ಗಾನ ಮುರಳಿಯ ಬಿಟ್ಟು ಮರಳಿದ ಬಾಲಮುರಳಿ

November 25, 2016 ರ 12:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿಲಿ ಸಂಗೀತಾಸಕ್ತರು ಹಲವು. ಶಾಸ್ತ್ರೀಯ ಸಂಗೀತಾಸಕ್ತರ ಅತಿ ಪ್ರಿಯ ಕಲಾವಿದರಲ್ಲಿ ಒಬ್ಬರಾದ ಎಂ. ಬಾಲಮುರಳೀ ಕೃಷ್ಣ ಮೊನ್ನೆ ತೀರಿಗೊಂಡಿದವು – ಹೇಳ್ತ ಶುದ್ದಿ ಬಹಳ ಬೇಜಾರ ತಯಿಂದು.
ಸಂಗೀತದ ವೃದ್ಧಿಗಾಗಿಯೇ ಹುಟ್ಟಿ, ಬೆಳದು ಬಾಳಿದ ಆ ಮಹನೀಯರ ಜೀವನವ ನಮ್ಮ ಚೆನ್ನೈಭಾವ ಹತ್ತರಂದ ಕಂಡಿದವು. ಮೊನ್ನೆ ಅವರತ್ರೆ ಮಾತಾಡುವಾಗ ಹಲವು ಸಂಗತಿಗೊ ಬಯಿಂದು, ಬೈಲಿಲಿ ಒಂದರಿ ಮಾತಾಡುವೊ°, ಆಗದೋ?
~

ಬೈಲಿಲಿ ಅಂದೊಂದರಿ ’ಮುರಳೀರವಳೀ ಹಾಯ್’ – ಹೇಳ್ತ ಒಂದು ಶುದ್ದಿ ಮಾತಾಡಿದ್ದು. ಕುಂಞಿ ಬಾಬೆಯ ಹಾಂಗೆ ತೊಡಿ ಮಡುಸಿದ ಪಟ ಇಪ್ಪ ಹಾಡುಗಾರ -ಹೇದು ನಾವು ಗುರ್ತ ಮಾಡಿಗೊಂಡಿದು. ಅದೇ ಮಹನೀಯರ ಶುದ್ದಿ ಇದು.
~

ಮಂಗಳಂಪಳ್ಳಿ ಮುರಳೀಕೃಷ್ಣ – ಶಾಸ್ತ್ರೀಯ ಸಂಗೀತ ಜಗತ್ತಿಲಿ ಎಲ್ಲೊರಿಂಗೂ ಗೊಂತಿಪ್ಪ ಹೆಸರು. ಸಂಗೀತಗಾರರ ಮನೆಲೇ ಹುಟ್ಟಿದ ಮಾಣಿಗೆ ಸಣ್ಣಾಗಿಪ್ಪಗಳೇ ಆಸಕ್ತಿ. ಅಬ್ಬೆಯ ಕಳಕ್ಕೊಂಡ ಮಾಣಿಗೆ ಅಪ್ಪನದ್ದೇ ಸಾಂಕಾಣ. ಇವರ ಸಂಗೀತಾಸಕ್ತಿಯ ಕಂಡು, ಪಿ.ಆರ್.ಪಂತುಲು – ಹೇಳುವ ಮಹನೀಯ, ಗುರುಗಳ ಹತ್ತರೆ ಕಲಿವಲೆ ಸೇರ್ಸುತ್ತವು, ಬಹಳ ಸಣ್ಣ ಪ್ರಾಯಲ್ಲಿ. ಇವು ತ್ಯಾಗರಾಜರ ನೇರ ಶಿಶ್ಯ ಪರಂಪರೆಯವು.
ಸಾಧನೆ ಮಾಡಿ, ಕಲಿಯೆಕ್ಕಾದ ಕಲೆ ಅಲ್ಲ ಅವರ ಒಳ ಇದ್ದದು, ಹುಟ್ಟುವಾಗಳೇ ಬಂದ ಕಲೆ ಅದು. ಏಕೇದರೆ, ಆರನೇ ಒರಿಶಲ್ಲೇ – ಇವರ ಪ್ರಥಮ ಕಚೇರಿ ನೆಡದ್ದಾಡ. ಎಂಟನೇ ಒರಿಶಲ್ಲಿಪ್ಪಾಗ ಇವರ ಪ್ರಬುದ್ಧ ಕಛೇರಿಯ ಕಂಡ ಒಬ್ಬರು ಕೀರ್ತನಾ ಭಾಗವತರು ಇವಕ್ಕೆ “ಬಾಲ” – ಹೇಳುವ ಪೂರ್ವನಾಮವ ಸೇರ್ಸಿದವಾಡ. ಹಾಂಗಾಗಿ – ಬಾಲಮುರಳೀ ಕೃಷ್ಣ ಹೇದು ಹೆಸರಾತು. ಮುಂದೆ ಅದು ಅವರ ಹೆಸರಿನ ಒಟ್ಟಿಂಗೆ ಶಾಶ್ವತವಾಗಿ ನಿಂದತ್ತು.

