Oppanna.com

ಭೈರಪ್ಪಜ್ಜನ ಹಾಲಪಾತ್ರೆಯೂ, ಡಾರಾ ಗಣೇಶರ ಜೇನು ಕುಪ್ಪಿಯೂ..

ಬರದೋರು :   ಒಪ್ಪಣ್ಣ    on   29/01/2016    4 ಒಪ್ಪಂಗೊ

ಮೊನ್ನೆ ಡಾಮಹೇಶಣ್ನ ಊರಿಂಗೆ ಬಂದ್ಸು ಗೊಂತಿದ್ದು ಅಲ್ದೋ?
ಅದಾ – ಮುಜುಂಗಾವಿಲಿ ಸಂಸ್ಕೃತ ಕಾರ್ಯಾಗಾರ ಮಾಡಿದ್ದು; ಆ ಬಗ್ಗೆ ನಾವು ಶುದ್ದಿ ಮಾತಾಡಿದ್ದು ಬೈಲಿಲಿ.
ಕಾರ್ಯಾಗಾರದ ಗಡಿಬಿಡಿ ಎಲ್ಲ ಮುಗುದು ನಿಧಾನಕ್ಕೆ ಒಂದರಿ ಮಾತಾಡುವೊ° – ಹೇದು ಮರದಿನ ಅವರ ಮನಗೆ ಹೋದೆ.
ಹೋಪಗ ಬದಿಯಡ್ಕಂದ ಒಂದು ಕಟ್ಟ ಚಿಕ್ಕಣ್ಣುದೇ ತೆಕ್ಕೊಂಡು ಹೋದೆ.
ಬದಿಯೆಡ್ಕಂದ ಪೆರಡಾಲಕ್ಕೆ ಇಳಿತ್ತ ದೊಡ್ಡ ಹೊಂಡ ಕಳುದು, ಅಲ್ಲಿ ಮಾರ್ಗದಕರೆಂದ ದೊಡ್ಡ ಹೊಂಡಕ್ಕೆ ಇಳುದು ಮಹೇಶಣ್ಣನ ಮನೆಜಾಲಿಂಗೆ ಎತ್ತುವಾಗ, ಡಾಮಹೇಶಣ್ಣ ಎಂತದೋ ಹಳೇ ಪುಸ್ತಕ ಓದಿಗೊಂಡು ಇತ್ತವು.
ಡಾಮಹೇಶಣ್ಣ ಯೇವಾಗಳೂ ಹಳೆಪುಸ್ತಕ ಓದಿಗೊಂಡೇ ಇಪ್ಪದಾಡ, ಅದರ ಓದಿ ಓದಿ ಬೊಡುದಪ್ಪಾಗ, ಹೊಸ ಪುಸ್ತಕ ಓದುದಾಡ.
~
ಸುಮಾರು ಮಾತುಕತೆ-ಪಂಚಾತಿಗೆ ಆದ ಮತ್ತೆ, ಮೊನ್ನೆ ಬೆಂಗ್ಳೂರಿಲಿ ನೆಡದ ಒಂದು ಕಾರ್ಯಕ್ರಮದ ಬಗ್ಗೆ ಶುದ್ದಿ ಬಂತು.
ಒಂದು ವಿನೂತನ ಪ್ರಯೋಗ; ಇದರಿಂದ ಮೊದಲು ಎಲ್ಲಿಯೂ ಆ ನಮುನೆ ಆದ್ಸರ ಆರೂ ಕೇಳಿದ್ದವಿಲ್ಲೆ; ಇನ್ನು ಅಪ್ಪದೂ ಅಪರೂಪ;
ಹಾಂಗಿರ್ತ ಒಂದು ಕಾರ್ಯಕ್ರಮ ಅದು;
ಭೈರಪ್ಪಜ್ಜನ ಕಾದಂಬರಿಗಳ ಬಗ್ಗೆಯೇ ನೆಡದ ಒಂದು ಅಷ್ಟಾವಧಾನ ಕಾರ್ಯಕ್ರಮ!
