ಬಲ್ಲೆಯೂ ಬೆಳೆಯದ್ದ ಹಾಂಗೆ ಬೋಳುಸಿದವಡ ಬಳ್ಳಾರಿಯ..!

August 13, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 83 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಪ್ಪಣ್ಣ ಎಲ್ಲ ಶುದ್ದಿಯನ್ನುದೆ ಮಾತಾಡಿದ°, ರಾಜಕೀಯ ಒಂದರ ಬಿಟ್ಟು.
ಹಾಂಗೆ ನೋಡಿರೆ ಒಪ್ಪಣ್ಣಂಗೆ ರಜ ಕಮ್ಮಿ ಆಸಗ್ತಿ ಇಪ್ಪ ವಿಶಯ ಹೇಳಿತ್ತುಕಂಡ್ರೆ ಅದು ರಾಜಕೀಯವೇ.
ಪರೀಕ್ಷೆಗೆ ಹೋವುತ್ತ ಕಾಲಲ್ಲಿ ಯೇವದು ಪರೀಕ್ಷೆಲಿ ಬಕ್ಕು – ಅದರ ಮಾಂತ್ರ ಎರಡೆರಡು ಸರ್ತಿ ಕಲ್ತುಗೊಂಬದು.
ಬಾರತದ ಪ್ರಧಾನಮಂತ್ರಿ ಆರು? ಮುಖ್ಯ ಚುನಾವಣಾಧಿಕಾರಿ ಆರು? ಮುಖ್ಯಮಂತ್ರಿ ಆರು – ಹೀಂಗಿರ್ತದು.
ಮತ್ತೆ ವಾಣಿಟೀಚರೋ – ರೇವತಿಟೀಚರೋ ಮಣ್ಣ ಇದ್ದವನ್ನೆ, ಸಂಶಯಬಂದರೆ ಹೇಳಿಕೊಡ್ಳೆ.
ಪರೀಕ್ಷೆಲಿ ಅಲ್ಲ, ಬಾಕಿದ್ದ ದಿನ!
~

ಈಗಾ ಹೇಳಿ ಅಲ್ಲ, ಮದಲಿಂಗೇ ಹಾಂಗೆ – ಸಮಾಜ ಹೇಳಿತ್ತುಕಂಡ್ರೆ ರಜಾ ಮಧ್ಯಮವೇ.
ಅದರ್ಲಿಪ್ಪ ಪಾಣಿಪತ್ ಕದನ, ಕಾನ್‌ಸ್ಟಾಂಟಿನೋಪಲ್, ರಕ್ಕಸತಂಗಡಿ, ಪೌರನೀತಿ, ರಾಜಕೀಯ – ಎಲ್ಲ ಓದಿಗೊಂಡು ಹೋಪ ಹಾಂಗೇ  ಆ… ಆವಳಿಗೆ ಎತ್ತಿಎತ್ತಿ ಬಕ್ಕು. ಈಗಳೂ ಒಂದು ಬಂತಿದಾ, ಶುದ್ದಿ ಹೇಳುವಗ.
ನಿಂಗೊಗೂ ಬಂತೋ? 😉

ವಿಜ್ಞಾನಕ್ಕೆ ಆದರೆ ಇಷ್ಟು ಕಷ್ಟ ಇತ್ತಿಲ್ಲೆ – ಸುಮಿತ್ರಟೀಚರು ಇದ್ದದು. ಅದು ಒಂದೇ ಗೆರೆಯ ಹದಿನಾರು ಸರ್ತಿ ಹೇಳುಗು – ಟೀವಿಯ ವಾರ್ತೆಯ ಹಾಂಗೆ. ಹಾಂಗಾಗಿ ಬೇಗ ತಲಗೆ ಹೋವುತ್ತು. ಮತ್ತೊಂದು ಕಷ್ಟ ಇದ್ದು – ಹದಿನಾರು ಆದರೆ ಸಮ; ಅದರಿಂದ ಜಾಸ್ತಿ ಆದರೆ ಪುನಾ ಆವಳಿಗೆ ಬತ್ತು.! ಒಟ್ಟಾರೆ ಈ ಉದಾಸಿನದ ಮುದ್ದೆಯ ಓದುಸುದು ಮನೆಲಿ ಭಾರೀ ಕಷ್ಟದ ಕೆಲಸ ಆಗಿತ್ತು.

ಯೇವದೇ ವಿಶಯ ಆದರೂ, ತಲಗೆ ಹಿಡುದು ಅರೇಕು, ಒಪ್ಪಣ್ಣಂಗೆ ಅರ್ತ ಆಯೇಕಾರೆ. ಪಕ್ಕನೆ ನೋಡಿದಕೂಡ್ಳೇ ಅರ್ತ ಆಗ.
ಅದುದೇ ಪೇಟೆ ನಮುನೆ ವಿಶಯಂಗೊ ಆದರೆ ಅರಡಿಯಲೇ ಅರಡಿಯ.
ನವಗೆ, ನಮ್ಮ ಬೈಲಿಲಿ ಎಲ್ಲೊರಿಂಗೂ ಹಾಂಗೇ, ಸಾಮಾನ್ಯವಾಗಿ. ಪೇಟೆಮಕ್ಕಳ ಹಾಂಗೆ ಒಂದೇ ಸರ್ತಿ ನೋಡಿದ್ದರಲ್ಲಿ ಕಲ್ತುಗೊಂಬಷ್ಟು ಬುದ್ಧಿವಂತಿಗೆ ರಜ ಕಮ್ಮಿಯೇ ಇದಾ!

ಈಗ ಅದೆಲ್ಲ ಹಳೆನೆಂಪು. ಶುದ್ದಿ ಹೇಳ್ತ ವಿಚಾರಲ್ಲಿ ಮಾಷ್ಟ್ರುಮಾವನ ಹತ್ರೆ ಹೋಗಿ ಕೂದು ಕೇಳಿರಾತು, ಶಂಬಜ್ಜ ಕತೆ ಹೇಳಿದ ಹಾಂಗೆ ಮಾಷ್ಟ್ರುಮಾವ° ಇತಿಹಾಸ ಹೇಳಿಕೊಡ್ತವು.
ಅಂದು ಆಸಗ್ತಿ ಇಲ್ಲದ್ದುದೇ ಇಂದಿದ್ದು.. ಇತಿಹಾಸದ ಸೂಕ್ಷ್ಮಂಗೊ ಎಲ್ಲ ತಲಗೆ ಹೋವುತ್ತು.

