ಹವ್ಯಕ ಸಾಹಿತ್ಯಕ್ಕೆ ಬಾಳು ಕೊಟ್ಟ ಬಾಳಿಲ; ಹೊಸಮನೆ ತೋರ್ಸಿದ ಹೊಸಮನೆ ಅಜ್ಜ°..

April 17, 2015 ರ 12:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾಳಿಲಮಾವನ 'ಧರ್ಮವಿಜಯ'
ಬಾಳಿಲಮಾವನ ‘ಧರ್ಮವಿಜಯ’

ಪುತ್ತೂರಾಯನ ನೋಡೇಕು ಹೇದು ಮನಸ್ಸಿಲಿದ್ದತ್ತು. ಆದರೆ ಮಾಲಿಂಗೇಶ್ವರ ಬಿಡೆಕ್ಕನ್ನೇ,  ತೋಟಕ್ಕೆ ಮಂಗನ ರೂಪಲ್ಲಿ ಬಂದೋ, ಆಳುಗಳ ಬಪ್ಪಲೆ ಬಿಡದ್ದೆಯೋ – ಏನಾರು ಏರ್ಪಾಡು ಮಾಡಿ ಹೋಪಲೆಡಿಯದ್ದಾಂಗೆ ಮಾಡಿ ಮಡಗುತ್ತನ್ನೇ!
ಇರಳಿ, ಇನ್ನಾಣ ಒರಿಶ ಹೋದರಾತು. ಬೊಡ್ಡಜ್ಜಂಗೂ ಹಾಂಗೇ ಒಂದು ನಮಸ್ಕಾರ ಮಾಡಿಕ್ಕುವೊ°.
~
ಪ್ರತಿ ಒರಿಶದಂತೆ ಈ ಒರಿಶವೂ ನಮ್ಮ ಬೈಲಿನ ವಿಷು ವಿಶೇಷ ಸ್ಪರ್ಧೆ ನೆಡದ್ಸು, ಅದರ ಬಹುಮಾನಿತರ ಹೆಸರು ಪ್ರಕಟ ಮಾಡಿದ್ಸು, ಅದರ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜನೆ ಆದ್ಸು, ನೀರ್ಚಾಲಿಲಿ ನಾಳ್ತು ಆಯಿತ್ಯವಾರ (ಎಪ್ರಿಲ್ ೧೯)ಕ್ಕೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದನೆ ಮಾಡ್ತ ಸಮಾರಂಭ ಇಪ್ಪದು ನವಗೆ ಅರಡಿಗು.
ದೊಡ್ಡ ಭಾವನ ಸಂಚಾಲಕತ್ವಲ್ಲಿ ವಿಷು ಸ್ಪರ್ಧೆಯೂ, ಮುಳಿಯ ಭಾವನ ಸಂಚಾಲಕತ್ವಲ್ಲಿ ಲಲಿತಕಲೆಯೂ – ಒಟ್ಟಾಗಿ ಆ ದಿನನೆಡವಲಿದ್ದು – ಹೇಳ್ಸು ನಮ್ಮ ಬೈಲಿನ ಹಿರಿಮೆ. ಈ ವಾರ ವಿವರ ಕಳುದ ವಾರ ಮಾತಾಡಿದ್ದು.
~
ಈ ಸರ್ತಿ ವಿಷು ವಿಶೇಷ ಕಾರ್ಯಕ್ರಮಲ್ಲಿ ಮತ್ತೂ ವಿಶೇಷ ಎಂತರ ಗೊಂತಿದ್ದೋ?
ಬಾಳಿಲ ಮಾವನ ಸ್ಮರಣಾರ್ಥ ಒಂದು “ಪ್ರಶಸ್ತಿ” ಆರಂಭ ಮಾಡಿದ್ದು ಈ ಒರಿಶದ ಬೈಲಿನ ಕಾರ್ಯಕ್ರಮದ ಹೆಮ್ಮೆ.
ಸಾಹಿತ್ಯ ಕ್ಷೇತ್ರಲ್ಲಿ ದೊಡ್ಡ ಕೆಲಸ ಮಾಡಿದೋರಿಂಗೆ, ಸಾಹಿತ್ಯ ಪೋಷಣೆ ಮಾಡಿ, ಕೃಷಿ ಮಾಡಿ ಅದರ್ಲೇ ಜೀವನಲ್ಲಿ ದುಡುದ ಮಹನೀಯರ ಗುರುತುಸಿ ಈ ಪ್ರಶಸ್ತಿಯ ಕೊಡ್ಸು ನಾವು ಆಲೋಚನೆ ಮಾಡಿದ್ದು.
