ಒರಿಶಕ್ಕೊಂದರಿ ಸೇರುವ ಬೈಲಿನ ಗೌಜಿ ಈ ಸರ್ತಿ ಸುಳ್ಯದ ಬೈಲಿಲಿ..!

May 6, 2016 ರ 12:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವಸಂತ ಕಾಲ ಬಂತು ಹೇದರೆ ಕೋಗಿಲೆಗೆ ಗವುಜಿ ಆಡ. ಮಳೆಗಾಲ ಬಂತು ಹೇದರೆ ನವಿಲಿಂಗೆ ಗವುಜಿ ಆಡ.
ವಿಶು ಬಂತು ಹೇದರೆ ಬೈಲಿಲಿ ಒಂದು ಗವುಜಿ.
ಬೈಲಿನ ಎಲ್ಲೋರ ಸಮ್ಮುಖಲ್ಲಿ ಸಾಹಿತ್ಯ ಕೃಷಿ ಆವುತ್ತ ಕಾಲ ಅದು.
ಅದುವೇ ವಾರ್ಷಿಕೋತ್ಸವ.
~

ಒರಿಶಕ್ಕೊಂದರಿ ನೆಡವ ವಿಶು ವಿಶೇಷ ಸ್ಪರ್ಧೆ ಅರಡಿಗನ್ನೇ..
ಪ್ರತಿ ವಿಶುವಿನ ಸಮೆಯಲ್ಲಿ ಫಲಿತಾಂಶ ಬಪ್ಪ ನಮುನೆಲಿ ವಿವಿಧ ವಿಧ ವಿಧದ ಸ್ಪರ್ಧೆ ಆಯೋಜನೆ ಆವುತ್ತು.
ಹೇಂಗೆ? ಎಲ್ಲವೂ ದೂರಂದಲೇ.
ಇಂತಿಂತಾ ಸ್ಪರ್ಧೆಗೊ – ಇಂತಿಂತಾ ವಿಶಯಂಗೊ ಹೇದು ಬೈಲಿಲಿ ಒಂದು ಶುದ್ದಿ ಬಪ್ಪದು.
ಅದರೊಟ್ಟಿಂಗೇ ಪೇಪರಿಲಿ ಬಪ್ಪದು.
ಅದರ ನೋಡಿಗೊಂಡ ಹವ್ಯಕ ಸಾಹಿತ್ಯಾಸಕ್ತರು ಅವರವರ ಸ್ಪರ್ಧಾವಸ್ತುಗಳ ತಯಾರ್ಸಿ ಸೂಚಿಸಿದ ವಿಳಾಸಕ್ಕೆ ಕಳುಸುದು.
ಸಂಚಾಲಕರು ಅದರ ಎಲ್ಲ ಜೋಡಣೆ ಮಾಡಿಗೊಂಡು – ಸೂಕ್ತ ವೆಗ್ತಿಗೊಕ್ಕೆ ಮೌಲ್ಯಮಾಪನಕ್ಕೆ ಕಳುಸುದು.
ಆ ಮೌಲ್ಯಮಾಪಕರು ಕಳುಸಿದ ಉತ್ತರವ ಕೂಡ್ಸಿ ಸರಾಸರಿ ತೆಗದು ವಿಶುವಿನ ದಿನ ಫಲಿತಾಂಶ ಪ್ರಕಟ ಮಾಡುದು ಸಂಚಾಲಕರು.
ಅದುವೇ ವಿಶು ವಿಶೇಷ ಸ್ಪರ್ಧೆ.
ಕಳುದ ನಾಕೊರಿಶಂದ ನೆಡೆತ್ತಾ ಇದ್ದು. ಈ ಒರಿಶವೂ ನೆಡದ್ದು.

