ಸ್ವಹತ್ಯೆ ಮಾಡಿ ಮರಿಯಾದಿ ಕಳವ ಮೂರ್ಖತನ..!

August 7, 2015 ರ 12:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಸರ್ತಿ ಮಳೆಯ ಶಬ್ದವೂ ಜೋರು, ಆರ್ವಾಡೂ ಜೋರು – ಹೇದು ಮಾಷ್ಟ್ರುಮಾವನ ಅಭಿಪ್ರಾಯ. ಮಳೆ ಜೋರು ಬತ್ತು, ಸಾಂತಾಣಿ ಜೋರು ಮುಗಿತ್ತು – ಹೇದು ಶಾಂತತ್ತೆಯ ಅಭಿಪ್ರಾಯ.
ಬೇಳೆ ಮುಗಿವಲಪ್ಪಗ ಶಾಂತಾಣಿ ತಿನ್ನದ್ದರೆ ಆಗಲೇ ಆಗ ನಮ್ಮೋರಿಂಗೆ.
ಅದಿರಳಿ.

~

ಈಗ ಎಲ್ಲಿ ಪೇಪರು ಓದಿರೂ ಒಂದು ವಿಷಯ ಅಂತೂ ಎದ್ದು ಕಾಂಬಾಂಗೆ ಇದ್ದು – ಅದೇ ಆತ್ಮಹತ್ಯೆಯ ಶುದ್ದಿ.
ಸಾಲ ತಾಳಲಾರದ್ದೆ ರೈತ ಆತ್ಮಹತ್ಯೆ, ಪ್ರೀತಿ ಸತ್ತು ಯುವಕ ಆತ್ಮಹತ್ಯೆ, ಖಿನ್ನತೆಂದ ಇಂಜಿನೀರು ಆತ್ಮಹತ್ಯೆ ಇನ್ನೂ ಏನೇನೋ!
ಮನಸ್ಸಿಂಗೆ ಬೇಜಾರಾಗಿ ತಡವಲೆಡಿಯದ್ದರೆ ಇಡೀ ಲೋಕವೇ ತನ್ನೆದುರು ಇದ್ದು – ಹೇದು ತಿಳ್ಕೊಂಡು ಈ ಲೋಕಂದಲೇ ಬಿಟ್ಟು ಹೋಪಲೆ ಹೊಣದು ಅಖೇರಿಗೆ ತನ್ನ ಜೀವನವ ದಾರುಣವಾಗಿ ಅಂತ್ಯಗೊಳುಸುತ್ತದು ಸ್ವಹತ್ಯೆಯ ಮೂಲ ಸಂಗತಿ!
ಈಗ ಅಲ್ಲ, ಮದಲಿಂಗೇ – ಇತಿಹಾಸಲ್ಲೇ ಆತ್ಮಹತ್ಯೆಯ ಬಗ್ಗೆ ಉಲ್ಲೇಖ ಇದ್ದಾಡ.

ಘಜ್ನಿ ಮಮ್ಮದೆಯ ಕೈಲಿ ಸೋತ ಅವಮಾನಂದ ರಜಪೂತ ರಾಜ° ಜಯಪಾಲ ಆತ್ಮಹತ್ಯೆ ಮಾಡಿಗೊಂಡನು – ಹೇದು ಇತಿಹಾಸ ಹೇಳ್ತಡ.
ಅದಲ್ಲದ್ದೆ, ಆ ಕಾಲದ ಎಷ್ಟೋ ರಾಜಂಗೊ ಘಜ್ನಿ ಮಮ್ಮದೆ, ಘೋರಿ ಮಮ್ಮದೆಯ ಕೈಲಿ ಸೋತ ಅವಮಾನಂದ ಪ್ರಯಾಗಕ್ಕೆ ಬಂದು ಪ್ರಾಣಬಿಟ್ಟುಗೊಂಡು ಇತ್ತಿದ್ದವಾಡ.
ರಜಪೂತ ಸೈನಿಕರು ಯುದ್ಧಲ್ಲಿ ಸೋತವು ಹೇದು ಸುದ್ದಿ ಬಂದರೆ ರಜಪೂತ ಹೆಮ್ಮಕ್ಕೊ ಎಲ್ಲೋರುದೇ ಕಿಚ್ಚಿಂಗೆ ಹಾರಿ ಸ್ವಹತ್ಯೆ ಮಾಡಿಗೊಂಡು ಇತ್ತಿದ್ದವಾಡ!
ಇವೆಲ್ಲೋರುದೇ ವೀರಾವೇಶಂದ ಹೋರಾಡಿದ್ದರೆ ನಮ್ಮ ಇತಿಹಾಸದ ಕೆಲವು ಪುಟ ಆದರೂ ಬೇರೆ ಆವುತ್ತಿತು – ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ.
~

