Oppanna.com

“ಅಸಂಬದ್ಧ” ಅನುಸುವ ನೀತಿಮಾತುಗೊ..!

ಬರದೋರು :   ಒಪ್ಪಣ್ಣ    on   15/03/2013    18 ಒಪ್ಪಂಗೊ

ನೆರಿಯದಜ್ಜಂಗೆ ಹಲವು ನೀತಿಕತೆಗೊ, ಗಾದೆಮಾತುಗೊ, ಪಳಮ್ಮೆಗೊ ಗೊಂತಿತ್ತು; ಸೂಕ್ತ ಸಂದರ್ಭ ಬಪ್ಪಗ ಅವು ಒಂದೊಂದೇ ಹೇಳಿ ತೋರ್ಸಿಗೊಂಡಿತ್ತ ಸಂಗತಿ ನವಗರಡಿಗು.
ತರವಾಡುಮನೆ ಶಂಬಜ್ಜಂಗೂ ಈ ಹವ್ಯಾಸ ಇದ್ದತ್ತು. ಮದಲಿಂಗೆ ಹೆಚ್ಚಿನೋರಿಂಗೂ ಇದ್ದತ್ತು; ನಾವೊಂದರಿ ಬೈಲಿಲಿಯೂ ಮಾತಾಡಿದ್ದು. (https://oppanna.com/oppa/hallu-shambajjana-palamme)
ಕೆಲವು ನೀತಿಕತೆಗಳ ಮೂಲಕ, ಕೆಲವು ದಂತಕತೆಗಳ ಮೂಲಕ ಈಗಾಣ ಸನ್ನಿವೇಶಂಗಳ ಅರ್ತಮಾಡಿಗೊಂಬಲೆ ಎಡಿಗು ಹೇಳ್ತದು ಅವರ ನಂಬಿಕೆ ಆಗಿದ್ದತ್ತು.
ಅವರ ಅನುಭವ, ಹೆರಿಯೋರ ಅನುಭವಂಗೊ ಸಂಸ್ಕರಿತಗೊಳುಶಿ, ಅದುವೇ ಒಂದೊಂದು ಪಳಮ್ಮೆ, ನೀತಿಮಾತುಗೊ ಆಗಿ ಬಂದದು ಹೇಳ್ತದು ನವಗೆ ಗೊಂತಿಪ್ಪದೇ.
ಅದಿರಳಿ.
ಇಷ್ಟೆಲ್ಲ ಸರಿಯೇ, ಆದರೂ – ಕೆಲವು ಸರ್ತಿ ಅವರ ನೀತಿಕತೆಗೊ ವಿಚಿತ್ರ ಒಗಟಿನ ಹಾಂಗೆಯೂ, ಅಸಂಬದ್ಧದ ಹಾಂಗೆಯೂ ಕಾಂಬಲಿದ್ದಾಡ.
ಹಾಂಗಿರ್ತ ಒಂದು ಶುದ್ದಿ ಈವಾರ ಮಾತಾಡಿರೆಂತ?
~

ಶಿವರಾತ್ರಿ ಮರದಿನ ಮಳೆ ಸೊರುಗಿದ ಕಾರಣ ಈ ಸರ್ತಿ ವಿಭೂತಿ ಮಾಡ್ಳೆ ಕಷ್ಟ ಆತು ಮಾಷ್ಟ್ರುಮಾವಂಗೆ. ಮಾಷ್ಟ್ರುಮನೆ ಅತ್ತೆ ಹಟ್ಟಿಂದ ಹೆರ್ಕಿ ತಂದ ಸಗಣ, ಅರ್ದ ಹೊತ್ತಿದ ಭಸ್ಮ – ಪೂರಾ ಕರಡಿ ಬೆಳ್ಳಕ್ಕೆ ಹೋಗಿ – ತೋಟಲ್ಲಿ ನಾಲ್ಕು ಕಿಲೆ ಅಡಕ್ಕೆ ಹೆಚ್ಚು ಕಾಣ್ತಾ ಇದ್ದು ಈಗ! 😉
ಅದು ಒಳ್ಳೆದೇ, ಆದರೆ ವಿಭೂತಿ ಈ ಒರಿಶದ್ದು ಇಲ್ಲೆನ್ನೇ! – ಹೇದು ಮಾಷ್ಟ್ರುಮಾವಂಗೆ ಚಿಂತೆ.
ಅದೇ ತಲೆಬೆಶಿಲಿ ಮೊನ್ನೆ ಎಲೆ ತಿಂದುಗೊಂಡಿಪ್ಪಾಗಳೇ ನಾವು ಹೋದ್ಸಾಗಿತ್ತು.
ಹೊತ್ತೋಪಲೆ ಹಲವು ಶುದ್ದಿಗೊ ಮಾತಾಡುವಾಗ ಈ “ಅಸಂಬದ್ಧ” ಅನುಸುವ ನೀತಿಮಾತುಗಳ ಬಗ್ಗೆಯೂ ಶುದ್ದಿ ಬಂತು.
ಮಾಷ್ಟ್ರುಮಾವ ಸಣ್ಣ ಇಪ್ಪಾಗ ನೆರಿಯದಜ್ಜ ಹೇಳಿದ ಮೂರು ನೀತಿಮಾತುಗೊ ಆಡ.
ಸುರುವಿಂಗೆ ಕೇಳುವಾಗ “ಅಸಂಬದ್ಧ” ಹೇದು ಅನುಸುಗು. ಆದರೆ, ಅರ್ಥ ವಿವರ್ಸದ್ದೆ ಅಂದಾಜಿಯೇ ಆಗ ನವಗೆ!
ಮಾಷ್ಟ್ರುಮಾವ ಎಲೆತುಪ್ಪಿ ಬಂದು ಪುನಾ ವಿವರ್ಸಿದ ಕಾರಣ ಒಪ್ಪಣ್ಣಂಗರ್ತ ಆತು.
~