ಅದರ ಪ್ರಶಸ್ತಿ ಕೊಡ್ತ ಕಾರ್ಯಕ್ರಮವೇ – ಬೈಲಿನ ವಾರ್ಶಿಕ ಗೌಜಿ.
ಒಂದೊಂದು ಒರಿಶ ಒಂದೊಂದು ದಿಕ್ಕೆ ನೆಡದ್ದು.
ಸುರೂವಾಣ ಒರಿಶ ಕಾನಾವು ಡಾಗುಟ್ರ ಮನೆಲಿ, ಶ್ರೀ ಅಕ್ಕನ ಉಸ್ತುವಾರಿಲಿ.
ಎರಡ್ಣೇ ಒರಿಶ ಪುತ್ತೂರಿಲಿ, ಜನಭವನಲ್ಲಿ,
ಮತ್ತೆ ಪುನಾ ಜನಭವನಲ್ಲಿ,
ಮತ್ತಾಣ ಒರಿಶ ನೀರ್ಚಾಲಿಲಿ – ಮಹಾಜನ ಸಂಸ್ಕೃತ ಕೋಲೇಜು ಶಾಲೆಲಿ.
ಹಾಂಗೇ ಈ ಒರಿಶ ಸುಳ್ಯದ ಶಿವಕೃಪಾ ಸಭಾಂಗಣಲ್ಲಿ.

ಹೆರಿಯೋರಾದ ಮಾಷ್ಟ್ರುಮಾವ°, ಅರ್ತಿಕಜೆ ಅಜ್ಜ°, ಶರ್ಮಪ್ಪಚ್ಚಿ, ಆನೆಕಾರ ಗಣಪಯ್ಯ, ತೂಗುಸೇತುವೆ ಭಾರದ್ವಾಜರು, ಸುಬ್ರಾಯ ಸಂಪಾಜೆ – ಇವರೆಲ್ಲರ ಉಪಸ್ಥಿತಿ ಆ ದಿನ ಇರ್ತು.
ಬಹುಮಾನಿತರಿಂಗೆ ಬಹುಮಾನ ವಿತರಣೆ ಇರ್ತು. ಪ್ರೋತ್ಸಾಹದ ಮಾತುಗೊ ಇರ್ತು.
ಸಾಹಿತ್ಯ ಒಳಿಶುವ ಬಗ್ಗೆ ಗಂಭೀರ ಚಿಂತನೆಗೊ ಇರ್ತು.
~

ಬಾಳಿಲ ಪರಮೇಶ್ವರ ಭಟ್ಟ – ಹೇದು ಅರಡಿಗನ್ನೇ?
ಹವ್ಯಕ ಭಾಶೆಲಿ ಧರ್ಮವಿಜಯ – ಹೇಳ್ತ ಮಹಾಭಾರತ ಬರದು, ಅದರ ಪ್ರಕಟಿಸಿ, ಇಷ್ಟು ದಪ್ಪದ ಪುಸ್ತಕ ಮಾಡಿ ಅಮರವಾದ ಮಹಾ ಸಾಹಿತಿ.
ಅವರ ಹೆಸರಿಲಿ – ಸಾಹಿತ್ಯ ಕ್ಷೇತ್ರಲ್ಲಿ ಗಣನೀಯ ಕೆಲಸ ಮಾಡಿದ ಜೆನಂಗಳ ಗುರುತಿಸಿ ಗೌರವಿಸುವ ಕಾರ್ಯ ನಮ್ಮ ಬೈಲಿಂದ ಕಳುದೊರಿಶಂದ ಸುರು ಮಾಡಿದ್ದು.
ಈ ಒರಿಶದ ಪ್ರಶಸ್ತಿಯ ಅತಿವಂದನೀಯ ಡಾ. ಹರಿಕೃಷ್ಣ ಭರಣ್ಯಮಾವಂಗೆ ಕೊಡ್ಸು – ಹೇದು ಬೈಲ ಹತ್ತು ಸಮಸ್ತರು ತೀರ್ಮಾನ ಮಾಡಿದ್ದವು.
ಆ ಪ್ರಕಾರ – ನಾಡಿದ್ದಿನ ವಿಶು ಸ್ಪರ್ಧೆಯ ಅದೇ ವೇದಿಕೆಲಿ ಭರಣ್ಯ ಮಾವಂಗೆ ಬಾಳಿಲ ಪ್ರಶಸ್ತಿ ಪ್ರದಾನ ಕಾರ್ಯಕ್ರಮ.

