ಚಿನ್ನದ ಚೈನೇ ಆದರೂ ಚೀನಾದ್ದಾದರೆ ಬೇಡ…!

August 19, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 43 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಲ್ಮಡ್ಕಲ್ಲಿ ಒರಿಶಾವಧಿ ಪೂಜೆ, ಮೊನ್ನೆ.
ಅಮೈಲಿಯೂ ಅದೇ ದಿನ ಪೂಜೆ ಆದರೂ, ಕಲ್ಮಡ್ಕನಂತ ಅಮೈ ಅನಂತಣ್ಣನಿಂದಲೂ ಆರುತಿಂಗಳ ಮದಲೇ ಹೇಳಿಕೆ ಮಾಡಿದ್ಸ°!
ಹೋಗದ್ದೆ ಕಳೀಯ!
ಅಮೈಲಿ ದುರ್ಗಾಪೂಜೆ ತುಂಬ ವಿಶೇಷ ಅಡ, ನೋಡಿದೋರು ಹೇಳ್ತವು.
ಒಪ್ಪಣ್ಣಂಗೆ ಇನ್ನೂ ಅದರ ನೋಡಿ ಅರಡಿಯ; ನೋಡಿದ ಮೇಗೆಯೇ ಆ ಬಗ್ಗೆ ಹೇಳುವೊ ಆಗದೋ..

ಕಲ್ಮಡ್ಕಲ್ಲಿಯೂ ದುರ್ಗಾಪೂಜೆ ಇದ್ದು. ಆದರೆ ಅದರೊಟ್ಟಿಂಗೆ ಉಂಡೆಪಚಾದ ಪೂಜೆಯೂ ಇದ್ದು!
ಬೋಚಬಾವ° ಮೊನ್ನೆಯೇ ಹೆರಟುನಿಂಬಲೆ ಒಂದು ಕಾರಣ ಇದುದೇ ಆಗಿದ್ದತ್ತು.
~
ಮದಲೇ ಅತ್ತಿತ್ಲಾಗಿ ಮಾತಾಡಿಗೊಂಡ ನಮುನೆ ಬೈಲಿನ ಕೆಲವು ಜೆನ ಅಲ್ಲಿ ಸಿಕ್ಕುದು ಹೇಳಿ ನಿಗಂಟಾತು.
ಪೂಜೆದಿನ ಉದಿಯಪ್ಪಗ ಸುಬಗಣ್ಣ, ಚುಬ್ಬಣ್ಣ ನೇರವಾಗಿ ಅಲ್ಲಿಗೇ ಬಂದವು; ಅಜ್ಜಕಾನಬಾವ° ಹೇಂಗೂ ಮುನ್ನಾಣದಿನಂದಲೇ ಅಲ್ಲಿ ಅಂಬೆರ್ಪಿಲಿ ಇರ್ತ ಅನ್ನೇ!
ಬಾಲಣ್ಣಂದೇ ಗಣೇಶಮಾವಂದೇ ಮದ್ಯಾಂತಿರುಗಿ ಬಪ್ಪದು ಹೇಳಿ ಗೊಂತಾತಿದ.
ನೆಗೆಮಾಣಿ, ಬೋಚಬಾವ°, ಪೆಂಗಣ್ಣಂಗೆ ದಾರಿ ಹೇಳೇಕಾದ ಅಗತ್ಯವೇ ಇಲ್ಲೆ – ಆರನ್ನಾರು ಹಿಡುದು, ಒಟ್ಟಿಂಗೆ ನೇತುಗೊಂಗು, ಪೂಜೆಗಪ್ಪಗ ಎತ್ತುಗು. ಅದಿರಳಿ.
ಹಾಂಗಾಗಿ, ಹೋಪಗಳೇ ಒಪ್ಪಣ್ಣಂಗೆ ಸಂಗಾತಕ್ಕೆ ಆರಾರು ಸಿಕ್ಕುಗೋ – ಹೇಳಿ ವಿಚಾರ ಮಾಡುವಗ ನೆಂಪಾದ್ದೇ ನಮ್ಮ ಕೊಳಚ್ಚಿಪ್ಪುಬಾವ°ನ!
~
ಮಯಿಸೂರು, ಪುತ್ತೂರು, ಕೊಳಚ್ಚಿಪ್ಪು, ಮಾಡಾವು – ಹೇಳಿ ಅಂಬಗಂಬಗ ಅಂಬೆರ್ಪಿಲಿ ಇಪ್ಪ ಜವ್ವನಿಗ ಅಲ್ಲದೋ ನಮ್ಮ ಕೊಳಚ್ಚಿಪ್ಪುಬಾವ°! ಈಗೀಗ ಅವನ ಮಾತಾಡುಸಿಕ್ಕಲೂ ಎಡಿಯ, ಮೂರೊತ್ತೂ ಅಂಬೆರ್ಪೇ.
ಒಂದು ಪೋನು ಇದ್ದು ಕೊಳಚ್ಚಿಪ್ಪುಬಾವನ ಕೈಲಿ – ಯೇವತ್ತೂ ಬೆಶಿ!
ಬಿಲ್ಲು ಬಂದ ಎರಡುದಿನ ಕೊಳಚ್ಚಿಪ್ಪು ಅತ್ತೆ ಬೆಶಿ – ಹೇಳಿ ನೆಗೆಮಾಣಿ ನೆಗೆಮಾಡ್ಳಿದ್ದು! 😀
ಅದಿರಳಿ, ಆ ವಿಶಯ ನವಗೆಂತಕೆ, ಅಲ್ಲದೋ! 😉
~
ಉದಿಯಪ್ಪಗ ಒಂಬತ್ತೂವರೆಗೆ ಪುತ್ತೂರು ಬಷ್ಟೇಂಡಿಂದ ಕಲ್ಮಡ್ಕ ಬಸ್ಸು ಹೆರಡ್ತು, ಅದರಿಂದ ಹತ್ತು ನಿಮಿಷ ಮದಲೇ ಎತ್ತಿಗೊಳೇಕು – ಹೇಳಿತ್ತಿದ್ದ° ಮೊನ್ನೆ ಮಾತಾಡುವಗ.
ಏಳುಗಂಟೆ ಷ್ಟೇಟುಬಸ್ಸಿಂಗೆ ಹೆರಟು, ಒಂಬತ್ತೂಕಾಲಕ್ಕೆ ನಾವು ಪುತ್ತೂರು ಬಷ್ಟೇಂಡಿಲಿ; ಕೊಳಚ್ಚಿಪ್ಪುಬಾವ° ಬತ್ತನಷ್ಟೆ!
ಕೊಳಚ್ಚಿಪ್ಪುಬಾವ° ಬಾರದ್ದೆ ಬಸ್ಸಿಂಗೆ ಹತ್ತಲೆ ಧೈರ್ಯ ಇಲ್ಲೆ ನವಗೆ!
– ಪಕ್ಕನೆ ಕಂಡೇಗ್ಟ್ರ ’ದೂರ?’ ಹೇಳಿ ಕೇಳಿರೆ ಪೈಶೆಕೊಟ್ಟಿಕ್ಕಲೆ ಹೆದರಿ ಹೋಪದು ಒಪ್ಪಣ್ಣಂಗೆ! 😉
ಅದಕ್ಕೇ, ಒಟ್ಟಿಂಗೆ ಆರಾರು ಇದ್ದರೆ ಧೈರ್ಯ ಇದಾ.
ಬಾವ° ಬಂದವನೇ, – `ಬಸ್ಸು ಯೇವದು’ ಹೇಳಿ ನೋಡಿಕ್ಕಿ ಒಂದು ಪೇಪರು ತೆಕ್ಕೊಂಡು ಬಂದ°.
~
ಬಸ್ಸಿಂಗತ್ತಿ ಕೂದಾತು.
ಈ ಮಳೆಗೆ ಜೆನಂಗೊ ಹೆರಟಿದವಿಲ್ಲೆ ಇದಾ – ಎಲ್ಲರೂ ಮನೆ ಒಳವೇ ಇದ್ದಿದ್ದವೋ ಕಾಣ್ತು. ಬಸ್ಸು ಕಾಲಿಕಾಲಿ!
ಸಮೆಯ ಅಪ್ಪಗ ಡ್ರೈವರ ಬಂದು ಅದರ ಸೀಟಿಲಿ ಕೂದತ್ತು.
ಮಾಡಾವೂ ಬೆಳ್ಳಾರೇ ಕಲ್ಮಡ್ಕಾ – ಹೇಳಿ ನಾಕು ಸರ್ತಿ ಜೆನ ದಿನಿಗೆಳಿತ್ತು.
ಅಲ್ಲೇ ಬಷ್ಟೇಂಡಿನ ಕರೆಲಿ ಬೀಡಿ ಬಲುಗಿಂಡಿದ್ದ ಕೆಲವು ಜೆನ ಹತ್ತಿ ಕೂದುಗೊಂಡವು. ಕಾಲಿ ಇದ್ದ ಸೀಟುಗೊ ಸಾಮಾನ್ಯ ಭರ್ತಿ ಆತು.
ಬಸ್ಸು ಹೆರಟತ್ತು, ಕಂಡೆಗ್ಟ್ರ ಟಿಕೇಟು ಪೆಟ್ಟಿಗೆ ಹಿಡ್ಕೊಂಡು ಬಂತು.
ಕೊಳಚ್ಚಿಪ್ಪುಬಾವ° ಧೈರ್ಯಲ್ಲಿ ಕಲ್ಮಡ್ಕ ಎರಡು – ಹೇಳಿ ಪೈಸೆಕೊಟ್ಟ°. ನಾವು ಹತ್ತರಾಣ ಸೀಟಿಲಿ ಕೂದಂಡು ಧೈರ್ಯಕ್ಕೆ ಹೆಗಲುಕೊಟ್ಟುಗೊಂಡು ಇದ್ದತ್ತು! 😉
~

