Oppanna.com

ಬೆಳವ ಬೈಲಿಂಗೆ ಏಳು ಒರಿಷದ ಸಂಭ್ರಮ

ಬರದೋರು :   ಒಪ್ಪಣ್ಣ    on   02/01/2015    14 ಒಪ್ಪಂಗೊ

ಕೆಲೆಂಡರು ಲೆಕ್ಕಲ್ಲಿ ಹೊಸ ಒರಿಶದ ಗವುಜಿ ಊರಿಡೀ ಇಪ್ಪಗ, ನಮ್ಮ ಬೈಲಿಲಿಯೂ ಒಂದು ಸಂತೋಶ ಇರ್ತು. ಬೈಲ ನೆಂಟ್ರ ಮನೆಯ ಗೋಡೆಲಿ ಕೆಲೆಂಡ್ರು ಹೊಸತ್ತು ಬಂದಪ್ಪದ್ದೇ, ಬೈಲಿಂಗೂ ಹೊಸ ಒರಿಶ ಬಂದಿರ್ತು. ಕಳುದ ಆರು ಒರಿಶ ನಿರಂತರ ಸಾಹಿತ್ಯ ಸೇವೆ ಮಾಡ್ತಾ ಇಪ್ಪ ಬೈಲು ಈಗ ಏಳನೇ ಒರಿಶಕ್ಕೆ ನೆಡದು ಸಾಗುತ್ತಾ ಇದ್ದು. ಏಳರ ಬಾಲಂಗೆ ಬೈಲಿನ ನೆಂಟ್ರುಗಳ ಏಳುಸುದೇ ಹೆಚ್ಚು ಕೊಶಿ.
ಬೈಲು ಹೇಂಗೆ ಪ್ರಕಟ ಆತು – ಹೇಳ್ಸರ ತೂಷ್ಣಿಲಿ ಒಂದರಿ ನೋಡುವ°.

ಬೈಲಿನ ಆರಂಭ:
೨೦೦೯ ರಲ್ಲಿ ಒಪ್ಪಣ್ಣ ಶುದ್ದಿ ಹೇಳುಲೆ ಸುರುಮಾಡಿದ್ದು ಒಂದು ಕುಂಞಿ ಬ್ಲೋಗಿನ ಮೂಲಕ. ಒಂದೊರಿಶ ಹಾಂಗೂ -ಹೀಂಗೂ ಒಬ್ಬನೇ ಕೂದುಗೊಂಡು ಶುದ್ದಿ ಹೇಳಿದ್ದು ಆತು. ಅಷ್ಟಪ್ಪಗ ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಹಲವೂ ಜೆನ ನೆಂಟ್ರುಗಳ ಕೂಡಿಗೊಂಡು – “ಎಲ್ಲೋರುದೇ ಶುದ್ದಿ ಹೇಳುಲೆ” ಬೈಲಿನ ವೆಬ್-ಸೈಟು ರಚನೆ ಆತು.

ಬೈಲು ಹೇಳಿದ ಕೂಡ್ಳೇ ಎಲ್ಲವೂ ಇರ್ತು. ನಮ್ಮ ಬೈಲಿಲಿ ಕಾಂಬದು ಎಂತೆಲ್ಲ ಇದ್ದೋ, ಅದೆಲ್ಲಾ ಈ ಬೈಲಿಲಿಯೂ ಇದ್ದು. ತರವಾಡು ಮನೆ, ಸಾರಡಿ ತೋಡು, ದಾಸು ನಾಯಿ, ರಂಗಮಾವ, ಪಾರು ಅತ್ತೆ, ಬೂತ ಕಟ್ಟುವ ಕೋಟಿ, ಹೂಗು ಕಟ್ಟುವ ರೋಸಮ್ಮ – ಎಲ್ಲೋರುದೇ ಇದ್ದವು. ಸೈಟು ಹೇಳಿದ ಕೂಡ್ಳೇ ಪೇಟೆ ಜಾಗೆ ನೆಂಪಾದ ಬೆಂಗ್ಳೂರು ಶುಭತ್ತೆಯೂ ಇದ್ದು, ಸೈಟು ಹೇಳಿಯಪ್ಪಗ ಸೌಟು ನೆಂಪಾದ ಚೂರಿಬೈಲು ದೀಪಕ್ಕನೂ ಇದ್ದು. ಬೇರೆ ಬೇರೆ ಊರು, ಭಾಶಾ ಪ್ರಬೇಧ, ಜೀವನ ಶೈಲಿ ಯ ಜೆನಂಗೊ ಬೈಲಿಂಗೆ ಬತ್ತಾ ಇದ್ದವು. ನಿತ್ಯವೂ ಹೊಸ ಜೆನಂಗೊ ಬಂದು ಬೆಳದು ರೈಸುತ್ತಾ ಇತ್ತು.

ಗುರುಗೊ:
ಎಲ್ಲೋರುದೇ ಇಪ್ಪಗ, ಗುರುಗೊ ಇಲ್ಲದ್ದೆ ಆವುತ್ತೋ? ಇಲ್ಲೆ! ನಮ್ಮ ಗುರುಗಳೂ ಇದ್ದವು ಬೈಲಿಲಿ.
ಅಪ್ಪು, ಬೈಲು ಬೆಳೆಯಲಿ, ಬೆಳಗಲಿ – ಹೇದು ಶ್ರೀ ಗುರುಗೊ ಸದಾ ಹರಸಿ ಹಾರೈಸಿದವು. ಹಲವೂ ಶುದ್ದಿಗೊಕ್ಕೆ ಒಪ್ಪ ಆಶೀರ್ವಾದ ಕೊಟ್ಟಿದವು. ಸಂಸ್ಕಾರ ಒಳಿಶುವ ಕಾರ್ಯ ನಮ್ಮ ಬೈಲಿಂದ ಆಗಲಿ – ಹೇಳ್ತ ಆಶಯ ಅವರ ಒಪ್ಪ ಆಶೀರ್ವಾದಂಗಳಲ್ಲಿ ಕಂಡು ಬತ್ತು.
ಅದೊಂದು ಒರಿಶದ ಆರಂಭಕ್ಕೆ ಗುರುಗಳೇ ಸ್ವತಃ ಆಶೀರ್ವಚನ ಕೊಟ್ಟು ಅನುಗ್ರಹಿಸಿ, ಬೈಲು ಶಾಶ್ವತವಾಗಿ ಸಾಗಲಿ – ಹೇದು ಆಶೀರ್ವಾದ ಮಾಡಿದವು.
ಆ ಆಶೀರ್ವಚನ ಇಲ್ಲಿದ್ದು: https://www.youtube.com/watch?v=37DWcqZgGqE

ಬೈಲ ಮಿಲನ:
ಬೈಲಿಲಿ ಎಲ್ಲೋರುದೇ ದೂರ ದೂರ ಕೂದುಗೊಂಡು ಮಾತಾಡ್ತು. ಒಂದು ದಿನ ಮುಖತಾ ಕಂಡು ಮಾತಾಡುವನೋ° – ಹೇದು ಬೈಲಿನ ಕೆಲವು ಜೆನಕ್ಕೆ ಮನಸ್ಸಾತು. ಆ ಪ್ರಕಾರಲ್ಲಿ ಅಂದೊಂದು ದಿನ ಯೇನಂಕೂಡ್ಳಣ್ಣನ ಮನೆಲಿ “ಬೈಲ ಮಿಲನ” ಹೇಳ್ತ ಕಾರ್ಯಕ್ರಮ ಸೇರಿತ್ತು.
ಉದಿಯಪ್ಪಗಳೇ ಸೇರಿದ ಬೈಲ ನೆಂಟ್ರುಗೊ ಇಡೀ ದಿನ ಮಾತಾಡಿಗೊಂಡವು. ಹಲವು ಸಂಗತಿಗಳ ಒಟ್ಟಿಂಗೆ ಲೊಟ್ಟೆಪಂಚಾತಿಗೆಯೂ ಆತು. ಯೇನಂಕೂಡ್ಳು ಮನೆಯೋರ ಆದರಾತಿಥ್ಯವೂ, ಹಳ್ಳಿ ಅಡಿಗೆಯ ರುಚಿ ರುಚಿ ಊಟವೂ ಯೇವತ್ತೂ ಮರೆಯ – ಹೇದು ಚುಬ್ಬಣ್ಣ ನೆಂಪು ಮಾಡುಗು. ಸುವರ್ಣಿನಿ ಅಕ್ಕ° ಸ್ವತಃ ಆಸಕ್ತಿಲಿ ಅಪ್ಪೆಹುಳಿ ಸಾರು ಮಾಡಿದ್ದು ಮರಗೋ!?
ಬೈಲಿನ ಬೆಳವಣಿಗೆಲಿ ಅದೊಂದು ಮಹತ್ ಕೊಡುಗೆ ಕೊಟ್ಟ ಯೇನಂಕೂಡ್ಳು ಕುಟುಂಬವ ಬೈಲು ಸದಾ ನೆಂಪು ಮಡಗುತ್ತು.
ಆ ದಿನ ಬಂದ ಹಲವೂ ನೆಂಟ್ರುಗೊ, ಬಪ್ಪಲೆ ಎಡಿಗಾಗದ್ದ ಮತ್ತಷ್ಟು ನೆಂಟ್ರುಗೊ – ಇನ್ನಾಣ ಭೇಟಿ ಎಲ್ಲಿ – ಹೇದು ಈಗಳೂ ನೆಂಪಿಲಿ ಕೇಳ್ತವು.

ಪ್ರತಿಷ್ಠಾನ:
ಸುರುವಿಂಗೆ ಅಂತರ್ಜಾಲಲ್ಲಿ ಪ್ರಕಟ ಆತು. ಮತ್ತೆ ನೆರೆಕರೆಯ ಮನೆಲಿ ಸಭೆ ಸೇರಿತ್ತು. ಎರಡೂ ಸರಿ. ಆದರೆ ಅಂತೇ ಒಂದು ಗುಂಪು ಕಟ್ಟಿರೆ ಅದರಿಂದ ಊರಿಂಗೆ ಪ್ರಯೋಜನ ಇದ್ದೋ? ಇಲ್ಲೆ!
ಅದಕ್ಕಾಗಿಯೇ – ನಮ್ಮಂದ ಸಮಾಜಕ್ಕೆ ಏನಾರು ಉಪಕಾರ ಆಯೇಕು. ಉಪಕಾರಂಗೊಕ್ಕೆ ಅಧಿಕೃತತೆ ಬರೆಕ್ಕಾರೆ ನಮ್ಮದು ಒಂದು ವೇದಿಕೆ ರಚನೆ ಆಗಿರೇಕು, ಅದಕ್ಕಾಗಿ ಪ್ರತಿಷ್ಠಾನ ಆಯೇಕು – ಹೇಯಿದವು. ಆ ಪ್ರಕಾರ, ಅರ್ತೋರ ಸಲಹೆಗಳ ತೆಕ್ಕೊಂಡು – ಕೊಡೆಯಾಲದ ಪೇಟೆಲಿ ನಮ್ಮ ಬೈಲಿನ ಒಂದು ಪ್ರತಿಷ್ಠಾನ ರಚನೆ ಆತು. ಗುರುಗಳ ಆಶೀರ್ವಾದಲ್ಲೇ ಇದು ಸೃಷ್ಟಿ ಆತು ಹೇದು ಎಲ್ಲೋರಿಂಗೂ ಅರಡಿಗು. ಬಾನಲ್ಲಿಪ್ಪ ಇಪ್ಪತ್ತೇಳು ನಕ್ಷತ್ರದ ಹಾಂಗೆ ಇಪ್ಪತ್ತೇಳು ವಿಭಾಗಂಗೊ ಇದ್ದು. ಲಕ್ಷ್ಮೀಶ ಹೆಗಡೆಯ ಹಾಂಗಿಪ್ಪ ಪ್ರತಿಭಾನ್ವಿತ ವಿದ್ಯಾರ್ಥಿಗೊಕ್ಕೆ ಸಕಾಯ ಮಾಡುವ ವಿದ್ಯಾನಿಧಿಯ ಶರ್ಮಪ್ಪಚ್ಚಿ ನೋಡಿಗೊಳ್ತಾ ಇದ್ದವು, ಕಜೆ ಕಿರಣಣ್ಣನ ಹಾಂಗಿಪ್ಪ ಯೋಗ್ಯರಿಂಗೆ ಸಕಾಯ ಮಾಡ್ಳೆ ಆರೋಗ್ಯ ನಿಧಿಯ ಟೀಕೆ ಮಾವ° ಜೆಬಾದಾರಿಕೆ ತೆಕ್ಕೊಳ್ತವು, ತುರ್ತಿನ ಸಂದರ್ಭಲ್ಲಿ ಪೆರ್ಲ ಮಾವನ ಹಾಂಗಿಪ್ಪ ವೆಗ್ತಿಗೊಕ್ಕೆ ಸಕಾಯ ಮಾಡುವ ರಕ್ತನಿಧಿಯ ಕುಂಟಾಂಗಿಲ ಭಾವ° ಜವಾಬ್ದಾರಿ ವಹಿಸಿದ್ದವು. ಇನ್ನೂ ಹಲವು ಹೀಂಗೇ ಜವಾಬ್ದಾರಿ ಹಂಚಿಕೆಲಿ ಸಾಗುತ್ತಾ ಇದ್ದು.

ಲಲಿತಕಲೆ ಹೇಳ್ತ ವಿಭಾಗದ ಮೂಲಕ ಲೋಕ ಪ್ರಸಿದ್ಧಿ ಕಾರ್ಯಕ್ರಮಂಗಳೂ ಆಯಿದು. ಕಳುದೊರಿಶ ಪುತ್ತೂರಿಲಿ ಅಷ್ಟಾವಧಾನ ಕಾರ್ಯಕ್ರಮ ಮಾಡಿದ್ಜ ಬೈಲಿನ ಆರಿಂಗಾರು ಮರಗೋ!
ಪುತ್ತೂರಿನ ಜೈನ ಭವನ ತುಂಬಿ ಸಮಲಿದ್ದು ಅಷ್ಟೇ ಅಲ್ಲದ್ದೆ ಲೋಕದ ಹಲವೂ ಕಡೆಂದ ಆ ಕಾರ್ಯಕ್ರಮವ ನೋಡಿದ್ದವು. ಡಾ.ರಾ.ಗಣೇಷರ ಅಷ್ಟಾವಧಾನಕ್ಕೆ ಆ ಮಟ್ಟಿನ ಶೆಗ್ತಿ ಇದ್ದು. ಅದರ ಆಯೋಜನೆಲಿ ಒಪ್ಪಣ್ಣನ ನೆರೆಕರೆ ಆ ಮಟ್ಟಕ್ಕೆ ಶ್ರಮವುದೇ ಹಾಕಿದ್ದು ಇದಾ – ಹೇಳುಗು ವಿಭಾಗ ಸಂಚಾಲಕರಾದ ಮುಳಿಯಭಾವ°.
ಇದಿಷ್ಟೇ ಅಲ್ಲದ್ದೆ, ಬೈಲ ಮೂಲ ಉದ್ದೇಶ ಆದ “ಸಾಹಿತ್ಯ ಪ್ರಸಾರ” ಕಾರ್ಯಕ್ಕೆ ಬೇಕಾಗಿ ಸಾಹಿತ್ಯ ನಿಧಿಯೂ ಇದ್ದು. ಬೈಲಿಂದೇ ಒಂದು ಪ್ರಕಾಶನ ಸಂಸ್ಥೆ ಹುಟ್ಟಿ, ಆ ಮೂಲಕ ಹಲವಾರು ಸಾಹಿತ್ಯಂಗಳ ಸೃಷ್ಟಿ ಆಯಿದು. ಒಪ್ಪಣ್ಣನ ಶುದ್ದಿಗಳ ಸಂಗ್ರಹದ ಒಂದನೇ ಸಂಕಲನ – “ಒಂದೆಲಗ”, ಚೆನ್ನೈ ಭಾವನ ಶುದ್ದಿಗಳ ಸಂಗ್ರಹ – “ಹದಿನಾರು ಸಂಸ್ಕಾರಂಗೊ”, ಬೈಲ ನೆಂಟ್ರುಗಳ ಶುದ್ದಿಗೊ – “ಅಟ್ಟಿನಳಗೆ” ಇತ್ಯಾದಿ ಪುಸ್ತಕಂಗ ಯಶಸ್ವಿಯಾಗಿ ಬಿಡುಗಡೆ ಆಯಿದು. ಕಳುದೊರಿಶ ಪುತ್ತೂರಿಲಿ ಆದ ಅಷ್ಟಾವಧಾನದ ಸೀಡಿಯೂ ಈ ಒರಿಶ ಬಿಡುಗಡೆ ಆಯಿದು, ಸಾಹಿತ್ಯ ಕ್ಷೇತ್ರಲ್ಲಿ ಅದುದೇ ಒಂದು ಶಾಶ್ವತ ದಾಖಲೆ – ಹೇಳ್ತದು ಆ ವಿಭಾಗದ ಸಂಚಾಲಕರಾದ ನಮ್ಮ ಹೊಳವ ವಜ್ರ – ಡೈಮಂಡು ಭಾವನ ಅಂಬೋಣ.

ಎಲ್ಲದಕ್ಕೂ ಕಳಶಪ್ರಾಯವಾಗಿ ನಮ್ಮ ಬೈಲಿಂದ ನೆಡವ ಇನ್ನೊಂದು ಕಾರ್ಯಕ್ರಮ – “ವಿಷು ವಿಶೇಷ ಸ್ಪರ್ಧೆ”. ವಿನೂತನ ಪರಿಕಲ್ಪನೆಯ ಈ ಸ್ಪರ್ಧೆಲಿ ಹವ್ಯಕ ಭಾಶೆಲಿ ಯುವ ಸಾಹಿತಿಗಳ ಉದಯಕ್ಕೆ ಪ್ರೇರಣೆ, ಪ್ರೋತ್ಸಾಹ – ಕೊಡ್ತಾ ಇದ್ದು. ದೊಡ್ಡಬಾವನ ಸಂಚಾಲಕತ್ವಲ್ಲಿ ನಿರಂತರವಾಗಿ ನೆಡೆತ್ತಾ ಇಪ್ಪ ಈ ಸ್ಪರ್ಧೆ ನೂರಾರು ಯುವ ಸಾಹಿತಿಗಳ ಹುಡ್ಕಿದ್ದು ಹೇಳ್ತದು ಒಪ್ಪಣ್ಣಂಗೂ, ಬೈಲಿಂಗೂ, ಸ್ವತಃ ದೊಡ್ಡಭಾವಂಗೂ ಹೆಮ್ಮೆಯ ಸಂಗತಿ.