ಬೆಳೆಗೆ ಬೇಲಿ ಹಾಕೆಡ:
ಬೇಲಿ, ಉರುವೆಲು, ಪಡಿ, ತಡಮ್ಮೆ ಹೇಳಿ ಕಳುದ ವಾರ ಮಾತಾಡಿದ್ದಷ್ಟೆ. (https://oppanna.com/oppa/uruvelu-mare-beli-dadamme)
ರಂಗಮಾವನ ಗೆದ್ದೆಲಿ ಬೇಲಿ ಇದ್ದು, ಅದಕ್ಕೆ ಪಡಿ ಇದ್ದು – ಹಾಂಗೆ ಹೀಂಗೆ ಹೇಳಿ ಮಾತಾಡಿ ಒಂದು ವಾರ ಆಯಿದಿಲ್ಲೆ, ಅಷ್ಟಪ್ಪಗಳೇ – “ಬೆಳಗೆ ಬೇಲಿ ಹಾಕೆಡ” ಹೇದು ಉಪದೇಶವೋ?
ಚೆಲ!?

ಒಬ್ಬ ಬಂಙ ಬಂದು ಬೆಳೆ ತೆಗೆತ್ತ°, ಜಾಗ್ರತೆಲಿ ಅದರ ಬಂದವಸ್ತು ಮಾಡೆಡದೋ?
ಅಲ್ಲದ್ದರೆ ಕಂಡು ದನಗಳೋ, ದಾರಿಹೋಕರೋ- ಆರಾರು ಬಂದು ಬೆಳೆಯ ಲಗಾಡಿಕೊಡವೋ? ಕೊಡುಗು.
ಬೆಳಗೆ ಬೇಲಿ ಹಾಕದ್ದರೆ ಮಾಡಿದ ಶ್ರಮ ವ್ಯರ್ಥ ಆಗದೋ?
ಹಾಂಗಾರೆ ನೆರಿಯದಜ್ಜನ ಈ ಉಪದೇಶ ಎಂತರ?

ಬೆಳೆ ಬಂದ ಮತ್ತೆ ಬೇಲಿ ಹಾಕೆಕ್ಕಾದ್ಸಲ್ಲ, ಅದಕ್ಕೆ ಪೂರ್ವತಯಾರಿ ಮಾಡುವಗಳೇ ಬೇಲಿ ಹಾಕಿಗೊಳೆಕ್ಕು.
ಬೇಸಾಯ ಬೆಳದ ಮತ್ತೆ ಅಲ್ಲ; ಬೆಳೆ ತೆಗವ ಮದಲು – ಬಿತ್ತುತ್ತು ಅಲ್ಲದೋ – ಆ ಹೊತ್ತಿಂಗೇ ಬೇಲಿ ಹಾಕೇಕು.
– ಮಾಷ್ಟ್ರುಮಾವ° ಅರ್ತ ವಿವರ್ಸಿದ ಮತ್ತೆಯೇ ಗೊಂತಾದ್ಸು ಒಪ್ಪಣ್ಣಂಗೆ.

ಇದು ಗೆದ್ದೆ ಬೇಸಾಯಕ್ಕೆ ಮಾಂತ್ರ ಸಮ್ಮಂದ ಪಟ್ಟದಲ್ಲ, ಜೀವನದ ಎಲ್ಲ ಸಂದರ್ಭಲ್ಲಿಯೂ, ಎಲ್ಲ ದಿಕ್ಕೆಯೂ ಅನ್ವಯ ಅಪ್ಪ ಮಾತು.
ಕೆಲಸ ಅಂತಿಮ ಆಗಿಂಡು ಬಪ್ಪಗ ಜಾಗ್ರತೆ ಮಾಡ್ತದಲ್ಲ, ಕೆಲಸದ ಆರಂಭ ಮಾಡ್ತರಿಂದಲೂ ಮದಲೇ – ಆಲೋಚನೆ ಮಾಡ್ತಲ್ಲದೋ – ಅಂಬಗಳೇ ಜಾಗ್ರತೆ ಸುರುಮಾಡೇಕು ಹೇಳ್ತದು ಈ ಮಾತಿನ ತಾತ್ಪರ್ಯ.

ಬೆಳೆ ಬಂದ ಮತ್ತೆ ಬೇಲಿ ಹಾಕುದಲ್ಲ, ಮದಲೇ ಹಾಕೇಕು – ಹೇಳ್ತದರ “ಬೆಳಗೆ ಬೇಲಿ ಹಾಕೆಡ” ಹೇಳಿಯೂ ಹೇಳ್ಳಕ್ಕಪ್ಪೋ!?

ನೀತಿಮಾತುಗೊ ಋಷಿಗಳಿಂದಲೇ ಬಪ್ಪದೋ? (ಪಟ: ಇಂಟರ್ನೆಟ್ಟು)
ನೀತಿಮಾತುಗೊ ಋಷಿಗಳಿಂದಲೇ ಬಪ್ಪದೋ? (ಪಟ: ಇಂಟರ್ನೆಟ್ಟು)