ಆ ಪ್ರಕಾರ ಭರಣ್ಯ ಮಾವನ ಹತ್ತರೆ ವಿಷಯ ಹೇಳುವಾಗ ತುಂಬಾ ಸಂತೋಷಲ್ಲಿ ಆ ವಿಚಾರವ ಸ್ವಾಗತಿಸಿ, ಆ ಹೆರಿಯ ಜೀವವ ನಾವು ಗೌರವಿಸೇಕಾದ್ಸು ನಮ್ಮ ಕರ್ತವ್ಯ –ಹೇದು ಅಭಿಪ್ರಾಯ ಮಾಡಿದವು.
ಈಗಾಣ ಕಾಲಘಟ್ಟಲ್ಲಿ ಸಾಹಿತ್ಯ ಕ್ಷೇತ್ರಲ್ಲಿ ಅತಿ ಹೆಚ್ಚು ದುಡುದ ಹೊಸಮನೆ ಅಜ್ಜಂಗೆ ಮೊತ್ತ ಮೊದಲ ಒರಿಶದ ಪ್ರಶಸ್ತಿ ಕೊಡುವೊ° – ಹೇದು ನಿಘಂಟು ಮಾಡಿತ್ತು ಬೈಲು.
ಆ ಪ್ರಕಾರ ನಾಳ್ತು ವೀ.ಬೀ.ಹೊಸಮನೆ – ನಮ್ಮ ಗೌರವ ಪ್ರೀತಿಯ ಹೊಸಮನೆ ಅಜ್ಜಂಗೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಸಸ್ತಿ ಪ್ರದಾನ.
~
ಅದಪ್ಪು, ಬಾಳಿಲ ಮಾವನ ಬಗ್ಗೆ, ಅವರ ಸಾಧನೆಯ ಬಗ್ಗೆ ಬೈಲಿಂಗೆ ಗೊಂತಿದ್ದೋ?
ದೊಡ್ಡಭಾವಂಗೆ ಸರೀ ಗೊಂತಿದ್ದು, ಆದರೆ ಕಲವು ಜೆನಂಗೊಕ್ಕೆ ಬರೀ ಮೇಗಂದ ಮೇಗೆ ಮಾಂತ್ರ ಗೊಂತಿಕ್ಕಷ್ಟೆ.
ಎಂತಕೂ, ಬೈಲಿನ ಎಲ್ಲೋರಿಂಗೂ ಗುರ್ತ ಆಗಲಿ ಹೇದು ಮೊನ್ನೆ ದೊಡ್ಡಭಾವ ಹೇಳಿದ ಪೂರ್ತ ವಿಷಯ ಇಲ್ಲಿ ವಿವರವಾಗಿ  ಹೇಳ್ತೆ. ಆಗದೋ?
~
ಬಾಳಿಲ ಪರಮೇಶ್ವರ ಭಟ್ಟ:
ಅಂಬಗಾಣ ದಕ್ಷಿಣಕನ್ನಡದ ಕಾಸರಗೋಡಿನ ಕೂಳಕ್ಕೂಡ್ಳು ವೆಂಕಟ್ರಮಣ ಭಟ್ಟ° – ಹೊನ್ನಮ್ಮ ದಂಪತಿಗೆ ೧೯೪೦ ರ ಫೆಬ್ರವರಿ ೧೧ ಕ್ಕೆ ಪುತ್ರರತ್ನನ ಜನನ ಆತು. ಪರಮ ಪ್ರೀತಿಯ ಬಾಬೆಗೆ ಪರಮೇಶ್ವರ° ಹೇದು ಹೆಸರೂ ಮಡಗಿದವು. ಚುರ್ಕಿನ ಮಾಣಿ ಬೆಳದು ವಿದ್ಯಾಭ್ಯಾಸದ ಹಂತಕ್ಕೆತ್ತುವಾಗ – ಒಳ್ಳೆ ವಿದ್ಯಾಭ್ಯಾಸ ಆಯೇಕು ಹೇದು ಕಿಳಿಂಗಾರು ಶಾಲೆಗೆ ಕಳುಸಿದವು. ಅಲ್ಲೇ ಆಚಿಕ್ಕೆ ಕಲ್ಲಕಟ್ಟ – ಬೆದ್ರಾಡಿಲಿ ಅಜ್ಜನ ಮನೆ ಇದ್ದ ಕಾರಣ ಶಾಲೆಗೆ ಹೋಗಿಬಪ್ಪ ಅನುಕ್ಕೂಲ ಸುಲಭ ಆತು. ಐದ್ನೇ ಕ್ಲಾಸು ಒರೆಂಗೆ ಕಿಳಿಂಗಾರು ಶಾಲೆಲೇ ವಿದ್ಯಾಭ್ಯಾಸ.
