ತಲೆಮಾರಿನ ವೆತ್ಯಾಸಕ್ಕೆ ಅಳಿಯಂದ್ರೇ ಸಾಕ್ಷಿ..!!

February 28, 2014 ರ 12:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೆಟ್ಟುಕಜೆ ಮಾಣಿಯ ಮದುವೆ ಗೌಜಿ ಓ ಮನ್ನೆ.
ಪುತ್ತೂರಿನ ಸ್ವಾಮಿ ಕಲಾಮಂದಿರ ತುಂಬಿ ಸಮಲಿತ್ತು.
ನೇರಳೆ ಬಾವ°, ಕಿಟ್ಟಣ್ಣ, ಸುಭಗಭಾವಂದ್ರ ಸುದಾರಿಕೆ ಅತ್ತಾಳಂದಲೇ ತುಂಬಿ ತುಳುಕಿತ್ತು. ಚುಬ್ಬಣ್ಣನ ಕಾರಿಲಿ ನವಗೂ ಜಾಗೆ ಸಿಕ್ಕಿದ ಕಾರಣ ಹೋಗಿ ಬಪ್ಪಲೆ ವಿಶೇಷ ಬಂಙ ಆಯಿದಿಲ್ಲೆ. ಹಂತಿಲಿ ಕೂದು ಎರಡೇ ಹೋಳಿಗೆ ತಿಂದರೂ, ಹೆರಡುವಾಗ ಬೆಟ್ಟುಕಜೆತ್ತೆ ಕಟ್ಟಿ ಕೊಟ್ಟ ಕಟ್ಟು  ತಂದು  ಮಡಗಿದ್ದು  ಹಾಂಗೇ ಇದ್ದು, ಪುರುಸೋತಿಲಿ ಕಾಲುನೀಡಿ ಕೂದುಗೊಂಡು ತಿನ್ನೇಕು. ನಿಂಗೊಗೆ ಬೇಕೋ?
ಅದಿರಳಿ.

~

ಬೆಟ್ಟುಕಜೆ ಮದುವೆ ದಿನ ಮುಳಿಯಭಾವಂಗೆ ಬೇರೆ ಹೋಪಲಿದ್ದ ಕಾರಣ ಅವು ಮುನ್ನಾಣ ದಿನಕ್ಕೇ ಬಂದು ಬೆಂದಿಕೆ ಕೊರದಿಕ್ಕಿದವು. ಅವಕ್ಕೆ ನೆಡಿರುಳು ಹನ್ನೊಂದೂ ಮುಕ್ಕಾಲಕ್ಕೆ ಬಸ್ಸು. ಆದರೆ, ಕಾನಾವು ಡಾಗುಟ್ರು ಸ್ವಾಮಿ ಕಲಾಮಂದಿರಂದ ಅಷ್ಟು ತಡವಾಗಿ ಹೆರಟ್ರೆ ಅವರ ಮನೆ ಬಾಗಿಲುದೇ ತೆಗೆಯವು ಒಳಾಂದ! ಹಾಂಗೆ, ರಜಾ ಬೇಗ ಹೆರಟವು. ಡಾಗುಟ್ರಿಂಗೆ ತಡವಾಗಿ ಹೆರಡ್ಳೆ ಗೊಂತಿಲ್ಲೆ, ಮುಳಿಯ ಭಾವಂಗೆ ಬೇಗ ಹೋಗಿ ಬಷ್ಟೇಂಡಿಲಿ ಕೂಪಲೆ ಗೊಂತಿಲ್ಲೆ. ಮತ್ತೆಂತ ಮಾಡುದು, ಸಂಗಾತಕ್ಕಾತು ಹೇದು ಕಾರಿಲಿ ನಾವುದೇ ಹೋದ್ಸು. ಹೋಪ ಕಾರಿಲಿ ಕೂಪಲೆ ಖರ್ಚಿಲ್ಲೆನ್ನೇ!? 😉
ಹಾಂಗೆ, ಈಗ ಮುಳಿಯಭಾವನ ಒಟ್ಟಿಂಗೆ ಹೋಪದು, ಹನ್ನೊಂದೂ ಮುಕ್ಕಾಲಕ್ಕೆ ಅವು ಬಸ್ಸು ಹತ್ತಿದ ಮತ್ತೆ ಅಲ್ಲೇ ಹತ್ತರೆ ಇಪ್ಪ ನಮ್ಮ ತಮ್ಮಮಾವನ ಮನೆಗೆ ಹೋಪದು – ಹೇದು ಗ್ರೇಶಿಗೊಂಡೆ.

