ಅಮಲಿಲಿ ಹೋದ ಮಾನ ಸಲ್ಮಾನ ಆದರೂ ಬಾರ

May 8, 2015 ರ 12:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ರಂಗಮಾವಂಗೆ ಸಿನೆಮದವರ ಕಂಡ್ರೇ ಆಗ. ಅವರಾ ಕರಿಕನ್ನಡ್ಕವೋ, ಕೆಂಪು ಪೇಂಟೋ, ಕ್ರೋಪು ತಲೆಕಸವೋ – ಎಲ್ಲ ಕಂಡ್ರೆ ರಂಗಮಾವಂಗೆ ಪಿಸುರೇ ಬಕ್ಕು. ಅವಕ್ಕೇನಿದ್ದರೂ ಯಕ್ಷಗಾನದ ಕಲಾವಿದರ ಹಾಂಗೆ ಸನಾತನಿಗೊ ಆಗಿದ್ದರೆ ಮಾಂತ್ರ ಮೆಚ್ಚುಗಷ್ಟೇ! ಅತಿರೇಕಂಗೊ ಎಲ್ಲ ದಿಕ್ಕೆಯೂ ಇರ್ತವು; ಯಕ್ಷಗಾನ ಕಲಾವಿದರಾಗಿಯೂ ಸಂಸ್ಕಾರ ಕಮ್ಮಿ ಇಪ್ಪವು ಇರ್ತವು; ಸಿನೆಮದೋರು ಆಗಿಂಡೂ ಸಂಸ್ಕಾರ ಅರಡಿಗಾದೋರು ಇರ್ತವು. ಅದಿರಳಿ.
ಆಧುನಿಕರಾಗಿಪ್ಪೋರು ಸಿನೆಮ ಮೆಚ್ಚುತ್ತವು; ಸಿನೆಮಲ್ಲಿ ನಟನೆ ಮಾಡ್ತ ಹೆಚ್ಚಿನೋರುದೇ ಆಧುನಿಕತೆಲಿ ತೇಲ್ತವು – ಹೇಳುಸ್ಸು ಸತ್ಯ.
ಆಧುನಿಜ ಜೀವನಶೈಲಿ ಹೇದರೆಂತ್ಸು? ಶಂಬಜ್ಜನ ಕಾಲದ ಶುದ್ಧಸನಾತನ ಜೀವನಕ್ರಮಂಗಳ ಎಲ್ಲ ಬಿಟ್ಟು – ಪಾಶ್ಚಾತ್ಯಾನುಕರಣೆಯ ಮಾಡ್ಳೆ ಹೆರಟು ಪೂರ್ಣ ಪಾಶ್ಚಾತ್ಯವೂ ಆಗದ್ದೆ, ಪೂರ್ಣ ನಮ್ಮದಾಗಿಯೂ ಒಳಿಯದ್ದೆ ಇದ್ದ ಪೈಶಾಚಿಕ ಜೀವನವೇ ಈಗಾಣೋರಿಂಗೆ ಹೆಚ್ಚು ಇಷ್ಟ. ಎಲ್ಲೋರಿಂಗೂ ಅಲ್ಲ – ಹ್ಞಾಂ!

ಪಿಶಾಚಿಗೊ ನಿಶಾಚರಿಗೊ ಅಡ, ಅಲ್ದೋ? ಹಗಲಿಡೀ ಜಡಲ್ಲಿದುಗೊಂಡು, ಇರುಳಾಣ ಹೊತ್ತು ಸಕ್ರಿಯ. ನೆಡು ಇರುಳು ಗೌಜಿ, ಉದೆಕ್ಕಾಲಕ್ಕೆ ಊಟ, ಮತ್ತೆ ಹಗಲು ಒರಕ್ಕು.
ಈ ಪಾಶ್ಚಾತ್ಯವನ್ನೂ ಬಿಟ್ಟು ಪೈಶಾಚಿಕ ಆದೋರದ್ದೂ ಇದೇ ಕತೆ.
ಹಗಲು ಹೇಂಗಿರ್ತವೋ ಇರಳಿ, ಇರುಳು ಮಾಂತ್ರ ಗೌಜಿಲಿರ್ತವು. ನೆಡಿರುಳು ಕುಡಿವಲೆ ಸುರುಮಾಡ್ತವು; ಮತ್ತೆ ಉದೆಕ್ಕಾಲ ಒರೆಂಗೂ ಕುಡುದು ತಿಂದು ಮಾಡಿ ಬೆಳ್ಳಿ ಮೂಡುವ ಹೊತ್ತಿಂಗೆ ಮನೆಗೆ ಬತ್ತವು. ಹಶು ಆಗದ್ದರೂ ತಿಂದು, ಆಸರಾಗದ್ದರೂ ಕುಡುದು, ಒರಕ್ಕು ಬತ್ತರೂ ಒರಗದ್ದೆ – ದೇಹದಂಡನೆ ಮಾಡ್ತ ವಿಚಿತ್ರ ಅಮಲು ಈ ಪೈಶಾಚಿಕ ಮನೋವೃತ್ತಿಯೋರಿಂಗೆ ಇರ್ಸು.
~

