Oppanna.com

Oppanna.com: ನಾವೇ ಬೆಳೆಶಿದ ಬೈಲಿಂಗೆ “ನಾಕನೇ ಒರಿಶ”!

ಬರದೋರು :   Admin    on   01/01/2012    27 ಒಪ್ಪಂಗೊ

ಬೈಲಿನ ಎಲ್ಲಾ ಅಕ್ಕ-ಭಾವಂದ್ರಿಂಗೆ ಹರೇರಾಮ.
ಇದು ನಾವೆಲ್ಲರೂ ನವಗೇ ಧನ್ಯವಾದ ಹೇಳೇಕಾದ ಸಮಯ.
ಅಂತಾ ಕುಶಿ ಯೇವದಿದ್ದು – ಕೇಳುವಿ ನಿಂಗೊ!
ಎಂತ್ಸರ – ಹೇಳಿತ್ತುಕಂಡ್ರೆ, ಮೂರೇ ಒರಿಶ ಹಿಂದೆ ಹುಟ್ಟಿದ ಈ ಬೈಲು ಇಂದು “ನಾಲ್ಕನೇ ಒರಿಶ”ಕ್ಕೆ ಕಾಲು ಮಡಗುತ್ತಾ ಇದ್ದು!!!
ನಾಲ್ಕನೇ ಒರಿಶದ ಯಶಸ್ವಿ ಪಾದಾರ್ಪಣೆಯ ಸಂದರ್ಭಲ್ಲಿ, ಇದಕ್ಕೆ ಕಾರಣೀಭೂತರಾದ ಬೈಲಿನ ಎಲ್ಲ ಬಂಧುಗೊಕ್ಕೂ ಕೃತಜ್ಞತೆ ಹೇಳ್ತಾ ಇದ್ದೆ.

ಈ ಮೂರೊರಿಶಲ್ಲಿ ಬೈಲಿನ ಹುಟ್ಟು- ಬೆಳವಣಿಗೆ ಹೇಂಗಾತು –  ಹೇಳ್ತದರ ಬಗ್ಗೆ ಸಣ್ಣ ವಿವರಣೆ:

  • ಜೆನವರಿ 2009ರ ಕೆಲೆಂಡರಿನ ಒಂದನೇ ತಾರೀಕಿಂಗೆ ಬ್ಲೋಗುಪುಟಲ್ಲಿ ಬೈಲು ಸುರು ಆದ್ಸು.
    (http://oppanna.blogspot.com)
  • ಆ ಸಮಯಲ್ಲಿ ಬೈಲಿನ ಎಲ್ಲೋರ ಶುದ್ದಿಯನ್ನೂ ಒಪ್ಪಣ್ಣ ಮಾಂತ್ರವೇ ಹೇಳೇಕಾಗಿದ್ದತ್ತು.
  • ಒಪ್ಪಣ್ಣ ಶುದ್ದಿ ಹೇಳುದು, ಬೈಲಿನೋರು ಒಪ್ಪ ಕೊಡುದು- ಈ ಕ್ರಮ ಅಂದೇ ಸುರುಆಗಿ, ಬೆಳದತ್ತು.
  • ದನದ ಹಾಲು ಮೆಚ್ಚದ್ದ ಮಾಣಿಗೆ… – ಹೇಳ್ತ ಈ ಶುದ್ದಿಗೆ ನಮ್ಮ ಗುರುಗೊ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ  ಒಪ್ಪಾಶೀರ್ವಾದ ಮಾಡಿದವು.
    ಗುರುಗ ಬೈಲಿಂಗೇ ಬಂದು ಆಶೀರ್ವಾದ ಮಾಡಿದ್ಸು ಅದು ಆರಂಭ. (ಶುದ್ದಿ ಸಂಕೊಲೆ)
  • 2009ರ ಅಖೇರಿಯಾಣ ಶುದ್ದಿ – ದಶಂಬ್ರ ಕೊನೇವಾರ; ಐವತ್ತೊಂದನೇದು – ಓಜುಪೇಯಿ ಅಜ್ಜನ ಬಗ್ಗೆ ಹೇಳಿದ್ಸು.
    ಆ ಶುದ್ದಿಗೆ ಒಪ್ಪಾಶೀರ್ವಾದ ಕೊಟ್ಟ ಗುರುಗೊ – ಈ ಬೈಲಿ ಶುದ್ದಿಗೊ ನಿಂಬಲೆಡಿಯ – ಹೇದು ಆದೇಶ ಕೊಟ್ಟವು. (ಶುದ್ದಿ ಸಂಕೊಲೆ)
    ಇದು ಬೈಲಿನ ಎಲ್ಲೋರಿಂಗೂ ಆನೆಬಲ ಕೊಟ್ಟತ್ತು.
  • ಮುಂದೆ, 2010ರ ಜೆನವರಿಲಿ ಅಜ್ಜಕಾನಬಾವ,ಪೆರ್ಲದಣ್ಣ, ಬೀಸ್ರೋಡುಮಾಣಿ, ಸಂಕೊಳಿಗ ಬಾಬಣ್ಣನವರ ಅಮೋಘ ಸಹಕಾರಲ್ಲಿ ಬೈಲು “website” ಬೆಳಗಿ ಬಂತು.
    ಅವರ ಸಹಕಾರವ ಬೈಲಿನ ಪರವಾಗಿ ನೆನೆಸಿಗೊಳ್ತು.
    ಕಪ್ಪು ಬಣ್ಣದ ಗೋಡೆಲಿ ಶುದ್ದಿ ಕಂಡುಗೊಂಡಿಪ್ಪ 2010 ರ ಮೋಡೆಲು ಈಗಳೂ ಬೈಲಿನ ಕೆಲವು ಜೆನ ನೆಂಪುಮಾಡಿಗೊಳ್ತವು.
  • ಈ ಸಂದರ್ಭಲ್ಲಿ ಗುರುಗಳ ವಿಶೇಷ ಆಶೀರ್ವಚನ ಸಿಕ್ಕಿದ್ದು ಬೈಲಿನ ಸೌಭಾಗ್ಯ.
  • ಗುರುಗೊ, ಪಟಂಗೊ, ಗಾದೆಗೊ, ಮದ್ದುಗೊ, ಅಡಿಗೆಗೊ – ಹೀಂಗೆ ಅನೇಕ ವಿಭಾಗಂಗಳ ಆರಂಭ ಮಾಡಿತ್ತು.
    ಬೈಲಿನ ಆರಂಭಿಕ ಸೃಷ್ಠಿಲಿ ಮಾಷ್ಟ್ರುಮಾವನ ವಿಶೇಷ ಮಾರ್ಗದರ್ಶನವ ಇಲ್ಲಿ ಸ್ಮರುಸಿಗೊಳ್ತು.
  • ಹಿರಿಯರಾದ ದೊಡ್ಡಮಾವ ಬೈಲಿಂಗೆ ಶುದ್ದಿ ಹೇಳುಲೆ ಸುರುಮಾಡಿದವು; ಹಳೇ ಹವ್ಯಕ ಭಾಶೆಲಿ.
    ಇದು ಬೈಲಿನ ಶುದ್ದಿ ಸಾಮರ್ಥ್ಯವ ಹೆಚ್ಚುಮಾಡ್ತ ವಿಶ್ವಾಸ ಒದಗುಸಿತ್ತು. (ಶುದ್ದಿ ಸಂಕೊಲೆ)
  • ಕ್ರಮೇಣ, ಬೈಲು ಬೆಳದತ್ತು – ಬೆಳಕ್ಕೊಂಡೇ ಹೋತು.
    ಶರ್ಮಪ್ಪಚ್ಚಿ, ಬೊಳುಂಬುಮಾವ, ಅಜ್ಜಕಾನಬಾವ, ಪೆರ್ಲದಣ್ಣ -ಎಲ್ಲೋರುದೇ ಬಂದು ಶುದ್ದಿ ಹೇಳುಲೆ ಸುರುಮಾಡಿದವು.
  • “ಬೈಲಿಲಿ ಇಂದೆಂತಾತು” ಹೇಳ್ತದರ ನೋಡುವೋರ ಪಟ್ಟಿ ಬೆಳದತ್ತು. ಶುದ್ದಿಗೊ, ಒಪ್ಪಂಗೊ ಎಲ್ಲವೂ ಬಪ್ಪದು ಜಾಸ್ತಿ ಆತು.
  • ಒಬ್ಬ ವೆಗ್ತಿ ನಿರ್ವಹಣೆ ಮಾಡ್ತ ಮಟ್ಟಂದ ಮೇಗೆ ಹೋಗಿ ಅಪ್ಪದ್ದೇ, ಬೈಲ ಬಂಧುಗೊ -ಅಪ್ಪಚ್ಚಿ ಭಾವಂದ್ರು ನಿರ್ವಹಣಾ ಸಹಕಾರ ನೀಡಿದವು, ಇಂದೂ ಹಾಂಗೇ ನೆಡಕ್ಕೊಂಡು ಬತ್ತಾ ಇದ್ದು.
