ಇಬ್ರೇ ಇಪ್ಪದಕ್ಕೆ ದನ ಸಾಂಕುದು. . .

ಪುತ್ತೂರಿಲಿ ಅಷ್ಟಾವಧಾನ ಆದ್ಸರ ಗೌಜಿ ಕೆಮಿಂದ ಇನ್ನೂ ಇಳುದ್ದಿಲ್ಲೆ.
ಪೃಚ್ಛಕರು ಪ್ರಶ್ನೆ ಕೇಳುದು, ಅವಧಾನಿಗೊ ಗೆಂಟು ಬಿಡುಸುದು, ಉಪಾಧ್ಯಾಯರು ಅಪ್ರಸ್ತುತ ಮಾತಾಡ್ಸುದು, ಜೆನಂಗೊ ನೆಗೆಮಾಡುದು – ಇದೆಲ್ಲ ಶಬ್ದಂಗಳೂ ಕೆಮಿಲೇ ಇದ್ದು. ಯೇವ ಗುಗ್ಗೆ ಸಟ್ಟುಗಿಲಿ ಒಕ್ಕಿರೂ ಹೋಗದ್ದ ನಮುನೆಲಿ ಗಟ್ಟಿಲಿದ್ದು. ಬೈಲಿನ ಭಾವಯ್ಯಂದ್ರು ಎಲ್ಲೋರುದೇ ಒಂದರಿ ಸಿಕ್ಕಿ ಮಾತಾಡಿ ಮನಸ್ಸುದೇ ತಂಪಿತ್ತು. ಎಲ್ಲ ಮುಗುದು ಹೆರಡುವಾಗ ತಡವಾದರೂ, ಚೂರಿಬೈಲು ಡಾಗುಟ್ರ ಕಾರಿಲಿ ಜಾಗೆ ಇದ್ದ ಕಾರಣ ಸಮಸ್ಯೆ ಆಯಿದಿಲ್ಲೆ. ಇರುಳಾಣ ಊಟಕ್ಕಪ್ಪಗ ಮನೆಗೆತ್ತಿತ್ತು.

ಅಷ್ಟಾವಧಾನಂದ ಚೂರಿಬೈಲು ಡಾಗುಟ್ರ ಒಟ್ಟಿಂಗೆ ಬಪ್ಪಾಗ ಕಾರ್ಯಕ್ರಮದ ಗೌಜಿಯ ಬಗ್ಗೆ, ಜೆನ ಜಂಗುಳಿಯ ಬಗ್ಗೆ, ಅವಧಾನದ ಬಗ್ಗೆ, ಅವಧಾನಿಗಳ ಬಗ್ಗೆ, ಊಟದ ಬಗ್ಗೆ, ಚಿತ್ರಾನ್ನದ ಬಗ್ಗೆ, ಎಲ್ಲವನ್ನೂ ಮಾತಾಡಿಗೊಂಡು ಬಂದದು. ಅದೂ ಅಲ್ಲದ್ದೆ ಇನ್ನೊಂದು ವಿಷಯವನ್ನೂ ಮಾತಾಡಿದವು. ಅದು ಕೊಣಾಜೆ ದೊಡ್ಡಪ್ಪನ ಬಗ್ಗೆ. ಅದೆಂತರ?

~

ಕೊಣಾಜೆ ದೊಡ್ಡಪ್ಪ ಹೇದರೆ ಗುಣಾಜೆ ಕುಂಞಿಗೆ ಮಾಂತ್ರ ಅಲ್ಲ, ಇಡೀ ಬೈಲಿಂಗೇ ದೊಡ್ಡಪ್ಪನೇ.
ಪ್ರಾಯ ಹತ್ತೆಪ್ಪತ್ತು ಕಳುದರೂ, ಉತ್ಸಾಹ ಗುಣಾಜೆ ಕುಂಞಿಂದಲೂ ಜಾಸ್ತಿಯೇ!
ಸಣ್ಣ ಪ್ರಾಯಂದಲೇ ತೊಡಗಿ ಈಗ ಒರೆಂಗೂ ಕೃಷಿ ಭೂಮಿಲಿ ದುಡುದ ಜೀವ; ಈಗ ಏಕಾಏಕಿ ಮನೆಲೇ ಕೂದುಗೊಳ್ಳಿ ಹೇದು ಮಕ್ಕೊ ಒತ್ತಾಯ ಮಾಡಿರೆ ಹೇಂಗಪ್ಪದು?!
~