ವೈದಿಕರಿಂಗೆ ಸಂಪೂರ್ಣ ವೇದ ಘನಾಂತ ಕಂಠಸ್ಥ ಮಾಡುದು ಹೇಳಿರೆ ಯೇವ ರೀತಿ ಕಷ್ಟವೋ, ಸಂಗೀತಲ್ಲಿ ೭೨ ಮೇಳಕರ್ತ ರಾಗಂಗಳ ಹಾಡುಸ್ಸು ಹೇದರೆ ಅಷ್ಟೇ ಕಷ್ಟ. ಹಾಂಗಾರೆ, ಈ ಬಾಲಮುರಳಿ ಗೆ ಹದಿನೈದನೇ ಒರಿಶಲ್ಲೇ ಆ ಸಾಧನೆ ಮಾಡ್ಳೆ ಎಡಿಗಾಗಿತ್ತು. ಆ ನಮುನೆ ಇದ್ದತ್ತು ಹೃದಯಲ್ಲಿ ಸಂಗೀತ.
ರಾಗಾಲಾಪನೆಯ ಹಾಡುಗಾರನಾಗಿ ಅಷ್ಟೇ ಒಳಿಯದ್ದೆ, ವಾದ್ಯಂಗೊ-ತಾಳವಾದ್ಯಂಗಳಲ್ಲೂ ಪಳಗಿತ್ತಿದ್ದವು. ಮೃದಂಗ, ಕಂಜೀರ, ಪಿಟೀಲು, ವಯೋಲ, ವೀಣೆ – ಇತ್ಯಾದಿ ಹಲವು ವಾದ್ಯಂಗೊ.
ಹಾಡುದು ಮಾಂತ್ರ ಅಲ್ಲ, ಸಂಗೀತಕ್ಕೆ ಹಲವು ರಾಗಂಗಳನ್ನೂ, ಕೀರ್ತನೆಗಳನ್ನೂ ಕೊಟ್ಟು ಕರ್ನಾಟಕ ಸಂಗೀತದ ಸಾಹಿತ್ಯ ಪತ್ತಾಯ ತುಂಬುಸಿ ಘನ ಮಾಡಿದ್ದವು ಹೇದರೆ ಅವರ ವಿದ್ವತ್ತು-ವಾಗ್ಗೇಯತೆ ನವಗೆ ಕಾಣ್ತು ಅಪ್ಪೋ!
~
ಭಾರತದ ಶಾಸ್ತ್ರೀಯ ಸಂಗೀತಲ್ಲಿ ದಕ್ಷಿಣಾದಿ, ಉತ್ತರಾದಿ ಎರಡೂ ಸಂಗೀತಂಗೊಕ್ಕೆ – ಮೂಲ ಒಂದೇ. ಇದರ ಸರಿಯಾಗಿ ಅರ್ಥ ಮಾಡಿಗೊಂಡ ಇವು, ಉತ್ತರಾದಿ ಕಲಾವಿದರ ಒಟ್ಟಿಂಗೆ ಹಲವಾರು ಯುಗಳ ದ್ವಂದ್ವ ಕೊಟ್ಟುಗೊಂಡು ಇತ್ತಿದ್ದವಾಡ.
ಪಂಡಿತ್ ಭೀಮಸೇನ ಜೋಷಿ, ಕಿಶೋರಿ ಅಮೋಣ್ಕರ್, ಹರಿಪ್ರಸಾದ್ ಚೌರಾಸಿಯ – ಹೀಂಗಿಪ್ಪ ಹಿಂದೂಸ್ಥಾನೀ ದಿಗ್ಗಜರ ಒಟ್ಟಿಂಗೆ ಕೂದು, ಕರ್ನಾಟಕಿಯ ಕಂಪಿನ ಕಾಶ್ಮೀರದ ವರೆಂಗೂ ಕೊಂಡು ಹೋಯಿದವಾಡ.

