ್ಕಿಸುಲೆ:

2 thoughts on “ಅಜ್ಜಕಾನ ಭಾವನ “ಅಭಾವ”

  1. ajjakana bavana abhava bhari laikiddu.kushi aatu oppannana hange baravale heratadu nodi.innondari tellavu madire timbale engalu batteyo.helping nature tumba kushi aatu.good luck.. hare raama..

    1. ಬರವಲೆ ಶುರು ಮಾಡಿ ಆಯಿದು.. ಮುಂದುವರೆಸುಲೆ ಪುರುಸೊತ್ತೆ ಇಲ್ಲೆ.. ಎಂತ ಮಾಡುದು…
      ಶಾಂತತ್ತೆ ಮಾಡಿದ ತೆಳ್ಳವಿನಷ್ಟು ಲಾಯ್ಕ ಆಗಪ್ಪ.. ನಿಂಗಳಲ್ಲಿಗೆ ಬಂದು ಗಡದ್ದು ಹೊಡೆಯುವ ಯೋಚನೆ ಮಾಡ್ತ ಇದ್ದೆ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×