~ಭೈರಪ್ಪಜ್ಜನ ಬಗ್ಗೆ ನಾವು ಬೈಲಿಲಿ ಇದರಿಂದ ಮೊದಲೇ ಮಾತಾಡಿದ್ದು.
ಮಾಷ್ಟ್ರುಮಾವನ ದೊಡ್ಡಮಗ° ಅಂದೊಂದರಿ ಅಮೇರಿಕಕ್ಕೆ ಹೋಪಗ ಬೇಗಿಂಗೆ ಮೂರು ಪುಸ್ತಕ ತುಂಬುಸಿಗೊಂಡು ಇದ್ದ ಸಂದರ್ಭಲ್ಲಿ – ಪರ್ವ, ಸಾರ್ಥ, ಆವರಣ – ಹೇಳ್ತ ಪುಸ್ತಕಂಗಳ ಬಗ್ಗೆ ಮಾತಾಡುವಾಗ ನಾವು ಭೈರಪ್ಪಜ್ಜನ ಬಗ್ಗೆ ರಜ ವಿಸ್ತಾರವಾಗಿಯೇ ಮಾತಾಡಿದ್ದು.
ಎಂಭತ್ತೊರಿಶ ಕಳುದರೂ ಯುವ ಚೈತನ್ಯಲ್ಲಿಪ್ಪ ಕರ್ನಾಟಕದ ನೆಚ್ಚಿನ ಕಾದಂಬರಿಕಾರ ಅವು.
ಯುವ ಜೆನಂಗೊಕ್ಕೆ ಓದುವ ಹುಚ್ಚು ಹಿಡುಶಿದ್ದದು, ಬರವಣಿಗೆಯ ಶೈಲಿ ಕಲುಶಿದ್ದದು, ಎಲ್ಲದಕ್ಕೂ ಹೆಚ್ಚಾಗಿ -ಸಾಹಿತ್ಯಾಸಕ್ತಿ ಬೆಳೆಸಿದ್ದದು – ಭೈರಪ್ಪಜ್ಜ° – ಹೇಳ್ತ ಸತ್ಯ ಎಲ್ಲೋರುದೇ ಒಪ್ಪುವಂತದ್ದೇ.
ಪ್ರತಿ ಕಾದಂಬರಿಲಿಯೂ ಭಾರತೀಯತೆಯ, ನಮ್ಮ ಸಂಸ್ಕೃತಿಯ ಹಿರಿಮೆ ಎದ್ದು ಕಾಣ್ತಾ ಇರ್ತು. ಮೂಲನೆಲದ ಸಂಸ್ಕಾರ ಸಂಸ್ಕೃತಿಗಳ ಎತ್ತಿ ಹಿಡಿತ್ತ, ಹಾಂಗೇ ಸಂಬಂಧ ಸೂಕ್ಷಂಗಳ ತಿಳುಶುತ್ತ ಅಮೋಘ ಕಾದಂಬರಿಗೊ ಆಡ ಅವೆಲ್ಲ. ಅವರ ರಚನಾ ಶೈಲಿ, ಬರವಣಿಗೆ ಶೈಲಿ – ಎಲ್ಲವುದೇ ಅತಿ ವಿನೂತನವಾಗಿ ಇಪ್ಪ ಕಾರಣ ಓದುತ್ತ ಜೆನಂಗೊಕ್ಕೂ ತುಂಬ ಆಸಕ್ತಿದಾಯಕವಾಗಿ ಇರ್ತಾಡ.
ಅವು ಬರದ ಕಾದಂಬರಿಗೊ ಎಲ್ಲವುದೇ – ಸಾವಿರಗಟ್ಳೆ ಪ್ರತಿಗೊ ಮುದ್ರಣ ಆಗಿ ಮಾರಾಟ ಆಗಿ ಈಗ ಎಷ್ಟೋ ಜೆನ ಓದುವ ಹಾಂಗೆ ಆಯಿದಾಡ.
ಅವರ ಕತೆಗಳೇ ಒಂದು ಅಕ್ಷರ ರೂಪದ ಸಿನೆಮ; ಅದರ ಸಿನೆಮ ಮಾಡ್ಳೂ ಸಾಧ್ಯ ಇಲ್ಲೆ – ಹೇಳುಸ್ಸು ಡಾಮಹೇಶಣ್ಣನ ಅಭಿಪ್ರಾಯ.

ಅವರ ಕಾದಂಬರಿಗಳ ಓದುಸ್ಸು ಹೇದರೆ ಹಾಲು ಕುಡುದ ಹಾಂಗಿರ್ತಾಡ.
ಅವರ ಸಮಗ್ರ ಸಾಹಿತ್ಯ ಹೇದರೆ – ಅದೊಂದು ಹಾಲಿನ ಕೊಡಪ್ಪಾನ ಆಡ.

~

ರಾಗಣೇಶರು – ಹೇದರೆ ಶತಾವಧಾನಿಗೊ.
ಒಂದೇ ಕಾಲಲ್ಲಿ ಹಲವು ವಿಶಯಂಗಳ ಬಗ್ಗೆ ಒಟ್ಟಿಂಗೇ ಏಕಾಗ್ರತೆ ಕೊಡುಸ್ಸು ಅವಧಾನ.
ಎಂಟು ಜೆನಕ್ಕೆ ಒಟ್ಟಿಂಗೇ ಏಕಾಗ್ರತೆ ಕೊಟ್ರೆ ಅದು ಅಷ್ಟಾವಧಾನ; ನೂರು ಜೆನಕ್ಕೆ ಕೊಡ್ತರೆ ಅದು ಶತಾವಧಾನ, ಸಾವಿರ ಆದರೆ ಸಹಸ್ರಾವಧಾನ – ಹೀಂಗೆ ಬೆಳೆತ್ತು ಪಟ್ಟಿ.
ನಮ್ಮ ರಾಗಣೇಶರು ಶತಾವಧಾನ ಹಲವೂ ಸರ್ತಿ ಮಾಡಿ “ಶತಾವಧಾನಿಗಳು” – ಹೇದು ಹೆಸರು ಪಡಕ್ಕೊಂಡಿದವಾಡ.
ಅವರ ಜ್ಞಾಪಕ ಶೆಗ್ತಿ, ಅವರ ಪ್ರತ್ಯುತ್ಪನ್ನಮತಿ, ಅವರ ಅನುಭವ, ತಿಳಿವಳಿಕೆ – ಇದೆಲ್ಲವೂ ಅಮೋಘ.
ನಮ್ಮ ಬೈಲಿಲಿಯೂ ಅವರ ಅಷ್ಟಾವಧಾನ ನೆಡದ್ದು – ಹೇಳ್ತದು ನಮ್ಮ ಹಿರಿಮೆ. ಅಂದು ಪುತ್ತೂರಿನ ಜೈನ ಭವನಲ್ಲಿ ಅಷ್ಟಾವಧಾನ ಕಾರ್ಯಕ್ರಮ ನೆಡದು, ಸಾವಿರಾರು ಜೆನ ಬಂದು ಕೊಶಿಪಟ್ಟಿದವು.
ಅವರ ಅಷ್ಟಾವಧಾನ ಕಾರ್ಯಕ್ರಮ ಹೇದರೆ ತಮಾಶೆ, ವಿದ್ವತ್ತು, ಸಂಗೀತ, ತಾಳ ರಾಗ – ಇತ್ಯಾದಿಗೊ ಎಲ್ಲ ಮೇಳೈಸಿದ ಒಂದು ಅಮೋಘ ಸಂಗಮ ಆಡ.
ಪ್ರತಿ ಮಾತುಗಳೂ ಜೇನ ಹನಿಯ ಹಾಂಗೆ ಚೀಪೆ ಚೀಪೆ ಇರ್ತಾಡ. ಜೇನಿನ ಸತ್ವದ ಹಾಂಗೇ – ತುಂಬ ಸತ್ವಯುತ ಆಗಿರ್ತಾಡ.

ಒಟ್ಟು ಅವರ ಅಷ್ಟಾವಧಾನ ಕೇಳುಸ್ಸು ಹೇದರೆ, ಅದು ಜೇನಿನ ಸವಿಯ ಅನುಭವಿಸಿದ ಹಾಂಗೆ – ಮನಸ್ಸಿಂಗೆ ಚೀಪೆ ಚೀಪೆ ಕೊಡ್ತಾಡ.
~

ಭೈರಪ್ಪಜ್ಜನ ಸಾಹಿತ್ಯ ಓದುಸ್ಸು ಹೇದರೆ – ಅದುವೇ ಒಂದು ಕೊಶಿ.
ರಾಗಣೇಶರ ಅಷ್ಟಾವಧಾನ ಕೇಳುಸ್ಸು ಹೇದರೆ – ಅದು ಇನ್ನೊಂದೇ ಕೊಶಿ.
ಹಾಂಗಾರೆ, ಇದೆರಡೂ ಒಟ್ಟಿಂಗೇ ಆದರೆ?
ಭೈರಪ್ಪಜ್ಜನ ಸಾಹಿತ್ಯದ ಬಗ್ಗೆಯೇ ಅಷ್ಟಾವಧಾನ ನೆಡದರೆ? – ಅದು ಹೇಂಗಕ್ಕು?
ಹಾಲಿನ ಪಾತ್ರೆಯೂ, ಜೇನ ಕುಪ್ಪಿಯೂ – ಒಟ್ಟಿಂಗೆ ತಂದ ಹಾಂಗಕ್ಕು!
ಒಂದು ಪಾತ್ರ ಹಾಲಿಂಗೆ ಒಂದು ಕುಪ್ಪಿ ಜೇನ ಕರಡುಸಿ ರಜ್ಜ ರಜ್ಜವೇ ಕುಡುದ ಹಾಂಗಾಗಿತ್ತು – ಹೇಳುಸ್ಸು ನಮ್ಮ ಡಾಮಹೇಶಣ್ಣನ ಅಭಿಪ್ರಾಯ.
~
ಅಪ್ಪಡ, ಹಾಲುದೇ – ಜೇನುದೇ ಸೇರಿರಿ ತುಂಬ ಸತ್ವಯುತ. ಅಷ್ಟೇ ರುಚಿ.
ಆ ಎರಡರ ಸೇರಿದ ಸ್ವಾದವ ಅನುಭವಿಸುವ ಸೌಭಾಗ್ಯ ಮೊನ್ನೆ ಬೆಂಗ್ಳೂರಿಲಿ ಇದ್ದೋರಿಂಗೆ ಸಿಕ್ಕಿತ್ತಾಡ. ಸಾವಿರಾರು ಜೆನ ಆ ಕಾರ್ಯಕ್ರಮಕ್ಕೆ ಹೋಗಿ ರುಚಿ ಅನುಭವಿಸಿ ಬಯಿಂದವಾಡ.
ಭೈರಪ್ಪಜ್ಜನ ಕಾದಂಬರಿಯ ಹಲವು ಘಟನೆಗೊ, ಸನ್ನಿವೇಶಂಗೊ ಇತ್ಯಾದಿಗಳ ಆಧಾರಲ್ಲಿ ಅಷ್ಟಾವಧಾನದ ನಿಷೇಧಾಕ್ಷರಿ, ಸಮಸ್ಯೆ, ದತ್ತಪದಿ – ಹೀಂಗಿರ್ಸ ಪ್ರಯೋಗ.
ಎಲ್ಲ ಸಾಹಿತ್ಯಾಸಕ್ತರು ಬಂದು ಆ ದಿನ ತುಂಬ ಚೆಂದಗಾಣುಸಿ ಕೊಟ್ಟಿದವಾದ.
ಕಾರ್ಯಕ್ರಮ ತುಂಬಾ ಒಳ್ಳೆದಾಯಿದಾಡ.
ಕೊರ್ಗಿಮಾವನ ಹತ್ರೆ ಆ ವೀಡ್ಯಂಗಳ ಸಂಕೊಲೆಯ ಕೇಳಿ ತರುಸಿದವಾಡ ಮಹೇಶಣ್ಣ. ಅದರ ಬೈಲಿಂಗೆ ಕೊಡುವಿರೋ ಕೇಳಿದ್ದಕ್ಕೆ ಇದಾ, ಇಲ್ಲಿ ಕೆಳ ಕೊಟ್ಟಿದವು.

ನಾವು ಎಲ್ಲೋರುದೇ ಪುರುಸೊತ್ತಿಲಿ ನೋಡಿ ಆನಂದಿಸುವ. ಹಾಲಿನ ಪಾತ್ರೆಗೆ ಜೇನವ ಸೇರ್ಸಿ – ರುಚಿಪಾಕವ ಕುಡಿವೊ.
ಎಂತ ಹೇಳ್ತಿ?

