Oppanna.com

ಹಳೆಮನೆಅಣ್ಣ `ಹೊಸ ಕೆಮರಲ್ಲಿ’ ತೆಗದ ಪಟಂಗೊ…

ಬರದೋರು :   ಹಳೆಮನೆ ಅಣ್ಣ    on   30/01/2010    11 ಒಪ್ಪಂಗೊ

ಹಳೆಮನೆ ಅಣ್ಣ

ಹಳೆಮನೆ ಕೆಮರದಣ್ಣ ಓ ಮೊನ್ನೆ ಸಿಕ್ಕಿದವು, ಗುಡ್ಡೆತಲೆಲಿ – ಮಂಜಪ್ಪು ಕೋಟೆಯ ಹತ್ರೆ!
ಕೈಲಿ ಒಂದು ಕೇನು ಇತ್ತು. ಕೊರಳಿಲಿ ಒಂದು ಕಪ್ಪು ಬೆಳ್ಟು ಇತ್ತು.
ಕೇನಿಲಿ ಬೆಳೀ ಹಾಲಿತ್ತು, ಬೆಳ್ಟಕೊಡಿಲಿ ಕರಿಕೆಮರ ಇತ್ತು!
‘ಚೆಲಾ, ಇದೆಂತ ಹಳೆಮನೆಅಣ್ಣ! ಅದೆಂತಕೆ, ಇದೆಂತಕೆ? ಎರಡೂ ಒಟ್ಟಿಂಗೆ ಎಂತಕೆ?’ ಕೇಳಿದೆ.

“ಅದು ನೋಡು ಒಪ್ಪಣ್ಣಾ, ಆನೀಗ ಡಿಪಕ್ಕೆ ಹಾಲು ಹಾಕಲೆ ಹೋಪದು.
ಎಲ್ಲಿಗಾರು ಹೋಪಗ ಕೆಮರ ಒಂದು ನೇಲುಸಿಗೊಂಬದು. ಒಳ್ಳೊಳ್ಳೆ ದೃಶ್ಯಂಗೊ ಸಿಕ್ಕಿರೆ ಪಟತೆಗವದು.
ಮತ್ತೆ ಆ ದೃಶ್ಯ ಪಟಂಗಳ ಇಂಟರ್ನೆಟ್ಟಿಲಿ ನೇಲುಸುದು” – ಹೇಳಿದ° ನೆಗೆಮಾಡಿಗೊಂಡು.
ಆನೆಂತ ನೆಗೆಮಾಡಿದ್ದಿಲ್ಲೆ, ಮಾಡಿದ್ದರೆ ಅದನ್ನುದೇ ಒಂದು ಪಟ ತೆಗೆತ್ತಿತನೋ ಏನೋ!

ಹಳೆಮನೆ ಅಣ್ಣ ಪಟತೆಗವದು ಗೊಂತಿತ್ತು, ಆದರೆ ಪಟ ಹೇಂಗೆ ಬತ್ತು ಹೇಳಿ ಆರು ನೋಡಿದ್ದ°!
ಯೇವದಾರು ಜೆಂಬ್ರದ್ದಾದರೆ – ಎಲ್ಲವುದೇ ಹೆಚ್ಚುಕಮ್ಮಿ ಒಂದೇ ನಮುನೆ ಇರ್ತು. ಬಟ್ಟಮಾವ, ಮದುಮ್ಮಾಯ, ಉಪ್ನಯನದ ಮಾಣಿ, ಅದು ಇದು.
ಆದರೆ ನಮ್ಮದೇ ಪರಿಸರದ ಪಟಂಗ ಹೇಂಗಿಕ್ಕು?!
ದೊಡ್ಡಬಾವನಲ್ಲಿಗೆ ಹೋಗಿ ಒಂದರಿ ಅವ ತೆಗದ ಪಟಂಗಳ ಇಂಟರ್ನೆಟ್ಟಿಂತ ಇಳುಶಿ ತೋರುಸುಲೆ ಹೇಳಿದೆ, ದೊಡ್ಡಬಾವ° ತೋರುಸಿದ°.
ಕೆಮರದ ಹಾಂಗೆ ಒಂದು ಕಪ್ಪು ಪುಟಲ್ಲಿ – ಸುಮಾರು ಪಟಂಗ; ವಾಹ್! ತುಂಬಾ ಚೆಂದ ಇತ್ತು!
ಒಂದು ಪಟ, ಒಂದು ಗೆರೆ ಹೆಡ್ಡಿಂಗು, ಇಂಗ್ಳೀಶಿಲಿ – ದೊಡ್ಡಬಾವ ಅದರ ಅರ್ತ ವಿವರುಸುವಗ ಒಂದೊಂದೇ ಗೊಂತಪ್ಪಲೆ ಸುರು ಆತು!!