ಎಲ್ಲ ಮನೆಗಳ ಹಾಂಗೇ ಈ ಮನೆಲಿಯೂ ವೃದ್ಧಾಪ್ಯ ಬಯಿಂದು.
ಮಕ್ಕೊ ದೂರದ ಊರುಗಳಲ್ಲಿ ಉದ್ಯೋಗಸ್ಥರಾಗಿದ್ದವು. ಹಳ್ಳಿ ಮನೆಲಿ ಇಬ್ರೇ ಇಪ್ಪದು – ದೊಡ್ಡಪ್ಪನೂ, ದೊಡ್ಡಮ್ಮನೂ.

ಸಾಮಾನ್ಯವಾಗಿ ನಮ್ಮ ಊರುಗಳಲ್ಲಿ ಎಂತಾವುತ್ತಾ ಇದ್ದು?
ಮಕ್ಕೊ ಬೆಂಗ್ಳೂರಿಲಿಯೋ ಮಣ್ಣ ಇದ್ದರೆ, ಊರಿಲಿ ಅಬ್ಬೆಪ್ಪ° ಮಾಂತ್ರ ಇಪ್ಪದು ಹೇದರೆ, “ಅಪ್ಪಾ, ನಿಂಗೊ ಊರಿಲಿದ್ದದು ಸಾಕು, ತೋಟಲ್ಲಿ ಬಂಙ ಬಂದ್ಸು ಸಾಕು; ಇನ್ನು ಹೆರಡಿ, ಎಂಗಳೊಟ್ಟಿಂಗೆ ಉಪ್ಪರಿಗೆ ಮನೆಲಿ ಬದ್ಕಿ” ಹೇಳ್ತವಾಡ ಮಕ್ಕೊ.
ಆದರೆ ಇಲ್ಲಿ ಹೀಂಗಾಯಿದಿಲ್ಲೆ – ದೊಡ್ಡಪ್ಪಂಗೆ ಪ್ರಾಯ ಎಷ್ಟೇ ಆದರೂ – ಅವರ ನೆಮ್ಮದಿಯ ಜಾಗೆ ಎಲ್ಲಿಯೋ – ಅಲ್ಲೇ ಇರಳಿ ಹೇಳ್ತದು ಅವರ ಮಕ್ಕಳ ಅಭಿಪ್ರಾಯ.
ಹಾಂಗೇ ಆತುದೇ; ಹಳ್ಳಿಲೇ ಇದ್ದವು ಈಗ ಒರೆಂಗೂ.
ಹದಾ ತೋಟವ ಹದಾಕೆ ನೋಡಿಗೊಂಡಿದ್ದವು. ದಿನಾಗುಳೂ ಹಿತ್ಲಿಲಿ ಒಂದು ಸುತ್ತ ತಿರುಗಿ ನಾಕು ತೆಂಙಿನಕಾಯಿ ಅಡಕ್ಕೆ ಹೆರ್ಕಿಂಡು ಮನೆಗೆ ಬಂದರೇ ಅವಕ್ಕೆ ನೆಮ್ಮದಿ.
ಈ ನಮುನೆ ಈಗಂದ ಅಲ್ಲ, ಹಲವೂ ಒರಿಶಂದ ಇದ್ದವು. ಈಗ ಶುದ್ದಿ ತೆಗೆತ್ಸರಲ್ಲಿ ಎಂತರ ವಿಶೇಷ-  ಕೇಳುವಿ ನಿಂಗೊ.
ಈಗ ಒಂದು ವಿಶೇಷ ಇದ್ದು. ಅದೆಂತರ?