~
ಪೆರ್ಲದಣ್ಣ ಊರಿಂಗೆ ಬಯಿಂದ°.
ಅಜ್ಜಕಾನಬಾವಂಗೆ ಸಂಶಯ – ಆಟಿಸಮ್ಮಾನಕ್ಕೋ ಏನೋ ಹೇಳಿಗೊಂಡು! ಉಮ್ಮಪ್ಪ!
ಮೊನ್ನೆ ಬೈಲಿಂಗೆ ಬಂದಿತ್ತಿದ್ದವ° ಹೊತ್ತೋಪಗ ಕಟ್ಟೆಪುರಾಣಮಾತಾಡಿಗೊಂಡು ಪಾರೆಮಗುಮಾವನ ಮನಗೆ ಹೋದೆಯೊ°, ಎಂಗೊ ಮೂರು ಜೆನ.
ಅವಂಗೆ ಬೆಂಗುಳೂರಿಲಿ ಕೂದುಕೂದು ಬೊಡುದು ರಜ ನೆಂಟ್ರುಗಳ ಮನೆ ನೋಡೆಕ್ಕು ಹೇಳಿ ಆದ್ದದು, ಪಾಪ!
ಮದುವೆಪ್ರಾಯಲ್ಲಿ ಮಾಣಿಯಂಗೊಕ್ಕೆ ನೆಂಟ್ರಮನೆ ಜೋರು ನೆಂಪಪ್ಪದಡ, ದೊಡ್ಡಬಾವ° ಹೇಳುಗು – ಮೊಗಪ್ಪೆಲಿ ಹಪ್ಪಳ ತಿಂದೊಂಡು!!

ನೆಡವಲೆ ಒಂದು ಮೈಲು ಇದ್ದಿದಾ, ದಾರಿಬಚ್ಚಲು ಗೊಂತಾಗದ್ದ ಹಾಂಗೆ ಊರ ಪಂಚಾತಿಗೆ ಮಾಡಿಗೊಂಡು ನೆಡದೆಯೊ°.
ಬೆಂಗುಳೂರಿಲಿ ಕರೆಂಟು ಕಂಡಾಬಟ್ಟೆ ತೆಗೆತ್ತವಡ, ಈಗ ಎಲ್ಲೊರು ಕೇಂಡ್ಳು ಕೈಲಿಹಿಡ್ಕೊಂಡೇ ತಿರುಗುದಡ, ದೊಡ್ಡದಾಗಿ ಮೆಟ್ರೋ ರೈಲು ಮಾಡ್ತ ಲೆಕ್ಕಲ್ಲಿ ಮಾರ್ಗಂಗೊ ಎಲ್ಲ ಸಣ್ಣ ಆಯಿದಡ, ಪೆಟ್ರೋಲಿಂಗೆ ಏರಿದ್ದಡ – ಕಂಪ್ಯೂಟರಿಂಗೆ ಇಳುದ್ದಡ, ಬೇಂಕಿನ ಪ್ರಸಾದಣ್ಣಂಗೆ ಹೊಟ್ಟೆಬಯಿಂದಡ – ಕುಂಞಿಬಾವಂಗೆ ಹೊಟ್ಟೆ ಇಳುದ್ದಡ – ಹೀಂಗೆಂತೆಲ್ಲ ಹೊತ್ತೋಪಲೆ!
ನೆಡಕ್ಕೊಂಡು ನೆಡಕ್ಕೊಂಡು ಪಾರೆಮಗುಮಾವನ ಮನಗೆ ಎತ್ತಿದೆಯೊ°.
~

ಏನು-ಒಳ್ಳೆದು ಮಾತುಕತೆ ಆತು, ಸುಕದುಕ್ಕ ಎಲ್ಲ ಕೇಳಿಗೊಂಡವು.
ಪೆರ್ಲದಣ್ಣನ ಸೋದರತ್ತೆಯ ಪೈಕಿ ಆರನ್ನೋ ಮಗುಮಾವಂಗೆ ಕೊಟ್ಟದಡ – ನೆಂಟಸ್ತನಲ್ಲಿ ಸುಮಾರುಜೆನ ಅವು ಹೇಂಗಿದ್ದವು, ಇವು ಹೇಂಗಿದ್ದವು ಕೇಳಿಗೊಂಡವು.
ಆಸರಿಂಗೆ ಬಂತು, ಅಜ್ಜಕಾನಬಾವಂಗೆ ಕಾಪಿ ಆಗ – ಚಾಯ.
ಒಪ್ಪಣ್ಣಂಗುದೇ ಸಿಕ್ಕಿತ್ತು ಒಂದು ಗ್ಳಾಸು ಕಾಪಿ, ಜರ್ಸಿದನದ ಹಾಲಿಂಗೆ ಡಿಕೋಕ್ಷನು ಹಾಕಿ ಗೋಬರುಗೇಸಿನ ಒಲೆಲಿ ಮಗುಅತ್ತೆ ಮಾಡಿದ್ದು!
~
ಪಾರೆಮಗುಮಾವಂಗೆ ಬೇಂಕು ರಿಠೇರ್ಡು(Retirement) ಆದ ಮತ್ತೆ ಮನೆಯಷ್ಟಕೇ.
ಬೇಂಕಿಲಿಪ್ಪಗ ಪುರುಸೊತ್ತೇ ಇಲ್ಲೆ, ಬೊಳುಂಬುಮಾವನ ಹಾಂಗೆ ಕಾಂಬಲೇ ಅಪುರೂಪ!! 😉
ಈಗ ಹಾಂಗಲ್ಲ, ಪುರುಸೊತ್ತೇ ಪುರುಸೊತ್ತು – ಮೂರೊತ್ತು ಕಾಲುನೀಡಿ ಕೂಪದು.
ಒಂದು ಟೀವಿ ಇದ್ದು. ಕೆಂಪುಕೆಂಪು ಕಾಣ್ತ ನಮುನೆ ದೊಡ್ಡ ಟೀವಿ. ಟೀವಿಯಷ್ಟೇ ದೊಡ್ಡ ಕೊಡೆ, ಮಾಡಮೇಗೆ ಬೆಶಿಲಿಂಗೆ ಆಕಾಶನೋಡಿಗೊಂಡು. ತಿಂಗಳಿಂಗೆ ಎರಡುಕಿಲಅಡಕ್ಕೆ ಸೊರುಗಿದರೆ ಅದರ್ಲಿ ಐನ್ನೂರು ಚಾನೆಲು ಕಾಣ್ತಡ
– ಯೇವತ್ತು ನೋಡ್ಳೆ ಬೇಕೆ, ಆರಿಂಗೆ ಪುರುಸೊತ್ತಿದ್ದು ಬೇಕೆ ಹೇಳಿ ಪರಂಚುಗು ಮಗುಮಾವ°.

