Oppanna.com

ಪೆಂಗಣ್ಣನ ತ್ರಿಪದಿಗೋ

ಬರದೋರು :   ಪೆಂಗಣ್ಣ°    on   25/11/2010    21 ಒಪ್ಪಂಗೊ

ಪೆಂಗಣ್ಣ°

ಪೆಂಗಣ್ಣ ಎಲ್ಲಿದ್ದಪ್ಪೋ ಹೇಳಿಯೊಂಡಿತ್ತಿದ್ದ ಮುಳಿಯ ಬಾವ. ಇಲ್ಲೆ ಇದ್ದೆ ಈಗ ಬರೆತ್ತೆ ಹೇಳಿ ಬೈಲಿಂಗೆ ಬಂದರೆ ಅವ° ಎಲ್ಲೊರ ಭಾಮಿನಿಲಿ ತೇಲಾಡಿಸಿದ್ದ. ಅದರ ನೋಡಿ ಆನು ತ್ರಿಪದಿ ಬರೆದರೆ ಹೇಂಗೆ ಹೇಳಿ ಅವನ್ತ್ರೆ ರೆಜಾ ಪಾಠ ಹೇಳಿಶಿಯೊಂಡು ಶುರು ಮಾಡಿದ್ದು ಓದಿ ಆತೋ.. ಯೇವತ್ತು ಬರೆವಲೆಡಿಯಾ. ಒಂದೊಂದರಿ ತ್ರಿಪದಿ ಬರೆವ ಆಗದೋ?

ಹಾಡು ವಚನಂಗಳ ಆಡಿ ಮನತಣಿಸುತ
ನಾಡು ಸುತ್ತಿದ ಕವಿ ಸರ್ವಜ್ಞ | ಭ್ರಷ್ಟರ
ಹುಡುಕುತ್ತ ಹೆರಟವನೆ ಪೆಂಗಜ್ಞ ||

ಪದಹೇಳಿ ಭಾಮಿನಿಲಿ ಮುದನೀಡಿ ಮನಸೀನ
ಹದಗೊಳಿಸೋ ಮುಳಿಯಾದ ಭಾವಯ್ಯ | ಊರಿನ
ಸುದ್ದಿ  ಸಂಗ್ರಾಹಕನೆ ಪೆಂಗಜ್ಞ ||

ಪೇಟೆಯ ಲೀಸಿಂಗೆ ಸೈಟಿನ ಸ್ವಂತಕ್ಕೆ
ನೋಟಿನ ಕಂತೆಯು ಕಿಸೆಗಿಂದು | ಯಡ್ಯಪ್ಪ
ಮೇಟಿ ಜೆನರ ಮರೆತ° ಪೆಂಗಜ್ಞ ||

ಸಣ್ಣ ಶುದ್ದಿಯನೆಲ್ಲ ಬಣ್ಣ ತುಂಬಿಸಿ ಹೇಳಿ
ಮಣ್ಣು ಎರಚಿದವು ಕಣ್ಣಿಂಗೆ | ನಿಜಶುದ್ದಿ
ತಣ್ಣಂಗೆ  ಒರಗಿದ್ದು ಪೆಂಗಜ್ಞ ||

ಜೆನಸೇವೆಯ ಹೆಸರೀಲಿ ಮನದಾಸೆ ಪೂರೈಸಿ
ಅನಂತ ಪೈಸೆಯ ವೈವಾಟು | ಗಣಿಭೂಮಿ
ಧನಕನಕ ಮೇಲಾಟ ಪೆಂಗಜ್ಞ ||

~
ಪೆಂಗ ಪ್ರಮ್ ಬೈಲು.
bingi.penga@gmail.com

21 thoughts on “ಪೆಂಗಣ್ಣನ ತ್ರಿಪದಿಗೋ

  1. ಅಯ್ಯೋ ದೇವರೇ, ಸರ್ವಜ್ಞನ ತ್ರಿಪದಿಯೇ ಬಾಯಿಪಾಠ ಮಾಡಿ ಪೂರೈಸುತ್ತಿಲ್ಲೆ ಎನ್ನಂದ! ಇನ್ನು ಪೆಂಗಜ್ಞಂದೂ ಪಾಠಪುಸ್ತಕಲ್ಲಿ ಬಂದರೆ ಎಂತ್ಸು ಮಾಡ್ತಪ್ಪಾ!! 😉

    1. ಯೆ ಒಪ್ಪಕುಂಞಿ
      ಈಗ ಕನ್ನಡಲ್ಲಿ ಬರೆವಕ್ಕೆ ಪರೀಕ್ಷೆ ಇಲ್ಲೆಡ ಹತ್ತನೇ ಕ್ಲಾಸಿನವರೆಗೆ, ತೊಂದರೆ ಆಗ. ಹೇಂಗೆ ಕಲಿವದು ಗೊಂತಾಯೆಕ್ಕದರೆ ಬಲ್ನಾಡು ಮಾಣಿಯತ್ರೆ ಕೇಳು.