ಪುತ್ತೂರು ಬಷ್ಟೇಂಡಿನ ಕರೇಲಿ ಆ ಅಶ್ವತ್ಥ ಮರದ ಬುಡಲ್ಲಿ ಡಾಗುಟ್ರು ಬಾವನ ಕಾರು ನಿಂದತ್ತು. ಮುಳಿಯಭಾವ° ಎರಡು ಮಣ ತೂಗುವ ಕಂದು ಬೇಗು ಒಂದರ, ನೀಲಿ ಬಣ್ಣದ ಕೈಚೀಲ ಮತ್ತೊಂದರ ಇಳುಶಿದವು. ನೀಲಿ ಬಣ್ಣದ ಚೀಲಲ್ಲಿ ಅವರ ಬೈಲಿಲಿಯೇ ಆದ ತರಕಾರಿಗ ಸಮಲಿಯೊಂಡಿತ್ತು! 😉
ಮುಳಿಯ ಭಾವನೊಟ್ಟಿಂಗೆ ನಾವುದೇ ಇಳ್ಕೊಂಡತ್ತು. ಡಾಗುಟ್ರು ಭಾವಂಗೆ ಟಾಟ ಮಾಡಿ ಕರೇಲಿ ಇಪ್ಪ ಮಣ್ಣಚಿಟ್ಟೆಲಿ ಕೂದುಗೊಂಡೆಯೊ°. ಬಸ್ಸು ಹನ್ನೊಂದೂ ಮುಕ್ಕಾಲಕ್ಕೆ; ಈಗ? ಹತ್ತೂವರೆಯೋ – ಹನ್ನೊಂದೋ ಮಣ್ಣ ಆಗಿಕ್ಕು.

ಪುರುಸೊತ್ತು ಧಾರಾಳ ಇದ್ದಿದಾ!

~

ವಾರಲ್ಲಿ ಎರಡು ದಿನ ಗುಜರಾತು, ಮತ್ತೆರಡು ದಿನ ಆಂಧ್ರ, ಮತ್ತೊಂದು ದಿನ ಚೆನ್ನೈ – ಹೀಂಗೆ ಹಾರ್ತ ಮುಳಿಯಭಾವ° ಇಷ್ಟು ಪುರುಸೋತಿಲಿ ಸಿಕ್ಕುದು ಹೇದರೆ ಅದೊಂದು ಸೌಭಾಗ್ಯ ಅಲ್ಲದೋ? ಯೇವಗಳೂ ರೋಮಿಂಗು, ಅಂದು ಲೇಂಡಿಂಗು – ಹೆ ಹೆ!!

ಬೆಟ್ಟುಕಜೆ ಮಾಣಿಯ ಮದುವೆ ಶುದ್ದಿಂದ ಸುರು ಆಗಿ, ಲೋಕದ ಹಲವು ಒರ್ತಮಾನಂಗಳನ್ನೂ ಮಾತಾಡಿ ಆತು.
ಮುಳಿಯ ಭಾವಂಗೆ ಹಳೆತಲೆಮಾರಿನ ಸಂಗತಿಗಳೂ ಅರಡಿಗು ಈಗಾಣ ಪುಳ್ಳರುಗಳ ಪೀಕ್ಲಾಟಂಗಳೂ ಅರಡಿಗು.
ಅದರ್ಲಿ ಒಂದು ವಿಶೇಷ ಆಸಕ್ತಿ ಬಂದ ಶುದ್ದಿ – ಹೇದರೆ ಇದುವೇ ಇದಾ. ಅದನ್ನೇ ಈ ವಾರ ಶುದ್ದಿ ಮಾತಾಡಿರೆ ಹೇಂಗೆ – ಕಂಡತ್ತು.