ಹೆಂಡತ್ತಿಗೆ ಸೀರೆ ತೆಗದುಕೊಡೆಡ:
ಸದ್ಯ ಮದುವೆ ಆದೋರು, ಅಪ್ಪೋರು ಇದ್ದರೆ ಈ ಮಾತಿನ ಹೇಳೇಕಡ – ಹಲ್ಲು ತುಪ್ಪುಸುಗು!! 😉
ಸದ್ಯ ಮದುವೆ ಆದೋರೇ ಆಯೇಕು ಹೇಳಿ ಇಲ್ಲೆ, ಹಳೆಮದುಮ್ಮಾಯಂದ್ರಿಂದೂ ಅದೇ ಕತೆ;
ಸಂಜೀವಶೆಟ್ಟಿಯಲ್ಲಿಗೆ ಹೋದರೆ ಹನ್ನೆರಡು ಸೀರೆಯ ಕಟ್ಟ ಹೊರ್ಲೆಡಿತ್ತಿಲ್ಲೆ ಹೇದು ಕಾರನ್ನೇ ತೆಕ್ಕೊಂಡೋಪ ಕಾನಾವು ಡಾಗುಟ್ರೇ ಇದಕ್ಕೆ ಸಾಕ್ಷಿ!
ಅಲ್ಲದ್ದರೂ – ಸೀರೆಪ್ರಿಯ ಸ್ತ್ರೀಯರಿಂಗೆ ಗೆಂಡ° ಸೀರೆ ತೆಗದು ಕೊಡದ್ದರೆ ಅಕ್ಕೋ? ಆಗಲೇ ಆಗ.
ಅಂಬಗ ಈ ಮಾತಿನ ಅರ್ಥ ಎಂತರಪ್ಪಾ..!?

ಸೀರೆ ತೆಗದು ಕೊಡೆಡ ಹೇದರೆ – “ಇದಾ – ಇಂದು ಇದರ ಸುತ್ತು”, “ಆ ಜೆಂಬ್ರಕ್ಕೆ ಇಂತಾದ್ದರನ್ನೇ ಸುತ್ತು” – ಹೇದು ಟ್ರಂಕು ಪೆಟ್ಟಿಗೆ / ಕವಾಟಿಂದ ತೆಗದು ಕೊಡೆಡ ಹೇದು ಅರ್ಥ.
ಯೇವ ಯೇವ ದಿನಕ್ಕೆ ಯೇವ ಸೀರೆ ಸುತ್ತೇಕು ಹೇಳ್ತದರ ಹೆಂಡತ್ತಿಯೇ ಆಯ್ಕೆಮಾಡ್ತ ಸ್ವಾತಂತ್ರ್ಯ ಹೊಂದಿರೇಕು.
ಅಷ್ಟು ಆಯ್ಕೆಗಳೂ ಹೆಂಡತ್ತಿಗೆ ಇರೆಕ್ಕು. ಹೆಂಡತ್ತಿಗೆ ಆಯ್ಕೆಗೆ ಧಾರಾಳ ಅಪ್ಪಷ್ಟು ಮದಲೇ ತಂದು ಮಡಗಿರೆಕ್ಕು; ಹೆಂಡತ್ತಿಯ ಚೆಂದಲ್ಲಿ ನೋಡಿಗೊಂಬಲೆ ಅಷ್ಟು ತ್ರಾಣ ಇರೆಕ್ಕು.
ಹೆಂಡತ್ತಿಯ ಸೌಂದರ್ಯದ ವಿಚಾರಲ್ಲಿ ಆಗಲಿ, ಸುತ್ತುವ ವಸ್ತ್ರಂಗಳ ವಿಚಾರವಾಗಲಿ ಗೆಂಡ ನಿಯಂತ್ರಣ ಮಾಡ್ಳಾಗ; ಅದರ ಹೆಂಡತ್ತಿಯೇ ಸ್ವತಃ ಮಾಡಿಗೊಂಬದು ಸಂಸ್ಕಾರ. ಆ ವಿಷಯವ ಗೆಂಡ° ನಿಯಂತ್ರಣ ಮಾಡ್ಳಾಗ.

ಹೆಂಡತ್ತಿಗೆ ಬೇಕಾದ ಸೀರೆ ಒಸ್ತ್ರಂಗಳ ಆಯ್ಕೆ ಸ್ವಾತಂತ್ರ್ಯ ಅದಕ್ಕೇ ಇರೆಕ್ಕು – ಹೇಳ್ತದು ಈ ಮಾತಿನ ತಾತ್ಪರ್ಯ.

ಅಬ್ಬೆಗೆ ಅಶನ ಬಳುಸೆಡ:
ಸುರುವಾಣ ಎರಡಾದರೂ ಕೇಳಿಗೊಂಡು ಕೂಪಲಕ್ಕು; ಆದರೆ ಈ ಮೂರ್ನೇ ಸಲಹೆ ಎಂತರಪ್ಪಾ!
ಅಬ್ಬೆಗೆ ಅಶನ ಬಳುಸುಲಾಗ ಹೇದು ಆರಾರು ಹೇಳ್ಳಕ್ಕೋ? ಆಗ! ಅಂಬಗ?
ಮನೆಲಿ ಅಮ್ಮಂಗೆ ಅಶನದ ಅಳಗೆಂದಲೇ ತೋಡಿ ಆಂತುಗೊಂಡು ಉಂಬ ಅಧಿಕಾರ ಇದ್ದು; ಆ ಸ್ವಾತಂತ್ರ್ಯ ಯೇವತ್ತಿಂಗೂ ಇರೆಕ್ಕು – ಹೇಳ್ತದು ಈ ಮಾತಿನ ತಾತ್ಪರ್ಯ.

ಅಬ್ಬೆ ಇಷ್ಟೇ ಉಣ್ಣೆಕ್ಕು ಹೇದು ನಾವು ಬಳುಸಿಕೊಡ್ಳಾಗ. ಅಮ್ಮ ಬೇಕಾದಷ್ಟು, ಮನಸೋ ಇಚ್ಛೆ ಉಂಬ ಹಕ್ಕು ಯೇವದೇ ಮನೆಲಿ ಇರೆಕ್ಕು – ಹಾಂಗಿದ್ದರೇ ಮನೆಲಿ ಮೃಷ್ಟಾನ್ನ ಭೋಜನ ಇಕ್ಕಷ್ಟೆ.
ಏವ ಮನೆಲಿ ಅಬ್ಬೆಗೆ ಈ ಸ್ವಾತಂತ್ರ್ಯ ಇರ್ತಿಲ್ಲೆಯೋ; ಯೇವ ಮನೆಲಿ ಮಕ್ಕಳೇ ಅಬ್ಬೆಗೆ ಊಟವ ನಿಯಂತ್ರಣ ಮಾಡಿ ಬಳುಸುತ್ತವೋ – ಆ ಮನೆಗೆ ಅದೊಂದು ಶಾಪವೇ.
ಪ್ರಾಯದ ಅಬ್ಬೆಗೆ ಅಸೌಖ್ಯ ಆಗಿ ಉಂಬಲೆಡಿಯದ್ದೆ ಆದರೆ ಬೇರೆ ಪ್ರಶ್ನೆ, ಈ ಮಾತು ಅನ್ವಯ ಅಪ್ಪದು ಅಬ್ಬೆ ಉಶಾರಿದ್ದುಗೊಂಡು ಅತ್ತಿತ್ತೆ ಸರಿಹೋಗದ್ದೆ ಇದ್ದರೆ ಮಾಂತ್ರ!

ಅಡಿಗೆಮನೆಯ ಸಂಪೂರ್ಣ ಅಧಿಕಾರ ಅಬ್ಬೆಗೆ ಇಪ್ಪದು. ಹೆಂಡತ್ತಿ ಬಂದಮತ್ತೆಯೂ ಆ ಹಕ್ಕು ಅಮ್ಮಂದೇ ಆಗಿರ್ತು.
ಅಮ್ಮನೇ ಮನೆಯ ಮಹಾಲಕ್ಷ್ಮಿ ಆಗಿ ಇರೇಕು; ಅವರ ಆಶೀರ್ವಾದಲ್ಲೇ ಒಳುದೋರು ಇರೆಕು – ಹೇಳ್ತದು ಈ ಮಾತಿನ ತಾತ್ಪರ್ಯ.

~

ಮೊನ್ನೆ ಶಿವರಾತ್ರಿ ಲೆಕ್ಕಲ್ಲಿ ಎಲ್ಲೋರುದೇ ಅಂಬೆರ್ಪಿಲಿಪ್ಪಗ ಮಳೆ!
ಮಳೆ ಹೇಳಿಕೆ ಇಲ್ಲದ್ದೆ ಬಂದದಪ್ಪು. ಆದರೂ – ನಷ್ಟ ನವಗೇ ಅಲ್ಲದೋ?
ಜಾಲ್ಸೂರಿನ ಜಾಲ ಕೊಡಿ ಒರೆಂಗೆ ಅಡಕ್ಕೆ ರಾಶಿ, ಬೆಳ್ಳ ಹೋಪಲೆ ಹೆರಟದು. ಇದರೊಟ್ಟಿಂಗೆ ಅರೆವಾಶಿ ಭಸ್ಮ ಆದ ವಿಭೂತಿಯೂ ನೀರು ಬಿದ್ದು ಹೋತು.
ಹಾಂಗೆ ಹೋಗದ್ದ ಹಾಂಗೆ ಆರಂಭಂದಲೇ ಜಾಗ್ರತೆ ಮಾಡೇಕಾತು; ರಾಶಿ ಹಾಕಿದ ಮತ್ತೆ, ಕಿಚ್ಚು ಕೊಟ್ಟ ಮತ್ತೆ ಅಲ್ಲ – ಹೇದು ಅತ್ತೆಗೆ ವಿವರ್ಸುವಾಗ “ಬೆಳಗೆ ಬೇಲಿ ಹಾಕೆಡ” ಹೇದು ಉದಾಹರಣೆಯನ್ನೂ ಹೇಳಿದವು!
ಅತ್ತೆಗೂ ಸುರುವಿಂಗೇ ಅರ್ತ ಆಗಿರದೋ ಏನೊ, ಪೂರ್ತ ವಿವರ್ಸುವಾಗ ಗೊಂತಾತಾಯಿಕ್ಕು! 😉

~

ಕೇಳಿದಿರೋ – ಮೂರು ಮಾತುಗೊ.
ಪಕ್ಕನೆ ಕೇಳುವಗ “ಇದೆಂತ ಬೆಗುಡು” ಹೇದು ಅನುಸುಗು. ಆದರೆ ಒಳ ಇಳುದು ಅರ್ತ ಮಾಡಿಗೊಂಬಗ, ಅಪ್ಪನ್ನೇ – ಹೇಳಿ ಆವುತ್ತು.
ಪಕ್ಕನೆ ಅರ್ತ ಆಗಲಿ ಹೇದು ಅದರ ಸುಲಬ ಮಾಡಿ ಹೇಳ್ತ ಮರಿಯಾದಿ ಇಲ್ಲೇಡ; ಅದರ ಹೀಂಗೇ ಹೇಳುಸ್ಸಡ. ನೆರಿಯದಜ್ಜನ ಹತ್ತರೆ ಇನ್ನೂ ಈ ನಮುನೆದು ಇದ್ದತ್ತೋ ಏನೊ, ಉಮ್ಮಪ್ಪ. ಶೇಡ್ಯಮ್ಮೆ ಗೋಪಾಲಣ್ಣಂಗೆ ಗೊಂತಿಪ್ಪಲೂ ಸಾಕು! 🙂

~

ರೂಢಿಲಿ ಬಂದ ಹಲವು ಮಾತುಗೊಕ್ಕೆ ನಾವು ಶಬ್ದಾರ್ಥ ತೆಕ್ಕೊಂಬಲಾಗ, ಧ್ವನ್ಯಾರ್ಥವೂ ತೆಕ್ಕೊಂಬಲಾಗ; ಅದರ ಭಾವಾರ್ಥ ತೆಕ್ಕೊಳೇಕು – ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.
ಹಾಂಗೆ ವಿವರ್ಸುವಾಗ ಇಷ್ಟೆಲ್ಲ ಸಂಗತಿಗೊ ನೆಂಪುಮಾಡಿ ಕೊಟ್ಟವು.
ನಿಂಗಳ ಪೈಕಿಯೋರುದೇ ಹೀಂಗಿರ್ತ ಮಾತುಗೊ ಹೇಳಿದ್ಸರ ಕೇಳಿ ಅರಡಿಗೋ?
ಹಾಂಗಾರೆ ಬೈಲಿಂಗೆ ಹಂಚಿಗೊಳ್ಳಿ ಆಗದೋ?

ಒಂದೊಪ್ಪ: ಮಕ್ಕೊ ಸಣ್ಣ ಇಪ್ಪಾಗಳೇ ಸಂಸ್ಕಾರ ಕಲಿಶಿರೆ, ದೊಡ್ಡ ಆದಮತ್ತೆ ಬೇಲಿಹಾಕುತ್ತ ಕೆಲಸ ಬಾಕಿ ಇರ್ತಿಲ್ಲೆ. ಅಲ್ಲದೋ?

18 thoughts on ““ಅಸಂಬದ್ಧ” ಅನುಸುವ ನೀತಿಮಾತುಗೊ..!

  1. ನಿಂಗೊಗೆ ಗೊಂತಿಕ್ಕು.” ತಲೆಗೆ ಎರದ ನೀರು ಕಾಲಿಂಗೆ ಬಕ್ಕು” ಹೇಳುವದರ ಅರ್ಥ ಹೀಂಗಾವುತ್ತು. ತಲೆಗೆ ನೀರು ಎರವಗ ಮೇಲಂಗೆ ಕೈ ನೆಗ್ಗೆಕ್ಕಾವುತ್ತು. ಅದು ಕಕೆಳ ಇಳುದು ಕಾಲಿಂಗೆ ಬರೆಕ್ಕನ್ನೆ. ಇದು ಸಾಮಾನ್ಯ ಅರ್ಥ.ನಮ್ಮಂದ ಮೇಲಿದ್ದೋರು ಹೇಳಿದರೆ ಹೆರಿಯೋರು. ಅವಕ್ಕ ನಾವು ಗೌರವ ಕೊಡುವದರ ನೋಡಿ ನಮ್ಮ ಮಕ್ಕೊ ಅನುಸರಿಸಿ ಸಅವುದೇ ಆ ಕ್ರಮವ ಮುಂದುವರುಸೆಕ್ಕು. ಹಾಂಗೇ ನಮ್ಮ ಸಂಸ್ಕೃತಿ ಮುಂದುವರಿಯೆಕ್ಕು ಹೇಳುವದು ಗೂಢಾರ್ಥ.
    “ಗಾಳಿ ಬಂದ ಹಾಂಗೆ ಕೊಡೆ ಹಿಡಿಯೆಕ್ಕು” ಹೇಳುವದೂ ಇದೇ ರೀತಿ ವಿರೋಧ ದಿಕ್ಕ್ಂಗೆ ಕೊಡೆ ಹಿಡುದರೆ !ಗಾಳಿಗೆ ಕೊಡೆ ಹಾರಿ ಹೋಗದೋ!

  2. ಅಸಂಬದ್ಧ ಹೇಳಿ ಕಂಡಾರೂ ಒಳಾರ್ಥ ನೋಡಿರೆ ಅದರ ಮಹತ್ವ ಗೊಂತಾವ್ತು.
    ನಮ್ಮ ಕೆಲವೊಂದು ಹಳೇ ಅಚಾರಂಗೊಕ್ಕೂ ಇದೇ ಅವಸ್ಥೆ ಬಯಿಂದು. ಎಂತಕೆ ಹೇಳಿ ಕೇಳಿರೆ ವಿವರುಸಲೆ ಗೊಂತಿಲ್ಲೆ. ಅಷ್ಟಪ್ಪಗ ಇದೆಲ್ಲಾ ಮೂಢ ನಂಬಿಕೆಗೊ ಹೇಳಿ ಜೆನಂಗೊ ಜಾರುತ್ತವು.
    ಮೊನ್ನೆ ಒಬ್ಬ ಮಾತಾಡುವಾಗ ಹೇಳಿದ “ಕಣ್ಣುಮುಚ್ಚಿ ನೋಡ್ಲಕ್ಕು” ಹೇಳಿ 🙂

  3. ಹರೇರಾಮ. ಮದಲಾಣವರ ಮಾತಿಲ್ಲಿ ವ್ಯಂಗ್ಯಾರ್ಠಲ್ಲಿಯೂ ಕೆಲವು ನೀತಿಇಕ್ಕು ಅದಕ್ಕೇ ಹಳೆಬೇರು ಹೊಸಚಿಗುರು ಹೇಳುಸ್ಸು
    ಈ ಸುದ್ದಿಗೊಂದು ಒಪ್ಪ

  4. ಜಯಗೌರಿ ಕೇಳಿದ್ದಕ್ಕೆ ಉತ್ತರ ತಿಳಿವೆ ಕುತೂಹಲ ಎನಗೂ ಇದ್ದು. ಗೊಂತಿಪ್ಪೋರು ತಿಳಿಶಿ.

  5. ಒಪ್ಪಣ್ಣನ ಒಪ್ಪದ ಮಾತಿಂಗೆ ಒಂದು ಒಪ್ಪ. ನಮ್ಮ ಹಿರಿಯರಲ್ಲಿ ಹೀಂಗಿಪ್ಪ, ನಮ್ಮ ಹವ್ಯಕ ಭಾಷೆಗೇ ಸೀಮಿತವಾದ ಹಲವಾರು ನುಡಿಗಟ್ತುಗೊ / ಗಾದೆ ಮಾತುಗಳ ಭಂಡಾರವೇ ಇಕ್ಕು. ಅದರ ಎಲ್ಲವನ್ನೂ ಸಂಗ್ರಹಿಸಿ ದಾಖಲಿಸುವ ಕೆಲಸ ಆಯೆಕ್ಕು. ಇಲ್ಲದ್ದರೆ ನಮ್ಮ ನಂತ್ರಕ್ಕೆ / ಮಕ್ಕಳ ಕಾಲಕ್ಕಪ್ಪಗ ಎಲ್ಲಾ ನಶಿಸಿ ಹೋಕು. ಓಪ್ಪಣ್ಣನ ಬೈಲು ಈ ನಿಟ್ಟಿಲೆ ಕೆಲಸ ಮಾದ್ತಾ ಇಪ್ಪದು ಸ್ತುತ್ಯರ್ಹ.

