ಅಮೇರಿಕಲ್ಲಿ ತುರ್ಪಿನ ಹಾಂಗೆ ಬಂದ ಟ್ರಂಪು ಕಾರ್ಡು…

ಓ ಮನ್ನೆ ದೊಡ್ಡಬಾವನ ನೆರೆಕರೆಲಿ ಒಂದು ಜೆಂಬ್ರ ಕಳಾತು. ಸಣ್ಣಕೆ ಶಿವಪೂಜೆ.
ಅಕ್ಕಿಪಾಚ, ಒಡೆ ಉಂಬಲೆ ನಾವುದೇ ಹೋಗಿದ್ದತ್ತು.
ಅಲ್ಲಿಗೆ ಬಂದ ನೆಂಟ್ರು-ನೆರೆಕರೆಯೋರ ಪೈಕಿ ಅಮೇರಿಕಂದ ಬಂದ ಮಾಣಿಯೂ ಒಬ್ಬ° ಇತ್ತಿದ್ದ° ಹೇದು, ಅಪುರೂಪಕ್ಕೆ ಬಂದ ಕಾರಣ ಎಲ್ಲೋರುದೇ ಮಾತಾಡ್ಸುವ ಗೌಜಿ.
ಯೇವಾಗ ಬಂದ್ಸು, ಎಷ್ಟುದ್ದ ವಿಮಾನ, ಎಷ್ಟು ಗಂಟೆ ವಿಮಾನ, ಯೇವಾಗ ಒಪಾಸು ಹೋವುಸ್ಸು – ಈ ನಮುನೆ ಹತ್ತು ಹಲವು ಪ್ರಷ್ನೆಗೊ.
ಇದರೆಡಕ್ಕಿಲಿ, ನಮ್ಮ ಶಾಂಬಾವನ ಒಂದು ಪ್ರಶ್ನೆ – ಟ್ರಂಪು ಬಂದ್ಸರ್ಲಿ ನವಗೆ ಕಷ್ಟ ಅಕ್ಕೋ’ದು.
ಒಪ್ಪಣ್ಣಂಗೆ ಇಸ್ಪೇಟು ಆಡುವಗ ಟ್ರಂಪು ಅರಡಿಗು. ನಮ್ಮ ಅಜ್ಜಂದ್ರು ಅದರ ತುರ್ಪು ಹೇಳುಸ್ಸು. ಟ್ರಂಪು ಇಳುಶಿರೆ ಮತ್ತೆ ಆಟದ ದಿಕ್ಕೇ ಬದಲ್ತು – ಹೇಳ್ತ ಸತ್ಯವೂ ಅರಡಿಗು.
ಆದರೆ ಶಾಂಬಾವ° ಹೇದ್ಸು ಎಂತರಾದು ಅರ್ತ ಅಪ್ಪಲೆ ರಜ ಹೊತ್ತು ಬೇಕಾತು. ಶಾಂಬಾವ° ನಿಧಾನಕ್ಕೆ ವಿವರ್ಸಿದ ಮತ್ತೆಯೇ ಒಪ್ಪಣ್ಣಂಗೆ ಅದೆಲ್ಲ ಗೊಂತಾದ್ಸು.
~
ಶಾಂಬಾವ° ಕೇಳಿದ್ಸು ಅಮೇರಿಕದ ವೋಟಿನ ಗೌಜಿ ಬಗ್ಗೆ ಆಡ.
ನಮ್ಮ ದೇಶಲ್ಲಿ ಐದೊರಿಶಕ್ಕೊಂದರಿ ನೆಡೆತ್ತ ಹಾಂಗೆ, ಅಮೇರಿಕಲ್ಲಿ ನಾಕೊರಿಶಕ್ಕೊಂದರಿ ವೋಟು ನೆಡೆತ್ತು.
ನಮ್ಮಲ್ಲಿಗೂ ಅಲ್ಲಿಗೂ ರೆಜಾ ವಿತ್ಯಾಸ ಇದ್ದಾಡ.
ನಮ್ಮಲ್ಲಿ, ಜೆನಂಗೊ ಓಟು ಹಾಕಿ ಅವರ ಊರಿನ ಪ್ರತಿನಿಧಿಗಳ ಆಯ್ಕೆ ಮಾಡಿರೆ, ಅವರ ಸಂಖ್ಯಾಬಲ ಅನುಸಾರ ಪ್ರಧಾನಮಂತ್ರಿ ಗುರ್ತ ಆವುತ್ತು. ಈ ಆಯ್ಕೆ ಮಾಡಿದೋರ ಓಟಿಲಿ ರಾಷ್ಟ್ರಪತಿಯ ಆಯ್ಕೆ ಆವುತ್ತು.
ಎಲ್ಲಾ ಪ್ರಜೆಗಳೂ ನೇರವಾಗಿ ಓಟು ಹಾಕಿ, ಅವಕ್ಕೆ ಬೇಕಾದ ಅಧ್ಯಕ್ಷನ ನೇರವಾಗಿ ಚುನಾಯಿಸುವ ಕ್ರಮ ಅಲ್ಯಾಣದ್ದು.