~

ಇದೊಂದು ಮನೆಯ ಶುದ್ದಿ. ಯೇವದೋ ಮನೆ ಹೆಸರು ಹೇಳಿದವಪ್ಪಾ ಮುಳಿಯಭಾವ°, ಈಗ ಮರದತ್ತು ನವಗೆ.
ಎಲ್ಲಾ ಹಳೆಕಾಲದ ಮನೆಯ ಹಾಂಗೇ ಆ ಮನೆಯೂ.
ಅಲ್ಯಾಣ ಅಜ್ಜಂಗೆ ಎರಡು ಮದುವೆ ಆಗಿದ್ದತ್ತು ಇದಾ. ಹತ್ತು-ಹನ್ನೆರಡು ಜೆನ ಮಕ್ಕೊ; ಏಳು ಜೆನ ಕೂಸುಗೊ ಸುರೂವಾಣ ಹೆಂಡತ್ತಿಲಿ, ಮೂರು ಕೂಸುಗೊ, ಎರಡು ಮಾಣಿಯಂಗೊ ಎರಡ್ಣೇ ಸಂಬಂಧಲ್ಲಿ.  ಒಟ್ಟು ಹತ್ತು ಜೆನ ಕೂಸುಗೊ, ಎರಡು ಮಾಣಿಯಂಗೊ.

ಸುರುವಾಣ ಹೆಂಡತ್ತಿ ತೀರಿಗೊಂಡ ಮತ್ತೆ, ರಜ ಸಮಯ ಕಳುದಿಕ್ಕಿಯೇ ಎರಡ್ಣೇ ಮದುವೆ ಆದ ಕಾರಣ – ಸುರುವಾಣ ಏಳು ಜೆನ ಮಕ್ಕೊ ಪ್ರಾಯಲ್ಲಿ ತುಂಬ ದೊಡ್ಡ. ಸುರೂವಾಣ ಮಗಳಿಂಗೂ, ಅಖೇರಿಯಾಣ ಮಗಂಗೂ – ಹೆಚ್ಚುಕಮ್ಮಿ ಅಬ್ಬೆ ಮಕ್ಕಳ ಪ್ರಾಯವೇ ಇದ್ದೋ ಏನೋ!
ಅದಿರಳಿ.

~

ಆ ಮನೆಯ ಅಜ್ಜಂಗೆ ತಕ್ಕಮಟ್ಟಿಂಗೆ ತೋಟವೂ, ಹದಾಕೆ ಪೌರೋಹಿತ್ಯವೂ ಇದ್ದತ್ತು.  ಅಂಬಗಾಣ ಕಾಲಕ್ಕೆ ಅನುಕೂಲಸ್ಥರೇ!
ಪೌರೋಹಿತ್ಯ ಇದ್ದ ಲೆಕ್ಕಲ್ಲಿ ಊರಿಡೀ ಒಂದು ಗೌರವದ ಸ್ಥಾನವೂ ಇರ್ತನ್ನೇ; ಆ ಗೌರವಲ್ಲೇ ಊರ ಹೆರಿಯೋರ ಸಂಪರ್ಕವೂ ಇದ್ದತ್ತು. ಹತ್ತಾರು ಹೆರಿಯೋರು ಅವರ ಮನೆಗೆ ಬಕ್ಕು.
ಬಂದ ಎಲ್ಲೋರಿಂಗೂ ಊಟ-ಕಾಪಿ-ತಿಂಡಿ ಮಾಡಿ ಉಪಚರಿಸುಗು. ಹಳೆ ಕಾಲಲ್ಲೇ ರೇಡ್ಯ ಇದ್ದಿದ್ದ ಕಾರಣ ವಾರ್ತೆ ಕೇಳುಲೆ ಅಂತೂ ಹೊತ್ತೋಪಗ ನೆರೆಕರೆಯ ಎಲ್ಲೋರುದೇ ಬಂದು ಸೇರುಗು.
ಅದರಲ್ಲಿಯೂ ಅಜ್ಜಂಗೆ ಸಂಗೀತಲ್ಲಿ ವಿಶೇಷ ಆಸಕ್ತಿ ಇದ್ದ ಕಾರಣ ಸಂಗೀತ ರೇಡ್ಯಲ್ಲಿ ಬಪ್ಪಗ ಕಣ್ಣು ಮುಚ್ಚಿ ಕೂದು ಕೇಳುಗು. ಅಂಬಗ ಮನೆಲಿ ಆರೂ ಉಸುಲು ತೆಗವಲೆ ಎಡಿಯ! ಸೊರ ಕೇಳಿಯೇ  ದೊಡ್ಡ ದೊಡ್ಡ ಸಂಗೀತದೋರ ಅರಡಿಗು!
ದೊಡ್ಡ ಪಂಡಿತರು, ವಿದ್ವನ್ಮಣಿಗೊ, ದೊಡ್ಡ ದೊಡ್ಡ ಸಂಗೀತ ವಿದ್ವಾಂಸರು, ಹಳೆಕಾಲದ ಕನ್ನಡ ಹೋರಾಟಗಾರರು – ಇವೆಲ್ಲರೂ ಅವರ ಮನೆಗೆ ಬಂದು ಹೋದೋರೇ.