ಈ ಪಟವುದೇ ಚೀನಾಲ್ಲೇ ಪ್ರಿಂಟುಮಾಡಿದ್ದೋ ಏನೋ - ಉಮ್ಮಪ್ಪ!

ಏನೊಳ್ಳೆದು ಮಾತಾಡ್ಳೆ ಸುರು ಮಾಡಿ ಅಪ್ಪದ್ದೇ, ಪೇಪರು ಓದಲೆ ಸುರುಮಾಡಿದ ಕೊಳಚಿಪ್ಪುಬಾವ°
ಮರದಿನ ಸ್ವಾತಂತ್ರೋತ್ಸವ; ಪೇಪರಿಲಿ ಇಡೀ ಅದರದ್ದೇ ಗವುಜಿ.
ಅಲ್ಲಿ ಹಾಂಗೆ ತಯಾರಿ, ಇಲ್ಲಿ ಹೀಂಗೆ ತಯಾರಿ, ಅವರ ಸಂದರ್ಶನ, ಇವರ ಭಾಷಣ, ಎಲ್ಲ ಇದೇ ಶುದ್ದಿಗೊ.
ಮಕ್ಕೊ ಸಣ್ಣಸಣ್ಣ ಪ್ಲೇಷ್ಟಿಕು ಧ್ವಜ ಹಿಡ್ಕೊಂಡು, ಜೈಕಾರ ಹಾಕುತ್ತ ಪಟಂಗೊ, ಪ್ಲೇಷ್ಟಿಕು ಧ್ವಜ ನಿಷೇಧ ಆಯಿದು ಹೇಳಿ ಪೋಲೀಸು ಹೇಳಿದ ಶುದ್ದಿಗೊ, ಎಲ್ಲವೂ ಒಟ್ಟೊಟ್ಟಿಂಗೇ ಇದ್ದತ್ತು! ಬಾಕಿ ಇದ್ದ ರಜ್ಜ ಜಾಗೆಲಿ ಡೀವಿ ಮುಖ್ಯಮಂತ್ರಿ ಆದ ಶುದ್ದಿಗೊ.
– ಎಲ್ಲವುದೇ ತುಂಬಿ, ಪೇಪರಿಲಿ ಒಂದು ಚೂರುದೇ ಜಾಗೆ ಬಾಕಿ ಇದ್ದತ್ತಿಲ್ಲೆ! :-)
ಆದರೆ, ಇಷ್ಟೆಲ್ಲ ಶುದ್ದಿ ಇದ್ದರೂ – ಇದೆಲ್ಲ ಶುದ್ದಿಂದಲೂ ವಿಶೇಷವಾಗಿ ಕೊಳಚ್ಚಿಪ್ಪುಬಾವನ ಕಣ್ಣಿಂಗೆ ಕಂಡದು ಒಂದು ಬೇರೆಯೇ ಇದ್ದು. ಅದೆಂತರ?
~
ನಮ್ಮ ಸ್ವಾತಂತ್ರೋತ್ಸವ ಆಚರಣೆ ಸಮಯಕ್ಕೆ ಸರೀ ಆಗಿ ಕೋಟಿಗಟ್ಳೆ ಪ್ಲೇಷ್ಟಿಕು ಧ್ವಜವ ಚೀನಾ ದೇಶ ತೆಯಾರು ಮಾಡಿದ್ದಾಡ.
ನಮ್ಮ ದೇಶದ ಮಾರುಕಟ್ಟೆಗೆ ಕಳುಸಿದ್ದಾಡ! – ಹೇಳಿ ಸಣ್ಣ ಗೆರೆಪೆಟ್ಟಿಗೆಲಿ ಇದ್ದ ಶುದ್ದಿ.
ಕೊಳಚ್ಚಿಪ್ಪುಬಾವನ ಮನಸ್ಸಿಂಗೆ ಈ ಶುದ್ದಿಯೇ ತಾಗಲೆ ಕಾರಣ ಎಂತರ?
ಅವನ ಕೈಲೇ ಕೇಳುವಗ ನಿಧಾನಕ್ಕೆ ಹೇಳಿದ°.
~
ಹೇಂಗೂ – ಒಂಬತ್ತೂವರಗೆ ಪುತ್ತೂರಿಂದ ಹೆರಟದು ಕಲ್ಮಡ್ಕ ಒರೆಂಗೆ ಪುರುಸೊತ್ತೇ ಅಲ್ಲದೋ.
ಅದಲ್ಲದ್ದೇ ಈಗ ಪುತ್ತೂರಿಂದ ಕುಂಬ್ರಒರೆಂಗೆ ಮಾರ್ಗ ಹಾಳಾಗಿ ಹೋಯಿದು.
ಏನಾರು ಮಾತಾಡದ್ರೆ ಹೊತ್ತೇ ಹೋಗ ಇದಾ. ಏನೇನಾರು ಮಾತಾಡ್ತರಿಂದ ಹೀಂಗಿರ್ಸೇನಾರು ಮಾತಾಡಿರೆ ಒಳ್ಳೇದಿದಾ!
~
ಭಾವ°, ನಿನಗೆ ಈ ಚೀನಾಂದ ಬತ್ತ ವಸ್ತುಗಳ ಬಗ್ಗೆ ಅರಡಿಗೋ – ಕೇಳಿದ° ಕೊಳಚ್ಚಿಪ್ಪುಬಾವ°.
ಹ್ಮ್, ಸಾದರ್ಣ ಗೊಂತಿದ್ದು, ಪೂರ್ತಿ ಅರಡಿಯ – ಹೇಳಿದೆ.
ಒಪ್ಪಣ್ಣ ಸಣ್ಣ ಇಪ್ಪಗಳೇ, ಚೀನಾದ ಹೀರೋ ಪೆನ್ನು – ಬಂದುಗೊಂಡಿದ್ದತ್ತು. ಶಾಯಿ ತುಂಬುಸಿ ಬರೆತ್ತ ನಿಬ್ಬಿನ ಪೆನ್ನು.
ಚಿನ್ನದ ಬಣ್ಣದ ಟೊಪ್ಪಿ ಇದ್ದಕಾರಣ ಇದಕ್ಕೆ ಚೀನಾದ್ದು ಹೇಳುದೋ ಗ್ರೇಶಿತ್ತು ನಾವು, ಸಣ್ಣ ಇಪ್ಪಾಗ!
ಮತ್ತೆ ಗೊಂತಾತು, ಅದು ದೇಶದ ಹೆಸರಿಂದಾಗಿ ಬಂದದು – ಹೇಳಿಗೊಂಡು.