ಶರ್ಮಪ್ಪಚ್ಚಿ ಒಟ್ಟು ಪ್ರತಿಷ್ಠಾನದ ಅಧ್ಯಕ್ಷರಾಗಿ ಎಲ್ಲಾ ಕೆಲಸಂಗಳನ್ನೂ ಬೇಕುಬೇಕಾದ ಹಾಂಗೆ ಮಾರ್ಗದರ್ಶನ ಕೊಟ್ಟು ನೋಡಿಗೊಳ್ತಾ ಇದ್ದವು. ಅವರ ನೆಗೆಮೋರೆಯ ಅಧ್ಯಕ್ಷಸ್ಥಾನವೇ ಈ ಎಲ್ಲಾ ಸಾಧನೆಗೊಕ್ಕೆ ಕಾರಣ – ಹೇದು ಬೈಲಿನ ಎಲ್ಲಾ ನೆಂಟ್ರುಗೊಕ್ಕೂ ಅರಡಿಗು.
ಹಾಂ° – ಹೇಳಿದಾಂಗೆ – ಪ್ರತಿಷ್ಠಾನಲ್ಲಿ ಇನ್ನೂ ಹಲವು ನಕ್ಷತ್ರಂಗೊ ಇದ್ದು, ಜೆಬಾದಾರಿಕೆ ತೆಕ್ಕೊಂಬಲೆ ಆಸಕ್ತಿ ಇಪ್ಪ ನೆಂಟ್ರುಗೊ ಇದ್ದರೆ ಒಂದೊಂದು ವಿಭಾಗವನ್ನೂ ಚೆಂದಕೆ ತೆಕ್ಕೊಂಡು ಹೋಪಲಕ್ಕು, ನೆಂಟ್ರುಗೊ ಮುಂದೆ ಬರೇಕು – ಹೇದು ಶರ್ಮಪ್ಪಚ್ಚಿ ಮೊನ್ನೆ ಕೇಳಿಗೊಂಡು ಇತ್ತಿದ್ದವು.
ಆಸಕ್ತಿ ಭಾವಯ್ಯಂದ್ರು ಇದ್ದಿರೋ? ಒಪ್ಪಣ್ಣಂಗೆ ತಿಳುಶಿಕ್ಕಿ. ಹಾಂ°!!
ಅದಿರಳಿ.
~
ಒರಿಷಕ್ಕೊಂದು ಬೈಲ ಭೇಟಿ:
ಬೆಳೆತ್ತಾ ಇಪ್ಪ ಬೈಲಿನ ನೆಂಟ್ರುಗೊ ಅಂಬಗಂಬಗ ಸೇರುದು ಅತ್ಯಗತ್ಯ ಸಂಗತಿ. ಆ ಪ್ರಕಾರಲ್ಲಿ ಕಳುದ ಕೆಲವೊರಿಷಂದ ನೆಂಟ್ರುಗೊ ಎಲ್ಲೋರುದೇ ಒಂದು ದಿನ ಪುರುಸೊತ್ತು ಮಾಡಿ ಗುರುಚಾತುರ್ಮಾಸ್ಯಲ್ಲಿ ಸೇರುದು ನೆಡಕ್ಕೊಂಡು ಬಯಿಂದು. ಅದೇ ದಿನ ಬೈಲ ಪರವಾಗಿ ಶ್ರೀ ಗುರು ಪಾದಪೂಜೆಯನ್ನೂ ಮಾಡ್ತವು ಬೈಲ ನೆಂಟ್ರುಗೊ.
ಬೆಂಗ್ಳೂರಿಲಿ ನೆಡದ ನಂದನ ಚಾತುರ್ಮಾಸ್ಯಲ್ಲಿ ಈ ಸಂಪ್ರದಾಯ ಆರಂಭ ಆತು, ಸುರೂವಾಣ ಪುಸ್ತಕ ಬಿಡುಗಡೆಯೂ ಆಗಿತ್ತು. ಗುರಿಕ್ಕಾರ್ರು ದಂಪತಿಗೊ ಪಾದಪೂಜೆ ಮಾಡಿದವು. ಮತ್ತಾಣ ಒರಿಷ ಮಾಣಿ ಮಠಲ್ಲಿ – ಪ್ರತಿಷ್ಠಾನದ ಅಧ್ಯಕ್ಷರು ಪಾದಪೂಜೆ ನೆರವೇರ್ಸಿದವು. ಈ ಒರಿಷದ ಪಾದಪೂಜೆ ಸೇವೆ ತೆಕ್ಕುಂಜೆ ದಂಪತಿಗಳಿಂದ ಸಲ್ಲಿದ್ದು. ಇದೂ ನಮ್ಮ ಬೈಲಿನ ಸೌಭಾಗ್ಯವೇ ಸರಿ!
~

ಮುಂದಾಣ ಯೋಜನೆಗೊ:
ಯೇವದೇ ಸಂಘಟನೆ ನಿಂದ ನೀರು ಅಪ್ಪಲಾಗ. ನಮ್ಮ ಬೈಲುದೇ ಹಾಂಗೇ. ಹಾಂಗಾಗಿ, ಬೆಳೆತ್ತಾ ಇಪ್ಪ ಬೈಲಿಲಿ ನಿತ್ಯವೂ ಶುದ್ದಿಗೊ ಹರಿದು ಬತ್ತಾ ಇರೆಕ್ಕು. ಶುದ್ದಿಗೊ ನಾವೇ ಬರೇಕು, ನಾವೇ ಶುದ್ದಿ ಆಯೇಕು. ನಮ್ಮ ಬೈಲು ನಿರಂತರ ಶುದ್ದಿಲಿ ಇರೇಕು – ಹೇಳ್ತದು ಒಪ್ಪಣ್ಣನ ಹಾರೈಕೆ.
ಹಾಂಗಾಗಿ, ಬೈಲ ನೆಂಟ್ರುಗೊ ಇನ್ನೂ ಹೆಚ್ಚು ತೊಡಗುಸಿಗೊಂಡು ಒಟ್ಟಾಗಿ ಕೆಲಸ ಕಾರ್ಯಂಗಳ ಮಾಡುವೊ°.
ಇನ್ನೂ ಇನ್ನೂ ಹೆಚ್ಚಿನ ಕೆಲಸಂಗೊ ನಮ್ಮಂದ ಆಗಲಿ – ಹೇಳ್ತದು ಹಾರೈಕೆ.
ಆ ಲೆಕ್ಕಲ್ಲಿ, ಕೆಲವೆಲ್ಲ ಕಾರ್ಯಂಗೊ ನಮ್ಮಂದ ಆಯೇಕಾಯಿದು.
– ನಮ್ಮ ಸಂಘಟನೆಯ ಇನ್ನೂ ಬಲಪಡುಸುಲೆ, ಹಿಂದೂ ಧರ್ಮವ ಒಳಿಶಿ ಬೆಳೆಶಲೆ ಎಂತೆಲ್ಲ ಅಳಿಲ ಸೇವೆ ನಮ್ಮಂದ ಕೊಡ್ಳೆಡಿಗೋ, ಅದೆಲ್ಲವನ್ನೂ ನಾವು ಕೊಡುವೊ°.
– ಗುರುಪೀಠ, ಮಠಕ್ಕೆ ತೊಂದರೆ ಬಂದರೆ ಸಮರ್ಥವಾಗಿ ಎದುರುಸುಲೆ ಸಂಘಟನೆಯೊಟ್ಟಿಂಗೆ ಕೈಜೋಡುಸುವೊ°.
– ಸಮಾಜಲ್ಲಿಪ್ಪ ಅಶಕ್ತರಿಂಗೆ ವಿದ್ಯೆ, ಆರೋಗ್ಯ, ಆಹಾರ, ಭದ್ರತೆ – ಇತ್ಯಾದಿಗಳ ಒದಗುಸಲೆ ಬೇಕಾದ – ನಮ್ಮಂದ ಎಡಿಗಾದ – ಎಲ್ಲಾ ಕಾರ್ಯಂಗಳ ಮಾಡಿಕೊಡುವೊ°.
– ಆಧುನಿಕ ವಿದ್ಯಾಭ್ಯಾಸಲ್ಲಿ ಮುಂದುವರಿತ್ತ ಮಕ್ಕೊಗೆ ಸೂಕ್ತ ಮಾರ್ಗದರ್ಶನ ಕೊಡ್ತ ಬಗ್ಗೆ ಕಾರ್ಯಂಗಳ ಮಾಡುವೊ°.
– ನಮ್ಮ ಸಮಾಜದ ಕೂಸುಗಳ ಧರ್ಮಾಂತರ ಮಾಡಿ ಸಮಾಜ ಒಡವದರ ವಿರೋಧಿಸಿ ತಿಳಿವಳಿಕೆ ಕೊಡೂವೊ°, ಊರು ಊರಿಲಿ ಕಾರ್ಯಕ್ರಮ ಮಾಡಿ ಜನ ಜಾಗೃತಿ ಮಾಡುವೊ°.
– ಸಮಾಜಕ್ಕೆ ಉಪಕಾರಿ ಅಪ್ಪ ಸಾಹಿತ್ಯಂಗಳ ಪ್ರಕಾಶನ ಮಾಡಿ ಪ್ರಸಾರ ಮಾಡುವೊ°.
– ತಲೆಮಾರುಗಳ ಕಾಲ ನೆಂಪೊಳಿವೆ ಹತ್ತು ಹಲವು ಕಾರ್ಯಂಗಳ ಮಾಡಿ ಬೈಲನ್ನೂ, ಅದರ ಮೂಲಕ ನಮ್ಮನ್ನೂ ಶಾಶ್ವತಗೊಳುಸುವೊ°.
ಎಲ್ಲೋರುದೇ ಒಟ್ಟು ಸೇರುತ್ತಿ ಅಲ್ಲದೋ?
ಇಪ್ಪತ್ತೇಳು ನಕ್ಷತ್ರಂಗಳನ್ನೂ ಒಟ್ಟಿಂಗೇ ಪ್ರಜ್ವಲಿಸಿರೆ ಸಿಕ್ಕುವ ಬೆಣಚ್ಚು ಇದ್ದಲ್ಲದೋ – ಆ ಬೆಣಚ್ಚು ಒಟ್ಟಿಂಗೇ ಸಿಕ್ಕುವ ಹಾಂಗೆ ಪ್ರಭೆ ಹೊಂದುಸುವೊ°.
ಸಮಾಜದ ಸೇನಾನಿಗೊ ಅಪ್ಪೊ°. ಎಲ್ಲೋರುದೇ ಒಪ್ಪಣ್ಣ-ಒಪ್ಪಕ್ಕಂದ್ರು ಅಪ್ಪೊ°.
ಎಲ್ಲಾ ನೆಂಟ್ರುಗಳೂ ಒಟ್ಟಿಂಗೆ ಸೇರಿರೆ ಇದೆಲ್ಲ ಎಡಿಯದ್ದ ಕೆಲಸ ಅಲ್ಲ.
ಏಳನೇ ಒರಿಷಲ್ಲಿ ನಾವು ಈ ನಿರ್ಧಾರವ ಗಟ್ಟಿ ಮಾಡಿಗೋಂಡು, ಸಂಘಟನೆಯ ಮೂಲಕ ಮುಂದುವರಿವೊ°. ಆಗದೋ?
ಹರೇರಾಮ
~

ಒಂದೊಪ್ಪ: ಸುಪ್ತ ಸಮಾಜಕ್ಕೆ ಸಪ್ತಮ ವರ್ಶದ ಬೈಲು ಚೈತನ್ಯ ತುಂಬಲಿ.

14 thoughts on “ಬೆಳವ ಬೈಲಿಂಗೆ ಏಳು ಒರಿಷದ ಸಂಭ್ರಮ

  1. ಹರೇರಾಮ..ಒಪ್ಪಣ್ಣನ ಬೈಲು ರಾಶಿ ಒಳ್ಳೆಯ ಕೆಲ್ಸ ಮಾಡ್ತ್ನಿದ್ದು..ಹವ್ಯಕರ ಬದುಕಿನ ಬೇರೆ ಬೇರೆ ಮಜಲುಗಳನ್ನ ತೆರೆದಿಡ್ವಲ್ಲಿ ಬೈಲು ಒಳ್ಳೆ ಪಾತ್ರವಹಿಸ್ತ್ನಿದ್ದು..ಗುರುಕರುಣೆಯಿಂದ ಬೈಲು ದಿನ ಕಳದ್ಹಾಂಗೆ ಪ್ರವರ್ಧಮಾನಕ್ಕೆ ಬರಲಿ..ಎಲ್ಲರ ಏಳ್ಗೆಗೆ ಕಾರಣ ಆಗ್ಲಿ…ಹವ್ಯಕ ಸಂಘಟನೆಗೆ ಒಂದು ಚೆಂದದ ವೇದಿಕೆ ಇದು..ಹಿಂದೆ ಗುರು ಮುಂದೆ ಗುರಿ ಇದ್ದು ಇದ್ಕೆ…ಮತ್ತೆ ಮನಸಿಟ್ಟು ದುಡಿವ ಪದಾಧಿಕಾರಿಗಳಿದ್ದೊ..ಹಾಂಗಾಗಿ ಹವ್ಯಕರ ಮನಸ್ನಲ್ಲಿ ತಂದೇ ಆದ ಛಾಪು ಬೈಲಿನ ಬಗ್ಗೆ ಇದ್ದು..ಬೈಲು ಆಚಂದ್ರಾರ್ಕವಾಗಿರಲಿ…ಹರೇರಾಮ

  2. ಬೈಲಿಂಗೆ ಏಳು ವರ್ಷ ಕಳುತ್ತು. ಬಪ್ಪೋರ್ಷ ಎಂಟು ಆವ್ತು. ಗುರುಬಲ ನೋಡಿ ಉಪ್ಪಿನಾನ ಮಾಡ್ಳೆ ಈಗಲೇ ಅಂದಾಜಿ ಮಾಡ್ಳೆ ಸುರು ಮಾಡ್ಳಕ್ಕೋ ಹೇಂಗೆ ?