~

ಓ ಮನ್ನೆ ಪೆರ್ಲ ಗೋಶಾಲೆಲಿ ಜನಜನನೀ ಕಾರ್ಯಕ್ರಮ ನೆಡದತ್ತಲ್ಲದೋ?
ಗುರುಗಳ ನೇತೃತ್ವಲ್ಲಿ ಗೋಕಥೆಯೂ ಆಯಿದು ನೆಂಪಿಕ್ಕು ನಿಂಗೊಗೆ. ನೂರಾರು ಜೆನಂಗೊ ಗೋಕತೆ ಕೇಳಿ, ನಮ್ಮ ಊರಿನ ಗೋವುಗಳ ಬಗ್ಗೆ ಹಿರಿಮೆಯ ತಿಳ್ಕೊಂಡು ಮನೆಗೆ ಹೋದವು. ಗುರುಗೊ ಮಾತಾಡುವಾಗ “ಮನೆಗೆ ಒಂದಾದರೂ ಊರ ದನಗೊ ಬೇಕು” ಹೇಳಿದ್ದವಾಡ. ಊರ ದನದ ಬಗ್ಗೆ ವಿವರ್ಸಿದ್ದರ ಕೇಳಿಂಡ ನೆರೆಕರೆಯೋರಿಂಗೆ ಸುಮಾರು ಜೆನಕ್ಕೆ ಹಟ್ಟಿ ತುಂಬುಸಿಗೊಳೇಕು – ಹೇದು ಮನಸ್ಸಾತಾಡ. ಹಾಂಗೆ, ಮದಲಿಂಗೆ ಹಟ್ಟಿ ಇದ್ದೋರು, ಈಗ ದನಸಾಂಕದ್ದೋರು, ಜರ್ಸಿ ದನ ಮಾಂತ್ರ ಸಾಂಕುತ್ತೋರು – ಒಂದು ಊರ ದನ ಎಲ್ಯಾರು ಸಿಕ್ಕುಗೋ – ಕೇಳಿಗೊಂಡಿದ್ದವಾಡ; ಚೂರಿಬೈಲು ಡಾಗುಟ್ರು ಹೇಳಿದವು.

~

ಅಸಕ್ಕಪ್ಪಗ ಮಾತಾಡ್ಳೆ ಬಕ್ಕು; ಕೊಂಗಾಟ ಮಾಡಿರೆ ಮಗಳಕ್ಕು; ಕೊಂಗಾಟ ಮಾಡುಸಿಗೊಂಡ್ರೆ ಅಮ್ಮ ಅಕ್ಕು!! ಮೋಳು-ಅಮ್ಮ!

ಅಸಕ್ಕಪ್ಪಗ ಮಾತಾಡ್ಳೆ ಬಕ್ಕು; ಕೊಂಗಾಟ ಮಾಡಿರೆ ಮಗಳಕ್ಕು; ಕೊಂಗಾಟ ಮಾಡುಸಿಗೊಂಡ್ರೆ ಅಮ್ಮ ಅಕ್ಕು!! ಮೋಳು-ಅಮ್ಮ!

ಮಾಷ್ಟ್ರುಮಾವನ ಹಟ್ಟಿ ತುಂಬ ಊರ ದನಗೊ; ಈಗಲ್ಲ ಮದಲಿಂಗೇ ಹಾಂಗೆ.
ಈಗಾಣ ಜವ್ವನ್ತಿ ಸುಭದ್ರೆ- ಅದರ ಅಜ್ಜಿ – ಮೋಳಮ್ಮ – ಅದರ ಅಜ್ಜಿ ಗೋಪಿ – ಅದರ ಅಜ್ಜಿ ಒಪ್ಪಕ್ಕ – ಅದರ ಅಜ್ಜಿ ನರೆಚ್ಚಿ.. ಹೀಂಗೆ ತಲೆಮಾರುಗಳೇ ಆ ಹಟ್ಟಿಲಿ ಆಗಿ ಹೋಯಿದು. ಈಗಳೂ ಅದೇ ನೆತ್ತರು, ಅದೇ ಸಂಸಾರ ಇದ್ದು. ಕಂಜಿ ಹುಟ್ಟುವಾಗಳೇ ಅವಕ್ಕೆ ಮನುಷ್ಯರ ಗೊಂತಿರ್ತ ನಮುನೆಲಿ.
ಹಟ್ಟಿಲಿ ದನ ಜಾಸ್ತಿ ಆತು ಹೇದು ಕೊಟ್ಟದಿಲ್ಲೆ, ಆದರೆ ಆರಾರು ಆನು ಸಾಂಕುತ್ತೆ – ಹೇದು ತೆಕ್ಕೊಂಡು ಹೋದ್ಸು ಇದ್ದು.
ಶುದ್ಧ ಕಾಸ್ರೋಡು ತಳಿಯ ದನಗೊ ಅಪುರೂಪ ಆದ ಕಾರಣ ಈಗ ಕೆಲಾವು ಜೆನಂಗೊ ಎನಗೊಂದಿರಳಿ – ಹೇದು ತೆಕ್ಕೊಂಡು ಹೋವುತ್ತ ಕ್ರಮ ಇದ್ದಾಡ.