ಮದಲೇ ಈ ನಮುನೆ ಪೆನ್ನುಗೊ ಇದ್ದತ್ತಾಡ ಸರಾಪಜ್ಜನ ಜೋಳಿಗೆಲಿ; ಬದಿಯೆಡ್ಕದ ಹಳಬ್ಬರು ಹೇಳುಗು.
ಬದಿಯಡ್ಕದ ಹಳೆ ಸಂಗತಿ ಕೊಳಚ್ಚಿಪ್ಪುಬಾವಂಗೆ ನೆಂಪಾತಿಲ್ಲೆ, ಆದರೆ ಈಗಾಣ ಸಂಗತಿಗೊ ಅರಡಿಗು.
ಹ್ಮ್, ಈಗ ಅಂತೂ ತುಂಬಿ ಹೋಯಿದು ಚೀನಾದ ಮಾಲುಗೊ.
ಅವು ಮರುಳುಕಟ್ಟಿ ಕಳುಸುಸ್ಸು ಮಾಂತ್ರ ಅಲ್ಲ, ನಾವು ಮರುಳುಕಟ್ಟಿ ತೆಕ್ಕೊಳ್ತುದೇ – ಹೇಳಿದ°.
ಎಂತಕೆ ತೆಕ್ಕೊಳ್ತು – ಹೇಳಿತ್ತುಕಂಡ್ರೆ, ಒಂದೇ ಕಾರಣ – ಅದರ ಕ್ರಯ ಕಡಮ್ಮೆ!