ಆದರೆ, ಆರ್ನೇ ಕ್ಲಾಸಿಂಗಪ್ಪಗ ಸ್ಥಿತಿಪಲ್ಲಟ ಆತು. ಕೂಳಕ್ಕೋಡ್ಳಿಂದ ಪಾಲಾಗಿ ವೆಂಕಟ್ರಮಣ ಭಟ್ರು ಬೆಳ್ಳಾರೆ ಹತ್ರಾಣ ಪೆರ್ಲಂಪಾಡಿಗೆ ಬಂದವು. ಮಾಪ್ಳೆಗೊ ಇದ್ದಿದ್ದ ಜಾಗೆಯೋ ಏನೋ – ಮಾಪ್ಳೆಮಜಲು ಹೇಳ್ತ ಜಾಗೆಲಿ ನೆಲೆ ಆದವು. ಜಾಗೆ ಒಳ್ಳೆದಿತ್ತು; ಫಲವತ್ತಾತು. ಆದರೆ ವಿದ್ಯಾಭ್ಯಾಸ ಮನೆ ಹತ್ತರೆ ಇದ್ದೋ? ಇಲ್ಲೆ! ಅಲ್ಲಿಂದ ಆರೇಳು ಮೈಲು ದೂರದ ಬೆಳ್ಳಾರೆಲಿ ಇದ್ದದು. ನಿತ್ಯವೂ ಮನೆಂದ ಶಾಲೆಗೆ ನೆಡಕ್ಕೊಂದು ಪಯಣ. ಈಗಾಣ ಹಾಂಗೆ ಮಣುಭಾದಿಯ ಬೇಗುಗೊ ಇಲ್ಲದ್ದರೂ ಈಗಾಣ ಹಾಂಗೆ ಶಾಲೆವೇನುದೇ ಇಲ್ಲೆ ಇದಾ! ಅಂತೂ ಪ್ರಾಥಮಿಕ ವಿದ್ಯಾಭ್ಯಾಸ, ಅದರ ಬೆನ್ನಾರೆ ಪ್ರೌಢ ವಿದ್ಯಾಭ್ಯಾಸ, ಆಗಿ – ಹನ್ನೊಂದನೇ
ಕ್ಲಾಸಿನ ವರೆಂಗೆ ಒಳ್ಳೆ ಶ್ರೇಣಿಲಿ ವಿದ್ಯಾಭ್ಯಾಸ ಆತಾಡ.  ಈ ಸಮಯಲ್ಲಿ ಮಾಷ್ಟ್ರುಮಾವಂದೇ ಅದೇ ಶಾಲಗೆ ಹೋವುತ್ತ ಕಾರಣ ಅವಕ್ಕೆ ಪರಸ್ಪರ ಗುರ್ತ ಇದ್ದತ್ತೋ ಏನೋ. ಉಮ್ಮಪ್ಪ, ಒಪ್ಪಣ್ಣಂಗರಡಿಯ.
~
ವಿದ್ಯಾಭ್ಯಾಸ ಒಂದು ಹಂತದ್ದಾದ ಕೂಡ್ಳೇ – ಕಲಿವ ಮನಸ್ಸು ಸರಸ್ವತಿಗೆ ಇದ್ದು; ಆದರೆ ಲಕ್ಷ್ಮಿ ಬಿಡೆಕನ್ನೇ!? ಕೆಲಸ ಮಾಡ್ಳೇ ಬೇಕಾದ ಪರಿಸ್ಥಿತಿ ಬಂತು. ಹಾಂಗಾಗಿ ಪುತ್ತೂರಿನ ಆ ಕಾಲದ ಪ್ರಖ್ಯಾತ ವಕೀಲರ ಸಕಾಯಕ್ಕೆ ಕೆಲಸ ಮಾಡಿದವು. ಅದಾಗಿ ರಜ್ಜ ಸಮೆಯ ಮಡಿಕ್ಕೇರಿಲಿ – ಚುಬ್ಬಣ್ಣನ ಮಡಿಕ್ಕೇರಿಲಿ – ಲೆಕ್ಕಪತ್ರ ಪರಿಶೋಧಕರಾಗಿ ಕೆಲಸ ಮಾಡಿದವು. ಇಷ್ಟಾದರೂ, ತಲೆಲಿದ್ದಿದ್ದ ಸರಸ್ವತಿಯ ಆರಾಧನೆ ಮಾಡೇಕು – ಹೇಳ್ತ ತುಮುಲ ಅವಕ್ಕೆ ಅಂಟಿಗೊಂಡಿತ್ತೋ ಏನೋ.
ಹಾಂಗೆ, ಈ ಕೆಲಸಂಗೊಕ್ಕೆ ನಮಸ್ಕಾರ ಮಾಡಿ ವಿದ್ಯಾಕ್ಷೇತ್ರಕ್ಕೆ ಸೇರಿಗೊಂಡವು.
