ಬೇವಿಲ್ಲದ್ದ ಸೇಮಗೆಲಿ ವಿಷ ತುಂಬಿದ್ದಾಡ…!!!

June 5, 2015 ರ 12:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತರವಾಡುಮನೆ ಶ್ಯಾಂಬಾವಂಗೆ ಅಂಗುಡಿ ಒಯಿವಾಟು ಇಪ್ಪದು ನಿಂಗೊಗೆ ಅರಡಿಗನ್ನೆ? ಎಡಕ್ಕಿಲಿ ಎಲ್ಲಿಗಾರು ಹೋಯೇಕಾರೆ – ಉದಿಯಪ್ಪಗ ಮನೆಂದ ಬೇಗ ಹೆರಡೆಕ್ಕಾವುತ್ತು.
ಶ್ಯಾಂಬಾವ° ಬೇಗ ಎದ್ದು ತೆಯಾರಪ್ಪಗ ಪಾತಿ ಅತ್ತೆಯೂ ಏಳ್ತವು, ಮಗಂಗೆ ಎಂತಾರು ಪಲಾರ ಮಾಡಿಕ್ಕುವೊ° ಹೇದು. ಹೆಚ್ಚಾಗಿ ಮುನ್ನಾದಿನ ಬೊದುಳ್ಳೆ ಹಾಕಿದ ಅಕ್ಕಿಯೋ ಹಸರೋ ಎಂತಾರು ಇರ್ತು.
ಕೆಲವೊಂದು ಸರ್ತಿ ಮುನ್ನಾದಿನವೇ ಕಡದು ಮಡಗಿದ ಉದ್ದಿನಹಿಟ್ಟು ಇರ್ತು; ಅದೆಂತೂ ಇಲ್ಲದ್ದರೆ ರಪಕ್ಕನೆ ಗೋಧಿಹೊಡಿಯೋ ಎಂತಾರು ಕರಡಿ ಹಿಟ್ಟು ತೆಯಾರು ಮಾಡ್ತವು.
ದೋಸೆ ಎರದು ಎರದು ಬೆಶಿ ಬೆಶಿ ಕೊಟ್ಟತ್ತು. ಕೂಡ್ಳೆ ಮೊಸರೋ, ಚಟ್ಣಿಯೋ, ಉಪ್ಪಿನಕಾಯಿಯೋ ಎಂತಾರು ಸೇರ್ಸಿಗೊಂಗು.

ಈಗೀಗ ಕೆಲವೊಂದು ಸರ್ತಿ ಪಾತಿಅತ್ತೆಗೆ ಉದಿಯಪ್ಪಗ ಬೇಗ ಎಚ್ಚರಿಗೆ ಆವುತ್ತಿಲ್ಲೆ. ಇರುಳಿಡೀ ಸಮಗಟ್ಟು ಒರಕ್ಕು ಬಾರದ್ದೆ ಅಪ್ಪದು ಸುರು ಆಗಿ ಹಲವೊರಿಶ ಆತು; ಹಾಂಗಾಗಿ ಉದೆಕ್ಕಾಲ ನಾಲ್ಕಕ್ಕೆ ಒರಕ್ಕು ಹಿಡುದರೆ ಏಳು-ಏಳೂವರೆ ಒರೆಗೂ ಒಳ್ಳೆ ಒರಕ್ಕು.
ಸೂರ್ಯೋದಯಂದ ಮದಲೇ ಏಳ್ತ ಪರಿವಾಡಿ ಮದಲಿಂದಲೇ ಇದ್ದರೂ – ಈಗೀಗ ಕೆಲವು ಸರ್ತಿ ಏಳುವಗ ತಡವಪ್ಪದು ಅದಕ್ಕೇ.
ಈ ವಿಶಯ ಶ್ಯಾಂಬಾವಂಗೂ ಅರಡಿಗು – ಅಮ್ಮಂಗೆ ಒರಕ್ಕು ಸಮಗಟ್ಟು ಬತ್ತಿಲ್ಲೆ ಇರುಳು ಹೇಳ್ತ ಸಂಗತಿ. ಹಾಂಗಾಗಿ ಎಲ್ಲಿಗಾರು ಹೆರಡ್ತ ದಿನ ಅಮ್ಮ ಏಳದ್ರೆ ಎಂತೂ ಅಂಬೆರ್ಪಿಲಿ ಏಳುಸುಲೆ ಇಲ್ಲೆ.

