ಹೃದಯಲ್ಲಿಪ್ಪ ಆತಿಥ್ಯ ಕಾರ್ಯಕ್ಕೂ ಬರಳಿ. .

May 24, 2013 ರ 12:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತೆಕ್ಕುಂಜೆ ಭಾವನ ಉಪ್ನಾನಕ್ಕೆ ಬೈಲಿನೋರು ಒಂತಿಂಗಳು ಮದಲೇ ಹೆರಟು ನಿಂದಿತ್ತಿದ್ದವು. ಉಪ್ನಾನದ ಮೂರ್ತ ನಿಗಂಟಾದ ದಿನಂದಲೇ ಟೀಕೆಮಾವಂಗೆ ತಲೆ ತೊರುಸಿಗೊಂಡಿತ್ತಾಡ, ಮುಂಡಾಸು ಕಟ್ಟುತ್ತ ಅಂಬೆರ್ಪಿಲಿ! ತೆಕ್ಕುಂಜತ್ತೆಗಂತೂ – ಅಮ್ಮಂದ್ರ ದಿನವೇ ಮಗನ ಉಪ್ನಾನ!
ಬೈಲಿನ ಹಲವು ಜೆನಕ್ಕೆ ಒಂದರಿ ಕಂಡು ಪರಸ್ಪರ ಮಾತಾಡ್ಳೆ ಕೊಶಿ! ಎಲ್ಲೋರಿಂಗೂ ಗವುಜಿಯೇ. ಎಲ್ಲೋರದ್ದೂ ಸುದರಿಕೆಯೇ. ಕಾರ್ಯಕ್ರಮ ಚೆಂದಲ್ಲಿ ಕಳುದ್ದಕ್ಕೆ ಹೋಳಿಗೆಯೇ ಸಾಕ್ಷಿ! ಅದಿರಳಿ.
ಸುದರಿಕೆ ಹೇಳುವಾಗ, ಒಪ್ಪಣ್ಣಂಗೆ ಎರಡು ವಿಷಯಂಗೊ ನೆಂಪಪ್ಪದು.
ಒಂದು – ಓ ಮನ್ನೆ ನೆರೆಕರೆಯ ಕಿಟ್ಟಮಾವ ಹೇಳಿದ ಒಂದು ಸಂಗತಿ, ಇನ್ನೊಂದು ಪುತ್ತೂರು ಬ್ರಮ್ಮಕಲಶದ ಎಡೆಯ ಗವುಜಿ.
~
ಕಿಟ್ಟಮಾವ ಹೇಳಿದ ಸಂಗತಿ ಎಂತರ?
ಈಗಾಣ ಜೆಂಬ್ರದ ಸುದರಿಕೆ, ಉಪಚಾರಂಗಳ ಬಗ್ಗೆ.
ಓ ಅಲ್ಲಿ, ಮಂಜೇಶ್ವರ ಹತ್ತರೆ ಒಂದು ಹೋಲಿಲಿ ಮದುವೆ ಆಡ.
ಕೂಸಿನ ಕಡೆ ಆತ್ಮೀಯತೆಂದಾಗಿ ಮೂರ್ತಕ್ಕಪ್ಪಗ ಎತ್ತಿಗೊಳೇಕು – ಹೇದು ಆಲೋಚನೆ ಮಾಡಿ ಉದೆಕಾಲಕ್ಕೆ- ಶರ್ಮಪ್ಪಚ್ಚಿ ಟ್ರಾನ್ಸುವರು ಪೆಟ್ಟಿಗೆ ಸುತ್ತ ವಾಕು ನೆಡವ ಹೊತ್ತಿಂಗೇ – ಬಸ್ಸು ಹತ್ತಿ ಹೆರಟೂ ಆತು, ಬೆನ್ನು ಬೆನ್ನಿಂಗೆ ಬಸ್ಸುದೇ ಸಿಕ್ಕಿದ ಕಾರಣ ದಾರಿಲಿ ಎಂತೂ ತಿಂದುಗೊಂಬಲೂ ಎಡಿಗಾಯಿದಿಲ್ಲೇಡ. ಹೋಟ್ಳು ತಿಂಡಿ ತಿಂದರೆ ಆಗದ್ದೆಯೂ ಬತ್ತಾಡ! ಅದಿರಳಿ.
ಅಂತೂ ಎತ್ತಿತ್ತು ಮಂಜೇಶ್ವರಕ್ಕೆ.
ಮನೆಲಿ ಮದುವೆ ಎಳಗುಸಿರೆ “ಏನೂ” ಕೇಳೇಕಾದ್ಸು ಇದ್ದು; ಆದರೆ ಹೋಲಿಲಿ ಮದುವೆ ಆದರೆ ಆ ಬಂಙ ಇಲ್ಲೆನ್ನೆ!
ಆರುದೇ ಕೇಳಿದ್ದವೂ ಇಲ್ಲೆ. ಏನೂ ಕೇಳದ್ದ ಮತ್ತೆ ಆಸರಿಂಗೆ ಹೇಂಗೆ ಸಿಕ್ಕುಗು? ಆಸರಿಂಗೆಯೂ ಸಿಕ್ಕಿದ್ದಿಲ್ಲೆ. ಆಸರಿಂಗೆ ಕುಡಿಯಲೆ ಹೋದ್ಸಲ್ಲ, ಮೂರ್ತಕ್ಕೆ ಹೋದ್ಸು; ಮೂರ್ತಕ್ಕೆ ಎತ್ತಿದವು. ಕಣ್ತುಂಬ ನೋಡಿ ಮನತುಂಬ ಆಶೀರ್ವಾದವೂ ಮಾಡಿದವು.