ಓ ಅಂದೊಂದರಿ – ಹನ್ನೆರಡೊರಿಶ ಮದಲು – ಬೊಂಬಾಯಿಲಿ ಒಂದು ಘಟನೆ ನೆಡದ್ದಾಡ. ಅದೆಂತರ?

ನಮ್ಮಲ್ಲಿ ಮಾರ್ಗಂಗಳೇ ಬಹು ಸಣ್ಣ, ಅದರ್ಲಿಯೂ ಬೊಂಬಾಯಿ ಹಾಂಗಿರ್ತ ಪೇಟೆಲಿ ಇನ್ನೂ ಸಣ್ಣ ಇಕ್ಕು. ಅದರಿಂದಲೂ ಸಣ್ಣ ಆ ಮಾರ್ಗದ ಕರೆಲಿರ್ತ ಕಟ್ಟಪುಣಿಗೊ.
ಆ ಕಟ್ಟಪುಣಿಲಿೂ ಮನುಗಿ ಇರುಳುದಿ ಮಾಡಿ ಒರಗುತ್ತ ಪಾಪದೋರಿಂಗೆ ಭಾರತಲ್ಲಿ ಬರ ಇಲ್ಲೆ. ಮನೆ ಮಠ ಇಲ್ಲದ್ದೋರು, ಬೇಡ್ತೋರು, ದೀನ ದುರ್ಬಲಂಗೊ – ಎಲ್ಲೋರಿಂಗೂ ಆ ಮಾರ್ಗದ ಕರೆ ಕಟ್ಟಪುಣಿಯೇ ಆಸರೆ. ಅಲ್ಲೇ ಮನುಗುದು, ಇರುಳುದಿಮಾಡುದು.

ಮನುಷ್ಯಂಗೆ ಕುಡುದ ಮತ್ತೆ ಎಷ್ಟು ಬೋದ ಇರ್ತು – ಗೊಂತಿದ್ದನ್ನೇ!
ಜನ್ಮಸಿದ್ಧ ಹಕ್ಕು ಪಡಕ್ಕೊಂಡ ಸಂಕು-ಜಿನ್ನಪ್ಪುಗೊ ನಮ್ಮ ಬೈಲಿಲೇ ಇದ್ದವು, ಅವರ ಕಂಡ್ರೇ ಗೊಂತಾವುತ್ತು. ಎರಡು ತೊಟ್ಟೆ ಏರಿದ ಮತ್ತೆ ಒಂದಕ್ಕೂ ಬೋಧ ಇಲ್ಲೆ, ಸ್ವಯ ಇಲ್ಲೆ. ಅವಕ್ಕೇ ಅವು ಎಂತ ಮಾಡ್ತಾ ಇರ್ತವು ಹೇದು ಗೊಂತಿರ್ತಿಲ್ಲೆ. ಒಂದೊಂದರಿ ಮಾಲಿಗೊಂಡು ಹೋವುತ್ತವು, ಒಂದೊಂದರಿ ಏನಕ್ಕೇನಾರು ಮಾತಾಡಿಗೊಂಡು ಹೋವುತ್ತವು, ಒಂದೊಂದರಿ ನೆಡವಲೆಡಿಯದ್ದೆ ಬಿದ್ದುಗೊಳ್ತವು ಹೆಬ್ಬಾವಿನ ಹಾಂಗೆ.
ಇರಳಿ.
ಒಂದು ದಿನ ಸಿನೆಮನಟ ಸಲ್ಮಾನು ಹೇಳ್ತ ಮಾಪಳೆ ಯೇವದೋ ಬಾರಿಂಗೆ ಹೋಗಿ – ಇರುಳಿಡೀ ಕುಡುದು ಮನಗೆ ಹೆರಟತ್ತಡ. ಹೆರಟು ಮರಿಯಾದಿಗೆ ಹೋಗಿದ್ದರೆ ಆರುದೇ ಎಂತೂ ಹೇಳ್ತಿತವಿಲ್ಲೆ. ಆದರೆ, ’ತಾನೇ ಕಾರು ಬಿಡ್ತೇನೆ’ ಹೇದು ದೊಡ್ಡಧೈರ್ಯ ತೋರ್ಸಿತ್ತಾಡ. ಕಾರಿಲಿ ಕೂದು ಷ್ಟೇರಿಂಗೂ ತಿರುಗುಸಿತ್ತಾಡ. ಕೊಂಡೋತು, ಕೊಂಡೋತು – ಮಾರ್ಗದ ಉದ್ದಗಲ ಲೆಕ್ಕ ಹಾಕಿಂಡು ಹೋತು. ಒಂದು ಮಾರ್ಗಕ್ಕೆ ಎತ್ತುವಾಗ ಅಂತೂ – ಎರಡೆರಡು ಕಂಡತ್ತೋ ಏನೋ, ಕರೇಲಿದ್ದಿದ್ದ ಮಾರ್ಗಕ್ಕೆ ಕಾರು ಕೊಂಡೋತು.