ಇತಿಹಾಸಂದ ಪಾಠ ಕಲಿಯೇಕಡ. ನಾವು ಹಿಂದುಗೊ ಎಂತದೂ ಪಾಠ ಕಲ್ತಿದಿಲ್ಲೆ ಹೇದು ಅನುಸುತ್ತು ಒಂದೊಂದರಿ.
ಈಗಳೂ ಪೇಪರು ಓದುವಾಗ ಕೊಡಿಯಂದ ಕಡೆ ವರೆಂಗೆ ಎಷ್ಟೋ ಜೆನ ಅಣ್ಣತಮ್ಮ ಭಾವ° ಅಪ್ಪಚ್ಚಿಯಕ್ಕೊ ಸ್ವಹತ್ಯೆ ಮಾಡಿದ ಸಂಗತಿ ಕೇಳ್ತು ನವಗೆ!

ಇದಾ, ಒಂದೆರಡು ಕತೆಗೊ:
ಒಂದೂವರೆ ಎಕ್ರೆ ಗೆದ್ದೆ ಇಪ್ಪ ರೈತ. ಮೊನ್ನೆ ಸತ್ತುಗೊಂಡತ್ತಡ.
ಎಂತಗೆ? ಒಂದು ಲಕ್ಷ ಸಾಲ ಇದ್ದತ್ತಾಡ! ಅಷ್ಟೇ.
ಒಂದೂವರೆ ಎಕ್ರೆ ಗೆದ್ದೆಯ ರೈತ ಒಂದು ಲಕ್ಷ ಸಾಲಕ್ಕೆ ಎಂತಗೆ ಜೀವ ತೆಕ್ಕೊಳೇಕಾತಪ್ಪಾ!
ಸಾಲ ತೀರ್ಸಲೆ ಎಡಿಯದ್ದೆ ಸಮಾಜಂದ ಅಪ್ಪ ಅವಮಾನವನ್ನೇ ಗ್ರೇಶಿಗೊಂಡು ಅದನ್ನೇ ನಂಬಿ ತನ್ನ ಮರಿಯಾದಿ ಪೂರ್ಣವಾಗಿ ಹೋತು – ಹೇದು ತಿಳ್ಕೊಂಡತ್ತೋ!
ಆ ಭ್ರಮೆಲಿ ತನ್ನ ಜೀವನವ ಅಂತ್ಯ ಮಾಡಿಗೊಂಡತ್ತೋ?
~

ಇನ್ನೊಂದು:
ಕಾಲು ಬೇನೆ ಬಂದ ಮಾಣಿಗೆ ಗುಣಾಯಿದಿಲ್ಲೇ’ದು ಹೆದರಿ ಪ್ರಾಣ ತೆಕ್ಕೊಂಡತ್ತಾಡ. ಓಡಾಡಿಗೋಂಡಿದ್ದ ಮಾಣಿ ಇನ್ನು ಮನುಗಿದಲ್ಲೇ ಆಗಿ ಬಿಡ್ತನೋ ಹೇದು ಹೆದರಿತ್ತು.
ಇನ್ನು ತನ್ನ ದೇಹದ ಒಂದು ಅಂಗ ಸದಾ ಊನ ಆಗಿ – ತಾನು ಗ್ರೇಶಿದ್ದರ ಮಾಡ್ಳೆಡಿಯ ಹೇದು ಗ್ರೇಶಿ, ಆ ಭ್ರಮೆಲೇ ಹೆದರಿ ಜೀವನವ ಅಂತ್ಯ ಮಾಡಿಗೊಂಡತ್ತೋ?