  2. ಪೆಂಗಣ್ಣಾ..
    ವಿನೂತನ ಪ್ರಯತ್ನಲ್ಲಿ ಒಳ್ಳೆ ಶುದ್ದಿಗಳ ತುಂಬುಸಿ ತ್ರಿಪದಿ ಮಾಡಿ ಹೇಳಿದೆ.
    ಸರ್ವಜ್ಞ ಅತ್ಲಾಗಿ, ಪೆಂಗಜ್ಞ ಇತ್ಲಾಗಿ – ಹೇಳಿ ಬೋಸಬಾವ ಓ ಮೊನ್ನೆ ಹೇಳಿಗೊಂಡು ಇತ್ತಿದ್ದನಡ..
    ಅಂತೂ ಇಷ್ಟೂ ಚೆಂದಕೆ ಬರದು ನೀನು ಪೆಂಗ ಅಲ್ಲ ಹೇಳಿ ತೋರುಸಿಕೊಟ್ಟೆ, ಅಲ್ಲದೋ?

    { ಪೇಟೆಯ ಲೀಸಿಂಗೆ ಸೈಟಿನ ಸ್ವಂತಕ್ಕೆ
    ನೋಟಿನ ಕಂತೆಯು ಕಿಸೆಗಿಂದು | ಯಡ್ಯಪ್ಪ
    ಮೇಟಿ ಜೆನರ ಮರೆತ° ಪೆಂಗಜ್ಞ || }
    – ಇದು ತುಂಬ ಕೊಶಿ ಆತು ಒಪ್ಪಣ್ಣಂಗೆ.

  3. ಪೆನ್ಗಣ್ಣನ ತ್ರಿಪದಿಗೋ ಲಾಯ್ಕಿದ್ದು!
    (ಪೇಟೆಯ ಲೀಸಿಂಗೆ ಸೈಟಿನ ಸ್ವಂತಕ್ಕೆ, ನೋಟಿನ ಕಂತೆಯು ಕಿಸೆಗಿಂದು | ಯಡ್ಯಪ್ಪ, ಮೇಟಿ ಜೆನರ ಮರೆತ° ಪೆಂಗಜ್ಞ ||)

    ಎಷ್ಟು ಹೇಳಿರುದೆ ನಾಯಿಬಾಲ ಡೊಂಕೆ 😀

  4. ಭೋಸ ಭಾವನೂ ಕವಿ ಆದ ಹಾ೦ಗೆ (ಕಪಿ ಅಲ್ಲ) ಕಾಣ್ತು.ಇದ ಭೋಸ ಭಾವ ನೀನು ರಘು ಭಾವ೦ಗೆ ಸ್ಪರ್ದೆ ಕೊಡೇಡ ಆತೊ.ಮತ್ತೆ ಅವ೦ ಭಾಮಿನಿ ಬಿಟ್ಟು ಭಾವನ ಹಿಡಿಯೇಕಕ್ಕು.ಇರಳಿ ಎಡಕ್ಕೆಡಕ್ಕಿಲ್ಲಿ ಭೋಸ ಭಾವನ ಚೂರ್ಣಿಕಗಳೊ ಹಾಡುಗಳೊ ಬ೦ದೊ೦ಡಿರಲಿ.ನೀನು ಬೇಕಾರೆ ಪೆ೦ಗ೦ಣ್ಣನ ಸೇರ್ಸಿಗೊ ಒಟ್ಟಿ೦ಗೆ ಜೆತಗೆ ಒಬ್ಬ೦ ಇದ್ದರೆ ಬಲ ಹೆಚ್ಚದ.ಒಪ್ಪ೦ಗಳೊಟ್ಟಿ೦ಗೆ.

    1. ಅಯ್ಯೊ.. :-O ಆಸ್ಥಾನ ಕವಿಯಾದ “ರಘು ಭಾವ೦ಗೆ”, ಆನು ಸ್ಪರ್ದೆ ಮಾಡುಸ್ಸೊ?? ಚೆ ಚೆ…!!
      ಆನು ಬೋಸನೇ ಸರಿ…! 😛

      1. ಬೋಸ ಭಾವ,ನಿನ್ನೊಟ್ಟಿ೦ಗೆ ಸ್ಪರ್ಧೆಯೋ ?ಹೆದರಿಕೆ ಆವುತ್ಸು.ದ್ವಿಪದಿಲಿ ಹಟ್ಟಿ ಸರಿ ಮಾಡುಲೆ,ಗೊಬ್ಬರ ಹೊರುಲೆ ಹೇದರೆ ಎಂತ ಮಾಡುತ್ಸಪ್ಪಾ ..