ಅದು ಮಾರ್ಗ ಅಲ್ಲ, ಕಟ್ಟಪುಣಿ.

ಆಗಳೇ ಮಾತಾಡಿದ ಹಾಂಗೆ, ಕಟ್ಟಪುಣಿಲಿ ಹಲವು ಪಾಪದೋರು ಮನುಗಿತ್ತಿದ್ದವು ಪಾಪ. ಇದರ ಹಾಂಕಾರದ ಕಾರುಸವಾರಿ ಅವರ ಮೇಗೆಯೇ ಹೋತು. ದೇವರೇ!
ಅಲ್ಲಿ ಮನುಗಿ ’ನಾಳೆ ಉದಿಯಪ್ಪಗ ಹೊಸ ದಿನ ನೋಡುವೊ’ – ಹೇದು ಒರಗಿದ್ದೋರ ಮೇಗೆ ಎಲ್ಲಿಂದಲೋ ಬಂದ ಕಾರು ಬಜಕ್ಕನೆ ಅಪ್ಪಚ್ಚಿ ಮಾಡಿಗೊಂಡು ಹೋತು. ಎಂತ ಮಾಡುಸ್ಸು. ನಾಲ್ಕೈದು ಜೆನಕ್ಕೆ ಮೈಕೈ ಗಾಯ ಆತು. ಒಂದು ಜೆನ ಅಂತೂ – ಸತ್ತೇ ಹೋತು.
ಇಷ್ಟಾಗಿ ಅಲ್ಲೇ ನಿಂದು ವಿಷಯ ಎಂತಾತು ನೋಡಿದ್ದರೆ ಬೇಜಾರಿತ್ತಿಲ್ಲೆ. ಇದು ಕಾರಿನ ಇನ್ನೂ ಜೋರಿಲಿ ಮನೆಗೆ ಓಡುಸಿತ್ತಾಡ. ಬೇಗ ಮನಗೆತ್ತಿ ಗುಡಿಹೆಟ್ಟಿ ಒರಗಿತ್ತತ್ತೆ.
~