ಭಾರತ ಮಾಂತ್ರ ಎಂತಕೆ, ಲೋಕ ಇಡೀ ಸುತ್ತಿ ಹಲವಾರು ದೇಶಂಗಳಲ್ಲಿ ಕಚೇರಿ ಕೊಟ್ಟುಗೊಂಡು ಇತ್ತಿದ್ದವು. ಇದರಿಂದಾಗಿ, ಭಾರತ ಮೂಲದ ವಿದೇಶಲ್ಲಿಪ್ಪ ಸಂಗೀತಗಾರರಿಂಗೆ ಮಾಂತ್ರ ಅಲ್ಲದ್ದೆ, ವಿದೇಶದ ಸಂಗೀತಾಸಕ್ತರಿಂಗೆ ಭಾರತೀಯ ಪರಂಪರೆಯ ಪರಿಚಯ ಅಪ್ಪಲೆ ಅನುಕೂಲ ಆಗಿತ್ತು. ದೇಶ-ವಿದೇಶದ ಅನೇಕ ಪ್ರಶಸ್ತಿಗೊ ಇವರ ಕಲೆಯ ಹುಡ್ಕಿಗೊಂಡು ಬಯಿಂದು.
~
ಇಷ್ಟೆಲ್ಲ ಪ್ರಯಾಣ ಮಾಡಿ, ಸಾಧನೆ ಮಾಡಿ, ಮೊನ್ನೆ (೨೨, ನವೆಂಬರ್) ಇಹಲೋಕವ ಬಿಟ್ಟು, ದೇವಾನುದೇವತೆಗೊಕ್ಕೆ ಸಂಗೀತಸುಧೆ ಹರಿಸುಲೆ ಬೇಕಾಗಿ ವೈಕುಂಠಕ್ಕೆ ಹೋದವು.
ಬಹಳ ಗೌರವಂದ, ನಮ್ಮ ಬೈಲು ಅವರ ಸ್ಮರಿಸುತ್ತು.
ಅಂಥವು ಪುನಃ ಪುನಃ ಭೂಮಿಲಿ ಅವತಾರ ಎತ್ತಲಿ, ಸಂಗೀತ ಆಸಕ್ತರಿಂಗೆ ವೇದಿಕೆ, ಭೂಮಿಕೆ ಒದಗುಸಲಿ.

ವಿಷ್ಣುಪಾದದ ಅನಂತ ಶ್ರುತಿಲಿ ಲೀನ ಆದ ಅವರ ಆತ್ಮಕ್ಕೆ ಮೋಕ್ಷ ಸಿಕ್ಕಲಿ.
~

ಒಂದೊಪ್ಪ: ಕಲೆಲಿ ಎಷ್ಟೇ ಪ್ರಬುದ್ಧ ಆದರೂ, ತಾನು ’ಬಾಲ’ – ಹೇಳುವ ವಿನಯ ಇವರ ಜೀವನ ಗಮನಿಸುವಗ ಗೊಂತಾವುತ್ತು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಶ್ರೀಅಕ್ಕ°

  ಒಪ್ಪಣ್ಣೋ, ಶುದ್ದಿ ಕೇಳಿ ತುಂಬಾ ಬೇಜಾರಾತು ಒಂದರಿ.
  ಆರೇ ಆದರೂ ಶಾಶ್ವತ ಅಲ್ಲನ್ನೆ? ಬಂದ ಕೆಲಸ ಮುಗಿಶಿ ವಾಪಾಸು ಹೋಗಲೇಬೇಕು. ನಾವು ಬಂದದರಲ್ಲಿ ನಮ್ಮ ಕೆಲಸ ನಾವು ಎಷ್ಟು ಮಾಡಿ ಹೋಯಿದು ಹೇಳಿ ಲೆಕ್ಕ ಇಪ್ಪದು ಅಲ್ಲದಾ?
  ಬಾಲಮುರಳಿಕೃಷ್ಣ ತನ್ನ ಬದುಕ್ಕಿಡೀ ನಾದಲ್ಲಿಯೇ ಕಳದ್ದದು. ಎಷ್ಟು ರಾಗಂಗ-ಸಾಹಿತ್ಯಂಗ ಹೆರ ಬಂದತ್ತು!! ಮುಂದಾಣ ತಲೆಮಾರಿಂಗೆ ಬೇಕಾದ ಸಂಗೀತ ಪತ್ತಾಯ ತುಂಬುಸಿಯೇ ಹೋದ ಅಲ್ಲದಾ? ಶತಮಾನಕ್ಕೆ ಒಬ್ಬ ಹುಟ್ಟುತ್ತ ಹಾಂಗಿರ್ತ ಒಂದು ಜೀವಿತ! ಹೋದ ಬೇಜಾರು ಎಂದೆಂದಿಂಗೂ ಇಕ್ಕು ಹಾಕಿದ ನಾದಲೋಕಲ್ಲಿ ಅವರ ನೆಂಪು ಮಾಡಿ ಅವಕ್ಕೆ ಶ್ರದ್ಧಾಂಜಲಿ ಕೊಡುದೇ ನಮ್ಮ ಕರ್ತವ್ಯ.