ಮಾಷ್ಟ್ರಮನೆ ಅತ್ತೆಯ ಖಾಸಾ ಅಕ್ಕನ ಮಗಳ ಚೂರಿಬೈಲು ನೆರೆಕರೆಗೆ ಕೊಟ್ಟದಿದಾ. ಹಾಂಗಾಗಿ ಚೂರಿಬೈಲು ದೀಪಕ್ಕನ ಸಂಪರ್ಕ ಒಳ್ಳೆತ ಇದ್ದು. ಚೂರಿಬೈಲು ದೀಪಕ್ಕನ ಆಚಮನೆಗೆ ಕೊಟ್ಟದು ಕೊಣಾಜೆ ದೊಡ್ಡಪ್ಪನ ಮಗಳನ್ನೇ ಆದ ಕಾರಣ – ಸಂಪರ್ಕದ ಮನೆಯೇ.

~

ಎಷ್ಟು ಸರ್ತಿ ತೋಟಕ್ಕೆ ಹೋಗಿ ಬಂದರೂ ಹೊತ್ತು ಹೋವುತ್ತಿಲ್ಲೆನ್ನೇ – ಅದಕ್ಕೆಂತರ ಮಾಡುಸ್ಸು? ಕೊಣಾಜೆ ದೊಡ್ಡಪ್ಪಂಗೂ, ದೊಡ್ಡಮ್ಮಂಗೂ – ಮಕ್ಕೊ ದೂರ ಇಪ್ಪ ಬಗ್ಗೆ ಭಾವನೆಗೊ ಇದ್ದೇ ಇಕ್ಕು.
ತೋಟಕ್ಕೆ ಹೋವುಸ್ಸು, ಅಲ್ಲಿ ಗೆಡು ನೆಡುಸ್ಸು, ಅದಕ್ಕೆ ಈಟು ನೀರು ಹಾಕುಸ್ಸು, ಹುಲ್ಲು ನೆಡುಸ್ಸು, ಅದರ ಪೋಚಕಾನ ಮಾಡುಸ್ಸು – ಏಯ್, ಎಂತ ಮಾಡಿರೂ ಇಬ್ರೇ ಇಪ್ಪ ಭಾವನೆ ಹೋವುತ್ತೇ ಇಲ್ಲೆ.

ಇದಕ್ಕೆಂತರ ಮಾಡ್ಲಕ್ಕೂ? – ಇಬ್ರುದೇ ಕೂದು ಆಲೋಚನೆ ಮಾಡಿದವಾಡ.
ಅಂತೂ – ಮೊನ್ನೆ ಗೋಕಥೆ ಕೇಳಿಂಡಿಪ್ಪಾಗ – ಒಂದು ಉಪಾಯ ಹೊಳದತ್ತು ದೊಡ್ಡಪ್ಪಂಗೆ.
ಮನೆಲಿ ಇಬ್ರೇ ಇಪ್ಪದಕ್ಕೆ, ಕುಣುಕುಣು ಮಾತಾಡ್ಳೆ ಒಂದು ದನ ತಂದರೆ ಹೇಂಗೆ? – ಹೇದು ಮನಸ್ಸುಮಾಡಿದವಾಡ.
ಚೂರಿಬೈಲು ಡಾಗುಟ್ರು ಹೇಳಿದ ಆ ಸಂಗತಿಯೇ ಇಂದ್ರಾಣ ಶುದ್ದಿ.