ಕ್ರಯ ಕಡಮ್ಮೆ – ಹೇಳ್ತರ ಉದಾಹರಣೆ ಮೂಲಕವೇ ವಿವರುಸಿದ°.
ಉದಾಹರಣೆಗೊ ಎಲ್ಲ ಒಪ್ಪಣ್ಣಂಗೂ ಅರಡಿವದೇ ಆದರೂ, ಅವ° ಒಂದೊಂದಾಗಿ ವಿವರಸುವಗ ಸರೀ ತಲಗೆ ಹೊಕ್ಕತ್ತು:
~
ನೆರಿಯದೊಡ್ಡಪ್ಪನ ಕೈಲಿ ಎರಡುಬೆಟ್ರಿ ಲೈಟು ಇದ್ದತ್ತು.
ಹತ್ತಿಪ್ಪತ್ತೊರಿಶ ಆತು ಆ ಲೈಟಿಂಗೆ, ಅಂದು ಒಳ್ಳೆ ಷ್ಟೀಲಿನ ಬಣ್ಣಲ್ಲಿ ಇದ್ದತ್ತು.
ಬೆಟ್ರಿ ಮುಗುದ ಹಾಂಗೆ ಬೇರೆ ಹಾಕಿಗೊಳೆಕ್ಕು. ಲೈಟಿಂಗೆ ಭರ್ತಿ – ನೂರು ರುಪಾಯಿ!
ಚೀನಾದ್ದುದೇ ಅದೇ ನಮುನೆ ಲೈಟುಗೊ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಐದ್ರುಪಾಯಿ, ಹತ್ರುಪಾಯಿ, ಇಪ್ಪತ್ರುಪಾಯಿ! ಅಷ್ಟೇ.
ಕೆಂಪಿಂದು, ಕಪ್ಪಿಂದು, ಹಗುರದ್ದು, ಉರುಟಿಂದು, ಉದ್ದದ್ದು!!
ನೆರಿಯದೊಡ್ಡಪ್ಪನ ಲೈಟು ಇಪ್ಪತ್ತೊರಿಶ ಕಳಾತು; ಈಗ ಷ್ಟೀಲಿನ ಬಣ್ಣ ಪೂರ ಹೋಗಿ, ಒಳಾಣ ಹಿತ್ತಾಳೆ ಕಾಣ್ತು.
ಆದರೆ ಚೀನಾದ ಲೈಟುಗೊ ಇಪ್ಪತ್ತು ದಿನವೂ ಬಾಳತನ ಬಾರ!
~
ಪಾರೆ ಮಗುಮಾವನ ಕೈಲಿ ಒಂದು ವಾಚು ಇದ್ದು, ಗಂಟೆನೋಡ್ಳೆ.
ಟೈಟಾನು ಕಂಪೆನಿದು, ಚರ್ಮದ ಬೆಳ್ಟಿಂದು.
ತೆಗದು ಐದಾರು ಒರಿಶ ಆತು; ಈಗಳೂ ಚೆಂದಕೆ ನೆಡೆತ್ತು; ಗಂಟೆ ನೋಡಿಕ್ಕಲೆ ಎಡಿತ್ತು.
ತೆಗವಗ ಅದರ ಕ್ರಯ ಭರ್ತಿ ಏಳುನೂರು ರುಪಾಯಿ ಇದ್ದತ್ತಾಡ!
ಚೈನಾದ್ದುದೇ ಸುಮಾರು ವಾಚುಗೊ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಐದ್ರುಪಾಯಿ, ಹತ್ರುಪಾಯಿ, ಇಪ್ಪತ್ರುಪಾಯಿ! ಅಷ್ಟೇ.
ಲೈಟಿಪ್ಪದು, ಬೆಣಚ್ಚಿಪ್ಪದು, ಶಬ್ದ ಇಪ್ಪದು – ಇನ್ನೂ ನಮುನೆದು!!
ಮಗುಮಾವನ ಕೈಲಿ ವಾಚು ಐದೊರಿಶ ಕಳಾತು. ಆದರೆ ಈ ಚೀನಾದ ವಾಚು ಐದು ದಿನ ನೆಡಗೋ?
~
ಮಾಷ್ಟ್ರುಮಾವನ ಗುರ್ತ ಹಿಡಿತ್ತದೇ ಅವರ ಕನ್ನಡ್ಕಲ್ಲಿ.
ಈಗಾಣ ಕನ್ನಡ್ಕಕ್ಕೇ ಮೂವತ್ತೊರಿಶ ಕಳಾತು. ಪಷ್ಟ್ಲಾಸು ಕನ್ನಡ್ಕದ ಕರೆ, ಕಪ್ಪು ಬಣ್ಣದ್ದು.
ಆ ಕನ್ನಡ್ಕಕ್ಕೆ ನೂರಿಪ್ಪತ್ತು ರುಪಾಯಿ ಆಯಿದಾಡ.
ಚೈನಾದ್ದುದೇ ಸುಮಾರು ಕನ್ನಡ್ಕಂಗೊ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಐದ್ರುಪಾಯಿ, ಹತ್ರುಪಾಯಿ, ಇಪ್ಪತ್ರುಪಾಯಿ! ಅಷ್ಟೇ.
ಕೆಂಪು ಕರೆದು, ಕಪ್ಪು ಬಣ್ಣದ್ದು, ನೀಲಿ ಬಣ್ಣದ್ದು… ನಾನಾ ನಮುನೆದು!
ಸುಂದರಿಯ ಮಗ ಸುಕುಮಾರ ಮೊನ್ನೆ ಜಾತ್ರೆಲಿ ತೆಗದತ್ತಾಡ, ಮೂರುದಿನ ಹಾಕಿ ಅಪ್ಪಗ ಕೆಮಿಕರೆಂದ ಕಣ್ಣಕರೆ ಒರೆಗೂ ಹುಣ್ಣಾತಡ!
~
ಬೈಲಕರೆ ಗಣೇಶಮಾವನ ಅಮ್ಮನ ಕಾಲಿಲಿ ಜೋಡು ಇದ್ದತ್ತು. ನೆಂಪಿದ್ದೋ? 😉
ಆ ಜೋಡಿನ ಹಾಕುದು ಒಂದೊರಿಶ ಆತು.
ನಿತ್ಯವೂ ತೋಟಕ್ಕೆ ಹೋಪಗ, ಹಟ್ಟಿಕರೆಲಿ ತಿರುಗುವಗ, ಅಪುರೂಪಕ್ಕೆ ಪೇಟಗೆ ಹೋಪಗ, ಜೆಂಬ್ರಕ್ಕೆ ಹೋಪಗ – ಎಲ್ಲವೂ ಅದೇ ಜೋಡು. ಕಾಂಬಲೆ ವಿಶೇಷ ಚೆಂದ ಇರ, ಆದರೆ ಕಾಲಿಂಗೆ ರಕ್ಷಣೆ ಕೊಡ್ತು.
ಅದು ಮಾಡೇಕಾದ ಕೆಲಸ ಅದುವೇ ಅಲ್ಲದೋ?
ಅದಾ, ದೊಡ್ಡಬಾವನ ಜಾಲಿಲಿ ಅದು ಒಂದರಿ ಬಾಕಿ ಆಗಿ, ಮತ್ತೆ ನೆಟ್ಟಾರು, ಅರ್ನಾಡಿ – ಎಲ್ಲ ತಿರುಗೆಂಡು ಪುನಾ ಬೈಲಕರೆಗೆ ಎತ್ತಿದ್ದು.
ಆ ಕಪ್ಪು ಜೋಡು ತೆಗವಗ ಭರ್ತಿ ಇನ್ನೂರೈವತ್ರುಪಾಯಿ ಕೊಟ್ಟಿದವಡ ಗಣೇಶಮಾವ.
ಚೈನಾದ್ದುದೇ ಸುಮಾರು ನಮುನೆ ಜೋಡುಗೊ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಹತ್ರುಪಾಯಿ, ಇಪ್ಪತ್ರುಪಾಯಿ ಐವತ್ರುಪಾಯಿ! ಅಷ್ಟೇ.
ಅಂದೊಂದರಿ ಸುಂದರಿ ಈ ಜೋಡು ತೆಗದು ಅದರ ಕಾಲಿಡೀ ಕಜ್ಜು ಆಯಿದಾಡ.
~
ಬಂಡಾಡಿಅಜ್ಜಿಯ ಕೈಲಿ ಒಂದು ಕುಂಕುಮದ ಕರಡಿಗೆ ಇದ್ದು.
ಒಂದು ಮುಷ್ಠಿಲಿ ಹಿಡಿತ್ತಷ್ಟು ದೊಡ್ಡ ಮರದ ಕರಡಿಗೆ. ಅದರ್ಲಿ ತುಂಬ ಕುಂಕುಮ ಯೇವತ್ತೂ ತುಂಬುಸುಗು.
ಅವರ ಜವ್ವನಲ್ಲಿ ಯೇವದೋ ಆಚಾರಿ ಮಾಡಿಕೊಟ್ಟದಾಡ ಆ ಕರಡಿಗೆ.
ಹಲಸಿನ ತಿರುಳುಮರಲ್ಲಿ ಭರ್ತಿ ಒಂದುದಿನದ ಆಚಾರಿಕೆಲಸ ಹಿಡುದ್ದಾಡ ಅದಕ್ಕೆ!
ಈಗಾಣ ಕಾಲಕ್ಕೆ ಹೋಲುಸಿರೆ ಇನ್ನೂರು ರುಪಾಯಿ ಮಜೂರಿ ಆತಿಲ್ಲೆಯೋ!
ಚೈನಾದ್ದುದೇ ಸುಮಾರು ನಮುನೆ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಐದ್ರುಪಾಯಿ, ಹತ್ರುಪಾಯಿ, ಇಪ್ಪತ್ರುಪಾಯಿ! ಅಷ್ಟೇ.
ಮರದ ಕರಡಿಗೆಗೊ, ಕೀಚೈನುಗೊ, ಕುಸುರಿಗೊ, ಸಣ್ಣ ಸಣ್ಣ ಷೋಕೇಸು ವಸ್ತುಗೊ ಎಲ್ಲವೂ ಸಿಕ್ಕುತ್ತಾಡ.
ಎಲ್ಲವೂ ಚೈನಾದ್ದಡ.
ಬಂಡಾಡಿಅಜ್ಜಿಯ ಕರಡಿಗೆ ಇನ್ನೂ ಗಟ್ಟಿಯೇ ಇದ್ದು, ಆದರೆ ಈ ವಸ್ತುಗೊ ಒಂದು ವಾರ ಕೈಲಿ ಒಳಿಗೋ?!
~
ತರವಾಡುಮನೆಲಿ ಪೋನು ಇದ್ದು; ಅಂದಿಂದಲೇ.
ಹಳೆಕಾಲದ ಕರಕರ ತಿರುಗುಸಿ ಮಾಡ್ತ ನಮುನೆ ಪೋನುದೇ ಇದ್ದು.
ಎಷ್ಟು ಒರಿಶ ಆತೋ ಅದಕ್ಕೆ- ಎರಡೇ ನಂಬ್ರ ಇಪ್ಪ ಕಾಲಲ್ಲೇ ಇದ್ದತ್ತು! ಆ ಪೋನಿಂಗೆ ಆ ಕಾಲಲ್ಲಿ ಐನ್ನೂರು ರುಪಾಯಿ ಅಡ.
ಶಾಂಬಾವನ ಕೈಲಿ ಐಪೋನು ಇದ್ದು; ಅದಕ್ಕೊಂದು ಹತ್ತು ನಂಬ್ರದ ಮೊಬೈಲು ನಂಬ್ರ.
ಪೋನಿನ ಮುಟ್ಟಿಮುಟ್ಟಿ ಮಾತಾಡುಸಲೆ ಆವುತ್ತಾಡ; ಓದಲೆ ಎಡಿತ್ತಡ; ಬರವಲೆ ಎಡಿತ್ತಡ; ಪದ ಹೇಳುಲೆ ಎಡಿತ್ತಡ, ಪದ ಕೇಳುಲೆ ಎಡಿತ್ತಡ;  – ಇಪ್ಪತ್ತಾರು ಸಾವಿರ ಅಡ.
ಚೈನಾದ್ದುದೇ ಸುಮಾರು ನಮುನೆ ಮೊಬೈಲುಗೊ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಒಂದುಸಾವಿರ, ಎರಡುಸಾವಿರ ರುಪಾಯಿ! ಅಷ್ಟೇ.