ಮೂರ್ತದ ಗಡಿಬಿಡಿ ಮುಗುದ ಮತ್ತೆ ಗುರ್ತದ ಒಬ್ಬ ಬಾವಯ್ಯ° ಸಿಕ್ಕಿದನಾಡ.
’ಉಪಾಹಾರದ ವೆವಸ್ತೆ’ ಇದ್ದೋ – ಕೇಟವು ಕಿಟ್ಟಮಾವ. ಇದ್ದು ಇದ್ದು – ಅದಾ, ಓ ಆಚ ಹೊಡೆಲಿ ಇದ್ದು, ಅಲ್ಲಿ ಹೋಗಿ ಕೂದುಗೊ – ಹೇಳಿದನಾಡ; ಅಂಬೆರ್ಪಿನ ಭಾವಯ್ಯಂಗೆ ಅಷ್ಟೇ ಹೇಳುಲೆ ಪುರುಸೊತ್ತಿದ್ದದು.
ಹೊಡೆ ಗೊಂತಾತನ್ನೇ, ಹಾಂಗೆ ಹೋವುತ್ತದಕ್ಕೆ ಅಡ್ಡಿಲ್ಲೆ ಹೇದು – ಸೀತ ಹೋಗಿಯೇ ಬಿಟ್ಟವು ಕಿಟ್ಟಮಾವ. ಆ ಹೊಡೆಲಿ ಹೋಗಿಹೋಗಿ ಅಡಿಗೆ ಕೊಟ್ಟಗೆಯೇ ಎತ್ತಿತ್ತು. ಅಡಿಗೆಸತ್ಯಣ್ಣಂದೇ ಅಡಿಗೆ ಅಲ್ಲಿ – ಯೇ ಸತ್ಯಣ್ಣ, ನಮಸ್ಕಾರಾ – ಹೇಳಿದವು ಕಿಟ್ಟಮಾವ. ಕಾಪಿ ಕುಡಿಯಲೆ ಬಂದದು ಹೇದು ಸತ್ಯಣ್ಣಂಗೆ ಗೊಂತಾಗದ್ದೆ ಇಕ್ಕೋ – ಅದಾ, ಓ ಅಲ್ಲಿ ಮೇಜು ಕುರ್ಚಿ ಮಡಗಿದ್ದಲ್ಲದೋ – ಅಲ್ಲಿ ಕಾಪಿಚಾಯ ವೆವಸ್ತೆ ಮಡಗಿದ್ದವು – ತೋರ್ಸಿಕೊಟ್ಟವು.
ವಿಷಯಂಗೊ ವಿವರ ಮಾತಾಡ್ಳೆ ಮತ್ತೆ ಕಾಂಬೊ – ಹೇದು ಇಬ್ರೂ ಹೆರಟವು; ಸತ್ಯಣ್ಣ ತಾಳಿನ ಒಗ್ಗರಣೆ ಹಾಕಲೆ ಹೋದ.
ಅಲ್ಲೇ ಒರುಂಕಿಲಿದ್ದಿದ್ದ ಕುರ್ಶಿಲಿ ಕೂದೂ ಆತು. ಬಳುಸುತ್ತವೋದು ಕಾದೂ ಆತು. ಕಾದುಗೊಂಡಿದ್ದ ಹಾಂಗೇ ಮತ್ತೂ ಇಬ್ರು ಬಂದವು, ಕಾಪುಡಿವಲೆ.
ಕೂದವೆಲ್ಲ ಕೂದಮತ್ತೆ ಒಂದು ಅತ್ತೆ ಬಂತಾಡ, ಎಂತ, ಕಾಪಿಕುಡಿಯಲೆ ಕೂದ್ಸೋ – ವಿಚಾರ್ಸಿಕ್ಕಿ ಅತ್ತೆ ಹೋತು.
ರಜ ಹೊತ್ತು ಕಳುದ ಮೇಗೆ ಬಾಳೆಲೆ ತಂದುಕೊಟ್ಟಿಕ್ಕಿ, ಗ್ಲಾಸುದೇ ಮಡಗಿಕ್ಕಿ ಇನ್ನೊಂದು ಅತ್ತೆ ಇತ್ತೆ ಹೋತು.
ಮತ್ತೂ ಹನಿಯ ಹೊತ್ತು ಕಳುದ ಮೇಗೆ ಒಬ್ಬ ಭಾವಯ್ಯ° ಒಂದು ಚಮ್ಚಲ್ಲಿ ಚಟ್ಣಿ ಬಳುಸಿದ.
ಇನ್ನೊಬ್ಬ ಕ್ಷೀರ ಬಳುಸಿದ್ದು – ಸತ್ನಾರ್ಣ ಪೂಜೆಯ ಉಂಡೆಪಚಾದದಷ್ಟು.
ಅಬ್ಬ – ಅಂತೂ ಇಡ್ಳಿ ಬಂತು. ಅದನ್ನೂ ರೂಪತ್ತೆಯೇ ಬಳುಸಿಗೊಂಡು ಬಂದ್ಸು.
ಒಂದೇ ಒಂದು ಇಡ್ಳಿ ಬಳುಸಿತ್ತು. ಕಿಟ್ಟಮಾವನ ಮೋರೆ ನೋಡಿ ಎಂತ ಅನುಸಿತ್ತೋ ಏನೋ – “ಇನ್ನೊಂದು ಬೇಕೋ?” ಕೇಳಿತ್ತಾಡ!
ಉದಿಯಪ್ಪಗ ಹಶು ಹೊಟ್ಟೆಲಿ ಹೋದ ಬಚ್ಚಲೂ, ಆಸರೂ, ಬೀಪಿಯೂ, ಎಲ್ಲವೂ ಆಗಿ ಕಿಟ್ಟಮಾವಂಗೆ “ಬೇಕು” ಹೇಳ್ತಷ್ಟು ಶೆಗ್ತಿ ಮಾಂತ್ರ ಒಳುದ್ದದೋ ಏನೋ!
~