    ಆನೀಗ ನಿಂಗಳ ಹೊಸಾ ಅಭಿಮಾನಿ!!!….

  6. ಏವ ಅಜ್ಜ ಹೇಳಿ ಗೊಂತಿಲ್ಲೆ.ಒಬ್ಬ ಅಜ್ಜ ಬೈಲ ನಡುಕೆ ನಿಂದೊಂಡು ಸೊಂಟಲ್ಲಿ ಕೈ ಮಡುಗಿಗೊಂಡು ಹೀಂಗೆ ಹೇಳಿದಡೊ.” ಇದರಿಂದ ಕೆಳವೂ ಮೇಗೆಯೂ ಎನಗೇ ಇಪ್ಪದು ಹೇಳಿ!” ಅಜ್ಜ ಹೇಳಿದ್ದು ಅಂಬಗ ಆರಿಂಗೂ ಅರ್ಥ ಆಯಿದಿಲ್ಲೆಡೊ.ಸೊಂಟದ ಕೆಳ ಮೇಲೆಯೋಅಥವಾ ಬೈಲ ಕೆಳ ಮೇಲೆಯೋ ಕೇಳಿದೋರು ಅರ್ಥ ಮಾಡಿಗೊೞೆಕ್ಕಷ್ಟೆ. ಹಾಂಗಾತು ಒಪ್ಪಣ್ನನ ಗಾದೆ ಮಾತುಗೊ. ಫಷ್ಟಾಯಿದು

  7. ನಮ್ಮ ಭಾಷೆಲಿ ಬರದ ಶುದ್ದಿಗಳ ಓದಿ ಕೊಶಿಆತು.
    ಆನು ಬರವಲೆ ಹೆರಟರೆ ಕನ್ನಡ ಶಬ್ದಂಗ ಜಾಸ್ತಿ ಬಂದು , ’’ಜೆಗಿಲು ಹಾರ್ಲೆ ಎಡಿಯದ್ದೊನು ಆಕಾಶಕ್ಕೆ ಹಾರಿದಾಂಗೆ‘‘ ಆವ್ತನ್ನೆ 🙂 🙂

    1. ವಿಶ್ವಮಾವಾ°,
      ಬೈಲಿಂಗೆ ಸ್ವಾಗತ. ಬೈಲ ಕರೇಲೇ ಹೋಯ್ಕೊಂಡಿದ್ದೋರು ಬೈಲಿಂಗೆ ಇಳುದ್ದು ಕಂಡು ಕೊಶೀ ಆತು!!

      ಮಾವಾ..,
      [ಆನು ಬರವಲೆ ಹೆರಟರೆ ಕನ್ನಡ ಶಬ್ದಂಗ ಜಾಸ್ತಿ ಬಂದು , ’’ ಜೆಗಿಲು ಹಾರ್ಲೆ ಎಡಿಯದ್ದೊನು ಆಕಾಶಕ್ಕೆ ಹಾರಿದಾಂಗ ‘‘ ಆವ್ತನ್ನೆ]
      ನಿಂಗೊ ಒಳ್ಳೆ ಗಾದೆಲಿಯೇ ಬರವಲೆ ಸುರು ಮಾಡಿ ಆತು!!! 🙂
      ನಿಧಾನಕ್ಕೆ ಶುದ್ದಿಗಳನ್ನೂ ಬರೇರಿ… ನಿಂಗಳ ಬಾಲ್ಯದ ಕತೆಗಳ ಎಲ್ಲ ಬರೇರಿ ಮಾವಾ… 😉
      ಎಂಗೋ ಓದುತ್ತೆಯಾ°..

      ಬೈಲಿಂಗೆ ಬತ್ತಾ ಇರಿ ಮಾವಾ°…:-)

  8. ಒಪ್ಪಣ್ಣಾ..,
    ಯೇವತ್ರಾಣ ಹಾಂಗೇ ತುಂಬಾ ಲಾಯ್ಕವೂ, ಆಲೋಚನೆಯೂ ಮಾಡೆಕ್ಕಪ್ಪ ಮತ್ತೆ ಬೈಲ ಪತ್ತಾಯ ತುಂಬುಸೆಕ್ಕಪ್ಪಂಥಾ ಶುದ್ದಿ.