~

ದೊಡ್ಡಪ್ಪಂಗೆ ಈ ಆಲೋಚನೆ ಬಂದಪ್ಪದ್ದೇ – ಮಕ್ಕೊಗೆ ಹೇಳಿಕ್ಕಿದವು. ಹೀಂಗೀಂಗೆ – ಒಂದು ದನ ತಂದು ಸಾಂಕುವೊ° ಹೇದು ಆಲೋಚನೆ – ಹೇಳಿ. ಸರಿ, ಅಬ್ಬೆಪ್ಪಂಗೆ ಹೇಂಗೆ ಬೇಕೋ ಹಾಂಗೇ ಮಾಡುವೊ° – ಹೇಳಿದವಾಡ ಮಕ್ಕೊ.
ಕೊಣಾಜೆಂದ ಮಗಳ ಮನೆಗೆ – ಅಲ್ಲಿಂದ ಚೂರಿಬೈಲಿಂಗೆ – ಚೂರಿಬೈಲಿಂದ ದೀಪಕ್ಕಂಗೆ – ದೀಪಕ್ಕನಿಂದ ಮಾಷ್ಟ್ರುಮಾವನ ಮನೆಗೆ – ಈ ಗಾಳಿ ಶುದ್ದಿ ಎತ್ತಿಯೇ ಎತ್ತಿತ್ತು.
ಹೀಂಗೀಂಗೆ – ಅವಕ್ಕೆ ಸಾಂಕಲೆ ದನ ಬೇಕಾಡ – ಊರ ದನವೇ ಬೇಕಾಡ, ಹೇದು.

ಸಮ, ಚೂರಿಬೈಲು ದೀಪಕ್ಕಂದೇ ಸಂದಾನ; ಇಂತಾ ದಿನ ನೋಡ್ಳೆ ಬಪ್ಪದು, ದನ ನೋಡುದು – ಹೇಳಿಯೂ ನಿಘಂಟಾತು. ಹಾಂಗೆ ಕಳುದ ಶೆನಿವಾರ ಮಾಷ್ಟ್ರುಮಾವನ ಮನೆಗೆ “ದನ ನೋಡ್ಳೆ” ಬಂದಿತ್ತಿದ್ದವು.
ದನ ನೋಡುದು ಹೇದರೆ ಕೂಸು ನೋಡಿದ ಹಾಂಗೋ? ಅಲ್ಲ!
ಕೂಸು ನೋಡುದಾದರೆ ಹಾಡು ಕೇಳುಸ್ಸು, ಸೂಜಿಗೆ ನೂಲು ಹಾಕಲೆ ಹೇಳುಸ್ಸು, ರಂಗೋಲಿ ಹಾಕಲೆ ಹೇಳುಸ್ಸು – ಹೀಂಗಿರ್ತ ನೇರಂಪೋಕುಗೊ ಇದ್ದತ್ತು; ಆದರೆ ದನ ನೋಡ್ಳೆ ಹಾಂಗೆಂತೂ ಇಲ್ಲೆನ್ನೆ. ಹೆಚ್ಚಿರೆ – ಪೆರ್ಚಿ ಇದ್ದೋ ಹೇದು ಒಂದರಿ ಮೈಬೆನ್ನು ಮುಟ್ಟಿ ನೋಡುಗು. ಅಷ್ಟೇ! ಜಾತಕ ನೋಡಿ ತಿಳಿಶುತ್ತೆಯೊ° ಹೇಳುಲೂ ಇಲ್ಲೆ.
ಹಾಂಗೆ ಮೊನ್ನೆ ಬೇಗ ಬಂದವು, ದನ ನೋಡಿದವು – ಅಕ್ಕು ಹೇದು ಉತ್ತರ ಹೇಳಿಕ್ಕಿ ಊರಿಂಗೆ ಹೋದವು.

