Oppanna.com

ಅಯ್ಯೋ ರಾಮಾ – ಯಾಲ್ಲಾ!! ಅಯ್ಯೋ ಅಯ್ಯೋ ಅಯೋಧ್ಯಾ…!!

ಬರದೋರು :   ಒಪ್ಪಣ್ಣ    on   24/09/2010    61 ಒಪ್ಪಂಗೊ

ಹ್ಮ್, ಚಾತುರ್ಮಾಸ್ಯದ ಗವುಜಿ ಮುಗಾತು.
ಎರಡು ತಿಂಗಳುಗಳ ಕಾಲ ಒಂದೇ ಜಾಗೆಲಿ ಕೂದಂಡು ಒಂದೇ ಧ್ಯಾನಲ್ಲಿ ರಾಮ-ಲಕ್ಷ್ಮಣ-ಸೀತೆ ಯ ವಿಗ್ರಹವ ಪೂಜೆ ಮಾಡಿಂಡು, ಮನಸ್ಸಿಲಿ ನಿತ್ಯ ರಾಮನ ಧ್ಯಾನ ಮಾಡ್ತ ನಮ್ಮ ಗುರುಗೊ ಚಾತುರ್ಮಾಸ್ಯ ವ್ರತವ ಮುಗುಶಿಗೊಂಡು, ಸೀಮೋಲ್ಲಂಘನ ಮಾಡಿಂಡು ಇಪ್ಪ ಕಾಲ.
ನಮ್ಮ ಬೈಲಿಂದ ಸುಮಾರು ಜೆನ ಹೋಯಿದವು.
ಅಲ್ಯಾಣ ಗವುಜಿ ಎಂತರ ಹೇಳಿಗೊಂಡು ಬಂದ ಮೇಗೆ ಗೊಂತಾಯೆಕ್ಕಷ್ಟೆ.
ಅದಿರಳಿ, ಈ ವಾರಕ್ಕೆ ಎಂತರ ಶುದ್ದಿ ಮಾತಾಡ್ತದು?
ಸಾವಿರಾರು ಒರಿಶ ಇತಿಹಾಸ ಇದ್ದಂಡು, ರಾಮರಾಜ್ಯದ ಕೇಂದ್ರ ಆಗಿಂಡು, ನಮ್ಮೆಲ್ಲರ ಶ್ರದ್ಧಾಭಕ್ತಿಗೆ ಕಾರಣ ಆಗಿಂಡು ಇದ್ದಿದ್ದ, ಸುಮಾರು ಜಗಳಕ್ಕೂ, ಮನಸ್ತಾಪಕ್ಕೂ ಕಾರಣ ಆದ / ಆಗಿಪ್ಪ ನಮ್ಮೆಲ್ಲರ ಪ್ರೀತಿಯ ಅಯೋಧ್ಯೆಯ ಬಗೆಗೆ ರಜ್ಜ ಶುದ್ದಿ ಮಾತಾಡುವೊ, ಆಗದೋ?
ಇಂದು ಮಾತಾಡುದಕ್ಕೆ ಒಂದು ತತ್ವ ಇರ್ತು, ಎಂತ್ಸಕೇ ಹೇಳಿತ್ತುಕಂಡ್ರೆ, ಬೈಲಿನ ಎಲ್ಲೋರ ಬಾಯಿಲೂ ಈ ವಾರ ಇದೇ ಶುದ್ದಿ.
ಹಾಂಗಾಗಿ ಒಪ್ಪಣ್ಣನ ಬಾಯಿಲಿದೇ ಹಾಂಗೇ ಇರೆಕಷ್ಟೆ ಅಲ್ಲದೋ?!
~
ನಮ್ಮದರ್ಲಿ ಕತೆಗೊ ಜಾಸ್ತಿ.
ಮಕ್ಕೊ ಹುಟ್ಟುವಗ ಹಿಡುದು, ದೊಡ್ಡ ಅಪ್ಪನ್ನಾರ ಹೇಳಿರೂ ಮುಗಿಯದ್ದಷ್ಟು ಕತೆಗೊ ಇದ್ದು.
ಅದರ್ಲಿಯೂ, ಪ್ರತಿಯೊಂದು ಬಾಬೆ ಕೇಳಲೇಬೇಕಾದ ಕತೆಗಳಲ್ಲಿ ರಾಮಾಯಣ, ಮಹಾಭಾರತ ಮುಖ್ಯವಾದ್ದು. ಇದಕ್ಕೆ ಮೂಲ ಮಹಾಕಾವ್ಯಂಗ ಇದ್ದರೂ, ಮಕ್ಕೊಗಪ್ಪಗ ಅವರ ಅಪ್ಪಮ್ಮ ಹೇಳಿದ್ದೇ ಮಹಾಕಾವ್ಯ – ಹೇಳಿ ಮಾಷ್ಟ್ರುಮಾವ° ನೆಗೆಮಾಡುಗು.
ಅಪ್ಪುದೇ ಅದು, ಎಂತದೇ ದೊಡ್ಡ ವಿದ್ವಾಂಸ ಆದರೂ, ಯೇವ ಗ್ರಂಥ ಓದುವಗಳೂ, ಅಪ್ಪಮ್ಮ ಆ ವಿಷಯ ಅವಕ್ಕೆ ಸುರುವಿಂಗೆ ಹೇಳಿದ್ದರೆ ಅದುವೇ ನೆಂಪಕ್ಕಟ್ಟೆ. ಇನ್ನೊಬ್ಬಂಗೆ ವಿವರುಸುವಗಳೂ ಹಾಂಗೇಡ. ಮನುಷ್ಯ ಸಹಜ ಗುಣ ಅದು. ಮಾಷ್ಟ್ರುಮಾವಂಗೂ ಹಾಂಗೇ ಅಪ್ಪದಿದಾ.
ಅವುದೇ ಓದಲೆ ಓದಿದ್ದವು, ಆದರೆ ಮಕ್ಕಳ ಒರಗುಸುಲೆ  ಹೇಳುವಗ ಅವರ ಹೆರಿಯೋರು ಹೇಳಿದ್ದನ್ನೇ ಹೇಳುಗು – ಮಕ್ಕಳಪಾಟ. ಓದಿದ್ದರ ಹೇಳವು.
ಅವು ಓದಿದ್ದರ ಹೇಳಲೆ ಸುರುಮಾಡಿರೆ ಮಕ್ಕೊ ಬೇಗ ಒರಗುಗೋ ಏನೋ! 😉
~