ಹಾಂಗೆ, ಒಂದು ಕಾಲಲ್ಲಿ ದೊಡ್ಡಮಗಳಿಂಗೆ ಪ್ರಾಯಕೂಡಿ ಬಪ್ಪಗ ಮದುವೆ ಚಿಂತನೆಗೆ ಹೆರಟವು. ಮದಲಿಂಗೆ ಜೆನಸಂಪರ್ಕ ದೂರದೂರ ಅಲ್ಲದೋ?
ದಳ್ಳಾಳಿಗೊಕ್ಕೆ ಹೇಳಿಯೇ ಆಯೇಕಟ್ಟೆ ಇದಾ, ಹಾಂಗೆ ಶೇಡಿಮೂಲೆ ದಳ್ಳಾಳಿಯ ಮೂಲಕ ಒಂದು ಸಂಬಂಧವೂ ಬಂದು.
ಓ ಅತ್ಲಾಗಿ ತೆಂಕ್ಲಾಗಿ ಸಂಗೀತ ಕಲಿಶುತ್ತ ಮಾಷ್ಟ್ರ° ಒಬ್ಬನ ಸಂಬಂಧ ಸೇರಿತ್ತು. ಆ ಕಾಲಲ್ಲಿ ಮತ್ತೆ ಕೂಸು ಒಪ್ಪಿ ಆಯೇಕು ಹೇದು ಏನಿಲ್ಲೆನ್ನೆ, ಅಜ್ಜಂಗೆ ಕುಶಿ ಆತು, ಮಾಣಿಗೆ ಇಷ್ಟ ಆತು – ಮದುವೆಯೂ ಆಗಿ ಕಳಾತು.

ಮನೆ ಮಗಳಿಂಗೆ ಒಳ್ಳೆ ಮನೆ ಸಿಕ್ಕುದು ಹೇಂಗೆ ಒಂದು ಭಾಗ್ಯವೊ ಮನೆಗೆ ಒಬ್ಬ° ಅಳಿಯ  ಅದರಲ್ಲಿಯೂ ದೊಡ್ಡಳಿಯ° ಸಿಕ್ಕುದೂ ಒಂದು ಭಾಗ್ಯವೇ!
ಅಜ್ಜನ ಮನಸ್ಸಿಂಗೆ ಹಿಡುದು ಬಂದ ಅಳಿಯ° ಮನೆಗೆ ಬಂದಪ್ಪಗ ಅಜ್ಜನ ಕೊಶಿಯೇ ಬೇರೆ!
ದೊಡ್ಡಳಿಯ° ಇದಾ, ಬೇಕುಬೇಕಾದ ಹಾಂಗೆ ಸಂಮಾನಂಗೊ.
ಸ್ವತಃ ಪುರೋಹಿತರಾದ ಆ ಅಜ್ಜ°, ಅವರ ಮನೆಲಿ ಪೂಜೆ ಅಪ್ಪಗ ಈ ಅಳಿಯಂಗೆ ವಿಶೇಷ ವೇದಿಕೆ ಕೊಡುಗು, ಸಂಗೀತ ಹಾಡ್ಳೆ. ತ್ರಿಕಾಲ ಪೂಜೆಯೋ ಮಣ್ಣ ಇದ್ದರೆ ಅಷ್ಟಾವಧಾನಕ್ಕೆ ಈ ಅಳಿಯನದ್ದೇ ಸಂಗೀತ.
ಒಂದೊಂದು ಸರ್ತಿ, ಆ ಅಳಿಯ° ಬಂದರೆ ಒಳುದ ಮಕ್ಕಳನ್ನೇ ಮರಗು ಆ ಅಜ್ಜಂಗೆ!!
ಇರುಳು ಉಂಡಿಕ್ಕಿ ಪಂಚಾತಿಗೆಗೆ ಕೂದರೆ, ಉದಿಯಾ ಒರೆಂಗೆ ಪಂಚಾತಿಗೆ. ಅದರೊಟ್ಟಿಂಗೆ, ಒಂದೊಂದರಿ ಅಜ್ಜನ ಇತರೇ ದೋಸ್ತುಗೊ – ಯಕ್ಷಗಾನ ಆಟದವು, ಭರತನಾಟ್ಯ ನೃತ್ಯಗಾರರು, ಊರ ಸಂಗೀತಗಾರರು – ಹೀಂಗಿಪ್ಪ ಕಲಾವಿದರು ಇಕ್ಕು.
ಒಂದೇ ನಮುನೆ ಮನಸ್ಸಿನೋರು ಆದ ಕಾರಣ ಒಂದೇ ಹಾಂಗಿರ್ಸ ಶುದ್ದಿಗೊ ಮಾತಾಡ್ಲೆ ಬೇಕಾದಷ್ಟು ಸಿಕ್ಕುತ್ತಿದಾ. ಸಾಹಿತ್ಯ-ಸಂಗೀತಲ್ಲಿ ಮುಳುಗಿಯೇ ಹೋಕು.