ಮೊದಲಾಗಿ ಕಾಂಚನ ಶಾಲೆಲಿ ಮಾಷ್ಟ್ರಾಗಿ – ವೃತ್ತಿಜೀವನ ಆರಂಭ ಆತು. ಆದರೆ ಪೂರ್ಣಕಾಲೀನ ಅಧ್ಯಾಪನ ಮಾಡೇಕಾರೆ ಮುಂದಾಣ ವಿದ್ಯಾಭ್ಯಾಸದ ಅಗತ್ಯವ ಕಂಡುಗೊಂಡವು ಹೇದು ಕಾಣ್ತು,  ೧೯೭೦ರ ಒರಿಶಲ್ಲಿ ಕೊಡೆಯಾಲಲ್ಲಿ ಇದ್ದಿದ್ದ ಮಾಷ್ಟ್ರಕ್ಕಳ ಶಾಲೆಲಿ ಅಧ್ಯಾಪನ ತರಬೇತಿ (ಟಿಸಿ ಎಚ್) ಕಲ್ತವು.
ಕಲ್ತಾದ ಮರುವರ್ಷವೇ – ಹೇದರೆ ೧೯೭೧ ರಲ್ಲಿ ಮಾಷ್ಟ್ರಾಗಿ ಸೇರಿ ವೃತ್ತಿಜೀವನ ಆರಂಭ ಮಾಡಿದವು.  ವೃತ್ತಿಜೀವನ ಆರಂಭ ಆದರೂ ಕಲಿವ ಛಲ ನಿಂದಿದಿಲ್ಲೆ. ಟೈಪಿಂಗ್ ಕಲೆ, ಹಿಂದಿ ರಾಷ್ಟ್ರಭಾಷಾ ಪ್ರವೀಣ, ಚಿತ್ರಕಲಾ ದ್ವಿತೀಯ, ಕನ್ನಡ ಎಂ.ಎ – ಹೀಂಗೆ ಹಲವೂ ಸಾಧನೆಗಳ ಅವರ ಯಶಸ್ಸಿನ ಕಿಸೆಗೆ ಸೇರ್ಸಿಗೊಂಡೇ ಹೋದವು.
ಬಾಳಿಲ ವಿದ್ಯಾಬೋಧಿನೀ ಶಾಲೆಲಿ ಮಾಷ್ಟ್ರ° ಆಗಿ ಸೇರಿದ ಕಾರಣ, ಮುಂದೆ ೧೯೯೮ರ ವರೆಂಗೆ ಅಲ್ಲಿ ವೃತ್ತಿಜೀವನ ಮಾಡಿದ ಕಾರಣ “ಬಾಳಿಲ ಪರಮೇಶ್ವರ ಭಟ್”  ಆಗಿ ಆ ಊರ ಹೆಸರು ಶಾಶ್ವತವಾಗಿ ಅಂಟಿಗೊಂಡತ್ತು. ಊರ ಹೆಸರು ಅವಕ್ಕೆ ಅಂಟಿರೂ, ಅವು ಆ ಊರಿಂಗೆ ಸುಮಾರು ಸಾಹಿತ್ಯಿಕ ಕೊಡುಗೆಗಳ ಅಂಟುಸಿಕ್ಕಿ ಹೋಯಿದವು.
ಸಾವಿರಾರು ಮಕ್ಕೊಗೆ ವಿದ್ಯಾಭ್ಯಾಸ ಕೊಡುದರ ಒಟ್ಟಿಂಗೆ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಂಗಳಲ್ಲಿ ಆಡ್ಳೆ ಬೇಕಾದ ನಾಟಕಂಗಳೂ ಸೇರಿ ಸುಮಾರು ಮೂವತ್ತೈದು ನಾಟಕಂಗಳ – ಬರದು, ಆಡುಸಿ ಯಶಸ್ವೀ ರಚನಾಕಾರ, ನಿರ್ದೇಶಕ, ರಂಗಕರ್ಮಿ ಆಗಿ ಹೊರಹೊಮ್ಮಿದವು.
ಇದರೊಟ್ಟಿಂಗೆ ಹವ್ಯಕಲ್ಲಿ ಹಲವೂ ಕೃತಿಗೊ ಬರದು ಬೆಳಗಿದ್ದವು. ಅದರ್ಲಿ ಕೆಲವು – ೧೯೯೫ರಲ್ಲಿ ಬಿಡುಗಡೆ ಆದ – ಹೊಳಪಿನ ಹಾದಿ, ಕಿಟ್ಟಣ್ಣನ ಪ್ರೀತಿ ಹೇಳ್ತ ಪುಸ್ತಕಂಗೊ.
ಅದಕ್ಕೆ ಮೊದಲು ಮಕ್ಕಳ ಸಾಹಿತ್ಯ ಬಣ್ಣದ ಬೆಳಕು – ೧೯೯೪ ಬಿಡುಗಡೆ ಆಯಿದಾಡ.
~
