ಭಾವನೆ ಇದ್ದರೆ ಸಂಭಾವನೆಯೇ ಬೇಕಾಗ…!

ಬೈಲಿಂಗೆ ಮೂರೊರಿಷ ಕಳಾತು, ಇದು ನಾಲ್ಕನೇದು – ಹೇಳ್ತದು ಕಳುದವಾರವೇ ನವಗೆ ಸಂಗತಿ ಗೊಂತಾಯಿದು.
ಪುತ್ತೂರಿನ ಪುಟ್ಟಕ್ಕ° ಹೇಳ್ತ ಹಾಂಗೆ, ಈಗ ಬೈಲು ಹೇಳಿರೆ ನಾಲ್ಕೊರಿಶದ ಸಣ್ಣ ಬಾಬೆ.
ಒರಿಶದ ಕೊನೇ ವಾರ, ಅತವಾ ಸುರೂವಾಣ ವಾರ ಆ ಬಗ್ಗೆಯೇ ಶುದ್ದಿ ಮಾತಾಡ್ತದು ಒಪ್ಪಣ್ಣನ ಹೆಮ್ಮೆ. ಅದೊಂದೇ ಒಪ್ಪಣ್ಣನ ಪೊನ್ನಂಬ್ರ ಅಲ್ಲದೋ – ಹಾಂಗೆ!

ಬೈಲಿಲಿ ನಿತ್ಯವೂ ಹೊಸ ಹೊಸ ಶುದ್ದಿಗೊ, ಹೊಸ ಹೊಸ ಒಪ್ಪಂಗೊ.
ಒಂದೊಂದು ಶುದ್ದಿಲಿ ಒಂದೊಂದು ಸತ್ವ ಇರ್ತು, ಜೀವನಾನುಭವ ಇರ್ತು, ತೂಕ ಇರ್ತು.  ಒಂದೊಂದು ಒಪ್ಪಲ್ಲಿ ಆ ವೆಗ್ತಿಗೆ ಅದು ಅರ್ತ ಆದ ಭಾವನೆಗೊ ಇರ್ತು.
ನಿತ್ಯವೂ ಓದಲೆ ಹೊಸತ್ತಿದ್ದೇ ಇರ್ತು; ನಿತ್ಯವೂ ಬೈಲಿಲಿ ಗಲಗಲ!
ಎಲ್ಲೋರಿಂಗೂ ಇದೊಂದು ನಿತ್ಯ ಮನೆಜೆಂಬ್ರ ಅಲ್ಲದೋ!
ಇದು ಹೇಂಗೆ ಸಾಧ್ಯ ಆತು?
– ಬೈಲಿನ ಎಲ್ಲೋರುದೇ ಸೇರಿ ’ಸುದರಿಕೆ’ ಮಾಡಿ ಗೆಲ್ಲುಸುತ್ತ ಕಾರಣ ನಾಕೊರಿಶಂದ ನಿತ್ಯಜೆಂಬ್ರ ಆದರೂ ಚೆಂದಲ್ಲಿ ನೆಡೆತ್ತು.
~

ಮೊನ್ನೆ ದೊಡ್ಡಜ್ಜನ ಮನೆ ತ್ರಿಕಾಲಪೂಜೆ ಮುಗುಶಿ ಬಪ್ಪೋನಿಂಗೆ ರಂಗಮಾವ° ಸಿಕ್ಕಿದವು.
ಬದಿಯೆಡ್ಕ ಕೆಮ್ಕಲ್ಲಿ ಅಡಕ್ಕಗೆ ರೇಟು ವಿಚಾರ್ಸಿ ಚೀಲನೇಲುಸಿಗೊಂಡು ಬಂದುಗೊಂಡಿತ್ತವು. ರೇಟು ಇಳುದ್ದಡ ಈಗ.
ಅಲ್ಲಿಂದ ಎಂಗೊ ಒಟ್ಟಿಂಗೇ ಬಂದದು, ಬೈಲಿಂಗೆ.
ನೆಡಕ್ಕೊಂಡೇ ಹೆರಟೆಯೊ°; ಪೆರ್ಡಾಲ ಸಂಕ ದಾಂಟಿಗೊಂಡು.
ಪುಳ್ಳಿಮಾಣಿ ಪುಳ್ಳ ವಿನುವಿಂಗೆ ಒಂದುವಾರ ರಜೆ ಮುಗಾತಡ; ಪಾತಿಅತ್ತೆ ಕಾಲುಬೇನೆಗೆ ಕೊಡ್ಯದಜ್ಜನೇ ಬಪ್ಪದಡ, ಈಗ ರಜ ಕಮ್ಮಿ ಆಯಿದಡ – ಸುಮಾರು ಶುದ್ದಿ ಹೇಳಿದವು.

ಹೀಂಗೀಂಗೆ – ಮೂರೊರಿಶ ಆತು; ಬೈಲಿನ ಎಲ್ಲೋರು ಶುದ್ದಿ ಹೇಳಿಗೊಂಡು, ಸುದರಿಕೆ ಮಾಡ್ತವು – ಹೇಳಿದೆ.
ತುಂಬ ಕೊಶಿ ಆತು ಅವಕ್ಕೆ; ಇನ್ನೂ ಬೆಳೆಯಲಿ, ಮುಂದರಿಯಲಿ – ಹೇಳಿದವು.
ಇದೆಲ್ಲ ಮಾಡ್ತದಕ್ಕೆ ಪೈಶೆ ಲೆಕ್ಕ ಹಾಕೆಡಿ ಇನ್ನು, ಹಾಂ! – ಹೇಳಿದವು.

