ಒಪ್ಪ ಹೆಸರು: ಕಾಂತಣ್ಣ
ಇಪ್ಪ ಹೆಸರು: ಶ್ರೀಕಾಂತ ಹೆಗಡೆ
ಮಿಂಚಂಚೆ ವಿಳಾಸ: geervaanee AT gmail.com
ನಮ್ಮ ಮನೆಮನೆಗೂ ಬಪ್ಪ ಕಾಂತಣ್ಣನ ನವಗೆ ಗುರ್ತ ಇಪ್ಪಲೇ ಬೇಕು, ಅಲ್ದಾ?
ಗೊಂತಾಯಿದಿಲ್ಲೆಯೋ?
ಕಾಂತಣ್ಣ ಆರು? ಒಂದು ಸುಳುಹು ಕೊಡ್ತೆ – ಕಾಂತಣ್ಣನ ಇನ್ನೊಂದು ಹೆಸರು ಸಿರಿರಮಣ!
ಇವರ ಪ್ರತಿಭೆಂದಾಗಿ ನಮ್ಮ ಮನೆಮನೆಗೆತ್ತುವ ಮನೆ ಭಾಷಿಕರ ಪತ್ರಿಕೆ “ಹವ್ಯಕ”ದ ಗೌರವ ಸಂಪಾದಕರಾಗಿ, ಯಶಸ್ವಿ ಕೆಲಸ ಮಾಡಿಗೊಂಡು ಇದ್ದವು, ಕೆಲವು ಒರಿಶಂದ.
ನಿಂಗಳ ಮನಗೆ ಬಪ್ಪ “ಹವ್ಯಕ“ದ ಸುರೂವಾಣ ಪುಟ ತೆಗದು ನೋಡಿ, ಕಾಂತಣ್ಣನ ಹೆಸರು ಇದ್ದೇ ಇರ್ತು!
ಈಗ ಗೊಂತಾತಾ? ಇಲ್ಲೆಯಾ?
ಸಂಸ್ಕೃತಿ ಬಗೆಗೆ ವಿಶೇಷವಾಗಿ ಅಭಿಮಾನ ಇಪ್ಪಂತಾ ವೆಗ್ತಿ!
ಮಾಷ್ಟ್ರಾಗಿ ಮಕ್ಕಳ ತಿದ್ದಿಗೊಂಡಿಪ್ಪ ವೆಗ್ತಿ, ಸಂಸ್ಕೃತಲ್ಲಿ ನಿರರ್ಗಳತೆ ಇಪ್ಪಂತಾ ವೆಗ್ತಿ, ಕಂಪ್ಯೂಟರಿಂದ ಹಿಡುದು ಚೋಕಿನ ತುಂಡಿನ ವರೆಗೆ ಆಸಕ್ತಿ ಇಪ್ಪ ವಿಶೇಷ ವೆಗ್ತಿ!
ಮಕ್ಕಳೊಟ್ಟಿಂಗೆ ಮಕ್ಕೊ ಆಗಿ, ಪುಳ್ಳರೊಟ್ಟಿಂಗೆ ಪುಳ್ಳರಾಗಿ, ಹಿರಿಯರೊಟ್ಟಿಂಗೆ ಹಿರಿಯರಾಗಿ, ವಿದ್ವಾಂಸರೊಟ್ಟಿಂಗೆ ವಿದ್ವಾಂಸರಾಗಿ ಬೆರವದು ಇವರ ವಿಶೇಷತೆ.
ನಾಕು ಜೆನ ನಮ್ಮೋರು ಇದ್ದಲ್ಲಿ ಇವು ಮಾತು ಹೇಳಿರೆ ಅದಕ್ಕೆ ಬೆಲೆ ಇದ್ದೇ ಇದ್ದು!
ತುಂಬಾ ಹಿರಿಯರು, ವಯಸ್ಸಿಲಿ ಅಲ್ಲ – ವೆಗ್ತಿತ್ವಲ್ಲಿ.
ಕಾಂತಣ್ಣ ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳುದು ನವಗೆಲ್ಲ ಸಂತೋಷ, ಅಭಿಮಾನದ ವಿಶಯ..
ಈಗಾಗಲೇ ಪಂಜ ಭಾಷೆ, ಚೊಕ್ಕಾಡಿಬಾಶೆ, ಕುಂಬ್ಳೆ ಬಾಶೆ, ಅದು ಇದು ಹೇಳಿ – ಬೈಲಿಲಿ ಎಲ್ಲವೂ ಬಯಿಂದು!
ಕಾಂತಣ್ಣಂದು ಸಾಗರ ಹೊಡೆಣ ಮಧುರವಾದ ಹವಿಕ ಭಾಷೆ. ಅವರ ಶುದ್ದಿ ಓದಿಗೊಂಡು ಹೋದ ಹಾಂಗೆ ಸಾಗರ ಭಾಷೆಯೂ ಬಂದುಬಿಡ್ತು ನವಗೆ!
ನಂಗು ಸಾಗ್ರ ಕಡೆ ಭಾಶೆ ಮಾತಾಡ್ಕೆ ಬತ್ತ್ ಹೇಳಿ ನಿಂಗೊಕೆ ಕುಷಿ ಆಗ್ತು, ಕಡಿಗೆ…
ಕಡಿಗಾ..?
ನಮ್ಮ ಭಾಷೆ, ಜನಜೀವನ, ವಿದ್ಯಾಭ್ಯಾಸ, ಸಂಸ್ಕೃತ, ಸಂಸ್ಕೃತಿ – ಇದರ ಬಗೆಗೆ ಇಲ್ಲಿ ಶುದ್ದಿ ಹೇಳುಗು..
ಕಾಂತಣ್ಣನ ಎಲ್ಲ ಶುದ್ದಿಗಳ ಓದಿ, ಹೊಸ ಹೊಸ ವಿಶಯಂಗಳ ತಿಳ್ಕೊಂಬ,
'ಹವ್ಯಕ'ದ ಸಿರಿರಮಣ ಕಾಂತಣ್ಣ ಆಗಿ ಶುದ್ದಿ ಹೇಳ್ತವು...
ಎಲ್ಲರೂ ಒಪ್ಪ ಕೊಡಿ..
Register:ರಿಜಿಸ್ತ್ರಿ
Facebook:ಮೋರೆಪುಟ