ಟೀವಿ ತಂದಮೇಗೆ ಅವರಲ್ಲಿ ಆಸಗ್ತಿ ರಜಾ ಬದಲಾಯಿದು.
ಪುರುಸೊತ್ತಪ್ಪಗ ಅವು ಬೆಶಿಬೆಶಿ ಶುದ್ದಿ ನೋಡುಗು- ಕನ್ನಡ, ಮಲೆಯಾಳ ಶುದ್ದಿಗೊ, ಇಂಗ್ಳೀಶು ನ್ಯೂಸುಗೊ, ಬೀಬೀಸಿಲಿ ಬಪ್ಪ ಬೆಶಿಬೆಶಿ ಮಾತುಕತೆಗೊ – ಇನ್ನೂ ಏನೇನೋ!
ಏನಿದ್ದರೂ ಹೊತ್ತಪ್ಪಗ ಒರೆಂಗೆ ನೋಡಿರೆ ಬಂತು. ಇರುಳು ಮಾಂತ್ರ ಅವಕ್ಕೆ ಸರ್ವತಾ ಟೀವಿನೋಡ್ಳೆ ಸಿಕ್ಕ – ಹೇಳ್ತದು ಮಗುಮಾವನ ಬೇಜಾರು. ಮಗುಅತ್ತೆಯ ಇಷ್ಟದ ಶ್ಟಾರುಸಿಂಗರು ಬತ್ತಡ, ನೆಡಿರುಳು ಒರೆಂಗೆ!
ಅಂತೂ ದಿನ ಉದಿಯಾದರೆ ಇರುಳೊರೆಂಗೂ ಟೀವಿ ಓಡಿಗೊಂಡೇ ಇರ್ತು!
ಅದಿರಳಿ.
~
ಮೊನ್ನೆ ಹೊತ್ತಪ್ಪಗ ಆಸರಿಂಗೆ ಎಲ್ಲ ಕುಡುದ ಕೂಡ್ಳೇ ಒಂದರಿ ಟೀವಿಯ ಬಗ್ಗೆ ಗಮನ ಹೋತು.
ಟೀವಿಒಂಬತ್ತಡ! ಬಳ್ಳಾರಿಲಿ ಸಬೆ, ಜೆನಸಾಗರ, ಗವುಜಿ – ಹೇಳಿ ಬಂದುಗೊಂಡು ಇತ್ತು.
ಒಂದೇ ಸರ್ತಿ ಹೇಳಿದ್ದರೆ ಒಪ್ಪಣ್ಣಂಗೆ ತಲಗೆ ಹೋವುತಿತಿಲ್ಲೆ, ಆದರೆ ಇದು ಹತ್ತು ನಿಮಿಶಲ್ಲಿ ಇಪ್ಪತ್ತು ಸರ್ತಿ ಹೇಳಿದ್ದನ್ನೇ ಹೇಳಿತ್ತು!
ಎಂತಪ್ಪಾ, ಮತ್ತೆಲ್ಲ ಗೆರೆಗೊ ಬಾಯಿಪಾಟ ಬಪ್ಪಲೆ ಸುರು ಆತು. ಆದರೂ ಅವು ಹೇಳುದು ನಿಲ್ಲುಸಿದ್ದವಿಲ್ಲೆ. ಹೇಳಿಗೊಂಡೇ ಇದ್ದವು!
ಅದಾ – ಪುನಾ ಒಂದರಿ.

ಬಳ್ಳಾರಿಲಿ ಸಬೆ ನೆಡತ್ತಡ. ಎಲ್ಲೊರೂ ಒಕ್ಕೊರಲಿಂದ ಖಂಡುಸಿದವಡ. ಬೆಂಗುಳೂರಿಂದ ನೆಡಕ್ಕೊಂಡು ಹೋದ್ದಡ – ಹಾಂಗಡ, ಹೀಂಗಡ!!
ಎಂತಪ್ಪಾ ಇದು – ಕೇಳಿದೆ ಅಜ್ಜಕಾನ ಬಾವನತ್ರೆ.
ಅವಂಗೂ ಅರಡಿಯದ್ದೆ ಪೆರ್ಲದಣ್ಣನ ಮೋರೆ ನೋಡಿದ°.
– ಅಷ್ಟಪ್ಪಗ ಮಗುಮಾವ° ವಿವರ ಹೇಳುಲೆ ಸುರು ಮಾಡಿವು.
~
ಬಳ್ಳಾರಿಯ ಮಣ್ಣಿಂಗೆ ಚಿನ್ನದ ಕ್ರಯ ಅಡ.
ಚಿನ್ನಕ್ಕೆ ಬಯಂಕರ ಏರಿದ್ದು ಭಾವ, ಇನ್ನು ಮದುವೆತೆಗೆತ್ತು ಹೇಂಗೊ! ರಾಮ ರಾಮ, ಅದಿರಳಿ.
ಬಳ್ಳಾರಿಯ ಮಣ್ಣಿಂಗೆ ಚಿನ್ನದ ಕ್ರಯ ಅಡ. ಕೋಲಾರದ ಮಣ್ಣಿಲಿ ಚಿನ್ನ ಸಿಕ್ಕುತ್ತ ನಮುನೆಲಿ ಬಳ್ಳಾರಿಯ ಮಣ್ಣಿಲಿ ಕಬ್ಬಿಣ, ಮೇಂಗನೀಸು (ಕಬ್ಬಿಣದ ನಮುನೆ ಇನ್ನೊಂದು ಲೋಹ) ಸಿಕ್ಕುತ್ತಡ.
ಒಳ್ಳೆದೇ. ಭಾರತಲ್ಲಿ ಎಲ್ಲಾ ನಮುನೆ ಮಣ್ಣುಗೊ ಇದ್ದು ಭಾವ!
ಕೋಲಾರಂದ ಚಿನ್ನ ತೆಗವಲೆ ನಾವೇ ವೆವಸ್ತೆ ಮಾಡಿದ್ದು – ವಿಶ್ವೇಶ್ವರಯ್ಯನ ಕಾಲಲ್ಲಿ!
ಆದರೆ ಇದು ಈಗಾಣ ಕಾಲ ಇದಾ, ಬಳ್ಳಾರಿಯ ಮಣ್ಣಿಂದ ನಾವು ಎಂತರನ್ನೂ ತೆಗವಲಿಲ್ಲೆ. ಆ ಮಣ್ಣಿನ ಬೇರೆದೇಶಕ್ಕೆ ಮಾರುದಡ.
ಅವು ಮಣ್ಣಿಂದ ಲೋಹವ ತೆಗದು ಬೆಡಿಯೋ, ಪ್ರಿಜ್ಜೋ, ವಿಮಾನವೋ, ಕುಕ್ಕರೋ, ಬೈಕ್ಕೋ, ಎಂತಾರು ಮಾಡಿ ಒಪಾಸು ನವಗೆ ಮಾರುದಡ.
ನಾವು ಇರುವಾರ ಅದರ ಪೈಸಕ್ಕೆ ತೆಕ್ಕೊಂಬದಡ.

ಬಳ್ಳಾರಿಲಿ ಒಳುದ ಅಪುರೂಪದ ಹಸುರು ಗುಡ್ಡೆ!
ಬಳ್ಳಾರಿಲಿ ಒಳುದ ಅಪುರೂಪದ ಹಸುರು ಗುಡ್ಡೆ!, ಇನ್ನೆಷ್ಟು ದಿನವೋ..?!