ಪುರಾಣ:
ಕತೆ ಹೇಳುದರ್ಲಿ ಮುಳಿಯಬಾವಂದು ಎತ್ತಿದ ಕೈ. ಮುಳಿಯಬಾವ° ಕತೆ ಹೇಳಿರೆ ತಾಳಮದ್ದಳೆ ಅರ್ತದ ಹಾಂಗೇ ಆವುತ್ತಿದಾ! 😉
ಅದಿರಳಿ, ನಮ್ಮ ಪುರಾಣಲ್ಲಿ ರಾಮಾಯಣ ಅತ್ಯಂತ ಮುಖ್ಯವಾದ್ದು. ಚತುರ್ಯಗಲ್ಲಿ ಎರಡ್ಣೇದು ತ್ರೇತಾಯುಗ  ನೆಡದ ಒಂದು ಪ್ರಸಂಗ.
(ಪ್ರಸಂಗಕ್ಕೆ ಬಾಗೊತಿಗೆ ಆರದ್ದು ಕೇಳಿರೆ ಮುಳಿಯಬಾವಂದು ಉತ್ತರ ಇಲ್ಲೆ! 😉 )
ಧರ್ಮಯುತವಾಗಿ ರಾಜ್ಯಭಾರ ಮಾಡಿಂಡು ಇತ್ತಿದ್ದ ಸೂರ್ಯವಂಶ. ಅದರ್ಲಿ ಒಬ್ಬ ದಶರಥ – ಹತ್ತು ದಿಕ್ಕಂಗೆ ರಥ ತೆಕ್ಕೊಂಡು ಹೋವುತ್ತವ° – ಅಜ್ಜಕಾನಬಾವನ ಬೈಕ್ಕಿನ ಹಾಂಗೆ.
ಅವನ ಮಗನೇ ರಾಮ. ದಶರಥ ಹೋಮ ಮಾಡಿ ಹುಟ್ಟಿದ ನಾಲ್ಕು ಮಕ್ಕಳಲ್ಲಿ ಇವ ದೊಡ್ಡೋನು.
ಅಂಬಗ ಎಲ್ಲ ಈಗಾಣ ಮಾಪ್ಳೆಗಳ ಹಾಂಗಿದಾ, ದೊಡ್ಡ ಹೆಂಡತ್ತಿಯ ದೊಡ್ಡ ಮಗ – ಇವ°.
ಸಣ್ಣ ಪ್ರಾಯಲ್ಲೇ ವಿದ್ಯಾಭ್ಯಾಸ ಹೇಳಿಗೊಂಡು ಮನೆ ಬಿಟ್ಟು ಹೆರಟ°, ತಮ್ಮ ಲಕ್ಷ್ಮಣನನ್ನೂ ಕೂಡಿಗೊಂಡು, ಗುರು ವಿಶ್ವಾಮಿತ್ರನೊಟ್ಟಿಂಗೆ.
ವಿಶ್ವಾಮಿತ್ರನ ಯಜ್ಞಯಾಗಾದಿಗೊಕ್ಕೆ ರಕ್ಕಸರು ಮಾಂಸದ ತುಂಡುಗಳ ತಂದು ಹಾಕಿಂಡು ಇತ್ತಿದ್ದವಡ, ಹಾಂಗೆ ಅದರ ತಡವ ಅಮೋಘ ಜೆಬಾಬ್ದಾರಿಗೆ ಹೋಗಿತ್ತಿದ್ದ°.
ವಹಿಸಿಕೊಟ್ಟ ಧರ್ಮಕಾರ್ಯವ ಯಶಸ್ವಿಯಾಗಿ ನಿರ್ವಹಿಸಿದನಡ ರಾಮ.
ರಾಕ್ಷಸರ ಸಂಹಾರ ಮಾಡಿ ವಿಶ್ವಾಮಿತ್ರಂಗೆ ಕೊಶಿಪಡುಸಿದಕ್ಕೆ ರಾಮಂಗುದೇ ಕೊಶಿ ಕೊಡೆಡದೋ – ಅದಕ್ಕೆ ಒಂದು ಸ್ವಯಂವರಕ್ಕೆ ಕರಕ್ಕೊಂಡು ಹೋದನಡ ವಿಶ್ವಾಮಿತ್ರ.
ಆರಿಂಗೂ ಎತ್ತಲೆಡಿಯದ್ದ ಶಿವಧನುಸ್ಸಿನ ಆರಾಮಲ್ಲಿ ಎತ್ತಿ, ಬಾಣಬಿಡ್ಳೆ ಹೆರಟು ಮುರುದೇ ಬಿಟ್ಟ ರಾಮ!
ಬಿಂಗಿಪುಟ್ಟಂದೇ ಹಾಂಗೆ, ಮುಟ್ಟಿದ್ದರ ಮುರಿಗು, ಅಷ್ಟೂ ಲೂಟಿ ಮದಲಿಂಗೆ.
ಈಗ ಹಾಂಗಲ್ಲ, ಅದು ಬೇರೆ. ಮುಳಿಯಬಾವನ ಕುಶಾಲಿನ ಎಡಕ್ಕಿಲಿ ಕತೆ ಎಲ್ಲಿದ್ದು ಹೇಳಿಯೇ ಹುಡ್ಕುದು ಕಷ್ಟ ಆವುತ್ತು ಒಂದೊಂದರಿ! 😉
~
ಮತ್ತೆ ಸೀತೆಯ ಕಟ್ಟಿಗೊಂಡು ಪುನಾ ಅಪ್ಪನ (ಅರ)ಮನೆಗೆ ಬತ್ತನಡ.
ಪ್ರಾಯ ಆದ ದಶರಥಂಗೆ ಇನ್ನು ಒಯಿವಾಟು ಕಷ್ಟ ಆವುತ್ತು ಹೇಳ್ತ ಲೆಕ್ಕಲ್ಲಿ ದೊಡ್ಡಮಗಂಗೆ ಪಟ್ಟಕಟ್ಟಿ ಕೊಡ್ತದರ ಬಗ್ಗೆ ಚಿಂತನೆ ಆವುತ್ತು.
ಅದೇ ಹೊತ್ತಿಂಗೆ ಕೈಕೆಯ ಕೈಕ್ಕೆ ಮಾತುಗೊ ಕೇಳಿಗೊಂಡು ದಶರಥ ಕಂಗಾಲಾವುತ್ತನಡ. ಅನಿವಾರ್ಯವಾಗಿ ರಾಮನ ಕಾಡಿಂಗೆ ಕಳುಸುತ್ತನಡ.
ವನವಾಸದ ಲೆಕ್ಕಲ್ಲಿ, ಅಷ್ಟಪ್ಪಗ ಆತ್ಮೀಯ ತಮ್ಮ, ಲಕ್ಷ್ಮಣನೂ ಒಟ್ಟಿಂಗೇ ಇರ್ತ°.
ದಶರಥಂಗೆ ಮಂಡೆಬೆಚ್ಚ ಜೋರಾಗಿ, ಮುದಿಮರುಳು ಸುರುವಾಗಿ, ಒಂದು ದಿನ ತೀರಿಗೊಳ್ತ°!
ವನವಾಸದ ಆ ಇಡೀ ಕಾಲಲ್ಲಿ ರಾಮಲಕ್ಷ್ಮಣರ ತಮ್ಮ ಭರತನೇ ರಾಜ್ಯದ ಗುರಿಕ್ಕಾರ್ತಿಗೆ ಮಾಡ್ತ°.
ರಾಮನ ಚೆರ್ಪು ತೆಕ್ಕೊಂಡು ಸಿಂಹಾಸನಲ್ಲಿ ಮಡಗಿ, ಅದರ ಪರವಾಗಿಯೇ ಎಲ್ಲಾ ರಾಜ್ಯಭಾರ! (ಇನ್ನು ರಾಮ ಕೂಪ ಮೊದಲು ಕುರ್ಚಿ ಉದ್ದಿಗೊಳೆಕ್ಕಷ್ಟೆ – ಹೇಳಿದ ನೆಗೆಭಾವ!)
~
ಕಾಡಿಲಿ ಸೀತೆ-ಲಕ್ಷ್ಮಣನ ಒಟ್ಟಿಂಗೆ ಜೀವನ ಮಾಡಿಗೊಂಡಿಪ್ಪಗ ಹತ್ತುತಲೆಯ ರಕ್ಕಸ ರಾವಣ ಸನ್ಯಾಸಿಯ ವೇಶಲ್ಲಿ ಬತ್ತ°.
ಈಗಳೂ ಸುಮಾರು ಜೆನ ರಾವಣಂಗೊ ಸನ್ಯಾಸಿ ವೇಶ ಹಾಕಿಗೊಂಡಿದವಡ, ಬೆಂಗುಳೂರಿನ ಪೆರ್ಲದಣ್ಣ ಹೇಳಿತ್ತಿದ್ದ°!
ಅಂತೂ ಈ ಮೂಲ ರಾವಣ ಬಂದು ನಮ್ಮ ಸೀತಕ್ಕನ ಎತ್ತಿಗೊಂಡು ಹೋವುತ್ತ, ರಾಮ ಇಲ್ಲದ್ದ ಕಾಲಲ್ಲಿ.
ಜಟಾಯು ಹಕ್ಕಿ ಅಡ್ಡಕಟ್ಟಿದ್ದಕ್ಕೆ ರೆಕ್ಕೆ ತುಂಡುಸಿಗೊಂಡು, ರಾಮನತ್ರೆ ಹೇಳಲೆ ಎಕ್ಕು ಹಿಡ್ಕೊಂಡು ಕೂರ್ತು!
ರಾಮಂಗೆ ಶುದ್ದಿ ಗೊಂತಾಗಿ ಸೀತೆಯ ಒಪಾಸು ಕರಕ್ಕೊಂಡು ಬಪ್ಪಲೆ ಹೋವುತ್ತ°, ಲಕ್ಷ್ಮಣನೊಟ್ಟಿಂಗೆ.
ದಕ್ಷಿಣದ ಹನುಮಂತ, ಸುಗ್ರೀವ – ಇತ್ಯಾದಿ ಮಂಗಂಗಳ ಸಹಯೋಗ ಸಿಕ್ಕುತ್ತು. ಜಂಬೂದ್ವೀಪ ಭಾರತಂದ ದ್ವೀಪದೇಶ ಲಂಕೆಗೆ ಸಂಕ ಕಟ್ಟುತ್ತವು.
ಈಗಳೂ ಅದರ ಕುರುಹು ಇದ್ದಡ, ಬೈಲಿಂಗೆ ಗಣೇಶಮಾವ ಹೇಳಿತ್ತಿದ್ದವು (ಸಂಕೊಲೆ)
ರಾಮ-ಲಕ್ಷ್ನಣ- ರಾಮಭಕ್ತಹನುಮ-ಜಾಂಬವ-ಸಹಸ್ರಾರು ಮಂಗಂಗೊ – ಎಲ್ಲೋರ ಒಟ್ಟಿಂಗೆ ಸೇರಿಗೊಂಡು ಲಂಕೆಯ ನಾಶ ಮಾಡಿ ರಾವಣನ ಕೊಂದು, ಸೀತೆಯ ಕರಕ್ಕೊಂಡು ಬತ್ತನಡ.
ಚೆಂದಕೆ ಅಯೋಧ್ಯೆಲಿ ರಾಜ್ಯಭಾರ ಮಾಡ್ತನಡ.
ಮುಳಿಯಭಾವ ಸೂಕ್ಷ್ಮವಾಗಿ ತಿಳುಸಿಕೊಟ್ಟವು, ರಾಮನ ಇತಿಹಾಸದ ಬಗ್ಗೆ.

ನಮ್ಮ ಗುರುಗೊ ರಾಮಾಯಣದ ಕತೆಯ ಭಾರೀ ಚೆಂದಲ್ಲಿ ಬರೆತ್ತವಡ ಬ್ಲೋಗಿಲಿ. ಪೆರ್ಲದಣ್ಣ ಕೊಟ್ಟ ಸಂಕೊಲೆ ಇಲ್ಲಿದ್ದು.
~
ಆ ರಾಜ್ಯಭಾರ ಎಂದೆಂದಿಂಗೂ ಹೆಸರು ಹೋಪ ನಮುನೆದಡ.
ರಾಮರಾಜ್ಯ ಹೇಳಿಯೇ ಹೆಸರಡ. ಅಯೋಧ್ಯೆ ಅದರ ಕೇಂದ್ರಬಿಂದು ಅಡ.

ರಾಮ ಮಂದಿರ

ಮೊನ್ನೆ ಅಶೋಕೆಲಿ ಗುರುಗೊ ಉಪನ್ಯಾಸ ಮಾಡುವಗ ಅಯೋಧ್ಯೆಯ ವರ್ಣನೆ ಮಾಡಿತ್ತಿದ್ದವು! ಅದ್ಭುತ ಇತ್ತಡ, ಗುರಿಕ್ಕಾರ್ರು ಹೇಳಿತ್ತಿದ್ದವು.
ಧರ್ಮ-ನಿಷ್ಟೆ-ನಯ-ವಿನಯ-ಪ್ರೀತಿ-ಅನುಕಂಪ ಎಲ್ಲವೂ ಇದ್ದ ಅಪೂರ್ವ ರಾಜ್ಯ ಆಗಿತ್ತಡ ಅದು. ಅಧರ್ಮ-ಕೊಲೆ-ಸುಲಿಗೆ-ದರೋಡೆ-ಕಳ್ಳತನ-ಹಿಂಸೆ ಎಂತದೂ ಅಲ್ಲಿತ್ತಿಲ್ಲೆಡ.
ನಮ್ಮ ಗಾಂಧಿಅಜ್ಜಂಗೆ ಆಧುನಿಕ ಭಾರತವೂ ಹಾಂಗೇ ಆಯೆಕ್ಕು ಹೇಳಿ ಇತ್ತಡ!
~
ಇಂದಿಂಗೂ ಯೇವದಾರು ರಾಜ್ಯಭಾರ ತುಂಬ ಒಳ್ಳೆದಿದ್ದರೆ ’ರಾಮರಾಜ್ಯ’ದ ಹಾಂಗೆ – ಹೇಳ್ತವಡ ಜೆನಂಗೊ.
ಆ ಅಮೋಘ ರಾಜ್ಯದ ಕೇಂದ್ರಸ್ಥಾನ ಅಯೋಧ್ಯೆ ಆಗಿತ್ತಡ.
ಎಲ್ಲೋರ ಬಾಯಿಲಿಯೂ ಅಯೋಧ್ಯೆಯ ವೈಭವದ ಶುದ್ದಿಯೇ ಇತ್ತಡ!
~
ಇತಿಹಾಸ:
ಮಾಷ್ಟ್ರುಮಾವಂಗೆ ಇತಿಹಾಸ ಒಳ್ಳೆತ ಅರಡಿಗು.
ಪುರಾಣಕ್ಕೂ, ಇತಿಹಾಸಕ್ಕೂ ನಿರ್ದಿಷ್ಟವಾದ ಸಂಬಂಧವೂ ಇಲ್ಲೆ, ನಿರ್ದಿಷ್ಟವಾದ ವಿತ್ಯಾಸವೂ ಹುಡ್ಕಲೆಡಿಯ – ಹೇಳಿ ಮಾಷ್ಟ್ರುಮಾವ° ಯೇವತ್ತೂ ಹೇಳುಗು.
ಇತಿಹಾಸವೇ ಪುರಾಣ ಅಪ್ಪದೋ, ಪುರಾಣವೇ ಇತಿಹಾಸ ಅಪ್ಪದೋ – ಇಂದ್ರಾಣ ಘಟನೆ ಮುಂದೆ ಇತಿಹಾಸ ಆಗಿಂಡು, ಅದರಿಂದಲೂ ಮುಂದೆ ಪುರಾಣ ಆಗಿಬಿಡ್ತೋ- ನವಗರಡಿಯ!
ಎಂತದೇ ಇರಳಿ, ಸದ್ಯದ ಇತಿಹಾಸ ನವಗೆ ಅರಡಿಗು!