ಅಂತೂ, ಆ ಅಜ್ಜಂಗೂ-ಅವರ ಚೆಂಙಾಯಿಗೊಕ್ಕೂ – ಈ ದೊಡ್ಡಳಿಯಂಗೂ – ಒಳ್ಳೆ ಚೇರ್ಚೆ.

ಅಳಿಯಂಗೆ ಈ ಊರಿಲಿ ಕಛೇರಿ ಕೊಡುಸುಲೆ ವ್ಯವಸ್ಥೆ ಮಾಡುದು ಈ ಅಜ್ಜನ ಚೆಂಙಾಯಿಗೊ ಆದರೆ, ಈ ಊರಿನ ಕಲಾವಿದರಿಂಗೆ ಅತ್ಲಾಗಿ ಒಂದು ವೇದಿಕೆ ಕೊಡುಸುದು ಆ ಅಳಿಯನ ಕೃತಜ್ಞತೆ.
ಹೀಂಗೇ ನೆಡಕ್ಕೊಂಡು ಇತ್ತು ಆ ಕಾಲ.

ಆ ಅಳಿಯ° ಮನೆಗೆ ಅಳಿಯ° ಅಪ್ಪದರಿಂದಲೂ, ಆ ಅಜ್ಜಂಗೆ ಮಾಂತ್ರ ಅಳಿಯ° ಆಗಿ ಹೋದವು.
ಅಜ್ಜನ ಚೆಂಙಾಯಿಗೊಕ್ಕೂ, ಅಜ್ಜಂಗೂ, ಆ ಅಳಿಯಂಗೂ ಮಾಂತ್ರ ಆದ ಆತ್ಮೀಯತೆ ಬೆಳದತ್ತು. ಹಾಂಗಾಗಿ, ಮನೆಯ ಒಳುದೋರ ಹತ್ತರೆ ಸೇರಿ ಬೆಳವಷ್ಟು ಆತ್ಮೀಯತೆ ಅವರ ಹತ್ತರೆ ಅವಕಾಶ ಆತಿಲ್ಲೆ.

~

ಮುಂದೆ ಕಾಲ ಬೆಳದ ಹಾಂಗೆ, ಮತ್ತಾಣ ಕೂಸುಗೊಕ್ಕೂ ಮದುವೆ ಆತು.
ಆದರೂ – ಮತ್ತಾಣ ಅಳಿಯಂದ್ರು ಈ ಅಳಿಯನಷ್ಟು ಹತ್ತರೆ ಅಪ್ಪಲೆ ಅವಕಾಶವೇ ಆಯಿದಿಲ್ಲೆ. ಅಜ್ಜಂಗೆ, ಅಜ್ಜನ ಚಿಂತನಾಲಹರಿಗೆ, ಅಜ್ಜನ ಜೀವನ ಪದ್ಧತಿಗೆ, ಏನಿದ್ದರೂ ಆ ದೊಡ್ಡಳಿಯನನ್ನೇ ಕೊಶಿ ಆದ್ಸು.
ಬಟ್ಟಮಾವ° ಮಂತ್ರ ಹೇಳುದು ಬೇರೆ ಅಲ್ಲ, ಸಂಗೀತಗಾರ ಸಂಗೀತ ಹೇಳುದು ಬೇರೆ ಅಲ್ಲ – ಹೇದು ಅಂಬಗಂಬಗ ಹೇಳಿಗೊಂಡಿತ್ತಿದ್ದವು ಆ ಅಜ್ಜ°, ಅಳಿಯನ ಗ್ರೇಶಿಗೊಂಡು.