ಮದುರೈ ಕಾಮರಾಜ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾಗಿ, ಹವ್ಯಕ ಸಾಹಿತ್ಯಲ್ಲಿ ಹಲವು ಕೆಲಸ ಮಾಡಿದ ಇವರ – ಹವ್ಯಕ ಸಮಾಜ ಸದಾ ನೆಂಪು ಮಡಿಕ್ಕೊಂಗು. ಅವರ ಗುರುತಿಸಿ, ಅವರಿಂದ ಇನ್ನೂ ಹೆಚ್ಚಿನ ಸಾಹಿತ್ಯಂಗೊ ರಚನೆ ಆಗಲಿ – ಹೇಳ್ತ ಆಶಯ ಸದಾ ಮಡಿಕ್ಕೊಳ್ತು ಬೈಲು.
~

ಬೈಲು ಲಲಿತಕಲೆಗೆ ಸದಾ ಪ್ರೋತ್ಸಾಹ ಕೊಡ್ಸು ನಿಂಗೊಗೆ ಗೊಂತಿಪ್ಪದೇ.
ಆಚ ಒರಿಶ ಬೈಲಿನ ಲೆಕ್ಕಲ್ಲಿ ಅಷ್ಟಾವಧಾನ ಕಾರ್ಯಕ್ರಮ ಪುತ್ತೂರಿನ ಜೈನ ಭವನಲ್ಲಿ ಆಗಿದ್ದತ್ತು.
ಮತ್ತಾಣ ಸರ್ತಿ ಅದೇ ಜೈನ ಭವನಲ್ಲಿ ಕಾವ್ಯ ಗಾನ ಯಾನ ನೆಡದ್ದು.
ಮತ್ತಾಣ ಒರಿಶ ನೀರ್ಚಾಲಿಲಿ ಯಕ್ಷಗಾನ ಆಯಿದು.
ಈ ಒರಿಶ ಯಕ್ಷ-ನಾಟಕ ಮಾಡ್ತ ಬಗ್ಗೆ ತೀರ್ಮಾನ.

ದೇರಾಜೆ ಸೀತಾರಾಮಜ್ಜನ ಕೃತಿ ಆಧಾರಿತ ವಿಶಿಷ್ಟ “ಕುರುಕ್ಷೇತ್ರಕ್ಕೊಂದು ಆಯೋಗ” ಹೇಳ್ತ ಯಕ್ಷ ನಾಟಕವ ರಂಗಕ್ಕೆ ಅಳವಡುಸಿ ತೋರ್ಸುತ್ತವು.
~

ವಿಶು ಸ್ಪರ್ಧೆಯ ಸಂಚಾಲಕರಾದ ದೊಡ್ಡಭಾವ°, ಲಲಿತಕಲೆ ಸಂಚಾಲಕರಾದ ಮುಳಿಯಭಾವ°, ಹಾಂಗೂ ಒಟ್ಟು ಕಾರ್ಯಕ್ರಮವ ಆಯೋಜನಾ ಜವಾಬ್ದಾರಿ ತೆಕ್ಕೊಂಡ ಸುಭಗಣ್ಣ – ಇವೆಲ್ಲರ ಪರವಾಗಿ ಬೈಲಿಂಗೆ ಒಪ್ಪಣ್ಣನ ಹೇಳಿಕೆ.
ಎಲ್ಲ ಒಟ್ಟಾಗಿ ಆ ದಿನದ ಕಾರ್ಯಕ್ರಮ ಒಂದು ಅವಿಸ್ಮರಣೀಯ ಅಪ್ಪದರ್ಲಿ ಸಂಶಯ ಇಲ್ಲೆ.
ಎಲ್ಲೋರುದೇ ಬನ್ನಿ, ಕಾರ್ಯಕ್ರಮವ ಚೆಂದಗಾಣುಸಿಕೊಡಿ.
ಹವ್ಯಕ ಸಾಹಿತ್ಯ ಬೆಳೆಸುವೊ°, ಭಾಷೆ ಒಳಿಶುವೊ°.
~
ಒಂದೊಪ್ಪ: ಹಳೆ ಬೇರುಗಳ ಗೌರವಿಸಿದರೆ ಮಾಂತ್ರ ಹೊಸ ಚಿಗುರು ಬಕ್ಕಷ್ಟೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ವಿಜಯತ್ತೆ