ಹೃದಯಲ್ಲಿಪ್ ಆತಿಥ್ಯ ಕೃತಿಯಾಗಿ ಕೈಗೆತ್ತಲಿ
ಹೃದಯಲ್ಲಿಪ್ಪ ಆತಿಥ್ಯ ಕೃತಿಯಾಗಿ ಕೈಗೆತ್ತಲಿ

ಇನ್ನೊಂದು ಶುದ್ದಿ – ಓ ಮೊನ್ನೆ ಪುತ್ತೂರು ಬ್ರಮ್ಮಕಲಶ ಕಳಾತಲ್ಲದೋ – ಗೌಜಿಯೋಗೌಜಿ!
ಆ ಎಲ್ಲಾ ಕಾರ್ಯಕ್ರಮಂಗಳ ಅಚ್ಚುಕಟ್ಟಾಗಿ ನೆಡೆಶಿ, ಕಾರ್ಯಕ್ರಮವ ಗವುಜಿ ಎಳಗುಸಿದವು ಮಾಲಿಂಗೇಶ್ವರನ ಭಕ್ತರು. ಶಿಲಾಮಯ ದೇವಸ್ಥಾನವ ಕಟ್ಟಿ, ಬೇಕುಬೇಕಾದ ಹಾಂಗೆ ವೆವಸ್ಥೆಗಳ ಮಾಡಿ, ತಂತ್ರಿಮುಖೇನ ಬ್ರಮ್ಮಕಲಶ ಎರದವು – ಬರೇ ಹನ್ನೊಂದು ತಿಂಗಳ್ಳಿ ಆಡ.
ಮಾಷ್ಟ್ರುಮನೆ ಅತ್ತೆ ಮಾಲಿಂಗೇಶ್ವರನ ಸನ್ನಿಧಿಗೆ ಹೋಗಿ ಮೆಟ್ಟಿನಜೋಡು ಬಿಟ್ಟಿಕ್ಕಿ ಬಂದು, ಮನೆಲಿ ಕಾಲುನೀಡಿ ಕೂದು ಮಾತಾಡಿಗೊಂಡಿತ್ತವು ಮೊನ್ನೆ. ವಿಶೇಷವಾಗಿ ಊಟೋಪಚಾರದ ವ್ಯವಸ್ಥೆ ಅಂತೂ ಅದ್ಭುತ ಆಡ; ಲಕ್ಷಗಟ್ಳೆ ಜೆನರ ಸುಧಾರಣೆ ಮಾಡುವ ಊಟದ ಛತ್ರ. ಅಲ್ಲಲ್ಲಿ ಅಲ್ಲಲ್ಲಿ ಸಾಲುಗೊ, ಸಾಲಿನ ಕೊಡಿಲಿ ಊಟದ ವೆವಸ್ಥೆ. ಅಂತೇ ವೆವಸ್ತೆ ಅಲ್ಲ, ಆ ವೆವಸ್ಥೆ ನೆಡೆಶಲೆ ಕಾರ್ಯಕರ್ತರು. ಆ ಕಾರ್ಯಕರ್ತರ ಮೋರೆಲಿ ಸದಾ ಇದ್ದಿದ್ದ ನೆಗೆ. ಆ ನೆಗೆಯ ಮೂಲಕ ಪ್ರಕಟಪ್ಪ ಆತಿಥ್ಯ, ಹೊಟ್ಟೆತುಂಬ ಬಳುಸಿಕ್ಕಿ, “ಇನ್ನೂ ಬೇಕೋ?” – ಇನ್ನೂ ಬೇಕೋದು ಕೇಳ್ತದು – ಇದೆಲ್ಲವೂ ಹೋದೋರ ಮನಸ್ಸಿಲಿ ಒಳಿತ್ತ ನಮುನೆದು.
~

ಈ ಎರಡು ಘಟನೆಗೊ ಒಂದರ ಹಿಂದೆ ಒಂದರ ಮಡಗಿ ಆಲೋಚನೆ ಮಾಡಿರೆ ತಲಗೆ ಯೇವ ವಿಷಯ ಬತ್ತು?
ಸುರೂವಾಣದ್ದು – ಒಂದು ಖಾಸಗಿ ಜೆಂಬ್ರದ ಶುದ್ದಿ.
ಜೆಂಬ್ರದ ಕೊರತ್ತೆ ಹುಡ್ಕಲೆ ಸಾವಿರ ಜೆನ ಇದ್ದವು. ಒಪ್ಪಣ್ಣನೂ ಹಾಂಗೆಯೋದು ನಿಂಗೊ ಗ್ರೇಶಿಕ್ಕೆಡಿ. ಇದು ಜೆಂಬ್ರದ ಕೊರತ್ತೆ ಹೇಳಿದ್ದಲ್ಲ. ಇದು ಆತಿಥ್ಯದ ಕೊರತ್ತೆ.
ಜೆಂಬ್ರ ತೆಗದೋನ ಆತಿಥ್ಯ ಅಲ್ಲ; ಅಲ್ಲಿ ಬಳುಸುಲೆ ನಿಂದೋರ ಮನಸ್ಸಿಲಿಪ್ಪ ಆತಿಥ್ಯದ ಕೊರತ್ತೆ ಅಷ್ಟೆ!
ಬಾಳೆಬುಡಲ್ಲಿ ಕೂರ್ಸಿದ ಮತ್ತೆ ಗೊಂತಿದ್ದುಗೊಂಡೇ ಉಪೇಕ್ಷೆ ಮಾಡಿರೆ ಹೇಂಗಕ್ಕು?
ಹೊಟ್ಟೆತುಂಬ ಬಳುಸುದು ನಮ್ಮ ಕ್ರಮ. ಅದರ್ಲಿ ಒಂದ್ನೇದು ಬಳುಸಿಕ್ಕಿ – ಎರಡ್ಣೇ ಇಡ್ಳಿಯೇ ಬೇಕೋ ದು ಕೇಳಿರೆ ಹೇಂಗಕ್ಕು?! ನಾಕಾಣೆ ಪಾವಲಿಯಷ್ಟು ದೊಡ್ಡ ಇಡ್ಳಿ ಒಂದರ್ಲಿ ಎಂತರ ಹೊಟ್ಟೆ ತುಂಬುಸ್ಸು ಬೇಕೇ!
ಆ ಜೆಂಬ್ರಲ್ಲಿ ಹೇಳಿ ಅಲ್ಲ, ಅಲ್ಲಿ ಬಳುಸಲೆ ಬಂದ ರೂಪತ್ತೆಯ ಮನೆಗೇ ಹೋದರೂ ಹಾಂಗೇ ಆಗದ್ದೆ ಇರ.
ಎರಡ್ಣೇದು ಸಾರ್ವಜನಿಕ ಕಾರ್ಯಕ್ರಮದ ಸಂಗತಿ.
ಕಾರ್ಯಕ್ರಮದ ಆಯೋಜನೆಯ ಲೆಕ್ಕಲ್ಲೇ ಜೆನಂಗೊ ಬಂದರೂ ಅವಕ್ಕೆಲ್ಲೋರಿಂಗೂ “ಬೇಕೋ ಬೇಕೋ”ದು ಕೇಳಿ ಬಳುಸುತ್ತ ಔದಾರ್ಯ ಕಾರ್ಯಕರ್ತರಿಂಗಿದ್ದತ್ತು. ಎಲ್ಲೋರುದೇ ತೇಗಿ ಅಪ್ಪಗಳೇ ಮಾಲಿಂಗೇಶ್ವರಂಗೆ ತೃಪ್ತಿ ಹೇದು ಆ ಕಾರ್ಯಕರ್ತರು ಗ್ರೇಶಿದಾಂಗೆ ಇದ್ದತ್ತಡ.