ಒರಕ್ಕಿನ ಅಮಲು ಬಿಡುಗು, ಕಳ್ಳಿನ ಅಮಲು ಬಿಡುಗು, ಕಾನೂನು ಬಿಡ್ತೋ? ಇಲ್ಲೆ.
ಇದು ಮನೆಗೆತ್ತಿ ರಜ್ಜ ಹೊತ್ತಾಯೇಕಾರೆ ಬಂದವು ಪೋಲೀಸಿನೋರು. ಅವರ ಹಿಂದಂದಲೇ ಒಕೀಲಂಗೊ. ಅವರ ಹಿಂದಂದಲೇ ಟೀವಿಯೋರು, ಪೇಪರಿನೋರು.
ಆ ದಿನಂದ ಇಂದಿನ ವರೆಗೂ ಭಾರತದ ಎಲ್ಲಾ ಪೇಪರಿಲಿ, ಟೀವಿಲಿ, ರೇಡ್ಯಲ್ಲಿ ಆ ವಿಷಯ ತಿರುಗಿದ್ದಕ್ಕೆ ಲೆಕ್ಕವೇ ಇಲ್ಲೆಪ್ಪೋ!
~
ಅಂದಿಂದ ಮಾಡಿದ ಜೆಪಕ್ಕೆ ಮೊನ್ನೆ ಪೂರ್ಣಾಹುತಿ ಆತೋ ಕಾಣ್ತು.  ನಿನ್ನೆ ಮೊನ್ನೇಣ ಪೇಪರುಗೊ ನೋಡೇಕು – ಎಲ್ಲಿ ನೋಡಿರೂ ಅದೇ ಶುದ್ದಿ – ಎಲ್ಲಾ ದಿಕ್ಕೆಯೂ ಅದೇ ಶುದ್ದಿ.
ಸಲ್ಮಾನಿನ ನಂಬ್ರಕ್ಕೆ ತೀರ್ಪು ಬಂತಾಡ, ಅದಕ್ಕೆ ಜೈಲು ಆತಾಡ – ಹೇಳ್ತದು ಎಲ್ಲೋರಿಂಗೂ ಗೊಂತಾದ ಶುದ್ದಿ.

ಅರೆವಾಶಿ ಜೆನಂಗೊ ಕುಶಿಲಿತ್ತವು; ಮತ್ತೆ ಅರೆವಾಶಿ ಬೇಜಾರಲ್ಲಿತ್ತವು – ಹೇದು ಇಂಟರ್ನೆಟ್ಟು ಅರಡಿತ್ತ ಪೆರ್ಲದಣ್ಣ ಹೇಳಿದ.
ಕೊಶಿ ಎಂತಕೆ ಹೇದರೆ,
– ನ್ಯಾಯದೇವತೆ ಎಲ್ಲೋರಿಂಗೂ ಒಂದೇ ನಮುನೆ. ನ್ಯಾಯ ಕೊಡ್ಳೆ ಹಿಂದೆಮುಂದೆ ನೋಡಿದ್ದಿಲ್ಲೆ, ತಪ್ಪು ಮಾಡಿದ ಅಪರಾಧಿಗೆ ಶಿಕ್ಷೆ ಆತು.
– ಮಾರ್ಗದ ಕರೆಲಿ ಮನುಗಿ ಇರುಳುದಿಮಾಡಿಗೊಂಡಿದ್ದ ಪಾಪದ ಮನುಷ್ಯನ ಜೀವಕ್ಕೆ ನ್ಯಾಯ ಸಿಕ್ಕಿತ್ತು.
– ಇನ್ನು ಆರುದೇ ಕುಡುದು ಬಿಡದ್ದ ಹಾಂಗೆ ಗೊಂತಿಂಗಾತು – ಹೇಳ್ತದು ಕೆಲವು ಜೆನರ ಅಭಿಪ್ರಾಯ.

ಬೇಜಾರೆಂತಗೆ?
– ಅಯ್ಯೋ, ಎಂಗಳ ಪ್ರೀತಿಯ ಸಲ್ಮಾನಿಂಗೆ ಹಾಂಗಾತಾನೇ’ದು – ಅದರ ಸಿನೆಮ ನೋಡ್ತ ಅಭಿಮಾನಿಗೊಕ್ಕೆ ಬೇಜಾರ.
– ಆ ದಿನ ಗಾಯ ಆದೋರ, ಸತ್ತ ಮನುಷ್ಯನ ಸಂಸಾರಕ್ಕೆ ತುಂಬ ಸಕಾಯ ಮಾಡಿದ್ದಾಡ.
– ಕುಡುದು ಕಾರು ಬಿಟ್ಟದು ತಪ್ಪಾದರೆ ಮಾರ್ಗದ ಕರೆಲಿ ಮನುಗಿದ್ದುದೇ ತಪ್ಪು – ಹೇಳ್ತ ವಿತಂಡ ವಾದದ ಇನ್ನೊಂದು ನಮುನೆ ಬೇಜಾರ.