  • ಒಪ್ಪಣ್ಣಂದೇ, ಹಲವಾರು ಬೈಲಬಂಧುಗಳುದೇ ಸೇರಿ ಶುದ್ದಿ ಹೇಳಿಗೊಂಡು 2010 ಪೂರೈಸಿದವು.
  • 2011 ಜೆನವರಿಲಿ ಮೂರನೇ ಒರಿಶಕ್ಕೆ ಕಾಲು ಮಡಗುತ್ತ ಸಮೆಯಲ್ಲಿ ನಮ್ಮ ಗುರುಗೊ “ಬೈಲು ಒಳ್ಳೆದಾಗಲಿ” ಹೇಳಿಗೊಂಡು ಮತ್ತೊಂದರಿ ಹರಸದವು. (ಸಂಕೊಲೆ)
    ಶ್ರೀ ಶ್ರೀ ಆಶೀರ್ವಾದ ಸಿಕ್ಕಿರೆ ಬೆಳಗದ್ದೆ ಇಪ್ಪ ವಸ್ತು ಯಾವದು!!?
  • 2011ರಲ್ಲಿ ಬೈಲಿನ ಹಳೆಯ ಕರಿ ರೂಪಂದ ಬೆಳಗಿದ ಹೊಸರೂಪಕ್ಕೆ ಬಂತು.
    ಸಂಕೊಳಿಗೆ ಬಾಬಣ್ಣ, ಅಜ್ಜಕಾನ ಬಾವ, ಪೆರ್ಲದಣ್ಣ – ಇದ್ದರೆ ನವಗೆಂತ ಹೆದರಿಕೆ – ಅಲ್ಲದಾ?!
  • ಹೊಸ ರೂಪಲ್ಲಿ ಹೇಮಾರ್ಸಿ ಮಡಗಿದ ಎಷ್ಟೋ ವಿಶಯಂಗೊ ಸುಲಾಬಲ್ಲಿ ಸಿಕ್ಕುತ್ತ ನಮುನೆ ಜೋಡಣೆ ಆತು. ಬೈಲು ಹೊಸ ವೇಗಲ್ಲಿ ಬೆಳಗಿತ್ತು.
    ಬೈಲಿನ ಆರು ಬೇಕಾರೂ ನೆರೆಕರೆಗೆ ಬಂದು ಶುದ್ದಿ ಹೇಳುಲಕ್ಕು – ಹೇಳ್ತ ವೆವಸ್ತೆ ಮಾಡಿ ಆತು.
    ಇದರಿಂದಾಗಿ ನೆರೆಕರೆ ತುಂಬ ದೊಡ್ಡ ಆತು; ಶುದ್ದಿಗೊ ಒಂದಲ್ಲ ಒಂದು ಬೈಲಿಲಿ ಬಂದುಗೊಂಡೇ ಇದ್ದು!!
  • 2011ರ ಎಪ್ರಿಲ್ ಹತ್ತನೇ ತಾರೀಕಿಂಗೆ, ನಮ್ಮ ಯೇನಂಕೂಡ್ಳಣ್ಣನ ಉಸ್ತುವಾರಿಲಿ, ಅವರ ಮನೆ ಜೆಗಿಲಿಲಿ ಬೈಲ ಬಾಂಧವರೆಲ್ಲ ಒಂದರಿ ಸೇರ್ತ ಹಾಂಗೆ ಆತು.
    ಕಾರ್ಯಕ್ರಮ ಆತಿಥ್ಯ ಮಾಡಿದ ಆ ಮನೆಯೋರಿಂಗೆ ಬೈಲಿನ ಅನಂತ ಕೃತಜ್ಞತೆಗೊ ಇದ್ದು.
    ಹಿರಿಯರಾದ ಶರ್ಮಪ್ಪಚ್ಚಿ ಆ ಕಾರ್ಯಕ್ರಮದ ವರದಿಯ ಚೆಂದಕೆ ಬೈಲಿಂಗೆ ಹೇಳಿದ್ದವು (ಶುದ್ದಿ ಸಂಕೊಲೆ)
    ಇದರಿಂದಾಗಿ, ಬೈಲಿಲಿ ಮಾಂತ್ರ ಕಂಡುಗೊಂಡಿದ್ದ ನೆರೆಕರೆ ನೆಂಟ್ರುಗೊ ಮುಖತಃ ಕಂಡು ಮಾತಾಡಿ ಆತ್ಮೀಯತೆ ಹೆಚ್ಚುಮಾಡಿಗೊಂಡವು.
  • ವಿದ್ವಾನಣ್ಣ ನೂರಾರುಮೈಲು ಪ್ರಯಾಣ ಮಾಡಿ ಆ ದಿನ ನವಗೆ ಮಾರ್ಗದರ್ಶನ ಮಾಡಿದ್ದು ಕಾರ್ಯಕ್ರಮದ ವಿಶೇಷ ಆಗಿದ್ದತ್ತು.
  • ಈಗೀಗ ಬೈಲಿಲಿ ಅಪ್ಪ ಪ್ರತಿಯೊಂದು ಜೆಂಬ್ರಲ್ಲಿಯೂ “ಬೈಲಿನೋರು ಆರಾರು ಇದ್ದವೋ” ಹೇಳಿ ಹುಡ್ಕಿ ಹೋಪಷ್ಟು ಆತ್ಮೀಯತೆ ಬಂದು ಬಿಟ್ಟಿದು.
  • ಆಸಕ್ತ ನೆರೆಕರೆ ಗುಂಪು ಈ ಒರಿಶಕ್ಕೆ ಕೆಲವು ವಿಶೇಷ ಗುರಿ ಹೊಂದಿಗೊಂಡಿದವು, ಅದೆಲ್ಲವೂ ಒದಗಿ ಬರಳಿ ಹೇಳ್ತದು ನಮ್ಮ ಹಾರೈಕೆ.
  • ಇಂದು 2012ರ ಜೆನವರಿ ಒಂದು; ಬೈಲಿಂಗೆ ಮತ್ತೊಂದೊರಿಶ!!!
    ನೆರೆಕರೆ ಬೆಳೆತ್ತಾ ಇದ್ದು, ಬೆಳಕ್ಕೊಂಡೇ ಇದ್ದು.
    ಗುರುಗಳ ಆಶೀರ್ವಾದ ಸಿಕ್ಕುತ್ತ ನಿರೀಕ್ಷೆಲಿ ನಾವೆಲ್ಲರೂ ಇದ್ದು.
  • ನೂರಾರು ಜೆನ ಶುದ್ದಿ ಹೇಳ್ತಾ ಇದ್ದವು.
  • ಸಾವಿರಾರು ಜೆನ ಒಪ್ಪ ಕೊಡ್ತಾ ಇದ್ದವು
  • ಲಕ್ಷಾಂತರ ಜೆನ ಶುದ್ದಿಗಳ ಕೇಳ್ತಾ ಇದ್ದವು.
  • ಬನ್ನಿ, ನಿಂಗಳೂ ಒಂದಾಗಿ ಬೈಲಿಲಿ ಸೇರಿಗೊಳ್ಳಿ.