ಮತ್ತೊಂದು:
ಪರೀಕ್ಷೆ ಬರದ ಕೂಚಕ್ಕ° ಒಂದಕ್ಕೆ ಮಾರ್ಕು ಕಮ್ಮಿ ಬಂದು ಪೈಲು ಅಕ್ಕು – ಹೇದು ಹೆದರಿಫಲಿತಾಂಶ ಬಪ್ಪ ಮದಲೇ ಬಳ್ಳಿ ತೆಕ್ಕೋಂಡತ್ತಡ.
ಇನ್ನು ತಾನು ಪೈಲಾಗಿ ಊರಿಡೀ ಎನ್ನ ನೆಗೆಮಾಡಿ ತಾನು ಬರೀ ಪಡ್ಪೋಷಿ ಹೇದು ಅವಮಾನ ಮಾಡಿರೇ – ಹೇದು ಹೆದರಿ ಹೋತು ಅದಕ್ಕೆ.
ಹಾಂಗಾಗಿ ಅದು ಫಲಿತಾಂಶ ಬಪ್ಪನ್ನಾರ ಕಾಯಿದ್ದೇ ಇಲ್ಲೆ. ಮೇಗೆ ಹೋತು.ಫಲಿತಾಂಶ ಬಂದ ಮತ್ತೆ ನೋಡಿರೆ ಕೂಸು ಪಾಸಾಗಿತ್ತಾಡ. ಕೊಶಿಪಡ್ಳೆ ಅದಿಲ್ಲೆ, ಬೇಜಾರಾದ ಅಪ್ಪಮ್ಮ ಮಾಂತ್ರ ಇದ್ದದು.

ಮಗದೊಂದು:
ಇಂಜಿನಿಯರು ಕೆಲಸ ಮಾಡಿಗೊಂಡಿದ್ದ ಭಾವಯ್ಯ ಒಬ್ಬನ ’ನಾಳೆಂದ ಕೆಲಸಕ್ಕೆ ಬರೆಡ’ – ಹೇದವಾಡ ಕಂಪೆನಿಲಿ.
ಕಂಪೆನಿ ಎಂತದೋ ಕಾರಣಕ್ಕೆ ಲೋಸು ಆದ ಕಾರಣವೋ ಏನೋ – ಈ ಭಾವಯ್ಯ “ತನ್ನ ಕೆಲಸ ಸಾಲದ್ದೆ ತೆಗದು ಹಾಕಿದ್ದು, ನಾಳೆ ಸಂಸಾರಕ್ಕೆ ಉತ್ತರ ಕೊಡುಸ್ಸು ಹೇಂಗೆ’ ಹೇದು ಚಿಂತೆ ಮಾಡಿ, ವಿಷ ಕುಡ್ಕೊಂಡದಾಡ.
~

ಇಂತಾ ಹತ್ತು ಹಲವು ಸಂಗತಿಗೊ ನಾವು ನಿತ್ಯ ಕೇಳ್ತು ಈಗೀಗ.
ನಾಗರೀಕತೆ ಬೆಳದ ಹಾಂಗೆ ಮರಿಯಾದಿ ಹೇಳ್ತ ಭಾವನೆ ಹೆಚ್ಚಾಯಿದು; ಅದು ಬೆಳದ ಹಾಂಗೆ ಅದರ ಒಳಿಶಲೆ ಪ್ರಯತ್ನವೂ ಹೆಚ್ಚಾಯಿದು.
ಜೀವ ಬಿಡ್ಳಾದರೂ ತಯಾರು; ಮರಿಯಾದಿ ಬಿಡವು ಜೆನಂಗೊ.

