Oppanna.com

ನವ ವರ್ಷ, ನವ ಹರ್ಷ, ನವೋನ್ಮೇಷದ ನೆರೆಕರೆ

ಬರದೋರು :   ಒಪ್ಪಣ್ಣ    on   01/01/2017    6 ಒಪ್ಪಂಗೊ

ರಜ ಸಮೆಯ ಹಿಂದಷ್ಟೇ, ಒಪ್ಪಣ್ಣ ಬೈಲಕರೆಲಿ ಕೂದುಗೊಂಡು ಶುದ್ದಿ ಹೇಳುಲೆ ಸುರು ಮಾಡಿದ್ದು.
ಸುರುವಿಂಗೆ ಒಬ್ಬನೇ ಮಾತಾಡಿಗೊಂಡು ಇರ್ಸು ಕೆಲವು ಜೆನಕ್ಕೆ ಗೊಂತಪ್ಪದ್ದೇ, ಅವುದೇ ಬಂದು ಕೂದುಗೊಂಡವು – ಜೆತೆ ಆದವು.
ಮಾಷ್ಟ್ರುಮಾವ, ದೊಡ್ಡಮಾವ, ಶರ್ಮಪ್ಪಚ್ಚಿ, ಬೊಳುಂಬು ಮಾವ, ಅಡ್ಕತ್ತಿಮಾರು ಮಾವ, ಚೆನ್ನೈಭಾವ, ಸುಭಗ ಭಾವ – ಹೀಂಗೆ ಹಲವು ಹೆರಿಯೋರುದೇ ಬಂದು ಶುದ್ದಿ ಮಾತಾಡ್ಳೆ ಸೇರಿಗೊಂಡವು.
ಅವು ಎಲ್ಲೋರುದೇ ಸೇರಿದ್ದೇ ಸೇರಿದ್ದು – ಬೈಲು ಬೆಳದತ್ತು. ಮತ್ತೂ ಮತ್ತೂ ಹೊಸ ಮೋರೆಗೊ ಸೇರುಲೆ ಸುರು ಆತು.
ದಿನವೂ ಬೈಲಿಲಿ ಹಲವು ಶುದ್ದಿಗೊ ಬಪ್ಪಲೆ ಸುರು ಆತು.
ಒಂದೊಂದು ಗೆದ್ದೆಲಿಯೂ ಒಂದೊಂದು ಬೆಳೆ.
ಒಂದರ್ಲಿ ಮಕ್ಕೊಗಿಪ್ಪ ಸಂಸ್ಕಾರಂಗೊ, ಇನ್ನೊಂದರ್ಲಿ ದೊಡ್ಡೋರಿಂಗಿಪ್ಪ ಸಂಸ್ಕೃತ ಪಾಠ, ಆಚ ತಟ್ಟಿಲಿ ನೆಗೆಗೊ, ಈಚ ತಟ್ಟಿಲಿ ಕಣ್ಣೀರುಗೊ, ಮತ್ತೊಂದರ್ಲಿ ಕಾವ್ಯಧಾರೆ, ಇನ್ನೊಂದರ್ಲಿ ಕಥಾಧಾರೆ.
ಬೈಲಿನ ಸುಂದರ ರೂಪ – ಎಷ್ಟೋ ಜೆನರ ಕಣ್ಣು, ಮನ ತುಂಬಿಗೊಂಡು ಇದ್ದತ್ತು.
~
ಆರಂಭಲ್ಲಿ ಬ್ಲೋಗು ರೂಪಲ್ಲಿ ಇದ್ದಿದ್ದದು, ಮತ್ತೆ ವೆಬ್-ಸೈಟು ರೂಪ ಬಂತು. ಇದರಿಂದಾಗಿ ಎಲ್ಲೋರಿಂಗೂ ಶುದ್ದಿ ಹೇಳುವ ಹಾಂಗಾತು. ಹೊಸ ಮೋರೆಗೊ, ಹೊಸ ಜೆನಂಗೊ ಶುದ್ದಿ ಬರವಲೆ ಸಾಧ್ಯತೆ ಮಾಡಿಕೊಟ್ಟ ಹಾಂಗಾತು. ಎಷ್ಟೋ ಜೆನ ಅವರ ಪ್ರಥಮ ಶುದ್ದಿಯ ಬೈಲಿಲಿ ಪ್ರಕಟ ಮಾಡ್ಳೆ ಆರಂಭ ಮಾಡಿದವು. ಜೆನರಿಂಗೆ ಅವರ ಸಾಹಿತ್ಯ ಬೆಳೆಶುಲೆ, ಬೆಳವಲೆ ಬೈಲು ವೇದಿಕೆ ಮಾಡಿ ಕೊಟ್ಟತ್ತು.
ಹವ್ಯಕ ಸಾಹಿತ್ಯ ಸರಸ್ವತಿ ಸೇವೆಲಿ ಬೈಲು ಅದರದ್ದೇ ಸೇವೆ ಸಲ್ಲುಸಿಗೊಂಡು ಬಂತು.
~
ಕ್ರಮೇಣ, ಕಾಲ ಬೆಳದತ್ತು.
ಕಂಪ್ಯೂಟರಿಲಿ ವೆಬ್-ಸೈಟು ನೋಡುದು ಕಡಮ್ಮೆ ಆತು, ಮೊಬೈಲಿಲಿ ನೋಡುವ ಹಂತ ಬಂತು. ಈ ಕಾಲಕ್ಕೆ ನಮ್ಮ ಬೈಲುದೇ ಅದಕ್ಕೆ ಬೇಕಾದ ಬದಲಾವಣೆ ಮಾಡಿಗೊಂಡು ಬೆಳದತ್ತು. ಪ್ರತಿ ಹೊಸ ವ್ಯವಸ್ಥೆಗೊ ಬಪ್ಪಗಳೂ ಹೊಸ ಏರ್ಪಾಡುಗೊ ನಮ್ಮ ಬೈಲಿಲಿ ಆತು. ಅಡಿಗೆ ಸತ್ಯಣ್ಣ ಅವರ ಶುದ್ದಿಯ ಮೊಬೈಲಿಲಿ ನೋಡಿಗೊಂಡು ಅಡಿಗೆ ಕೋಣೆಂದಲೇ ನೆಗೆ ಮಾಡುವ ಹಾಂಗಾತು. ಅದೂ ಅನುಕೂಲವೇ, ಅದೂ ಬದಲಾವಣೆಯೇ.