~
ಸುಧರಿಕೆ ಮಾಡ್ತರೆ ಆ ಕೆಲಸಕ್ಕೆ ನ್ಯಾಯ ಕೊಡೇಕು.
ನೆಂಟ್ರ ಮನೆಲೇ ಆಗಿರಳಿ, ತನ್ನ ಮನೆಲೇ ಆಗಿರಳಿ, ಸಾರ್ವಜನಿಕ ಕಾರ್ಯಕ್ರಮಲ್ಲೇ ಆಗಿರಳಿ. “ಏನು” ಕೇಳುವಗ, ಆಸರಿಂಗೆ ಕೊಡುವಗ, ಊಟ ಬಳುಸುವಗ, ನೀರು ಕೇಳುವಗ, ಕುಶಲೋಪರಿ ಮಾತಾಡುವಗ – ಯೇವಗಳೇ ಆಗಿರಲಿ, ಮೋರೆಲಿ ನೆಗೆ, ಹೃದಯಲ್ಲಿ ಪ್ರೀತಿ – ಇದೆರಡೂ ಇದ್ದರೆಯೇ ಆತಿಥ್ಯ ಪರಿಪೂರ್ಣ ಆವುಸ್ಸು. ಅದಕ್ಕೇ ಅಲ್ಲದೋ – ಅತಿಥಿ ದೇವೋ ಭವ – ಹೇಳಿಗೊಂಡಿದ್ದದು ಮದಲಿಂಗೆ!?
ಈಗಾಣ ಆಧುನಿಕ ಯುಗಲ್ಲಿ, ಖಾಸಗೀಕರಣ ಆಯಿದು ಎಲ್ಲವುದೇ.
ಜೆಂಬ್ರಕ್ಕೆ ಹೋಪದು ಸರಿ; ಸುದರಿಕೆ ಮಾಡ್ಳೆ ಕೈ ಬತ್ತಿಲ್ಲೆ; ಎಂತಗೆ? ಸುದರಿಕೆ ಮಾಡಿ ಅಭ್ಯಾಸ ಇಲ್ಲೆ.
ಸುಧರಿಕೆ ಹೇದರೆ ಆತಿಥ್ಯವೇ ಅಲ್ಲದೋ – ಆತಿಥ್ಯ ಕೊಟ್ಟು ಅಭ್ಯಾಸ ಇಲ್ಲೆ. ಮನೆಲಿ ಕೋಣೆ ಒಳ ಮಾಂತ್ರ ಇಪ್ಪದು; ಹೆರ ಬಂದರೆ ಅಲ್ಲದೋ ಜೆನರ ಪರಿಚಯ ಅಪ್ಪದು; ಹೆರ ಬಂದರೆ ಅಲ್ಲದೋ ಆತಿಥ್ಯ ಅರಡಿವದು!?
ನಮ್ಮ ಮನೆಯ ಜೆಂಬ್ರಂಗಳಲ್ಲಿ ಹಾಂಗಪ್ಪಲಾಗಪ್ಪಾ – ಹೇದು ಕಿಟ್ಟಮಾವ ನೆಂಪುಮಾಡಿಗೊಳ್ತವು.
ಹಾಂಗೆ ಆಗದ್ದ ಹಾಂಗೆ ಮಾಡೆಕ್ಕಾರೆ ಎಂತಾಯೆಕ್ಕು? “ಆತಿಥ್ಯ”ದ ಬೆಲೆ ಅರಡಿವೋರು ಅಲ್ಲಿರೆಕ್ಕು. ಅದಕ್ಕೇ ಅಲ್ಲದೋ ಮದಲಾಣ ಕಾಲಲ್ಲಿ “ಗುರಿಕ್ಕಾರ್ರು”, ಜೆಬಾದಾರಿಕೆ ಇಪ್ಪೋರು – ಎಲ್ಲ ಒಂದೊಂದು ವಿಭಾಗಂಗಳ ಮುಂದುವರುಸಿಗೊಂಡು ಇದ್ದದು?!
ಎಲ್ಯಾರು, ಎಂತ ಬಿಟ್ಟು ಹೋದರೂ ಗುರಿಕ್ಕಾರ್ರು ಹೇಳಿಕೊಡುಗು.
ಈಗ ಹೇಳಿಕೊಟ್ರೂ ಕೇಳುವೋರು ಇಲ್ಲೆ – ಹೇದು ಕಿಟ್ಟಮಾವನ ಬೇಜಾರು!
~
ಜೆಂಬ್ರಂಗೊ ತೆಗವದು ಸುಲಾಭ.
ಪೈಶೆ ಖರ್ಚು ಮಾಡಿ ಅದರ ಗೆಲ್ಲುಸುದೂ ಸುಲಭ.
ಆದರೆ ಹತ್ತು ಜೆನಕ್ಕೆ ನೆಂಪೊಳಿಸ್ಸು ಮನೆಯೋರ ಆತಿಥ್ಯ & ಅಲ್ಲಿ ಸುಧರಿಕೆ ಮಾಡಿದ ಜೆನಂಗಳ ಹೃದಯ ವೈಶಾಲ್ಯ.
ನಮ್ಮ ಜೆಂಬ್ರಂಗಳಲ್ಲಿ ಹಾಂಗಿರ್ತೋರೇ ಸುಧರಿಕೆ ಮಾಡುವ ಹಾಂಗಾಗಲಿ.
ಹಾಂಗಪ್ಪಲೆ ಎಂತ ಮಾಡೇಕು? – ನಾವುದೇ ಇನ್ನೊಂದು ಜೆಂಬ್ರಲ್ಲಿ ಚೆಂದಕೆ ಸುಧರಿಕೆ ಮಾಡೇಕು.
ನಮ್ಮ ಹೃದಯಲ್ಲಿ ಆತಿಥ್ಯಭಾವವ ತುಂಬುಸಿ, ಬೆಳೆಶಿಗೊಳೆಕ್ಕು.
ಹೃದಯಲ್ಲಿ ಮಾಂತ್ರ ಮಡಿಕ್ಕೊಂಡ್ರೆ ಸಾಲ, ಅದರ ಮೋರೆಯ ಮೂಲಕ ಪ್ರಕಟ ಮಾಡೇಕು. ಕೃತಿರೂಪಲ್ಲಿ ಎದುರಾಣೋನಿಂಗೆ ತೋರ್ಸೇಕು.