ಓರುಕುಟ್ಟುತ್ತ ಪುಟ ಮೋರೆಪುಟ, ಹೀಂಗಿರ್ಸು ಎಷ್ಟು ಬಂದರೂ, ಸತ್ವಯುತವಾದ ಶುದ್ದಿಗಳ ಹೇಳ್ತವಕ್ಕೂ – ಕೇಳ್ತವಕ್ಕೂ ಏನೇನೂ ಕೊರತೆ ಇಲ್ಲೆ – ಹೇಳ್ತರ ಬೈಲು ತೋರುಸಿಕೊಟ್ಟಿದು.
ಈ ಅಮೋಘ ಕೊಡುಗೆ ಎಲ್ಲವೂ ನಿಂಗಳಿಂದಾಗಿ.

ಇನ್ನು ಮುಂದೆಯೂ ನಾವು ಹೀಂಗೇ ಇಪ್ಪ. ಎಲ್ಲೋರ ಸಹಕಾರ ಬೇಡ್ತಾ ಇದ್ದೆ.

|| ಹರೇರಾಮ ||

ಸೂ:
ಬೈಲಿಂಗೆ ಜೆನ ಹೇಂಗೆ ಬತ್ತಾ ಇದ್ದವು? – ಹೇಳ್ತ ವಿವರ ಇಲ್ಲಿದ್ದು:
1. 2009ರಲ್ಲಿ Oppanna.blogspot ಇಪ್ಪಗಾಣ ಒಂದೊರಿಶಲ್ಲಿ ಇಪ್ಪತ್ತುಸಾವಿರಂದ ಮೇಗೆ ಪುಟಂಗಳ ನೋಡಿದ್ದವು.
2. 2010ರ ಜೆನವರಿಂದ, ಇಂದಿನ ಒರೆಂಗೆ “ಆರು ಲಕ್ಷ ಸರ್ತಿ” ಪುಟಂಗಳ ನೋಡಿದ್ದವು!  ಎಲ್ಲವೂ ನಿಂಗಳಿಂದಾಗಿ.

~
ಬೈಲಿನ ಪರವಾಗಿ
Admin@Oppanna.Com

27 thoughts on “Oppanna.com: ನಾವೇ ಬೆಳೆಶಿದ ಬೈಲಿಂಗೆ “ನಾಕನೇ ಒರಿಶ”!

  1. ಹರೇರಾಮ ಒಪ್ಪಣ್ಣಂಗೆ.

    ಅಭಿನಂದನೆಗೊ. ನೂರ್ಕಾಲ ಬಾಳಿ ಬೆಳಗಲಿ ಈ ಬೈಲು ಹೇಳಿ ಎನ್ನ ಹಾರೈಕೆ.

  2. ಒಪ್ಪಣ್ಣಂಗೆ ೪ ನೇ ಹುಟ್ಟು ಹಬ್ಬದ ಸುಸಂದರ್ಭಲ್ಲಿ ಶುಭಾ ಶ ಯಂಗೊ..ಜಗತ್ತಿನ ಹವ್ಯಕರ ಕೊಂಡಿ ಆಗಿ ಆದಿ ಶಂಕರಾಚಾರ್ಯರ ತತ್ವಂಗಳ, ಮಹಾ ಸಂಸ್ಥಾನದ ಆಶಯಂಗಳ ಕಥೆ ರೂಪಲ್ಲಿ ಸರಳವಾಗಿ ನಿರೂಪಣೆ ಮಾಡುವ ಒಪ್ಪಣ್ಣ & ಸಂಗಡಿಗರಿಂಗೆ ಅಭಿನಂದನೆಗಳು. ಮಂತ್ರ ಸಂಗ್ರಹ ತುಂಬಾ ಪ್ರಯೋಜನಕಾರಿ ಆವುತ್ತಾ ಇದ್ದು. ಲೇಖನಂಗಳೆಲ್ಲವನ್ನೂ ಸುಲ ಭ ಲ್ಲಿ ಕೈಗೆ ಸಿಕ್ಕುವ ಹಾಂಗೆ ಮಡುಗಿದ್ದು ಶ್ಲಾಘನೀಯ….

  3. ಹರೇ ರಾಮ!
    ವಿಶ್ವದೆಲ್ಲೆಡೆಲಿಪ್ಪ ಹವ್ಯಕರು ತಮ್ಮ ಮನೆಮಾತಿಲಿ ಪರಸ್ಪರ ಕೊಶಿಕೊಶಿಯಾಗಿ ವಿಚಾರವಿನಿಮಯ ಮಾಡಿಗೊಂಬಲೆ, ನಮ್ಮದೇ ಆದ ವಿಶಿಷ್ಟ ಅನುಭವ ಅನಿಸಿಕೆಗಳ ಹಂಚಿಗೊಂಬಲೆ ಈಗಾಣ ಕಾಲಕ್ಕೆ ಅತ್ಯಂತ ಸೂಕ್ತವಾದ ವೇದಿಕೆ ಈ ಒಪ್ಪಣ್ಣನ ಬೈಲು. ಕುಞಿ ಮಕ್ಕಳಿಂದ ಹಿಡುದು ಮುದುಕ್ಕರ ವರೆಗೆ ಎಲ್ಲೋರ ಆಸಕ್ತಿಗೆ ತಕ್ಕಿತ ವಿಷಯಂಗೊ ಇಲ್ಲಿ ಮೂಡಿಬಂದು ಒಂದರಿ ಇದರ ಹೊಕ್ಕು ನೋಡಿದವು ಬಿಡದ್ದೇ ಓದುವ, ಬರವ ಹಾಂಗೆ ಮಾಡ್ತ ಕಾರಣ ಒಪ್ಪಣ್ಣನ ವ್ಯಾಪ್ತಿ ಹೆಚ್ಚುತ್ತಾ ಇದ್ದು.
    ಲಕ್ಷಾಂತರ ಓದುಗರ ಹೊಂದಿ ಬಹುಬೇಗ ಬೆಳೆತ್ತಾ ಇಪ್ಪ ಈ ಬೈಲು ನಮ್ಮೂರ ಮಕ್ಕೊ ನಮ್ಮ ಭಾಷೆ, ಊರು, ಸಂಪ್ರದಾಯ, ಸಂಸೃತಿಗಳ ತಿಳ್ಕೊಮ್ಬಲೇ ಅತ್ಯಂತ ಉಪಯುಕ್ತ ಸಾಧನ. ಅವರಿಂದ ಇದರ ಸದುಪಯೋಗ ಆಗಲಿ.
    ಒಪ್ಪಣ್ಣಂಗೆ ಅಭಿನಂದನೆಗೊ!