ಇದಿಷ್ಟೇ ಅಲ್ಲದ್ದೆ, ಬಾಳಿಲ ಮಾವನ ಸಾಧನೆಯ ವಿಶೇಷ ಮೆಟ್ಳು ಹೇದರೆ – ಮಹಾಭಾರತವ ಹವ್ಯಕ ಭಾಷೆಲಿ ಬರದು ಲೋಕಕ್ಕೆ ಕೊಟ್ಟದು. ವ್ಯಾಸ ಭಾರತದ ಸಾರವ ಈಗಾಣ ಜೆನಂಗೊಕ್ಕೆ ಅರಡಿತ್ತ ಹಾಂಗೆ ಮಾಡಿ, ಸರಳ ಹವ್ಯಕ ಭಾಷೆಲಿ ಸರಳ ನುಡಿಗಳಲ್ಲಿ ನುಡಿಗಟ್ಟುಗಳ ಸೇರ್ಸಿ ಮಾಡಿದ ರಸಪಾಕಲ್ಲಿ ತುಂಬುಸಿ – “ಧರ್ಮ ವಿಜಯ” – ಹೇದು ಹೆಸರು ಮಡಗಿ ಬರದಿತ್ತವು.
೨೦೦೦ ಇಸವಿಯ ಆಸುಪಾಸಿಲೇ ಈ ಕೆಲಸ ಆರಂಭ ಆದರೂ – ಸುಮಾರು ೨೦೦೩ ರ ಹೊತ್ತಿಂಗೆ ಅರ್ತಿಕಜೆ ಅಜ್ಜ°, ಭರಣ್ಯಮಾವ, ಪ್ರಭಾಕರ ಜೋಶಿ, ಶೇಣಿಅಜ್ಜ° – ಇತ್ಯಾದಿ ಹೆರಿತಲೆಗಳ ಹತ್ತರಂಗೆ ಹಸ್ತಪ್ರತಿ ಬಂದು, ಅವರೆಲ್ಲರಿಂದ ವಿಶೇಷ ಮೆಚ್ಚುಗೆ ಸಿಕ್ಕಿದ ಮತ್ತೆ ಮುದ್ರಣದ ದಾರಿ ಹಿಡುದತ್ತು. ೨೦೦೪ ಕ್ಕೆ ಪುತ್ತೂರಿನ ಕನ್ನಡಸಂಘದ ಆಶ್ರಯಲ್ಲಿ ನೆಡದ ಗೌಜಿ ಕಾರ್ಯಕ್ರಮಲ್ಲಿ ಧರ್ಮವಿಜಯ ಗ್ರಂಥ ಲೋಕಾರ್ಪಣೆ ಆತು. ಪ್ರಭಾಕರ ಜೋಶಿಯವರ ಮುನ್ನುಡಿ, ಶೇಣಿಅಜ್ಜನ ಮೆಚ್ಚುಗೆಯನ್ನೂ ಹೊತ್ತ ಆ ಪುಸ್ತಕ ಅಂದಿಂಗೂ, ಇಂದಿಂಗೂ ಮುಂದೆಂದಿಂಗೂ – ಹವ್ಯಕ ಭಾಷೆಲಿ ಮೇರುಕೃತಿ ಆಗಿ ಇಪ್ಪದರ್ಲಿ ಸಂಶಯ ಇಲ್ಲೆ –ಹೇಳ್ಸು ಅರ್ತಿಕಜೆ ಅಜ್ಜನ ಅಭಿಪ್ರಾಯ.
ಈ ಹಿರಿಯ ಚೇತನ ಮೊನ್ನೆ ನಮ್ಮ ಬಿಟ್ಟು ಹೋದವು. ಅವು ನಮ್ಮೆದುರು ಇಲ್ಲದ್ದರೂ – ಅವು ಕೊಟ್ಟುಹೋದ ಅಮೋಘ ಸಾಹಿತ್ಯಂಗೊ, ಹಾಕಿಕೊಟ್ಟ ಸಾಹಿತ್ಯರಸದೌತಣ ನಮ್ಮೊಟ್ಟಿಂಗೆ ಸದಾ ಇರ್ತು.
ಅಂಥವರ ಅಂಬಗಂಬಗ ನೆಂಪು ಮಾಡಿಗೊಂಡ್ರೆ ನಮ್ಮ ಬೈಲಿಂಗೆ ಹವ್ಯಕ ಸರಸ್ವತಿಯ ಅನುಗ್ರಹ ಸದಾ ಇಕ್ಕು.
ಅವರ ನೆಂಪು ಮಾಡೇಕಾದ್ಸು ಬೈಲಿನ ಕರ್ತವ್ಯ ಹೇಳ್ತರ ಬೈಲು ಮನಗಂಡಿದು. ಹಾಂಗಾಗಿಯೇ, ಹವ್ಯಕ ಸಾಹಿತ್ಯಲ್ಲಿ ವಿಶೇಷ ಸಾಧನೆ ಮಾಡಿದೋರಿಂಗೆ ಗುರ್ತಿಸಿ, ಬೈಲಿನ ವೇದಿಕೆಲಿ ಗೌರವ ಸಲ್ಲುಸುದು .