ಎಷ್ಟೇ ಎಚ್ಚರಿಗೆ ಆಗದ್ರೂ, ಮಗ° ಹೆರಡ್ಳಪ್ಪಗ ಎಚ್ಚರಿಗೆ ಆಗಿಯೇ ಆವುತ್ತು ಪಾತಿ ಅತ್ತೆಗೆ. ರಜ ತಡವಕ್ಕು ಅಷ್ಟೆ, ಅಂದರೂ ಶಾಂಬಾವಂಗೆ ಜೆಪತಪ ಆಗಿ ಪೇಂಟಂಗಿ ಹಾಕುವಗ ಎಚ್ಚರಿಗೆ ಆವುತ್ತು. ವಿದ್ಯಕ್ಕನ ಹಾಂಗಲ್ಲ.
ವಿದ್ಯಕ್ಕಂಗೆ ಏಳುಲೇ ಎಡಿತ್ತಿಲ್ಲೆ; ಅದು ಬೇರೆ.
ಪಾತಿ ಅತ್ತೆಗೆ ಎಚ್ಚರಿಗೆ ಆದ ಮತ್ತೆಯೂ  ಪುರುಸೊತ್ತು ಇದ್ದರೆ – ಆಗ ಹೇಳಿದಾಂಗೆ, ದೋಸೆ ಎರಗು. ಅಲ್ಲ, ಏಳುವಗ ತಡವಾಗಿ ಪುರುಸೊತ್ತಿಲ್ಲದ್ದರೆ ಎಂತ ಮಾಡುಗು?

ಎಂತಾರು ಮಾಡುಗು, ಮಗನ ಹೊಟ್ಟೆ ತುಂಬುಸಿ ಕಳುಸುಗು. ಖಾಲಿ ಹೊಟ್ಟೆಲಿ ಕಳುಸುಲೇ ಕಳುಸವು ಮಗನ. ಅಂಬೆರ್ಪು ಅಂಬೆರ್ಪು ಹೇದು ಹೊಟ್ಟೆ ಹಾಳಪ್ಪದರ ಪಾತಿ ಅತ್ತೆ ತಿನ್ನುಸವು.
ಎರಡೇ ನಿಮಿಶಲ್ಲಿ ಕೊಡ್ತೆ ಹೇದು ಮಂಗ ಮಾಡವು; ಆದರೂ – ಹತ್ತು ನಿಮಿಶಂದ ಹೆಚ್ಚಿಗೆ ಬೇಡ. ಶಾಂಬಾವ° ಪೇಂಟಂಗಿ ಹಾಕಿದ ಮತ್ತೆ ಹತ್ತು ನಿಮಿಶ ತಲೆ ಬಾಚುಲೇ ತೆಕ್ಕೊಳ್ತ°. ಹಾಂಗಾಗಿ ತೊಂದರೆ ಇಲ್ಲೆ.
~

ಪಾತಿ ಅತ್ತೆಗೆಂತ ಅಂಬೆರ್ಪಿನ ತಿಂಡಿಗೆ ಬರವೋ? ಅಲ್ಲಪ್ಪ!
ಅಂಬಗ – ಅಂಬೆರ್ಪಿಂಗೆ ಎಂತ ಮಾಡಿ ಕೊಡುಗು ಪಾತಿ ಅತ್ತೆ?
ಇದಾ,

ಒಗ್ಗರ್ಸುದು:
– ಹೊಡಿ ಅವಲಕ್ಕಿಯ ನೀರಿಂಗದ್ದಿ, ಒಗ್ಗರ್ಸಿರೆ ಉಸುಲಿ ಆತು. ಒಗ್ಗರಣೆ ಸಾಯಿತ್ಯಂಗೊ ಹೇಂಗೂ ಕೈಗೆ ಸಿಕ್ಕುತ್ತಲ್ಲಿ ಇರ್ತು. ಬಾಣಲೆ ಮಡುಗಿದ ಮತ್ತೆ ಎರದು ನಿಮಿಶಲ್ಲಿ ಉಸುಲಿ ಒಗ್ಗರಣೆ ಹೊಟ್ಟುತ್ತು. ಮತ್ತೆ ಬೆಶಿ ಬೇಕಾದಷ್ಟು ಹೊತ್ತು ಒಲೆಲಿ ಮಡಗಿರೆ ಆತು.