    1. {ಲಕ್ಷಾಂತರ ಓದುಗರ ಹೊಂದಿ ಬಹುಬೇಗ ಬೆಳೆತ್ತಾ ಇಪ್ಪ ಈ ಬೈಲು ನಮ್ಮೂರ ಮಕ್ಕೊ ನಮ್ಮ ಭಾಷೆ, ಊರು, ಸಂಪ್ರದಾಯ, ಸಂಸೃತಿಗಳ ತಿಳ್ಕೊಮ್ಬಲೇ ಅತ್ಯಂತ ಉಪಯುಕ್ತ ಸಾಧನ}. ನಿಜವಾಗಿಯೂ ಅಪ್ಪು. ಎನ್ನ ಮಗಳು ಒಪ್ಪಣ್ಣ ಓದುಲೆ ಸುರುಮಾಡಿ ಅಪ್ಪಗ … ಅಮ್ಮ”ಓದಿ ಹೇಳು.. ಎನಗೆ ಬೇಗ ಓದುಲೆ ಆವುತ್ತಿಲ್ಲೆ.. ” ಹೇಳಿ ಹೇಳಿ ಗೊನ್ದಿತ್ತ ಕೂಸು..ಮತ್ತೆ ಅದುವೆ ಓದುಲೆ ಸುರುಮಾಡಿತ್ತು ..ಅದ್ಕ್ಕೆ ಒತ್ತು ಕೊದಕ್ಕ ಕೊ೦ಬು.. ಇದ್ದ.. ಹೆಳೀ,, ಕೇಳಿ.. ಕೇಳಿ..ಒಪ್ಪಕೊಡುಲೆ…ಸುರುಮಾದಡಿತ್ತು..ಮೊದಲು ಕನ್ನಡವ ಹಿ೦ದಿಲಿ..ಬರಕ್ಕೊ೦ಡು ಇತ್ತದು.ಈಗ ಸ೦ಗೀತ ಕ್ಲಾಸಿಲಿಯೂ ಕನ್ನಡಲ್ಲೆ ಬರೆತ್ತು.. [ಅದಕ್ಕೆ ಶಾಲೆಲಿ ಕನ್ನಡ ವೇ ಇತ್ತಿಲ್ಲೆ..ಹಾ೦ಗಗಿ}.. ಈಗ ಎನಗೆ ಹೇಳಿ ಕೊಡುವ ಮಟ್ಟಕ್ಕೆ ಬಯಿ೦ದು. “ಬೈಲು”.. ಅದಕ್ಕೆ ಕನ್ನಡಕ್ಕೆ ಶಾಲೆ ಆತು…ಹಾ೦ಗಾಗಿ ಆನು+ ದೀಪಿ…ಇಬ್ರೂ'” ಒಪ್ಪಣ್ಣನ ಬೈಲಿ೦ಗೆ” ಕೃತಜ್ಞತೆ ಎಷ್ಟು ಹೇಳಿದರೂ ಸಾಲ..

  4. ನಾಕನೇ ವರ್ಷಕ್ಕೆ ತನ್ನ ಪುಟ್ಟ ಕಾಲಿನ ಮಡಗುತ್ತಾ ಇದ್ದ ನಮ್ಮೆಲ್ಲರ ಪ್ರೀತಿಯ ಮುದ್ದು ಒಪ್ಪಣ್ಣಂಗೆ ಅಭಿನಂದನೆಗೊ. ನಿರೀಕ್ಷೆಗೂ ಮೀರಿದ ಅವನ ಸಾಧನೆಯ ಕಂಡು ಹೆಮ್ಮೆ ಪಡ್ತಾ ಇದ್ದೆ. ಎಲ್ಲೋರ ಸಹಕಾರ, ಪ್ರೀತಿ ವಿಶ್ವಾಸಂಗಳಿಂದ ಒಪ್ಪಣ್ಣ ಇನ್ನಷ್ಟು ಬೆಳೆಯಲಿ, ನಮ್ಮ ಊರಿಲ್ಲಿ, ಹೆರದೇಶಲ್ಲಿ ಎಲ್ಲೆಲ್ಲಿಯುದೆ ಒಳ್ಳೆ ಹೆಸರು ಗಳುಸಿ ಜೆನರ ಕಣ್ಮಣಿಯಾಗಲಿ. ಎಲ್ಲೋರಿಂಗುದೆ, ಅವನಿಂದ ಪ್ರಯೋಜನ ಸಿಕ್ಕಲಿ. ಶುಭ ಹಾರೈಕೆಗೊ.

  5. ಒಪ್ಪಣ್ಣನ ಬೈಲಿಲಿ ಹವ್ಯಕ ಸಾಹಿತ್ಯಕೃಷಿ ಬೆಳೆಯಲಿ.
    ನೂರಾರು ಹಕ್ಕಿಗೊಕ್ಕೆ ಆಸರೆ ಕೊಡುವ ದೊಡ್ಡ ಮರದ ಹಾ೦ಗೆ ಸಮಾಜಲ್ಲಿ ನಿಲ್ಲಲಿ.
    ನೆರೆಕರೆಯ ನೆ೦ಟ್ರೆಲ್ಲಾ ಮು೦ದೆಯೂ ಪ್ರೀತಿ,ಆತ್ಮೀಯತೆಲಿ ಬೈಲಿನ ಬೆಳೆಶಲಿ ಹೇಳಿ ಹಾರೈಕೆಗೊ.

  6. ಅಭಿನಂದನೆಗೊ, ಶತಾಯುಃ ಶತವರ್ಷೋಸಿ ಹೇಳಿ ಶುಭ ಹಾರೈಕೆ

  7. ನಿನ್ನೆ ಬೊಳುಂಬು ಮಾವನ ನಾಟಕಲ್ಲಿ ಒಂದು ಪಾತ್ರ ಇತ್ತು… “ಅಮೇರಿಕಲ್ಲಿ ಇದ್ದರೂ ನಮ್ಮ ಸಂಸ್ಕೃತಿಯ ಅಳವಡಿಸಿಗೊಂಡಿಪ್ಪ ಪಾತ್ರ”. ಆದರೆ ಪೇಟೆಲ್ಲಿ ಇದ್ದರೂ/ಹಳ್ಳಿಲ್ಲಿ ಇದ್ದರೂ ನಮ್ಮ ಕ್ರಮಂಗೋ ಎಲ್ಲ ಗೊಂತಿಲ್ಲದ್ದ ಎನ್ನ ಹಾಂಗಿಪ್ಪ ಸುಮಾರು ಪಾತ್ರಂಗೋ ನಿಜವಾಗಿಯೂ ಇಕ್ಕು…