ಇರಳಿ, ಅವರವರ ಊರಿಂಗೆ ಅವರವರ ಕ್ರಮ ಒಳ್ಳೆದು.
ಅಮೆರಿಕಲ್ಲಿ ನೂರಿನ್ನೂರು ಒರಿಶಂದ ಆ ಕ್ರಮ ನೆಡದು ಬತ್ತಾ ಇದ್ದು. ಆ ಪ್ರಕಾರ ಈ ಒರಿಶ ಈಗ ಇಪ್ಪ ಅಧ್ಯಕ್ಷನ ಅವಧಿ ಮುಗಿತ್ತಾಡ. ಅದೇ ನಮ್ಮ ಬರಕು ಒಬಾಮನ ಅವಧಿ. ಹಾಂಗೆ ನೋಡಿರೆ, ಇದು ಒಬಾಮನ ಎರಡ್ಣೇ ಅವಧಿ ಇದಾ.
ಸುರೂವಾಣ ಅವಧಿಯ ನಾಲ್ಕೊರಿಶ ಮಾಡಿಕ್ಕಿ, ಪುನಾ ನಾಲ್ಕೊರಿಶದ ಆಡಳ್ತೆ ನಾಡ್ದಿಂಗೆ ಮುಗಿತ್ತು.
ಅದಾದ ಮತ್ತೆ ಹೊಸ ಜೆನ ಆಯೇಕನ್ನೇ – ಹೇದು ಮೊನ್ನೆ ಹುಡ್ಕಿದ್ದು, ವೋಟು ಮಾಡಿಗೊಂಡು.
~
ಓಟಿನ ಗವುಜಿ ಸುರು ಅಪ್ಪಾಗಳೇ ಈ ಸರ್ತಿ ರಜಾ ವಿಚಿತ್ರ ಆವುತ್ತು – ಹೇದು ಜೆನಂಗೊಕ್ಕೆ ಕಂಡಿದಾಡ. ಒಬಾಮನ ಪಾರ್ಟಿಂದ ಒಂದು ಅಜ್ಜಿ ನಿಂದದು; ಎದುರಾಣ ಪಾರ್ಟಿಂದ ಒಂದು ಹೊಸ ಜೆನ ನಿಂದದು.
ಅಜ್ಜಿ ಹೇದರೆ, ಹೊಸಬ್ಬೆತ್ತಿ ಅಲ್ಲ. ಮೊದಲು ಅಧ್ಯಕ್ಷ° ಆಗಿ ಇದ್ದ ಜೆನರ ಎಜಮಾಂತಿ.
ಏನಿದ್ದರೂ, ಅಮೇರಿಕಾದ ಜೆನಂಗಳ ಮನಸ್ಥಿತಿಗೆ ಇದು ಹೊಸ ಅನುಭವವೇ. ಆದರೆ, ಅದರ ಎದುರಾಣ ಜೆನ ಹೇದರೆ, ಅದು ರಾಜಕಾರಣದ ಜೆನ ಅಲ್ಲ, ಒಯಿವಾಟಿನ ಬಿಸಿನೆಸ್ಸು ಜೆನ ಅಷ್ಟೆ.
ನಮ್ಮಲ್ಲಿ ಕೋಂಗ್ರೇಸು – ಬೀಜೇಪಿ ಇಪ್ಪ ಹಾಂಗೆ ಅಲ್ಲಿಯೂ ಎರಡು ಪಾರ್ಟಿ ಆಡ. ಡೆಮೋಕ್ರಾಟು, ರಿಪಬ್ಲಿಕನ್ – ಹೇದು.
ಸುರುವಿಂಗೆ ಈ ಒಯಿವಾಟುಗಾರ ಆಚದರ್ಲಿ ನಿಲ್ಲೇಕೋ ನೋಡಿತ್ತಾಡ. ಮತ್ತೆ, ಅದರ್ಲಿ ಸಮಗಟ್ಟು ಆಗದ್ದೆ ಈಚದರ್ಲಿ ನಿಂದತ್ತಾಡ.
ಪೈಶೆ ಇದ್ದರೆ ಯೇವ ಪಾರ್ಟಿಲಿಯೂ ನಿಂಬಲೆಡಿಗಪ್ಪೋ. 😉
ಹಾಂಗಾಗಿ, ಪಕ್ಷದ ತತ್ವ ಹಿಡುದು ನಿಂದ ಬಗೆ ಅಲ್ಲ – ಹೇದ ಶಾಂಬಾವ°.
ಅಷ್ಟಪ್ಪಗ ಕರ್ನಾಟಕಲ್ಲಿ ಜನಾರ್ದನ ರೆಡ್ಡಿಯ ನೆಂಪಾತು ಒಪ್ಪಣ್ಣಂಗೆ.
ಅದಿರಳಿ.
~
ಅಂತೂ ಇಂತೂ ಅದರ ನಾಯಕತ್ವಲ್ಲಿ ಚುನಾವಣಾ ಪ್ರಚಾರ ಸುರು ಆತು.