ಜೀವನಲ್ಲಿ ಸೋಲು ಗೆಲುವು ಸಾಮಾನ್ಯ.
ಒಂದರಿ ಸೋತರೆ ಮತ್ತೆ ಗೆಲ್ಲೆಕ್ಕು; ಒಂದರಿ ಗೆದ್ದವ ಪುನಾ ಸೋಲೇಕು – ಇದು ವಿಧಿ ನಿಯಮ.

ಒಂದರಿ ಕಂಡ ಸೋಲನ್ನೇ ಜೀವಮಾನಕ್ಕೆ ತೆಕ್ಕೊಂಡ್ರೆ ಹೇಂಗಕ್ಕು?

ಸಾಲ ಆದೋನು ಸತ್ತ°. ಸತ್ತು ಅವ° ಬಚಾವಾದ ಮಡಿಕ್ಕೊಳಿ,
ಅವಂಗೆ ಸಕಾಯ ಮಾಡಿದ ಆಪ್ತ° – ಗುಂಡಿಗೆ ಬಿದ್ದನಿಲ್ಲೆಯೋ?
ಅವನ ನಂಬಿದ ಸಂಸಾರ – ಗುಂಡಿಗೆ ಬಿದ್ದತ್ತಿಲ್ಲೆಯೋ?
ಅವಂಗೆ ಸಾಲ ಮಾಡಿದ ಬೇಂಕುಗೊ – ಅವುದೇ ಗುಂಡಿಗೆ ಬಿದ್ದವಿಲ್ಲೆಯೋ?
ಮಾರ್ಕು ಕಡಮ್ಮೆಆದರೆಂತಾತು – ಇನ್ನೊಂದು ಪರೀಕ್ಷೆ ಇಲ್ಲೆಯೋ?
ಅದೇವದೂ ಇಲ್ಲದ್ದರೂ – ಜೀವನಲ್ಲಿ ಬೆಳಗುವ ಅವಕಾಶ ಇಲ್ಲೆಯೋ?

ಕ್ಷಣಿಕ ಆಲೋಚನೆಲಿ ಜೀವ ಮುುಗುಶಿರೆ, ತನ್ನಂದಾಗಿ ಬಂಙ ಬಪ್ಪ ಹಲವಾರು ಜೀವಂಗಳ ಬಗ್ಗೆ ಆಲೋಚನೆ ಮಾಡ್ತವಿಲ್ಲೆ.

~

ಒಂದೊಪ್ಪ: ಮರಿಯಾದಿ ನಮ್ಮದು, ಜೀವ ದೇವರದ್ದು. ನಾವು ಮಾಡಿದ್ದರ ಕಳಕ್ಕೊಂಡ್ರೂ, ದೇವರು ಕೊಟ್ಟದರ ಒಳಿಶಿಗೊಳೇಕು – ಅದೇ ಜೀವನ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ಅನು ಉಡುಪುಮೂಲೆನೆಗೆಗಾರ°ಸುಭಗಶಾಂತತ್ತೆಶ್ಯಾಮಣ್ಣಪುಣಚ ಡಾಕ್ಟ್ರುಎರುಂಬು ಅಪ್ಪಚ್ಚಿಕೇಜಿಮಾವ°ಚೆನ್ನಬೆಟ್ಟಣ್ಣಮುಳಿಯ ಭಾವವೆಂಕಟ್ ಕೋಟೂರುಉಡುಪುಮೂಲೆ ಅಪ್ಪಚ್ಚಿವಾಣಿ ಚಿಕ್ಕಮ್ಮವಿಜಯತ್ತೆಶ್ರೀಅಕ್ಕ°ಚೆನ್ನೈ ಬಾವ°ಪಟಿಕಲ್ಲಪ್ಪಚ್ಚಿದೊಡ್ಮನೆ ಭಾವವಸಂತರಾಜ್ ಹಳೆಮನೆಡಾಗುಟ್ರಕ್ಕ°ಅಡ್ಕತ್ತಿಮಾರುಮಾವ°ಸಂಪಾದಕ°ಶೇಡಿಗುಮ್ಮೆ ಪುಳ್ಳಿವೇಣಿಯಕ್ಕ°ಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