ಒಂದೊಪ್ಪ: ಹಾಲು-ಜೇನಿನ ಸ್ವಾದ ರಾಷ್ಟ್ರಭಕ್ತರ ಬುದ್ಧಿಯ ಕೆಲಸ, ಕಳ್ಳಿನ ಎಸರು ಬುದ್ಧಿಜೀವಿಗಳ ಕೆಲಸ.
~

ಭೈರಪ್ಪಜ್ಜನ ಸಾಹಿತ್ಯದ ಅಷ್ಟಾವಧಾನ ವೀಡ್ಯ:ಒಂದನೇ ತುಂಡು:
https://www.youtube.com/watch?v=X94yXV_3I_o

ಎರಡ್ಣೇ ತುಂಡು:
https://www.youtube.com/watch?v=7PM1wwP6UNw

ಮೂರ್ನೇ ತುಂಡು:
https://www.youtube.com/watch?v=ImCKdvaVdHI

 

4 thoughts on “ಭೈರಪ್ಪಜ್ಜನ ಹಾಲಪಾತ್ರೆಯೂ, ಡಾರಾ ಗಣೇಶರ ಜೇನು ಕುಪ್ಪಿಯೂ..

  1. “ಕಾಮ ಪುರುಷಾರ್ಥಲ್ಲಿ ಮೂರನೇದಾಗಿ ಬಂದ್ರೆ ಉತ್ತಮ, ಅರಿಷದ್ವ್ವರ್ಗದಲ್ಲಿ ಮೊದಲನೆಯದಾಗಿ ಬಂದರೆ ತೊಂದರೆ…” ಆಹಾ… ಎಂತಹಾ ಸ್ವರ್ಣೊಕ್ತಿ….ಡಾ. ರಾ. ಗಣೇಶರಿಗೆ ಅವರೇ ಸಾಟಿ….ಲಿಂಕ್ ಇಲ್ಲಿ ಕೊಟ್ಟು ಮಹದುಪಕಾರ ಮಾಡಿದಿ. ಇನ್ನೂ ಎರಡು ಭಾಗ ಕೇಳ್ಳೆ ಬಾಕಿ ಇದ್ದು.

  2. ಬೈರಪ್ಪನ ಹಾಲಪಾತ್ರಕ್ಕೆ; ಡಾರಾ ಗಣೇಶರ ಜೇನು ಕುಪ್ಪಿ ಸೇರಿರೆ, ಬಯಲಿನ [ youtube ]ಗುರಿಕ್ಕಾರನತ್ರಂದ ಬಾಳೆಹಣ್ಣು ,ತುಪ್ಪ,ಸಕ್ಕರೆ ಸೇರಿ ಓದುವವಕ್ಕೆ ಪಂಚಾಮೃತವೇ ಅತಿದ!.

  3. ಭೈರಪ್ಪ ಅವರ ಕಾದಂಬರಿಗಳ ಬಗೆಲಿಯೇ ಆರ್. ಗಣೇಶರ ಅಷ್ಟಾವಧಾನ ಹೇಳಿರೆ ನಿಜವಾಗಿಯು ಅದ್ಭುತ ಕಾರ್ಯಕ್ರಮ ಆಗಿಕ್ಕು. ಪುರುಸೊತ್ತು ಮಾಡಿ ಯು ಟ್ಯೂಬಿಂಗೆ ಹೋಗಿ ಸರಿಯಾಗಿ ಕೇಳೆಕು ಅಷ್ಟಾವಧಾನವ. ಒಳ್ಳೆ ಶುದ್ದಿ ಒಪ್ಪಣ್ಣ.

  4. ಭೈರಪ್ಪ ಒಳ್ಳೆಯ ಸಾಹಿತಿ. ಅವಕ್ಕೆ ಬರೀ ಪದ್ಮಶ್ರೀ ಮಾತ್ರ ಕೊಟ್ಟದು ಕಮ್ಮಿ ಅತು. ಅವಕ್ಕೆ ಪದ್ಮವಿಭೂಷಣ ಕೊಡೆಕ್ಕಾತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×