~
ಅದೇನೇ ಇರಳಿ.
ಬಳ್ಳಾರಿಲಿಪ್ಪೋರಿಂಗೆ ಮಣ್ಣಿನ ಮಣ್ಣಾಂಗಟ್ಟಿ ಹೇಳಿ ಬಿಡ್ಳಿಲ್ಲೆ. ಮಣ್ಣು ಮಾರುದೇ ದೊಡ್ಡ ಕೆಲಸ ಅಡ.
ಮಾರಿಮಾರಿ ಒಳ್ಳೆತ ದುಡುದ್ದವಡ. ನಮ್ಮ ಅಡಕ್ಕೆತೋಟ ಎಲ್ಲ ಲೆಕ್ಕವೇ ಇಲ್ಲೆಡ.
ಬಳ್ಳಾರಿಲಿ ಲೋರಿಲಿ ತುಂಬುಸಿ, ಕೊಡೆಯಾಲಕ್ಕೆ ತಂದು, ಅಲ್ಲಿಂದ ಹಡಗಿಲಿ ತುಂಬುಸಿ, ಆ ಹಡಗಿನ ಪಾಕಿಸ್ತಾನಕ್ಕೋ, ಚೀನಕ್ಕೋ, ಜಪಾನಿಂಗೋ – ಆರ ಕೈಂದ ಅದರ ಶುದ್ದಮಾಡ್ಳೆ ಹರಿತ್ತೋ – ಅವರ ಕೈಗೆ ಕೊಟ್ಟು ಕೈ ಮುಗಿವದಡ.
ಅವು ಕೊಟ್ಟಷ್ಟು ಪೈಸೆ ತೆಕ್ಕೊಂಬದು. ಗುಡ್ಡೆಮಣ್ಣಿಂಗೆ ಅಷ್ಟಾರೆ ಅಷ್ಟು – ಸಿಕ್ಕುತ್ತಿಲ್ಲೆಯೋ! ಹೇಳಿಗೊಂಡು.

ಉಂಬಲೆ ಗೆತಿ ಇಲ್ಲದ್ದ ಎಷ್ಟೋ ಜೆನ ಹಾಂಗೆ ಮಾಡಿ ಈಗ ದೊಡ್ಡ ಆಯಿದವಡ.
ಕೆಲವು ಜೆನ ಅಂತೂ ಹೆಲಿಕಾಪ್ಟರು ಮಡಗುವಷ್ಟು ದೊಡ್ಡ ಆಯಿದವಡ!
ರಜ ದೊಡ್ಡ ಜೆನ ಆದ ಕಾರಣ ರಾಜ್ಯ-ಕೇಂದ್ರ ಸರಕಾರಲ್ಲಿದೇ ದೊಡ್ಡ ಸ್ಥಾನ ಮಾಡಿಗೊಂಡಿದವಡ – ಎಂತೆಲ್ಲ ಹೇಳಿದವು ಮಗುಮಾವ.
~

ಅಷ್ಟೊತ್ತು ಒರೆಗುದೇ ಮಾತಾಡದ್ದೆ ಕೂದ ಪೆರ್ಲದಣ್ಣ ಮಾತಾಡ್ಳೆ ಸುರುಮಾಡಿದ.
ಅವಂಗೆ ಮಾತಾಡಿರೆ ಕಾಪಿಕುಡಿವಲೆಡಿತ್ತಿಲ್ಲೆ, ಹಾಂಗೆ ಅವಂಗೆ ಮಾತು ಕಮ್ಮಿ!

ಹ್ಮ್, ಈಗ ಬರೇ ಓಟು ಒಂದೇ ರಾಜಕೀಯ ಅಡ. ತತ್ವ ಹೇಳ್ತದು ಆರತ್ರೂ ಇಲ್ಲೆಡ.
ದೊಡಾ- ರಾಜ್ಯ ಒಳುಶುವವರ ಹಾಂಗೆ ಬೆಂಗುಳೂರಿಲಿ ಕೂದ ಕೆಲವು ಜೆನ ಬಳ್ಳಾರಿಯ ಗಣಿಗಾರಿಕೆ ನಿಲ್ಲುಸುತ್ತೆಯೊ° – ಹೇಳಿಗೊಂಡು ಹೆರಟದವಡ!
ಹೆರಟು ಅರ್ದ ಗಂಟೆ ಅಪ್ಪಗಳೇ, ಯೇಸಿ ಇಲ್ಲದ್ದೆ ಮೈ ಬೆಗರಿದ್ದಡ. ಮಣ್ಣು ಹಿಡುದು ಬೆಳಿಅಂಗಿ ಪೂರ ಕೆಂಪಾಯಿದಡ.
ನೆಡಕ್ಕೊಂಡೇ ಹೆರಟದಡ!
ಮೂರು ಜೆನ ಪರಸ್ಪರ ವಿರೋಧಿಗೊ ಇದ್ದ ಕಾರಣ ಆಚವ° ಮನುಗುವನ್ನಾರ ಇವಂದೆ ನೆಡೆಯಕ್ಕಲ್ಲದೋ – ಹಾಂಗೂ ಹೀಂಗೂ ಜೀಕಿದವಡ.
ಬೆಂಗುಳೂರಿಂದ ಹೆರಟವು ತುಮಕೂರಿಂಗೆ ಎತ್ತುವಗ ಜೆನ ಅರ್ದ ಆಯಿದಡ. ಅಷ್ಟಪ್ಪಗ ಜೆನ ಕಮ್ಮಿ ಅಪ್ಪಲಾಗ ಹೇಳ್ತ ಲೆಕ್ಕಲ್ಲಿ ಆಯಾ ಜಿಲ್ಲೆಯ ಪಾರ್ಟಿ ಅಧ್ಯಕ್ಷಂಗೆ ಕಂತ್ರಾಟು ಕೊಟ್ಟದಡ, ಜೆನ ಬ(ತ)ರುಸುಲೆ.
ಅದರಿಂದ ಮತ್ತೆ ಒಳ್ಳೆತ ಜೆನ ಆಯಿದಡ.
ಗೆದ್ದೆಲಿ ದುಡಿವದರಿಂದ ಹೆಚ್ಚು ಅಂತೇ ಕೈಬೀಸಿ ನೆಡದರೆ ಸಿಕ್ಕುತ್ತಡ ಭಾವ – ಚೆ, ನವಗೂ ಹೋತಿಕ್ಕಲಾವುತಿತು – ಹೇಳಿದ ಅಜ್ಜಕಾನಬಾವ!
ಹಾಂಗೆ ಬಂದವಕ್ಕೆ ಧಾರಾಳ ತಿಂಬಲೆ-ಕುಡಿವಲೆ ಸಿಕ್ಕುತ್ತಡ!
ನಡವದು ಹೇಳಿರೆ ಬರೇ ನಡಕ್ಕೊಂಡೇ ಹೋಪದು ಹೇಳಿ ಏನೂ ಅಲ್ಲಡ. ಎಡೆಲಿ ತುಂಬ ಬಚ್ಚಿತ್ತು ಕಂಡ್ರೆ ಒಂದು ರಜ್ಜ ವಾಹನಲ್ಲಿ ಹೋಕಡ..