ಇಡೀ ಸಮಾಜವೇ ಒಂದಾಗಿ ನೆಡದರೆ, ಎಲ್ಲೋರಿಂಗೂ ಎಲ್ಲರ ಮೇಗೆಯೂ ಆತಿಥ್ಯ ಭಾವನೆ ಬಂದರೆ ಬಾಳು ಬಂಗಾರ ಅಕ್ಕು.
ಅಲ್ಲದ್ದರೆ ಈ ಅಪೂರ್ವ ಆತಿಥ್ಯಕ್ಕೂ ಸಂಬಳ ಕೊಡ್ತ “ಸುಧರಿಕೆ”ಯೋರೇ ಬರೆಕ್ಕಷ್ಟೆ.
ಎಂತ ಹೇಳ್ತಿ?!
~
ಒಂದೊಪ್ಪ: ಇನ್ನೊಬ್ಬಂಗೆ ಕೊಡ್ಸು ತನಗೇ ದಕ್ಕುದು – ಹೇದು ಕಾಂಬುಅಜ್ಜಿ ಹೇಳಿಗೊಂಡಿತ್ತವು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಚೆನ್ನೈ ಬಾವ°

  ಕೊಟ್ಟು ತೆಕ್ಕೊಂಬದೇ ಮರ್ಯಾದಿ. ಅಪ್ಪು., ಶುದ್ದಿ ಒಪ್ಪ ಆಯ್ದು.
  ಏನು ಕೇಳಿರೆ ಒಳ್ಳೆದು, ಹೇಂಗಿದ್ದೆ ಕೇಳಿರೆ ಹುಷಾರಿದ್ದೆ ಹೇಳ್ವ ಉತ್ತರವನ್ನೇ ಪೂರ್ವಾಗ್ರಹವಾಗಿ ಮಡಿಕ್ಕೊಂಡು ಕೇಳಿರೆ ಮತ್ತೆಂತ ಖರ್ಮ ಮಾಡುಸ್ಸು ಬಾವ!.
  ಊಟದ ಹೊತ್ತಂಗೆ ಹೋಗಿ ಉಂಡಿಕ್ಕಿ ಪದ್ರಾಡು ಹೆಟ್ಟುತ್ತ ಪರಿವಾಡಿ ಮದಾಲು ನಿಲ್ಲೆಕು. ಮನೆ ಯೆಜಮಾನ ಹೇಳಿಕೆ ಹೇದ್ದು ಅನುಪ್ಪತ್ಯವ ಚಂದಗಾಣಿಸಿಕೊಡೆಕು ಹೇಳಿರೆ ಸಕಾಲಲ್ಲಿ ಉಪಸ್ಥಿತರಿದ್ದು ಇಡೀ ಜೆಂಬ್ರವ ಅತ್ತಿತ್ತೆ ಸಹಕರಿಸಿ ಚಂದಗಾಣಿಸಿಕೊಡೆಕು ಹೇಳ್ವ ಪ್ರಜ್ಞೆ ಬೆಳೆಕು. ಶುದ್ದಿ ಚಿಂತನೆಗೆ ಕಾರಣವಾಗಲಿ ಹೇದೊಪ್ಪ.