– ಹೆಚ್ಚಾಗಿ ಮರದಿನ ಅಂಬೆರ್ಪು ಬತ್ತರೆ, ಮುನ್ನಾಣ ದಿನವೇ ಆಲೋಚನೆ ಮಾಡಿ ಹಸರು ಒಗ್ಗರುಸಿ ಮಡಗುಸ್ಸು ಪಾತಿ ಅತ್ತೆಯ ಕ್ರಮ ಇದಾ. ಉಸುಲಿ ಮಾಡಿದ ಹಾಂಗೇ – ಹಸರಿನ ಒಗ್ಗರುಸಿರೆ ದೇಹಕ್ಕೂ ಒಳ್ಳೆದು, ಬಾಯಿ ರುಚಿಗೊ ಒಳ್ಳೆದು. ಒಗ್ಗರಣೆ ಎರಡು ನಿಮ್ಶಲ್ಲಿ ಮಾಡುಗು ಪಾತಿ ಅತ್ತೆ.

–  ಪುರುಸೊತ್ತು ಜಾಸ್ತಿ ಸಿಕ್ಕಿರೆ ಸಜ್ಜಿಗೆ, ಗೋಧಿಕಡಿ, ಇತ್ಯಾದಿ ಒಗ್ಗರ್ಸುಗು. ಅಂಬೆರ್ಪಿಲಿ ಒಗ್ಗರಣೆ ಮಾಡಿ, ಅದಕ್ಕೆ ಜೊಯಿಂಕನೆ ನೀರು ಎರದು, ಸಜ್ಜಿಗೆ ಸೊರುಗಿ ಕರಡಿರೆ ಸಜ್ಜಿಗೆ ಆತು.
ಸಜ್ಜಿಗೆಯ ಬದಲು ಬೆಣ್ತಕ್ಕಿ ಒಗ್ಗರ್ಸಿರೆ ಉಪ್ಪಿಟ್ಟು ಆತದಾ!

– ಒಗ್ಗರ್ಸೆಕ್ಕಾರೆ ಗೋಧಿ ಹೊಡಿಯೋ, ಸಜ್ಜಿಗೆಯೋ ಬೇಕೇಬೇಕು ಹೇದು ಏನಿಲ್ಲೆ ಪಾತಿ ಅತ್ತೆಗೆ. ಬಾಳೆಕಾಯಿಯೂ ಅಕ್ಕು; ಗೆಣಂಗೂ ಅಕ್ಕು – ರಂಗಮಾವ° ತೋಟಂದಲೇ ಕಡುದು ತಂದು ಮಡಗಿದ್ದು ಇರ್ತು, ಗೆಣಂಗು ಆದರೆ ಅವರದ್ದೇ ಜಾಲಕೊಡಿಲಿ ಆದ್ದು ಇರ್ತು. ಅದರ ಒಗ್ಗರ್ಸಿರೆ ಹೊಟ್ಟೆ ತುಂಬುಸುಲೂ ಆತು, ಸತ್ವಾಂಶವೂ ಆತು. ಮದಲಿಂಗೆ ಅಕ್ಕಿಗೆ ಬರಗ್ಗಾಲ ಇಪ್ಪ ಕಾಲಲ್ಲಿ ನಮ್ಮ ಅಜ್ಜಂದ್ರು ಅಜ್ಜಿಯಕ್ಕೊ ಎಲ್ಲ ಹೀಂಗಿರ್ಸರನ್ನೇ ತಿಂದು ಬದ್ಕಿದ್ದಾಡ.

ದೋಸೆ ಎರವದು:
– ಸಜ್ಜಿಗೆ ಒಗ್ಗರುಸುವಷ್ಟೂ ಪುರುಸೊತ್ತಿಲ್ಲೆಯೋ, ಬೇಡ. ಅದರ ರಪಕ್ಕನೆ ನೀರಿಲಿ ಕರಡಿ, ರಜ ಉಪ್ಪು ಮೆಣಸು ಹಾಕಿರೆ ದೋಸೆ ಹಿಟ್ಟು ತಯಾರು. ಕಾವಲಿಗೆ ಬೆಷಿ ಅಪ್ಪಲೆ ಮಡಗುವಷ್ಟೇ ಪುರುಸೊತ್ತು – ಸಜ್ಜಿಗೆ ದೋಸೆ ಎರವದೇ. ದಪ್ಪಕ್ಕೆ ಎರದರೆ ಬೇವಲೆ ಹೊತ್ತು ಬೇಕು; ಆದರೆ ಎರಡೇ ದೋಸೆಗೆ ಶಾಂಬಾವಂಗೆ ಕೊಡೆಯಾಲಕ್ಕೆ ಎತ್ತುಲೆಡಿಗು.

– ಸಜ್ಜಿಗೆ ದೋಸೆಯ ಬದಲು ಇನ್ನೊಂದು – ಗೋಧಿ ಹೊಡಿ ದೋಸೆ. ಹೊಡಿ ಕರಡಿತ್ತು, ಹಸಿಮೆಣಸೋ – ಮೆಣಸಿನ ಹೊಡಿಯೋ ಖಾರಕ್ಕೆ ಸೇರ್ಸಿತ್ತು, ರುಚಿಗೆ ಉಪ್ಪು ಹಾಕಿಂಡು – ಕಾವಲಿಗೆಲಿ ಎರದತ್ತು! ಗೋಧಿ ದೋಸೆ ತೆಯಾರು!

– ಅಕ್ಕಿ ಹೊಡಿ ಇದ್ದರೆ ಅದರದ್ದೂ ದೋಸೆ ಆವುತ್ತು. ಆದರೆ ಕಡದು ಮಾಡಿದಷ್ಟು ಲಾಯ್ಕಾಗ ಪಾತಿ ಅತ್ತೆಗೆ. ಆದರೆ ಅಂಬೆರ್ಪಿನೋರಿಂಗೆ ಅಕ್ಕನ್ನೇ?

ರೊಟ್ಟಿ ತಟ್ಟುದು:
– ಸಜ್ಜಿಗೆಯ ದೋಸೆ ಮಾಡುಗು, ಒಗ್ಗರ್ಸುಗು. ಅಷ್ಟಕ್ಕೂ ಪುರುಸೊತ್ತಾಗದ್ದರೆ, ರೊಟ್ಟಿ ತಟ್ಟುಗು. ದೋಸೆಂದಲೂ ರಜ್ಜ ದಪ್ಪಕ್ಕೆ ಹಿಟ್ಟು ಮಾಡಿರೆ ಎರವ ಕೆಲಸವೂ ಇಲ್ಲೆ, ಸೌಟಿಲಿಯೋ, ಕೈಲಿಯೋ ಮಣ್ಣ ತಟ್ಟಿರೆ ರೊಟ್ಟಿ ಆತತ್ಲಾಗಿ. ಕಾವಲಿಗೆಂದ ಇಳಿವ ಮೊದಲೇ ತಿಂಬಲೆ ಬಕ್ಕು ತರವಾಡು ಮನೆ ಪುಳ್ಳಿ.

– ಸಜ್ಜಿಗೆ ಮಾಂತ್ರ ಅಲ್ಲ, ರೊಟ್ಟಿ ತಟ್ಳೆ ಎಂತ ಇದ್ದರೂ ಆವುತ್ತು – ಯೇವ ಸೊಪ್ಪು ಸಿಕ್ಕಿರೂ ಆವುತ್ತು – ಬಸಳೆಯೋ, ನುಗ್ಗೆಯೋ, ದಾಸನವೋ – ಎಂತ ಸಿಕ್ಕಿರೂ ಆವುತ್ತು.
ಹೊಡಿ ಕರಡುವಗ ಅದನ್ನೂ ಸೇರ್ಸಿರೆ ರುಚಿ ಇನ್ನೂ ಎಳಗುತ್ತಾಡ. ದೇಹಕ್ಕೂ ಒಳ್ಳೆದು.

ಅವಲಕ್ಕಿ:
– ಕಾಯಿ ಕೆರವಲೆ ಎಷ್ಟೊತ್ತು? ಒಬ್ಬಂಗೆ ಬೇಕಪ್ಪಷ್ಟು ಕೆರವಲೆ ಪಾತಿಅತ್ತೆಗೆ ಅರ್ಧನಿಮಿಶವೂ ಬೇಡ. ಅದಕ್ಕೊಂದು ಮೆಣಸು ನುರುದು ಅವಲಕ್ಕಿ ಬೆರುಸುಲೆ ಒಟ್ಟು ಎರಡು ನಿಮಿಶ ಬೇಕಪ್ಪದು. ಕಾಯಿಸುಳಿಗೆ ಒಗ್ಗರಣೆಯೋ ಅದುವೋ ಇದುವೋ ಹಾಕಿ ಉದ್ದ ಮಾಡ್ತರೆ ಅಲ್ದೋ ಜಾಸ್ತಿ ಹೊತ್ತು ಬೇಕಪ್ಪದು?
ಇದಿಷ್ಟಕ್ಕೂ ಪುರುಸೊತ್ತಾಗದ್ರೆ ಮಾಂತ್ರ – ಹೊಡಿ ಅವಲಕ್ಕಿಗೆ ಮೊಸರು ಹಾಕಿ, ಒಟ್ಟಿಂಗೆ ಒಂದು ಬಿಂದು ಉಪ್ಪಿನೆಸರುದೇ ಸೇರ್ಸಿ ಕೊಡುಗು ತಿಂಬಲೆ.

ಯೇವದೇ ಕಾರಣಕ್ಕೂ – ಈಗಾಣ ನಮುನೆ ಹಾಳುಮೂಳು ಕಾಟಂಗೋಟಿಗಳ ಮಾಡವು, ಅಪ್ಪೋ!

~
ಅದೆಲ್ಲ ಈಗ ಎಂತಕೆ ನೆಂಪಾತು ಹೇದರೆ – ದೇಶ ಇಡೀ ಸುದ್ದಿ ಆದ ಒಂದು ಸೇಮಗೆ ಗವುಜಿ ಲಿ.

ಮೊದಲೇ ಬೇಶಿ, ಒಣಗುಸಿ ತುಂಬುಸಿದ ಸೇಮಗೆ ಇದ್ದಲ್ಲದೋ – ಅದರ ಪೆಕೆಟಿಲಿ ತುಂಬುಸಿ ಊರಿಡೀ ಮಾರಿಗೊಂಡು ಇತ್ತಿದ್ದವಾಡ – “ಎರಡೇ ನಿಮಿಶಲ್ಲಿ ಹೊಟ್ಟೆ ತುಂಬುಸಿಗೊಳ್ಳಿ” -ಹೇದು.

ಮೇಗಿ – ಹೇದು ಹೆಸರು.

ತರವಾಡು ಮನೆ ವಿದ್ಯಕ್ಕಂಗೆ ಮೊದಲೆಲ್ಲ ಭಾರೀ ಇಷ್ಟ. ರುಚಿಂದಾಗಿ ಇಷ್ಟವೋ, ಮಾಡ್ಳೆ ಸುಲಭ ಆಗಿ ಇಷ್ಟವೋ ಗೊಂತಿಲ್ಲೆ ರಂಗಮಾವಂಗೆ. ಒಲೆಗೆ ಮಡಗಿದ ಬಾಣಲೆಲಿ ನೀರು ಕಾಯೇಕಾರೇ ಎರಡು ನಿಮಿಶ ಬೇಕಾವುತ್ತು, ಇನ್ನು ಎರಡು ನಿಮಿಶಲ್ಲಿ ಸೇಮಗೆ ಮಾಡ್ತದು ಎಲ್ಲಿಂದ ಇವು – ಹೇದು ಒಂದೊಂದರಿ ಪರಂಚುಗು.
ಸತ್ವ ಪೂರ ತೆಗದು ತುಂಬುಸಿದ್ದವಾಯಿಕ್ಕು, ಹಾಂಗಾಗಿ ನೀರಿಂಗೆ ಹಾಕಿದ ಕೂಡ್ಳೆ ಮೆಸ್ತಂಗೆ ಆವುತ್ತು. ಬೇವಲೆ ಎಂತೂ ಇಲ್ಲೆ ಇದಾ – ಹೇದು ನೆಗೆಮಾಡುಗು ಒಂದೊಂದರಿ!
ಎರಡೇ ನಿಮಿಶಲ್ಲಿ – ಹೇದು ಜೆನಂಗಳ ಮಂಗ ಮಾಡ್ತ ಏರ್ಪಾಡು ಅಡ ಅದು. ಐದು ನಿಮಿಶಲ್ಲಿ ಮಾಡ್ತ ನಮುನೆ ತಿಂಡಿ ಅದು; ಅದೇ ಐದು ನಿಮಿಶಲ್ಲಿ ನಮ್ಮ ಪಾತಿ ಅತ್ತೆಗೂ ಮಾಡ್ಳೆ ಅರಡಿಗು.
ಮತ್ತೆ, ಅದರ್ಲಿ ದೊಡ್ಡ ಪೊನ್ನಂಬ್ರ ಎಂತರ ಬಂತು?
ಅಂತೇ ಪೈಶೆ ಹಾಳು ಮಾಡಿ ವಿಶ ತಿನ್ನೇಕೋ?

ಅಪ್ಪಡ – ಆ ಸೇಮಗೆಲಿ ವಿಷ ಇದ್ದಾಡ. ಜೀವಕ್ಕೊಳ್ಳೆದಲ್ಲಾಡ. ಪರೀಕ್ಷೆ ಮಾಡಿ ಅಪ್ಪಗ ಗೊಂತಾತಾಡ.
ಅಂಬಗ – ಇಷ್ಟು ಒರಿಶ ಪರೀಕ್ಷೆ ಮಾಡಿದ್ದವಿಲ್ಲೆಯೋ? ಮಾಡಿದ್ದರೆ ಅಂಬಗ ಪಾಸು ಆಯಿದೋ? ಈಗ ಮಾಂತ್ರ ಪೈಲು ಆದ್ಸೋ?
ಉಮ್ಮಪ್ಪ, ಎಂತದೂ – ಒಪ್ಪಣ್ಣಂಗರಡಿಯ.

ಆದರೆ, ಒಂದು ವಿಶಯ ಅರಡಿಗು –  ಎಷ್ಟು ಅಂಬೆರ್ಪಿದ್ದರೂ ಹೀಂಗಿರ್ಸ ವಿಶವ ತಿಂಬಲಾಗ.
ಎರಡು ನಿಮಿಶದ ಅಂಬೀರ್ಪಿಂಗೆ ವಿಶ ತಿಂದರೆ ನಮ್ಮ ಆಯುಶ್ಯವೇ ಕಮ್ಮಿ ಆವುತ್ತಾ ಬಪ್ಪದು.
ಪಾತಿ ಅತ್ತೆ ಮಾಡ್ತಾಂತೆ ಎಂತಾರು ಬೆಶಿ ಬೆಶಿ ಬೆಶಿ ಮಾಡ್ಳಾಗದೋ?
ಇಂದು ಬೇರೆ ’ವಿಶ್ವ ಪರಿಸರ ದಿನ’.
ಪಾತಿ ಅತ್ತೆಯ ಹಾಂಗೆ ಪರಿಸರದ ತಿಂಡಿ ತಿಂಬೊ°, ಪೆಕೆಟು ಸೇಮಗೆ ತಿಂದರೆ ಪರಿಸರಕ್ಕೂ ವಿಷ, ನಮ್ಮ ದೇಹಕ್ಕೂ ವಿಷ.

ಪಾತಿಅತ್ತೆಯ ಪಾಕಂಗೊ ಹೊಟ್ಟೆಗೂ ಒಳ್ಳೆದು, ದೇಹಕ್ಕೂ ಒಳ್ಳೆದು, ದೇಶಕ್ಕೂ ಒಳ್ಳೆದು. ಎಂತ ಹೇಳ್ತಿ?

~
ಒಂದೊಪ್ಪ: ಬೇವಿಲ್ಲದ್ದ ಸೇಮಗೆ ಬಾಯಿಗೆ ರುಚಿ, ಸೀವಿಲ್ಲದ್ದ ಬೇವು ದೇಹಕ್ಕೆ ರುಚಿ. ಆಯ್ಕೆ ನಮ್ಮ ನಮ್ಮದು. ಅಲ್ದೋ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  maggy li vishavastu ikku. aadare adara prachaara raja atishaya da haange kaanuttu. kelavu Chinese food li ee tarada vastugo idakkintaloo jasti ikku. yaavudannoo aparoopakke tindare enoo aaga. dinaa timbadu, makkoge yaavaagaloo adanne tinnisudu tappu. matte visha nivaaraka aahaarango nammalli iddu-arishina,bellulli, baale dandu ,hannugo-ityaadi. atiyaagi yaavude brand na virodhisudu baalishatana.

  [Reply]

  VA:F [1.9.22_1171]
  Rating: 0 (from 0 votes)
 2. parvathimbhat
  parvathimhatKAMMI

  ಮ್ಯಾಗಿ ಹೇಳಿ ಅಲ್ಲ .ಇ೦ದು ಹೆರಾ೦ದ ತಪ್ಪ ಪ್ರತಿಯೊ೦ದು ಆಹಾರ ವಸ್ತುವು ವಿಷ ಪೂರಿತವೇ .ಹಾ೦ಗಾಗಿ ಅದರ ಆದಷ್ಟೂ ಕಮ್ಮಿ ಉಪಯೋಗಿಸೆಕ್ಕು .ಇಲ್ಲದ್ರೆ ನಮ್ಮ ಮು೦ದಾಣ ಪೀಳಿಗೆಯ ನಾಶಕ್ಕೆ ನಾವೇ ಕಾರಣರಕ್ಕೂ .ವಿಷಯ ಎತ್ತಿದ ಒಪ್ಪಣ್ಣ೦ಗೆ ಧನ್ಯವಾದ೦ಗೊ .

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°

  ಉಮ್ಮ ಎನ ಆ ಮೇಗಿಯ ತಿಂದು ಗೊಂತಿಲ್ಲೆ., ಇನ್ನೀಗ ವಿಷ ಆದಮತ್ತೆ ತಿಂದಿಕ್ಕಲೂ ಗೊಂತಿಲ್ಲೆ. ಅವಲಕ್ಕಿ ಸಜ್ಜಿ ಅಕ್ಕಿ ಕಡಿಲಿಯೇ ಬಗೆ ಬಗೆಯ ಹೊಸ ರುಚಿ ಮಾಡ್ಳೆಡಿಗಪ್ಪ ಈ ಕಾಲಲ್ಲಿ ಇನ್ನೀ ಕೊಳಕ್ಕು ಮೇಗಿ ನವಗೆಂಸಕೆ ಅಲ್ದೋ. ಶುದ್ದಿಗೊಂದು ಒಪ್ಪ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ಅಕ್ಷರದಣ್ಣಪುಟ್ಟಬಾವ°ಬೊಳುಂಬು ಮಾವ°ಬೋಸ ಬಾವಕೇಜಿಮಾವ°ಅಜ್ಜಕಾನ ಭಾವಅನುಶ್ರೀ ಬಂಡಾಡಿಸುಭಗದೊಡ್ಡಭಾವಶ್ರೀಅಕ್ಕ°ಶೀಲಾಲಕ್ಷ್ಮೀ ಕಾಸರಗೋಡುಯೇನಂಕೂಡ್ಳು ಅಣ್ಣvreddhiಡಾಮಹೇಶಣ್ಣದೇವಸ್ಯ ಮಾಣಿಪುತ್ತೂರಿನ ಪುಟ್ಟಕ್ಕಚೂರಿಬೈಲು ದೀಪಕ್ಕಒಪ್ಪಕ್ಕಮಾಲಕ್ಕ°ಕೆದೂರು ಡಾಕ್ಟ್ರುಬಾವ°ಸಂಪಾದಕ°ವಸಂತರಾಜ್ ಹಳೆಮನೆಪುಣಚ ಡಾಕ್ಟ್ರುಅಡ್ಕತ್ತಿಮಾರುಮಾವ°ಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