ಬಾಳಿಲ ಮಾವನ ನೆಂಪಿಲಿ. ಅವರ ಹೆಸರಿನ ಪ್ರಶಸ್ತಿ ಆರಂಭಕ್ಕೆ ಸಂತೋಷಲ್ಲಿ ಒಪ್ಪಿದ ಅವರ ಮನೆಯೋರಿಂಗೆ ಈ ಸಂದರ್ಭಲ್ಲಿ ಕೃತಜ್ಞತೆಗೊ.
~

ವಿ.ಬಿ.ಹೊಸಮನೆ:
ಈ ಒರಿಶದ ಗೌರವ ಸಮರ್ಪಣೆ ಆರಿಂಗೆ – ಹೇದು ಹೆಚ್ಚು ಹುಡ್ಕೇಕಾಯಿದಿಲ್ಲೆ.
ಭರಣ್ಯಮಾವನಾಂಗಿರ್ತ ಹೆರಿಯೋರು ತಕ್ಷಣ ಹೇಳಿದವು – ಹೊಸಮನೆ ಅಜ್ಜಂಗೆ ಅಕ್ಕು – ಹೇದು!
ಕೈರಂಗಳ – ಹೊಸಮನೆ ಈಶ್ವರ ಭಟ್- ಗಂಗಮ್ಮ ದಂಪತಿಗೆ ಮಗನಾಗಿ ಹುಟ್ಟಿದ ಇವು ಬಾಲ್ಯಂದಲೇ ತುಂಬಾ ಓದುವಿಕೆಯ ಹವ್ಯಾಸಿ. ವಿ.ಬಿ.ಹೊಸಮನೆ ಹೇಳ್ತ ಸಂಕ್ಷಿಪ್ತ ಹೆಸರಿಲಿ ಸಾಹಿತ್ಯ ಕ್ಷೇತ್ರಲ್ಲಿ ಹೆಸರುಮಾಡಿದವು. ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಸ್ನಾತಕೋತ್ತರ ಎಂ.ವಿ ಪದವಿ ಪಡವದರ ಒಟ್ಟಿಂಗೆ ಹಿಂದೀ ರಾಷ್ಟ್ರಭಾಷಾ ಪ್ರವೀಣ ಇತ್ಯಾದಿ ಹಲವು ವಿದ್ಯಾಸಾಧನೆ ಮಾಡಿದವು.
೧೯೫೧ ರಲ್ಲಿ ನವಭಾರತ ಪತ್ರಿಕೆಯ ಉಪಸಂಪಾದಕರಾಗಿ ಸೇರಿ, ಬಹುಷಃ ಆಧುನಿಕ ಪತ್ರಿಕಾ ರಂಗಕ್ಕೆ ಇಳುದ ಹವ್ಯಕರ ಮೊದಲ ತಲೆಮಾರಿನ ಸಾಲಿಲಿ ನಿಂದವು. ೧೯೭೧ರಿಂದ “ಕಲಾದರ್ಶನ” ಹೇಳ್ತ ಮಾಸಪತ್ರಿಕೆಯ ಸಂಪಾದಿಸಿ, ನಲುವತ್ತು ಒರಿಶಂದಲೂ ಹೆಚ್ಚುಕಾಲ ಮುನ್ನಡೆಸಿದ ಕೀರ್ತಿ ಪಡಕ್ಕೊಂಡವು! ಕಲೆ, ಸಾಹಿತ್ಯ, ಸಂಗೀತ ಅಭಿಮಾನಿಗೊಕ್ಕೆ ಒಳ್ಳೆ ಹೂರಣದ ಓದುಗಳಿಂದ, ಬರಹಂಗಳಿಂದ ತುಂಬುಸಿದ ಸತ್ವಯುತ ಪತ್ರಿಕೆಯಾಗಿ ಇವರ ಕೈಂದ ನೆಡಕ್ಕೊಂಡು ಬಂದುಗೊಂಡಿತ್ತು ಹೇಳ್ತದು ಇಂದಿಂಗೂ ನಮ್ಮ ಹೆರಿಯೋರು ನೆಂಪುಮಾಡಿಗೊಳ್ತವು.
ಈಗಳೂ ಅವರ ಗೌರವ ಸಂಪಾದಕತ್ವಲ್ಲಿ ಆ ಪತ್ರಿಕೆ ಕಲಾರಸಿಕರ ಕೈಸೇರ್ತಾ ಇದ್ದು.
ಕೈರಂಗಳದ ಹೊಸಮನೆಂದ ಕೊಡೆಯಾಲದ ಮಲ್ಲಿಕಟ್ಟೆಗೆ– ಬೂತಸ್ಥಾನದ ಎದುರಾಣ ಓಣಿಯ ಒಳಾಣ ಹೊಡೆಯಾಗಿ –  ಧರ್ಮಪತ್ನಿಯೊಟ್ಟಿಂಗೆ ಸಂತೋಷದ ಮನೆಲಿ ನಾಲ್ಕು ಮಕ್ಕಳೊಟ್ಟಿಂಗೆ ಸಾಂಸಾರಿಕ ಜೀವನ ಮಾಡಿದವು.
ಅಮೋಘ ವಿದ್ವತ್ತು ಅವಕ್ಕೆ ಇದ್ದರೂ ತೋರ್ಪಡಿಕೆ ಇಲ್ಲದ್ದ ಸರಳ ವ್ಯಕ್ತಿತ್ವ. ಆರಿಂಗೂ ಬೇನೆ ಮಾಡದ್ದ ಸಾಧುಪ್ರವೃತ್ತಿ.