~

ದನ ನೋಡಿಕ್ಕಿ ಒಪಾಸು ಮನೆಗೆ ಹೋದಪ್ಪದ್ದೇ ದೊಡ್ಡಪ್ಪಂಗೆ ಒಂದಾಲೋಚನೆ ಬಂತು.
ನಮ್ಮ ಸಂಗಾತಕ್ಕೆ ಹೇದು ದನ ಬತ್ತು ನಿಜ, ಆದರೆ ದನದ ಸಂಗಾತಕ್ಕೆ ಇನ್ನೊಂದು ದನವೋ – ಕಂಜಿಯೋ ಎಂತಾರು ಬೇಡದೋ? ಅಲ್ಲದ್ದರೆ ಒಂಟಿದನಕ್ಕೆ ಅಸಕ್ಕಾಗದೋ? – ಹೇದು.
ದನುವಿನನ್ನೂ ಮನುಷ್ಯರ ಹಾಂಗೇ ಚಿಂತನೆ ಮಾಡ್ತ ಮನಸ್ಸುಗೊಕ್ಕೆ ಮಾಂತ್ರ ಹೀಂಗಿರ್ತ ಆಲೋಚನೆ ಬಕ್ಕಷ್ಟೆ. ಅಲ್ಲದೋ?

ಹಾಂಗೆ, ದನದ ಒಟ್ಟಿಂಗೆ ಒಂದು ಕಂಜಿಯನ್ನೂ ಕೊಡುವಿರಾ – ಹೇದು ಮಾಷ್ಟ್ರಮನೆ ಅತ್ತೆಯ ಹತ್ತರೆ ಕೇಳಿದವು.
ದನುವಿನ ಕೊಡ್ತ ಬೇಜಾರವೇ ಮನಸ್ಸಿಲಿ ತುಂಬಿದ್ದರೂ – ಕಾರಣ ಸರಿಯಾದ್ದೇ ಆದ ಬಗೆಲಿ “ಅಕ್ಕಂಬಗ” ಹೇಳಿದವಾಡ ಮಾಷ್ಟ್ರಮನೆಅತ್ತೆ.
ಸಮ, ಒಂದು ದನವೂ, ಅದರೊಟ್ಟಿಂಗೆ ಒಂದು ಕಂಜಿಯೂ ಕೊಣಾಜೆದೊಡ್ಡಪ್ಪನಲ್ಲಿಗೆ ಹೋಪದು ಹೇದು ನಿಜ ಮಾಡಿಗೊಂಡವು.

~

ನಿನ್ನೆಲ್ಲ ಮೊನ್ನೆ ಮಾಷ್ಟ್ರುಮಾವನ ಮನೆ ಜಾಲಿಂಗೆ ವಾಹನ ಬಂತು. ದನುವಿನ ಮೈ ಉದ್ದಿ ಮಾಷ್ಟ್ರುಮನೆ ಅತ್ತೆ ಕಳುಸಿಕೊಟ್ಟವು, ದೊಡ್ಡಪ್ಪ ಬಳ್ಳಿ ಬದಲುಸಿ ವಾಹನಕ್ಕೆ ಹತ್ತುಸಿದವು. ಕೊಂಡಾಟದ ಕರಿಕಂಜಿಯೂ ಅದರ ಬೆನ್ನಾರೆ ಬಂದು ವಾಹನಕ್ಕೆ ಹತ್ತಿತ್ತು.
ವಾಹನದ ಚಕ್ರ ತಿರುಗಿತ್ತು; ಕೊಣಾಜೆ ದೊಡ್ಡಪ್ಪನ ಹಟ್ಟಿ ಬುಡದ ಒರೆಂಗೂ.