  3. ತುಂಬಾ ಖುಷಿ ಆತು…ಬೈಲಿಂದ ಇನ್ನೂ ಹೆಚ್ಹಿನ ಕಾರ್ಯಂಗೊ ನಡೆಯಲಿ ಹೇಳಿ ಹಾರೈಕೆ

  4. ತುಂಬ ಖುಶಿ ಆವುತ್ತು ಬೈಲಿನ ಕೆಲಸ ಕಂಡು..ಎಲ್ಲೋರ ಸಹಭಾಗಿತ್ವಲ್ಲಿ ಹೀಂಗೆ ನಡೆಯli

  5. ಬೈಲಿನ ತೋರಮಟ್ಟಿನ ಸಿಂಹಾವಲೋಕನ ನೋಡಿ ಕೊಶಿ ಆತು. ಈ ಬೈಲಿನ ಮರದ ಹಳೆಬೇರಿಂಗೆ ಶಾಕೋಪಶಾಖೆ ಹೊಸಚಿಗುರು ಕಾಲ-ಕಾಲಕ್ಕೆ ಸೇರೆಂಡು ಹೆಮ್ಮರವಾಗಿ ಬೆಳೆಲಿ.

  6. ಹವ್ಯಕ ಸಾಹಿತ್ಯದ ಬೆಳವಣಿಗೆಗೆ ಬೈಲಿನ ಕೊಡುಗೆ ಅಭಿನಂದನೀಯ .ಬಹುಮುಖ ಸೇವೆ ಬೈಲಿಂದ ನಡೆಯಲಿ .ಎಲ್ಲೋರಿಂಗುದೆ ಒಳ್ಳೆದಾಗಲಿ .

  7. ಹವ್ಯಕ-ಮತಿಗಳ ದ್ಯುತಿ ವಿಸ್ತಾರಕ, ಸಾಹಿತ್ಯ ಮಾಧುರ್ಯ ಪ್ರಸಾರಕ, ಈ ಒಪ್ಪಣ್ಣ ಬಯಲು — ವರ್ಧತಾಮ್, ಪ್ರವರ್ಧತಾಮ್ ನಿರಂತರಮ್!

  8. ಒಪ್ಪಣ್ಣ ನೆರೆಕರೆ ಬಲವಾಗಿ ಬೆಳೆಯಲಿ. ಸಮಾಜಮುಖೀ ಕಾರ್ಯಂಗಳ ಇನ್ನಷ್ಟು,ಮತ್ತಷ್ಟು ಮಾಡ್ತ ಶಕ್ತಿ ಒದಗಿ ಬರಲಿ. ಬೈಲಿಲಿ ಹವ್ಯಕ ಸಾಹಿತ್ಯ ಮಿಂಚಲಿ.

  9. ಒಪ್ಪಣ್ಣನ ಬೈಲಿನ ನೆರೆಕರೆ ಬೆಳೆಯಲಿ.ಹವ್ಯಕ ಸಾಹಿತ್ಯಾಸಕ್ತಿ ಹೆಚ್ಚಲಿ.ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಲಿ ಹೇಳ್ತ ಹಾರೈಕೆಗೊ.
    ಏಳು ವರುಷದ ಬೈಲು ಬೆಳೆಯಲಿ,ನೂರ್ಕಾಲ ಬಾಳಲಿ.

  10. ಹರೇ ರಾಮ. ವರದಿ ಓದಿ ಕೊಶಿ ಆತು. ಬೈಲ ನೆಂಟ್ರುಗಳ ಸಹಕಾರಂದ ಬೈಲ ಬೇರು ಆಳವಾಗಿ, ವಿಶಾಲವಾಗಿ ಬೆಳೆತ್ತ ಇಪ್ಪದು ಮೆಚ್ಚೆಕ್ಕಪ್ಪದ್ದೆ. ಚೊಕ್ಕ ಬೈಲು ಪ್ರಕಾಶಮಾನವಾಗಿ ಬೆಳಗ್ಯೊಂಡಿರಲಿ ಹೇದೊಂದು ಚೆನ್ನೈವಾಣಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×