  ಸುರುವಾಣ ಪ್ರಕರಣ ಓದಿಯಪ್ಪಗ ಒಂದು ನೆಂಪಾತು. ನಿಂಗೊಗೆ ಬೇಡದ್ರೂ ಎನಗದರಿಲ್ಲಿ ಹೇಳದ್ದೆ ಕಳಿಯ..

  ಕಳುದೊರಿಶ ಓ ಅಲ್ಲಿ ಒಂದು ಉಪ್ನಾನ. ಪೇಟೆ ಮನೆಲಿಯೇ. ಟೆರೇಸಿಲಿ ಶಾಮಿಯಾನು ಹಾಕಿ ಊಟದ ವ್ಯವಸ್ಥೆ. ಲಾಯಕ ಆಯ್ದು. ಒಂದನೇ ಹಂತಿಲಿ ಕೂರೆಕ್ಕಾದಷ್ಟು ತೆರಕ್ಕು ಇಲ್ಲದ್ದ ಕಾರಣ ಎರಡ್ಣೇ ಹಂತಿಗೆ ಬಲ್ಲೆ ಬಲ್ಲೆ ಹೇಳಿಯಪ್ಪದ್ದೆ ಹೋಗಿ ಕೂದ್ದು. (ಒಂದನೆ ಹಂತಿಗೇಕೆ ಬಳ್ಸಲೆ ಹೋಗದ್ದು ಕೇಳೇಡಿ- ಅಲ್ಪ ಜೆನ ಇದ್ದತ್ತು ಅಡಿಗೆಕೊಟ್ಟಗೆ ಬುಡಲ್ಲಿ ನಿಂದುಗೊಂಡು). ಹಾ°, ಎರಡ್ಣೇ ಹಂತಿಗೆ ಕೂದ್ದು… , ಒಬ್ಬ° ಬಂದ° ಬಾಳೆಕೀತು ಮಡಿಗಿಕ್ಕಿ ಹೋದ°. ಮತ್ತೊಬ್ಬ ಬಂದ° ಪಾಟೆಲಿ ಬಾಳೆ ಕೀತಿಂಗೆ ನೀರು ಎರದಿಕ್ಕಿ ಹೋದ°. ಮೂರ್ನೇನು ನಾಕ್ನೇನು ಬಂದ° ಗ್ಲಾಸು ನೀರು ತಾಳು ಬಳ್ಸಿದ°. ಅಲ್ಲೆ ನಿಂದುಗೊಂಡಿದ್ದ ಒಬ್ಬ° ಅಶನ ಬಳ್ಸಿದ°. ಒಂದು ಹೆಮ್ಮಕ್ಕೊ ಅತ್ತೆ ಬಂದವು – ರಸಂ ಬಳಿಸಿದವು. ಹಪ್ಪಳ, ಉಪ್ನಾಯಿ ಹೇಂಗೋ ಬಾಳೆ ಕೊಡಿಯಂಗೆ ಎತ್ತಿತ್ತು. ಈಗ ಬಳ್ಸಲೆ ಜೆನ ಇಬ್ರೇ. ಹಾಂ°., ಅಷ್ಟಪ್ಪಗ ಮೆಟ್ಳು ಹತ್ತಿಗೊಂಡು ಒಬ್ಬ° ಬಂದ°. ಬೇಗ ಬೇಗ ಸಾಂಬಾರು ಬಳ್ಸಿದ°. ನೆಕ್ಸ್ಟ್ ಮೋರ್ಕೊಳಂಬು ಪಾಡ್ಳೆ ಹೇಳಿ ಸೊರ ಕೊಟ್ಟಿಕ್ಕಿ ಆಚಿಗೆ ಹೋಗಿ ನಿಂದ°. ಅಷ್ಟಪ್ಪಗ ಅದಾ ಅಶನದವ ಅಶನ ಬಿಕ್ಯೊಂಡು ಬಂದ°. ಎರಡು ಹೆಮ್ಮಕ್ಕ ಬಂದವು ಆ ಮೋರ್ಕೊಳಂಬು ಮತ್ತೆ ಪಾಯಸಂ, ಸ್ವೀಟು ಬಳ್ಸಿಕ್ಕಿ ಮೆಟ್ಳು ಇಳುದು ಹೋದವು. ಮನೆ ದೊಡ್ಡಣ್ಣ ಬಂದ° ‘ಅಳೆ – ಅಳೆ’ ಪಾಡ್ಳೆ ಹೇಳಿ ಕೈಮರಿಗೆಲಿ ದೊಡ್ಡ ಚಮಚಲ್ಲಿ ಬಳ್ಸಿಗೊಂಡು ಹೋದ°. ಅಂವ ಆ ತಲೆಂಗೆ ಎತ್ತೆಕ್ಕಾರೆ ಈ ತಲೆಲಿ ಕೂದೋರು ಕೈ ತೊಳಕ್ಕೊಂಡಿತ್ತಿದ್ದವು. ಇದು ಒಂದು ‘ನಮ್ಮಕುಳ್ನೇಟು’ ನಡದ್ದದು. ..ಉಫ್ಫ್ . ಕೈ ತೊಳದು ಮೆಟ್ಳು ಇಳುದು ಕೆಳ ಬಂದು ನೋಡಿರೆ ಅಲ್ಲಿನ್ನು ಬಾಕಿ ಆರು ಇತ್ತಿದ್ದವಿಲ್ಲೆ ಮನೇಯೋರು ಒಂದಿಬ್ರು ಫೇನಿನಡಿಲ್ಲಿ ಕೂದೊಂಡಿಪ್ಪದು ಕಂಡದು ಬಿಟ್ರೆ. ನಾವಲ್ಲಿಂದಲೇ ‘ಬರ್ಪೆ ಪಾತೆರ್ಕೊ’ ಹೇಳಿಕ್ಕಿ ಚಾಂಬಿತ್ತಲ್ಲಿಂದ.

