ಒಪ್ಪ ಹೆಸರು: ಬಂಡಾಡಿ ಅಜ್ಜಿ
ಇಪ್ಪ ಹೆಸರು: Bandady Ajji
ಮಿಂಚಂಚೆ ವಿಳಾಸ: bandadyajji AT gmail.com
ನಿಂಗೊಗೆ ಬಂಡಾಡಿಅಜ್ಜಿ ಗುರ್ತ ಇದ್ದಲ್ದ?
ನವಗೆಲ್ಲ ಅಂಬಗಂಬಗ ಬುದ್ಧಿಮಾತು ಹೇಳಿಯೊಂಡು, ಒಳ್ಳೆದರ ತಿಳಿಸಿಗೊಂಡು, ಎಲೆ ತಿಂದೊಂಡು, ರೇಡ್ಯ ಕೇಳಿಯೊಂಡು - ಒಟ್ಟಿಲಿ ನಮ್ಮೊಟ್ಟಿಂಗೆ ಆತ್ಮೀಯವಾಗಿ ಬದುಕ್ಕಿಯೊಂಡು ಇಪ್ಪ ಹಿರಿ ಜೀವ.
ತುಂಬ ಅನುಭವಸ್ಥರು. ಪ್ರಾಯಲ್ಲಿ ಅಜ್ಜಿ ಹೇಳಿ ಕಾಣದ್ರೂ, ಅನುಭವಲ್ಲಿ, ಮಾತಾಡ್ತ ಕ್ರಮಲ್ಲಿ ಥೇಟ್ ಅಜ್ಜಿಯೇ!!
ನೀನು ಅಜ್ಜಿಯೋ? ಹೇಳಿ ಕೇಳಿರೆ, "ಅಂದ್ರಾಣ ಅಜ್ಜಿಪುಳ್ಳಿ, ಈಗಾಣ ಪುಳ್ಯಕ್ಕಳ ಅಜ್ಜಿ...!" ಹೇಳುಗು ನೆಗೆ ಮಾಡಿಗೊಂಡು.
ರಜ ರಜ ಹಳ್ಳಿ ಮದ್ದುಗೊ, ಕಷಾಯಂಗೊ - ಎಲ್ಲ ಅರಡಿಗು.
ಶೀತವೋ, ತಲೆಬೇನೆಯೋ ಮಣ್ಣ ಪುಳ್ಯಕ್ಕೊಗೆ ಬಂದರೆ ಜೆಂಗಂದ ರಜ ಗೆಣಮೆಣಸು ಗುದ್ದಿ - ಹೇಂಗೂ ಅಡಕ್ಕೆ ಗುದ್ದುತ್ತ ಗುಂಡು ಇದ್ದನ್ನೆ- ಗುದ್ದಿ ಕೊಡುಗು.
ಹಾಂಗಿರ್ತ ಅಜ್ಜಿ ಅದು. ಅವಕ್ಕೆ ಗೊಂತಿಪ್ಪ ಅಜ್ಜಿಮದ್ದುಗಳ ತಿಳಿಶಲೆ ಒಪ್ಪಣ್ಣ ಕೇಳಿಗೊಂಡಪ್ಪಗ ಸಂತೋಷಲ್ಲಿ ಒಪ್ಪಿ, ಬಂದು ಹೇಳಿಕೊಟ್ಟವು.
ಅಂಬಗಂಬಗ ಬೈಲಿಂಗೆ ಬಂದು ಶುದ್ದಿ ಹೇಳುಸುವೊ ಕಂಡತ್ತು.
ಓದಿ, ಎಡಿಗಾರೆ ಮದ್ದು ಮಾಡಿ.
ಅಜ್ಜಿಗೂ, ಅವರ ಮದ್ದಿಂಗೂ ಒಪ್ಪ ಕೊಟ್ಟೋಂಡಿರಿ. ಆತೋ?
ಕಷಾಯ ಕೈಕ್ಕೆ ಆದರೆ ಎರಡು ಪರಂಚುದಕ್ಕೆ ಅಡ್ಡಿ ಇಲ್ಲೆ..!! ;-)
Register:ರಿಜಿಸ್ತ್ರಿ