ಅದರ ಎದುರು ನಿಂದ ಅಜ್ಜಿ – ಎಲ್ಲವೂ ಸರಿ ಇಪ್ಪ ಹಾಂಗೆ ನೋಡಿಗೊಳ್ತೆ – ಹೇದು ಪ್ರಚಾರ ಮಾಡಿಗೊಂಡು ಬಂದರೆ, ಈ ಟ್ರಂಪು – ಅಲ್ಲಿ ಸರಿ ಇಲ್ಲೆ, ಇಲ್ಲಿ ಸರಿ ಇಲ್ಲೆ, ಇಡೀ ದೇಶಕ್ಕೆ ಬೇಲಿ ಹಾಕುತ್ತೆ, ಆಚದರ ಹೊಡಿ ತೆಗೆತ್ತೆ – ಇತ್ಯಾದಿ ಮಾತುಗಳ ಹೇಳಿಗೊಂಡು ಬಂತಾಡ.
ಎದುರಾಣ ಅಜ್ಜಿಯನ್ನೂ, ಅದರ ಗೆಂಡ ಕ್ಲಿಂಟನ್ನು ಅಜ್ಜನನ್ನೂ ವ್ಯಕ್ತಿಗತವಾಗಿ ಹೇಳುಲೆ ಸುರು ಮಾಡಿತ್ತಾಡ.
ಸುರು ಸುರುವಿಂಗೆ ಜೆನಂಗೊ ಮರುಳು ಕಟ್ಟಿ ಅದಕ್ಕೆ ಸಪೋರ್ಟು ಮಾಡಿರೂ, ಕ್ರಮೇಣ ಯೋಚನೆ ಮಾಡ್ಳೆ ಸುರು ಮಾಡಿದವು.
ಅವರ ಇಡೀ ದೇಶಲ್ಲಿ ಸಂಚಲನ ಮೂಡುಸಿದ ಈ ವೋಟಿಲಿ, ಕೊನೆಗೂ ಟ್ರಂಪು ಗೆದ್ದತ್ತಾಡ.
ಮೊನ್ನೆ ಮೊನ್ನೆ ಒರೆಂಗೆ ಬರೇ ಒಂದು ವೊಯಿವಾಟುಗಾರ ಆಗಿದ್ದ ಜೆನ, ಈಗ ನೋಡಿರೆ ಅಮೇರಿಕದ ಅಧ್ಯಕ್ಷ ಆಗಿ ನಿಂದಿದು!
ಮಾತಿಲೇ ಮನೆ ಕಟ್ಟಿ, ಯೇವ ಹಂತಕ್ಕೂ ಎತ್ತುಲೆಡಿಗು ಹೇಳ್ತದಕ್ಕೆ ಟ್ರಂಪು – ನೇರ ಉದಾಹರಣೆ – ಹೇದು ಶಾಂಬಾವನ ಅಭಿಪ್ರಾಯ.
~
ಭಾರತದವು ಎಂಗಳ ಜೆನಂಗಳ ಕೆಲಸವ ಎಲ್ಲ ಕದ್ದುಗೊಳ್ತವು – ಹೇದು ಅದು ಕೆಲವೂ ಸರ್ತಿ ಭಾಷಣಲ್ಲಿ ಹೇಳಿದ್ದಾಡ.
ಬೇರೆ ದೇಶದವು ನಮ್ಮಲ್ಲಿಗೆ ಬಪ್ಪದರ ತಡೆಯೆಕ್ಕು – ಹೇದು ಹಲವಾರು ಸರ್ತಿ ಅದು ಹೇಳಿದ್ದಾಡ.
ಆ ಕಾರಣಲ್ಲೇ ಆಗಿದ್ದತ್ತು, ಶಾಂಬಾವ° ಆ ಮಾಣಿಯ ಹತ್ರೆ ಕೇಳಿದ್ಸು – ನಮ್ಮ ದೇಶಕ್ಕೇನಾರು ಪೆಟ್ಟು ಬೀಳುಗೋ – ಹೇದು.
ಆ ಮಾಣಿ ’ಜಾಸ್ತಿ ಈ ವಿಶಯಲ್ಲಿ ಈಗಳೇ ಹೇಳುಲೆಡಿಯ, ರಜ ಸಮೆಯ ನೋಡುವೊ°. ಬಪ್ಪೊರಿಶ ಮೇ ತಿಂಬಳಿಲಿ ಬಪ್ಪಲಿದ್ದು. ಅಂಬಗ ಮಾತಾಡುವೊ°’ – ಹೇದು ಮಾತಾಡಿವೊಂಡವು.
~
ಒಂದೊಪ್ಪ: ದೇಶದ ಅಭಿವೃದ್ಧಿಲಿ ಹೆರದೇಶಂಗಳ ಸಂಬಂಧ ಬಹುಮುಖ್ಯ ಪಾತ್ರ ವಹಿಸುತ್ತು. ಮನೆಯ, ಮನುಷ್ಯನ ಅಭಿವೃದ್ಧಿಲಿಯೂ ಹಾಂಗೇ.