ಮರದ ಇಬ್ರಾಯಿಯ ಮಗ ರಪೀಕು ಇದ್ದಲ್ಲದೋ, ಅದರ ಕೈಲಿಯೂ ಒಂದು ಮೊಬೈಲು ಇದ್ದು, ಶಾಂಬಾವನ ಮೊಬೈಲಿನ ಎಲ್ಲಾ ಗುಣಂಗೊ ಇದ್ದಾಡ, ಆದರೆ ಎಷ್ಟು ದಿನ ಬಕ್ಕೋ, ರಪೀಕಿಂಗೂ ಗೊಂತಿಲ್ಲೆಡ!
~
ಬೂದಿಪ್ಪಳ್ಳಲ್ಲಿ ರೇಡ್ಯ ಇದ್ದು. ಇಂದಲ್ಲ, ನಿನ್ನೆ ಅಲ್ಲ – ಮಾಷ್ಟ್ರುಮಾವ° ಸಣ್ಣ ಇಪ್ಪಾಗಳೇ ಇದ್ದು.
ಆ ಊರಿಂಗೇ ಹೊಸ ಶುದ್ದಿಗೊ ಸಿಕ್ಕಿಗೊಂಡಿದ್ದದು ಅಲ್ಲಿಂದಲೇ ಅಡ.
ಆ ಕಾಲಲ್ಲಿ ಅದಕ್ಕೆ ಕ್ರಯ ಇನ್ನೂರು ರುಪಾಯಿ ಅಡ; ಈಗ ಹತ್ತರತ್ತರೆ ಇಪ್ಪತ್ತುಸಾವಿರ ಇದ್ದ ನಮುನೆ! ಅದಿರಳಿ!!
ಬಂಡಾಡಿಅಜ್ಜಿಯ ಹೊಸ ರೇಡ್ಯಕ್ಕೆ ಈಗ ಐದಾರೊರಿಶ ಕಳಾತು, ಅದರ ತೆಗವಗ ಭರ್ತಿ ಆರುನೂರು ರುಪಾಯಿ ಅಡ!
ಚೈನಾದ್ದುದೇ ಸುಮಾರು ನಮುನೆ ರೇಡ್ಯಂಗೊ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಇಪ್ಪತ್ರುಪಾಯಿ, ಐವತ್ರುಪಾಯಿ, ನೂರ್ರುಪಾಯಿ! ಅಷ್ಟೇ.
ಎಷ್ಟು ದಿನ ಪದ್ಯ ಹೇಳ್ತೋ – ದೇವರಿಂಗೇ ಗೊಂತು.
~
ಇದಿಷ್ಟೇ ಅಲ್ಲದ್ದೆ, ನಿತ್ಯ ಬಳಕೆ ಮಾಡ್ತ ನೀರಿನ ಕುಪ್ಪಿ, ಕೀ ಚೈನು, ರಿಂಗು, ಪ್ಲೇಷ್ಟಿಕು ವಸ್ತುಗೊ, ಮಕ್ಕಳ ಆಟದ ವಸ್ತುಗೊ, ಟ್ಯೂಬು ಲೈಟುಗೊ, ಪೆನ್ನು, ಪೆನ್ಸೀಲು, ಕೇಲ್ಕೇಟರು – ಎಲ್ಲವುದೇ!!
ಈಗಂತೂ – ಯೇವದೇ ಜಾತ್ರೆಗೆ ಹೋಗಲಿ, ಎಲ್ಲೇ ಸಂತೆಗೆ ಹೋಗಲಿ, ಆ ಊರಿನ ವಿಶೇಷತೆಗೊ ಕಾಂಬಲೆ ಸಿಕ್ಕುತ್ತಿಲ್ಲೆ; ಬದಲಾಗಿ, ಚೀನಾ ಸೆಟ್ಟುಗೊ, ಚೀನಾ ಲೈಟುಗೊ, ಚೀನಾ ಬೆಟ್ರಿಗೊ, ಚೀನಾ ಟೋರ್ಚುಗೊ, ಚೀನಾ ರೇಡ್ಯಂಗೊ, ಚೀನಾ ಮೊಬೈಲುಗೊ.
ಈಚದಕ್ಕೆ ಒಂದು ಸಾವಿರ ಇದ್ದರೆ ಚೀನಾದ್ದಕ್ಕೆ ಬರೇ ನೂರು ರುಪಾಯಿ!
ಪೈಶೆಯ ಮೋರೆ ನೋಡ್ತೋರು ಅದರ ತೆಗವದಿದ್ದು; ಆದರೆ ನಾಕು ದಿನಲ್ಲಿ ಹಾಳಪ್ಪಗ ಇಡ್ಕುಲೂ ಅಲ್ಲ, ಬಿಡ್ಳೂ ಅಲ್ಲದ್ದೆ ಕಸವು ತುಂಬುಸುತ್ತವು.
ಕ್ರಯ ಕಮ್ಮಿ ಆತು ಹೇಳಿ ಜೆನಂಗಳೂ ಹೋಗಿ ಹೋಗಿ ಚೈನಾ ಸೆಟ್ಟಿನ ತೆಕ್ಕೊಳ್ತವು, ಆದರೆ ಅದರ ಕ್ರಯಕ್ಕೆ ತಕ್ಕ ಬಾಳತನ ಮಾಂತ್ರ ಬಕ್ಕಷ್ಟೆ; ನಾಕೇ ದಿನಲ್ಲಿ ಹಾಳಾವುತ್ತು.
ಅದರಿಂದ ರಜ್ಜ ಕ್ರಯ ಕೊಟ್ಟು, ಗಟ್ಟಿಮುಟ್ಟು ಇಪ್ಪದಾರ ತೆಗದರೆ ಆ ಪಾಲು ಒಳ್ಳೆ ಬಾಳ್ವಿಕೆ ಬತ್ತು – ಹೇಳಿದ°.
~
ಅಪ್ಪಡ, ಅವರ ದೇಶದ ಕಸವುಗಳ ಉಪಾಯಲ್ಲಿ ಇಡ್ಕುತ್ತ ಕೆಣಿ ಅಡ ಇದು.
ಹೀಂಗೆ ಎಂತಾರು ಲೋಟಣೆ ಮಾಡಿ, ಆ ಕಸವಿನ ಚೆಂದಕೆ ಪೇಕು ಮಾಡಿರೆ ಆರಾರು ಪಾಪದ ದೇಶಂಗೊ ತೆಕ್ಕೊಂಡು ಹೋವುತ್ತಿದಾ; ಅವರಲ್ಲಿ ಅಷ್ಟು ಕಸವು ಕಾಲಿ ಆತಿಲ್ಲೆಯೋ!
ಬೇಕಾರೆ ನೋಡಿ ನಿಂಗೊ:
ಚೀನಾಕ್ಕೇ ಹೋದರೆ ಅಲ್ಲಿ ಈ ನಮುನೆ ಕಸವುಗೊ ಸಿಕ್ಕುತ್ತಿಲ್ಲೇಡ; ಅವಕ್ಕೇ ಬೇಡದ್ದು ನವಗೆ ಬೇಕೋ? ಹೇಳ್ತದು ಕೊಳಚ್ಚಿಪ್ಪುಬಾವನ ವಾದ.
ಅಂದು ಚೀನಾಕ್ಕೆ ಹೋಗಿ ಬಂದ ಗಣೇಶಮಾವಂದೇ ಇದೇ ಅಭಿಪ್ರಾಯ ಹೇಳಿದ್ದದು ನೆಂಪಾತೊಂದರಿ.
~
ಬಸ್ಸು ಹೋಗಿಂಡೇ ಇದ್ದತ್ತು.
ಮಾರ್ಗದ ಕರೆಲಿ ಎಲ್ಲ ಅಂಗುಡಿಗಳಲ್ಲೂ ಕಟ್ಟ ಕಟ್ಟ ಪ್ಲೇಷ್ಟಿಕು ಧ್ವಜ ಮಡಿಕ್ಕೊಂಡಿತ್ತು.
ಜೆನಂಗೊ ಅದರ ಮರುಳು ಕಟ್ಟಿ ತೆಗವಲೆ. ಛೆ
ಕಿಟುಕಿ ಹೆರ ನೋಡಿಗೊಂಡೇ ಕೂದೆ..
– ಮಾಡಾವು ಆಗಿ ಬೆಳ್ಳಾರೆ ಕಳುದು ಕಲ್ಮಡ್ಕವೇ ಎತ್ತಿತ್ತು.
ಜೋರು ಮಳೆಬಂದು ಬಿಟ್ಟದಷ್ಟೇ ಆದ ಕಾರಣ ಬಷ್ಟೇಂಡಿಂದ ನೆಡವಲೆ ತೊಂದರೆ ಇಲ್ಲೆ.
ಒಪ್ಪಣ್ಣಂಗೂ ಕಲ್ಮಡ್ಕ ಅರಡಿಯದ್ದೇನಿಲ್ಲೆ!
ಅಲ್ಲಿ ಮಜಲುಕೆರೆ, ಉಡುವೆಕೋಡಿ, ಕಾಯಾರ, ಕುಂಞಿಹಿತ್ಲು, ತಿಪ್ಪಣಕಜೆ, ಕೊಳ್ಚಿಪಿ – ಎಲ್ಲವೂ ಒಪ್ಪಣ್ಣಂಗೆ ಅರಡಿಗಾದ ಜಾಗೆಯೇ!
ಈಗ, ಬಷ್ಟೇಂಡಿಂದಲೂ ಮುಂದೆ, ಅದೇ ಮಾರ್ಗಲ್ಲಿ ಮುಂದರುದರೆ ಕಲ್ಲಸಂಕ ಸಿಕ್ಕುತ್ತು, ಅದನ್ನೂ ದಾಂಟಿ ಚಿರ್ಪಿನ ಕಾಡಿಲೇ ಮುಂದರುದರೆ ಕಲ್ಮಡ್ಕನಂತನ ಮನೆ ಎತ್ತಿತ್ತು.
~
ಕೊಳಚ್ಚಿಪ್ಪುಬಾವನ ಕೈಲಿ ಮಾತಾಡಿಗೊಂಡೇ ನೆಡದೆ.
ಹಾಂಗೆ ಈಗ ಸ್ವಾತಂತ್ರ ಸಮಯನೋಡಿ ಚೀನಾದವರ ಪ್ಲೇಷ್ಟಿಕು ಕಸವಿಂಗೆ ನಮ್ಮ ಧ್ವಜದ ಬಣ್ಣ ಕೊಟ್ಟು ಮೂರುಕಾಸಿಂಗೆ ಮಾರ್ತವಡ.
ದಳ್ಳಾಳಿಗೊಕ್ಕೆ ಒಳ್ಳೆತ ಪೈಸೆ ಸಿಕ್ಕುತ್ತ ಕಾರಣ ಅವುದೇ ಮರಿಯಾದಿಬಿಟ್ಟು ಮಾರಾಟಮಾಡುಸುತ್ತವಡ.
ಮಾರಾಟಮಾಡ್ತ ಇಬ್ರಾಯಿಗೆ ಲಾಭ ಜಾಸ್ತಿ ಆದ ಕಾರಣ ಅದುದೇ ಮಾರ್ತು.
ಸರಕಾರಕ್ಕೆ ಸಲ್ಲೇಕಾದ ತೆರಿಗೆ ಇಲ್ಲದ್ದೆ ಒಳ ಬತ್ತ ಕಾರಣ ಇಷ್ಟು ಕಮ್ಮಿಗೆ ನಮ್ಮ ಕೈಗೆ ಎತ್ತಿರ್ತು – ಹೇಳ್ತದು ಅವನ ಒಟ್ಟು ಅಭಿಪ್ರಾಯ.
~
ತೆಕ್ಕೊಂಬ ನಾವು ಆದರೂ ಪೈಶೆಮೋರೆ ನೋಡದ್ದೆ ಈ ನಮುನೆದರ ತೆಕ್ಕೊಳದ್ದೆ ಇದ್ದರೆ ನಮ್ಮ ದೇಶದ ವಸ್ತುಗೊಕ್ಕೆ ಬೆಂಬಲ ಸಿಕ್ಕಿ, ನಿಜವಾದ ಸ್ವಾತಂತ್ರ್ಯ ಸಿಕ್ಕುಗು.
ನಮ್ಮ ಆರ್ಥಿಕ ವೆವಸ್ತೆಯ ಹಾಳುಮಾಡಿಹಾಕಿ, ಆ ಮೂಲಕ ಉಪಾಯಲ್ಲಿ ಸೋಲುಸುತ್ತ ಬುದ್ಧಿ ಇಪ್ಪ ಚೀನಾದ ಕುತಂತ್ರವ ನಾವು ನೆಂಪಿಲಿ ಮಡುಗೆಡದೋ?
ಕಾಶ್ಮೀರದ ಗಡಿಂದ ಹಿಡುದು ಅರುಣಾಚಲ ಗಡಿ ಒರೆಂಗೂ – ಜಾಗೆ ನುಂಗಲೆ ಕಾದೊಂಡಿಪ್ಪ, ಆ ದೇಶವ ಸಂಪದ್ಭರಿತ ಮಾಡುದೆಂತಕೆ?
ನಮ್ಮ ದೇಶದೊಟ್ಟಿಂಗೆ ಕಾದಲೆ ನಾವೇ ಪೈಸೆ ಮಾಡಿಕೊಡುದೆಂತಕೆ?!
ಹಾಂಗಾಗಿ, ಚಿನ್ನವೇ ಆದರೂ – ಚೀನಾದ್ದಾದರೆ ಬೇಡ – ಹೇಳುಲೆ ಕಲಿಯೇಕು; ಹೇಳ್ತದು ಅವನ ಸಲಹೆ.
ಎಂತ ಹೇಳ್ತಿ?
~