“ಭಾರದ್ವಾಜ ಪ್ರಕಾಶನ” ಹೇಳ್ತದು ಅವರ ಅಮೋಘ ಸಾಧನೆಯ ಅಂಶ. ಆ ಕಾಲಲ್ಲೇ ಈ ಪ್ರಕಾಶನದ ಮೂಲಕ ಕೆಲವು ಅತ್ಯಪೂರ್ವ ವಿಷಯಂಗಳ ಹೆರ್ಕಿ, ಪುಸ್ತಕರೂಪಲ್ಲಿ ಪ್ರಕಟುಸಿ ಸಾಹಿತ್ಯಕ್ಷೇತ್ರಲ್ಲಿ ಅಜರಾಮರವಾಗುಸಿದ್ದವು.
ಎಲ್ಲಿಯೋ ಮರದು ಹೋಗಿ ಬಿಡುವಂತಹ ಅಜ್ಜಿಯಕ್ಕಳ ಕಾಲದ ಶೋಭಾನೆಗೊ, ಕಥೆಗೊ, ಹೀಂಗಿರ್ತ ಮುತ್ತುಗಳ, ಒಪ್ಪಂಗಳ ಹೆರ್ಕಿ ಅಕ್ಷರರೂಪಲ್ಲಿ ದಾಖಲೆ ಮಾಡುಸಿ, ಪ್ರೋತ್ಸಾಹಿಸಿ, ಅದರ ಪುಸ್ತಕ ರೂಪಕ್ಕೆ ಇಳುಸಿ, ಪ್ರಕಾಶನ ಮಾಡುವ ಧೈರ್ಯ ತೋರ್ಸಿತ್ತಿದ್ದವು.
ಅವರ ಅಂಬಗಾಣ ಧೈರ್ಯವೇ ಬೈಲಿನ ಪ್ರಕಾಶನಕ್ಕೆ ಪ್ರೋತ್ಸಾಹ – ಹೇಳಿರೆ ಖಂಡಿತಾ ತಪ್ಪಲ್ಲ. ಅವು ತೋರ್ಸಿಕೊಟ್ಟ ದಾರಿಲಿ ನೆಡವ ಪ್ರಯತ್ನವ ಬೈಲು ಸದಾ ಮಾಡ್ತು.
ನಿವೃತ್ತಿಯ ಈ ಜೀವನಲ್ಲಿ ಅವಕ್ಕೆ ಗುರು-ದೇವರ ಆಶೀರ್ವಾದ ಸದಾ ಒಲುದು ಬರಲಿ. ಮುಂದಾಣ ನಿವೃತ್ತ ಜೀವನಲ್ಲಿಯೂ ಅವರಿಂದ ಸಾಹಿತ್ಯ, ಸಾಹಿತ್ಯ ಪ್ರೇರಣೆ, ಪ್ರಚೋದನೆಗೊ ನೆಡದು ಬರಳಿ – ಹೇಳ್ತದು ಬೈಲಿನ ಆಶಯ.
~
ಹವ್ಯಕ ಸಾಹಿತ್ಯಲ್ಲಿ ಮಹಾನ್ ಗ್ರಂಥ ಬರದ – ಬಾನಲ್ಲಿ ಬೆಳ್ಳಿನಕ್ಷತ್ರದ ಹಾಂಗೆ ಅನವರತ ಬೆಳಗುವ – ಹವ್ಯಕ ಸಾಹಿತ್ಯಕ್ಕೊಂದು ಮಹಾನ್ ಗ್ರಂಥದ ಬಾಳು ಕೊಟ್ಟ ಬಾಳಿಲ ಮಾವನ ನೆಂಪುಮಾಡುವೊ°. ಹಾಂಗೇ, ಅವರ ಸ್ಮರಣಾರ್ಥ ಕೊಡುವ ಪ್ರಶಸ್ತಿಗೆ ಭಾಜನರಾದ ಶ್ರೀಮಾನ್ ವೀ.ಬೀ ಹೊಸಮನೆ – ನಮ್ಮ ಪ್ರೀತಿಗೌರವದ ಹೊಸಮನೆ ಅಜ್ಜಂಗೆ ಅಭಿನಂದನೆಗೊ.
ಬಾಳಿಲ ಕುಟುಂಬಕ್ಕೂ, ಹೊಸಮನೆ ಕುಟುಂಬಕ್ಕೂ ದೇವರು ಪೂರ್ಣಾಯುರಾರೋಗ್ಯ ಕರುಣಿಸಲಿ.
ಇನ್ನು ಮುಂದೆಯೂ ಸಾಹಿತ್ಯ ಕಾರ್ಯ ಮಾಡ್ಳೆ ಬೈಲಿಂಗೆ ಪ್ರೇರೇಪಣೆ ಅವರಿಂದ ಬರಳಿ – ಹೇಳುದು ನಮ್ಮ ಬೈಲಿನ ಎಲ್ಲಾ ಹಿರಿಯರ ಹಾರೈಕೆ.
~
ಅಪೂರ್ವ ಕ್ಷಣ ನೋಡ್ಳೆ ನಿಂಗಳೂ ಬತ್ತಿರಲ್ಲದೋ ನಾಳ್ದು?
~
ಒಂದೊಪ್ಪ: ವಸಿಷ್ಠರ ಧರ್ಮವಿಜಯ ಭಾರಧ್ವಾಜರ ಹೊಸಮನೆಲಿ ಆಗಲಿ!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಚೆನ್ನೈ ಬಾವ°