ಭಾರತದ ಮಧ್ಯಕಾಲಲ್ಲಿ ಯವನ ರಾಜ್ಯಂಗೊ ಧಾರಾಳ ಇತ್ತಡ. ಈಗಾಣ ಮಾಪ್ಳೆಗಳ ಮೂಲ! ಅದೇ ಬುದ್ಧಿ!!
ಮೊಘಲರ ಆಳ್ವಿಕೆಲಿ ರಾಮರಾಜ್ಯದ ಸರೀ ಉಳ್ಟ! ರಾಮರಾಜ್ಯಕ್ಕೆ ವಿರೋದಾರ್ಥ ಶಬ್ದ, ಅದೇ ಜಾಗೆಲಿ ಉಂಟಾತು.
ಧರ್ಮಕ್ಕೆ ಯೇವ ಬೆಲೆಯೂ ಇತ್ತಿಲ್ಲೆ, ಕೇವಲ ಶೆಗ್ತಿಗೆ ಮಾಂತ್ರ ಬೆಲೆ ಇದ್ದದು!
ಮಾಪ್ಳೆಗಳ ಧರ್ಮಕ್ಕೆ ಸೇರಿದ್ದಿಲ್ಲೆ ಹೇಳಿ ಆದರೆ ಕೊಲ್ಲುದೇ. ಬದುಕ್ಕೆಕ್ಕಾ, ಒಂದೋ ಹುಗ್ಗೆಕ್ಕು, ಅಲ್ಲದ್ದರೆ ಮಾಪ್ಳೆ ಆಯೆಕ್ಕು.
ಎಷ್ಟು ದೇವಸ್ಥಾನ ಹೊಡಿಮಾಡಿದವೋ! ಕಾಶಿ, ವಾರಣಾಸಿ, ಸೋಮನಾಥ – ಒಂದೋ ಎರಡೋ – ಸಾವಿರಾರು.
ಹೊಡಿ ತೆಗವದು ಮಾಂತ್ರ ಅಲ್ಲ, ಅಲ್ಲಿ ಒಂದು ಪಳ್ಳಿ ಕಟ್ಟುದು.
ನಮ್ಮದೇ ದೇವಸ್ಥಾನದ ಕಂಬಂಗೊ, ಅದರದ್ದೇ ಕೋಲುಕೊದಂಟಿಗೊ, ಅದೇ ಕಟ್ಟೋಣ, ಮೂರ್ತಿ ಒಂದೇ ಇಲ್ಲೆ, ಅಷ್ಟೆ!
~
ರಾಮ ಅರಸ ಆದರೂ, ಮುಂದಾಣೋರಿಂಗೆ ದೇವರೇ ಆಗಿ ಬಿಟ್ಟ. ರಾಮರಾಜ್ಯದ ಅರಮನೆ, ಮುಂದಾಣ ಪೀಳಿಗೆಗೆ ದೇವರ ಮನೆ ಆತು.
ರಾಮನ ಜನ್ಮಸ್ಥಾನಲ್ಲಿ ರಾಮಂಗೆ ನಿತ್ಯಪೂಜೆ, ಭಜನೆ ಆಗಿಂಡು ಇತ್ತಿದ್ದು.
ರಾಮ, ಲಕ್ಷ್ಮಣ, ಹನುಮಂತ, ಸೀತೆ – ಇವಕ್ಕೆಲ್ಲ ಒಂದೊಂದು ಗುಡಿ ಇತ್ತಡ ಅಲ್ಲಿ.
ಈ ದೇವಸ್ಥಾನವನ್ನುದೇ ಮಾಪ್ಳೆಗೊ ಹೊಡಿ ತೆಗದವು. ಅಲ್ಲಿಯೂ ಒಂದು ಪಳ್ಳಿ ಕಟ್ಟಿದವು.
ಮಸ್ಜೀದ್-ಎ-ಜನ್ಮಸ್ತಾನ್ (ಜನ್ಮಸ್ಥಾನಲ್ಲಿಪ್ಪ ಪಳ್ಳಿ)- ಹೇಳಿ ಅಂಬಗಾಣೋರು ದಿನಿಗೆಳಲೆ ಸುರು ಮಾಡಿದವು.
ಕೆಲವು ಜೆನ ಮಸ್ಜೀದ್ ಸೀತಾ ರಸೋಯಿ ಹೇಳಿಯೂ ಹೇಳಿಗೊಂಡು ಇತ್ತಿದ್ದವು.

ಎಷ್ಟು ಜೆನ ಅಂಬಗ ಬೇಜಾರು ಪಟ್ಟುಗೊಂಡಿವೋ, ಎಷ್ಟು ಜೆನ ವಿರೋದಮಾಡ್ಳೆ ಹೋಗಿ ಸತ್ತಿದವೋ – ದೇವರಿಂಗೇ ಅರಡಿಗಷ್ಟೆ!
ಆ ಕಾಲಲ್ಲಿ ಎಲ್ಲೋರ ಬಾಯಿಲಿಯೂ ಬೌಷ್ಷ ಈ ಅಯೋಧ್ಯದೇ ಶುದ್ದಿ ಬಂದುಗೊಂಡಿದ್ದಿಕ್ಕಷ್ಟೆ.
ಕಾಲಾಂತರ ಹೀಂಗೇ ನೆಡಕ್ಕೊಂಡು ಇತ್ತು.
ಎದುರು ಮಾತಾಡ್ಳೆ ಆರುದೇ ಇತ್ತಿದ್ದವಿಲ್ಲೆ, ಮಾತಾಡಿದ ಆರುದೇ ಬದುಕ್ಕಿರ್ತವಿಲ್ಲೆ ಇದಾ!
~
ಪ್ರಸ್ತುತ:
ಪ್ರಸಕ್ತ ವಿದ್ಯಮಾನಲ್ಲಿ,
ಆ ಜಾಗೆಲಿ ಸುಮಾರು ವಿತ್ಯಾಸ ಆತು.
ಅಯೋಧ್ಯೆಯ ಮೂಲ ಹಿಡುದು ಮಾತಾಡಿದ ನಮ್ಮೋರು – ಅದು ನಮ್ಮದೇ ಜಾಗೆ, ಪಾವಿತ್ರ್ಯ ಇಪ್ಪ ಸತ್ವದ ಜಾಗೆ ಹೇಳ್ತ ಮಾತುಗಳ ಹೇಳಿದವು.
ಅದೇ, ಅದರ ಆ ಮಸೀದಿಯ ಮಾಂತ್ರ ಕಂಡೋರು, ಅಲ್ಲಿ ಒಂದು ಪಳ್ಳಿ ಇಪ್ಪದು, ಹಾಂಗಾಗಿ ಅದುವೇ ದೊಡ್ಡದು ಹೇಳಿದವಡ.
~
ಈ ಗಲಾಟೆ ಸುಮಾರು ಇನ್ನೂರೊರಿಶ ಮೊದಲು ಸುರೂವಾಣ ಸರ್ತಿ ಕಂಡತ್ತಡ.
ಅಂಬಗ ಇದ್ದದು ಇಂಗ್ಳೀಶರು – ನಾವು ನಮ್ಮೊಳ ಕಚ್ಚಿಗೊಂಡಷ್ಟೂ ಅವಕ್ಕೆ ಕೊಶಿಯೇ ಇದಾ.
ಅಂಬಗ ಮತ್ತೆಂತದೂ ಆಯಿದಿಲ್ಲೆ,
ಸುಮಾರು ನೂರೊರಿಶ ಮೊದಲು ಮತ್ತೊಂದರಿ ಜಗಳ ಆತಡ. ಕೆಲವು ಸತ್ತವು.
ಮತ್ತೆ ಐವತ್ತೊರಿಶ ಕಳುದು ಪುನಾ ಒಂದರಿ, ಹೀಂಗೆ ಎರಡೂ ಗುಂಪುಗೊಕ್ಕೆ ಜಗಳ ಆಯ್ಕೊಂಡೇ ಇತ್ತು!
~
ಹೀಂಗೆ ಜಗಳ ಇದ್ದ ಕಾರಣ ಆ ಪಳ್ಳಿಯ ಬಾಗಿಲು ಮುಚ್ಚಿ, ಇಬ್ರಿಂಗೂ ಪ್ರವೇಶ ಇಲ್ಲೆ ಹೇಳಿ ಮಾಡಿ ಮಡಗಿದವಡ.
ದೇವರೂ ಇಲ್ಲೆ, ಗಂಟೆಯೂ ಇಲ್ಲೆ, ಬಾಂಗುದೇ ಇಲ್ಲೆ!
ಪುರಾಣಲ್ಲಿ ಸಂಪೂರ್ಣ ಗಿಜಿಗಿಜಿ ಜನಜಂಗುಳಿ ಇದ್ದ ಅಯೋಧ್ಯೆಲಿ, ಇತಿಹಾಸಲ್ಲಿ ಗಲಾಟೆ-ದೊಂಬಿಗಳ ಗೂಡಾಗಿದ್ದ ಆ ಜಾಗೆಲಿ ಸ್ಮಶಾನ ಮವುನ. ಆರನ್ನೂ ಹೋಪಲೆ ಬಿಟ್ಟಿದವಿಲ್ಲೆ!
~
ನವಗೆಲ್ಲೊರಿಂಗೂ ನೆಂಪೊಳಿವಂತಾದ್ದು ಹತ್ತು-ಹದಿನೆಂಟು ಒರಿಶ ಮೊದಲು ಆದ ಒಂದು ಗಟಣೆ.
ಆ ರಾಮರಾಜ್ಯದ ಕೇಂದ್ರಬಿಂದು ಮತ್ತೊಂದರಿ ಎಲ್ಲೋರ ಬಾಯಿಲಿ ಬಂದುಗೊಂಡಿದ್ದು.
ಇದು ಹೀಂಗಿಪ್ಪಲೆ ರಾಮ ಬಿಡುಗೋ?
1992 ಡಿಸೆಂಬರು ಆರಕ್ಕೆ – ಸಂತರ, ಕಾರ್ಯಕರ್ತರ, ಸ್ವಯಂಸೇವಕರ, ಚಿಂತಕರ, ಹಿಂದೂ ಧಾರ್ಮಿಕರ ಒಂದು ಗುಂಪು ಸೀತ ಹೋಗಿ ಆ ಮುರ್ಕಟೆ ಪಳ್ಳಿಯ ತಲೆಮೇಲೆ ಹತ್ತಿ ಕೊಣುದವು.

ಪಳ್ಳಿ ಹೊಡಿ ಮಾಡುವ ಕ್ಷಣ

ಸಾವಿರಾರು ಒರಿಶದ ಅಯೋಧ್ಯೆಯ ಅಂದು ಮುರುದವಲ್ಲದೋ – ಅಂಬಗಾಣ ಸೇಡಿನ ಈಗ ತೀರುಸಿಗೊಂಡವು.
ನೂರಾರು ಒರಿಶಂದ ಇದ್ದ ಅಧರ್ಮಕೇಂದ್ರವ ಹೊಡಿ ತೆಗದವು.

ಹಳ್ಳಿಹಳ್ಳಿಂದ ಹೋದ ಜೆನಂಗೊ ಅದರಲ್ಲಿ ಪಾಲ್ಗೊಂಡವಡ.
ಊರೂರಿಂದ ಇಟ್ಟಿಗೆಗಳ ತೆಕ್ಕೊಂಡು ಹೆರಟವಡ,
ನಮ್ಮ ಬೈಲಿನ ಇಟ್ಟಿಗೆಯ ಊರೋರ ಅಭಿಮಾನದ ನೆರಿಯದಜ್ಜ ಪೂಜೆಮಾಡಿ ಕಳುಸಿದ್ದಡ, ಮಾಷ್ಟ್ರುಮಾವ° ಹೇಳಿದವು.
ಇಡೀ ದೇಶದ ಮಣ್ಣು ಅಲ್ಲಿ ಸೇರಿತ್ತಡ. ಇಡೀ ದೇಶದ ಪ್ರೀತಿ ಅಲ್ಲಿ ಸೇರಿತ್ತು, ಇಡೀ ದೇಶದ ಶೆಗ್ತಿ ಅಲ್ಲಿ ಸೇರಿತ್ತು.
~

ಹೊಡಿ ತೆಗದ್ದು ಮಾಂತ್ರ ಅಲ್ಲ, ಮತ್ತೊಂದರಿ ಅಲ್ಲಿ ಸುಂದರ ಅಯೋಧ್ಯಾ ರಾಮನ ಮಂದಿರ ಕಟ್ಟುತ್ತ ಕಾರ್ಯವನ್ನುದೇ ಸಂಕಲ್ಪ ಮಾಡಿಗೊಂಡವು.
ಆ ಕಾರ್ಯಲ್ಲಿ ಅಡ್ವಾಣಿಅಜ್ಜ, ಓಜುಪೇಯಿ ಅಜ್ಜ, ಸಿಂಘಾಲಜ್ಜ, ಪೇಜಾವರದ ಅಜ್ಜ – ಎಲ್ಲೋರುದೇ ಇತ್ತಿದ್ದವಡ, ಗುರಿಕ್ಕಾರ್ತಿಗೆ ಮಾಡಿಗೊಂಡು!! (ಇದು ಗುಟ್ಟಿನ ವಿಶಯ ಇದಾ..!)
ಸಂಘದವು ಎಲ್ಲೊರುದೇ ನಮ್ಮ ಧರ್ಮವ ಒಳಿಶಲೆ ತುಂಬ ಹೋರಾಡಿದ್ದವಡ – ಅಕ್ಷರದಣ್ಣ ಹೇಳಿಗೊಂಡಿತ್ತಿದ್ದವು.
ಹ್ಮ್,
ಅಂಬಗಾಣ ಆ ಗಲಾಟೆಯ ಸಂಗತಿ ಮುಂದುವರುಕ್ಕೊಂಡೇ ಇತ್ತು.
ಅಲ್ಯಾಣ ಹಾಯ್ಕೋರ್ಟಿಲಿ ನಂಬ್ರ ನೆಡಕ್ಕೊಂಡು ಇತ್ತು.
ಅಯೋಧ್ಯೆಯ ಗರ್ಪಿದವು, ಗರ್ಪಿದವು, ಎಂತ ಸಿಕ್ಕಿತ್ತು ಗೊಂತಿಲ್ಲೆ.
ಗರ್ಪಿದ್ದರಲ್ಲಿ ನಮ್ಮ ಹೊಡೆಂಗೆ ತೀರ್ಪು ಬಪ್ಪ ಕೆಲವೆಲ್ಲ ವಸ್ತುಗೊ ಇದ್ದು ಹೇಳಿ ಅಜ್ಜಕಾನಬಾವ ಹೇಳಿತ್ತಿದ್ದ°.
ಎಲ್ಲೋರುದೇ ಕಾದು  ಕೂದ್ದೇ ಬಾಕಿ, ಕುದುಕ್ಕ ಕಾದ ಹಾಂಗೆ! 😉
ವಾಯಿದೆ ಕೆಲವೂ ಸರ್ತಿ ಮುಂದೆ ಹೋತು, ಮುಂದೆ ಹೋತು, ಜಡ್ಜಿಗೊಕ್ಕೆ ಬೊಡಿವನ್ನಾರ!
~

ಸಾವಿರಾರು ಒರಿಶದ ಕತೆ, ನೂರಾರು ಒರಿಶದ ಐತಿಹ್ಯ, ಹತ್ತಾರು ಒರಿಶದ ವಿಚಾರಣೆ – ಇದೊಂದು ಹೆರ ಬಪ್ಪಗ ಅಂತೇ ಹೋಕೋ!
ಎಲ್ಲೋರ ಕೊರಳು ಕುತ್ತ ಆಗಿ ಆಗಿ ಬಚ್ಚಿದ್ದು!
ಎಷ್ಟೇ ಕಾದರೂ, ಅದಕ್ಕೊಂದು ಅಂತ್ಯ ಇದ್ದನ್ನೆ.
ಬಪ್ಪವಾರ  (ಸೆಪ್ಟಂಬರು 29, 2010) ಅದರ ತೀರ್ಪು ಯೇವಗ ಬತ್ತು ಗೊಂತಕ್ಕಡ, ಪೆರ್ಲದಣ್ಣ ಹೇಳಿದ.
ಇಂದೊಂದು ಕ್ರಾಂತಿಯೇ ಆಗಿ ಹೋಕು ಹೇಳಿ ಎಲ್ಲೋರ ನಿರೀಕ್ಷೆ.
ಆದರೆ, ಇದು ಅಕೇರಿ ಅಲ್ಲ, ಇದೇ ಕೋರ್ಟಿಂಗೆ ರಿವಿಶನು (Revision petition) ಮಾಡ್ಲೆ ಹಾಕಲಕ್ಕು, ಅದೂ ಅಲ್ಲದ್ದರೆ ಇದರಿಂದ ಮೇಗೆ ಸುಪ್ರೀಮುಕೋರ್ಟು ಇದ್ದು. ಹಾಂಗಾಗಿ ಪರ-ವಿರೋಧ ಹೇಂಗೇ ಬಂದರೂ ಜಗಳ ಮುಂದುವರಿಗು – ಹೇಳಿ ಕೆದೂರು ಒಕೀಲ್ತಿ ಅವರ ಯೆಜಮಾನರ ಹತ್ತರೆ ಮಾತಾಡಿಗೊಂಡು ಇತ್ತಿದ್ದವು.
~
ಅಯೋಧ್ಯೆಲಿ ಗರ್ಪುವಗ ಶಂಕದ ತುಂಡು, ಮಣಿ ಎಲ್ಲ ಸಿಕ್ಕಿದ್ದಡ,
ಹಾಂಗಾಗಿ ತೀರ್ಪು ನಮ್ಮ ಹೊಡೇಂಗೇ ಬಕ್ಕು – ಹೇಳಿದವು ಮಂದಾರಮಾವ°.

ಆದರೆ ಮೇಗೆ ಸೊನೆಗಾಂದಿ ಇದ್ದು, ನಮ್ಮವರ ಓಟು ಹೋದರೂ ಚಿಂತೆ ಇಲ್ಲೆ, ಬ್ಯಾರಿಗಳ ಪೋಚಕಾನ ಮಾಡದ್ದೆ ಇರ ಹೇಳಿ ಗುಣಾಜೆಮಾಣಿಗೆ ಹೆದರಿಕೆ!
ತೀರ್ಪು ನಮ್ಮ ಹೊಡೇಂಗೇ ಬಕ್ಕು- ಹೇಳ್ತದು ಎಲ್ಲೋರ ನಿರೀಕ್ಷೆ (ಎರಡೂ ಹೊಡೇಣವು!).
ಈಗ – ಶುದ್ದಿ ಹೇಳುವಗ ಇನ್ನುದೇ ತೀರ್ಪು ಬಯಿಂದಿಲ್ಲೆ.  ಬಂದ ಮತ್ತೆ ಒಪ್ಪಲ್ಲಿ ಮಾತಾಡಿಗೊಂಬ,
ಎಂತ ಹೇಳ್ತಿ?!
~

ಅದೇನೇ ಇರಳಿ,
ಧರ್ಮ, ಶಾಂತಿ, ನ್ಯಾಯ – ಇದಕ್ಕೆ ಬೇಕಾಗಿ ರಾಮ ಅವನ ಜೀವನಪರಿಯಂತ ನೆಡಕ್ಕೊಂಡ°.
ಲೋಕೋತ್ತರ ದೇವರಾಗಿ ಮಾದರಿಲಿ ನಿಂದ ರಾಮ ಇಂದಿಂಗೆ ಎಲ್ಲೋರ ಗಮನಕ್ಕೆ ಕಾರಣ ಆಯಿದ°! ‘ಆದರ್ಶ ಪುರುಷ’ ಹೇಳಿಯೇ ಪ್ರಸಿದ್ಧ ಅಲ್ಲದೋ ಶ್ರೀರಾಮ!
ಆದರೆ ಈಗ ಶಾಂತಿ ಕಾಪಾಡೆಕ್ಕಾದ ವಿಷಯಕ್ಕೋಸ್ಕರ ಅಶಾಂತಿಯೇ ನೆಡದು ಹೋವುತ್ತು.
ಸುಭಿಕ್ಷೆಯ ಅಯೋಧ್ಯೆಲಿ ಈಗ ದುರ್ಭಿಕ್ಷೆ – ಅಶಾಂತಿ!

ದೇವರೇ!
ರಾಮನೇ ಕಾಪಾಡೆಕ್ಕಷ್ಟೆ.
~
ಅಂದು ರಾಮನ ಕಾಲಲ್ಲಿ, ಅಯೋಧ್ಯೆಗೆ ಹೋಗಿ ಅಯ್ಯೋ -ಹೇಳಿ ತೊಂದರೆಗಳ ಹೇಳಿರೆ ನಿವುರ್ತಿ ಆಯ್ಕೊಂಡಿತ್ತು, ಈಗಾಣೋರು ಅಯೋಧ್ಯೆಗಾಗಿ ಅಯ್ಯೋ ಹೇಳೆಕ್ಕಷ್ಟೆ!
ಗೆದ್ದ ಕೊಶಿ, ಸೋತ ಬೆಶಿ – ಎರಡೂ ವಿಶಯಕ್ಕೆ ಎರಡೂ ಹೊಡೇಣವು ಸಿದ್ಧರಾಯಿದವಡ, ಇಡೀ ದೇಶಲ್ಲಿ.
ನಾವು ಸೋತರೆ ಅಯ್ಯೋರಾಮಾ – ಹೇಳಿರೆ, ಆಚವು ಸೋತರೆ ಯಾಲ್ಲಾ- ಹೇಳಿ ಬೊಬ್ಬೆ ಹೊಡಗು! – ಹೇಳಿ ಪೆರ್ಲದಣ್ಣ ನೆಗೆಮಾಡಿಂಡು ಪೋನು ಮಡಗಿದ° ಆಗ.

ಒಂದೊಪ್ಪ:
ಅಂದು ರಾಮ ಅಯೋಧ್ಯೆಲಿದ್ದೊಂಡು ಲೋಕವ ಕಾದ!
ಈಗ ಲೋಕದವು ರಾಮ ಅಯೋಧ್ಯೆಲಿ ಕೂಪದರ ಕಾಯೆಕ್ಕಷ್ಟೆ!

ಸೂ:

61 thoughts on “ಅಯ್ಯೋ ರಾಮಾ – ಯಾಲ್ಲಾ!! ಅಯ್ಯೋ ಅಯ್ಯೋ ಅಯೋಧ್ಯಾ…!!

  1. ಮೊಘಲರ ದಾಳಿಗೆ ತುತ್ತಾದ್ದು ಅಯೋಧ್ಯೆ ಮಾ೦ತ್ರ ಅಲ್ಲ.ನಮ್ಮ ಗುಜರಾತಿನ ಸೋಮನಾಥ ದೇವಸ್ಥಾನ,ಕಾಶಿ,ಮಥುರಾ ಹಿ೦ಗೆ ಸುಮಾರು ೩೫೦೦೦ ದೇವಸ್ಥಾನ ನಾಶ ಆಯಿದು.ಉತ್ತರ ಭಾರತಲ್ಲಿ ಮೊಘಲರು,ದಕ್ಷಿಣ ಬಾರತಲ್ಲಿ ಟಿಪ್ಪು,ಹೈದರಾಲಿ,ನವಾಬರು ನಾಶ ಮಾಡಿದ್ದದು.ಮತ್ತೆ ತಾಜ್ ಮಹಲ್ “ತೇಜೋ ಮಹಾಲಯ” ಹೇಳ್ತ ನಮ್ಮ ಬ್ರಾಹ್ಮಣರಿ೦ಗೆ ವೇದ ಹೇಳಿಕೊಡುವ ವೇದಪಾಠ ಶಾಲೆ ಆಗಿದ್ದತ್ತು.ಅದೇ ರೀತಿ “ಕುತುಬ್ ಮಿನಾರ್”ನ ಮೂಲ ಹೆಸರು “ವಿಷ್ಣ ಸ್ಥ೦ಭ” ಹೇಳಿ.ಅದು ಕಟ್ಟುಸಿದ್ದು ವರಾಹ ಮಿಹಿರ.

  2. ಎಲ್ಲೋರ ನಿರೀಕ್ಷಗೋಕ್ಕೂ ಒ೦ದು ಅ೦ತ್ಯ ಬ೦ತಲ್ಲದೊ.ಶ್ರೀಗೊ ಹೆಳಿದ ಹಾ೦ಗೆ ಹನುಮನ ಕೆಲಸ ಸುರುವಾದ ಕೂಡ್ಲೆ ರಾಮ ಮ೦ದಿರದ ವಿಮೋಚನೆ ಒ೦ದು ಅದ್ಬುತ. ದೇವರ ದಾರಿಗೊ ನವಗೆ ಗೊ೦ತಾಗ ಅಲ್ಲದೊ?ಒ೦ದು ರೀತಿಯ ನಿರಾಶಾ ಭಾವ ತು೦ಬಿಪ್ಪಾಗ ಬ೦ದ ಅರೆ ಸ೦ತೋಷದ ಸುದ್ದಿ.ಬ್ಯಾರಿಗೋಕ್ಕೆ ಒ೦ದು ಸೂಜಿ ಮೊನೆ ಕುತ್ತುವ ಜಾಗೆ ಸಿಕ್ಕಿರೂ ಅವು ತೊ೦ದರೆ ಮಾಡದ್ದೆ ಇರವು ಹಾ೦ಗಿಪ್ಪಗ ಮೂರನೆ ಒ೦ದು ಭಾಗದ ಹಕ್ಕು ಇ೦ದಲ್ಲ ನಾಳೆ ತೊ೦ದರೆಯೆ.ಆಗಲಿ ನಾವು ನ೦ಬಿದ ಶ್ರೀರಾಮನ ಬಾಣ೦ಗೊ ನಾಟೆಕಾದಲ್ಲಿಗೆ ನಾಟುಗು.ಇನ್ನು ಎನ್ನ ಅಭಿಪ್ರಾಯ ಅದೆ ಆ ದೆವರು ಶ್ರೀರಾಮ ಅಲ್ಲಿ೦ದಲೆ ಬಾಣ ಪ್ರಯೋಗ ಮಾಡಿ ಹೆರಾಣ ಹಾ೦ಗೂ ನಮ್ಮವು ಹೆಳಿಯೊ೦ಡು ನವಗೆ ದ್ರೋಹ ಮಡುವವರ ಸ೦ಹರಿಸಿ ಸರ್ವ ಜನಕ್ಕೂ ಸದಾ ಸರ್ವ ಮ೦ಗಳವನ್ನೂ ಮಾಡ್ಲಿ.ಭವ್ಯ ಶ್ರೀರಾಮ ಮ೦ದಿರವ ಈ ಜನ್ಮಲ್ಲೇ ನೋಡುವ ಭಾಗ್ಯ ಎನ್ನ ಹಾ೦ಗಿಪ್ಪ ವಯಸ್ಸಾದವಕ್ಕೂ ಸಿಕ್ಕಲಿ.ಈ ಬಗ್ಯೆ ಸ೦ತೋಷ ಪಡ್ತ ಸರ್ವ ಜನ ಸಮೂಹಕ್ಕೂ ಈ ಬಗ್ಯೆ ಒಳ್ಳೆ ತೀರ್ಪು ಕೊಟ್ಟ ಆ ಜಡ್ಜ೦ಗೋಕ್ಕೂ ಈ ಒ೦ದು ವ್ಯವಸ್ತೆ ಮಾಡಿ ಕೊಟ್ಟ ಒಪ್ಪ೦ಣ್ಣಗೂ ಒಪ್ಪ೦ಗೊ.ಈ ಸೈಟಿ೦ಗೆ ಬ೦ದು ನಮ್ಮ ಹರಸುವದರೊಟ್ಟಿ೦ಗೆ ನವಗೆ ಉತ್ತೇಜನ ಕೊಟ್ಟ ಶ್ರೀಗಳಿ೦ಗೆ ಸಾಷ್ಟಾ೦ಗ ಪ್ರಣಾಮ೦ಗೊ.

  3. ಅಯೋಧ್ಯೆಯ ವಿಷಯಲ್ಲಿ ನಾವು ಇಷ್ಟು ವರ್ಷ ಕಾದು ಕೂದ್ದದಕ್ಕೆ ಸಿಕ್ಕಿದ ಫಲವೋ? ನಮ್ಮ ಮೂಲ ಮಠ ನವಗೆ ಸಿಕ್ಕಿತ್ತು… ಹಾಂಗೆ ನಮ್ಮ ರಾಮ ದೇವರ ಮೂಲ ನವಗೆ ಸಿಕ್ಕಿತ್ತು… ಇದು ಭಾಗ್ಯ ಅಲ್ಲದಾ? ಮಾಪ್ಳೆಗೊಕ್ಕೆ ನಿಜವಾಗಿ ಆ ಜಾಗೆ ನಮ್ಮಷ್ಟು ಪವಿತ್ರದ್ದು ಅಲ್ಲ. ಆದರೂ ಮೊದಲು ಹಿಂದೂಗಳ ಪ್ರಾಬಲ್ಯ ತಗ್ಗುಸುಲೇ ಮಾಡಿದ ಕೆಣಿಗ ಅದು… ಒಪ್ಪಣ್ಣ ಇದರ ಲಾಯಕಲ್ಲಿ ವಿವರ್ಸಿದ್ದ°. ಅಂತೂ ಪ್ರತಿಯೊಂದಕ್ಕೂ ಒಂದು ಕಾಲ ಇರ್ತು ಹೇಳುದು ಸ್ಪಷ್ಟ ಆತು. ಒಂದೊಪ್ಪ ಲಾಯಕಾಯಿದು.. ರಾಮ ಅಯೋಧ್ಯೇಲಿ ಕೂಪಲೆ ನಾವು ಕಾದ್ದದು ಇಷ್ಟು ಸಮಯ…, ಇನ್ನು ರಾಮ ಅಯೋಧ್ಯೇಲಿ ನಮ್ಮ ಪಾಲುಸುಗು ಅಲ್ಲದಾ?
    ||ಹರೇರಾಮ||

    1. ಸತ್ಯಮಾವಾ..
      ಮೂವತ್ತಾರನೇ ಒಪ್ಪದ ಮಹತ್ವ ತಿಳಿಶುವ ನಿಂಗಳ ಒಪ್ಪ ಕಂಡು ತುಂಬಾ ಕೊಶಿ ಆತು.
      ಸಂಖ್ಯಾಬೆಲೆಲಿ ಸಂಸ್ಥಾನದ್ದು 36 ಆಯಿಕ್ಕು, ಆದರೆ ಸ್ಥಾನಬೆಲೆಲಿ ಅದು ಸುರೂವಾಣದ್ದು. 🙂
      ಹರೇರಾಮ..

  4. ಅಂದು ರಾಮ ಹುಟ್ಟಿಪ್ಪಗ ಪ್ರಪಂಚಕ್ಕೆ ಎಂತ ಪ್ರಯೋಜನ ಆಗಿತ್ತಿದೋ..ಇಂದು ಅಲ್ಲಿ ರಾಮಮಂದಿರ ಆದರೆ ಪುನಃ ಹಾಂಗೇ ಅಕ್ಕು…

    1. || ಹರೇರಾಮ ಗುರುಗಳೇ ||
      ಇಂದೊಂದು ಐತಿಹಾಸಿಕ ದಿನ. ಸುಮಾರು ಒರಿಶದ ವಿಚಾರಣೆ ಮುಗ್ತಾಯ ಆಗಿ, ತೀರ್ಪು ಸಿಕ್ಕಿದ ದಿನ.
      {ಅಲ್ಲಿ ರಾಮಮಂದಿರ ಆದರೆ ಪುನಃ ಹಾಂಗೇ ಅಕ್ಕು}
      ಅಲ್ಲಿ ರಾಮಮಂದಿರ ಬಪ್ಪ ದಿನ ಹತ್ತರೆ ಆವುತ್ತಾ ಇದ್ದಾ ಗುರುಗಳೇ?
      ಶ್ರೀಅಕ್ಕ ಹೇಳಿದ ಹಾಂಗೆ, ಗೋಕರ್ಣ ಗೋಭಕ್ತರಿಂಗೆ ಸಿಕ್ಕಿ, ರಾಮಜನ್ಮಭೂಮಿ ರಾಮಭಕ್ತರಿಂಗೆ ಸಿಕ್ಕಿ, ಶಾಂತಿಪ್ರಿಯರಿಂಗೆ ಶಾಂತಿಸಿಕ್ಕಿ, ಎಲ್ಲೋರಿಂಗೂ ನೆಮ್ಮದಿ ಸಿಕ್ಕಿ, ಸುಖ-ಸೌಭಾಗ್ಯ-ಆಯುರಾರೋಗ್ಯ ಐಶ್ವರ್ಯ ಇದ್ದುಗೊಂಡು ಬಾಳುವ ದಿನ ಹತ್ತರೆ ಬತ್ತಾ ಇದ್ದಾ ಗುರುಗಳೇ?
      ಖುಷಿ ಆವುತ್ತಾ ಇದ್ದು ಎಂಗೊಗೆಲ್ಲ!
      ಹರೇರಾಮ

      1. ಗೋಕರ್ಣಲ್ಲಿ ಹನುಮಜನ್ಮಭೂಮಿಯ ಕಾರ್ಯ ಸುರುವಾದ ಕೂಡ್ಲೆ ರಾಮಜನ್ಮಭೂಮಿಯ ಕಾರ್ಯಂಗೊಕ್ಕೆ ಇಪ್ಪ ತಡೆಗೊ ನಿವಾರಣೆಯಪ್ಪದರ ನೋಡು…
        ತನ್ನ ಸೇವಕನ ಕಾರ್ಯ ಮೊದಲಾಯೆಕ್ಕು ಹೇಳಿ ಸ್ವಾಮಿಯ ಇಷ್ಟ..!

  5. ಈಗ ಹೀಂಗೆ ಅಲ್ಲದ?
    ರಾಮ ಬೇಡ ರಾಜ್ಯ ಬೇಕು!
    ರಾಜ್ಯ ಬೇಕು ಭಾರ ಬೇಡ!! (ಭಾರ=ಜವಾಬ್ದಾರಿ)

  6. ಒಪ್ಪಣ್ಣ ಸಂಕ್ಷಿಪ್ತ ರಾಮಾಯಣ ಲಾಯ್ಕಾಯಿದು… ಲೇಖನವುದೇ…
    ಚಿಲ್ಲರೆ ಭಾವಯ್ಯ ಒಳ್ಳೆ ವಿಚಾರವ ಪಾಯಿಂಟ್‌ ಮಾಡಿದ್ದ°

    1. {ಸಂಕ್ಷಿಪ್ತ ರಾಮಾಯಣ ಲಾಯ್ಕಾಯಿದು}
      ಮುಳಿಯಭಾವ ಎಂತ ಕತೆ ಹೇಳಿರೂ ಲಾಯಿಕಿರ್ತು.
      ರಘುರಾಮಾಯಣ ಇನ್ನೂ ಲಾಯಿಕಿದ್ದಡ, ಹೇಳ್ತೆ ಹೇಳ್ತೆ ಹೇಳಿ ಆಶೆ ಬರುಸಿದ್ದವು.
      ಕೋರ್ಟು ತೀರ್ಪು ಬಂದರೂ ಇವರ ರಾಮಾಯಣ ಬಯಿಂದಿಲ್ಲೆ, ಬೈಲಿನೋರು ಕಾದೇ ಬಾಕಿ!! 😉

  7. ಹೇಳಿದಾಂಗೆ.. 1950ರಲ್ಲಿ ಅಯೋಧ್ಯೆ ವಿಷ್ಯಲ್ಲಿ ಅಲಹಾಬಾದ್ ಹೈಕೋರ್ಟಿಲಿ ಕೇಸು ಆದ್ದು ಗೋಪಾಲ್ ಸಿಂಗ್ ವಿಶಾರದ, ಮಹಂತ ಪರಮಹಂಸ ರಾಮಚಂದ್ರ ದಾಸ್ ಕೇಸು ಕೊಟ್ಟದು ಮತ್ತೆ 1959ರಲ್ಲಿ ನಿಮೋಹಿ ಅಖಾರ, ಮಹಂತ ರಘುನಾಥ ಕೇಸು ಕೊಟ್ಟಿದವು. ಮತ್ತೆ ಉತ್ಖನನ ಮಾಹಿತಿ ನೋಡ್ಲೆ ಇಲ್ಲಿದ್ದು…

    http://www.hvk.org/articles/0803/231.html

  8. ನಾಡ್ದು verdict ಬಪ್ಪದು 1992ರಲ್ಲಿ ಬಾಬ್ರಿ ಮಸೀದಿ ಬೀಳ್ಸಿದ ವಿಷಯದ್ದಲ್ಲ. ಅಯೋಧ್ಯೆ ಜಾಗ ಆರಿಂದು? (30*40 site)ವಿಷ್ಯದ್ದು. ಎಲ್ಲ ಮಾತಾಡಿ… ಆಳಕ್ಕಿಳಿದರೆ ಕಥೆ ಹೇಳ್ಳೆ ಸುಮಾರಿದ್ದು ಒಪ್ಪಣ್ಣಂಗೆ ಹೇಳಿ ಮುಗಿಯ… ಪ್ರಯತ್ನ ಶ್ಲಾಘನೀಯ

    ಸಮಗ್ರ ಮಾಹಿತಿಗೆ ಇದರ ಅಂಟಿಸಿ ನೋಡ್ಲಕ್ಕು….

    http://www.stephen-knapp.com/ayodhya_and_the_research_on_the_temple_of_Lord_Rama.htm

  9. ಧರ್ಮೊರಕ್ಷತಿ ರಕ್ಷತ ಹೆಳುಗು ಧರ್ಮವೇ ಧರ್ಮವ ರಕ್ಷಿಸುಗಾಡ.ಈಗ ತೊ೦ದರೆ ಎ೦ತ ಹೆಳಿರೆ ಆರಿ೦ಗೂ ಅವರವರ ಧರ್ಮ ಎ೦ತದು ಹೆಳಿ ಗೊ೦ತಿಲ್ಲೆ.ಧರ್ಮ ಹೆಳಿರೆ ಹಿ೦ದು,ಕಿರಿಸ್ತಾನು,ಬ್ಯಾರಿ ಹೆಳಿ ಅಸ್ಟೆ.ಅವ್ವವ್ವು ಅವರವರ ಹಿರಿಯವು ಹಾಕಿ ಕೊಟ್ಟ ದಾರಿಲಿ ನೆಡೆಕು ಸತ್ಯ ಧರ್ಮ ಹೇಳುತ್ತದರ ಜೀವ ಕೊಟ್ಟರು ನೆಡಸೆಕು ಹೆಳಿ ಗೊ೦ತಿಲ್ಲೆ.ಆ ಶ್ರೀರಾಮ೦ಗೆ ಬುದ್ದಿ ಇಲ್ಲೆ ಧರ್ಮಕ್ಕೆ ಬ೦ದ ರಾಜ್ಯವ ಬಿಟ್ಟು ಕೊಟ್ಟು ಕಾಡಿ೦ಗೆ ಹೋಯಿದ೦ ಹೆಳ್ತವು ಇಪ್ಪ ಈ ಕಾಲಲ್ಲಿ ಸ್ವತಹ ಶ್ರೀ ರಾಮನೆ ಬ೦ದರೂ ಓಟಿಲ್ಲಿ ಕಟ್ಟಿದ ಹಣ ಕೂಡಾ ಸಿಕ್ಕದ್ದ ಹ್ಹಾ೦ಗೆ ಸೋಲುಗು.ಅವ೦ ಸ್ವರ್ಗ೦ದಲೇ ಎಡಿಗಾರೆ ಏನಾರು ಮಾಡೆಕು.ಜೈ ಶ್ರೀರಾಮ್.ಒಪ್ಪ೦ಗಳೊಟ್ಟ್೦ಗೆ.

  10. Alli Shri Raman Mandira yweddu nillekku. Idu Hindgala swabhimanada prashne. Namma mele avara poorvajaru madida dhalige idu utthra.

    Court theerpu henge bandaru sweekarisuva mansthithili anu ille. Alli Rama Mandira kattiye ayekku.

    Navu hinge yella Raji madiyondu shanthi shanthi heli hodare innondari Muslim aadalith bakku.

    Jai Shri Ram.

  11. Court verdict to be respected.Any thing may happen. We hope for favourable verdict for us.

  12. ಅಯೋಧ್ಯೆಯ ಬಗ್ಗೆ ಅಲಹಾಬಾದ್ ಕೋರ್ಟು ಎಂತ ಹೇಳ್ತು ಹೇಳುದು ವಿಷಯ ಅಲ್ಲ. ನಮ್ಮ ನಮ್ಮ ಮನಸ್ಸಿಲ್ಲಿ ನಾವು ರಾಮಚಂದ್ರನ ಮೊದಲಿಂದಲೂ ಆರಾಧಿಸಿಕೊಂಡು ಬಯಿಂದು. ನವಗೆಲ್ಲ ಅವ° ಒಬ್ಬ ಆದರ್ಶ. ಹಾಂಗಿಪ್ಪ ಒಬ್ಬ ಇತ್ತಿದ್ದನೇ ಇಲ್ಲೆ, ಅವ° ಕಟ್ಟಿದ ಸೇತುವೆಯನ್ನೇ ಕಾಲ್ಪನಿಕ ಹೇಳಲೆ ಹೆರಟ ಕೇಂದ್ರ ಸರಕಾರ ಎಂತ ತೀರೆಪು ಕೊಡುಗು ಹೇಳುದು ಸರ್ವವಿದಿತ. ಆದರೂ, ಹಳೆಯ ದಾಖಲೆ ಇತ್ಯಾದಿಗೊ ನಮ್ಮ ಪರವಾಗಿ ಇಪ್ಪ ಕಾರಣ ನಮ್ಮ ಹೊಡೇಂಗೆ ತೀರ್ಪು ಬಪ್ಪಲೂ ಸಾಧ್ಯ ಇದ್ದು. ಈ ದೇಶಲ್ಲಿ ಇನ್ನೂ ನ್ಯಾಯ ಹೇಳುದು ಇದ್ದನ್ನೆ?

  13. ನಿಂಗಳ ಎಲ್ಲೋರ ಗಮನಕ್ಕೆ :
    ಇದು ಲೇಖನಕ್ಕೆ ಸಂಬಂದ ಪಟ್ಟದು ಅಲ್ಲದ್ರೂ ಈ ಕೊಂಡಿಯ ಒತ್ತಿ ನೋಡಿ.
    http://ipaidabribe.com/

    ನಿಂಗಳ,
    ಪೋಕಿರಿ ಮಾಣಿ

  14. ಒಪ್ಪಣ್ಣನ ಲೇಖನ ಸಮಯೋಚಿತವಾಗಿ ಮೂಡಿ ಬಯಿಂದು.
    “ರಾಮ ರಾಜ್ಯ” ಮಂತ್ರ ನಮ್ಮ ನಾಯಕೊಂಗೊ ಈಗಳೂ ಅಕ್ಟೋಬರ 2 ರಂದು ಜೆಪ ಮಾಡ್ತವು.
    ಸ್ಟೇಜಿಂದ ಇಳುದ ಮತ್ತೆ ಮಾಡುವದು ಪೂರಾ ಉಲ್ಟಾ. ಎಷ್ಟಾದರೂ ಉಲ್ಟಾ ಓದುವವರ ಓಲೈಕೆಂದ ಬಂದ ಗುಣ ಅಲ್ಲದ?.
    ತತ್ವ ಆದರ್ಶದ ಬೆನ್ನು ಹಿಡುದು ಹೋಪ ರಾಜ ಕಾರಿಣಿಗೊ ಎಷ್ಟು ಜೆನ ಸಿಕ್ಕುಗು?. ಎಲ್ಲವೂ ಕುರ್ಚಿಗಾಗಿಯೇ ಅಲ್ಲದ. ಅದಕ್ಕಿಪ್ಪ ಸೂತ್ರ ಹೇಳಿರೆ ಮುಸ್ಲಿಮರ ಓಲೈಕೆ. ಅಂದು ಮೊಘಲರು ದೇವಸ್ಥಾನಂಗಳ ಒಡದರೆ, ಇಂದು ರಾಜಕಾರಣಿಗೊ ಜೆನಂಗಳ ಮನಸ್ಸಿನ ಒಡವಲೆ ಎಂತ ಮಾಡೆಕ್ಕೋ ಅದೆಲ್ಲಾ ಮಾಡ್ತವು. ನವಗೆ ನಮ್ಮವೇ ಶತ್ರುಗೊ.
    ಹೊಡಿ ಮಾಡಿದ್ದು “ಬಾಬರಿ ಮಸೀದಿ” ಹೇಳಿಯೇ ಹೇಳಿಕೆ ಕೊಟ್ಟವಲ್ಲದ್ದೆ ವಿವಾದಿತ ಕಟ್ಟಡ ಹೇಳಿ ಆಗಲೀ “ರಾಮ ಮಂದಿರ” ಹೇಳಿ ಹೇಳಿಕೆ ಕೊಡುವಷ್ಟು ಧೈರ್ಯ ನಮ್ಮ ಆಳುವವಕ್ಕೆ ಇತ್ತಿದ್ದಿಲ್ಲೆ. ತಾಜ ಮಹಲಿನ ಶಾಹಜಹಾನ್ ಕಟ್ಟಿಸಿದ್ದು, ಹೊಡಿ ಆದ್ದು ಬಾಬ್ರಿ ಮಸೀದಿ ಹೇಳಿ ನಮ್ಮ ಮಕ್ಕಳ ತಲೆಗೆ ತುಂಬಿಸಿರೆ ಸತ್ಯ. ಯಾವುದು ಹೇಳಿ ಅವಕ್ಕಾದರೂ ಅರ್ಥ ಅಪ್ಪದು ಹೇಂಗೆ?
    [ಈಗಾಣ ಮಾಪ್ಳೆಗಳ ಮೂಲ! ಅದೇ ಬುದ್ಧಿ!!]
    ಕೇಳಿದ ಒಂದು ಕತೆ ನೆಂಪಾತು
    ಮಂಡೆಗೊ ಎಲ್ಲಾ ಸೇರಿ ಒಂದರಿ ಸೌಹಾರ್ದ ಕೂಟ ಏರ್ಪಾಡು ಮಾಡಿದವು . ಮರದ ಅಡಿಲಿ ಊಟದ ವೆವಸ್ತೆ. ತಟ್ಟೆಲಿ ತಿಂಬಗ ಒಂದರ ತಟ್ಟೆಗೆ ಮೇಗಂದ ಹಕ್ಕಿ ಹಿಕ್ಕೆ ಹಾಕಿತ್ತು. ಎಂತ ಮಾಡುವದು ಹೇಳಿ ಚಿಂತನೆ ಆತು. ದೊಡ್ಡ ದೊಡ್ದ ಮೌಲಿಗೊ ಚರ್ಚೆ ಮಾಡಿದವು. ಸಣ್ಣ ಕಿತಾಬಿಲ್ಲಿ ಎಂತ ಹೇಳ್ತವು ನೋಡಿದವು. ಉತ್ತರ ಇಲ್ಲೆ ದೊಡ್ಡ ಕಿತಾಬಿಲ್ಲಿಯೋ,, ಅಲ್ಲಿಯೂ, ಉಹುಂ.. ಉತ್ತರ ಇಲ್ಲೆ. ಇನ್ನೆಂತ ಮಾಡುವದು?
    ಒಂದು ಮೌಲಿ ಇನ್ನೊಂದರ ಹತ್ರೆ ಕೇಳಿತ್ತು: ಹೀಂಗೆ ಆದ್ರೆ ಹಿಂದುಗೊ ಎಂತ ಮಾಡ್ತವು?
    “ಅವು ಅದರ ಇಡ್ಕುತ್ತವು, ಬೇರೆ ತಟ್ಟೆಲಿ ಪುನಃ ಉಣ್ತವು” ಉತ್ತರ ಬಂತು.
    ಹಾಂಗಾದರೆ ನಾವು ಅದರ ಉಲ್ಟಾ ಮಾಡೆಕ್ಕಾದ್ದು ಹೇಳಿ ಮೌಲಿಗೊ ನಿಶ್ಚಯ ಮಾಡಿದವು.
    ಮತ್ತೆ ಎಂತ ಆತು ಹೇಳುವದು ನಿಂಗೊಳ ಊಹೆಗೆ ಬಿಡ್ತೆ
    ರಾಮ್ ರಾಮ್

    1. ಶ್ರೀಶಣ್ಣೋ..
      ಯೇವತ್ತಿನಂತೆ ನಿನ್ನ ಒಪ್ಪ ಲಾಯಿಕಿದ್ದು.
      ಸುವರ್ಣಿನಿಅಕ್ಕಂಗೆ ಕೊಶಿ ಆದ ಕತೆ ಎನಗೂ ಕೊಶಿ ಆತು. 🙂

  15. ಒಪ್ಪಣ್ಣ,
    ಸಂಕ್ಷಿಪ್ತವಾಗಿ ರಾಮಾಯಣ ಹೇಳಿದ ರೀತಿ ಕೊಶೀ ಆತು. ಅದರೊಟ್ಟಿಂಗೆ ಇತಿಹಾಸ ಜೋಡಿಸಿ ಈಗಾಣ ಪರಿಸ್ಥಿತಿ ಹೇಂಗೆ ಬಂತು ಹೇಳಿದ್ದು ಮನಸ್ಸಿಂಗೆ ಮುಟ್ಟುವ ಹಾಂಗೆ ಇದ್ದು.
    ಒಂದು ವಿಶಯವ ಇತ್ಯರ್ಥ ಮಾಡ್ಲೆ ಕೋರ್ಟಿಂಗೆ ಹಲವು ದಶಕಂಗೊ ಬೇಕಾವುತ್ತರೆ, ಅದು ಬೇಜವಾಬ್ದಾರಿತನವೋ ಅಲ್ಲ ಉದಾಸೀನವೋ ಗೊಂತಾವುತ್ತಿಲ್ಲೆ.
    ಈಗಲೂ ಅಷ್ಟೆ, ತೀರ್ಪಿನ ಮುಂದೆ ಹಾಕಿದ್ದು ನೋಡುವಾಗ ಇನ್ನು ಕೆಲವು ಸಮಯ ಹೀಂಗೇ ಉದ್ದ ಎಳೆತ್ತ ಲಕ್ಷಣ. ಮುಂದೆ ಹಾಕುವದರಲ್ಲಿ ಕೇಂದ್ರದ ಕೈವಾಡ ಇಲ್ಲೆ ಹೇಳ್ಲೆ ಎಡಿಯ. ಸರಕಾರಕ್ಕೆ ಒಂದು ಸಮಾಜವ ಓಲೈಕೆ ಮಾಡುವದೊಂದೇ ಮಂತ್ರ ಆಗಿಪ್ಪಗ ರಾಮ ಮಂತ್ರ ಎಲ್ಲಿ ಕೇಳುಗು? ಇಚ್ಛಾ ಶಕ್ತಿ ಇಲ್ಲದ್ದರೆ ರಾಮ ರಾಜ್ಯ ಕನಸಾಗಿಯೇ ಒಳಿಗಷ್ಟೆ

  16. ಅಯೋಧ್ಯೆಯ ತೀರ್ಪು ಇನ್ನು ಏವಾಗ ಬತ್ತು ಗೊಂತಿಲ್ಲೆ. ಅಂತೂ ಬ್ಯಾರಿಗಳ ಕೊಂಗಾಟ ಮಾಡ್ತ ಸೊನೆಗಾಂಧಿ ಇಪ್ಪಲ್ಲಿವರೆಗೆ ನಮ್ಮ ದೇಶಲ್ಲಿ ಹಿಂದುಗೊಕ್ಕೆ ನ್ಯಾಯ ಸಿಕ್ಕುಗು ಹೇಳಿ ಗ್ರ‍ೆಶುದು ತಪ್ಪಕ್ಕು.

    1. ನವಗೆಲ್ಲಾ ಗೊಂತಿಪ್ಪ ಹಾಂಗೆ “ಜಾತಿಗೆ ಜಾತಿ ಪಗೆ” ಅಲ್ಲದೋ ?!!
      ನಮ್ಮ ಆಯುಷ್ಯಲ್ಲಿ ನಾವು ಶ್ರೀ ರಾಮಚಂದ್ರಂಗೆ ಅಯೋಧ್ಯೇಲಿ ಸ್ಥಳಾವಕಾಶ ಸಿಕ್ಕುಗು ಹೇಳಿ
      ಗ್ರೆಹಿಶೋದು ತಪ್ಪು ಹೇಳಿ ಕಾಣುತ್ತು !! ರಾಮಾ ರಾಮ ರಾಮ ರಾಮಾ ರಾಮಾ ರಾಮಾ……………
      ರಾಮ ಹೋಗಿ ಅವ ಎಲ್ಲಿಯಾರೂ “ರಹಮಾನ್” ಅವುತ್ತಿತ್ತರೆ ಈಗ ಅಲ್ಲಿ ಅರಮನೆಯೇ ಆಗಿ ಹೊವುತ್ತಿತ್ತು !!!

      1. { “ರಹಮಾನ್” ಅವುತ್ತಿತ್ತರೆ ಈಗ ಅಲ್ಲಿ ಅರಮನೆಯೇ ಆಗಿ ಹೊವುತ್ತಿತ್ತು}
        ಅರಮನೆ ಅಪ್ಪದು ಡವುಟು ಇತ್ತು ಭಾವಾ, ಆದರೆ ಅಂತಃಪುರಂಗೊ ಸುಮಾರು ಆವುತಿತು! 🙂

  17. ಒಪ್ಪಣ್ಣನ ಲೇಖನ ತುಂಬಾ ಒಪ್ಪ ಆಯ್ದು ಬರದ್ದು 🙂 ವಿಷಯ ನಿಜವಾಗಿಯೂ ನಾವೆಲ್ಲೋರೂ ಆಲೋಚನೆ ಮಾಡೆಕಾದ್ದೆ. “ಸತ್ಯಮ್ ಏವ ಜಯತೆ”, ಎಷ್ಟು ಹುಗ್ಗುಸಿರೂ ಸತ್ಯ ಒಂದಲ್ಲ ಒಂದು ದಿನ ಹೆರ ಬಂದೇ ಬತ್ತು, ಅಲ್ಲದ್ದೆ ಲೊಟ್ಟೆ ಹೇಳೀಗೊಂಡು, ಅನ್ಯಾಯ ಮಾಡಿಗೊಂಡು ಇಪ್ಪೋರಿಂಗೆ ಎಂದಿಂಗೂ ನೆಮ್ಮದಿ ಇರ. ನೆಮ್ಮದಿಯೇ ಇಲ್ಲದ್ದ ಮೇಲೆ ಜೀವನದ ಅರ್ಥ ಎಂತರ?? ಬದುಕಿದ್ದೂ ಸತ್ತ ಹಾಂಗೆ. ನವಗೆ ಹಾಂಗಲ್ಲ, ಸತ್ಯ ನಮ್ಮದು.. ನ್ಯಾಯ ನಮ್ಮದು..ನಮ್ಮ ತಪ್ಪೆಂತ ಇಲ್ಲೆ ಹೇಳಿ ಆದಮೇಲೆ..ಸತ್ಯಕ್ಕೆ ಬೇಕಾಗಿ ಹೋರಾಡುವ ಧೈರ್ಯ ಇದ್ದಮೇಲೆ ಜೀವನಕ್ಕೆ ಒಂದು ಅರ್ಥ ಇದ್ದು.. ಅದು ಮುಖ್ಯ.. ದೇವರು ಹೇಳ್ತ ಶಕ್ತಿ ನೊಡುದು ಅದನ್ನೇ ಅಲ್ಲದಾ?

    1. { ಎಷ್ಟು ಹುಗ್ಗುಸಿರೂ ಸತ್ಯ ಒಂದಲ್ಲ ಒಂದು ದಿನ ಹೆರ ಬಂದೇ ಬತ್ತು }
      ಸರಿಯಾಗಿ ಹೇಳಿದಿ ಸುವರ್ಣಿನಿ ಅಕ್ಕಾ.. 🙂
      ಸತ್ಯದ ದಿನಂಗೊ ಮತ್ತೊಂದರಿ ಬರಳಿ. ಹರೇರಾಮ..

  18. ಲೇಖನ ಲಾಯಕ ಬಯಿಂದು ಒಪ್ಪಣ್ಣ… ಧನ್ಯವಾದ ..ವಿಮರ್ಶೆ (ಒಪ್ಪ) ಗಳುದೆ ಲಾಯ್ಕಿದ್ದು…..ಗಣೇಶಮಾವ “ಎಲ್ಲವೂ ರಾಮನ ಚಿತ್ತ !!!” ಸರಿಯಾಗಿ ಹೇಳಿದ್ದಿ ..

  19. ಒಪ್ಪೆಕ್ಕಾದ ಮಾತು.ಒಳುದೋರು ನಮ್ಮ ಹಾಂಗೆ ಅಲ್ಲ ಅಲ್ಲದೋ?
    ಚರಿತ್ರೆಲಿ ಸುವರ್ಣ ಅಕ್ಷರಲ್ಲಿ ಬರೆವ ಯೋಗ್ಯತೆ ಇದ್ದರೆ ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರ ಹೇಳಿ ಹೇಳುಲಕ್ಕು.ಒಳುದ್ದೆಲ್ಲ ವೈರಿಗಳ ಒಲೈಸಿದ್ದು ,ನಮ್ಮ ಒಗ್ಗಟ್ಟಿನ ಕಡೆಗಣಿಸಿದ್ದು,ಅಷ್ಟೇ.
    ಎಂತದೆಲ್ಲ ಮಾಡುಲಾಗ ಹೇಳಿ ಚರಿತ್ರೆ ಓದಿ ಕಲಿಯೆಕ್ಕು.

    1. ಸರಿಯಾದ ಮಾತು ರಘು. ಚರಿತ್ರೆ ನವಗೆ ಪರೀಕ್ಷೆಲಿ ಮಾರ್ಕ್ ತೆಗವ ವಿಶಯ ಮಾತ್ರ ಆಯಿದಷ್ಟೆ.

  20. @ರಘುಮುಳಿಯ, “ನಮ್ಮ ದೇಶಲ್ಲಿ ಇಪ್ಪಷ್ಟು ಸಹನೆ,ಶಾಂತಿ,ಸಮಾಧಾನಂಗೋ ಇನ್ನೆಲ್ಲಿಯೂ ಸಿಕ್ಕ” ಅದರಂದಾಗಿಯೇ ನಾವು ಹೀಂಗಾದ್ದು!!!!!! ಅತಿಯಾದರೆ ಅಮೃತವೂ ವಿಷ ಅಕ್ಕಡ ಹಾಂಗಾಯಿದು ನಮ್ಮ ಕಥೆ !!!!!!!! ಎಂಥ ಹೇಳ್ತಿ?
    ನಮ್ಮ ಸಹನೆಯ ಎಲ್ಲರೂ ದುರುಪಯೋಗ ಪಡುಸಿಕೊಂಡ ವು ಹೇಳುದಕ್ಕಿಂತ ನಾವು ಸದುಪಯೋಗ ಪಡುಸಿ ಕೊಂಬಲ್ಲಿ ವಿಫಲ ಹೇಳುಲಕ್ಕು…..ನಾವು ಚರಿತ್ರೆಂದಲೂ ಪಾಠ ಕಲ್ತ ಹಾಂಗೆ ಕಾಣುತ್ತಿಲ್ಲೇ !!!!ಸಹಿಸಿ ಸಹಿಸಿ …….ಅದೇ ನಮಗೆ ಅಭ್ಯಾಸ ಆದ ಹಾಂಗೆ ಕಾಣುತ್ತು!!!!!!! ನೋಡ ದೇವರಿದ್ದ !!!!!!!!!ಎಲ್ಲಾ ಒಳ್ಳೇದೆ ಅಕ್ಕು …ಒಳ್ಳೇದೆ ಆಗಲಿ ಹೇಳಿ ಆಶಿಸುವಾ ಆಗದಾ?