ಈಗ ಲೋಕಪಾಲ ಹೇಳಿಂಡು ಹಜಾರೆ ಅಣ್ಣ ಡೆಲ್ಲಿಲಿ ಉಪವಾಸ ಕೂಯಿದು. ನಮ್ಮ ರಾಜಕಾರಣಿಗಳ ಪೈಸೆ ಲೆಕ್ಕ ಕೊಡ್ಳೆ ಬೇಕಾಗಿ.
ನಾಳೆ ಭಾರತಪಾಲ ಹೇಳಿಗೊಂಡು ಎಲ್ಲೋರೂ ಚೀನಾದವರ ಕೈಲಿ ಉಪವಾಸ ಕೂರೇಕಕ್ಕು,  ನಮ್ಮದೇ ಪೈಸೆ ಲೆಕ್ಕ ಕೊಡ್ಳೆ ಬೇಕಾಗಿ!!

~

ಒಂದೊಪ್ಪ: ಚೀನಾದ ಲೊಟ್ಟೆಚಿನ್ನವ ಮಾರ್ಲೆ ಕಾಸ್ರೋಡಿನ ಹಾಂಗಿರ್ತ ಊರಿನ ತೆರಿಗೆ ಕಳ್ಳಂಗಳೇ ಸರಾಪಂಗೊ. ಅಲ್ಲದೋ?