ಪ್ರತಿ ಪಟಲ್ಲಿದೇ ಅದರದ್ದೇ ಆದ ಶಕ್ತಿ ಇತ್ತು.
ಅಲ್ಲಿ ಇದ್ದದೆಲ್ಲ, ಕೊಕ್ಕರೆಯೋ, ಜೇಡನಬಲೆಯೋ, ತೊಳಶಿ ಹೂಗೋ – ಸಾಮಾನ್ಯ ನಿತ್ಯಜೀವನಲ್ಲಿ ಕಾಣ್ತ  Replica Uhren ದೃಶ್ಯಂಗಳೇ ಆದರೂ, ಪಟ ಹಳೆಮನೆ ಅಣ್ಣ ತೆಗದ್ದಾದರೆ ಅದರ್ಲಿ ಏನೋ ಒಂದು ಬೇರೇ ನಮುನೆ ಕಾಂಬದು.
ನಿನ್ನೆ ಹೋಗಿ ಕೇಳಿದೆ, ಹಳೆಮನೆ ಅಣ್ಣ, ಇದರ ಒಪ್ಪಣ್ಣನ ಬೈಲಿಂಗೆ ತೋರುಸುವನಾ? ಹೇಳಿ…
ಕುಶೀಲಿ ಅಕ್ಕು ಹೇಳಿದ, ಪೆಟ್ಟಿಂಗೆಂದ ಹುಡ್ಕಿ ಕೆಲವರ ತೆಗದು ಕೊಟ್ಟ!
ಇದಾ, ಆ ಕೆಲವು ಪಟಂಗೊ! ನೋಡಿ, ಕುಶಿ ಆದರೆ ಒಪ್ಪ ಕೊಡಿ.
ಆತೋ? ಏ°?
~
ಒಪ್ಪಣ್ಣ

ಹೆಚ್ಚಿನ ಪಟಂಗೊಕ್ಕಾಗಿ
ಆಯ್ದ ಕೆಲವು ದೃಶ್ಯಪಟಂಗೊ ಇಲ್ಲಿದ್ದು:

11 thoughts on “ಹಳೆಮನೆಅಣ್ಣ `ಹೊಸ ಕೆಮರಲ್ಲಿ’ ತೆಗದ ಪಟಂಗೊ…

  1. photo nga nodi bari kushi atu. innastu photo gala haki. kelasada bisi mugudu hottappaga ningala ee photongala nodiappaga manassingi kushi avuthu.

  2. ಪಟ೦ಗ ಒ೦ದಕ್ಕಿ೦ದ ಒ೦ದು ಚೆ೦ದ ಆಯಿದು….ಸೂಪರ್…

    1. ಹರೀಶ್ ಹಳೆಮನೆ, ನಿಜಕ್ಕೂ ಅದ್ಭುತ ಫೋಟೊಗಳು, ನಿನಗೆ ಒಳ್ಳೆಯ ಪ್ರಶಸ್ತಿ, ಬಹುಮಾನಂಗ ಬೇಗ ಬರಲಿ, ಇನ್ನಷ್ಟು ಜನ ಗುರುತಿಸಲಿ ಹೇಳಿ ಹಾರೈಸುತ್ತೆ.. ಹೀಂಗೆ ಅದ್ಭುತ ಫೊಟೊ ಬರುತ್ತಲೇ ಇರಲಿ..ಈ ಬ್ಲಾಗ್‌ದೆ ತುಂಬ ಲಾಯಕ ಇದ್ದು.

  3. ಬರೇ ಕಪ್ಪು ಬೆಳಿಲಿ ಬರದ ಶುಧ್ಧಿ ಓದಿ ಬೇಜಾರಪ್ಪದಕ್ಕೆ,
    ಅಂಬಂಗ ಹೀಂಗಿಪ್ಪ ಪಟಂಗಳನ್ನುದೆ ಹಾಕಿರೆ
    ನೋಡ್ಲೆ ಕೊಷೀ ಆವುತ್ತದಾ!!

    ಪಟಂಗೊ ಎಲ್ಲಾ ಚೆಂದ ಇದ್ದು.
    ಅಭಿನಂದನೆಗೊ ಇಬ್ರಿಂಗೂ..

  4. ಎಂತ ಅಳಿಯಾ. ಅಳಿಯ ಹರೀಶನ ಫೊಟೋಂಗಳ ಒಪ್ಪಣ್ಣನ ಜಾಗೆಲಿ ನೋಡಿ ಭಾರಿ ಕೊಶಿ ಆತು. ಒಂದಕ್ಕಿಂತ ಒಂದು ಮಿಗಿಲಾಗಿದ್ದು. ಸೂಪರ್ ಆಯಿದು. ಒಳ್ಳೆದಾಗಲಿ.

    ಗೋಪಾಲ್ ಬೊಳುಂಬು

  5. ಒಪ್ಪಣ್ಣ ವಿವರಣೆ ಕೊಟ್ಟದು ಲಾಯಿಕಾದು…
    ನಿಂಗ ಹೇಳಿದಾಂಗೆಯೇ. ಹರಿಶಣ್ಣ ತೆಗೆದ ಫೋಟೋಸ್ ಸೂಪರಪ್ಪ!! 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×