ಎರಡು ದನುವಿನ ಚೆಂದಕೆ, ಸಂತೋಷಲ್ಲಿ ಹಟ್ಟಿ ತುಂಬುಸಿಗೊಂಡವು ದೊಡ್ಡಪ್ಪ.
ಈಗ, ದೊಡ್ಡಪ್ಪ-ದೊಡ್ಡಮ್ಮಂಗೆ ಅಸಕ್ಕಪ್ಪಗ ಈ ದನುವಿನ ಮಾತಾಡ್ಸುತ್ತವಾಡ. ದನುವಿಂಗೆ ಅಸಕ್ಕಪ್ಪದಕ್ಕೆ ಹತ್ತರೆ ಒಂದು ಕಂಜಿ ಇದ್ದಾಡ. ಕಂಜಿಗೆ ಹೆದರಿಕೆ ಅಪ್ಪದಕ್ಕೆ ಈ ದನು ಇದ್ದನ್ನೇ. ದನುವಿಂಗೆ ಹೆದರಿಕೆ ಆಗದ್ದ ಹಾಂಗೆ ಮನೆಯೋರಿದ್ದವು.
ಒಟ್ಟಿಲಿ, ಸ್ವಂತ ಮಕ್ಕೊ ದೂರದೂರಲ್ಲಿದ್ದರೂ – ಹಟ್ಟಿಯ ಮಕ್ಕಳಿಂದಾಗಿ ಆ ಮನೆ ಈಗ ಪುನಾ ನಂದನವನ ಆತಾಡ.

~

ನೋಡಿದಿರಾ?
ಮಕ್ಕೊ ಶಾಲಗೆ ಹೋಗಿ ಮನೆಲಿ ಒಬ್ಬನೇ ಇಪ್ಪಲೆ ಅಸಕ್ಕಾವುತ್ತು ಹೇದು ಬೆಂಗ್ಳೂರಿನ ಶುಬತ್ತೆ ರೋಸಿನಾಯಿಯ ಸಾಂಕಿದ ಕತೆ ನವಗೆ ಮರದ್ದಿಲ್ಲೆ.
ಆದರೆ ಕೊಣಾಜೆಲಿ, ಮಕ್ಕೊ ದೂರ ಇದ್ದುಗೊಂಡು, ಪ್ರಾಯದ ಅಬ್ಬೆಪ್ಪ° ಇಬ್ರೇ ಅಪ್ಪದಕ್ಕೆ ದನ ಸಾಂಕುವೊ ಹೇದು ಆಲೋಚನೆ ಮಾಡ್ತವು.
ಈ ನಮುನೆಯೋರು ತುಂಬಾ ತುಂಬಾ ಅಪುರೂಪ ಅಲ್ಲದೋ?
ಎಲ್ಲೋರುದೇ ಇದೇ ನಮುನೆ ಆಲೋಚನೆ ಮಾಡಿರೆ ನಮ್ಮ ಊರಿಲಿ ಮದಲಿನಂತೆ ಗೋವಂಶ ಬೆಳೆಯದೋ?
ಎಲ್ಲದಕ್ಕೂ ಮೂಲ ಆದ ಗೋಕಥೆಗೂ, ಅದರ ಹಿಂದೆ ಇಪ್ಪ ಆ ಗುರುಶೆಗ್ತಿಗೂ ಬೈಲಿನ ವಂದನೆಗೊ.

~

ಒಂದೊಪ್ಪ: ಗೋವು – ಮಕ್ಕೊಗೆ ಅಮ್ಮನೂ ಅಪ್ಪು; ದೊಡ್ಡೋರಿಂಗೆ ಮಕ್ಕಳೂ ಅಪ್ಪು.

ಒಪ್ಪಣ್ಣ

   

You may also like...

13 Responses

 1. dentistmava says:

  makkoge ammanu akku doddoringe makkalu akku ee gomathe.
  aanu sannadippaga hatti tumba kasarodu gidda danago ithiddu. eega hattili ondu danavu ondu kanjiyu iddu. greshuvaga bejaravuthu.aadare bere dari ille.
  gokathe keli kelavu jena aadaru dana sankuva ( alla dana namma sankutsu)
  manassu madiddu thumba santhosha.
  harerama.

 2. Ganesh bhat says:

  ಎಲ್ಲೊರು ಹೀನ್ಗೆ ಆಲೊಚನೆ ಮಾಡಿರೆ ನಮ್ಮ ಗುರುಗೊ ಹೇಳಿದ ಹಾನ್ಗೆ ಎಲ್ಲಾ ಮನಗಳಲ್ಲೂ ಒನ್ದೊನ್ದು ಗೊಶಾಲೆ ಅಕ್ಕಲ್ಲದೊ

 3. shyamaraj.d.k says:

  ಲಾಯಕ ಆಯಿದು ಒಪ್ಪಣ್ಣ…..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *