Oppanna.com

ಚಿನ್ನದ ಚೈನೇ ಆದರೂ ಚೀನಾದ್ದಾದರೆ ಬೇಡ…!

ಬರದೋರು :   ಒಪ್ಪಣ್ಣ    on   19/08/2011    43 ಒಪ್ಪಂಗೊ

ಕಲ್ಮಡ್ಕಲ್ಲಿ ಒರಿಶಾವಧಿ ಪೂಜೆ, ಮೊನ್ನೆ.
ಅಮೈಲಿಯೂ ಅದೇ ದಿನ ಪೂಜೆ ಆದರೂ, ಕಲ್ಮಡ್ಕನಂತ ಅಮೈ ಅನಂತಣ್ಣನಿಂದಲೂ ಆರುತಿಂಗಳ ಮದಲೇ ಹೇಳಿಕೆ ಮಾಡಿದ್ಸ°!
ಹೋಗದ್ದೆ ಕಳೀಯ!
ಅಮೈಲಿ ದುರ್ಗಾಪೂಜೆ ತುಂಬ ವಿಶೇಷ ಅಡ, ನೋಡಿದೋರು ಹೇಳ್ತವು.
ಒಪ್ಪಣ್ಣಂಗೆ ಇನ್ನೂ ಅದರ ನೋಡಿ ಅರಡಿಯ; ನೋಡಿದ ಮೇಗೆಯೇ ಆ ಬಗ್ಗೆ ಹೇಳುವೊ ಆಗದೋ..

ಕಲ್ಮಡ್ಕಲ್ಲಿಯೂ ದುರ್ಗಾಪೂಜೆ ಇದ್ದು. ಆದರೆ ಅದರೊಟ್ಟಿಂಗೆ ಉಂಡೆಪಚಾದ ಪೂಜೆಯೂ ಇದ್ದು!
ಬೋಚಬಾವ° ಮೊನ್ನೆಯೇ ಹೆರಟುನಿಂಬಲೆ ಒಂದು ಕಾರಣ ಇದುದೇ ಆಗಿದ್ದತ್ತು.
~
ಮದಲೇ ಅತ್ತಿತ್ಲಾಗಿ ಮಾತಾಡಿಗೊಂಡ ನಮುನೆ ಬೈಲಿನ ಕೆಲವು ಜೆನ ಅಲ್ಲಿ ಸಿಕ್ಕುದು ಹೇಳಿ ನಿಗಂಟಾತು.
ಪೂಜೆದಿನ ಉದಿಯಪ್ಪಗ ಸುಬಗಣ್ಣ, ಚುಬ್ಬಣ್ಣ ನೇರವಾಗಿ ಅಲ್ಲಿಗೇ ಬಂದವು; ಅಜ್ಜಕಾನಬಾವ° ಹೇಂಗೂ ಮುನ್ನಾಣದಿನಂದಲೇ ಅಲ್ಲಿ ಅಂಬೆರ್ಪಿಲಿ ಇರ್ತ ಅನ್ನೇ!
ಬಾಲಣ್ಣಂದೇ ಗಣೇಶಮಾವಂದೇ ಮದ್ಯಾಂತಿರುಗಿ ಬಪ್ಪದು ಹೇಳಿ ಗೊಂತಾತಿದ.
ನೆಗೆಮಾಣಿ, ಬೋಚಬಾವ°, ಪೆಂಗಣ್ಣಂಗೆ ದಾರಿ ಹೇಳೇಕಾದ ಅಗತ್ಯವೇ ಇಲ್ಲೆ – ಆರನ್ನಾರು ಹಿಡುದು, ಒಟ್ಟಿಂಗೆ ನೇತುಗೊಂಗು, ಪೂಜೆಗಪ್ಪಗ ಎತ್ತುಗು. ಅದಿರಳಿ.
ಹಾಂಗಾಗಿ, ಹೋಪಗಳೇ ಒಪ್ಪಣ್ಣಂಗೆ ಸಂಗಾತಕ್ಕೆ ಆರಾರು ಸಿಕ್ಕುಗೋ – ಹೇಳಿ ವಿಚಾರ ಮಾಡುವಗ ನೆಂಪಾದ್ದೇ ನಮ್ಮ ಕೊಳಚ್ಚಿಪ್ಪುಬಾವ°ನ!
~
ಮಯಿಸೂರು, ಪುತ್ತೂರು, ಕೊಳಚ್ಚಿಪ್ಪು, ಮಾಡಾವು – ಹೇಳಿ ಅಂಬಗಂಬಗ ಅಂಬೆರ್ಪಿಲಿ ಇಪ್ಪ ಜವ್ವನಿಗ ಅಲ್ಲದೋ ನಮ್ಮ ಕೊಳಚ್ಚಿಪ್ಪುಬಾವ°! ಈಗೀಗ ಅವನ ಮಾತಾಡುಸಿಕ್ಕಲೂ ಎಡಿಯ, ಮೂರೊತ್ತೂ ಅಂಬೆರ್ಪೇ.
ಒಂದು ಪೋನು ಇದ್ದು ಕೊಳಚ್ಚಿಪ್ಪುಬಾವನ ಕೈಲಿ – ಯೇವತ್ತೂ ಬೆಶಿ!
ಬಿಲ್ಲು ಬಂದ ಎರಡುದಿನ ಕೊಳಚ್ಚಿಪ್ಪು ಅತ್ತೆ ಬೆಶಿ – ಹೇಳಿ ನೆಗೆಮಾಣಿ ನೆಗೆಮಾಡ್ಳಿದ್ದು! 😀
ಅದಿರಳಿ, ಆ ವಿಶಯ ನವಗೆಂತಕೆ, ಅಲ್ಲದೋ! 😉
~
ಉದಿಯಪ್ಪಗ ಒಂಬತ್ತೂವರೆಗೆ ಪುತ್ತೂರು ಬಷ್ಟೇಂಡಿಂದ ಕಲ್ಮಡ್ಕ ಬಸ್ಸು ಹೆರಡ್ತು, ಅದರಿಂದ ಹತ್ತು ನಿಮಿಷ ಮದಲೇ ಎತ್ತಿಗೊಳೇಕು – ಹೇಳಿತ್ತಿದ್ದ° ಮೊನ್ನೆ ಮಾತಾಡುವಗ.
ಏಳುಗಂಟೆ ಷ್ಟೇಟುಬಸ್ಸಿಂಗೆ ಹೆರಟು, ಒಂಬತ್ತೂಕಾಲಕ್ಕೆ ನಾವು ಪುತ್ತೂರು ಬಷ್ಟೇಂಡಿಲಿ; ಕೊಳಚ್ಚಿಪ್ಪುಬಾವ° ಬತ್ತನಷ್ಟೆ!
ಕೊಳಚ್ಚಿಪ್ಪುಬಾವ° ಬಾರದ್ದೆ ಬಸ್ಸಿಂಗೆ ಹತ್ತಲೆ ಧೈರ್ಯ ಇಲ್ಲೆ ನವಗೆ!
– ಪಕ್ಕನೆ ಕಂಡೇಗ್ಟ್ರ ’ದೂರ?’ ಹೇಳಿ ಕೇಳಿರೆ ಪೈಶೆಕೊಟ್ಟಿಕ್ಕಲೆ ಹೆದರಿ ಹೋಪದು ಒಪ್ಪಣ್ಣಂಗೆ! 😉
ಅದಕ್ಕೇ, ಒಟ್ಟಿಂಗೆ ಆರಾರು ಇದ್ದರೆ ಧೈರ್ಯ ಇದಾ.
ಬಾವ° ಬಂದವನೇ, – `ಬಸ್ಸು ಯೇವದು’ ಹೇಳಿ ನೋಡಿಕ್ಕಿ ಒಂದು ಪೇಪರು ತೆಕ್ಕೊಂಡು ಬಂದ°.
~
ಬಸ್ಸಿಂಗತ್ತಿ ಕೂದಾತು.
ಈ ಮಳೆಗೆ ಜೆನಂಗೊ ಹೆರಟಿದವಿಲ್ಲೆ ಇದಾ – ಎಲ್ಲರೂ ಮನೆ ಒಳವೇ ಇದ್ದಿದ್ದವೋ ಕಾಣ್ತು. ಬಸ್ಸು ಕಾಲಿಕಾಲಿ!
ಸಮೆಯ ಅಪ್ಪಗ ಡ್ರೈವರ ಬಂದು ಅದರ ಸೀಟಿಲಿ ಕೂದತ್ತು.
ಮಾಡಾವೂ ಬೆಳ್ಳಾರೇ ಕಲ್ಮಡ್ಕಾ – ಹೇಳಿ ನಾಕು ಸರ್ತಿ ಜೆನ ದಿನಿಗೆಳಿತ್ತು.
ಅಲ್ಲೇ ಬಷ್ಟೇಂಡಿನ ಕರೆಲಿ ಬೀಡಿ ಬಲುಗಿಂಡಿದ್ದ ಕೆಲವು ಜೆನ ಹತ್ತಿ ಕೂದುಗೊಂಡವು. ಕಾಲಿ ಇದ್ದ ಸೀಟುಗೊ ಸಾಮಾನ್ಯ ಭರ್ತಿ ಆತು.
ಬಸ್ಸು ಹೆರಟತ್ತು, ಕಂಡೆಗ್ಟ್ರ ಟಿಕೇಟು ಪೆಟ್ಟಿಗೆ ಹಿಡ್ಕೊಂಡು ಬಂತು.
ಕೊಳಚ್ಚಿಪ್ಪುಬಾವ° ಧೈರ್ಯಲ್ಲಿ ಕಲ್ಮಡ್ಕ ಎರಡು – ಹೇಳಿ ಪೈಸೆಕೊಟ್ಟ°. ನಾವು ಹತ್ತರಾಣ ಸೀಟಿಲಿ ಕೂದಂಡು ಧೈರ್ಯಕ್ಕೆ ಹೆಗಲುಕೊಟ್ಟುಗೊಂಡು ಇದ್ದತ್ತು! 😉
~

ಈ ಪಟವುದೇ ಚೀನಾಲ್ಲೇ ಪ್ರಿಂಟುಮಾಡಿದ್ದೋ ಏನೋ - ಉಮ್ಮಪ್ಪ!

ಏನೊಳ್ಳೆದು ಮಾತಾಡ್ಳೆ ಸುರು ಮಾಡಿ ಅಪ್ಪದ್ದೇ, ಪೇಪರು ಓದಲೆ ಸುರುಮಾಡಿದ ಕೊಳಚಿಪ್ಪುಬಾವ°
ಮರದಿನ ಸ್ವಾತಂತ್ರೋತ್ಸವ; ಪೇಪರಿಲಿ ಇಡೀ ಅದರದ್ದೇ ಗವುಜಿ.
ಅಲ್ಲಿ ಹಾಂಗೆ ತಯಾರಿ, ಇಲ್ಲಿ ಹೀಂಗೆ ತಯಾರಿ, ಅವರ ಸಂದರ್ಶನ, ಇವರ ಭಾಷಣ, ಎಲ್ಲ ಇದೇ ಶುದ್ದಿಗೊ.
ಮಕ್ಕೊ ಸಣ್ಣಸಣ್ಣ ಪ್ಲೇಷ್ಟಿಕು ಧ್ವಜ ಹಿಡ್ಕೊಂಡು, ಜೈಕಾರ ಹಾಕುತ್ತ ಪಟಂಗೊ, ಪ್ಲೇಷ್ಟಿಕು ಧ್ವಜ ನಿಷೇಧ ಆಯಿದು ಹೇಳಿ ಪೋಲೀಸು ಹೇಳಿದ ಶುದ್ದಿಗೊ, ಎಲ್ಲವೂ ಒಟ್ಟೊಟ್ಟಿಂಗೇ ಇದ್ದತ್ತು! ಬಾಕಿ ಇದ್ದ ರಜ್ಜ ಜಾಗೆಲಿ ಡೀವಿ ಮುಖ್ಯಮಂತ್ರಿ ಆದ ಶುದ್ದಿಗೊ.
– ಎಲ್ಲವುದೇ ತುಂಬಿ, ಪೇಪರಿಲಿ ಒಂದು ಚೂರುದೇ ಜಾಗೆ ಬಾಕಿ ಇದ್ದತ್ತಿಲ್ಲೆ! 🙂
ಆದರೆ, ಇಷ್ಟೆಲ್ಲ ಶುದ್ದಿ ಇದ್ದರೂ – ಇದೆಲ್ಲ ಶುದ್ದಿಂದಲೂ ವಿಶೇಷವಾಗಿ ಕೊಳಚ್ಚಿಪ್ಪುಬಾವನ ಕಣ್ಣಿಂಗೆ ಕಂಡದು ಒಂದು ಬೇರೆಯೇ ಇದ್ದು. ಅದೆಂತರ?
~
ನಮ್ಮ ಸ್ವಾತಂತ್ರೋತ್ಸವ ಆಚರಣೆ ಸಮಯಕ್ಕೆ ಸರೀ ಆಗಿ ಕೋಟಿಗಟ್ಳೆ ಪ್ಲೇಷ್ಟಿಕು ಧ್ವಜವ ಚೀನಾ ದೇಶ ತೆಯಾರು ಮಾಡಿದ್ದಾಡ.
ನಮ್ಮ ದೇಶದ ಮಾರುಕಟ್ಟೆಗೆ ಕಳುಸಿದ್ದಾಡ! – ಹೇಳಿ ಸಣ್ಣ ಗೆರೆಪೆಟ್ಟಿಗೆಲಿ ಇದ್ದ ಶುದ್ದಿ.
ಕೊಳಚ್ಚಿಪ್ಪುಬಾವನ ಮನಸ್ಸಿಂಗೆ ಈ ಶುದ್ದಿಯೇ ತಾಗಲೆ ಕಾರಣ ಎಂತರ?
ಅವನ ಕೈಲೇ ಕೇಳುವಗ ನಿಧಾನಕ್ಕೆ ಹೇಳಿದ°.
~
ಹೇಂಗೂ – ಒಂಬತ್ತೂವರಗೆ ಪುತ್ತೂರಿಂದ ಹೆರಟದು ಕಲ್ಮಡ್ಕ ಒರೆಂಗೆ ಪುರುಸೊತ್ತೇ ಅಲ್ಲದೋ.
ಅದಲ್ಲದ್ದೇ ಈಗ ಪುತ್ತೂರಿಂದ ಕುಂಬ್ರಒರೆಂಗೆ ಮಾರ್ಗ ಹಾಳಾಗಿ ಹೋಯಿದು.
ಏನಾರು ಮಾತಾಡದ್ರೆ ಹೊತ್ತೇ ಹೋಗ ಇದಾ. ಏನೇನಾರು ಮಾತಾಡ್ತರಿಂದ ಹೀಂಗಿರ್ಸೇನಾರು ಮಾತಾಡಿರೆ ಒಳ್ಳೇದಿದಾ!
~
ಭಾವ°, ನಿನಗೆ ಈ ಚೀನಾಂದ ಬತ್ತ ವಸ್ತುಗಳ ಬಗ್ಗೆ ಅರಡಿಗೋ – ಕೇಳಿದ° ಕೊಳಚ್ಚಿಪ್ಪುಬಾವ°.
ಹ್ಮ್, ಸಾದರ್ಣ ಗೊಂತಿದ್ದು, ಪೂರ್ತಿ ಅರಡಿಯ – ಹೇಳಿದೆ.
ಒಪ್ಪಣ್ಣ ಸಣ್ಣ ಇಪ್ಪಗಳೇ, ಚೀನಾದ ಹೀರೋ ಪೆನ್ನು – ಬಂದುಗೊಂಡಿದ್ದತ್ತು. ಶಾಯಿ ತುಂಬುಸಿ ಬರೆತ್ತ ನಿಬ್ಬಿನ ಪೆನ್ನು.
ಚಿನ್ನದ ಬಣ್ಣದ ಟೊಪ್ಪಿ ಇದ್ದಕಾರಣ ಇದಕ್ಕೆ ಚೀನಾದ್ದು ಹೇಳುದೋ ಗ್ರೇಶಿತ್ತು ನಾವು, ಸಣ್ಣ ಇಪ್ಪಾಗ!
ಮತ್ತೆ ಗೊಂತಾತು, ಅದು ದೇಶದ ಹೆಸರಿಂದಾಗಿ ಬಂದದು – ಹೇಳಿಗೊಂಡು.

ಮದಲೇ ಈ ನಮುನೆ ಪೆನ್ನುಗೊ ಇದ್ದತ್ತಾಡ ಸರಾಪಜ್ಜನ ಜೋಳಿಗೆಲಿ; ಬದಿಯೆಡ್ಕದ ಹಳಬ್ಬರು ಹೇಳುಗು.
ಬದಿಯಡ್ಕದ ಹಳೆ ಸಂಗತಿ ಕೊಳಚ್ಚಿಪ್ಪುಬಾವಂಗೆ ನೆಂಪಾತಿಲ್ಲೆ, ಆದರೆ ಈಗಾಣ ಸಂಗತಿಗೊ ಅರಡಿಗು.
ಹ್ಮ್, ಈಗ ಅಂತೂ ತುಂಬಿ ಹೋಯಿದು ಚೀನಾದ ಮಾಲುಗೊ.
ಅವು ಮರುಳುಕಟ್ಟಿ ಕಳುಸುಸ್ಸು ಮಾಂತ್ರ ಅಲ್ಲ, ನಾವು ಮರುಳುಕಟ್ಟಿ ತೆಕ್ಕೊಳ್ತುದೇ – ಹೇಳಿದ°.
ಎಂತಕೆ ತೆಕ್ಕೊಳ್ತು – ಹೇಳಿತ್ತುಕಂಡ್ರೆ, ಒಂದೇ ಕಾರಣ – ಅದರ ಕ್ರಯ ಕಡಮ್ಮೆ!

ಕ್ರಯ ಕಡಮ್ಮೆ – ಹೇಳ್ತರ ಉದಾಹರಣೆ ಮೂಲಕವೇ ವಿವರುಸಿದ°.
ಉದಾಹರಣೆಗೊ ಎಲ್ಲ ಒಪ್ಪಣ್ಣಂಗೂ ಅರಡಿವದೇ ಆದರೂ, ಅವ° ಒಂದೊಂದಾಗಿ ವಿವರಸುವಗ ಸರೀ ತಲಗೆ ಹೊಕ್ಕತ್ತು:
~
ನೆರಿಯದೊಡ್ಡಪ್ಪನ ಕೈಲಿ ಎರಡುಬೆಟ್ರಿ ಲೈಟು ಇದ್ದತ್ತು.
ಹತ್ತಿಪ್ಪತ್ತೊರಿಶ ಆತು ಆ ಲೈಟಿಂಗೆ, ಅಂದು ಒಳ್ಳೆ ಷ್ಟೀಲಿನ ಬಣ್ಣಲ್ಲಿ ಇದ್ದತ್ತು.
ಬೆಟ್ರಿ ಮುಗುದ ಹಾಂಗೆ ಬೇರೆ ಹಾಕಿಗೊಳೆಕ್ಕು. ಲೈಟಿಂಗೆ ಭರ್ತಿ – ನೂರು ರುಪಾಯಿ!
ಚೀನಾದ್ದುದೇ ಅದೇ ನಮುನೆ ಲೈಟುಗೊ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಐದ್ರುಪಾಯಿ, ಹತ್ರುಪಾಯಿ, ಇಪ್ಪತ್ರುಪಾಯಿ! ಅಷ್ಟೇ.
ಕೆಂಪಿಂದು, ಕಪ್ಪಿಂದು, ಹಗುರದ್ದು, ಉರುಟಿಂದು, ಉದ್ದದ್ದು!!
ನೆರಿಯದೊಡ್ಡಪ್ಪನ ಲೈಟು ಇಪ್ಪತ್ತೊರಿಶ ಕಳಾತು; ಈಗ ಷ್ಟೀಲಿನ ಬಣ್ಣ ಪೂರ ಹೋಗಿ, ಒಳಾಣ ಹಿತ್ತಾಳೆ ಕಾಣ್ತು.
ಆದರೆ ಚೀನಾದ ಲೈಟುಗೊ ಇಪ್ಪತ್ತು ದಿನವೂ ಬಾಳತನ ಬಾರ!
~
ಪಾರೆ ಮಗುಮಾವನ ಕೈಲಿ ಒಂದು ವಾಚು ಇದ್ದು, ಗಂಟೆನೋಡ್ಳೆ.
ಟೈಟಾನು ಕಂಪೆನಿದು, ಚರ್ಮದ ಬೆಳ್ಟಿಂದು.
ತೆಗದು ಐದಾರು ಒರಿಶ ಆತು; ಈಗಳೂ ಚೆಂದಕೆ ನೆಡೆತ್ತು; ಗಂಟೆ ನೋಡಿಕ್ಕಲೆ ಎಡಿತ್ತು.
ತೆಗವಗ ಅದರ ಕ್ರಯ ಭರ್ತಿ ಏಳುನೂರು ರುಪಾಯಿ ಇದ್ದತ್ತಾಡ!
ಚೈನಾದ್ದುದೇ ಸುಮಾರು ವಾಚುಗೊ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಐದ್ರುಪಾಯಿ, ಹತ್ರುಪಾಯಿ, ಇಪ್ಪತ್ರುಪಾಯಿ! ಅಷ್ಟೇ.
ಲೈಟಿಪ್ಪದು, ಬೆಣಚ್ಚಿಪ್ಪದು, ಶಬ್ದ ಇಪ್ಪದು – ಇನ್ನೂ ನಮುನೆದು!!
ಮಗುಮಾವನ ಕೈಲಿ ವಾಚು ಐದೊರಿಶ ಕಳಾತು. ಆದರೆ ಈ ಚೀನಾದ ವಾಚು ಐದು ದಿನ ನೆಡಗೋ?
~
ಮಾಷ್ಟ್ರುಮಾವನ ಗುರ್ತ ಹಿಡಿತ್ತದೇ ಅವರ ಕನ್ನಡ್ಕಲ್ಲಿ.
ಈಗಾಣ ಕನ್ನಡ್ಕಕ್ಕೇ ಮೂವತ್ತೊರಿಶ ಕಳಾತು. ಪಷ್ಟ್ಲಾಸು ಕನ್ನಡ್ಕದ ಕರೆ, ಕಪ್ಪು ಬಣ್ಣದ್ದು.
ಆ ಕನ್ನಡ್ಕಕ್ಕೆ ನೂರಿಪ್ಪತ್ತು ರುಪಾಯಿ ಆಯಿದಾಡ.
ಚೈನಾದ್ದುದೇ ಸುಮಾರು ಕನ್ನಡ್ಕಂಗೊ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಐದ್ರುಪಾಯಿ, ಹತ್ರುಪಾಯಿ, ಇಪ್ಪತ್ರುಪಾಯಿ! ಅಷ್ಟೇ.
ಕೆಂಪು ಕರೆದು, ಕಪ್ಪು ಬಣ್ಣದ್ದು, ನೀಲಿ ಬಣ್ಣದ್ದು… ನಾನಾ ನಮುನೆದು!
ಸುಂದರಿಯ ಮಗ ಸುಕುಮಾರ ಮೊನ್ನೆ ಜಾತ್ರೆಲಿ ತೆಗದತ್ತಾಡ, ಮೂರುದಿನ ಹಾಕಿ ಅಪ್ಪಗ ಕೆಮಿಕರೆಂದ ಕಣ್ಣಕರೆ ಒರೆಗೂ ಹುಣ್ಣಾತಡ!
~
ಬೈಲಕರೆ ಗಣೇಶಮಾವನ ಅಮ್ಮನ ಕಾಲಿಲಿ ಜೋಡು ಇದ್ದತ್ತು. ನೆಂಪಿದ್ದೋ? 😉
ಆ ಜೋಡಿನ ಹಾಕುದು ಒಂದೊರಿಶ ಆತು.
ನಿತ್ಯವೂ ತೋಟಕ್ಕೆ ಹೋಪಗ, ಹಟ್ಟಿಕರೆಲಿ ತಿರುಗುವಗ, ಅಪುರೂಪಕ್ಕೆ ಪೇಟಗೆ ಹೋಪಗ, ಜೆಂಬ್ರಕ್ಕೆ ಹೋಪಗ – ಎಲ್ಲವೂ ಅದೇ ಜೋಡು. ಕಾಂಬಲೆ ವಿಶೇಷ ಚೆಂದ ಇರ, ಆದರೆ ಕಾಲಿಂಗೆ ರಕ್ಷಣೆ ಕೊಡ್ತು.
ಅದು ಮಾಡೇಕಾದ ಕೆಲಸ ಅದುವೇ ಅಲ್ಲದೋ?
ಅದಾ, ದೊಡ್ಡಬಾವನ ಜಾಲಿಲಿ ಅದು ಒಂದರಿ ಬಾಕಿ ಆಗಿ, ಮತ್ತೆ ನೆಟ್ಟಾರು, ಅರ್ನಾಡಿ – ಎಲ್ಲ ತಿರುಗೆಂಡು ಪುನಾ ಬೈಲಕರೆಗೆ ಎತ್ತಿದ್ದು.
ಆ ಕಪ್ಪು ಜೋಡು ತೆಗವಗ ಭರ್ತಿ ಇನ್ನೂರೈವತ್ರುಪಾಯಿ ಕೊಟ್ಟಿದವಡ ಗಣೇಶಮಾವ.
ಚೈನಾದ್ದುದೇ ಸುಮಾರು ನಮುನೆ ಜೋಡುಗೊ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಹತ್ರುಪಾಯಿ, ಇಪ್ಪತ್ರುಪಾಯಿ ಐವತ್ರುಪಾಯಿ! ಅಷ್ಟೇ.
ಅಂದೊಂದರಿ ಸುಂದರಿ ಈ ಜೋಡು ತೆಗದು ಅದರ ಕಾಲಿಡೀ ಕಜ್ಜು ಆಯಿದಾಡ.
~
ಬಂಡಾಡಿಅಜ್ಜಿಯ ಕೈಲಿ ಒಂದು ಕುಂಕುಮದ ಕರಡಿಗೆ ಇದ್ದು.
ಒಂದು ಮುಷ್ಠಿಲಿ ಹಿಡಿತ್ತಷ್ಟು ದೊಡ್ಡ ಮರದ ಕರಡಿಗೆ. ಅದರ್ಲಿ ತುಂಬ ಕುಂಕುಮ ಯೇವತ್ತೂ ತುಂಬುಸುಗು.
ಅವರ ಜವ್ವನಲ್ಲಿ ಯೇವದೋ ಆಚಾರಿ ಮಾಡಿಕೊಟ್ಟದಾಡ ಆ ಕರಡಿಗೆ.
ಹಲಸಿನ ತಿರುಳುಮರಲ್ಲಿ ಭರ್ತಿ ಒಂದುದಿನದ ಆಚಾರಿಕೆಲಸ ಹಿಡುದ್ದಾಡ ಅದಕ್ಕೆ!
ಈಗಾಣ ಕಾಲಕ್ಕೆ ಹೋಲುಸಿರೆ ಇನ್ನೂರು ರುಪಾಯಿ ಮಜೂರಿ ಆತಿಲ್ಲೆಯೋ!
ಚೈನಾದ್ದುದೇ ಸುಮಾರು ನಮುನೆ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಐದ್ರುಪಾಯಿ, ಹತ್ರುಪಾಯಿ, ಇಪ್ಪತ್ರುಪಾಯಿ! ಅಷ್ಟೇ.
ಮರದ ಕರಡಿಗೆಗೊ, ಕೀಚೈನುಗೊ, ಕುಸುರಿಗೊ, ಸಣ್ಣ ಸಣ್ಣ ಷೋಕೇಸು ವಸ್ತುಗೊ ಎಲ್ಲವೂ ಸಿಕ್ಕುತ್ತಾಡ.
ಎಲ್ಲವೂ ಚೈನಾದ್ದಡ.
ಬಂಡಾಡಿಅಜ್ಜಿಯ ಕರಡಿಗೆ ಇನ್ನೂ ಗಟ್ಟಿಯೇ ಇದ್ದು, ಆದರೆ ಈ ವಸ್ತುಗೊ ಒಂದು ವಾರ ಕೈಲಿ ಒಳಿಗೋ?!
~
ತರವಾಡುಮನೆಲಿ ಪೋನು ಇದ್ದು; ಅಂದಿಂದಲೇ.
ಹಳೆಕಾಲದ ಕರಕರ ತಿರುಗುಸಿ ಮಾಡ್ತ ನಮುನೆ ಪೋನುದೇ ಇದ್ದು.
ಎಷ್ಟು ಒರಿಶ ಆತೋ ಅದಕ್ಕೆ- ಎರಡೇ ನಂಬ್ರ ಇಪ್ಪ ಕಾಲಲ್ಲೇ ಇದ್ದತ್ತು! ಆ ಪೋನಿಂಗೆ ಆ ಕಾಲಲ್ಲಿ ಐನ್ನೂರು ರುಪಾಯಿ ಅಡ.
ಶಾಂಬಾವನ ಕೈಲಿ ಐಪೋನು ಇದ್ದು; ಅದಕ್ಕೊಂದು ಹತ್ತು ನಂಬ್ರದ ಮೊಬೈಲು ನಂಬ್ರ.
ಪೋನಿನ ಮುಟ್ಟಿಮುಟ್ಟಿ ಮಾತಾಡುಸಲೆ ಆವುತ್ತಾಡ; ಓದಲೆ ಎಡಿತ್ತಡ; ಬರವಲೆ ಎಡಿತ್ತಡ; ಪದ ಹೇಳುಲೆ ಎಡಿತ್ತಡ, ಪದ ಕೇಳುಲೆ ಎಡಿತ್ತಡ;  – ಇಪ್ಪತ್ತಾರು ಸಾವಿರ ಅಡ.
ಚೈನಾದ್ದುದೇ ಸುಮಾರು ನಮುನೆ ಮೊಬೈಲುಗೊ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಒಂದುಸಾವಿರ, ಎರಡುಸಾವಿರ ರುಪಾಯಿ! ಅಷ್ಟೇ.
ಮರದ ಇಬ್ರಾಯಿಯ ಮಗ ರಪೀಕು ಇದ್ದಲ್ಲದೋ, ಅದರ ಕೈಲಿಯೂ ಒಂದು ಮೊಬೈಲು ಇದ್ದು, ಶಾಂಬಾವನ ಮೊಬೈಲಿನ ಎಲ್ಲಾ ಗುಣಂಗೊ ಇದ್ದಾಡ, ಆದರೆ ಎಷ್ಟು ದಿನ ಬಕ್ಕೋ, ರಪೀಕಿಂಗೂ ಗೊಂತಿಲ್ಲೆಡ!
~
ಬೂದಿಪ್ಪಳ್ಳಲ್ಲಿ ರೇಡ್ಯ ಇದ್ದು. ಇಂದಲ್ಲ, ನಿನ್ನೆ ಅಲ್ಲ – ಮಾಷ್ಟ್ರುಮಾವ° ಸಣ್ಣ ಇಪ್ಪಾಗಳೇ ಇದ್ದು.
ಆ ಊರಿಂಗೇ ಹೊಸ ಶುದ್ದಿಗೊ ಸಿಕ್ಕಿಗೊಂಡಿದ್ದದು ಅಲ್ಲಿಂದಲೇ ಅಡ.
ಆ ಕಾಲಲ್ಲಿ ಅದಕ್ಕೆ ಕ್ರಯ ಇನ್ನೂರು ರುಪಾಯಿ ಅಡ; ಈಗ ಹತ್ತರತ್ತರೆ ಇಪ್ಪತ್ತುಸಾವಿರ ಇದ್ದ ನಮುನೆ! ಅದಿರಳಿ!!
ಬಂಡಾಡಿಅಜ್ಜಿಯ ಹೊಸ ರೇಡ್ಯಕ್ಕೆ ಈಗ ಐದಾರೊರಿಶ ಕಳಾತು, ಅದರ ತೆಗವಗ ಭರ್ತಿ ಆರುನೂರು ರುಪಾಯಿ ಅಡ!
ಚೈನಾದ್ದುದೇ ಸುಮಾರು ನಮುನೆ ರೇಡ್ಯಂಗೊ ಬತ್ತು.
ಒಂದೇ ಮೋಡೆಲು ಅಲ್ಲ, ನಮುನೆ ನಮುನೆದು – ಬರೇ ಇಪ್ಪತ್ರುಪಾಯಿ, ಐವತ್ರುಪಾಯಿ, ನೂರ್ರುಪಾಯಿ! ಅಷ್ಟೇ.
ಎಷ್ಟು ದಿನ ಪದ್ಯ ಹೇಳ್ತೋ – ದೇವರಿಂಗೇ ಗೊಂತು.
~
ಇದಿಷ್ಟೇ ಅಲ್ಲದ್ದೆ, ನಿತ್ಯ ಬಳಕೆ ಮಾಡ್ತ ನೀರಿನ ಕುಪ್ಪಿ, ಕೀ ಚೈನು, ರಿಂಗು, ಪ್ಲೇಷ್ಟಿಕು ವಸ್ತುಗೊ, ಮಕ್ಕಳ ಆಟದ ವಸ್ತುಗೊ, ಟ್ಯೂಬು ಲೈಟುಗೊ, ಪೆನ್ನು, ಪೆನ್ಸೀಲು, ಕೇಲ್ಕೇಟರು – ಎಲ್ಲವುದೇ!!
ಈಗಂತೂ – ಯೇವದೇ ಜಾತ್ರೆಗೆ ಹೋಗಲಿ, ಎಲ್ಲೇ ಸಂತೆಗೆ ಹೋಗಲಿ, ಆ ಊರಿನ ವಿಶೇಷತೆಗೊ ಕಾಂಬಲೆ ಸಿಕ್ಕುತ್ತಿಲ್ಲೆ; ಬದಲಾಗಿ, ಚೀನಾ ಸೆಟ್ಟುಗೊ, ಚೀನಾ ಲೈಟುಗೊ, ಚೀನಾ ಬೆಟ್ರಿಗೊ, ಚೀನಾ ಟೋರ್ಚುಗೊ, ಚೀನಾ ರೇಡ್ಯಂಗೊ, ಚೀನಾ ಮೊಬೈಲುಗೊ.
ಈಚದಕ್ಕೆ ಒಂದು ಸಾವಿರ ಇದ್ದರೆ ಚೀನಾದ್ದಕ್ಕೆ ಬರೇ ನೂರು ರುಪಾಯಿ!
ಪೈಶೆಯ ಮೋರೆ ನೋಡ್ತೋರು ಅದರ ತೆಗವದಿದ್ದು; ಆದರೆ ನಾಕು ದಿನಲ್ಲಿ ಹಾಳಪ್ಪಗ ಇಡ್ಕುಲೂ ಅಲ್ಲ, ಬಿಡ್ಳೂ ಅಲ್ಲದ್ದೆ ಕಸವು ತುಂಬುಸುತ್ತವು.
ಕ್ರಯ ಕಮ್ಮಿ ಆತು ಹೇಳಿ ಜೆನಂಗಳೂ ಹೋಗಿ ಹೋಗಿ ಚೈನಾ ಸೆಟ್ಟಿನ ತೆಕ್ಕೊಳ್ತವು, ಆದರೆ ಅದರ ಕ್ರಯಕ್ಕೆ ತಕ್ಕ ಬಾಳತನ ಮಾಂತ್ರ ಬಕ್ಕಷ್ಟೆ; ನಾಕೇ ದಿನಲ್ಲಿ ಹಾಳಾವುತ್ತು.
ಅದರಿಂದ ರಜ್ಜ ಕ್ರಯ ಕೊಟ್ಟು, ಗಟ್ಟಿಮುಟ್ಟು ಇಪ್ಪದಾರ ತೆಗದರೆ ಆ ಪಾಲು ಒಳ್ಳೆ ಬಾಳ್ವಿಕೆ ಬತ್ತು – ಹೇಳಿದ°.
~
ಅಪ್ಪಡ, ಅವರ ದೇಶದ ಕಸವುಗಳ ಉಪಾಯಲ್ಲಿ ಇಡ್ಕುತ್ತ ಕೆಣಿ ಅಡ ಇದು.
ಹೀಂಗೆ ಎಂತಾರು ಲೋಟಣೆ ಮಾಡಿ, ಆ ಕಸವಿನ ಚೆಂದಕೆ ಪೇಕು ಮಾಡಿರೆ ಆರಾರು ಪಾಪದ ದೇಶಂಗೊ ತೆಕ್ಕೊಂಡು ಹೋವುತ್ತಿದಾ; ಅವರಲ್ಲಿ ಅಷ್ಟು ಕಸವು ಕಾಲಿ ಆತಿಲ್ಲೆಯೋ!
ಬೇಕಾರೆ ನೋಡಿ ನಿಂಗೊ:
ಚೀನಾಕ್ಕೇ ಹೋದರೆ ಅಲ್ಲಿ ಈ ನಮುನೆ ಕಸವುಗೊ ಸಿಕ್ಕುತ್ತಿಲ್ಲೇಡ; ಅವಕ್ಕೇ ಬೇಡದ್ದು ನವಗೆ ಬೇಕೋ? ಹೇಳ್ತದು ಕೊಳಚ್ಚಿಪ್ಪುಬಾವನ ವಾದ.
ಅಂದು ಚೀನಾಕ್ಕೆ ಹೋಗಿ ಬಂದ ಗಣೇಶಮಾವಂದೇ ಇದೇ ಅಭಿಪ್ರಾಯ ಹೇಳಿದ್ದದು ನೆಂಪಾತೊಂದರಿ.
~
ಬಸ್ಸು ಹೋಗಿಂಡೇ ಇದ್ದತ್ತು.
ಮಾರ್ಗದ ಕರೆಲಿ ಎಲ್ಲ ಅಂಗುಡಿಗಳಲ್ಲೂ ಕಟ್ಟ ಕಟ್ಟ ಪ್ಲೇಷ್ಟಿಕು ಧ್ವಜ ಮಡಿಕ್ಕೊಂಡಿತ್ತು.
ಜೆನಂಗೊ ಅದರ ಮರುಳು ಕಟ್ಟಿ ತೆಗವಲೆ. ಛೆ
ಕಿಟುಕಿ ಹೆರ ನೋಡಿಗೊಂಡೇ ಕೂದೆ..
– ಮಾಡಾವು ಆಗಿ ಬೆಳ್ಳಾರೆ ಕಳುದು ಕಲ್ಮಡ್ಕವೇ ಎತ್ತಿತ್ತು.
ಜೋರು ಮಳೆಬಂದು ಬಿಟ್ಟದಷ್ಟೇ ಆದ ಕಾರಣ ಬಷ್ಟೇಂಡಿಂದ ನೆಡವಲೆ ತೊಂದರೆ ಇಲ್ಲೆ.
ಒಪ್ಪಣ್ಣಂಗೂ ಕಲ್ಮಡ್ಕ ಅರಡಿಯದ್ದೇನಿಲ್ಲೆ!
ಅಲ್ಲಿ ಮಜಲುಕೆರೆ, ಉಡುವೆಕೋಡಿ, ಕಾಯಾರ, ಕುಂಞಿಹಿತ್ಲು, ತಿಪ್ಪಣಕಜೆ, ಕೊಳ್ಚಿಪಿ – ಎಲ್ಲವೂ ಒಪ್ಪಣ್ಣಂಗೆ ಅರಡಿಗಾದ ಜಾಗೆಯೇ!
ಈಗ, ಬಷ್ಟೇಂಡಿಂದಲೂ ಮುಂದೆ, ಅದೇ ಮಾರ್ಗಲ್ಲಿ ಮುಂದರುದರೆ ಕಲ್ಲಸಂಕ ಸಿಕ್ಕುತ್ತು, ಅದನ್ನೂ ದಾಂಟಿ ಚಿರ್ಪಿನ ಕಾಡಿಲೇ ಮುಂದರುದರೆ ಕಲ್ಮಡ್ಕನಂತನ ಮನೆ ಎತ್ತಿತ್ತು.
~
ಕೊಳಚ್ಚಿಪ್ಪುಬಾವನ ಕೈಲಿ ಮಾತಾಡಿಗೊಂಡೇ ನೆಡದೆ.
ಹಾಂಗೆ ಈಗ ಸ್ವಾತಂತ್ರ ಸಮಯನೋಡಿ ಚೀನಾದವರ ಪ್ಲೇಷ್ಟಿಕು ಕಸವಿಂಗೆ ನಮ್ಮ ಧ್ವಜದ ಬಣ್ಣ ಕೊಟ್ಟು ಮೂರುಕಾಸಿಂಗೆ ಮಾರ್ತವಡ.
ದಳ್ಳಾಳಿಗೊಕ್ಕೆ ಒಳ್ಳೆತ ಪೈಸೆ ಸಿಕ್ಕುತ್ತ ಕಾರಣ ಅವುದೇ ಮರಿಯಾದಿಬಿಟ್ಟು ಮಾರಾಟಮಾಡುಸುತ್ತವಡ.
ಮಾರಾಟಮಾಡ್ತ ಇಬ್ರಾಯಿಗೆ ಲಾಭ ಜಾಸ್ತಿ ಆದ ಕಾರಣ ಅದುದೇ ಮಾರ್ತು.
ಸರಕಾರಕ್ಕೆ ಸಲ್ಲೇಕಾದ ತೆರಿಗೆ ಇಲ್ಲದ್ದೆ ಒಳ ಬತ್ತ ಕಾರಣ ಇಷ್ಟು ಕಮ್ಮಿಗೆ ನಮ್ಮ ಕೈಗೆ ಎತ್ತಿರ್ತು – ಹೇಳ್ತದು ಅವನ ಒಟ್ಟು ಅಭಿಪ್ರಾಯ.
~
ತೆಕ್ಕೊಂಬ ನಾವು ಆದರೂ ಪೈಶೆಮೋರೆ ನೋಡದ್ದೆ ಈ ನಮುನೆದರ ತೆಕ್ಕೊಳದ್ದೆ ಇದ್ದರೆ ನಮ್ಮ ದೇಶದ ವಸ್ತುಗೊಕ್ಕೆ ಬೆಂಬಲ ಸಿಕ್ಕಿ, ನಿಜವಾದ ಸ್ವಾತಂತ್ರ್ಯ ಸಿಕ್ಕುಗು.
ನಮ್ಮ ಆರ್ಥಿಕ ವೆವಸ್ತೆಯ ಹಾಳುಮಾಡಿಹಾಕಿ, ಆ ಮೂಲಕ ಉಪಾಯಲ್ಲಿ ಸೋಲುಸುತ್ತ ಬುದ್ಧಿ ಇಪ್ಪ ಚೀನಾದ ಕುತಂತ್ರವ ನಾವು ನೆಂಪಿಲಿ ಮಡುಗೆಡದೋ?
ಕಾಶ್ಮೀರದ ಗಡಿಂದ ಹಿಡುದು ಅರುಣಾಚಲ ಗಡಿ ಒರೆಂಗೂ – ಜಾಗೆ ನುಂಗಲೆ ಕಾದೊಂಡಿಪ್ಪ, ಆ ದೇಶವ ಸಂಪದ್ಭರಿತ ಮಾಡುದೆಂತಕೆ?
ನಮ್ಮ ದೇಶದೊಟ್ಟಿಂಗೆ ಕಾದಲೆ ನಾವೇ ಪೈಸೆ ಮಾಡಿಕೊಡುದೆಂತಕೆ?!
ಹಾಂಗಾಗಿ, ಚಿನ್ನವೇ ಆದರೂ – ಚೀನಾದ್ದಾದರೆ ಬೇಡ – ಹೇಳುಲೆ ಕಲಿಯೇಕು; ಹೇಳ್ತದು ಅವನ ಸಲಹೆ.
ಎಂತ ಹೇಳ್ತಿ?
~

ಈಗ ಲೋಕಪಾಲ ಹೇಳಿಂಡು ಹಜಾರೆ ಅಣ್ಣ ಡೆಲ್ಲಿಲಿ ಉಪವಾಸ ಕೂಯಿದು. ನಮ್ಮ ರಾಜಕಾರಣಿಗಳ ಪೈಸೆ ಲೆಕ್ಕ ಕೊಡ್ಳೆ ಬೇಕಾಗಿ.
ನಾಳೆ ಭಾರತಪಾಲ ಹೇಳಿಗೊಂಡು ಎಲ್ಲೋರೂ ಚೀನಾದವರ ಕೈಲಿ ಉಪವಾಸ ಕೂರೇಕಕ್ಕು,  ನಮ್ಮದೇ ಪೈಸೆ ಲೆಕ್ಕ ಕೊಡ್ಳೆ ಬೇಕಾಗಿ!!

~

ಒಂದೊಪ್ಪ: ಚೀನಾದ ಲೊಟ್ಟೆಚಿನ್ನವ ಮಾರ್ಲೆ ಕಾಸ್ರೋಡಿನ ಹಾಂಗಿರ್ತ ಊರಿನ ತೆರಿಗೆ ಕಳ್ಳಂಗಳೇ ಸರಾಪಂಗೊ. ಅಲ್ಲದೋ?

ಸೂ:

  • ಚೀನಾ ಸರಕುಗಳ ಬಗ್ಗೆ ಒಂದು ಸಣ್ಣ ಶುದ್ದಿ ಇಲ್ಲಿದ್ದು.
  • ಕೊಳಚ್ಚಿಪ್ಪುಬಾವಂಗೆ ಸಿಕ್ಕಿದ ಇನ್ನೊಂದು ಸಂಕೊಲೆ,ಭಾರತ ಚೀನಾ ಯುದ್ದಕ್ಕೆ ಸಮ್ಮಂದ ಪಟ್ಟದು: (ಇಲ್ಲಿದ್ದು)

43 thoughts on “ಚಿನ್ನದ ಚೈನೇ ಆದರೂ ಚೀನಾದ್ದಾದರೆ ಬೇಡ…!

  1. ಚೀನಾಲ್ಲಿ ಮಕ್ಕೊಗೆ ಅರ್ಧ ದಿನ ಮಾತ್ರ ಶಾಲೆ ಅಡ.. ಉಳುದ ಅರ್ಧ ದಿನ ಇಂತ ಸಾಮಾನು ತಯಾರುಸುವ ಟ್ರೈನಿಂಗ್.. ಅವಕ್ಕೆ ಸಂಬಳ ಇಲ್ಲೆ ಇದಾ.. ಹಾಂಗಾಗಿಯೂ ಅವರ ಖರ್ಚು ಕಮ್ಮಿ ಆವ್ತಡ..
    ಸುದ್ದಿ ಲಾಯಿಕಾಯಿದು..

  2. oppanna bhari laaikada shuddi.
    nammalli ella sampattu heralavagi ippaga chainaddu entha maha.
    chainada stikkaringe astondu bele enthake.
    nammalliye desha istu sampadbharitha aagi ippaga
    bere deshada sottina mele moha enthake.
    navge echharike buddhi iddare aathu.
    kalladaru mulladaru navage nammade akku.
    antha swabhimana nammalli irali.

  3. ಒಪ್ಪಣ್ಣಾ,
    ಅಂದು ಮಾಡಿದ್ದು ಚೀನಾ ಭಾರತದ ಮೇಲೆ ದಂಡಯಾತ್ರೆ ಮಾಡ್ಲೆ ಹೆರಟದು ಹೇಳಿದರೆ ಧಾಳಿ ಮಾಡಿದ್ದದು… ನಂಬಿಸಿ ಮೋಸ ಮಾಡಿದ್ದದು.. ಇಂದು ಮಾಡ್ತಾ ಇಪ್ಪದೂ ದಂಡ ಯಾತ್ರೆಯೇ!! ಅವರಲ್ಲಿಯಾಣ ದಂಡ ವಸ್ತುಗಳ ಯಾತ್ರೆ ಕಳ್ಸುತ್ತಾ ಇಪ್ಪದು ನಮ್ಮಲ್ಲಿಗೆ! ಅದುದೇ ಲಾಯ್ಕಿದ್ದು ಹೇಳಿ ನಂಬಿಸಿ ಮೋಸ ಮಾಡುದು..
    ನಾವು ಎಲ್ಲೋರನ್ನೂ, ಎಲ್ಲವನ್ನೂ ನಂಬುದಲ್ಲದಾ? ನವಗೆ ಸತ್ಯ ಸಂಗತಿ ಗೊಂತಪ್ಪಗ ಸುಮಾರು ತಡವಾಗಿರ್ತು. ನಾವು ಸುಮಾರು ಕಳಕ್ಕೊಂಡಿರ್ತು, ಅದು ಭೂಮಿಯೇ ಆದಿಕ್ಕು, ವಸ್ತುಗಳೇ ಆದಿಕ್ಕು ಅಥವಾ ವಿಶ್ವಾಸವೇ ಆದಿಕ್ಕು. ಕಳಕ್ಕೊಂಡರೆ ಹೋತಲ್ಲದಾ?

    ಚೀನಾಂದ ಬಪ್ಪ ವಸ್ತುಗಳಲ್ಲಿ ಮಕ್ಕಳ ಆಕರ್ಷಣೆ ಮಾಡುವಂಥ ತುಂಬಾ ವಿಷಯಂಗ ಇದ್ದು. ಎಲ್ಲವೂ ಆರೋಗ್ಯಕ್ಕೆ ಹಾನಿ ಕೊಡುವಂಥದ್ದೆ!! ಶಾಲೆಯ ಹತ್ತರೆ ಇಪ್ಪ ಎಲ್ಲಾ ಅಂಗಡಿಗಳಲ್ಲಿ ಸಿಕ್ಕುತ್ತು ತುಂಬಾ ಕಡಮ್ಮೆಗೆ! ಕೆಲವು ಪ್ರಾಣಿಗಳ ಪ್ರತಿಕೃತಿ, ಸಣ್ಣ ಸಣ್ಣ ಸಾಸಮೆ ಕಾಳಿನ ನಮುನೆ ಗೋಲಿಗ.. ಇದರ ನೀರಿಲಿ ಹಾಕಿ ಮಡಗಿದರೆ ಸುಮಾರು ದೊಡ್ಡ ಆಗಿ ಚೆಂದ ಕಾಣ್ತು ಹೇಳಿ ಮಕ್ಕೋ ತಂದು ನೀರಿಲಿ ಹಾಕಿ ಮಡಗಿ ಕೊಶಿ ಪಡ್ತವು. ಕೆಲವು ದಿನ ಅಪ್ಪಗ ಅದು ಹಾಳಾವುತ್ತು.. ನೀರಿಲಿ ಕರಗುತ್ತುದೆ! ಅಂಬಗ ಅದರ ನಾವು ಚೆಲ್ಲಿ ಅಪ್ಪಗ ನಮ್ಮ ಮಣ್ಣೂ ಹಾಳಾವುತ್ತು. ಮಕ್ಕೋ ವಾಪಾಸು ಇನ್ನೊಂದು ತತ್ತವು. ನಾವು ಹೇಳಿದರೆ ಅವಕ್ಕೆ ಅರ್ತ ಆವುತ್ತೋ? ಅಂಗಡಿಯವ್ವು, ಬಾಕಿ ಮಕ್ಕೋ ಹೇಳಿ ಅಪ್ಪಗ ಅದುವೇ ಸರಿ ಹೇಳಿ ಕಾಣ್ತು. (ಅಂತೂ ರಜ ಸಮಯ ಕಳುದಪ್ಪಗ ಹೇಳಿ ಹೇಳಿ ಪುಣ್ಯಕ್ಕೆ ತಪ್ಪದು ನಿಂದತ್ತು ಎಂಗಳಲ್ಲಿ.)

    ಒಪ್ಪಣ್ಣ, ನೀನು ಹೇಳಿದ್ದು ಸರಿಯೇ! ಕಡಮ್ಮೆಗೆ ಆಶೆ ಮಾಡ್ಲೆ ಹೋಗಿ ನಾವು ಸುಮಾರು ನಷ್ಟ ಮಾಡಿಗೋಳ್ತು. ವಸ್ತುಗಳ ತೆಗವಾಗ ಎಷ್ಟು ಆಲೋಚನೆ ಮಾಡಿದರೂ ಸಾಕಾವುತ್ತಿಲ್ಲೇ. ನಮ್ಮ ದೇಶವ ಅವರ ಕಸದ ಬುಟ್ಟಿ ಮಾಡ್ತಾ ಇಪ್ಪ ಆ ಸಣ್ಣ ಕಣ್ಣಿನೋರ ಈ ಅದೃಶ್ಯ ಧಾಳಿಯ ನಾವೆಲ್ಲ ಸೇರಿ ತಡೆಯೆಕ್ಕೆ! ಈಗ ಒಗ್ಗಟ್ಟಾಯೆಕ್ಕೆ!! ನಮ್ಮ ದೇಶವ ನಾನಾ ನಮುನೆಲಿ ನುಂಗುಲೆ ನೋಡುವ ಚೀನಾಕ್ಕೆ ಈಗ ಮುಖಭಂಗ ಮಾಡೆಡದಾ ನಾವು?
    ಒಂದೊಪ್ಪ ಲಾಯ್ಕಾಯಿದು.

    1. ಶ್ರೀ ಅಕ್ಕ ಹೇಳಿದ್ದು ಸರೀ ಇದ್ದು, ’ದಂಡ ವಸ್ತುಗಳ ಯಾತ್ರೆ’ ಹೇಳಿ. ನವಗೆ ಇನ್ನಾದರೂ ಎಚ್ಚರಿಕೆ ಆಯಕ್ಕು 🙂

  4. ಒಪ್ಪಣ್ಣ ಸುದ್ದಿ ತುಂಬಾ ಚನ್ನಾಗಿ ಮೂಡಿ ಬಂದಿದೆ…. ವಾಸ್ತವವಾಗಿ ಅಗ್ಗದ ಹಾದಿಯಷ್ಟು ತುಟ್ಟಿಯಾದ ಸಂಗತಿ ಇನ್ನೊಂದಿಲ್ಲ ಎಂಬುದು ನಮಗಿನ್ನೂ ಅರ್ಥವಾಗುತ್ತಿಲ್ಲ. ಅಗ್ಗದ ಆಸೆಗೆ ಗೊಬ್ಬರ ಕೊಂಡರು ಎನ್ನುವ ಗಾದೆ ಇದೆ. ಅದರಂತೆ ಅಗ್ಗದ ಆಸೆಗಾಗಿ ಚೀನಾದ ವಸ್ತುಗಳನ್ನು ಖರೀದಿಸಿ ನಮ್ಮ ಇಡೀ ಬದುಕನ್ನೇ ಗೊಬ್ಬರಮಯವಾಗಿ ಮಾಡಿಕೊಳ್ಳುತ್ತಾ ಹೊರಟಿದ್ದೇವೆ. ಇದಕ್ಕೆ ಕಾರಣ ಒಂದೇ. ನಮಗೆ ಬದುಕಿನಲ್ಲಿ ನಿಜವಾಗಿ ಬೆಲೆಯುಳ್ಳ ವಸ್ತುಗಳಾವುವೆಂಬುದೇ ತಿಳಿದಿಲ್ಲ. ಎಳೆಯ ಮಗುವಿನ ಕೈಯಲ್ಲಿ ಮಿಠಾಯಿ ಕೊಟ್ಟು ಅದರ ಕೊರಳಲ್ಲಿನ ಚಿನ್ನದ ಸರ ಕೇಳಿದಲ್ಲಿ ಅದು ಸಂತೋಷವಾಗಿ ತೆಗೆದುಕೊಡುತ್ತದೆ. ನಮ್ಮ ಸ್ಥಿತಿಯೂ ಹಾಗೆಯೇ ಆಗಿದೆ. ಅಗ್ಗದ ಪದವಿಗಾಗಿ, ಪ್ರತಿಷ್ಠೆಗಾಗಿ, ಹಣಕ್ಕಾಗಿ, ಅಧಿಕಾರಕ್ಕಾಗಿ ನಮ್ಮ ಗುಣಸಂಪತ್ತನ್ನು, ನಮ್ಮ ರಾಷ್ಟ್ರೀಯ ಸ್ವಾವಲಂಬನೆ ಸ್ವಾತಂತ್ರ್ಯಗಳನ್ನು ಮಾರಿಕೊಳ್ಳಲು ನಾ ಮುಂದು ತಾ ಮುಂದು ಎಂದು ಕೈ ಚಾಚಿ ನಿಂತಿದ್ದೇವೆ. ಈ ಪರಿಣಾಮದಿಂದಲೇ ಚೀನಾ ವಸ್ತುಗಳು ನಮ್ಮ ದೇಶದಲ್ಲಿ ಮಾರಾಟವಾಗುತ್ತಿವೆ.
    ಇಂಥ ಸ್ಥಿತಿಯಲ್ಲಿ ನಮಗೆ ಚಾರಿತ್ರ್ಯದ, ಸ್ವಾತಂತ್ರ್ಯದ ಬೆಲೆಯನ್ನು ತಿಳಿಸಿಕೊಡುವವರು ಯಾರು? ಲೋಕದಲ್ಲಿ ಅದಕ್ಕೆ ಸರಿಗಟ್ಟುವ ಅಮೂಲ್ಯ ಸಂಗತಿ ಇನ್ನೊಂದಿಲ್ಲ ಎಂಬುದನ್ನು ಕಲಿಸಿಕೊಡುವವರು ಯಾರು? ಸ್ವಾತಂತ್ರ್ಯದ ಆ ಉಚ್ಚ ಬೆಲೆಯನ್ನು ತೆರಲಾರದ ಜನ ಸ್ವಾತಂತ್ರ್ಯಕ್ಕೆ ಅಪಾತ್ರರಾಗುತ್ತಾರೆ, ಎರವಾಗುತ್ತಾರೆ ಎನ್ನುವ ಕಠೋರ ಸತ್ಯವನ್ನು ಜನಕ್ಕೆ ಮನಮುಟ್ಟಿಸುವವರು ಯಾರು? ಹಿಂದೆ ಇದೇ ರೀತಿ ಆಂಗ್ಲರ ಹಿಂದೆ ಸಾಗಿದ ನಮ್ಮ ಜನರು ಕೊನೆಗೆ ದೇಶವನ್ನೇ ಮಾರಿಕೊಳ್ಳುವ ಹಂತಕ್ಕೆ ಬಂದರು ಆ ತಪ್ಪನ್ನು ಮತ್ತೆ ಮಾಡಬಾರದಲ್ವಾ? ಸ್ವಾತಂತ್ರ್ಯಹರಣದ ಈ ಹಾದಿಯಲ್ಲಿ ಇನ್ನಾದರೂ ಧಾವಿಸದಂತೆ ಜನತೆಯ ಕಣ್ಣೆದುರಲ್ಲಿ ಚರಿತ್ರೆಯ ಕೆಂಪು ದೀಪ ಹಿಡಿಯುವವರು ಯಾರು? ಮತ್ತೆ ಜಾಗೃತಿಯನ್ನು ಯಾರು ಮಾಡುವುದು? ಈ ಪ್ರಯಾಣ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು.

  5. ಚೀನಾ ತನ್ನ ಉತ್ಪಾದನಾ ಸಾಮರ್ಥ್ಯವ ಅದ್ಭುತವಾಗಿ ಬೆಳೆಶಿಗೊ೦ಡಿದು ಹೇಳೊದು ಸತ್ಯ.
    ಇ೦ದು ಭಾರತಲ್ಲಿ ಮಾ೦ತ್ರ ಅಲ್ಲ ಯೂರೋಪ್ ಮತ್ತೆ ಪ್ರಪ೦ಚದ ಎಲ್ಲಾ ಭಾಗ೦ಗಳಲ್ಲಿ ತನ್ನ ಸರಕುಗಳ ಮಾರಾಟ ಮಾಡುವ ಶಕ್ತಿ ಬೆಳಶಿಗೊ೦ಡಿದು.mass production ಅಪ್ಪ ವಸ್ತುಗಳ ಉತ್ಪಾದನೆಲಿ ಅವು ತು೦ಬಾ ಮು೦ದುವರಿದ್ದವು.ಮುಖ್ಯ ಕಾರಣ ಅಲ್ಲ್ಯಾಣ ಜೆನ೦ಗೊ ಶ್ರಮಜೀವಿಗೊ. ಇ೦ದು ಮಲೇಶಿಯ,ಸಿ೦ಗಾಪುರ,ಇ೦ಡೋನೇಶಿಯದ ವ್ಯಾಪಾರ ವಹಿವಾಟು ಚೀನಾಮೂಲದ ಜೆನ೦ಗಳ ಕೈಲಿದ್ದು.
    ಚೀನಾಲ್ಲಿ ಬೇರೆಬೇರೆ ಗುಣಮಟ್ಟದ ಉತ್ಪನ್ನ೦ಗಳ ತಯಾರಿ ಆವುತ್ತು.ಆದರೆ ಅವು ಜೆನ೦ಗೊ ಉಪಯೋಗಿಸಿ ಇಡ್ಕುವ ಹಾ೦ಗಿರ್ತ ಗುಣಮಟ್ಟಕ್ಕೆ ಆದ್ಯತೆ ಕೊಟ್ಟಿದವು.ಅದು ಅವರ ಉತ್ಪಾದನೆಗೂ ಸಹಕಾರಿ ಆಯಿದು.
    ಗುಣಮಟ್ಟದ ವಿಷಯಲ್ಲಿ ಚೀನಾಲ್ಲಿ ಒಳ್ಳೆಯ ಗುಣಮಟ್ಟದ ಉತ್ಪನ್ನ೦ಗಳೂ ತಯಾರು ಆವುತ್ತು.ಆದರೆ ಆ ದೇಶದ ಉದ್ಯಮಿಗೊ ನ೦ಬುಲೆ ಅರ್ಹರಲ್ಲ.ಹೀ೦ಗಾಗಿ ಕೈಗಾರಿಕಾ ಉತ್ಪನ್ನ೦ಗಳ ರಫ್ತು ಮಾಡೊದರಲ್ಲಿ ಅವು ರಜಾ ಹಿ೦ದೆ ಬೀಳುತ್ತಾ ಇದ್ದವು.
    ಈಗ ಅಲ್ಲಿ ಇ೦ಗ್ಲಿಷ್ ಕಲಿಕೆ ಕಡ್ಡಾಯ ಆವುತ್ತಾ ಇದ್ದು.ಇನ್ನು ಕೆಲವೇ ವರುಷಲ್ಲಿ ಮಾನವ ಸ೦ಪನ್ಮೂಲಲ್ಲಿ ನಮ್ಮ ದೇಶಕ್ಕೆ ಪ್ರತಿಸ್ಪರ್ಧಿ ಆಗಿ ನಿ೦ಬ ಸಾಧ್ಯತೆ ಇದ್ದು.
    ಆಹಾರ ಉತ್ಪಾದನೆಲಿಯೂ ಅವು ಮು೦ದೆ ಇದ್ದವು.ನಮ್ಮ ದೇಶಕ್ಕೆ ಬೇಳೆಕಾಳುಗಳಿ೦ದ ಹಿಡುದು ಅಕ್ಕಿ (!!) ಯೂ ಅಲ್ಲಿ೦ದ ಆಮದು ಆವುತ್ತಾ ಇಪ್ಪದು ಹೆದರಿಕೆಯ ಸ೦ಗತಿ.
    ಮಾಹಿತಿ ತು೦ಬಿದ ಶುದ್ದಿಗೆ ಧನ್ಯವಾದ ಒಪ್ಪಣ್ಣಾ.

  6. ಬಹಳ ಉತ್ತಮ ಲೇಖನ.ಚೀನಾ ದೇಶ ನಮ್ಮ ಪರೋಕ್ಷ ಸುಲಿಗೆ ಮಾಡುತ್ತಾ ಇದ್ದು.ಜನ ಎಚ್ಚರ ಆಯೆಕ್ಕು.

  7. ಚೀನಾದ ಲೊಟ್ಟೆಚಿನ್ನವ ಮಾರ್ಲೆ ಕಾಸ್ರೋಡಿನ ಹಾಂಗಿರ್ತ ಊರಿನ ತೆರಿಗೆ ಕಳ್ಳಂಗಳೇ ಸರಾಪಂಗೊ. ಅಲ್ಲದೋ?…… ಭರಿ ಲಯಿಖ ಅಯಿದು ಲೆಖನ

  8. ಒೞೆ ವಿಷಯದ ಬಗ್ಗೆ ಜಾಗ್ರತಿ ಮೂಡುಸಿದ ಒಪ್ಪಣ್ಣ ಮಾವ೦ಗೆ ಧನ್ಯವಾದ..ಲಾಯಿಕ ಆಯಿದು ಬರದ್ದು..ಲೆಖನದ title ದೆ ಲಾಯಿಕಿದ್ದು,ನೇಲ್ಸಿದ ಪಟದ ಅಡಿಬರಹವೂ ಪಷ್ಟಾಇದು 🙂

  9. ಶುದ್ದಿ ಓದಿ ಬೇಜಾರಾತು. ಕಮ್ಮಿಗೆ ಸಿಕ್ಕುತ್ತು ಹೇಳಿಗೊಂಡು ಹೀಂಗಿಪ್ಪ ಸೊತ್ತುಗಳ ತೆಕ್ಕೊಂಬ ನಾವು ಬದಲಾಯೆಕ್ಕು ಮೊದಲು. ಚೀನಾದವು ನಮ್ಮ ಈ ಮನಸ್ಥಿತಿಯ ತಿಳ್ಕೊಂಡು ಅವರ ಬೇಳೆ ಬೇಶಿಗೊಳ್ತವು. ಎಂತಾ ಚಾಲಾಕಿಗ!
    ಈ ಶುದ್ದಿಯ ಬೈಲಿಂಗೆ ತಿಳುಶಿ ಒಂದು ಜಾಗೃತಿ ಮೂಡ್ಸಿದ ಒಪ್ಪಣ್ಣಂಗೆ ಧನ್ಯವಾದಂಗೊ.

  10. ನಾವು ಚೀನದ ಕೈಂದ ಕಲಿಯೆಕ್ಕಾದ್ದದು ಇದರನ್ನೆ.ನಮ್ಮಲ್ಲಿ ಮಾತೆತ್ತಿರೆ ಲಂಚ ಉದಾಸನ ಆದರೆ ಮುಷ್ಕರ ಅದಲ್ಲದ್ದೆ ಸರ್ಕಾರದ ನಿಯಮ ಕಾನೂನುಗೊ,ಇದೆಲ್ಲ ಅಪ್ಪಗ ಯೇವದೇ ಸಾಮನು ತಯಾರಿ ಮಾಡ್ತವು ಪೇಚಾಟಕ್ಕೆ ಸಿಕ್ಕುಗು.ಚೀನಲ್ಲಿ ಕೆಲಸದವಕ್ಕೆ ಸರೀ ಸಂಬಳವೇ ಕೊಡ್ತವಿಲ್ಲೆ.
    ಇಷ್ಟೆಲ್ಲ ಮಾತಾಡಿ ನಾವು ಚೀನದ ಸಾಮಾನುಗಳ ತೆಕ್ಕಂಬದೇನೂ ಕಮ್ಮಿ ಇಲ್ಲೆ,ಗೊಂತಿದ್ದೋ ಇಲ್ಲದ್ದೆಯೋ.
    ಆನೀಗ ಉಪಯೋಗಿಸುವ ಕಂಪ್ಯೂಟರ್ ಮೋನಿಟರ್ ಇತ್ಯಾದಿ ಯೇವ ಕಂಪೆನಿದೇ ಆದರೂ ತಯಾರಾದ್ದದು ಮಾಂತ್ರ ಚೀನಲ್ಲಿ.
    ಯುದ್ಧ ಮಾಡದ್ದೆ ನಮ್ಮ ಸೋಲುಸುತ್ತ ಉಪಾಯ ಅವರದ್ದು.

    1. ಬಹುಶಃ ಒಪ್ಪಣ್ಣ ಅವನ ಕಂಪ್ಯೂಟರಿನ ತಯಾರಿಸಿದ್ದು ಎಲ್ಲಿ ಹೇಳಿ ನೋಡಿದ್ದ ಇಲ್ಲೆ ಹೇಳಿ ಕಾಣ್ತು!
      ಇಂದ್ರಾಣ ಈ ಜಾಗತೀಕರಣ ಆದ ವ್ಯವಸ್ಥೇಲಿ ನಾವು ಅವರಿಂದ “ಬೆಟರ್” ಆಗಿ ವಹಿವಾಟು ಮಾಡಕಲ್ಲದ್ದೆ,ಅವರ “ಬಾಯ್ಕೊಟ್’ಮಾಡಿ ಬದುಕ್ಕಲೆ ಹೆರಡುವದು ಜಾಣತನವಲ್ಲ ಹೇಳಿ ಎನ್ನ ಅಭಿಪ್ರಾಯ.ಕಂಪ್ಯೂಟರ್ ಸಾಫ್ಟ್‍ವೇರಿಲ್ಲಿ ನಾವು ಹೇಂಗೆ ಅವರಿಂದ ಮುಂದೆ ಇದ್ದೋ ಹಾಂಗೇ ಬಾಕಿ ಉಳಿದ ಫೀಲ್ಡ್ ಗಳಲ್ಲಿಯೂ ಮುಂದೆ ಹೋಪಲೆ ಪ್ರಯತ್ನ ಮಾಡಕು.

  11. ಒಪ್ಪ್ಪಣ್ಣಾ,
    ಪ್ರಕೃತ ಎಲ್ಲರೂ ತಿಳಿಯೆಕ್ಕಾದ ವಿಶಯದ ಬಗ್ಗೆ ಒಳ್ಳೆ ಲೇಖನ.
    ಆರಾದರೂ ಯಾವದಾದರೂ ವಸ್ತುವಿನ ಕಮ್ಮಿಗೆ ಕೊಡ್ತವು ಹೇಳುವಾಗ, ಅದರ ಗುಣ ಮಟ್ಟದ ಬಗ್ಗೆ ಅಲೋಚನೆ ಮಾಡದ್ದೆ, ತೆಕ್ಕೊಂಡರೆ, ಕಡೇಂಗೆ ನಷ್ಟ ಅನುಭವಿಸುವದು ನಾವೇ.
    ಅಷ್ಟು ಕಮ್ಮಿಗೆ ಅವಕ್ಕೆ ಹೇಂಗೆ ಕೊಡ್ಲೆ ಎಡಿತ್ತು ಹೇಳಿ ನಾವು ಅಲೋಚನೆ ಮಾಡಿರೆ, ಒಂದೋ ಅದು ರೇಟ್ ಮಾತ್ರ ಚೀಪ ಅಲ್ಲ, ಮಾಲು ಕೂಡಾ ಚೀಪ್. ಇಲ್ಲದ್ದರೆ ಅದು ಕದ್ದ ಮಾಲೇ ಅಗಿರೆಕಷ್ತೆ. ಸ್ವಂತಕ್ಕೆ ನಷ್ಟ ಮಾಡಿಂಡು ಅರೂದೆ ಮಾರ್ಕೆಟ್ ಮಾಡವು ಹೇಳ್ತ ಸತ್ಯ ನಾವು ತಿಳ್ಕೊಂಬದು ಮುಖ್ಯ.
    ಯಾವದೇ ಸಾಮಾನು ತೆಕ್ಕೊಂಬಗ ಇನ್ನೊಂದು ಮುಖ್ಯ ಅಂಶ ನಾವು ಗಮನಿಸೆಕ್ಕಾದ್ದು ಹೇಳಿರೆ ಅದಕ್ಕೆ, ವಾರಂಟಿ ಕೊಡ್ತವಾ, ನವಗೆ ಹತ್ತರೆ ಅದರ ಸರ್ವಿಸ್ ಸೆಂಟರ್ ಇದ್ದಾ ಹೇಳಿ ತಿಳ್ಕೊಂಬದು. ಇಲ್ಲದ್ದರೆ ರೆಜ ತೊಂದರೆ ಕೊಟ್ಟರೆ ಅದರ ಬಲುಗಿ ಇಡ್ಕೆಕ್ಕಾದ ಪರಿಸ್ಥಿತಿ ಬತ್ತು.
    ಈಗ ಹೆರೆ ದೇಶದವು ಕೂಡಾ ಚೀನಾಕ್ಕೆ ಗುತ್ತಿಗೆ ಆಧಾರಲ್ಲಿ ಕೆಲಸ ವಹಿಸಿ ಕೊಡ್ತವು. ಅಮೇರಿಕಾದ್ದು, ಇಂಗ್ಲೆಂಡಿನದ್ದು, ಜಾಪಾನಿನದ್ದು ಹೇಳಿ ತೆಗವಲೆ ಹೆರಟರೆ ಯತಾರ್ಥಕ್ಕೆ ಒಳದಿಕೆ ಚೀನಾ ಪಾರ್ಟ್ಸ್ ಇರ್ತು. ಎಂಗೊಗೆ ಕಂಪೆನಿಲಿ ಇದರ ಅನುಭವ ಆಯಿದು. ಅದಾದ ನಂತರ ಚೀನಾದ ಸಾಮಾಗ್ರಿ ಇಪ್ಪಲಾಗ ಹೇಳಿ ಕಂಡಿಶನ್ ಹಾಕಿದ್ದೆಯೊ.
    ಚೀನಾದ ಪಿಂಗಾಣಿ ಸೆಟ್ ಗೊ ಒಂದು ಕಾಲಲ್ಲಿ ತುಂಬಾ ಪ್ರಖ್ಯಾತಿ ಹೊಂದಿತ್ತು.
    ರೇಶ್ಮೆ ಸೀರೆ ಬಗ್ಗೆ ಚುಬ್ಬಣ್ಣ ಹೇಳಿದ. ಆ ಕಾಲವೂ ಹತ್ತರೆ ಬಕ್ಕು. ಇದಾಗಲೇ ಚೀನಾಂದ ಸಿಲ್ಕ್ ಆಮದು ಮಾಡ್ಲೆ ಸುರು ಮಾಡಿ ಇಲ್ಲಿಯಾಣ ಸಿಲ್ಕ್ ಬೆಳೆತ್ತವಕ್ಕೆ ತೊಂದ್ರೆ ಅಯಿದು. ಇನ್ನು ಅಲ್ಲಿಂದ ಸೀರೆಯೇ ಬಪ್ಪಲೆ ಸುರು ಆದರೆ, ನಮ್ಮವು ಅದಕ್ಕೆ ಮೋಹ ಹೋದರೆ, ಇಲ್ಲಿಯಾಣ ಸಿಲ್ಕ್ ಮಗ್ಗಲ್ಲಿಪ್ಪ ಕೆಲಸದವು ಉಪವಾಸವೇ ಬೀಳೆಕ್ಕಕ್ಕು.
    ಹೆರ ದೇಶದವರ ಇನ್ನೊಂದು ದುರ್ಬುದ್ಧಿ ಹೇಳಿರೆ ಅಲ್ಲಿ ಯಾವದು ban ಮಾಡಿದ್ದವಾ ಅಥವಾ ban ಮಾಡ್ತ ಅಂದಾಜಿಲಿ ಇದ್ದವಾ ಅದರ ಅವರ ಊರಿಂದ ಬೇರೆ ಕಡೆಂಗೆ ಕಮ್ಮಿ ಕ್ರಯಕ್ಕೆ ವರ್ಗಾಯಿಸುವದು.
    ನಮ್ಮ ವಿವೇಚನೆಲಿ ನಾವು ಇದ್ದರೆ ಮೋಸ ಹೋಗ.

    1. { ಸ್ವಂತಕ್ಕೆ ನಷ್ಟ ಮಾಡಿಂಡು ಅರೂದೆ ಮಾರ್ಕೆಟ್ ಮಾಡವು}
      ಶರ್ಮಪ್ಪಚ್ಚೀ, ಲಾಯಿಕಲ್ಲಿ ಹೇಳಿದಿ ನಿಂಗೊ.
      ಆದರೂ, ಮಾಡಿದವಂಗೆ, ಸಾಗುಸಿದವಂಗೆ, ಮಾರಿದವಂಗೆ – ಎಲ್ಲೋರಿಂಗೂ ಲಾಭ ಮಡಗಿ ಹತ್ತಿಪ್ಪತ್ತು ರುಪಾಯಿಗೆ ಮಾರ್ತರೆ, ಅಂಬಗ ಅದರ ನಿಜವಾದ ಬೆಲೆ ಎಷ್ಟಿಕ್ಕಪ್ಪಾ..??!!!
      { ಚೀನಾದ ಸಾಮಾಗ್ರಿ ಇಪ್ಪಲಾಗ ಹೇಳಿ ಕಂಡಿಶನ್ ಹಾಕಿದ್ದೆಯೊ }
      – ಇದೆಂತಕೆ ಅಪ್ಪಚ್ಚಿ ಹೀಂಗಪ್ಪಲೆ ಕಾರಣ? ಎಂತಾರು ಸಂಗತಿ ಆಯಿದೋ?
      ನೆರೆಕರೆಲಿ ಆರಾರು ವಿವೇಚನೆ ಕಳಕ್ಕೊಂಬ ಮದಲೇ ಬೈಲಿನೋರು ಎಚ್ಚರುಸಿದರೆ ಸರಿ ಅಕ್ಕೋ ಕಾಣ್ತು. ಎಂತ ಹೇಳ್ತಿ?

      ಒಪ್ಪ ಒಪ್ಪ ಆಯಿದು. ಹರೇರಾಮ..

  12. ಈಗ ಎಲ್ಲ ಪೇಟೆಲಿಯುದೆ, ಚೀನಾ ಬಜಾರುಗೊ ಇದ್ದು, ಸಿಂಗಾಪುರ್ ಸಿಟಿಗೊ ಇದ್ದು, ದುಬೈ ಮಾಲುಗೊ ಇದ್ದು. ಎಂತ ಸಾಮಾನುಗೊ ಬೇಕಾರು ಅಲ್ಲಿ ಸಿಕ್ಕುತ್ತು. ಜೆನಂಗಳ ಬೇಡಿಕೆಗೆ ಬೇಕಾದ ಹಾಂಗಿರುತ್ತ ವಸ್ತುಗೊ. ಎಲ್ಲ ಕಡೆಲಿಯುದೆ ಸಿಕ್ಕುತ್ತದು, ಮೇಡ್ ಇನ್ ಚೀನಾ. ಎಲ್ಲವುದೆ ಚೀಪ್ ಚೀಪ್ ಹೇಳಿ, ಜೆನಂಗಳೇ ಮ್ಯಾಡ್ ಆಗಿ ಹೋಯಿದವು. ಸತ್ಯ ಸಂಗತಿ ಎಂತರ ಹೇಳಿ ತಿಳುಸುತ್ತ ಒಪ್ಪಣ್ಣನ ಲೇಖನ ಎಲ್ಲೋರ ಕಣ್ಣು ತೆರೆಸುತ್ತ ಲೇಖನ. ಚೀನಾದ ವಸ್ತುಗೊ ಬೇಡ ಹೇಳಿ ನಾವೆಲ್ಲೋರು ಹೇಳುವೊ°. ಆದರೆ, ಕಂಪೆನಿಗಳೇ ಚೀನಾದ ವಸ್ತುಗವಕ್ಕೆ ಮೇಡ್ ಇನ್ ಇಂಡಿಯಾ ಹೇಳ್ತ ಸ್ಟಿಕ್ಕರು ಅಂಟುಸವು ಹೇಳಿ ಎಂತ ಗ್ಯಾರಂಟೀ.. !!

    1. ಬೊಳುಂಬು ಮಾವ° ಹೇಳಿದ ವಿಶಯ ಸರೀ ಇದ್ದು.
      ಇನ್ನಾಣ ದಿನಂಗಳಲ್ಲಿ ಚೀನಾಲ್ಲಿ ಆದ್ಸು ಯೇವದು, ಕೊಡೆಯಾಲಲ್ಲಿ ಆದ್ಸು ಯೇವದು ಹೇಳಿ ಗುರ್ತ ಹಿಡಿವಲೆ ಭಾರೀ ಕಷ್ಟ ಇದ್ದು. ಮಾರ್ತದು ಅದೇ ಕಾಸ್ರೋಡಿನ ಬೆಳಿಟೊಪ್ಪಿ ಅಲ್ಲದೋ? 🙁

      ಮ್ಯಾಡಿನ್ ಚೈನಾ – ಹೇಳಿದ್ದು ಲಾಯಿಕಾಯಿದು ಮಾವಾ°.
      ಚೀಪ್ ಚೀಪ್ ಹೇಳಿಗೊಂಡು ಮೂರುಕಾಸಿನ ಚೋಕುಲೇಟಿನ ಚೀಪಿರೆ ಹೇಂಗಕ್ಕು? 🙁

  13. ಬಾರೀ ಲಾಯಿಕ ಆಯಿದು. ನಿಂಗ ಬರದ್ದು ಓದುಲುದೆ ಸುಲಭ ಮತ್ತೆ ವಿಷಯಂಗಳೂ ತುಂಬಾ ಇದ್ದು. ಎಲ್ಲರುದೆ ಚೀನಾ ವಸ್ತುಗಳನ್ನೆ ಖರೀದಿ ಮಾಡ್ತವು , ಎಂತಕೆ ಹೇಳಿದರೆ ಬೆಲೆ ಕಡಮ್ಮೆ ಹೇಳಿ. ಪಿನ್ನಿಂದ ಹಿಡಿದು ವಿಮಾನದವರೆಗೆ ಅವು ತಯಾರು ಮಾಡ್ತವು. ನಮ್ಮ ಊರಿಲಿ ಬೀಡಿ ಕಟ್ಟುವಾಂಗೆ ಅವು ವಾಚು ಕಟ್ಟುತ್ತವಡ.

    ಒಪ್ಪಂಗೊ
    ಕಿರಣ

    1. { ಬೀಡಿ ಕಟ್ಟುವಾಂಗೆ ಅವು ವಾಚು ಕಟ್ಟುತ್ತವಡ }
      ಕಿರಣಣ್ಣಾ,
      ಸರಿಯಾಗಿ ಹೇಳಿದಿ. ಎಲ್ಲೋರುದೇ ಸೇರಿ ಉತ್ಪಾದನೆ ಮಾಡಿಮಾಡಿ ಹಾಕುತ್ತ ಕಾರಣ ಅಲ್ಲಿ ಅಷ್ಟು ಕಡಮ್ಮಗೆ ತಯಾರಾವುತ್ತು. ಅಲ್ಲದೋ?

      ನಮ್ಮಲ್ಲಿ ದೇಶ ಕಟ್ಟುವೊ° ಹೇಳಿರೆ ನೋಟು ಕಟ್ಟಿಗೊಂಡು ಕೂಯಿದವು – ಮೇಗೆ ಇಪ್ಪೋರು. ಅಲ್ಲದೋ?

  14. ಅಲ್ಲ ಬಾವ.. 😉
    ಅ೦ಬಗ ಈ ಚೀನಾ ಎಲ್ಲೆ ಅಗಿ ಬತ್ತು.. 😛
    ಚೆನ್ನೈ ಹತ್ತರೆ ಆಗಿಯೊ?? 😀

    1. [ಚೀನಾ ಎಲ್ಲೆ ಅಗಿ ಬತ್ತು]
      ಅದು ಬತ್ತಿಲ್ಲೆ ಮಾರಾಯ. ಅದೊಂದು ದೇಶ. ಅಲ್ಲಿಯೇ ಇಪ್ಪದು 🙂
      ನಮ್ಮ ಗುಡ್ದೆ ಕೊಡೀಂಗೆ ಹೋದರೆ ಒಂದು ದೊಡ್ಡಾ ಕೋಟೆ ಕಾಣ್ತಲ್ಲದಾ ಅದುವೇ 🙂

      1. ಹೋ..!
        ಹಾ೦ಗೋ ಸ೦ಗತಿ..!
        ಅ೦ಬಗ ಗುಡ್ದೆಯ ಆಚ ಹೊಡೆ ಹೋಪಲಾಗಾ ಹೇಳಿ ಆತು..! 😛

        1. ಆಚ ಹೊಡೆಂಗೆ ಬೇಕಾರೂ ಹೋಗು, ಈಚ ಹೊಡೆಂಗೆ ಬೇಕಾರೂ ಹೋಗು –
          ಒಟ್ಟಿಲಿ ದಿನಾಗುಳೂ ಗುಡ್ಡಗೆ ಹೋಗು. ಅಷ್ಟೇ ಬೈಲಿನೋರು ಕೇಳಿಗೊಂಬದು ನಿನ್ನ ಹತ್ತರೆ! 😉

  15. ಚೀನದವ್ವು ಇಡೀ ವಿಶ್ವಕ್ಕೆ ಹೀ೦ಗಿಪ್ಪ ಸಾಮಾನುಗೋ ತಯಾರಿ ಮಾಡಿಕೊಡ್ತವು ಅಲ್ಲದೋ ಭಾವ.. ಅದರ್ಲೂ, ಪಶ್ಟು ಕೋಲಿಟಿ, ಸೆಕೆ೦ಡು ಕೋಲಿಟಿ ಹೇಳಿ ಇರ್ತು ಇದಾ..!
    ಈ ಪಶ್ಟು ಕೋಲಿಟಿ ಎಲ್ಲಾ ದೊಡ್ಡ ದೊಡ್ಡ ಕ೦ಪನಿಗೊ ಅಲ್ಲಿ ಹೋಗಿ ಕಮ್ಮಿ ಕ್ರಯಕ್ಕೆ ತಯಾರಿ ಮಾಡ್ತು, ಮತ್ತೆ ಈ ಸೆಕೆ೦ಡು ಕೋಲಿಟಿ ಇದಾ ಮಹಾ ಡೋ೦ಗಿ ಇಪ್ಪದು..
    ನೀನು ಹೇಳಿದಾ೦ಗೆ ಭಾವ.. ಇದು ಎಲ್ಲಾ ಬಾಳಿಕೆ ಮಣ್ಣು ಬಾರ, ಎರಡು ದಿನ ಸರೀ ಇಕ್ಕಿದಾ ಮತ್ತೆ ಬಲ್ಗಿ ಇಡುಕ್ಕೆಕ್ಕು..
    ರೇಡಿಯೋ, ಮೊಬಿಲು ಮಣ್ಣೊ ಆದರೆ ರಿಪೇರಿ ಸಾನು ಮಾಡ್ಲೆಡಿಯ..

    ಇದು ಎಲ್ಲಾ ಗೊ೦ತಿದ್ದರೂ ಹೀ೦ಗಿಪ್ಪಾ ವಸ್ತುಗೊ ನಮ್ಮಲಿಗೆ ತಪ್ಪದು ಆರು?? ಇದರ ನಮ್ಮ ದೇಶಕ್ಕೆ – ನೇಪಾಳ, ಅಸ್ಸಾಮ್, ಅರುಣಾ ಚಲ ಪ್ರದೇಶ ಇಲ್ಲೇ೦ಗೆಲ್ಲಾ ಆರಿ೦ಗೂ ಅರಡ್ಯದ್ದಾ೦ಗೆ ತತ್ಸೂ ಹೇಳಿ ಮನ್ನೆ ಅಜ್ಜಕಾನ ಭಾವ ಹೇಳಿಗೊ೦ಡು ಇತ್ತಾ.. 😉

    ಕಮ್ಮಿ ಪೈಸೆ ಹೇಳುವೋ.. ಆದರೂ ಆ ಕಮ್ಮಿ ಕ್ರಯಕ್ಕೆ ತಕ್ಕ ಬಾಳಿಕೆ ಸಾನು ಬಾರ.. ಏವ ಕರ್ಮಕ್ಕೆ ಫೊ..! ಅಲ್ಲದೋ?

    1. ಚುಬ್ಬಣ್ಣಾ,
      ಶುದ್ದಿಗೆ ವಸ್ತುನಿಷ್ಠ ಒಪ್ಪ ಕೊಟ್ಟಕ್ಕೆ ವಂದನೆಗೊ.
      { ಶ್ಟು ಕೋಲಿಟಿ, ಸೆಕೆ೦ಡು ಕೋಲಿಟಿ }-
      ಅಪ್ಪಡ, ಪಷ್ಟು ಕೋಲಿಟಿದರ ಕಂಪೆನಿಗೊಕ್ಕೆ ಕೊಡ್ತವಡ, ಸೆಕೆಂಡು ಕೋಲಿಟಿ ಕಸವಿನ ಹೀಂಗೆ ಮಾಡ್ತದಾಡ. ಅಲ್ಲದೋ?
      ತೆರಿಗೆ ಕದ್ದು ಮಾರ್ತ ಕಾರಣವೇ ಇದು ಇಷ್ಟೂ ಕಮ್ಮಿಗೆ ಸಿಕ್ಕುತ್ತು. ಅಲ್ಲದೋ?
      ಕೇಳಿರೆ ಬೇಜಾರಾವುತ್ತು.

  16. ಅಶನ ಉಂಬಲೆ ತಾಳು,ಸಾರು ಮಾಡುತ್ತ ಹಾಂಗೆ ಗಂಭೀರವಾದ ವಿಶಯವ ಹಾಸ್ಯಭರಿತವಾಗಿ ವರ್ಣನೆ ಮಾಡಿದ್ದು ಭಾರೀ ಲಾಯಿಕಾಯಿದು ಒಪ್ಪಣ್ಣೋ………….. ನಾವು ಅಶನ ಮಾಡಿ ಉಣ್ತ ಅಕ್ಕಿಯೂ ಕೂಡಾ ಚೀನಾಂದ ಬತ್ತಡ ಅಪ್ಪೋ….. ಹಾಂಗೇ ಚೌತಿ ಬಂತಿದಾ ಗಣಪತಿ ಮೂರ್ತಿ ಯೆಷ್ಟು ಬಯಿಂದೋ……ಗೊಂತಿಲ್ಲೆ ಅಲ್ಲದೋ…..?

    1. ಪ್ರಸಾದಣ್ಣ,
      ಅಕ್ಕಿಯೂ ಚೀನಂದ ಬಪ್ಪಲೆ ಸುರು ಆದ್ದು ನಮ್ಮ ’ಅಶನ ದಾರಿದ್ರ್ಯ’ವ ತೋರುಸುತ್ತು. ಅಲ್ಲದೋ?
      ಚೌತಿ ಮಾಂತ್ರ ಅಲ್ಲ, ಬ್ಯಾರಿಗಳ ಪೊರ್ಬುಗಳ ಹಬ್ಬಂಗೊಕ್ಕೂ ಸಾಲುಸಾಲು ಆಟದ ಸಾಮಾನುಗೊ ಬತ್ತಾಡ. ಅಪ್ಪೋ? 🙁
      ಅವು ಕೊಡ್ತವು, ನಾವು ತೆಕ್ಕೊಳ್ತು. ಛೇ..

  17. ಚೀನಾ ನೆ ಹಮಾರೆ ಪೈಸೆ ಔರ್ ದೇಶ್ ಕೊ ಛೀನಾ… !! ಚೀನಾ ಕೊ ಹಮ್ ಸೆ ಕುಚ್ ಭಿ ಛೀನ್ನಾ ಮತ್ ದೇನಾ !! ದೇಶ್ ಹೋ ಯಾ ಪೈಸೆ !!

    1. ವ್ಹಾ! ಒಳ್ಳೆ ಪ್ರಾಸ ಬತ್ತು ಓದಲೆ.
      ನೆಗೆಮಾಣಿ ಓದಿರೆ ಎಂತಾರು ಅರ್ತ ಮಾಡಿಗೊಂಗು. ಅಲ್ಲದೋ? 😉

      1. ಅದು ಛೀನ್ನೇ ಮತ್ ದೇನಾ ಹೇಳಿ ಆಯಕ್ಕು, ಆದರೆ ಪ್ರಾಸ ಬತ್ತಿಲ್ಲೆ 🙁
        ನೆಗೆಮಾಣಿ ಇನ್ನೂ ಓದಿದ್ದ ಇಲ್ಲೆ ಕಾಣ್ತು !! ಇಂಗ್ಲೀಶು ಕಲಿವ ಪ್ರಯತ್ನ ಸ್ಲೇಟಿನೊಟ್ಟಿಂಗೆ ಸಾರಡಿ ತೋಡಿನ ಬೆಳ್ಳಲ್ಲಿ ಹೋಯ್ದು, ಇನ್ನು ಹಿಂದಿ ಕಲಿವಲೂ ಶುರು ಮಾಡುಗು !!

  18. ಒಪ್ಪಣ್ಣನ ಮಾತು ಲೈಕ ಆಯಿದು…………..ಇನ್ನು ನಾವು ಚೀನಾ ಹೇಳಿರೆ ಛೀ……………ನಾ ನಾ ಹೇಳಿ ಹೇಳುಲೆ ಸುರು ಮಾಡೆಕ್ಕು

    1. ಅನುಪಮಕ್ಕ,
      ಒಪ್ಪ ಸಣ್ಣದಾದರೂ – ಒಳ್ಳೆ ನಾಟುತ್ತ ನಮುನೆ ಇದ್ದು.
      {ಚೀನಾ ಹೇಳಿರೆ ಛೀ……………ನಾ}
      – ಈ ವಾಕ್ಯ ಭಾರೀ ಕೊಶಿ ಆತು ಒಪ್ಪಣ್ಣಂಗೆ.! 🙂
      ಹರೇರಾಮ

  19. ಎಂದಿನ ಹಾಂಗೆ ಒಪ್ಪಣ್ಣನ ಶುದ್ದಿ ರೈಸಿದ್ದು 🙂 ಒಳ್ಳೆ ಶುದ್ದಿ 🙂
    “”ವಾಚು””… ಎನ್ನ ಅಮ್ಮನ ಹತ್ತರೆ ಒಂದು HMT ಕಂಪೆನಿಯ ವಾಚಿದ್ದು, ಕೀ ಕೊಡ್ತ ನಮುನೆದು, ಅದಕ್ಕೆ ಎನ್ನಷ್ಟು ಪ್ರಾಯ ಆತು. ಕೀ ಕೊಟ್ಟರೆ ಈಗಳೂ ಸರೀ ನಡೆತ್ತು !!
    “”ಮೂರುದಿನ ಹಾಕಿ ಅಪ್ಪಗ ಕೆಮಿಕರೆಂದ ಕಣ್ಣಕರೆ ಒರೆಗೂ ಹುಣ್ಣಾತಡ!””… ಅಪ್ಪು, ಅವ್ವು ಬಳಸುವ ಪ್ಲಾಸ್ಟಿಕ್ ಕೀಳು ಗುಣಮಟ್ಟದ್ದು ಹಾಂಗಾಗಿ ಈ ಎಲ್ಲಾ ಸಮಸ್ಯೆಗೊ ಉಂಟಪ್ಪದು.
    “”ಜೋಡು””… ಈ ವಿಷಯಲ್ಲಿ ಆರುದೇ ಮಾಡಿಗೊಂಬಲಾಗ. ಕಾಲು ತುಂಬಾ ಮುಖ್ಯವಾದ ಭಾಗ ದೇಹಲ್ಲಿ. ಕ್ರಯ ಹೆಚ್ಚಾದರೂ ಸರಿಯಾದ ಜೋಡನ್ನೇ ತೆಕ್ಕೊಳ್ಳೆಕ್ಕು.
    “”ಎಷ್ಟು ದಿನ ಪದ್ಯ ಹೇಳ್ತೋ – ದೇವರಿಂಗೇ ಗೊಂತು””… ಒಳ ಇಪ್ಪ ಜಿರಳೆ ಸಾವನ್ನಾರ ! ಯಾವುದೋ ಒಂದು ಜೋಕು ನೆಂಪಾತು !
    “”ಈಗಂತೂ – ಯೇವದೇ ಜಾತ್ರೆಗೆ ಹೋಗಲಿ, ಎಲ್ಲೇ ಸಂತೆಗೆ ಹೋಗಲಿ, ಆ ಊರಿನ ವಿಶೇಷತೆಗೊ ಕಾಂಬಲೆ ಸಿಕ್ಕುತ್ತಿಲ್ಲೆ;””… ಇದು ತುಂಬಾ ಬೇಜಾರಪ್ಪ ಸಂಗತಿ 🙁 ನಮ್ಮದೇ ಊರಿನ ವಸ್ತುಗೊ ಎಷ್ಟೇ ಹುಡುಕ್ಕಿರೂ ಸಿಕ್ಕುತ್ತಿಲ್ಲೆ 🙁
    “”ತೆಕ್ಕೊಂಬ ನಾವು ಆದರೂ ಪೈಶೆಮೋರೆ ನೋಡದ್ದೆ ಈ ನಮುನೆದರ ತೆಕ್ಕೊಳದ್ದೆ ಇದ್ದರೆ ನಮ್ಮ ದೇಶದ ವಸ್ತುಗೊಕ್ಕೆ ಬೆಂಬಲ ಸಿಕ್ಕಿ, ನಿಜವಾದ ಸ್ವಾತಂತ್ರ್ಯ ಸಿಕ್ಕುಗು””… ಖಂಡಿತಾ ಒಪ್ಪೆಕಾದ ಒಪ್ಪವಾದ ಮಾತಿದು ಒಪ್ಪಣ್ಣಾ 🙂
    “”ಹಾಂಗಾಗಿ, ಚಿನ್ನವೇ ಆದರೂ – ಚೀನಾದ್ದಾದರೆ ಬೇಡ – ಹೇಳುಲೆ ಕಲಿಯೇಕು; ಹೇಳ್ತದು ಅವನ ಸಲಹೆ. ಎಂತ ಹೇಳ್ತಿ?””… ಸರಿ ಸರಿ 🙂

    1. ಸುವರ್ಣಿನಿ ಅಕ್ಕೋ..
      ಶುದ್ದಿಯ ಗೆರೆಗಳ ಹೆರ್ಕಿ, ಅದಕ್ಕೆ ಪೂರಕವಾಗಿ ಒಪ್ಪ ಕೊಟ್ಟದು ಕಂಡು ಮಹದಾನಂದ ಆತು.
      ಕೀಳುಮಟ್ಟದ ಪ್ಲೇಷ್ಟಿಗು ಬಳಕೆ ಮಾಡಿದ ವಸ್ತುಗಳ ಉಪಯೋಗ ಮಾಡಿರೆ ಅನಾರೋಗ್ಯ ತಪ್ಪಿದ್ದಲ್ಲ, ಅಲ್ಲದೋ? ಆರೋಗ್ಯವಂತರಾಗಿ ಬದ್ಕಲೆ – ರಜ ಕ್ರಯ ಹೆಚ್ಚಾದರೂ ಸಾರ ಇಲ್ಲೆ, ಒಳ್ಳೆದನ್ನೇ ತೆಕ್ಕೊಳೇಕು.

      {ಯಾವುದೋ ಒಂದು ಜೋಕು ನೆಂಪಾತು !}
      ಯೇವದು ಅಕ್ಕ? ಒಪ್ಪಣ್ಣಂಗೆ ನೆಂಪಾಯಿದಿಲ್ಲೆನ್ನೆ?
      ಒಂದು ಶುದ್ದಿ ಮಾಡಿ ಹೇಳ್ತಿರಾ? 🙂

      1. ಶುದ್ದಿ ಮಾಡುವಷ್ಟು ದೊಡ್ಡ ಜೋಕು ಅಲ್ಲ. ಆದರೂ ಪ್ರಯತ್ನ ಮಾಡ್ತೆ 🙂

  20. ಒ೦ದು ಕಳಕಳಿಯ ವಿಷಯವ ಸುಲಲಿತವಾಗಿ ಹಿತವಾದ ಹಾಸ್ಯಲೇಪನದೊಟ್ಟಿ೦ಗೆ ಕೊಟ್ಟಿದೆ ಒಪ್ಪಣ್ಣ. ವಿಷಯ ಬೇಜಾರಿ೦ದೇ, ಹಾ೦ಗಾಗಿ ಖುಷಿಯಾತು ಹೇಳುವದು ಹೇ೦ಗೆ?

    ನಮ್ಮ ದೇಶಲ್ಲಿ ಚೈನಾದ್ದರೊಟ್ಟಿ೦ಗೆ ನಮ್ಮ ದೇಶದ ಉತ್ಪನ್ನಗಳುದೆ ಸಿಕ್ಕುತ್ತು (ಈಗ!).
    ಜಪಾನಿನ ಹಾ೦ಗಿಪ್ಪ ದೇಶ೦ಗಳಲ್ಲಿ ಮಾರ್ಕೆಟ್ ನ ಪೂರ್ತಿ ನು೦ಗಿದ್ದು ಚೈನಾ. ಎಲ್ಲವೂ `ಮೇಡ್ ಇನ್ ಚೈನಾ’ ವೇ. ಅಲ್ಯಾಣ ಅ೦ಗಡಿಲ್ಲಿ `ಮೇಡ್ ಇನ್ ಜಪಾನ್’ ಎ೦ತ ಇದ್ದು ಹೇಳಿ ಹುಡ್ಕಿರೆ ಕ೦ಡದು ಒ೦ದು ಸ್ಪ೦ಜಿನ ಕಟ್ಟ ಮಾ೦ತ್ರ. ಅದು ಬಿಟ್ಟರೆ ಒ೦ದು ಸ೦ತೋಷದ ಸ೦ಗತಿ ಎ೦ತ ಹೇಳಿರೆ ವಸ್ತ್ರ, ಜಮಖಾನೆಗಳ ಮೇಲೆ “ಮೇಡ್ ಇನ್ ಇ೦ಡಿಯಾ” ಹೇಳಿ ಕ೦ಡದು!

    ಇನ್ನು ಕೆಲವು ವಸ್ತುಗಳ ಮೇಡ್ ಇನ್ … ಹೇಳಿ ಯಾವ ದೇಶದ ಹೆಸರಿದ್ದರುದೆ ಒಳಾಣ ಪಾರ್ಟ್ಸ್ ಎಲ್ಲ ಚೈನಾದ್ದೇ ಆಗಿಕ್ಕು! ಕೆಲವು ದೇಶ೦ಗಳ ಕ೦ಪೆನಿಗೊ ಅವರ ಉತ್ಪನ್ನ ತಯಾರಿಸಿ ಕೊಡ್ಳೆ ಚೈನಾ ಕ೦ಪೆನಿಗೊಕ್ಕೆ ಗುತ್ತಿಗೆ ಕೊಡ್ತವಡ. ಯಾವುದಾರು ವಸ್ತುವಿನ ಉತ್ಪಾದನೆಗೆ ಓರ್ಡರ್ ಸಿಕ್ಕಿಯಪ್ಪಗ ಹೇಳಿದ ಲೆಕ್ಕ೦ದ ೨೫-೩೦ ಸಾವಿರ ಹೆಚ್ಚೇ ತಯಾರುಸಿ ಮಡುಗುತ್ತಡ. ಅದೇ ಖರ್ಚಿಲ್ಲಿ ಆವ್ತನ್ನೆ ಹೇಳ್ಯೊ೦ಡು. ಮತ್ತೆ ಹೆಚ್ಚಿನದ್ದರ ನಮ್ಮ ಹಾ೦ಗಿಪ್ಪ ದೇಶ೦ಗಳಲ್ಲಿ ತ೦ದು ಹಾಕಿತ್ತು!!

    ಮಾರ್ಕೆಟ್ ನ ವಿಷಯಲ್ಲಿ ಮಾ೦ತ್ರ ಅಲ್ಲ, ಇನ್ನೂ ಹಲವು ಕ್ಷೇತ್ರ೦ಗಳಲ್ಲಿ ಆಧಿಪತ್ಯ ಸ್ಥಾಪಿಸಲೆ ಚೈನಾ ಕುತ೦ತ್ರ ಮಾಡ್ಯೊ೦ಡು ಇದ್ದಡ. ತು೦ಬ ದೂ(ದು)ರಾಲೋಚನೆ ಇದ್ದು ಅವಕ್ಕೆ!

    1. ಡಾಮಹೇಶಣ್ಣ, ಪರದೇಶಲ್ಲಿ ಮೇಡಿನ್ನಿಂಡಿಯಾ – ಹೇದು ಓದುವಗ ಅತೀವ ಆನಂದ ಆವುತ್ತದು ಕೊಶಿ ಆತು.
      ಭಾರತದ ವಸ್ತುಗಳ ಮೌಲ್ಯ ಆ ನಮುನೆದು.
      ಅಷ್ಟು ಚೆಂದದ ವಸ್ತುಗಳನ್ನೇ ರಪ್ತು ಮಾಡ್ತದಡ, ಅಪ್ಪಲ್ದೋ?

      ಆದರೆ ವಸ್ತುಗೊ ಚೀನಾದ್ಸು ಹೇಳಿ ಅಪ್ಪಗ ’ಹೆಚ್ಚು ಸಮಯ ಬಾಳಿಕೆ ಬಾರ’ ಹೇಳಿ ಅಲ್ಲಿ ಬರಕ್ಕೊಂಡಿದ್ದದರ ಕಂಡರೇ ಹೇಳ್ತು.
      ಎಂತ ಹೇಳ್ತಿ?

  21. ಒಪ್ಪಣ್ಣಾ.. ಒಪ್ಪ೦ಗೊ.
    ಭಾರತದ ಎಷ್ಟೋ ಏಕಸ್ವಾಮ್ಯ೦ಗಳಲ್ಲಿ ಆಯುರ್ವೇದ, ಯೋಗ, ಹೀ೦ಗಿಪ್ಪದರ ಒಟ್ಟಿ೦ಗೆ ಕಾ೦ಜೀವರ೦ ಸೀರೆಯೂ ಒ೦ದು. ಇದರ ನೇಯ್ತ ಟೆಕ್ನಿಕ್ಕು ಬೇರೆ ಆರಿ೦ಗು ಗೊ೦ತಿದ್ದತ್ತಿಲ್ಲೆ. ಈಗ ಕೆಲವು ಸಮಯ ಮೊದ್ಲೆ ಕಾ೦ಜೀವರ೦-ನಿ೦ದಲೇ ಇದರ ಸ್ಪೆಶಲಿಸ್ಟುಗಳ ಕೆಲವು ಜನರ ಕೆಲವು ತಿ೦ಗಳುಗಳ ಮಟ್ಟಿ೦ಗೆ ಚೀನಾ ದೇಶದವು ಕರಕ್ಕೊ೦ಡು ಹೋದವು- ಸುಮ್ಮನೆ ಅಲ್ಲ, ಲಕ್ಷಗಟ್ಳೆ ರುಪಾಯಿ ಕೊಟ್ಟು. ಎ೦ತಕೆ ಗೊ೦ತಿದ್ದೋ? ಕಾ೦ಜೀವರ೦ ಸೀರೆ ಹೇ೦ಗೆ ತಯಾರುಸುತ್ತದು ಹೇಳಿ ಕಲಿವಲೆ. ಇವು ಭಾರೀ ಸ೦ತೋಷಲ್ಲಿ ಹೋಗಿ ಕಲಿಸಿ ಕೊಟ್ಟಿಕ್ಕಿ ಬ೦ದವು. ಇನ್ನು ಕೆಲವೇ ವರ್ಷ೦ಗಳಲ್ಲಿ ನಮ್ಮ ಜವುಳಿ ಅ೦ಗಡಿಗಳಲ್ಲಿ ೨೦೦-೩೦೦ ರುಪಾಯಿಗೆ ಕಾ೦ಜೀವರ೦ ಪಟ್ಟೆ(ಲೊಟ್ಟೆ) ಸೀರೆ (ಮೇಡ್ ಇನ್ ಚೈನಾ) ಬಾರದ್ರೆ, ನಮ್ಮ ಜನ೦ಗೊ ಅದರ ಮರ್ಳುಕಟ್ಟಿ ತೆಕ್ಕೋಳದ್ದ್ರೆ ಮತ್ತೆ ಕೇಳಿ..
    ಇದೊ೦ದೇ ವಿಷಯ ಅಲ್ಲ.. ಹಲವು ವಿಷಯ೦ಗಳಲ್ಲಿ ಇದೇ ಕತೆ. ಈಗ ಎಲೆಕ್ಟ್ರೋನಿಕ್ ಸಾಮನುಗಳ ರಿಪೇರಿ ಮಾಡುಸುವದು ಎಷ್ಟು ಕಮ್ಮಿ ಆಯಿದು ಹೇಳಿ ಆ ಕ್ಷೇತ್ರಲ್ಲಿ ಕೆಲಸ ಮಾಡುವವರ ಹತ್ರೆ ಕೇಳಿರೆ ಗೊ೦ತಕ್ಕು. ವಸ್ತುವಿನ ಮೌಲ್ಯ ತೀರಾ ತೀರಾ ಕಮ್ಮಿ (ಒಟ್ಟಿ೦ಗೆ ಗುಣಮಟ್ಟವೂ) ಆದ ಕಾರಣ ಹೆಚ್ಚಿನವಕ್ಕುದೆ ಉಪಯೋಗಿಸಿ ಹಾಳಾದಪ್ಪಗ ಅದರ ಇಡ್ಕಿ ಬೇರೆ ಒ೦ದು ಹೊಸತ್ತರ ತೆಕ್ಕೋಳ್ತ ಅಭ್ಯಾಸವೇ ಆಗಿಹೋಯಿದು. ಇದರಿ೦ದಾಗಿ ಬಪ್ಪ ಪರೋಕ್ಷ ದುಷ್ಪರಿಣಾಮ೦ಗಳ ಬಗ್ಗೆ ನಮ್ಮ ಜನ೦ಗೊ ಯಾವಗ ಜಾಗೃತ ಆವ್ತವೋ ಅಲ್ಲಿವರೇ೦ಗುದೆ ಬೇರೆ ನಿವೃತ್ತಿ ಇಲ್ಲೆ.
    ಚೈನಾದ ಎಷ್ಟೋ ವಸ್ತುಗಳ ಆನು ಈಗ ಇಪ್ಪ ದೇಶಲ್ಲಿ ಆಮದು ಕೂಡಾ ಮಾಡ್ಲೆ ಬಿಡ್ತವಿಲ್ಲೆ.
    ಒಳ್ಳೇ ಶುದ್ದಿಗೆ, ಒಳ್ಳೇ ಶೈಲಿಗೆ ಹೃತ್ಪೂರ್ವಕ ಒಪ್ಪ೦ಗೊ.

    1. ಪೆರುವದ ಗಣೇಶಣ್ಣಾ,
      ಕಾಂಜೀವರಂ ಸೀರೆಯ ಬಗ್ಗೆ ತಿಳುಸಿದ್ದು ಒಳ್ಳೆ ಮಾಹಿತಿ.
      ಓಹೋ – ಹಾಂಗಾರೆ ನಮ್ಮ ಅಜ್ಜಂದ್ರ ಕೆಣಿಯ ಪೂರ ಅವು ಕಲ್ತುಗೊಂಡವೋ?
      ಇನ್ನು ಸದ್ಯಲ್ಲೇ ಇಕ್ಕು ಹಾಂಗಾರೆ, ಅಲ್ಲದೋ? 🙁

      ಇನ್ನಾಣೋರು ಕಾಂಜೀವರ ತೆಗವಲೆ ಚೆನ್ನೈಬಾವನ ಮನಗೆ ಹೋಯೇಕಾದ್ದು ಇರ, ಕಾಸ್ರೋಡು ಬಷ್ಟೇಂಡಿಲೇ ಸಿಕ್ಕುಗಪ್ಪೋ? 🙁

  22. ಎನ್ನತ್ರೆ ಒಂದು ಮೊಬೈಲು ಇದ್ದು. ಒಂದಲ್ಲ ಎರಡು ಸಿಮ್ ಹಾಕುತ್ಸು. ಅಂದು ತೆಗವಾಗ ೭೫೦೦. ಸರೀ ಮಾತಾಡ್ಳೆ ಎಡಿತ್ತು, ಸರೀ ಮೆಸೇಜ್ ಕಳುಸಲೂ ಎಡಿತ್ತು. ಎನ ಬೇಕಾದ್ದೂ ಅಷ್ಟಕ್ಕೇ. ಶಾಪಿಂಗ್ ಹೋದಿಪ್ಪಗ ಒಂದು ಅಂಗಡಿಲಿ ಒಂದು ಮೊಬೈಲ್ ಕಂಡತ್ತು. ಒಂದಲ್ಲ ಎರಡಲ್ಲಾ ಮೂರು ಸಿಮ್ ಹಾಕುತ್ಸು. ಕಾಂಬಲೂ ಚಂದ, ಸೈಜೂ ಸಣ್ಣಕ್ಕೆ , ಕ್ಯಾಮರ ಇದ್ದು, ಎಫ್ ಎಂ, ಅಡಿಯೋ, ವೀಡಿಯೋ ಎಲ್ಲಾ ಬಗೆಯೂ ಇತ್ತು. ಏಳು ಸಾವಿರ ಇಲ್ಲೇ. ಬರೇ ಮೂರು ಸಾವಿರ. ಕೇ.ಪಿ ಬೊಳುಂಬು ಆತುರವೋ, ಅಲ್ಲ ನಮ್ಮ ಕೊದಿಯೋ. ಪೈಸೆ ಕೊಟ್ಟು ತೆಕ್ಕೊಂಡು ಬಂತು ಮನಗೆ ಹೆಮ್ಮೆ ಗರ್ವಲ್ಲಿ ಹೊಸತ್ತು ಇದ್ದು ಎನ್ನ ಕೈಲಿ ಹೇದು. ಸಿಮ್ ಹಾಕಿ ಮೆಸೇಜ್ ಕಳ್ಸಿರೆ ಹೋವುತ್ತು. ಫೋನ್ ಮಾಡಿ ಮಾತಾಡಿರೆ ಲಾಯಕ್ಕ ಎಕ್ಕೊ ಬಂತು. ನಿಮಿಷಕ್ಕೆರಡು ಸರ್ತಿ ಲಾಕ್ ಅಪ್ಪದು, ಸ್ಕ್ರೀನ್ ಬದಲುತ್ತು, ಉಪದ್ರ ರಗಳೆ ತಲೆಹರಟೆ ಎಲ್ಲವೂ ಉಚಿತ. ಶನಿಯೇ ತೊಲಗಾಚೆ ಹೇಳಿ ಒಬ್ಬಂಗೆ ಮರುದಿನವೇ ಒಂದು ಸಾವಿರಕ್ಕೆ ಮಾರಿದೆ. ಮರುದಿನವೇ ಅವ ವಾಪಸು ಕೊಟ್ಟ ನೀನೇ ಮಡಿಕ್ಕೊ ಇದರ ಹೇಳಿ. ಮತ್ತೊಬ್ಬಂಗೆ ದಾನ ಕೊಟ್ಟೆ. ಅವ ಅದರ ಅವನ ಇನ್ನೂ ಚಡ್ಡಿ ಹಾಕದ್ದ ಮಾಣಿ ಕೈಲಿ ಆಡ್ಳೆ ಕೊಟ್ಟ.
    ಚೀನಾದವರ ಬುದ್ದಿವಂತಿಗೆಲಿ ಅವಕ್ಕೆ ಒಳ್ಳೆದಾತು. “ಕಸವೂ ಹೋತು – ಕಾಸೂ ಬಂತು”. ನಮ್ಮ ಬುದ್ದಿವಂತರಿಂಗೆ ಇನ್ನೂ ಜ್ಞಾನೋದಯ ಮಾತ್ರ ಆಯ್ದಿಲ್ಲೇ!. ಒಂದು ವೇಳೆ ಆ ಚೀನಾ ಸಾಮಾನುಗೊ ಭಾರತಕ್ಕೆ ಬಾರದ್ದೆ ಇರುತ್ತಿದ್ರೆ ಬಾಕಿ ಇಂಡಿಯಾಲ್ಲಿ ಇಪ್ಪ ಕ್ವಾಲಿಟಿ ಹೇಳಿಗೊಂಬ ಸಾಮಾನುಗಳ ಬೆಲೆ ಸಾಮಾನ್ಯನ ಕೈಗೆ ಸಿಕ್ಕುವಾಂಗೆ ಇರುತ್ತಿತ್ತೋ ಹೇಳಿಯೂ ಸಂಶಯವೇ. ಉಚಿತ ಟ.ವಿ. , ಮಿಕ್ಸಿ, ಗ್ರೈಂಡರ್ ಹೇಳಿ ಜನರ ಮಂಕು ಬೂದಿ ಮಾಡ್ಳೆ ಭರವಸೆ ಮಾತುಗೊ ಎಡಿಗಾವ್ತಿತ್ತೋ ಹೇಳಿಯೂ ಸಂಶಯವೇ. ಚಿಂದಿ ಆಗಿಪ್ಪ ಈ ಚೀನಾ ವಸ್ತುಗಳಿಂದ ಗ್ರಾಹಕನ ಕಾಪಾಡಲೆ ಇನ್ನೊಂದು ನಿರಶನ ಸತ್ಯಾಗ್ರಹ ಎಳಗೆಕಕ್ಕೋ.
    ಚಿನ್ನದ ಚೈನೇ ಆದರೂ ಚೀನಾದ್ದಾದರೆ ಬೇಡ ಹೇಳುವ ಒಪ್ಪಣ್ಣನ ಚಿಂತನೆ ಲಾಯಕ್ಕ ಆಯ್ದು ಹೇಳಿ ನಮ್ಮ ಒಪ್ಪ.

    1. ಹ ಹಾ! ಚೆನ್ನೈಭಾವನ ಒಪ್ಪದ ಸುರು ಕಂಡು ’ಚೀನಾದ ಕಸವಿನ ಹೊಗಳ್ತವೋ..’ ಹೇದು ಆತೊಂದರಿ. ಮತ್ತೆ ಇನ್ನೂ ಚಡ್ಡಿಹಾಕದ್ದ ಮಾಣಿಗೆ ಕೊಡ್ತದು ಕೇಳಿ ಬೈಲಿಲಿ ನೆಗೆಯೋ ನೆಗೆ. 😀
      ಆಗಲಿ, ಒಂದರಿ ಅನುಭವ ಆತನ್ನೇ – ಇನ್ನೊಬ್ಬಂಗೆ ಹೇಳುವ ಮದಲು ನವಗೇ ಅದರ ಅನುಭವ ಇರೇಕಡ. ಒಪ್ಪಣ್ಣನಿಂದಲೂ ನಿಂಗೊ ಸೂಕ್ತ ವೆಗ್ತಿ ಹಾಂಗಾರೆ. ಅಲ್ಲದೋ? 🙂

  23. ಯಬ್ಬ ಎಷ್ಟು ಲಾಯಿಕ ಬರೆತ್ತೆ ಒಪ್ಪಣ್ಣ ನೀನು? (ಎನ್ನ ಕಣ್ಣು ಮುಟ್ಟ ಮಿನಿಯಾ?) ಯಾವುದೆ ವಿಷ್ಯದ ಬಗ್ಗೆ ಆದರೂ ಓದುವವಂಗೆ ಉದಾಸಿನವೇ ಆಗದ್ದ ಹಾಂಗೆ, ನೀನು ಶುದ್ಧಿ ಬರವ ಕ್ರಮದ ಬಗ್ಗೆ, ಅದು ಹೇಂಗೆ ಹಾಂಗೆ ಬರವದು ಹೇಳಿಯೆ ಒಂದು ಶುದ್ಧಿ ಬರವಲಕ್ಕು ನಿನಗೆ. ಎಂತ ಹೇಳ್ತೆ ಒಪ್ಪಣ್ಣ? ಲಾಯಿಕಾಯಿದು ಬರದ್ದು…
    ಇನ್ನಾಣ ವಾರದ ದಾರಿ ನೋಡುದು ಇನ್ನು,
    ಸುಮನಕ್ಕ

    1. ಸುಮನಕ್ಕನ ಪ್ರೀತಿಯ ಒಪ್ಪಲ್ಲಿ ಖಂಡಿತಾ ಕಣ್ಣು ಮುಟ್ಟ ಆತಾ..
      ಒಪ್ಪಣ್ಣ ಬರವದು ಲೇಖನ ಅಲ್ಲ, ಕತೆ ಅಲ್ಲ, ಕಾದಂಬರಿ ಅಲ್ಲ, ದಾರಾವಾಹಿ ಅಲ್ಲ – ಇದು “ಶುದ್ದಿ”.
      ನಮ್ಮ ನೆರೆಕರೆಲಿ ನೆಡೆತ್ತ ಶುದ್ದಿಗೊ ಅಲ್ಲದೋ – ಹಾಂಗಾಗಿ ಅದರ “ಇದ್ದ ಹಾಂಗೇ ಹೇಳುದು!” 😉
      ಕೇಳ್ತ ಬೈಲಿನೋರು ಇದ್ದರೆ ಒಪ್ಪಣ್ಣಂಗೆ ಉದಾಸ್ನ ಆಗ ಇದಾ! 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×