~

ಮುಂದೆ, ಕಾಲ ಬದಲಿತ್ತು.
ಎಂತಾತು?
ಬಪ್ಪ ವಾರ ನೋಡುವೊ°.

ಒಂದೊಪ್ಪ:  ಅಳಿಯ° ಮಾವಂಗೆ ಮಾಂತ್ರ ಅಲ್ಲ, ಇಡೀ ಮನೆಗೇ! ಅಲ್ಲದೋ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ದೊಡ್ಡಭಾವ

  ಈ ಒಪ್ಪಣ್ಣನದ್ದು ಒಳ್ಳೆ ಕಥೆ ಆತನ್ನೆ ಈಗ…
  ವಾರದ ಶುದ್ದಿಗೊ ಧಾರಾವಾಹಿ ಆವ್ತಾ ಇದ್ದು,
  ಕುತೂಹಲ ಘಟ್ಟಲ್ಲಿ ನಿಲ್ಲುಸಿ ಬಿಟ್ಟಿದ°…
  ಶ್ಯಾಮಣ್ಣನ ಪೆನ್ಸಿಲಿನ ಹಾಂಗೆ :-)
  ಕಾಯ್ತೆ ಒಪ್ಪಣ್ಣಾ, ಬಪ್ಪ ವಾರಕ್ಕೆ!!!

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಬಪ್ಪವಾರಕ್ಕೆ ಎಂತದೋ ಇದ್ದು ಅಂತೂ ಹ್ಮ್ಮ್ಮ್

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಒಪ್ಪಣ್ಣಾ, ಈ ಶುದ್ದಿಯ ಹತ್ತು ಕಂತುಗೊ ಆಗಿ ಮಾಡ್ಳಕ್ಕು, ಹೇಂಗೂ ಅಜ್ಜಂಗೆ ಹತ್ತು ಕೂಸುಗೊ ಇದ್ದವಾನೆ. ಒಬ್ಬೊಬ್ಬ ಅಳಿಯನ ಕತೆ ಒಂದೊಂದು ಕಂತಿಲ್ಲಿ ಬರಳಿ. ಶುದ್ದಿ ಲಾಯಕಿದ್ದು.

  ಬೆಟ್ಟು ಕಜೆ ಮಾಣಿಯ ಮದುವೆ ಹೋಳಿಗೆ ಫ್ರಿಜ್ಜಿಲ್ಲಿ ಮಡಗಿದ್ದೋ, ಕವಾಟಿಲ್ಲಿ ಹಾಂಗೆ ಮಡಗಿದ್ದೊ ? ದಿನ ಸುಮಾರು ಆತದ.

  [Reply]

  VA:F [1.9.22_1171]
  Rating: 0 (from 0 votes)
 4. ವಿಜಯತ್ತೆ
  ವಿಜಯತ್ತೆ

  ಹರೇರಾಮ, ಒಪ್ಪಣ್ಣ ಶುದ್ದಿ ಹೇಳುತ್ತ ರೀತಿ ವಾರದ ಕತೆಂದ ದಾರಾವಾಹಿ ರೀತಿಗೆ ಹೋದ್ದು ಒಳ್ಲೆ ಬೆಳವಣಿಗೆ ಏವತ್ತೂ ಒಂದೇ ನಮೂನೆ ಇದ್ದರೆ ಓದುತ್ತವಕ್ಕೂ ಕೊಶಿ ಆಗಯಿದ! ಆ ಟ್ರಿಕ್ಕು ಒಪ್ಪಣ್ಣಂಗೆ ಗೊಂತಿದ್ದು, ಏವ ತ್ತೂ ನಿಂತನೀರಪ್ಪಲಾಗ .ಸರಿಯೇ. ಶುದ್ದಿ ಅಂತೂ ಮನೆ-ಮನೆ ಸಮಾಚಾರ! ಕೊರತ್ತಗೊ, ತಿದ್ದಿಯೊಳೆಕ್ಕಾದ ವಿಷಯಂಗೊ ಇದ್ದೇ ಇದ್ದನ್ನೆ!.