ಸೂ:

 • ಚೀನಾ ಸರಕುಗಳ ಬಗ್ಗೆ ಒಂದು ಸಣ್ಣ ಶುದ್ದಿ ಇಲ್ಲಿದ್ದು.
 • ಕೊಳಚ್ಚಿಪ್ಪುಬಾವಂಗೆ ಸಿಕ್ಕಿದ ಇನ್ನೊಂದು ಸಂಕೊಲೆ,ಭಾರತ ಚೀನಾ ಯುದ್ದಕ್ಕೆ ಸಮ್ಮಂದ ಪಟ್ಟದು: (ಇಲ್ಲಿದ್ದು)
ಚಿನ್ನದ ಚೈನೇ ಆದರೂ ಚೀನಾದ್ದಾದರೆ ಬೇಡ…!, 4.3 out of 10 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 43 ಒಪ್ಪಂಗೊ

 1. ಅಕ್ಷರದಣ್ಣ

  ಒಪ್ಪಣ್ಣ ಸುದ್ದಿ ತುಂಬಾ ಚನ್ನಾಗಿ ಮೂಡಿ ಬಂದಿದೆ…. ವಾಸ್ತವವಾಗಿ ಅಗ್ಗದ ಹಾದಿಯಷ್ಟು ತುಟ್ಟಿಯಾದ ಸಂಗತಿ ಇನ್ನೊಂದಿಲ್ಲ ಎಂಬುದು ನಮಗಿನ್ನೂ ಅರ್ಥವಾಗುತ್ತಿಲ್ಲ. ಅಗ್ಗದ ಆಸೆಗೆ ಗೊಬ್ಬರ ಕೊಂಡರು ಎನ್ನುವ ಗಾದೆ ಇದೆ. ಅದರಂತೆ ಅಗ್ಗದ ಆಸೆಗಾಗಿ ಚೀನಾದ ವಸ್ತುಗಳನ್ನು ಖರೀದಿಸಿ ನಮ್ಮ ಇಡೀ ಬದುಕನ್ನೇ ಗೊಬ್ಬರಮಯವಾಗಿ ಮಾಡಿಕೊಳ್ಳುತ್ತಾ ಹೊರಟಿದ್ದೇವೆ. ಇದಕ್ಕೆ ಕಾರಣ ಒಂದೇ. ನಮಗೆ ಬದುಕಿನಲ್ಲಿ ನಿಜವಾಗಿ ಬೆಲೆಯುಳ್ಳ ವಸ್ತುಗಳಾವುವೆಂಬುದೇ ತಿಳಿದಿಲ್ಲ. ಎಳೆಯ ಮಗುವಿನ ಕೈಯಲ್ಲಿ ಮಿಠಾಯಿ ಕೊಟ್ಟು ಅದರ ಕೊರಳಲ್ಲಿನ ಚಿನ್ನದ ಸರ ಕೇಳಿದಲ್ಲಿ ಅದು ಸಂತೋಷವಾಗಿ ತೆಗೆದುಕೊಡುತ್ತದೆ. ನಮ್ಮ ಸ್ಥಿತಿಯೂ ಹಾಗೆಯೇ ಆಗಿದೆ. ಅಗ್ಗದ ಪದವಿಗಾಗಿ, ಪ್ರತಿಷ್ಠೆಗಾಗಿ, ಹಣಕ್ಕಾಗಿ, ಅಧಿಕಾರಕ್ಕಾಗಿ ನಮ್ಮ ಗುಣಸಂಪತ್ತನ್ನು, ನಮ್ಮ ರಾಷ್ಟ್ರೀಯ ಸ್ವಾವಲಂಬನೆ ಸ್ವಾತಂತ್ರ್ಯಗಳನ್ನು ಮಾರಿಕೊಳ್ಳಲು ನಾ ಮುಂದು ತಾ ಮುಂದು ಎಂದು ಕೈ ಚಾಚಿ ನಿಂತಿದ್ದೇವೆ. ಈ ಪರಿಣಾಮದಿಂದಲೇ ಚೀನಾ ವಸ್ತುಗಳು ನಮ್ಮ ದೇಶದಲ್ಲಿ ಮಾರಾಟವಾಗುತ್ತಿವೆ.
  ಇಂಥ ಸ್ಥಿತಿಯಲ್ಲಿ ನಮಗೆ ಚಾರಿತ್ರ್ಯದ, ಸ್ವಾತಂತ್ರ್ಯದ ಬೆಲೆಯನ್ನು ತಿಳಿಸಿಕೊಡುವವರು ಯಾರು? ಲೋಕದಲ್ಲಿ ಅದಕ್ಕೆ ಸರಿಗಟ್ಟುವ ಅಮೂಲ್ಯ ಸಂಗತಿ ಇನ್ನೊಂದಿಲ್ಲ ಎಂಬುದನ್ನು ಕಲಿಸಿಕೊಡುವವರು ಯಾರು? ಸ್ವಾತಂತ್ರ್ಯದ ಆ ಉಚ್ಚ ಬೆಲೆಯನ್ನು ತೆರಲಾರದ ಜನ ಸ್ವಾತಂತ್ರ್ಯಕ್ಕೆ ಅಪಾತ್ರರಾಗುತ್ತಾರೆ, ಎರವಾಗುತ್ತಾರೆ ಎನ್ನುವ ಕಠೋರ ಸತ್ಯವನ್ನು ಜನಕ್ಕೆ ಮನಮುಟ್ಟಿಸುವವರು ಯಾರು? ಹಿಂದೆ ಇದೇ ರೀತಿ ಆಂಗ್ಲರ ಹಿಂದೆ ಸಾಗಿದ ನಮ್ಮ ಜನರು ಕೊನೆಗೆ ದೇಶವನ್ನೇ ಮಾರಿಕೊಳ್ಳುವ ಹಂತಕ್ಕೆ ಬಂದರು ಆ ತಪ್ಪನ್ನು ಮತ್ತೆ ಮಾಡಬಾರದಲ್ವಾ? ಸ್ವಾತಂತ್ರ್ಯಹರಣದ ಈ ಹಾದಿಯಲ್ಲಿ ಇನ್ನಾದರೂ ಧಾವಿಸದಂತೆ ಜನತೆಯ ಕಣ್ಣೆದುರಲ್ಲಿ ಚರಿತ್ರೆಯ ಕೆಂಪು ದೀಪ ಹಿಡಿಯುವವರು ಯಾರು? ಮತ್ತೆ ಜಾಗೃತಿಯನ್ನು ಯಾರು ಮಾಡುವುದು? ಈ ಪ್ರಯಾಣ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು.

  [Reply]

  VA:F [1.9.22_1171]
  Rating: +2 (from 2 votes)
 2. ಶ್ರೀಅಕ್ಕ°

  ಒಪ್ಪಣ್ಣಾ,
  ಅಂದು ಮಾಡಿದ್ದು ಚೀನಾ ಭಾರತದ ಮೇಲೆ ದಂಡಯಾತ್ರೆ ಮಾಡ್ಲೆ ಹೆರಟದು ಹೇಳಿದರೆ ಧಾಳಿ ಮಾಡಿದ್ದದು… ನಂಬಿಸಿ ಮೋಸ ಮಾಡಿದ್ದದು.. ಇಂದು ಮಾಡ್ತಾ ಇಪ್ಪದೂ ದಂಡ ಯಾತ್ರೆಯೇ!! ಅವರಲ್ಲಿಯಾಣ ದಂಡ ವಸ್ತುಗಳ ಯಾತ್ರೆ ಕಳ್ಸುತ್ತಾ ಇಪ್ಪದು ನಮ್ಮಲ್ಲಿಗೆ! ಅದುದೇ ಲಾಯ್ಕಿದ್ದು ಹೇಳಿ ನಂಬಿಸಿ ಮೋಸ ಮಾಡುದು..
  ನಾವು ಎಲ್ಲೋರನ್ನೂ, ಎಲ್ಲವನ್ನೂ ನಂಬುದಲ್ಲದಾ? ನವಗೆ ಸತ್ಯ ಸಂಗತಿ ಗೊಂತಪ್ಪಗ ಸುಮಾರು ತಡವಾಗಿರ್ತು. ನಾವು ಸುಮಾರು ಕಳಕ್ಕೊಂಡಿರ್ತು, ಅದು ಭೂಮಿಯೇ ಆದಿಕ್ಕು, ವಸ್ತುಗಳೇ ಆದಿಕ್ಕು ಅಥವಾ ವಿಶ್ವಾಸವೇ ಆದಿಕ್ಕು. ಕಳಕ್ಕೊಂಡರೆ ಹೋತಲ್ಲದಾ?