    ನೆರಿಯದಜ್ಜ° ಹಲವು ವಿಷಯಂಗಳಲ್ಲಿ ಪರಿಣತರು. ಅನುಭವಲ್ಲಿಯೂ ಅವಕ್ಕೆ ಹೀಂಗಿರ್ತ ಮಾತುಗ ಸಿಕ್ಕಿದ್ದೋ ಏನೋ ಅಲ್ಲದಾ ಒಪ್ಪಣ್ಣ?
    “ಹರಕ್ಕೆ ಸಂದಾಯ ಮಾಡೆಡಾ..” ಹೇಳುಗಡ ನೆರಿಯದಜ್ಜ°. ಅವರ ಸಣ್ಣಪುಳ್ಳಿ ನಿನ್ನೆ ಸಿಕ್ಕಿದವ° ನೆಂಪು ಮಾಡಿದ°. ನಾವು ಹರಕ್ಕೆ ಹೇಳುದು ಸಂದಾಯ ಮಾಡ್ಲೆ ಇಪ್ಪದೇ ಆದರೂ ನಮ್ಮ ಹೆರಿಯೋರು ಎಂತಕ್ಕೆ ಹೀಂಗೆ ಹೇಳಿದವು ಹೇಳಿ ತೋರ್ತಿದಾ!!! ನಮ್ಮ ಜೀವನದ ಕಷ್ಟಕಾಲಲ್ಲಿ ಎಲ್ಲ ದಿಕ್ಕಿಲಿಯೂ ಸೋತಪ್ಪಗ ದೇವರಿಂಗೇ ಶರಣಾಗಿ ಹರಕ್ಕೆ ಹೇಳುದು ಕ್ರಮ. ಅವು ಗ್ರೇಶಿದ್ದದು ಸಿಕ್ಕಿ ಅಪ್ಪಗ ಆ ತೃಪ್ತಭಾವಲ್ಲಿ ಆ ಹರಕ್ಕೆಯ ತೀರ್ಸಿ ಸಾರ್ಥಕ ಅಪ್ಪದು ಲೋಕರೂಢಿ. ಅದೇ ಹರಕ್ಕೆ ನಮ್ಮ ಅರಿವಿಕೆಗೇ ಬಾರದ್ದೆ ನಮ್ಮ ಹೆರಿಯೋರು ಆರಾರು ಹೇಳಿ ಬಾಕಿ ಆಗಿದ್ದಿದ್ದರೆ, ಅದರ ತೀರ್ಸಿಯೇ ತೀರ್ಸೆಕ್ಕಪ್ಪಗ ನವಗೆ ಅವು ಹರಕ್ಕೆ ಹೇಳಿದ ಸಂದರ್ಭ, ಆ ಕಾಲದ ಯಾವ ಮಾಹಿತಿಯೂ, ಆ ಮನಸ್ಥಿತಿಯೂ ಇಲ್ಲದ್ದರೆ ನವಗೆ ಅವು ನಂಬಿಗೊಂಡ ಹರಕೆಯ ಅದೇ ಭಾವನೆಲಿ ತೀರ್ಸುಲೆ ಎಡಿಯ. ಅವು ಹೇಳಿದ ಹರಕೆ ಹೇಳ್ತ ಕಾರಣಕ್ಕೆ ನಾವು ತೀರ್ಸುತ್ತು. ಅದು “ಹರಕ್ಕೆ ಸಂದಾಯವೇ” ಅಪ್ಪದು!!!
    ಮಾಡ್ತ ಕೆಲಸವ ಶ್ರದ್ಧೆಲಿ ಮಾಡು ಹೇಳುದರ ತೂಷ್ಣಿಲಿ ಹರಕ್ಕೆ ಸಂದಾಯ ಮಾಡೆಡಾ ಹೇಳಿದ್ದಾಯಿಕ್ಕು ಅಲ್ಲದಾ?

    ಒಪ್ಪಣ್ಣಾ,

    [ರೂಢಿಲಿ ಬಂದ ಹಲವು ಮಾತುಗೊಕ್ಕೆ ನಾವು ಶಬ್ದಾರ್ಥ ತೆಕ್ಕೊಂಬಲಾಗ, ಧ್ವನ್ಯಾರ್ಥವೂ ತೆಕ್ಕೊಂಬಲಾಗ; ಅದರ ಭಾವಾರ್ಥ ತೆಕ್ಕೊಳೇಕು ]

    ನಿಜವಾಗಿಯೂ ಅಪ್ಪು. ನಮ್ಮ ಹೆರಿಯೋರು ಬೈದರೂ ಅದರಲ್ಲಿ ಜೀವನ ಸೂಕ್ಷ್ಮ ಇತ್ತು ಹೇಳುದರ ನಾವು ಕಾಣುತ್ತು. ನಮ್ಮ ನಿತ್ಯದ ಜೀವನಲ್ಲಿ ಬಪ್ಪ ಮಾತುಕತೆಗಳಲ್ಲಿ ಒಂದೊಂದು ವಾಕ್ಯಲ್ಲಿ, ನಿನ್ನ ಒಂದೊಪ್ಪದ ಹಾಂಗೆ ಹಲವು ಒಪ್ಪ ಮಾತುಗಳ ನವಗೆ ಬಿಟ್ಟುಹೋಯಿದವು. ಈಗಾಣ ಕಾಲಲ್ಲಿ ನಮ್ಮ ಕೆಮಿಗೆ ಈ ವಾಕ್ಯಂಗ ಬೀಳದ್ದೆ ಇಕ್ಕು.. ಆದರೆ ನಮ್ಮ ಬೈಲಿಲಿಪ್ಪ ಹಲವರ ನೆಂಪಿಲಿ ಇನ್ನುದೇ ಇಕ್ಕು ಹೀಂಗಿರ್ತ ಮಾತುಗ.. ಬಹುಶ ಕಾಲಲ್ಲಿ ಒಂದೊಂದಾಗಿ ಹೆರ ಬಕ್ಕು..

    ಒಂದೊಪ್ಪ ಲಾಯ್ಕಾಯಿದು. ಆರಿಂಗೇ, ಯೇವುದಕ್ಕೇ ಆದರೂ ಕೂಡಾ ಸಂಸ್ಕಾರ ಮೆಸ್ತಂಗೆ ಇಪ್ಪಗಳೇ ಆಯೆಕ್ಕು. ಗಟ್ಟಿ ಆದ ಮೇಲೆ ಎಂತ ಮಾಡ್ಲೂ ಎಡಿಯ.

    ಒಪ್ಪಣ್ಣ,
    [ಸಂಜೀವಶೆಟ್ಟಿಯಲ್ಲಿಗೆ ಹೋದರೆ ಹನ್ನೆರಡು ಸೀರೆಯ ಕಟ್ಟ ಹೊರ್ಲೆಡಿತ್ತಿಲ್ಲೆ ಹೇದು ಕಾರನ್ನೇ ತೆಕ್ಕೊಂಡೋಪ ಕಾನಾವು ಡಾಗುಟ್ರೇ ಇದಕ್ಕೆ ಸಾಕ್ಷಿ!]