ಗಾಂದಿ ಅಜ್ಜನ ಹಾಂಗೆ ಬರೇ ಕಾಲಿಲಿ ನಡದ್ದದುದೇ ಅಲ್ಲ. ಒಳ್ಳೆಕಂಪೆನಿಯ ಶೂಮೆಟ್ಟು ಹಾಕಿಗೊಂಡಿತ್ತಿದ್ದವಡ – ರೂಪತ್ತೆಯ ಮಗನ ಹಾಂಗೆ.
ಶೀತ ಜೊರ ಬಂದರೆ ಫೋರಿನಿಂಗೆ ಹೋಗಿ ಮದ್ದು ಮಾಡೆಕ್ಕಾವುತ್ತಿದಾ ಕೆಲವು ಜನಕ್ಕೆ. ಹಾಂಗಿಪ್ಪಗ ಇನ್ನು ಇಲ್ಲಿ ಎಂತಾರು ಆದರೆ ಎಂತ ಮಾಡುತ್ಸು? ಆ ಹಳ್ಳಿಲಿ ಸರಿಯಾದ ಡಾಗುಟ್ರೂ ಸಿಕ್ಕವು. ಅದಕ್ಕೆ ಅವಕ್ಕೆ ಬೇಕಾಗಿ ಒಟ್ಟಿಂಗೆ ಒಂದು ಡಾಗುಟ್ರಕ್ಕಳ ಗುಂಪುದೇ ಇದ್ದತ್ತಡ.
ಇವರ ಒಯಿವಾಟಿಲಿ ಅವಕ್ಕೂ ಒಂದು ಯಾತ್ರೆ.
ಇಷ್ಟೆಲ್ಲ ಮಾಡೆಕ್ಕಾರೆ ಮೊದಲು ಒಂದು ಪ್ರೇಗ್ಟೀಸು ಹೇಳಿ ಇದ್ದತ್ತಡ. ಶಾಲೆಲಿ ವಾರ್ಷಿಕೋತ್ಸವಕ್ಕೆ ವಾಣಿಟೀಚರು ನಾಟಕ ಅಭ್ಯಾಸ ಮಾಡುಸಿದ ನಮುನೆಲಿ!

ನಡಕ್ಕೊಂಡು ಹೋಪಾಗ ಅಲ್ಲಲ್ಲಿ ಬಾಷಣವೂ ಇದ್ದತ್ತಡ! ಬಚ್ಚಿದ್ದಕ್ಕೆ ರಜಾ ಒರಗಿ ರೆಶ್ಟು ಮಾಡ್ಳೆ ಒಂದು ಸಮೆಯ ಬೇಕನ್ನೆ – ಹೇಳಿ ಪೆರ್ಲದಣ್ಣನ ನೆಗೆ. ಅವ° ಎಂತಾರು ನೆಗೆ ಹೇಳಿರೆ ಅವಂಗೆ ನೆಗೆ ಬಾರ, ಬಾಕಿದ್ದವಂಗೆ ಬಾರದ್ದೆ ಇರ!
ಒಬ್ಬ° ಮಾತಾಡುವಗ ಒಳುದವು ಒರಗುದೂಳಿ ತೋರ್ತು! – ಉಮ್ಮಪ್ಪ ನವಗರಡಿಯ.
ಹಳೆಮನೆ ಅಣ್ಣ ಪಟ ತೆಗದ್ದನೋ ಏನೊ. 😉

ಮದಲಾಣವರ ಚಳುವಳಿಗೂ ಈಗಾಣವರದ್ದಕ್ಕೂ ಎಷ್ಟು ವಿತ್ಯಾಸ?!
ಹೇಳುದು ಮಾಂತ್ರ ಎಂಗಳೂ ಹಾಂಗೇ ಹೋರಾಟ ಮಾಡೊದು ಹೇಳಿ. ಮದಲಾಣವರ ಪ್ರಾಮಾಣಿಕತೆಯ ‘ಅಭಾವ’ ಹೇಳಿದ ಅಜ್ಜಕಾನ ಭಾವ. ಅದುದೇ ಕಾಲಕ್ಕೆ ತಕ್ಕ ಹಾಂಗೆ ಬದಲಾಯಿದು!

~

ಟೀವಿಯವಕ್ಕೆ ಅಂತೂ ನಿತ್ಯವೂ ಒಂದೊಂದು ಶುದ್ದಿ. ಪ್ರತಿ ಹೊತ್ತಿಂಗೂ ಶುದ್ದಿ ಸಿಕ್ಕಿದ ಕೊಶಿ (ಒಪ್ಪಣ್ಣನ ಹಾಂಗೆ! 😉 )
ದಿನಕ್ಕೆ ಅರ್ದ ಒಂದು ಗಂಟೆಯ ಕಾರ್ಯಕ್ರಮ ಮಾಡಿ ಹೇಳಿದ್ದನ್ನೇ ಕನಿಷ್ಠ ನೂರಯಿವತ್ತು ಸರ್ತಿ ಹೇಳಿದ್ದವಡ – ಮಗುಮಾವ ಪಿಸುರಿಲಿ ಹೇಳಿದವು.

ಹತ್ತು ಹದಿನಾರು ದಿನ ನೆಡದು ನೆಡದು ಅಂತೂ ಒಂದು ಗಳಿಗೆಲಿ ಬಳ್ಳಾರಿಗೆ ಎತ್ತಿದವಡ!
ಆ ದಿನ ಎಂಗ ನೋಡುವಗ ಟೀವಿಲಿ ಅದರದ್ದೇ ಕಾರ್ಯಕ್ರಮ ಬಂದುಗೊಂಡಿದ್ದದಡ, ಟೀವಿಲಿ!
ಎತ್ತಿದ ದಿನಾಣ ಜೋರು ಬೊಬ್ಬೆ!
ಜೆನರ ಕಂಡಾಬಟ್ಟೆ ಬ(ತ)ರುಸಿದ್ದವಡ ಅವು. ಕೆಲವು ಜೆನ ಬೆಳಿಟೊಪ್ಪಿ ಹಾಕಿಗೊಂಡು ಭಾಷಣಮಾಡಿಗೊಂಡು ಇತ್ತಿದ್ದವಡ!
ಎಷ್ಟು ಪೈಸೆ ಅಂತೇ ಮುಗಿಗು ಅಲ್ಲದೋ – ಕೇಳಿದ° ಅಜ್ಜಕಾನ ಬಾವ°.
ಪೈಸೆಯೋ – ಎಷ್ಟೋ ಸಾವಿರ ಲಕ್ಷ ರುಪಾಯಿ ಮುಗಿಗು- ಹೇಳಿದ° ಪೆರ್ಲದಣ್ಣ.
ಬೇರೆ ಆರೋ ಗಣಿಯವೇ ಕೊಟ್ಟದಡ ಈ ಪೈಸೆಯ!!
~
ಅಂತೂ ಕಾರ್ಯಕ್ರಮ ಮುಗಾತು.
ಈಗ ಒಂದಷ್ಟು ಪ್ರಶ್ಣೆಗೊ.
ಅಪ್ಪಲೆ ಪೆರ್ಲದಣ್ಣನೂ – ಪಾರೆಮಗುಮಾವನೂ ಪರಸ್ಪರ ಕೇಳಿದಾಂಗೆ ಕಂಡುಗೊಂಡು ಇತ್ತು.ಆದರೆ ಅವು ಕೇಳಿದ್ದು ಜೆನಂಗಳ ಹತ್ರೆ ಹೇಳಿ ಲೆಕ್ಕ! ಕೇಳಿದ್ದದರನ್ನೇ ಕೇಳುಗು. ಜೆನಂಗೊ ಹೇಳಿದ್ದದರನ್ನೇ ಹೇಳುಗು!
ಅದರ ನೋಡಿ ನೋಡಿ ಬೊಡುದತ್ತೂಳಿ ಪರಂಚಿಗೊಂಡು ಮಗುಮಾವ ಟೀವಿ ಸಣ್ಣ ಮಾಡಿದವು, ಟೀವಿಯ ಅಲ್ಲ, ಅದರ ಶೆಬ್ದವ – ಸುಮ್ಮನೆ ಹರಟೆ ಎಂತ್ಸಕ್ಕೆ ಹೇಳಿಗೊಂಡು.
ಎಲ್ಲ ಮುಗುದ ಮತ್ತೆ ಈ ವಿಷಯಲ್ಲಿ ಎಂಗಳೇ ರೆಜಾ ಚರ್ಚೆ ಮಾಡಿದೆಯೊ°.
~