    ಸಣ್ಣ ಉದಾಹರಣೆ ಹೇಳಿರೆ ಪೇಟೆಲ್ಲಿ ಸಿಕ್ಕುವ ಬೊಟ್ಟುಗಳ ಎಲ್ಲ ಅಂಟಿಸಿಗೊಂಬ ಬದಲು ನಮ್ಮ ಕ್ರಮಲ್ಲಿ ಶುದ್ದ ಕುಂಕುಮಲ್ಲಿ ಬೊಟ್ಟು ಹಾಕೆಕ್ಕು… ಕೆಲವು ಸರ್ತಿ ಶುದ್ದ ಕುಂಕುಮ ಮಾಡುಲೆ ಕಲಿಯೆಕ್ಕಪ್ಪಲೂ ಸಾಕು… ಹೀನ್ಗಿದ್ದದು ಸುಮಾರು ಇದ್ದು… ಸುಲಭಲ್ಲಿ ಹೇಳುತ್ತರೆ “ಮಾತೃ ಸಂಸ್ಕಾರ”… ಇದರೆಲ್ಲ ಬೈಲಿಲ್ಲಿ ಆರತ್ರಾರೂ ಕೇಳಿ ಕಲಿಯೇಕ್ಕು ಹೇಳಿ ಅಂದಾಜಿ ಮಾಡಿದೆ. ಅಷ್ಟಪ್ಪಗ ಗುರುಗೋ ಮೊದಲೊಂದರಿ “ಗುರುವೂ ಶ್ರೀ,ಶಿಷ್ಯೆಯೂ ಶ್ರೀ, ಗುರುವಿಗೆ ತಕ್ಕ ಶಿಷ್ಯೆ” ಹೇಳಿ ಶ್ರೀ ಅಕ್ಕನ ಬಗ್ಗೆ ಹೇಳಿದ್ದದು ನೆನಪಾತು… ಈ ಸುದ್ದಿಲ್ಲಿ ಇಪ್ಪ ಹಲವು ಸಂಕೊಲೆಗಳ ಓದಿಗೊಂಡು ಹೋಪಗಳೂ ಶ್ರೀ ಅಕ್ಕನ ಬಗ್ಗೆ ಗೊಂತಾತು… ಅಮ್ಬಗ ಇದರೆಲ್ಲ ಶ್ರೀ ಅಕ್ಕನ ಹತ್ತರೆ ಕೇಳುವಾ ಹೇಳಿ ಅಂದಾಜು ಮಾಡಿದೆ… ಎನ್ನ ಹಾಂಗಿಪ್ಪ ಪಾತ್ರಂಗೊಕ್ಕೆ ಶ್ರೀ ಅಕ್ಕ ಖಂಡಿತವಾಗಿಯೂ ಸಹಾಯ ಮಾಡುವಿ ಅಲ್ಲದ?

    1. ಹರೇರಾಮ ಜಯಶ್ರೀ ಅಕ್ಕ°.

      ಮಾತೃಹೃದಯದ ಶ್ರೀ ಗುರುಗಳ ಆಶೀರ್ವಾದ ಅಬ್ಬೆ ಮನಸ್ಸಿಂದಲೇ ಬಪ್ಪದಲ್ಲದಾ?

      ನಿಂಗೋ ಹೇಳಿದ ಶುದ್ಧ ಕುಂಕುಮ ತಯಾರಿಯ ವಿಚಾರ ಬಹಳ ಸಮಯಂದ ಎನ್ನ ಮನಸ್ಸಿಲಿ ಇದ್ದು. ಶುದ್ಧ ಕುಂಕುಮ ಮಾಡಿ ಅನುಭವ ಇಪ್ಪ ಕೆಲವರ ಬಗ್ಗೆ ತಿಳುದ್ದು. ಬೈಲಿಲಿ ಅವರ ಮೂಲಕವೇ ಶುದ್ದಿ ಹಾಕುವ° ಹೇಳ್ತ ಯೋಚನೆ.
      ಒಂದು ವೇಳೆ ಎಲ್ಲೊರಿಂಗೂ ತಯಾರಿ ಮಾಡ್ಲೆ ಎಡಿಯದ್ದರೂ ಕೂಡಾ ತಯಾರಿ ಮಾಡ್ತವಕ್ಕೆ ಪ್ರೋತ್ಸಾಹ ಕೊಟ್ಟು ಶುದ್ಧ ಕುಂಕುಮವನ್ನೇ ಎಲ್ಲೊರೂ ಉಪಯೋಗ ಮಾಡ್ಲಕ್ಕನ್ನೆ.

      ಆದಷ್ಟು ಬೇಗ ಬೈಲಿಲಿ ಬಪ್ಪ ವ್ಯವಸ್ತೆ ಮಾಡುವ° ಆತೋ.

      ಧನ್ಯವಾದ.

  8. “ಒಪ್ಪಣ್ಣ” ನೂರ್ಕಾಲ ಬಾಳಿ ಬೆಳಗಲಿ.ಹೇಳುದೇ ನಮ್ಮ ಹಾರೈಕೆ.