ಹೇಳಿದಾಂಗೆ, ಈ ಉದ್ದುತ್ತ ಮೊಬೈಲುಗೊ ಬಂದ ಮತ್ತೆ, ದೀರ್ಘ ಕಾಲ ಶುದ್ದಿ ಓದಿ, ಅದಕ್ಕೆ ಉತ್ತರ ಬರವ ಸಂಪ್ರದಾಯ ಕಡಮ್ಮೆ ಆತೋ – ಹೇದು ಪೆರ್ಲದಣ್ಣಂಗೆ ಸಂಶಯ ಬಪ್ಪಲಿದ್ದು. ಓದು ಬರವಣಿಗೆ ಉದ್ದುದ್ದದ್ದು ಬರೇ ಕಂಪ್ಯೂಟ್ರಿಂಗೇ ಆತಷ್ಟೆ, ಮೊಬೈಲಿಂಗೆ ಏನಿದ್ದರೂ ಪಕ್ಕನೆ ಓದುದು, ಗೀಸುದು, ಉದ್ದುದು, ನೆಗೆಮಾಡುದು, ಮರವದು.
ಆದರೆ ಬೈಲಿಲಿ ಹಾಂಗಲ್ಲ, ಇದರ ಓದೇಕು, ಅರ್ತ ಮಾಡಿಗೊಳೇಕು, ಅದಕ್ಕೆ ಒಪ್ಪ ಕೊಡೇಕು.
ಮೊಬೈಲು, ಆಧುನಿಕತೆಯ ಹಾವಳಿಲಿಯೂ ಬೈಲು ಅದರ ಪ್ರಸ್ತುತತೆಯ ಮಡಿಕ್ಕೊಳೇಕಾದ ಏರ್ಪಾಡುಗಳ ಮಾಡ್ತಾ ಬರೆಕ್ಕಾವುತ್ತು. ಪ್ರತಿ ಒರಿಶವೂ ಈ ಬೈಲು ಬದಲಾವಣೆಗೊ ಕಾಣ್ತು. ಈ ಒರಿಶವೂ ಅಪ್ಪಲಿದು.
~
ಈ ಒರಿಶವೂ ಅಪ್ಪಲಿದ್ದು – ಎಂತ್ಸರ?
ನೋಡುವೊ, ಬೈಲಿಂಗೆ ಹೆಚ್ಚು ನೆಂಟ್ರುಗೊ ಬಂದು, ಅವೆಲ್ಲೋರುದೇ ಶುದ್ದಿ ಹೇಳಿ, ಒಪ್ಪಕೊಟ್ಟು, ಸಕ್ರಿಯ ಅಪ್ಪ ಹಾಂಗೆ ಏರ್ಪಾಡೂಗೊ ಮಾಡ್ಳಿದ್ದು.
ಹೊಸ ಹೊಸ ವ್ಯವಸ್ಥೆಗೊ ಅಳವಡುಸಿಗೊಂಬಲಿದ್ದು.
ಬೈಲ ನೆಂಟ್ರುಗೊ ಒಟ್ಟು ಸೇರಿ ಒಂದರಿ ನೆಗೆ-ಮಾತಾಡ್ಳಿದ್ದು.
ಎಲ್ಲೋರುದೇ ಒಟ್ಟುಸೇರಿರೆ ಇದು ಎಡಿಯದ್ದ ಕೆಲಸ ಅಲ್ಲ.