    🙂 🙂 😉

    ನೆರಿಯದಜ್ಜನ ಸಣ್ಣಪುಳ್ಳಿಯೂ ಅಜ್ಜ° ಹಾಕಿದ ಹೀಂಗಿರ್ತ ಮಾತಿನ ಗೆರೆ ದಾಂಟುತ್ತಾ ಇಲ್ಲೆಡ್ಡ!! ನಿನ್ನೆ ಗುಟ್ಟಿಲಿ ಹೇಳಿದ°!!!
    😉 🙂 😉

  9. ‘ಅಬ್ಬೆಗೆ ಅಶನ ಬಳುಸೆಡ’ ಇದರ ಓದಿಯಪ್ಪಗ ಅಬ್ಬೆಗೆ ಅಶನ ಕೊಡದ್ದವರ ನೆಂಪಾತು.ಅಬ್ಬೆಯ ವೃದ್ಧಾಶ್ರಮಲ್ಲಿ ಮಡುಗಿ(?)ಸಾಂಕುವವೂ ಇದ್ದವು.ತಿಂಗಳಪ್ಪಗ ಪೈಸೆ ಎಣುಸಿರೆ ಆತು.ಸತ್ತಪ್ಪಗ(ಈ ಶಬ್ದಕ್ಕೆ ಕ್ಷಮೆಯಿರಳಿ) ತಿಳುಶುತ್ತವು.ಗೌಜಿಲಿ ಉತ್ತರಕ್ರಿಯೆ ಮಾಡುತ್ತವು ಮನೆಲಿ.ನಮ್ಮ ಸಮಾಜಲ್ಲಿಯೂ ಈ ರೀತಿ ನೆಡವಲೆ ಸುರುವಾಯಿದು ಹೇಳುವದು ಬೇಜಾರಿನ ಸಂಗತಿ.

  10. ಅಸಂಬದ್ಧ ಆಗಿ ಹೆರಾಂದ ಕಂಡ್ಟೂ ಒಳಾಣ ಗೂಡಾರ್ಥ ನಿಜವಾಗಿಯೂ ಅದ್ಭುತ. ಆಡುಮಾತಿನ ಹಾಂಗಿಪ್ಪ ಕೆಲವೇ ಕೆಲವು ಶಬ್ದಂಗಳಲ್ಲಿ ಅಷ್ಟು ದೊಡ್ಡ ನೀತಿ ಅಡಗೆಂಡಿಪ್ಪದರ ಮೆಚ್ಚೆಕು. ಒಪ್ಪಣ್ಣ ವಿವರಣೆ ಕೊಡದ್ರೆ ಅರ್ಥವೇ ಆವ್ತಿತಿಲ್ಲೆ. ಬೇಲಿ ಹಾಕುವ ವಿಚಾರ ನೋಡಿ ಅಪ್ಪಗ “ಸೆಸಿಯಾಗಿಪ್ಪಗ ಬಗ್ಗದ್ದು, ಮರ ಅಪ್ಪಗ ಬಗ್ಗುಗೊ” ಹೇಳುವ ಗಾದೆ ನೆಂಪಾತು.

  11. ನಮ್ಮ ಹೆರಿಯೋರ ಅನುಭವದ ಮಾತುಗೊ ಅರ್ಥವತ್ತಾಗಿದ್ದು.

  12. ಓಹ್.ಹೀಂಗೂ ಕೆಲವೊಂದು ನೀತಿ ಮಾತುಗ ಇದ್ದು ಹೇಳಿ ಗೊತ್ತಾತು…ನಮ್ಮತ್ಲಾಗಿ ಊರಿಗೆ ಹೋದ ಕೂಡ್ಲೆ ಎಲ್ಲವೂ ‘ಏನು’ ಕೇಳ್ತವು..ನಾವು ‘ಒಳ್ಳೆದು’ ಹೇಳ್ತು..ಇದರ ಅರ್ಥ ‘ಸೌಖ್ಯವೇ/ಹೇಂಗಿದ್ದಿ’ ಹೇಳಿ ಕೇಳುದಾದರೂ ಅದರ ಹಿಂದೆಯೂ ಯಾವುದಾದರೂ ಕಥೆ ಇಕ್ಕ?
    ಧನ್ಯವಾದ ಒಪ್ಪಣ್ಣ.

  13. ಒಗಟಿನ ಹಾಂಗೆ ಮಾತಾಡಿರೂ ,ಅರ್ಥಗರ್ಭಿತವಾಗಿದ್ದು.

  14. ಯಬ್ಬಾ ಎನಗುದೆ ವಿವರ್ಸಿ ಬರೆಯದ್ರೆ ಅರ್ಥವೇ ಆವುತ್ತಿತಿಲ್ಲೆನ್ನೇ?
    ಹಳಬ್ಬರ ಮಾತಿನ ಸಾರ ಭಾರೀ ಲಾಯಿಕಪ್ಪ….
    ಬೇರೇ ತರದ ಶುಧ್ಧಿ ಇಂದು, ಅದೂ ಭಾರೀ ಲಾಯಿಕಾಯಿದು…
    ಯಾವಾಗಲಿನ ಹಾಂಗೆ ಒಂದೊಪ್ಪದೆ ಪಷ್ಟಾಯಿದು…
    ಮೇಲೆ ಚೆನ್ನೈ ಭಾವ ಬರದ ವಾಕ್ಯವನ್ನೂ ವಿವರ್ಸದ್ರೆ ಎನಗೆ ಅರ್ಥವೇ ಆಗನ್ನೆ?

  15. ಬೆನ್ನು ತಟ್ಟಿ ಸೊಂಟಕ್ಕೆ ಜೆಪ್ಪಿದಾಂಗೆ ಆತು ಬಾವ 😀 . ಮತ್ತೆ ಒಂದೊಪ್ಪ ಓದಿದ ಮತ್ತೇ ಸಮಧಾನ ಆತಷ್ಟೇ ಇದಾ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×