  ಹರೇ ರಾಮ. ಸಾಹಿತ್ಯ ಕ್ಷೇತ್ರದ ಎರಡು ಒಪ್ಪ ಚುಕ್ಕಿಗಳ ಪರಿಚಯಿಸಿದ್ದು ಒಪ್ಪ ಆಯಿದು.

  [Reply]

  VN:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಶುದ್ದಿ ಓದಿ ಮನಸ್ಸು ತುಂಬಿತ್ತು ಒಪ್ಪಣ್ಣ.
  ಹವ್ಯಕ ಭಾಷೆಲಿ ನಿರ೦ತರ ದುಡಿಮೆ ಮಾಡಿದ ಈ ಹಿರಿಯರು ಬೈಲಿ೦ಗೆ ಸದಾ ದಾರಿ ದೀಪವಾಗಲಿ .
  ನಾಡ್ತು ನೀರ್ಚಾಲಿಲಿ ಕಾಂಬೊ° .

  [Reply]

  VA:F [1.9.22_1171]
  Rating: 0 (from 0 votes)
 3. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ವೀ ಬೀ ಹೊಸಮನೆ ಮತ್ತು ಬಾಳಿಲ ಅಣ್ಣ ಇಬ್ರು ಹಿರಿಯರು ನಮ್ಮ ಭಾಷೆ ಯಾ ಬಗ್ಗೆ ತುಂಬಾ ಕೆಲಸ ಮಾಡಿದ್ದವು .ಎನಗೆ ತುಂಬಾ ಆತ್ಮೀಯ ಹಿರಿಯರು .ಲೇಖನ ಒಳ್ಳೆದಾಯಿದು .ಒಪ್ಪಣ್ಣ ..

  [Reply]

  VN:F [1.9.22_1171]
  Rating: 0 (from 0 votes)
 4. ವಿಜಯತ್ತೆ

  ಬಾಳಿಲ ಮಾವನ ಧರ್ಮವಿಜಯ ಪುಸ್ತಕ ಎನ ಕೊಟ್ಟಿದೊವು. ವಿ.ಬಿ. ಹೊಸಮನೆಯವರ ಪ್ರಕಾಶನಲ್ಲಿ ಎನ್ನ ಎರಡು ಪುಸ್ತಕ ಪ್ರಕಾಶನಗೊಂಡಿದು ಹೇಳ್ಲೆ ಈ ಸಂದರ್ಭಲ್ಲಿ ಸಂತೋಷ ಪಡ್ತೆ.

  [Reply]

  VN:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  S.K.Gopalakrishna Bhat

  ಸಂತೋಷ

  [Reply]

  VA:F [1.9.22_1171]
  Rating: 0 (from 0 votes)
 6. ಸರ್ಪಮಲೆ ಮಾವ°
  ಸರ್ಪಮಲೆ ಮಾವ

  “ಈಗಳೂ ಅವರ ಗೌರವ ಸಂಪಾದಕತ್ವಲ್ಲಿ ಆ ಪತ್ರಿಕೆ ಕಲಾರಸಿಕರ ಕೈಸೇರ್ತಾ ಇದ್ದು.” !!?

  [Reply]

  VA:F [1.9.22_1171]
  Rating: 0 (from 0 votes)
 7. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಜೈ ಶ್ರೀರಾಮ!; ಬಹಳ ಒಳ್ಳೆ ಕೆಲಸ ಮಾಡ್ತಾ ಇದ್ದಿ. ಎರಡು ಜೆನವುದೆ ನಮ್ಮ ಸಮಾಜದ ಎರಡು ರತ್ನ೦ಗೊ.ಈ ಮಹಾನುಭಾವರ ನಮ್ಮ ಸಮಾಜಕ್ಕೆ ಕೀರ್ತಿ ತ೦ದವು.ಅವು ನಮಗೆ ಸದಾ ಆದರ್ಶಪ್ರಾಯರು.ಅವರ ಪರಿಚಯವ ಚೆ೦ದಕೆ ನಿರೂಪಣೆ ಮಾಡಿದ ಒಪ್ಪಣ್ಣ೦ಗೆ ತು೦ಬು ಹೃದಯದ ಧನ್ಯವಾದದೊಟ್ಟಿ೦ಗೆ ಅಭಿನ೦ದನಗೊ.ಹರೇ ರಾಮ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಚೆನ್ನೈ ಬಾವ°ಶುದ್ದಿಕ್ಕಾರ°ಮಾಷ್ಟ್ರುಮಾವ°ಕಳಾಯಿ ಗೀತತ್ತೆಅಕ್ಷರದಣ್ಣಜಯಗೌರಿ ಅಕ್ಕ°ಚುಬ್ಬಣ್ಣಪುತ್ತೂರುಬಾವಶಾ...ರೀದೊಡ್ಡಮಾವ°ಮಂಗ್ಳೂರ ಮಾಣಿದೀಪಿಕಾಕೇಜಿಮಾವ°ಒಪ್ಪಕ್ಕರಾಜಣ್ಣವಿಜಯತ್ತೆಪ್ರಕಾಶಪ್ಪಚ್ಚಿವೇಣಿಯಕ್ಕ°ವೇಣೂರಣ್ಣಕೆದೂರು ಡಾಕ್ಟ್ರುಬಾವ°ವಿದ್ವಾನಣ್ಣಡಾಗುಟ್ರಕ್ಕ°ಗಣೇಶ ಮಾವ°ಸುವರ್ಣಿನೀ ಕೊಣಲೆಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