  21. ಧರ್ಮೋ ರಕ್ಷತಿ ರಕ್ಷಿತ:ಹೇಳುವ ಹಾಂಗೆ ಧರ್ಮ ಯುದ್ಧದ ಸಮಯ ಹತ್ತರೆ ಬಂದಿಕ್ಕೋ?ಅಲ್ಲ,ಎಲ್ಲಾ ವಿಷಯಕ್ಕೆ ತೆರೆ ಬೀಳುಗೋ?
    ಎಲ್ಲವೂ ರಾಮನ ಚಿತ್ತ. ಜೈಶ್ರೀ ರಾಮ್

    1. ತೆರೆ ಬಿದ್ದರೆ ನಮಾಮಿ
      ತೆರೆ ಎದ್ದರೆ ಸುನಾಮಿ.

  22. ಉಮ್ಮಪ್ಪ.. ಒಟ್ಟಾರೆ ಲಗಾಡಿ ತೆಗಗು.. ಎ೦ತಾವುತ್ತು ಗೊ೦ತಿಲ್ಲೆ ನಾಡ್ದು…:D
    ||ಜೈ ಶ್ರೀ ರಾಮ್ – ಜೈ ಹನುಮನ ||

  23. ಒಪ್ಪಣ್ಣನ ಬಾಯಿಲಿ ರಾಮಾಯಣ ಕಥೆ ಕೇಳಿ ಕೊಶಿ ಆತು. ಶೇಣಿ ಅಜ್ಜ ಅರ್ಥ ಹೇಳುವಗ ಯಾವುದೇ ಪ್ರಸಂಗ ಇರಳಿ. ಪ್ರತಿ ಸರ್ತಿಯೂ ಹೊಸತನ ಅದರಲ್ಲಿ ಇರುತ್ತು ಹೇಳಿ ಕೇಳಿದ್ದೆ. ಅದೇ ರೀತಿ ಒಪ್ಪಣ್ಣನ ಲೇಖನವೂ. ಸಕಾಲಿಕ ಲೇಖನ, ತೀರ್ಪು ನಮ್ಮ ಹೊಡೆಂಗೆ ಬರಲಿ ಅಲ್ಲದೊ ?

    1. { ಅದೇ ರೀತಿ ಒಪ್ಪಣ್ಣನ ಲೇಖನವೂ }
      ಬೊಳುಂಬುಮಾವಾ..
      ಈ ಸರ್ತಿಯಾಣ ಕತೆ ಲಾಯಿಕಾಯಿದೋ – ಉಮ್ಮ,
      ಮುಳಿಯಭಾವ ಹೇಳಿದ್ದರ ನಾವು ನಿಂಗೊಗೆ ಹೇಳಿದ್ದು, ಅಟ್ಟೇ!
      ಲಾಯಿಕಾದರೆ ಒಳ್ಳೆದಾತು. 🙂

  24. ಸರಿಯಾದ ಸಮಯಕ್ಕೆ ಬರದ್ದೆ ಒಪ್ಪಣ್ಣಾ,
    ಇತಿಹಾಸವೂ ಪುರಾಣವೂ ಶುರುಆತೋ?ತಾಳಮದ್ದಲೆ ಶುರು ಮಾಡುಲಕ್ಕು ಹಾಂಗಾರೆ.
    ನಮ್ಮ ಹಿಂದೂ ಸಮಾಜದ ಒಳ ಇದ್ದ ವಿರೋಧಂಗಳ ,ಒಳಜಗಳಂಗಳ ಲಾಭ ತೆಕ್ಕೊಂಡು ಶತಮಾನಂಗಳಿಂದ ನಮ್ಮ ದೇಶವ ಹೆರಾಣವು ದೋಚಿ,ದೋಚಿ ನವಗೆ ಅಭ್ಯಾಸ ಆಗಿ ಹೋತು.ಈಗ MNC ಕಂಪೆನಿಗಳ ಹೆಸರಿಲಿ ಮುಂದುವರಿತ್ತಾ ಇದ್ದು,ದೋಚುವಿಕೆ.
    ನಮ್ಮ ಮನೆಯ ಪಂಚಾಂಗದ ಹಾಂಗೆ ಅಲ್ಲದೋ ಈ ಅಯೋಧ್ಯೆ,ಕಾಶಿ ಮಾಡಲಾದ ಪುಣ್ಯ ಕ್ಷೇತ್ರಂಗೋ ? ನಮ್ಮ ದೇಶಲ್ಲಿ ಇಪ್ಪಷ್ಟು ಸಹನೆ,ಶಾಂತಿ,ಸಮಾಧಾನಂಗೋ ಇನ್ನೆಲ್ಲಿಯೂ ಸಿಕ್ಕ.ಹಾಂಗಾಗಿ ಇಂದು ಅಯೋಧ್ಯೆ ಗಲಾಟೆ ಕೋರ್ಟಿನ ಮೆಟ್ಟಲು ಹತ್ತಿ ಪ್ರಸಕ್ತ ಮಟ್ಟಕ್ಕೆ ಇಳುದು ನಿಂದದು ಹೇಳಿ ಎನ್ನ ಭಾವನೆ. ಇದಕ್ಕೆ ಮೂಲ ಕಾರಣ ನಮ್ಮ ದೇಶದ ರಾಜಕಾರಣ, ವೋಟು ಮತ್ತೆ ನೋಟಿನ ಸ್ವಾರ್ಥದ ಮಧ್ಯೆ ಕಳದು ಹೋಗಿ ಇಂದು ನವಗೆ ಆ ದೇವರೇ ಗೆತಿ.ಏವ ದೇವರು ಹೇಳಿ ಕೇಳಿಕ್ಕೆಡ .
    ಇಂದು “ರಾಮ ರಾಮ” ,ಇನ್ನೊಂದೈವತ್ತು ವರುಷ ಕಳುದರೆ ಮಲೇಶಿಯದ ಹಾಂಗೆ “ಅಲ್ಲಾ ಅಲ್ಲಾ ನೀನೆ ಎಲ್ಲಾ”.
    ಉತ್ತರದ ಆಯೋಧ್ಯೆಯೂ ದಕ್ಷಿಣದ ಸೇತುವೂ ನಮ್ಮ ಮನಸ್ಸು ,ಹೃದಯಕ್ಕೆ ಹತ್ತರೆ ಇರೆಕ್ಕು.ನಮ್ಮ ಕಣ್ಣ ಮುಂದೆಯೂ ಇರೆಕ್ಕು ಆಚಂದ್ರಾರ್ಕರಿಪ್ಪಲ್ಲಿವರೆಗೆ,ಹೇಳಿ ಎನ್ನ ಹಾರೈಕೆ

  25. ಲೇಖನ ಲಾಯಿಕಿದ್ದು.ಹಳೆ ಕಟ್ಟಡ ಬೀಳುವ ಮೊದ್ಲು,ಬಿದ್ದ ನಂತ್ರ ಹೀಂಗೆ ೨-೩ ಸರ್ತಿ ಅಯೋಧ್ಯೆಗೆ ಹೋಯಿದೆ.ರಾಮಾಯಣ ಅಪ್ಪಾದರೆ,ರಾಮರಾಜ್ಯ ಬರೆಕ್ಕಾರೆ,ಸರಯೂ ನದಿ ಹರಿತ್ತರೆ ರಾಮಲಲ್ಲಾನ ಪೂಜೆ ನಡಕ್ಕೊಂಡಿದ್ದರೆ ರಾಮಜನ್ಮ ಭೂಮಿಯೂ ಅಪ್ಪೆ.ಅಯೋಧ್ಯೆಲಿಯೇ ರಾಮಮಂದಿರ ಆಯೆಕ್ಕೇ.

    1. { ಅಯೋಧ್ಯೆಲಿಯೇ ರಾಮಮಂದಿರ ಆಯೆಕ್ಕೇ }
      ಸೀತಾರಾಮ-ರಾಮಚಂದ್ರ-ಚಂದ್ರಮೌಳೀಶ್ವರನ ಇಚ್ಛಾಶೆಗ್ತಿ ಆದಷ್ಟುಬೇಗ ಕೂಡಿ ಬರಳಿ.
      ಹರೇ ರಾಮ..

  26. ಬರೇಕಾದ್ದದರ ಬರೇಕಾದ ಕಾಲಲ್ಲೇಬರೆಕದ ಸಮಯ ಸ೦ದರ್ಭ ನೋಡಿ ಬರದ ಈ ಲೇಖನಕ್ಕೆ ಜೈ.ಒಪ್ಪ್೦ಗಳೊಟ್ಟಿ೦ಗೆ

  27. (ಪ್ರಸಂಗಕ್ಕೆ ಬಾಗೊತಿಗೆ ಆರದ್ದು ಕೇಳಿರೆ ಮುಳಿಯಬಾವಂದು ಉತ್ತರ ಇಲ್ಲೆ! )

    ಬಾಗೊತಿಗೆ – ವಾಲ್ಮೀಕಿದು.

    1. ಓ,ಬಲಿಪ್ಪಜ್ಜ ಶಿಷ್ಯ ವಾಲ್ಮೀಕಿದೂ ಕೇಳುತ್ತ°.

      1. ಶಿಷ್ಯ ಅಲ್ಲ, ಅಭಿಮಾನಿ.
        ವೇದ ವ್ಯಾಸಂದೂ ಕೇಳ್ತೆ.

        ನಾಡ್ತು ೨೮ ಕ್ಕೆ ಆ ೩ ಜನ ಭಾಗೊತಕ್ಕೋ ಹೇಳಿರೆ ಸಾಕಪ್ಪ

    2. { ಬಾಗೊತಿಗೆ – ವಾಲ್ಮೀಕಿದು }
      – ಅವ° ಪ್ರಸಂಗಕರ್ತ ಅಲ್ಲದೋ? 😉
      ಮುಳಿಯಬಾವಂಗೂ ಅದೇ ಸಂಶಯ ಬಂದಿಕ್ಕಿದ್ದು!

      1. ನಮ್ಮ ಬಲಿಪ್ಪಜ್ಜ ಪ್ರಸಂಗ ಕರ್ತನೂ ಅಪ್ಪು ಭಾಗೋತನೂ ಅಪ್ಪು
        ಹಾಂಗೆ ವಾಲ್ಮೀಕಿದೇ !
        ಸಂಶಯ ಪರಿಹಾರ ಆತೋ

  28. ಭಾರಿ ಲಾಯ್ಕಾಯಿದು ಬರದ್ದು. ಸಮಯೋಚಿತ ಲೇಖನ.
    ಈಗ ತೀರ್ಪು ಮುಂದೆ ಹೋಯಿದಡ. ಎಂತ ಆವುತ್ತು ಹೇಳಿ ನೋಡುವ. ಈ ವಿಷಯವ ಎಲ್ಲ ಕೋರ್ಟಿಲಿ ನಿರ್ಧಾರ ಮಾಡ್ಲೆ ಎಡಿಯ ಹೇಂಗಾರುದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×