  9. ಹರೇ ರಾಮ ಗುರಿಕ್ಕಾರಣ್ಣ,

    ಬೈಲಿನ ಬಗ್ಗೆ ಹೆಚ್ಚೇನೂ(ಏನೇನೂ ಹೇಳಿ ಹೇಳುಲಕ್ಕು) ಗೊಂತಿಲ್ಲದ್ದ ಎನಗೆ ಈ ಲೇಖನಂದ ಸುಮಾರು ಉಪಯೋಗ ಆತು… ಬೈಲಿಂಗೆ ಹೊಸತಾಗಿ ಮದುವೆಯಾಗಿ ಬಂದ ಸೊಸೆ ಹಾಂಗೆ ಸೇರ್ಪಡೆ ಆಯಿದೆ… ಆನು ಇಷ್ಟು ದಿನ ಕೊಟ್ಟ ಒಪ್ಪಂಗಳಲ್ಲಿ ಎಂತಾರೂ ಹೆಚ್ಚು ಕಮ್ಮಿ ಆಗಿದ್ದರೆ ಎಲ್ಲರುದೆ ದಯವಿಟ್ಟು ಪ್ರೀತಿಲ್ಲಿ ಎನ್ನ ಕ್ಷಮಿಸಿ ಬಿಡೆಕ್ಕು… ಹೊಸತಾಗಿ ಮದುವೆಯಾಗಿ ಮನೆಗೆ ಬಂದ ಸೊಸೆ “ತಾನೂ ಬೆಳಗಿ ಮನೆಯ ಬೆಳಗುವ” ಸಂಕಲ್ಪ ಮಾಡುತ್ತೋ ಅದೇ ಸಂಕಲ್ಪಂದ ಬೈಲಿಂಗೆ ಬೈಂದೆ… ಎಂದೆಂದೂ ನಮ್ಮೆಲ್ಲರೊಳಗೆ ಪ್ರೀತಿಯಿರಲಿ… ಬೈಲು ಬೆಳಗಿ ದೇಶವ ಬೆಳಗುವ ಹಾಂಗಾಗಲಿ ಹೇಳಿ ಈ ಶುಭ ಸಂದರ್ಭಲ್ಲಿ ಇನ್ನೊಂದರಿ ಪ್ರಾರ್ಥನೆ…

  10. ೪ನೆ ವರ್ಷಕ್ಕೆ ಕಾಲುಮಡುಗುತ್ತಾ ಇಪ್ಪ ಬೈಲು ಬೆಳೆದು ಬ೦ದ ರೀತಿ ಓದಿ ತು೦ಬಾ ಖುಶಿ ಆತು….ಇದೇ ರೀತಿ ಎಲ್ಲೋರ ಪ್ರೀತಿ ಗಳಿಸುತ್ತಾ ಇನ್ನೂ ಮು೦ದುವರಿಯಲಿ ಹೇಳಿ ಆಶಿಸುತ್ತೆ

  11. ಶುಭಾಶಯ೦ಗೊ..ಬೈಲು ನಡಕ್ಕೊ೦ಡು ಬ೦ದ ಹಾದಿಯ ಓದಿ ಖುಶಿ ಆತು..ವರ್ಷ ವರ್ಷಕ್ಕೂ ಎಷ್ಟು ಬೆಳವಣಿಗೆ!! ಇದು ಹೀ೦ಗೆ ಮು೦ದುವರಿಯಲಿ..

  12. ಅಭಿನಂದನೆಗೊ. “ಒಪ್ಪಣ್ಣ” ನೂರ್ಕಾಲ ಬಾಳಿ ಬೆಳಗಲಿ.

  13. ಸಣ್ಣ ಬೀಜದ ಒಳ ಒಂದು ಆಲದ ಮರವೇ ಇರ್ತು! ಅಂದರೆ ಒಂದು ಬೀಜಂದ ಹುಟ್ಟಿದ ಗಿಡ ಬೆಳದು ದೊಡ್ದ ಮರ ಆವುತ್ತು . ಹಾಂಗೆ ನಮ್ಮ ಈ ಬೈಲು ವಿಶಾಲವಾಗಿ ಬೆಳವದರಲ್ಲಿ ಸಂಶಯವೇ ಇಲ್ಲೆ.ಕಾಲ ಕಾಲಕ್ಕೆ ಸರಿಯಾಗಿ ಬೇಕಾದ ನೀರು, ಗೊಬ್ಬರ ಕೊಡ್ಲೆ ಗುರಿಕ್ಕಾರಣ್ಣ, ಒಪ್ಪಣ್ಣ , ಅಜ್ಜಕಾನ ಬಾವ, ಶರ್ಮಪ್ಪಚ್ಚಿ, ಬೊಳುಂಬು ಬಾವ…………..ಹೀಂಗೆ ತುಂಬ ಜನ ಇದ್ದವು.ಮುಖ್ಯವಾಗಿ ಒಂದು ಗಿಡ ಬೆಳವಲೆ ಬೇಕಾದ ಬೆಳಕು (ಸೂರ್ಯ) ನಮ್ಮ ಗುರುಗಳು……ಆ ಶಕ್ತಿಯ ವಿವರ್ಸುಲೆ ಎಡಿಯ. ಅದಿಲ್ಲದ್ದರೆ ಬದುಕುಲೆ ಎಡಿಯ.

  14. ಒಪ್ಪಣ್ಣ ಬರವ ಶುದ್ದಿ, ಅದರ ಹಿನ್ನೆಲೆ, ವಿಚಾರದ ತೂಕ ಎಲ್ಲಾವೂ ಅದ್ಭುತ. ಶ್ರೀ ಅಕ್ಕ ಹೇಳಿದಾ೦ಗೆ ಒಪ್ಪಣ್ಣ ನವಗೆ ಎಲ್ಲಾರಿ೦ಗು ಒಪ್ಪಣ್ಣಲ್ಲಿ ಬರವ ಅವಕಾಶ ಮಾಡಿಕೊಟ್ಟ ಗುರಿಕ್ಕಾರಿ೦ಗೆ, ಬಯಲಿನ ಸಮಸ್ತ ಹಿರಿಯರಿ೦ಗೆ ಅನ೦ತಾನ೦ತ ಕೃತಜ್ಞತೆಗೋ..!