ಒಪ್ಪಣ್ಣ

   

You may also like...

3 Responses

  1. Harish kevala says:

    ದೇಶದ ಅಭಿವೃದ್ಧಿಲಿ ಹೆರದೇಶಂಗಳ ಸಂಬಂಧ ಬಹುಮುಖ್ಯ ಪಾತ್ರ ವಹಿಸುತ್ತು. ಮನೆಯ, ಮನುಷ್ಯನ ಅಭಿವೃದ್ಧಿಲಿಯೂ ಹಾಂಗೇ.
    —-ಫಸ್ಟ್ ಆಯ್ದು ಒಪ್ಪಣ್ಣ

  2. ದೇಶದ ಅಭಿವೃದ್ಧಿಲಿ ಹೆರದೇಶಂಗಳ ಸಂಬಂಧ ಮುಖ್ಯಅಪ್ಪು.ಮೋದಿ ಅಜ್ಜ ನೋಡಿ ಗೆದ್ದಪ್ಪದ್ದೆ ನೆರೆಕರೆ ದೇಶಂಗೊಕ್ಕೆ ಹೋಗಿ ಮೈತ್ರಿ ಮಾಡಿಗೊಂಡಿಪ್ಪದು!. ನಮ್ಮ ನೆರೆಕರೆಲಿಯೂ ಸಂಬಂಧ+.ಒಗ್ಗಟ್ಟು ಇದ್ದರೆ ಏವ ಹೆದರಿಕೆ,ಕಿರಿಕಿರಿ ಇಲ್ಲೆ.

  3. ಶರ್ಮಪ್ಪಚ್ಚಿ says:

    ನಾವು ಪರಾವಲಂಬಿಗೊ ಆಗದ್ದ ಹಾಂಗೆ, ಬದುಕು ಕಟ್ಟಿಗೊಂಬಲೆ ಸಂದರ್ಭ ಒದಗಿದ ಹಾಂಗೆ ಅಕ್ಕು. ನಮ್ಮಲ್ಲಿ ಆ ಸಾಮರ್ಥ್ಯ ಇದ್ದು. ಅವಕ್ಕೆ ನಮ್ಮ ಅಗತ್ಯ ಇಪ್ಪದೇ ಹೊರತು ನವಗೆ ಅವರ ಅಗತ್ಯ ಅಲ್ಲ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *