ಅಯೋಧ್ಯೆಗೆ ರಾಮನೇ ರಕ್ಷೆ; ಬೈಲಿಂಗೆ ಶ್ರೀ ರಕ್ಷೆ!

August 19, 2016 ರ 12:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸೂರ್ಯವಂಶಕ್ಕೆ ಸೂರ್ಯ ಆಗಿಪ್ಪ ರಾಮದೇವರು ಅಯೋಧ್ಯೆಗೆ ರಕ್ಷೆಯಾಗಿ ಇತ್ತಿದ್ದನಾಡ. ಹಾಂಗಾಗಿಯೇ – ಯೇವ ಪ್ರವಾಹ ಬಂದರೂ, ಯೇವ ತೊಂದರೆ ಬಂದರೂ, ಯೇವ ರಕ್ಕಸ ಬಂದರೂ – ಯಶಸ್ವಿಯಾಗಿ ಅದರ ಮೀರುಸಲೆ ಎಡಿಗಾತು.
ರಾವಣನೇ ಬಂದು, ಪಟ್ಟದರಸಿ ಸೀತಾ ಮಾತೆಯನ್ನೇ ಹೊತ್ತುಗೊಂಡು ಹೋಪ ಸಾಹಸ ಮಾಡಿರೂ, ರಾಮ ಇದ್ದ ಕಾರಣ ಅದರ ಪರಿಶುದ್ಧವಾಗಿ ಓಪಾಸು ತಪ್ಪಲೆ ಎಡಿಗಾತು, ಅಯೋಧ್ಯೆಯ ಪುನಃ ಕಟ್ಳೆ ಎಡಿಗಾತು.
ಹಾಂಗಿಪ್ಪ ರಾಮರಕ್ಷೆ ನವಗಿದ್ದರೆ ಯೇವ ಹೆದರಿಕೆಯೂ ಇಲ್ಲೆ ಜೀವನಲ್ಲಿ. ಅದರ ನೆಂಪಿಂಗೋಸ್ಕರವೇ ಆಚರಣೆ ಮಾಡುವ ಹಬ್ಬ – ರಕ್ಷಾ ಬಂಧನ.
~
ಬೈಲಿನ ಅಕ್ಕ ತಂಗೆಕ್ಕೊ ಅವರವರ ಅಣ್ಣ ತಮ್ಮಂದ್ರಿಂಗೆ ರಕ್ಷೆ ಕಟ್ಟುವ ಸುದಿನ – ರಕ್ಷಾಬಂಧನ. ಶ್ರಾವಣ ಮಾಸ ಪೌರ್ಣಮಿ ಅದು.
ಅದೇ ದಿನ ಜೆನಿವಾರ ಬದಲುಸುತ್ತ ಯಜುರುಪಾಕರ್ಮವೂ ಬಪ್ಪ ಕಾರಣ ಅಕ್ಕ ತಂಗೆಕ್ಕಳ ಒಟ್ಟಿಂಗೆ ಅಣ್ಣ-ತಮ್ಮಂದ್ರೂ ಅಂಬೆರ್ಪಿಲಿ ಇಪ್ಪ ಹಾಂಗೆ ಮಾಡಿತ್ತು.
ಒಟ್ಟಿಲಿ ನಿನ್ನೆ ಗೌಜಿಯೇ ಗೌಜಿ.
ಪರಿಸರದ, ಸಮಾಜಂದ ಬಪ್ಪ ಕಷ್ಟಂಗಳಿಂದ ರಕ್ಷಣೆ ಕೊಡ್ಳೆ ಸಹಕಾರ ಇರಳಿ – ಹೇಳುವ ಆಶಯಂದ ಅಕ್ಕ-ತಂಗೆಕ್ಕೊ ರಕ್ಷೆ ಕಟ್ಟುದಡ; ಕಷ್ಟ-ನಷ್ಟ ತೊಂದರೆಗಳಿಂದ ಅಕ್ಕಂದ್ರ ರಕ್ಷಿಸುತ್ತೆ – ಹೇಳುವ ಅಭಯವ ಅಣ್ಣ-ತಮ್ಮಂದ್ರು ಕೊಡುದಡ. ಈ ದಿನದ ಮಹತ್ವವೇ ಅದು.
~
ರಕ್ಷೆ ಎಲ್ಲರಿಂಗೂ ಬೇಕಾವುತ್ತು. ಅಕ್ಕ ತಂಗೆಕ್ಕೊಗೆ ಮಾಂತ್ರ ಅಲ್ಲ!
ಆತ್ಮಕ್ಕೇ ಬೇಕಾವುತ್ತು; ವೆಗ್ತಿಗೊಕ್ಕೆ ಬೇಕಾವುತ್ತು; ಕೃಷಿ ಮಾಡುವ ಬೇಲಿಗೂ ಬೇಕಾವುತ್ತು; ದೇಶಕ್ಕೇ ಬೇಕಾವುತ್ತು!!
ಅದೇ ರೀತಿ ನಮ್ಮ ಬೈಲಿಂಗೂ ಬೇಕಾವುತ್ತು.
~
ಬೈಲಿಂಗೆ ರಕ್ಷೆ ಸಿಕ್ಕುವ ಸುದಿನ ಕಳುದ ವಾರ ಒದಗಿ ಬಂತು.
ಕಳುದ ವಾರ – ಬೈಲಿನ ನೆಂಟ್ರುಗೊ ಚಾತುರ್ಮಾಸ್ಯಲ್ಲಿ ಶ್ರೀಮಠಲ್ಲಿ ಸೇರಿ ಶ್ರೀಪಾದುಕಾ ಪೂಜೆ ನೆರವೇರಿಸುವ ಸುಸಂದರ್ಭ ಒದಗಿ ಬಂತು.
ಅಗೋಸ್ತು ಹದಿನೈದು ಸುದಿನ, ಉದಿಯಪ್ಪಗ ಬೈಲಿನ ಪಾದಪೂಜೆ. ಈ ಸರ್ತಿ ಬೆಟ್ಟುಕಜೆ ದಂಪತಿಗೊ ನೆರವೇರಿಸಿದವು.
ಶ್ರೀಗುರುಗೊ ಪಾದುಕಾಪೂಜೆಯ ಸಂತೋಷಲ್ಲಿ ಸ್ವೀಕರುಸಿ, ರಾಮಾನುಗ್ರಹ – ವ್ಯಾಸಮಂತ್ರಾಕ್ಷತೆಯ ಅನುಗ್ರಹಿಸಿ – ಬೈಲು ಬೆಳೆಯಲಿ – ಹೇಳಿ ಅನುಗ್ರಹಿಸಿದವು.
ಸುಭಗಣ್ಣ, ಶ್ರೀಅಕ್ಕ°, ತೆಕ್ಕುಂಜೆ ಮಾವ°, ಬೆತ್ತಸರವು ಈಚಬಾವ°, ಕಾರ್ತಿಕಣ್ಣ, ಜಾಣ, ಹಾಲುಮಜಲು ಅಣ್ಣ-ತಮ್ಮ, ಬಾಲಣ್ಣ, ದೀಪಿ ಅಕ್ಕ° ಇನ್ನೂ ಹಲವು ಜೆನಂಗೊ ಆ ದಿನ ಸಾಕ್ಷಿ ಆದವು.
ಬೈಲು ಹೊಸ ಉತ್ಸಾಹಲ್ಲಿ ಬೆಳವ ಆಶಯ ಆ ದಿನ ಬಂತು.
~
ಆಟಿ ಕಳುದು ಸೋಣೆ ಬಂತು; ಆಷಾಡ ಕಳುದು ಶ್ರಾವಣ ಬಂತು.
ಹಳೆಯ ಮೋಡ ಎಲ್ಲ ಕಳದು ಶುಭ್ರ ಬಾನು ಬಂತು. ಹಳೆ ನೀರು ಹರುದು ಹೊಸ ನೀರು ಬಂತು.