  ಎಲ್ಲಾ ಬಹುಮಾನಿತರಿಂಗೆ ಅಭಿನಂದನೆಯೊಟ್ಟಿಂಗೆ; ಕಾರ್ಯಕ್ರಮ ಚೆಂದಾಗಿ ನೆಡದು ಬರಲಿ ಹೇಳ್ತ ಶುಭ ಹಾರೈಕೆ.

  [Reply]

  VN:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  S.K.Gopalakrishna Bhat

  ಶುಭಮಸ್ತು

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  S.K.Gopalakrishna Bhat

  ಭರಣ್ಯ ಭಾವಯ್ಯಂಗೆ ಅಭಿನಂದನೆ.ಎಂತಗೆ ಅವು ನಮ್ಮ ಬೈಲಿಲಿ ಬರೆತ್ತವಿಲ್ಲೇ ಈಗ?

  [Reply]

  VA:F [1.9.22_1171]
  Rating: 0 (from 0 votes)
 4. ಶ್ಯಾಮಣ್ಣ
  shyamanna

  ವಿಷಯ ಎಲ್ಲ ಸರಿ… ಆದರೆ ಶಿವ ಪೂಜೆಲಿ ‘ಕರಡಿಗೆ’ ಬಿಟ್ಟಾಂಗೆ ದಿನ ಏವಗ ಹೇಳಿ ಕಾಣ್ತಿಲ್ಲೆನ್ನೆ?

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಮೇ ೧೪ ಶನಿವಾರ ಅಪರಾಹ್ನ ೨ ಗಂಟಗೆ. ಅಂದು ಎಲ್ಲೋರು ಸೇರಿಗೊಂಡು ನಮ್ಮ ಬೈಲಿನ ಕಾರ್ಯಕ್ರಮವ ಚೆಂದಗಾಣಿಸಿಕೊಡುವೊ.

  [Reply]

  VA:F [1.9.22_1171]
  Rating: 0 (from 0 votes)
 6. Harish

  ಶುಭ ಮಸ್ತು

  [Reply]

  VA:F [1.9.22_1171]
  Rating: 0 (from 0 votes)
 7. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಕಾರ್ಯಕ್ರಮ ಚೆಂದಕೆ ನಡೆಯಲಿ.
  ಶುಭ ಹಾರೈಕೆಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಅನಿತಾ ನರೇಶ್, ಮಂಚಿಸಂಪಾದಕ°ಡೈಮಂಡು ಭಾವಚೆನ್ನೈ ಬಾವ°vreddhiಕಳಾಯಿ ಗೀತತ್ತೆವಸಂತರಾಜ್ ಹಳೆಮನೆಎರುಂಬು ಅಪ್ಪಚ್ಚಿಪುಟ್ಟಬಾವ°ಜಯಗೌರಿ ಅಕ್ಕ°ನೆಗೆಗಾರ°ಪುತ್ತೂರಿನ ಪುಟ್ಟಕ್ಕಪವನಜಮಾವಡಾಮಹೇಶಣ್ಣಶಾ...ರೀಕೆದೂರು ಡಾಕ್ಟ್ರುಬಾವ°ಚುಬ್ಬಣ್ಣಬೊಳುಂಬು ಮಾವ°ಪುಣಚ ಡಾಕ್ಟ್ರುಕಾವಿನಮೂಲೆ ಮಾಣಿಮುಳಿಯ ಭಾವದೊಡ್ಮನೆ ಭಾವಅಡ್ಕತ್ತಿಮಾರುಮಾವ°ಪೆರ್ಲದಣ್ಣಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