  ಚೀನಾಂದ ಬಪ್ಪ ವಸ್ತುಗಳಲ್ಲಿ ಮಕ್ಕಳ ಆಕರ್ಷಣೆ ಮಾಡುವಂಥ ತುಂಬಾ ವಿಷಯಂಗ ಇದ್ದು. ಎಲ್ಲವೂ ಆರೋಗ್ಯಕ್ಕೆ ಹಾನಿ ಕೊಡುವಂಥದ್ದೆ!! ಶಾಲೆಯ ಹತ್ತರೆ ಇಪ್ಪ ಎಲ್ಲಾ ಅಂಗಡಿಗಳಲ್ಲಿ ಸಿಕ್ಕುತ್ತು ತುಂಬಾ ಕಡಮ್ಮೆಗೆ! ಕೆಲವು ಪ್ರಾಣಿಗಳ ಪ್ರತಿಕೃತಿ, ಸಣ್ಣ ಸಣ್ಣ ಸಾಸಮೆ ಕಾಳಿನ ನಮುನೆ ಗೋಲಿಗ.. ಇದರ ನೀರಿಲಿ ಹಾಕಿ ಮಡಗಿದರೆ ಸುಮಾರು ದೊಡ್ಡ ಆಗಿ ಚೆಂದ ಕಾಣ್ತು ಹೇಳಿ ಮಕ್ಕೋ ತಂದು ನೀರಿಲಿ ಹಾಕಿ ಮಡಗಿ ಕೊಶಿ ಪಡ್ತವು. ಕೆಲವು ದಿನ ಅಪ್ಪಗ ಅದು ಹಾಳಾವುತ್ತು.. ನೀರಿಲಿ ಕರಗುತ್ತುದೆ! ಅಂಬಗ ಅದರ ನಾವು ಚೆಲ್ಲಿ ಅಪ್ಪಗ ನಮ್ಮ ಮಣ್ಣೂ ಹಾಳಾವುತ್ತು. ಮಕ್ಕೋ ವಾಪಾಸು ಇನ್ನೊಂದು ತತ್ತವು. ನಾವು ಹೇಳಿದರೆ ಅವಕ್ಕೆ ಅರ್ತ ಆವುತ್ತೋ? ಅಂಗಡಿಯವ್ವು, ಬಾಕಿ ಮಕ್ಕೋ ಹೇಳಿ ಅಪ್ಪಗ ಅದುವೇ ಸರಿ ಹೇಳಿ ಕಾಣ್ತು. (ಅಂತೂ ರಜ ಸಮಯ ಕಳುದಪ್ಪಗ ಹೇಳಿ ಹೇಳಿ ಪುಣ್ಯಕ್ಕೆ ತಪ್ಪದು ನಿಂದತ್ತು ಎಂಗಳಲ್ಲಿ.)

  ಒಪ್ಪಣ್ಣ, ನೀನು ಹೇಳಿದ್ದು ಸರಿಯೇ! ಕಡಮ್ಮೆಗೆ ಆಶೆ ಮಾಡ್ಲೆ ಹೋಗಿ ನಾವು ಸುಮಾರು ನಷ್ಟ ಮಾಡಿಗೋಳ್ತು. ವಸ್ತುಗಳ ತೆಗವಾಗ ಎಷ್ಟು ಆಲೋಚನೆ ಮಾಡಿದರೂ ಸಾಕಾವುತ್ತಿಲ್ಲೇ. ನಮ್ಮ ದೇಶವ ಅವರ ಕಸದ ಬುಟ್ಟಿ ಮಾಡ್ತಾ ಇಪ್ಪ ಆ ಸಣ್ಣ ಕಣ್ಣಿನೋರ ಈ ಅದೃಶ್ಯ ಧಾಳಿಯ ನಾವೆಲ್ಲ ಸೇರಿ ತಡೆಯೆಕ್ಕೆ! ಈಗ ಒಗ್ಗಟ್ಟಾಯೆಕ್ಕೆ!! ನಮ್ಮ ದೇಶವ ನಾನಾ ನಮುನೆಲಿ ನುಂಗುಲೆ ನೋಡುವ ಚೀನಾಕ್ಕೆ ಈಗ ಮುಖಭಂಗ ಮಾಡೆಡದಾ ನಾವು?
  ಒಂದೊಪ್ಪ ಲಾಯ್ಕಾಯಿದು.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಶ್ರೀ ಅಕ್ಕ ಹೇಳಿದ್ದು ಸರೀ ಇದ್ದು, ’ದಂಡ ವಸ್ತುಗಳ ಯಾತ್ರೆ’ ಹೇಳಿ. ನವಗೆ ಇನ್ನಾದರೂ ಎಚ್ಚರಿಕೆ ಆಯಕ್ಕು :)

  [Reply]

  VA:F [1.9.22_1171]
  Rating: 0 (from 0 votes)
 3. ಶಾಂತತ್ತೆ

  oppanna bhari laaikada shuddi.
  nammalli ella sampattu heralavagi ippaga chainaddu entha maha.
  chainada stikkaringe astondu bele enthake.
  nammalliye desha istu sampadbharitha aagi ippaga
  bere deshada sottina mele moha enthake.
  navge echharike buddhi iddare aathu.
  kalladaru mulladaru navage nammade akku.
  antha swabhimana nammalli irali.

  [Reply]

  VA:F [1.9.22_1171]
  Rating: 0 (from 0 votes)
 4. ಓಣಿಯಡ್ಕ ಕಿಟ್ಟಣ್ಣ
  ಓಣಿಯಡ್ಕ ಕಿಟ್ಟಣ್ಣ

  ಚೀನಾಲ್ಲಿ ಮಕ್ಕೊಗೆ ಅರ್ಧ ದಿನ ಮಾತ್ರ ಶಾಲೆ ಅಡ.. ಉಳುದ ಅರ್ಧ ದಿನ ಇಂತ ಸಾಮಾನು ತಯಾರುಸುವ ಟ್ರೈನಿಂಗ್.. ಅವಕ್ಕೆ ಸಂಬಳ ಇಲ್ಲೆ ಇದಾ.. ಹಾಂಗಾಗಿಯೂ ಅವರ ಖರ್ಚು ಕಮ್ಮಿ ಆವ್ತಡ..
  ಸುದ್ದಿ ಲಾಯಿಕಾಯಿದು..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ರಾಜಣ್ಣಕಾವಿನಮೂಲೆ ಮಾಣಿಶ್ಯಾಮಣ್ಣಬೊಳುಂಬು ಮಾವ°ಉಡುಪುಮೂಲೆ ಅಪ್ಪಚ್ಚಿಪೆರ್ಲದಣ್ಣಮಾಷ್ಟ್ರುಮಾವ°ಮುಳಿಯ ಭಾವನೀರ್ಕಜೆ ಮಹೇಶಒಪ್ಪಕ್ಕvreddhiಡಾಮಹೇಶಣ್ಣವಿದ್ವಾನಣ್ಣಗಣೇಶ ಮಾವ°ವೇಣಿಯಕ್ಕ°ಪಟಿಕಲ್ಲಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಅಡ್ಕತ್ತಿಮಾರುಮಾವ°ಸರ್ಪಮಲೆ ಮಾವ°ಜಯಶ್ರೀ ನೀರಮೂಲೆಶಾಂತತ್ತೆದೇವಸ್ಯ ಮಾಣಿಚೆನ್ನಬೆಟ್ಟಣ್ಣವಾಣಿ ಚಿಕ್ಕಮ್ಮಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