ಬಳ್ಳಾರಿಲಿ ಗಣಿ ಗರ್ಪುಲೆ ಸುರು ಆದ್ದು ಇಂದು ನಿನ್ನೆ ಅಲ್ಲ ಭಾವ! ಒರಿಶಾನುಗಟ್ಳೆ ಆತಡ.
ಆದರೆ ಎಲ್ಲೊರುದೇ ಬೈವದು ಈಗ-ಒಂದು ಐದಾರೊರಿಶಂದ ಗರ್ಪುವವರ.
ಮೊದಲಾಣವರ ಎಂತದೂ ಹೇಳದ್ದೆ ಮತ್ತಾಣವರ ಬೈದರೆ ಹೇಂಗಕ್ಕು?
ಮೊದಲೇ ಮಾಡ್ಳೆ ಸುರುಮಾಡಿದವನನ್ನೂ ಬಯ್ಯೆಕ್ಕು ಭಾವ, ಅಲ್ಲದೋ?

ಮದಲಾಣವು ಸುರು ಮಾಡಿದ್ದರಿಂದಾಗಿ ಈಗ ಇಷ್ಟು ಆದ್ದದು.

ಅರುವತ್ತೊರಿಶಂದ ಅತ್ಲಾಗಿ ತಲೆಯೂ ಹಾಕದ್ದೆ, ಈಗ ಜೆನಂಗಳ ಕಟ್ಟಿಗೊಂಡು ಬಂದರೆ ಆ ಊರು ಅಭಿವುರ್ದಿ ಆಯಿದು ಹೇಳಿ ಲೆಕ್ಕ ಅಲ್ಲದೋ?

ಮದಲಾಣವು ಮಾಡಿದವೂಳಿ ಈಗಾಣವೂ ಮಾಡೆಕ್ಕೂಳಿತ್ತಿಲ್ಲೆ ಹೇಳುವ°.
ಇವಕ್ಕೆ ನಿಲ್ಲುಸುಲಾವುತಿತು. ಎಂತರ ಮಾಡುತ್ಸು ಎಲ್ಲೊರಿಂಗೂ ಪೈಸದ ಆಶೆ!
ಮಣ್ಣಿಂಗೆ ಪೈಸೆ ಸಿಕ್ಕುತ್ತು ಹೇಳಿರೆ ಬಿಡುಗಾ?
ಶುದ್ದಿ ಗೊಂತಾದರೆ ನಮ್ಮ ಬಟ್ಯನೂ ಕೊಟ್ಟು ತೆಕ್ಕೊಂಡು ಹೋಕು ಗರ್ಪುಲೆ!  😉

ಗರ್ಪಿದವು ಗರ್ಪಿದವು ಗರ್ಪಿಯೇ ಗರ್ಪಿದವು!
ಕೊಟ್ಟು ಪಿಕ್ಕಾಸಿಲಿ ಅಲ್ಲ – ದೊಡ್ಡ ದೊಡ್ಡ ಮಿಶನಿಲಿ. ಲೋಡುಗಟ್ಳೆ ಮಣ್ಣು!
ಕ್ರೇನು, ಜೇಸೀಬಿ, ಬುಲ್ಡೋಜರು, ಲೋರಿ, ಟ್ರೇಗ್ಟರು – ಎಲ್ಲವುದೇ ಇದ್ದು.

ಹಸುರು ಮರಂಗೊ ಎಲ್ಲಿದ್ದು? ಕೆಂಪು ಗುಡ್ಡೆ ಇಲ್ಲಿದ್ದು..!
ಹಸುರು ಮರಂಗೊ ಎಲ್ಲಿದ್ದು? ಕೆಂಪು ಗುಡ್ಡೆ ಇಲ್ಲಿದ್ದು..!

~

ಈಗ ಬಳ್ಳಾರಿಲಿ ಕೆಲವು ದಿಕ್ಕೆ ದೊಡ್ಡದೊಡ್ಡ ಗುಡ್ಡೆಗಳೇ ಇಲ್ಲೆಡ ಭಾವ! ಪೆರ್ಲದಣ್ಣ ಹೋಗಿಬಯಿಂದನಡ!
ಹಸಿರುಬಣ್ಣದ ದೊಡಾ ಗುಡ್ಡೆ ಇಪ್ಪ ಜಾಗೆಲಿ ಕೆಂಪು ಬಣ್ಣದ ದೊಡಾ ಗುಂಡಿ ಕಾಣ್ತಡ.
ಹಸಿರಸಿರು ಬಣ್ಣದ ಬಲ್ಲೆಗೊ ಎಲ್ಲ ಕಾಲಿ ಆಯಿದಡ.
ಈಗ ಅಂತೂ ಒಂದು ಜೆನ ಹಾಂಗೇ ಮಾಡಿಗೊಂಡಿದಡ ತಲೆಕಸವನ್ನುದೇ ತೆಗದು.
ನೋಡಿರೆ ಬೇಜಾರಾವುತ್ತಡ.
ಇದು ನಿಂಬದು ಯೇವತ್ತು ಅಂಬಗ?