  5. ಬಯಲಿಲ್ಲಿ ಕಾವ ಧಾರೆಗೊ. ಲಾಯಿಕ ಆಯಿದು ಪೆಂಗಣ್ಣ
    [ಸಣ್ಣ ಶುದ್ದಿಯನೆಲ್ಲ ಬಣ್ಣ ತುಂಬಿಸಿ ಹೇಳಿ,ಮಣ್ಣು ಎರಚಿದವು ಕಣ್ಣಿಂಗೆ | ನಿಜಶುದ್ದಿ ತಣ್ಣಂಗೆ ಒರಗಿದ್ದು ಪೆಂಗಜ್ಞ ||]-ಸತ್ಯವಾದ ಮಾತುಗೊ.ರಂಜನೆ ಸುದ್ದಿಗೊ ಬೇಕಾದ್ದಲ್ಲದ್ದೆ ನಿಜ ಶುದ್ದಿ ಆರಿಂಗೆ ಬೇಕು ಅಲ್ಲದಾ?
    ಪೆಂಗಣ್ಣನ ರಾಜಕೀಯ ನೋಟ
    ಮುಳಿಯ ಭಾವನ ಭಾಮಿನಿಯ ಓಟ
    ಬತ್ತಾ ಇರಳಿ

  6. ಎಡಕ್ಕಿಲ್ಲಿ ಎನ್ನದೂ ಒ೦ದು ಇರ್ಲಿ ಎ೦ತ ಹೇಳ್ತಿ..??:D ಕೇಮಿ ಮುಚ್ಚೆ೦ಡು ಹುರಿಕ್ಕೆ ಬಿಟ್ಟಾ೦ಗೆ.. 😛

    “ಲೋಕ ಚಿ೦ತೆಯ ಬಿಟ್ಟು ಅ೦ತರ೦ಗವ ನೋಡು, 😛
    ಗುಡ್ಡೆ ಹತ್ತಿ ಇಳುದು ಮಾಡು… 🙂
    ಕಾಟು ಹುಲ್ಲು-ಬಲ್ಲೆ ಕಡುದು ನೋಡು… 😀
    ಬೋಸಜ್ಜ, ಪೆ೦ಗಜ್ಜ ಸೇರಿ ಹಟ್ಟಿ ಸರಿ ಮಾಡು…” 😉

    – ತಮಾಶಿಯೊ ಕಾರ್ಯವೊ.. ಇದರ ಅರ್ಥ ನಿ೦ಗಳೇ ಚರ್ಚೆ ಮಾಡಿ.. 🙂

    1. ಬೋಸ ಭಾವ ಎಡಕ್ಕಿಲಿ ಬಂದು ರೈಸಿದೆ.
      ಈಗ ಹಟ್ಟಿ ಸರಿ ಮಾಡೆಕ್ಕಾದ್ದು ಅಜ್ಜಂದಿರೋ ಹಾಂಗಾರೆ ? ಕೆಲಸ ಸುಮ್ಮರು ಹೇಳಿದೆ,ಎಲ್ಲ ನೀನು ಮಾಡೊದೋ ಅಲ್ಲ ಪೆಂಗನ ಹತ್ತರೆ ಮಾಡ್ಸೊದೋ ?

    2. [ಬೋಸಜ್ಜ, ಪೆ೦ಗಜ್ಜ]
      ಏ ಬೋಸ ಭಾವ ಇದು ಬೋಸನ ಅಜ್ಜ ಮತ್ತೆ ಪೆಂಗನ ಅಜ್ಜ ಹೇಳಿಯೋ?
      ಅಲ್ಲ ಇಬ್ರೂದೆ ದಂಟು ಊರುವ ಅಜ್ಜಂದಿರು ಆದಿರಾ ಈಗಳೇ.
      ಮುಳಿಯ ಭಾವ ಹೇಳಿದ ಹಾಂಗೆ “ನಾಗರ ಬೆತ್ತ ಬೇಡಜ್ಜಂಗೆ ಊರುಲೆ ಏರು ಜವ್ವನಿಗ°” ಆವ್ತ ಅಂದಾಜಿ ಮಾಡು ಮಿನಿಯಾ