  [Reply]

  VN:F [1.9.22_1171]
  Rating: +2 (from 2 votes)
 2. ಯಾವತ್ತಿನ ಹಂಗೆ ಸರಳವಾದ .ಆದರೆ ಅಷ್ಟೇ ಅರ್ಥವತ್ತಾದ ಸುದ್ದಿ…ಇಷ್ಟು ಒಳ್ಳೊಳ್ಳೆ ಸುದ್ದಿ ಬರಯದ್ರಿ೦ದಾಗಿನೆ ಮುಂದಿನ ವಾರ ಎಂತ ಸುದ್ದಿಯಪ್ಪ ಹೇಳಿ ಎದುರು ನೋಡುವಂಗೆ ಆಗ್ತು..

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಕಡೇಣ ಒಪ್ಪಲ್ಲಿ ಹೇಳಿದ ಕಾಂಬಜ್ಜಿ ಮಾತು ಏವ ಕಾಲಕ್ಕೂ ನಿಜ. ಜೆಂಬಾರಲ್ಲಿ ಸುದರಿಕೆಯ ವಿಷಯಲ್ಲಿಯುದೆ ಈ ಮಾತು ಸರೀಯಾಗಿ ಹೊಂದುತ್ತು.
  ಒಂದೊಳ್ಳೆ ವಿಷಯಲ್ಲಿ ಒಪ್ಪಣ್ಣನ ಶುದ್ದಿ ಒಪ್ಪ ಇತ್ತು. ನೆರೆಕರೆಯವು, ಭಾವಂದ್ರು, ನೆಂಟ್ರುಗೊ ಎಲ್ಲ ಒಟ್ಟು ಸೇರಿ ಒಂದು ಜೆಂಬ್ರವ ಸುದರಿಸಿ ಕೊಡ್ತಲ್ಲಿ ಇಪ್ಪ ಸಂತೋಷ, “ಕೇಟರಿಂಗಿ”ನವಕ್ಕೆ ಕೊಟ್ಟು ಮಾಡ್ತ ಜೆಂಬಾರಲ್ಲಿ ಖಂಡಿತಾ ಬಾರ.

  [Reply]

  VA:F [1.9.22_1171]
  Rating: +1 (from 1 vote)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಆತಿಥ್ಯಲ್ಲಿ ಆತ್ಮೀಯತೆ ಬೇಕು. ಯಾಂತ್ರಿಕ ಆಗಿಪ್ಪಲಾಗ.
  ಎಷ್ಟೋ ಜೆಂಬಾರಂಗಳಲ್ಲಿ ಕಾಂಬ ಒಂದು ಅಂಶ ಹೇಳಿರೆ, ಮನೆ ಮಕ್ಕೊಗೆ ಬಂದವರ ಮಾತಾಡ್ಸೆಕ್ಕು ಹೇಳ್ತ ಸಂಸ್ಕಾರ ಇರ್ತಿಲ್ಲೆ. ಅವು ಅವರ ಫ್ರೆಂಡ್ಸ್ ಗಳೊಟ್ಟಿಂಗೆ ಅತಿಥಿಗಳ ಹಾಂಗೇ ಇರ್ತವು.
  ಆತಿಥ್ಯ ಬಾಲ್ಯಂದಲೇ ಅಭ್ಯಾಸ ಆಯೆಕ್ಕಾದ್ದು. ನೋಡಿ ತಿಳಿವಲೆ, ಕಲಿವಲೆ ಅವಕಾಶ ಇದ್ದು. ಆದರೆ ಅವು ನೆಂಟ್ರುಗಳ ಪೈಕಿ ಜೆಂಬಾರಕ್ಕೆ ಹೋವ್ತ ಕ್ರಮ ಇಲ್ಲೆನ್ನೆ. ಮನೆಲಿಯೂ ಅವು ಆತು ಅವರ ಪುಸ್ತಕವೋ, ಕಂಪ್ಯೂಟರೋ, ಟಿವಿ ಯೋ ಇದರಲ್ಲಿಯೇ ಮುಳುಗಿಂಡು ಇರ್ತವು. ಮನೆಗೆ ಬಂದ ನೆಂಟ್ರ ಮಾತಾಡ್ಸುವ ಕ್ರಮವೂ ಕಮ್ಮಿ ಆಯಿದು.
  ಎಲ್ಲ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಲ್ಲಿ ಮಕ್ಕಳ ತೊಡಗಿಸಿಗೊಳ್ಳುವ ಜವಾಬ್ದಾರಿ ಹೆರಿಯವಕ್ಕೆ ಇದ್ದು.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅಪ್ಪಚ್ಚಿಯ ಮಾತುಗೊ ಇ೦ದ್ರಾಣ ವೆವಸ್ತೆಗೆ ಹಿಡುದ ಕನ್ನಾಟಿ,ಮು೦ದೆ ನೆಡವ ದಾರಿಗೆ ದಾರಿದೀಪವೂ ಅಪ್ಪು..
  ಸುಧರಿಕೆಯವು ಇದ್ದವನ್ನೇ,ಮತ್ತೆ೦ತಕೆ ನಾವು ಬಳುಸುಲೆ ಸೇರೊದು ಹೇಳ್ತ ಭಾವನೆ ನಮ್ಮ ಮನಸ್ಸಿ೦ದ ಹೆರ ತೆಗೇಕು.ಜೆ೦ಬ್ರದ ಆತಿಥ್ಯಲ್ಲಿ ಕೊರತೆ ಬಪ್ಪಲಾಗ ಹೇಳಿ ಯಜಮಾನ ಸುಧರಿಕೆಗೆ ಸೇರುಲೆ ನಾಲ್ಕು ಜೆನ ಮಾಡೊದು ಇ೦ದು ಸಾಮಾನ್ಯ ಆಯಿದು.ಆದರೆ ಅವರ ಹತ್ತರೆ ಆತ್ಮೀಯತೆಯ ನಿರೀಕ್ಷೆ ಮಾಡಲೆ ಎಡಿಗೋ?ಇದು ಹೃದಯ೦ದ ಬರೆಕ್ಕಾದ್ದು..ಹೋಪ ಜೆ೦ಬ್ರ೦ಗಳಲ್ಲಿ ತೊಡಗುಸಿಗೊ೦ಡು ಈ ಹೃದಯವ೦ತಿಕೆಯ ನಮ್ಮಲ್ಲಿ,ನಮ್ಮ ಮಕ್ಕಳಲ್ಲಿ ಬೆಳೆಸೊದು ನಮ್ಮ ಕರ್ತವ್ಯ.
  ಒಳ್ಳೆ ಶುದ್ದಿಗೆ ಅರ್ಥಪೂರ್ಣ ಅಭಿಪ್ರಾಯ೦ಗೊ.