ಒಂಭತ್ತನೇ ಒರಿಶದ, ನವ ಹುರುಪಿಲಿ ಈ ಕೆಲಸ ಸಾಕಾರ ಮಾಡುವನೋ.
~
ಒಂದೊಪ್ಪ: ನವ ಹೇದರೆ ಹೊಸತ್ತು; ನವ ಹೇದರೆ ಒಂಭತ್ತು. ಬೈಲಿಂಗೆ ಇದು ನವ ವರ್ಷ; ನವ ವರ್ಷ ಆಗಲಿ.

6 thoughts on “ನವ ವರ್ಷ, ನವ ಹರ್ಷ, ನವೋನ್ಮೇಷದ ನೆರೆಕರೆ

  1. ನವ- ನವವರ್ಷವ ಸ್ವಾಗತಿಸುವೋಂ .ಹರೇ ರಾಮ

  2. ನವ ವರುಷದ ಬೈಲಿಂಗೆ ನವ ಚೈತನ್ಯ ಬರಳಿ. ವಾಟ್ಸ್ ಅಪ್ಪಿಲ್ಲಿ ಮೈಮರದ ಜವ್ವನಿಗರೆಲ್ಲ ಬೈಲಿಂಗೆ ಪುನ: ಬರಳಿ. ಹಿಂದಾಣ ಬೈಲಿನ ವೈಭವ ಮತ್ತೆ ಮರುಕಳಿಸಲಿ.

  3. ಬೈಲಿನ ಸಿಂಹಾವಲೋಕನ ಹಾಂಗೂ ಒಂದಿಷ್ಟು ಬದಲಾವಣೆಯ ರೂಪುರೇಶೆ , ಒಳ್ಳೆಯ ಯೋಜನೆ ಒಪ್ಪಣ್ಣ.

  4. ಹರೇ ರಾಮ. ಕೊಶಿ ಆತು ಒಪ್ಪಣ್ಣನ ಈ ಶುದ್ದಿ ಓದಿ.
    ಬದಲಾವಣೆ ಜಗತ್ತಿನ ನಿಯಮ ಅಡ. ನಮ್ಮ ಬೈಲಿಲ್ಲಿಯೂ ಬದಲಾವಣೆಗೊ ನಿರಂತರವಾಗಿ ಇರಳಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×