ಹೊಸ ಕಾರ್ಯಂಗೊಕ್ಕೆ, ಹೊಸ ಚಟುವಟಿಕೆಗೊಕ್ಕೆ ಬೈಲಿನ ನೆಂಟ್ರುಗೊ ಹೆರಡುವ ಸಮಯ ಬಂತು.
ಇದೇ ಸಮಯ ನಮ್ಮ ಬೈಲಿಲಿಯೂ ಚಟುವಟಿಕೆಗೊ ಎಳಗಿತ್ತು, ಎಳಗುತ್ತಾ ಇದ್ದು.
ಬೈಲಿನ ಕಾರ್ಯಕರ್ತ ಬಳಗಕ್ಕೆ ಹೊಸ ಚೈತನ್ಯ ಬತ್ತಾ ಇದ್ದು.
ಬೈಲಿನ ಸಮಾಜಮುಖೀ ಸೇವೆಗೊ, ಅದಕ್ಕಿಪ್ಪ ಉತ್ಸಾಹೀ ಕಾರ್ಯಕರ್ತರುಗೊ – ಇನ್ನಷ್ಟು ಬೆಳೆಯಲಿ ಹೇಳುವ ಉದ್ದೇಶಂದ – ಹೊಸ ಚೈತನ್ಯಲ್ಲಿ ಕೆಲಸ ಮಾಡ್ತಾ ಇದ್ದು.
ಬೈಲಿಂಗೆ ಶ್ರೀರಕ್ಷೆ ಇರಲಿ..
ಬೈಲ ಸದಸ್ಯರಿಂಗೆ ರಕ್ಷೆ ಸಿಕ್ಕಲಿ..
ಇದರಿಂದ – ಇಡಿಯ ಸಮಾಜಕ್ಕೇ ಶ್ರೀರಕ್ಷೆ ಸಿಕ್ಕುವ ಹಾಂಗಾಗಲಿ.
~
ಒಂದೊಪ್ಪ: ನಮ್ಮಂದ ಹಿರಿಯರ ರಕ್ಷೆ ನವಗಿರಲಿ; ನಮ್ಮಂದ ಕಿರಿಯರಿಂಗೆ ನಮ್ಮ ರಕ್ಷೆ ಇರಲಿ.
~
ಸೂ: ಬೈಲಿನ ಸಮಾಜಮುಖೀ ಸೇವೆಗಳ ಕುರಿತು ಒಟ್ಟು ಕೂದು ಮಾತಾಡ್ಳೆ ವಾಟ್ಸಾಪ್ ಲಿ ಒಂದು ಬಳಗ ಮಾಡಿದ್ದು. ಸೇರುವ ಆಸಕ್ತರು ಇಲ್ಲಿ ತಿಳುಸುಲಕ್ಕು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ಒಳ್ಳೇದು

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಚಿಕ್ಕ ಚೊಕ್ಕ ಶುದ್ದಿ. ಹರೇರಾಮ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ವೇಣೂರಣ್ಣಬಟ್ಟಮಾವ°ಅಕ್ಷರ°ಅನಿತಾ ನರೇಶ್, ಮಂಚಿಪೆಂಗಣ್ಣ°ಶುದ್ದಿಕ್ಕಾರ°ರಾಜಣ್ಣಗಣೇಶ ಮಾವ°ವಸಂತರಾಜ್ ಹಳೆಮನೆಅನುಶ್ರೀ ಬಂಡಾಡಿಕೇಜಿಮಾವ°ಶ್ಯಾಮಣ್ಣಪುತ್ತೂರಿನ ಪುಟ್ಟಕ್ಕಯೇನಂಕೂಡ್ಳು ಅಣ್ಣಸುಭಗಮುಳಿಯ ಭಾವವಿದ್ವಾನಣ್ಣಕಳಾಯಿ ಗೀತತ್ತೆಚೆನ್ನೈ ಬಾವ°ಚುಬ್ಬಣ್ಣಕೊಳಚ್ಚಿಪ್ಪು ಬಾವದೀಪಿಕಾಪ್ರಕಾಶಪ್ಪಚ್ಚಿಬೋಸ ಬಾವತೆಕ್ಕುಂಜ ಕುಮಾರ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