  [Reply]

  VA:F [1.9.22_1171]
  Rating: +1 (from 1 vote)
 5. ವಿಜಯತ್ತೆ

  ಒಳೇಸುದ್ದಿ ಒಪ್ಪಣ್ಣ, ನಮ್ಮ ಜೆಂಬಾರಂಗಳಲ್ಲಿ ಈಗೀಗ ಕೂರ್ಸಿ ಆಸರಿಂಗೆ ಕೊಡ್ತ ಕ್ರಮವೇ ಗೊಂತಿಲ್ಲದ್ದ ಹಾಂಗಾಯಿದು. ಹೋಲ್ಗಳಲ್ಲಂತೂ ಹೆರಾಣ ಮೇಜಿಲಿ ಮಡಗಿರೆ ಬಂದವು ಸ್ವಂತ ಸರ್ವೀಸ್ ಮಾಡಿಗೊಳೆಕ್ಕು! ಶರ್ಮ ಭಾವ ಹೇಳ್ತು ನಿಜ. ಮಕ್ಕೊಗೆ ಕಲುಶೆಕ್ಕು ನಮ್ಮ ಸಂಸ್ರ್ಕತಿ – ಸಂಸ್ಕಾರವ ಮಕ್ಕೊಗೆ ಬೊಧುಸಲೇ ಬೇಕು ಆಸರಿಂಗೆ ಕೊಡ್ತ ಸುಧರಿಕೆ ಮಕ್ಕೊ ಮಾಡೆಕ್ಕೆ!

  [Reply]

  VN:F [1.9.22_1171]
  Rating: +1 (from 1 vote)
 6. ಮಾಲಕ್ಕ°

  ಒಳೆ ಶುದ್ದಿ ಒಪ್ಪಣ್ನ. ಈ ಶುದ್ದಿ ಓದಿ ಅಪ್ಪಗ ಎನಗೆ ಒಂದು ಶುದ್ದಿ ನೆನಪ್ಪಾತು ಎಂತ ಹೇಳಿರೆ ಈಗೀಗ ನಮ್ಮೋರ ಕೆಲವು ಮನೆಗಳಲ್ಲಿ ನಾವು ಹೋದಪ್ಪಗ ಮನೆಯ ಹೆರಿಯೋರು ಬಂದು ಮಾತಾಡುಗು. ಮಕ್ಕಳ ಬಗ್ಗೆ ನಾವು ಕೇಳಿರೆ ಅಬ್ಬೆ ಅಪ್ಪನ ಉತ್ತರ ‘ಅವು ರೂಮಿಲ್ಲಿದ್ದವು ಅವು ಆರು ಬಂದರೂ ಹೆರ ಬಪ್ಪಲೇ ಇಲ್ಲೆ’ ಹೇದು. ಇನ್ನೊಂದು ದಿನ ನಾವು ಹೋಪಾಗ ಆ ಅಬ್ಬೆ ಅಪ್ಪ ಅಲ್ಲಿ ಇಲ್ಲದ್ದರೆ ಈ ಮಕ್ಕೊ ಕಿಟಿಕಿಲಿ ನೋಡಿ ಮನೆಲಿ ಆರೂ ಇಲ್ಲೆ ಹೇಳಿ ಬಾಗಿಲು ಹಾಕಿ ಬಿಡ್ತವು. ಇದು ಆರ ತಪ್ಪು? ಇದರ ಓದಿ ಆದರೂ ನಮ್ಮೋರು ಬದಲಾಗಲಿ ಹೇಳಿ ಆಶಿಸುತ್ತೆ.

  [Reply]

  VN:F [1.9.22_1171]
  Rating: +4 (from 4 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಪುಣಚ ಡಾಕ್ಟ್ರುಜಯಗೌರಿ ಅಕ್ಕ°ವೇಣೂರಣ್ಣಶೇಡಿಗುಮ್ಮೆ ಪುಳ್ಳಿಚೂರಿಬೈಲು ದೀಪಕ್ಕಜಯಶ್ರೀ ನೀರಮೂಲೆಬೋಸ ಬಾವಮಂಗ್ಳೂರ ಮಾಣಿಕಜೆವಸಂತ°vreddhiವಸಂತರಾಜ್ ಹಳೆಮನೆವಿನಯ ಶಂಕರ, ಚೆಕ್ಕೆಮನೆಕೇಜಿಮಾವ°ಪುಟ್ಟಬಾವ°ರಾಜಣ್ಣಮಾಷ್ಟ್ರುಮಾವ°ಕಳಾಯಿ ಗೀತತ್ತೆವಾಣಿ ಚಿಕ್ಕಮ್ಮಗೋಪಾಲಣ್ಣಅಜ್ಜಕಾನ ಭಾವಶ್ಯಾಮಣ್ಣಯೇನಂಕೂಡ್ಳು ಅಣ್ಣಹಳೆಮನೆ ಅಣ್ಣಚುಬ್ಬಣ್ಣಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