    ನಮ್ಮ ಒಪ್ಪಣ್ಣ ಬೆಳದು ದೊಡ್ಡ ಆವುತ್ತಾ೦ಗೆ,ನಮ್ಮ ಎಲ್ಲಾ ಶುದ್ದಿಗಳ ಓದಿ ಒಪ್ಪಬರವ ಆತ್ಮೀಯರಿ೦ಗೆ ಧನ್ಯವಾದ.
    ಒಪ್ಪಣ್ಣ೦ಗೆ ಹುಟ್ಟುಹಬ್ಬದ ಶುಭಾಶಯಂಗೋ!! 🙂

  15. ಒಪ್ಪಣ್ಣಂಗೊಂದೊಪ್ಪ.ಮೂರು ವರ್ಶ್ಃಅ ವಾರಂಪ್ರತಿ ಒಂದೊಂದು ಲೇಖನ ಬರವದು ಅದೂ ಪ್ರತಿಯೊಬ್ಬಂಗೂ ಹಿಡಿವಂತದ್ದು,ಸಣ್ಣ ಮಾತೇನಲ್ಲ.

      1. ಅದು ಇಲ್ಲದ್ದರೆ ಬರವಗ ದಾರಿ ತಪ್ಪುಗು.ಎನ್ನದೊಬ್ಬಂದೇ ಅಲ್ಲ,ಎಲ್ಲರ ಸಹಕಾರ ಇಪ್ಪಗ ತೊಂದರೆ ಏನೂ ಆಗ,ಅಲ್ದೋ?

  16. ಮೂರು ವರ್ಷ ತುಂಬಿ ನಾಲ್ಕನೇ ವರ್ಷಕ್ಕೆ ಕಾಲು ಮಡುಗುತ್ತಾ ಇಪ್ಪ ಈ ಬೈಲು (e-ಬೈಲು ಕೂಡಾ) ನಮ್ಮ ಭಾಷೆ, ಸಂಸ್ಕೃತಿ ಮತ್ತೆ ಸಂಸ್ಕಾರಂಗಳ ವಿಶಯಕ್ಕೆ ಪ್ರಾಮುಖ್ಯತೆ ಕೊಡುವದರೊಟ್ಟಿಂಗೆ, ಎಲ್ಲಾ ಕ್ಷೇತಂಗೊಕ್ಕೆ ಸಂಬಂಧ ಪಟ್ಟ ಲೇಖನಂಗಳ, ಮಾಹಿತಿಗಳ ಕೊಟ್ಟು ಜೆನಂಗಳ ಜ್ನಾನ ಅಭಿವೃದ್ಧಿಗೆ ಸಹಕಾರಿ ಆಯಿದು ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ.
    ಒಂದು ಲೇಖನ ಬರವಲೆ ವಿಶಯ ಸಂಗ್ರಹಿಸಿ, ಅದರ ಕೃತಿ ರೂಪಕ್ಕೆ ಇಳುಶುವದು ಅಷ್ತು ಸುಲಭದ ಮಾತಲ್ಲ. ಹಾಂಗಿಪ್ಪದರಲ್ಲಿ, ವಾರಕ್ಕೊಂದು ಹೊಸ ಶುದ್ದಿಗಳ ವೈವಿಧ್ಯತೆ ಒಟ್ಟಿಂಗೆ ಬೈಲಿಂಗೆ ಕೊಡುವ ಒಪ್ಪಣ್ಣನ ಶ್ರಮಕ್ಕೆ ನಮೋ ನಮಃ.
    ಗುರು ಹಿರಿಯರ ಅಶೀರ್ವಾದಂದ ಈ ಬೈಲು ಇನ್ನೂ ವಿಸ್ತಾರಗೊಳ್ಳಲಿ,ಎಲ್ಲಾ ಹವ್ಯಕರು ಇದರ ಪ್ರಯೋಜನ ಪಡಕ್ಕೊಳಲಿ ಹೇಳಿ ಹಾರೈಕೆಗೊ.

  17. ಅಂಬಗ ಬೈಲಿಲಿ ಭಾರಿ ಕೊಯ್ಲು. ಅನ್ಪತ್ಯಕ್ಕೂ ಕಂಡಾವಟೆ ಜನಂಗೋ ಬೈಂದವು. ಲಾಯ್ಕಾಯ್ದು.

    1. ಉದಯಣ್ಣೋ,
      ಅಪ್ಪು, ಈ ಸರ್ತಿ ಕೊಯಿಲು ಒಳ್ಳೆದಿದ್ದು.
      ಕೆಲವು ದಿಕೆ ರೋಗ ಬಂದು ಪೂರ ಉದುರಿದ್ದಡ, ಆದರೆ ನಮ್ಮ ಬೈಲಿಲಿ ಹಾಂಗಾಯಿದಿಲ್ಲೆ.
      ಯೇವತ್ತೂ ಹಾಂಗಾಗ ಇದಾ!

  18. ಹರೇ ರಾಮ. ಸಿಂಹಾವಲೋಕನ ಓದಿ ತುಂಬಾ ಖುಶೀ ಆತು. ಬೈಲ ಬೆಳೆಸಿದ ಎಲ್ಲೋರಿಂಗೂ ಅಭಿನಂದನೆಗೊ ಮತ್ತು ಮಹತ್ತರ ವಿಷಯಂಗಳ ಇಲ್ಲಿ ಪ್ರತಿಬಿಂಬಿಸಿದ ಎಲ್ಲೋರಿಂಗೂ ಧನ್ಯವಾದಂಗೊ. ಶ್ರೀಗುರುಗಳ ಆಶೀರ್ವಾದಂದ ಮತ್ತು ಎಲ್ಲ ದೇವರ್ಕಳ ಕೃಪಾಕಟಾಕ್ಷಂದ ಈ ಬೈಲು ಇನ್ನೂ ಖ್ಯಾತಿಯಾಗಿ ಕೀರ್ತಿಗಳುಸಲಿ, ಜನಪ್ರಿಯವಾಗಲೆಂದು ಶುಭಕಾಮನೆಗಳ ಹೇಳುವದು- ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×