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಒಪ್ಪಣ್ಣನ ಕತೆ ಲಾಯ್ಕ ಆಯಿದು.ಹೊಸ ಅಳಿಯಂದಿರು ಬಂದಪ್ಪಾಗ ಬದಲಾತು–ಅಳಿಯಂದಿರು ದಶಮ ಗ್ರಹಂಗೊ -ಹತ್ತು ಜೆನ ಇದ್ದವೋ ಈ ಕತೆಲಿ? ನೋಡುವೊ..

  [Reply]

  VA:F [1.9.22_1171]
  Rating: 0 (from 0 votes)
 6. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಎನಗೆ ಸುಮಾರು ದೊಡ್ಡಳಿಯಂದ್ರ ಗೊಂತಿದ್ದು.ಈ ಅಳಿಯನ ಕತೆ ಹೇಂಗೆ ಹೇದು ಕಾದು ನೋಡೆಕ್ಕಟ್ಟೆ.

  [Reply]

  VN:F [1.9.22_1171]
  Rating: 0 (from 0 votes)
 7. ಯಮ್.ಕೆ

  ಒಳಿದವಕ್ಕೆ ಆಟಿಸಮ್ಮಾನ ಆದರೂ ಇತ್ತೋ ಇಲ್ಲೆಯೋ?. ಸತ್ಯಣ್ಣ೦ಗೆ ನೆ೦ಪಿಪಲೂ ಸಾಕು.?

  [Reply]

  VA:F [1.9.22_1171]
  Rating: 0 (from 0 votes)
 8. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಅಳಿಯನ ಕತೆ ಚೆಂದ ಆಯಿದು ಒಪ್ಪಣ್ಣ .ಇವ ಇಡಿ ಮನೆಗೆ ಅಳಿಯ ಆದರೆ , ಇಡಿ ಊರಿಂಗೇ ಅಳಿಯ ಅದವುದೆ ಇದ್ದವಡ .

  [Reply]

  VN:F [1.9.22_1171]
  Rating: 0 (from 0 votes)
 9. ಮಾಲಕ್ಕ°

  ಒಪ್ಪಣ್ನನ ಧಾರಾವಾಹಿ ಕುತೂಹಲ ಮೂಡುಸಿತ್ತು. ಇರಳಿ, ಶುಕ್ರವಾರದ ವರೆಗೆ ಕಾವ, ಮತ್ತೆಂತ ಮಾಡುದು!

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣvreddhiಹಳೆಮನೆ ಅಣ್ಣರಾಜಣ್ಣತೆಕ್ಕುಂಜ ಕುಮಾರ ಮಾವ°ವೇಣಿಯಕ್ಕ°ಎರುಂಬು ಅಪ್ಪಚ್ಚಿಜಯಗೌರಿ ಅಕ್ಕ°ಅನುಶ್ರೀ ಬಂಡಾಡಿಬಂಡಾಡಿ ಅಜ್ಜಿಚೆನ್ನೈ ಬಾವ°ದೊಡ್ಮನೆ ಭಾವದೊಡ್ಡಭಾವಮಂಗ್ಳೂರ ಮಾಣಿಬೊಳುಂಬು ಮಾವ°ಅನಿತಾ ನರೇಶ್, ಮಂಚಿದೊಡ್ಡಮಾವ°ಮಾಲಕ್ಕ°ಪಟಿಕಲ್ಲಪ್ಪಚ್ಚಿಡಾಮಹೇಶಣ್ಣವಸಂತರಾಜ್ ಹಳೆಮನೆಪೆಂಗಣ್ಣ°ಅಕ್ಷರದಣ್ಣನೀರ್ಕಜೆ ಮಹೇಶಪುತ್ತೂರುಬಾವಪವನಜಮಾವಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