ಮಗುಮಾವನೂ ಪೆರ್ಲದಣ್ಣನೂ ಮಾತಾಡಿಗೊಂಡೇ ಇತ್ತಿದ್ದವು, ಟೀವಿಲಿ ಕಾರಿಯಕ್ರಮ ಮುಗುದಮತ್ತೆಯೂ..
ಎಂಗೊ ಹೆರಟೆಯೊ°.
ಪೆರ್ಲದಣ್ಣ ಅವರಲ್ಲಿ ಆ ದಿನ ನಿಂದ.
~
ತಲೆಲಿ ಇಡೀ ಬಳ್ಳಾರಿಯ ಮಣ್ಣನ್ನೇ ಹೊತ್ತುಗೊಂಡು ಪಾರೆ ಮಗುಮಾವನಲ್ಲಿಂದ ಹೆರಟಾತು.
ಮನೆಗೆ ಹೋಪ ದಾರಿಲಿ ಮಾಷ್ಟ್ರುಮಾವನ ಮನಗೂ ಒಂದರಿ ಹೊಕ್ಕಿಕ್ಕಿ ಹೆರಡುವೊ° ಹೇಳಿ ಒಳಹೋದೆ. ಮಾಷ್ಟ್ರುಮಾವ° ಅಡಕ್ಕೆಯ ಹೋಳುಮಾಡಿಗೊಂಡೇ ಮಾತಾಡಿದವು. ಬಳ್ಳಾರಿದು ಎಲ್ಲವೂ ಗೊಂತಿದ್ದು ಹೇಳ್ತ ನಮುನೆ ಮಾತಾಡ್ಳೆ ಹೆರಟ° ಒಪ್ಪಣ್ಣ.
ಅಷ್ಟಪ್ಪಗ ಮಾಷ್ಟ್ರುಮಾವ° ಒಪ್ಪಣ್ಣಂಗೇ ಗೊಂತಿಲ್ಲದ್ದ ಕೆಲವು ಶುದ್ದಿ ಹೇಳಿದವು:
ಐನ್ನೂರೊರಿಶ ಮದಲು ಅದೇ ಜಾಗೆ ಅದೇ ನಮುನೆ ಶ್ರೀಮಂತ ಆಗಿದ್ದಿದ್ದಡ.
ವಿಜಯನಗರದ ಜಾಗೆಲಿ ಸಂಪತ್ತು ಸೊರುಗಿಯೊಂಡು ಇತ್ತಡ.
ಕೃಷ್ಣದೇವರಾಯ° ಕಟ್ಟಿದ ಒಯಿಭವದ ಹಂಪೆ ರಾಮರಾಯನ ಕಾಲಕ್ಕೆ ಮುಳುಗಿತ್ತಡ.
ದೂರದ ರಾಯಲ ಸೀಮೆಗೆ ಅವು ಓಡಿಅಪ್ಪಗ ಹಂಪೆಯ ಸಿಕ್ಕಿಸಿಕ್ಕಿದವು ದೋಚಿದ್ದವಡ. ಈಗ ಅದೇ ಜಾಗೆಯ, ವೈಭವವ ಮತ್ತೊಂದರಿ ಸಿಕ್ಕಿಸಿಕ್ಕಿದವು ದೋಚಿಗೊಂಡು ಇದ್ದವಡ.
– ಒಪ್ಪಣ್ಣಂಗೆ ಪೂರ್ತಿ ಅರ್ತ ಆಯಿದಿಲ್ಲೆ. ಇನ್ನೊಂದರಿ ಆ ಶುದ್ದಿ ಮಾತಾಡುವೊ° ಹೇಳಿಕ್ಕಿ ಕತ್ತಲಾದ ಲೆಕ್ಕಲ್ಲಿ ಬೀಸಬೀಸಕೆ ನೆಡದು ಮನಗತ್ತಿದೆ.
~
ಪ್ರಶ್ನೆಗೊ ಎಂತದೇ ಇರಳಿ ಭಾವ!
ಒಪ್ಪಣ್ಣಂಗೆ ಅನುಸಿದ್ದು ಇಷ್ಟೇ.
ಗಣಿಯ ಆರೇ ತೆಗೆಯಲಿ, ಹೇಂಗೆಯೇ ತೆಗೆಯಲಿ, ಯೇವ ಜಾತಿಯವನೇ ಮುಗುಶಲಿ, ಯೇವ ಪಾರ್ಟಿಯವನೇ ತೆಗೆಯಲಿ  – ಅವು ಮುಗುಶುದು ಭಾರತದ ಮಣ್ಣೇ ಅಲ್ಲದೋ?
ಬಗವದು ನಮ್ಮ ಭಾರತಮಾತೆಯ ಹೊಟ್ಟೆಯನ್ನೇ ಅಲ್ಲದೋ?
ಅದರ ಮಾರುದು ನವಗೇ ಉಪದ್ರ ಮಾಡ್ತ ಚೀನ,ಪಾಕಿಸ್ತಾನಕ್ಕೆ ಅಲ್ಲದೋ?  – ಅದರ ಬದಲು ನವಗೇ ಅದರ ಉಪಯೋಗುಸಿಗೊಂಬಲೆ ಎಡಿತ್ತಿಲ್ಲೆಯೋ?
ನಮ್ಮ ಸಂಪತ್ತುಗಳ ನಾವೇ ಉಪಯೋಗುಸಿರೆ ಅದುವೇ ಅಲ್ಲದೋ ಸ್ವಾತಂತ್ರೋತ್ಸವ?
ಇನ್ನೊಬ್ಬನ ಹಂಗು ನವಗೆ ಬೇಕೋ?

ಬಲ್ಲೆ ಬೆಳೆಯದ್ರೂ ಚಿಂತೆ ಇಲ್ಲೆ, ಬೆಡಿಮಡುಗದ್ರೆ ಸಾಕು ಆಚೀಚವು! ಎಂತ ಹೇಳ್ತಿ?
ಇಲ್ಲಿಂದ ತೆಕ್ಕೊಂಡೋಗಿ ಪಾಕಿಸ್ತಾನಕ್ಕೆ ಮಾರಿರೆ ವ್ಯಾಪಾರಲ್ಲಿ ನಮ್ಮದೇ ಸೊತ್ತಿಲಿ ನಮ್ಮಂದ ಉಶಾರಿ ಆವುತ್ತವು. ಅಲ್ಲದೋ?
ನಮ್ಮ ಮಣ್ಣಿಲಿಪ್ಪ ಲೋಹವನ್ನೇ ಬೆಡಿಮಾಡಿ ನವಗೇ ಗುರಿಮಡುಗುತ್ತವನ್ನೆ.
ಅದರಿಂದ ಮದಲು ನವಗೇ ಒಟ್ಟಾಗಿ, ನಮ್ಮ ಅದಿರಿನ ಸ್ವತಂತ್ರವಾಗಿ ಉಪಯೋಗುಸುಲಾಗದೋ? ಸ್ವತಂತ್ರ ದಿನ ರಜೆಲಿ ಕೂದಂಡು ಆಲೋಚನೆ ಮಾಡುವೊ°.
ಆಗದೋ? ಏ°?

ಒಂದೊಪ್ಪ: ಬಲ್ಲೆ ಕಾಲಿ ಆಗಿ ಬಳ್ಳಾರಿ ಕೆಂಪಾತು. ಬೆಡಿ ಜಾಸ್ತಿ ಆಗಿ ಕಾಶ್ಮೀರ ಕೆಂಪಾತು!
ಸ್ವಾತಂತ್ರೋತ್ಸವದ ಶುಭಾಶಯಂಗೊ!!

ಸೂ: ಬಳ್ಳಾರಿಯ ಸಂಡೂರು ಹೇಳ್ತ ಜಾಗೆಯ ಈಗಾಣ ಚಿತ್ರಣವ ಇಲ್ಲಿ ನೋಡ್ಳಕ್ಕಡ. ಪೆರ್ಲದಣ್ಣ ಕೊಟ್ಟ ಸಂಕೊಲೆ ಇಲ್ಲಿದ್ದು:
(ಸಂಡೂರು)

ಬಲ್ಲೆಯೂ ಬೆಳೆಯದ್ದ ಹಾಂಗೆ ಬೋಳುಸಿದವಡ ಬಳ್ಳಾರಿಯ..!, 4.7 out of 10 based on 6 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 83 ಒಪ್ಪಂಗೊ

 1. ರಾಜನಾರಾಯಣ ಹಾಲುಮಜಲು

  ಯೆ ಒಪ್ಪಣ್ಣ ಭಾವ , ನಿನ್ನ ಲೇಖನ ಓದಿಕ್ಕಿ ಅನು ಸೀದಾ ಸ೦ಡೂರಿ೦ಗೆ ಹೊಗಿ ನೊಡಿಕ್ಕಿ ಬೈಯಿ೦ದೆ. ಅದರೆ ಅಲ್ಲಿ ಈಗ ಏಲ್ಲ ನಿ೦ದಿದು. ಯವಾಗ ಸುರು ಅಕ್ಕು ಗೊ೦ತಿಲೆ. ಅಲ್ಲಿಯ ಜನ ಜೀವನ ಏಲ್ಲಾ ಅಸ್ತವ್ಯಸ್ತ. ಮನಗ ಎಲ್ಲಾ ಕೆ೦ಪು ಬಣ್ಣ .
  ಅವರ ಸಮಸ್ಯೆ ನೊಡಿದರೆ ನಮ್ಮ ಊರಿನ ಸಮಸ್ಯೆ ಲೆಕ್ಕಕ್ಕೆ ಇಲ್ಲೆ. ನಾವು ಜಾಗ್ರೆತೆಲಿ ಇಲ್ಲದ್ದರೆ ನಮ್ಮ ಊರಿನ ಹಿ೦ದೆ ಇಪ್ಪ ಕುಮಾರಪರ್ವತವೂ ಖಾಲಿ ಅಕ್ಕು.