  ಒಂದೊಪ್ಪ ಲಾಯ್ಕಾಯಿದು.

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಅಪ್ಪು ., ಅವ° ಒಬ್ಬ ಮಹಾಚೇತನ. ಅವನ ಹತ್ರಂದ ಕಾಂಬದು ಸೌಭಾಗ್ಯವೇ. ಅವನ ಸಾಧನೆ , ಖಜಾನೆ ಮತ್ತಾಣೋರಿಂಗೆ ಸ್ಫೂರ್ತಿ. ಅವನ ಅಗಲಿಕೆ ನಿಜಕ್ಕೂ ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ.

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  S.K.Gopalakrishna Bhat

  ಬಾಲಮುರಳಿ ಬಗ್ಗೆ ಭಾವಪೂರ್ಣ ಬರಹ. ಅವರ ಹಾಡು ಅಮರ.

  [Reply]

  VA:F [1.9.22_1171]
  Rating: 0 (from 0 votes)
 4. ಅವು ಒಬ್ಬ ಮಹಾನ್ ಮೇಧಾವೀ ಕಲಾವಿದ‌. ತ್ಯಾಗರಾಜರ ಹಾಂಗಿಪ್ಪ ಸಂತ. ಅವರ ಕಾಲಘಟ್ಟಲ್ಲೇ ಹುಟ್ಟಿ, ಅವರೊಟ್ಟಿಂಗೆ ದೀರ್ಘಕಾಲದ ಒಡನಾಟ ಸಿಕ್ಕಿದ್ಸು ನಮ್ಮ ಪೂರ್ವಜನ್ಮ ಸುಕೃತ‌.
  ನಮ್ಮಾಂಗಿರ್ತ ಸಾವಿರಾರು ಸಂಗೀತಾಸಕ್ತರ ಹೃದಯಲ್ಲಿ ಅವು ಶಾಶ್ವತ ಇರ್ತವು. ಅವಕ್ಕೆ ದೈವಸಾಯುಜ್ಯ ಪ್ರಾಪ್ತಿಯಾಗಲಿ.
  ಪುನಃ ಹುಟ್ಟುತ್ತರೆ, ನಮ್ಮ ಭೂಮಿಲಿಯೇ ಹುಟ್ಟಿ ಭವಿಷ್ಯದ ಸಮಾಜಕ್ಕೂ ಕಲಾಸರಸ್ವತಿಯ ಪರಿಚಯ ಮಾಡುಸಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣಕೆದೂರು ಡಾಕ್ಟ್ರುಬಾವ°ಕಾವಿನಮೂಲೆ ಮಾಣಿಪಟಿಕಲ್ಲಪ್ಪಚ್ಚಿಪುತ್ತೂರುಬಾವಎರುಂಬು ಅಪ್ಪಚ್ಚಿಮುಳಿಯ ಭಾವಪ್ರಕಾಶಪ್ಪಚ್ಚಿಪುತ್ತೂರಿನ ಪುಟ್ಟಕ್ಕಡಾಮಹೇಶಣ್ಣಸಂಪಾದಕ°ಶಾಂತತ್ತೆದೊಡ್ಡಮಾವ°ಬಟ್ಟಮಾವ°ವಿನಯ ಶಂಕರ, ಚೆಕ್ಕೆಮನೆಜಯಗೌರಿ ಅಕ್ಕ°ಅಕ್ಷರ°ಪುಣಚ ಡಾಕ್ಟ್ರುಡೈಮಂಡು ಭಾವಶೇಡಿಗುಮ್ಮೆ ಪುಳ್ಳಿಉಡುಪುಮೂಲೆ ಅಪ್ಪಚ್ಚಿಕೇಜಿಮಾವ°ಯೇನಂಕೂಡ್ಳು ಅಣ್ಣಅಡ್ಕತ್ತಿಮಾರುಮಾವ°ಪುಟ್ಟಬಾವ°ನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