ಇರಳಿ, ಎಂತದೇ ಆಗಲಿ – ಸಲ್ಮಾನು ತಪ್ಪು ಮಾಡಿದ್ಸು ಅಪ್ಪು. ಕುಡುದ್ದು ಅಪ್ಪು. ಕುಡುದು ಕಾರು ಓಡುಸಿದ್ದು ಅಪ್ಪು. ಆ ಪಾಪದ ಜೆನ ಸತ್ತದಪ್ಪು. ಹಾಂಗಾಗಿ ನ್ಯಾಯ ಒಂದೇ ನಮುನೆ ಹೇಳ್ತದರ ಭಾರತದ ನ್ಯಾಯದೇವತೆ ತೋರುಸಿಕೊಟ್ಟತ್ತು. ಕುಡುದ ಅಮಲಿಲಿ ಕಾರುಬಿಟ್ಟ ಸಲ್ಮಾನು ತನ್ನ ಮಾನ ಪೂರ ಕಳಕ್ಕೊಂಡದಂತೂ ಸತ್ಯನಿಜ.
ಅಲ್ಲದೋ?
~
ಒಂದೊಪ್ಪ: ಈಜಲೆ ಅರಡಿಯದ್ದರೆ ತಾನು ಮಾಂತ್ರ ಮುಳುಂಗುಗು; ವಾಹನ ಬಿಡ್ಳೆ ಅರಡಿಯದ್ದರೆ ಪಾಪದ ದಾರಿಲಿಪ್ಪೋರುದೇ ಮುಳುಂಗುಗು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಆ ಸಲ್ಮಾನ ಕಾಡು ತಿರುಗಲೆ ಕೆಲಾವು ಹಾಂಗಿರ್ತ ಹೆಣ್ನುಗಳೊಟ್ತಿಂಗೆ ಹೋಗಿ ಪಾಪದ ಜಿಂಕೆಗಳ ಕೊಂದು ಕಜಿಪ್ಪು ಮಾಡಿ ತಿಂದ ಕೇಸು ಬಾಕಿ ಇದ್ದಲ್ಲದಾ…ಅದನ್ನುದೇ ಇದರೊಟ್ತಿಂಗೇ ಸೇರುಸಿಕ್ಕಲಾವ್ತಿತೋ ಏನೋ…!

  [Reply]

  VN:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  S.K.Gopalakrishna Bhat

  ಸಲ್ಮಾನ್ ಖಾನ್ ಸಿನೆಮಾದ್ದು ಆದ ಕಾರಣ ,ಅದರ ಬೆಂಬಲಕ್ಕೆ ಇಷ್ಟು ಜನ ಇಪ್ಪದು. ಅದರ ಕಾರಿನ ಅಡಿಗೆ ಬಿದ್ದವರ ನೋಡದ್ದೆ ಓಡಿದ್ದು ಅದು ಮಾಡಿದ ತಪ್ಪು. ಅದು ಸ್ವತಃ ಚಾಲನೆ ಮಾಡಿರಲಿ, ಅದರ ಚಾಲಕ ಮಾಡಿರಲಿ, ಜವಾಬ್ದಾರಿ ಸಲ್ಮಾನ್ ದೇ. ಮಾನವೀಯತೆ ಮರೆತ ಅದಕ್ಕೆ ಸಾಂತ್ವನ ಹೇಳಲೇ ಬೇಕಾದ ಅನಿವಾರ್ಯತೆ ಬಾಕಿದ್ದವಕ್ಕೆ ಎಂತಗೆ ಬಂತೋ ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಹಳೆಮನೆ ಅಣ್ಣಜಯಗೌರಿ ಅಕ್ಕ°ವಸಂತರಾಜ್ ಹಳೆಮನೆಚೆನ್ನಬೆಟ್ಟಣ್ಣvreddhiಎರುಂಬು ಅಪ್ಪಚ್ಚಿಸುಭಗಡೈಮಂಡು ಭಾವವಾಣಿ ಚಿಕ್ಕಮ್ಮಕೇಜಿಮಾವ°ಚುಬ್ಬಣ್ಣಒಪ್ಪಕ್ಕವಿಜಯತ್ತೆವಿನಯ ಶಂಕರ, ಚೆಕ್ಕೆಮನೆಪುಟ್ಟಬಾವ°ನೆಗೆಗಾರ°ಪವನಜಮಾವಶಾ...ರೀಮಾಲಕ್ಕ°ಮುಳಿಯ ಭಾವಸಂಪಾದಕ°ಬಟ್ಟಮಾವ°ನೀರ್ಕಜೆ ಮಹೇಶಕಜೆವಸಂತ°ಚೆನ್ನೈ ಬಾವ°ಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