  [Reply]

  ಮುಳಿಯ ಭಾವ

  raghumuliya Reply:

  ಹಾಂಗಾರೆ ಎಸ.ಪಿ.ಗೆ ಇಪ್ಪತ್ತು ವರುಷ ಹಿಂದೆಯೇ ಕನಸು ಬಿದ್ದು ಪದ ಹೇಳಿದ್ದದೋ…

  ಕೆಂಪಾದವೋ ಎಲ್ಲಾ ಕೆಂಪಾದವೋ
  ಹಸಿರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
  ನೆತ್ತರ ಕುಡಿದಂಗೆ ಕೆಂಪಾದವೋ

  ಬೋಳಾದವೋ ಎಲ್ಲ ಬೋಳಾದವೋ
  ಸುತ್ತ ಕಾಡುಗ ಎಲ್ಲ ದೊಡ್ಡ ಗುಡ್ಡೆಗ ಎಲ್ಲ
  ತಲೆ ಚಾಣೆ ಆದಂಗೆ ಬೋಳಾದವೋ…

  [Reply]

  ಶ್ರೀಶಣ್ಣ

  ಶ್ರೀಶ. ಹೊಸಬೆಟ್ಟು Reply:

  ಕೆಂಪಾದವೋ … ಬರದ ಲಂಕೇಶ್ ಈಗ ಇರ್ತಿದ್ದರೆ, ಗುರುಗಳ ಹೀಯಾಳಿಸಿ ಬರವಲೆ ಪುಟಂಗೊ ಸಾಕಾವ್ತಿತಿಲ್ಲೆ. ಗಣಿದೊರೆಗಳ ಬಗ್ಗೆಯೂ ಸಾಕಷ್ಟು ಪದ್ಯಂಗೊ ನೀಲು ಬರೆತ್ತಿತ್ತು.

  [Reply]

  VA:F [1.9.22_1171]
  Rating: +1 (from 1 vote)
 2. ಅಜ್ಜಕಾನ ಭಾವ

  ಬಲ್ನಾಡು ಮಾಣಿ ಬಳ್ಳಾರಿಗೆ ಹೆರಟು ಪೇಷೆಂಟು ಆಯಿದನಡ.. ಜೀಮೈಲಿಲಿ ಬರದ್ದ.. ಗುರಿಕ್ಕಾರಂಗೆ ಪಟ ಕಳ್ಸಿದ್ದೆ.. ಪುರುಸೋತ್ತು ಇದ್ದರೆ ಹಾಕುಗು..

  [Reply]

  VN:F [1.9.22_1171]
  Rating: 0 (from 0 votes)
 3. ಬಲ್ನಾಡುಮಾಣಿ

  ಬಳ್ಳಾರಿಗೆ ಹೆರಟು ಪೇಷೆಂಟು ಆದ್ದದಲ್ಲ ಭಾವಾ, ಅದರ ಹೆಸರು ಕೇಳಿಯೆ ಜ್ವರ ಸುರು ಆಯ್ದು.. :) ಬಳ್ಳಾರಿ ಹೇಳಿರೆ ಗುಣಾಜೆಮಾಣಿಗೆ ಮಾತ್ರಾ ಭೋ ಪ್ರೀತಿ… :)

  [Reply]

  VA:F [1.9.22_1171]
  Rating: 0 (from 0 votes)
 4. ಡೈಮಂಡು ಭಾವ

  ನೆಗೆಗಾರ°, ನೀರ್ಕಜೆ ಅಪ್ಪಚ್ಚಿ ಅಜ್ಜಕಾನ ಬಾವ, ರಘು ಬಾವ –ಚೆಲಾ ಬಾರಿ ರೈಸಿದ್ದಾತ…ಬಪ್ಪಲೆ ರಜ್ಜ ಲೇಟಾತು, ಇಲ್ಲದ್ರೆ ಆನುದೆ ಸೇರ‍್ತಿತೆ ನಿಂಗಳೊಟ್ಟಿಂಗೆ..

  [Reply]

  ಬಲ್ನಾಡುಮಾಣಿ

  ಆದರ್ಶ Reply:

  ಎಂತ ಕೆಪ್ಪಣ್ಣೋ ಬಪ್ಪಾಗ ಲೇಟಾದ್ದು??? ವಿಮಾನದ ಟೈರು ಪೇಚಾತೋ ಅಲ್ಲ ಡ್ರೈವರು ರಜೆಲಿತ್ತಿದ್ದೋ??? 😉

  [Reply]

  VA:F [1.9.22_1171]
  Rating: 0 (from 0 votes)
  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಕೆಪ್ಪಣ್ಣ ಭಾವ ಆರ ಹೆಅರು ಬಿಟ್ರು ತೊಂದರೆ ಇಲ್ಲೆ, ಬಲ್ನಾಡು ಮಾಣಿಯ ಮಾಂತ್ರ ಬಿಟ್ಟಿಕ್ಕೆಡಾ..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಪ್ರಕಾಶಪ್ಪಚ್ಚಿಸಂಪಾದಕ°ಕಾವಿನಮೂಲೆ ಮಾಣಿಪಟಿಕಲ್ಲಪ್ಪಚ್ಚಿಶಾ...ರೀಚುಬ್ಬಣ್ಣಶ್ಯಾಮಣ್ಣವಿಜಯತ್ತೆಶೇಡಿಗುಮ್ಮೆ ಪುಳ್ಳಿಬಟ್ಟಮಾವ°ಬಂಡಾಡಿ ಅಜ್ಜಿಕೇಜಿಮಾವ°ಮುಳಿಯ ಭಾವಯೇನಂಕೂಡ್ಳು ಅಣ್ಣಉಡುಪುಮೂಲೆ ಅಪ್ಪಚ್ಚಿಡಾಮಹೇಶಣ್ಣಸುಭಗಅಡ್ಕತ್ತಿಮಾರುಮಾವ°ಜಯಗೌರಿ ಅಕ್ಕ°ದೊಡ್ಡಮಾವ°ಪುಣಚ ಡಾಕ್ಟ್ರುನೆಗೆಗಾರ°ತೆಕ್ಕುಂಜ ಕುಮಾರ ಮಾವ°ಚೂರಿಬೈಲು ದೀಪಕ್ಕಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