      1. ಹಾ೦ಗಲ್ಲ, ಶ್ರಿಶಣ್ಣ…ಆನುದೆ, ಪೆ೦ಗನುದೆ ದೋಸ್ತಿ ಹೇಳಿ.. 🙂

  7. ಮುಳಿಯ ಭಾವ೦ಗೆ ಒ೦ದು ರೀತಿ ಖುಸಿ ಅಕ್ಕು.ಅವನೊಟ್ಟಿ೦ಗೆ ಹಾಡು ಬರವಲೆ ಇನ್ನೊಬ್ಬನೂ ಬ೦ದನಾನೆ ಹೇಳಿ.ಇನ್ನು ಬ್ರಷ್ಟರ ಹುಡ್ಕೇಡ ಭಾವ ಅವ್ವು ಎಲ್ಲೆಲ್ಲು ಇದ್ದವು.ಭ್ರಶ್ಟರಲ್ಲದ್ದವು ಸಿಕ್ಕಲೆ ಕಷ್ಟ ಅಷ್ಟೆ.ೈರಳಿ ಈ ತ್ರಿಪದಿ ಸೇವೆ ಸಾಗಲಿ.ಒಪ್ಪ೦ಗಳೊಟ್ಟಿ೦ಗೆ

    1. ಗಣೇಶ ಭಾವ, ಈ ಊರೂರು ತಿರುಗುವ ಪೆಂಗಣ್ಣ ನಿನ್ನೆ ಕಸ್ತಲೆ ಅಪ್ಪಗ ಎಂಗಳಲ್ಲಿಗೆ ಬಂದ° ಒಂದು ಗಳಿಗೆಗೆ.ಸಂಚಿಂದ ಎಲೆಕಟ್ಟು ತೆಗವಗ ಒಂದು ಸಣ್ಣ ಪುಸ್ತಕವೂ ಹೇರ ಬಂತದಾ.ಬಿಡುಸಿ ನೋಡಿರೆ ಸುಮಾರು ತ್ರಿಪದಿಗೋ.ಊರು ತಿರುಗುವ ಗಡಿಬಿಡಿಲಿ ಪುರುಸೊತ್ತು ಮಾಡಿ ಬರದೆ ಒಂದರಿ ನೋಡಿ ಹೇಳಿದ°. ಆನು ಎರಡು ಅಕ್ಷರ ಪ್ರಾಸ ಹೇಳಿದ್ದು ಅಷ್ಟೇ,ಪೆಂಗ ಭಾವನ ಪೆನ್ನು ಕೊಲ್ಮಿಂಚಿನಾಂಗೆ ರಟ್ಟಿತ್ತದಾ .ಅದೇ ಸ್ಪೀಡಿಲಿ ಅವನೂ ರಟ್ಟಿದ°. ಈಗ ಎಲ್ಲಿಗೆತ್ತಿದನೋ??

      1. ಉದಿಯಪ್ಪಗ ಆನು ಬಪ್ಪಾಗ ಎನ್ನ ಆಪೀಸಿನ ಎದುರು ಕೂಯ್ದ , ನಿನ್ನೆ ರಟ್ಟಿದಪ್ಪಗ ಇಲ್ಲಿಗೆತ್ತಿದನೋ ಸಂಶಯ.. 🙂

        1. ಅದಾ.. ಅಲ್ಲಿಯಾಣ ಭ್ರಷ್ಟರ ಹಿಡಿವಲೆ ಆಗಿಕ್ಕು,ಗೋಣಿ ಇದ್ದೋ ಕೈಲಿ?

          1. ಅಪ್ಪಪು, ದೊಡ್ಡ ಹಿಂಡಿ ಗೋಣಿ ಇದ್ದತ್ತು.. 🙂 ಎನಗೆ ಹತ್ರೆ ಹೋಪಲ ಹೆದರಿಕೆ ಆತಿದಾ !

          2. ಎಂತ ಹಿಂಡಿ ತಿನ್ನುಸುಗು ಹೇಳಿಯೋ ? ಅವ ಭ್ರಷ್ಟರ ಜೀವ ಹಿಂಡುಲೆ ಹೆರಟದು ಆತೋ,ಹೆದರೆಡ.

            ಹಿಂಡಿಗೋಣಿಯ ಹಿಡುದು ಬಂದ ಪೆಂಗಣ್ಣ
            ಭಂಡರೆದೆ ನಡುಗಿತ್ತು ವಿಷಯ ಕೇಳಣ್ಣ
            ಗುಂಡಿ ಗುಡ್ದೆಗಳಲ್ಲಿ ಹುಡುಕುತಲಿ ಬಂದ°
            ಹಿಂಡಿ ಭ್ರಷ್ಟರ ತಲೆಯ ಸರಿಮಾಡೆ ನಿ೦ದ°

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×