ರಂಗಮಾವ ಹಾಂಗೇ! ಅವಕ್ಕೆ ಪೈಶೆಲೆಕ್ಕ ಹಾಕಿ ಅರಡಿಯ.
ಹಾಂಗೆ ಒಂದುವೇಳೆ ನೋಡ್ತರೆ ಪೈಸೆಗೆ ಬೇಕಾಗಿ ಮಾಡುದು ಅಡಕ್ಕೆ ಮಾಂತ್ರ. ಅವು ಪೈಶೆಲಿ ಆಶೆ ಮಾಡಿದೋರಲ್ಲ, ದೈವಭಕ್ತಿ, ತತ್ವ, ನಿಷ್ಠೆಲೇ ಬದ್ಕಿದೋರು.
ಹಾಂಗಾಗಿ ಬೈಲಿನ ಬಗ್ಗೆಯೂ ಅವು ಹಾಂಗೇ ಮಾತಾಡಿದವು – ಕೊಶೀ ಆತು ಒಪ್ಪಣ್ಣಂಗೆ.
ಇಲ್ಲಿ ಏನಿದ್ದರೂ ಶುದ್ದಿಗೊ, ಒಪ್ಪಂಗೊ, ನೆರೆಕರೆ, ಬೈಲು – ಇಷ್ಟೇ; ಪೈಶೆಯ ಉಪಯೋಗವೇ ಇಲ್ಲೆ ಈ ಬೈಲಿಲಿ – ಹೇಳಿದೆ.

ಒಂದರಿ ಪೈಶೆಯ ಆಶೆ ಬಂದರೆ ಮತ್ತೆ ಹಿಂದಂತಾಗಿ ಹೋಪಲೆ ಎಡಿತ್ತಿಲ್ಲೆಡ.
ರಂಗಮಾವನ ಅನುಭವಲ್ಲಿ ಬಂದ ಒಂದೆರಡು ಸಂಗತಿಗಳ ತೂಷ್ಣಿಲಿ ವಿವರುಸಿ ಹೇಳಿದವು.
~
ಸಮ್ಮಂದವೇ ಇಲ್ಲದ್ದರೂ ಆರಾರ ಜೆಂಬ್ರಂಗಳ ಸ್ವಂತಮನೆಯ ಜೆಂಬ್ರದ ಹಾಂಗೆ ಸುದರುಸುವ ‘ಸುದರಿಕೆಯ ಅಣ್ಣಂದ್ರು’ ನಮ್ಮ ಊರಿಲೇ ಸುರು ಆಯಿದವು.
ಈ ಹೊಸತನದ ‘ಸುದರಿಕೆಯ ಬಳಗಂದಾಗಿ’ ಅಂಬೆರ್ಪಿನ ಜೀವನಲ್ಲಿ ಉಪಕಾರಂಗೊ ಆಯಿದು; ಸಂಶಯವೇ ಇಲ್ಲೆ.
ಸುದರಿಕೆಯೋರಿಂದಾಗಿ ನಮ್ಮ ಸಾಮಾಜಿಕ ಜೀವನಕ್ಕೆ ತೊಂದರೆಯೂ ಆಯಿದು;
ಮುಂದೆ ಯೇವತ್ತಾರು ಇದೆರಡರ ಬಗ್ಗೆ ವಿವರವಾಗಿ ಶುದ್ದಿ ಮಾತಾಡುವೊ°.
~
ರಂಗಮಾವನ ಗುರ್ತದ ಒಬ್ಬ ಕೆಂಪಂಗಿ ಭಾವಯ್ಯ ಸುದರಿಕೆಗೆ ಹೋವುತ್ತೋನು.
ಹೇಳಿಕೆ ಬಂದ ಸುದರಿಕೆ ಜಾಗೆಲಿ ಜೆಂಬ್ರದ ಮುನ್ನಾಣ ದಿನಂದ ಜೆಂಬ್ರದ್ದಿನ ಹೊತ್ತೋಪಗ ಒರೆಂಗೆ ಪಾದರಸದ ಹಾಂಗೆ ದುಡಿತ್ತ.
– ಮದಲಿಂಗೇ ತೋಟಲ್ಲಿ ದುಡುದು ಅಭ್ಯಾಸ ಇದ್ದಲ್ಲದೋ.
ಹೋದಲ್ಲಿ ಅಂಬೆರ್ಪಿಂಗೆ ಮರಕ್ಕೆ ಹತ್ತಲೂ ತಯಾರೇ.
ಅದೇ ಆ ಭಾವಯ್ಯ ಮನೆಲೇ ಇದ್ದ ದಿನಕ್ಕೆ ನೆರೆಕರೆ ಹೇಳಿಕೆ ಬಂದಿದ್ದರೆ, ಹೋಪಲೆ ಉದಾಸ್ನ ಮಾಡ್ತ.
ಒಂದು ವೇಳೆ ಹೋದರೂ, ಅಲ್ಲಿಗೆ ಒಂದ್ನೇ ಹಂತಿಗಪ್ಪಗ ಎತ್ತುಗು, ಎರಡ್ಣೇ ಹಂತಿ ಬಾಳೆ ಹಾಕುವ ಮದಲು ಹೆರಟು ಮನಗೆತ್ತಿ, ಉಂಡ ಕೈ ತೊಳಕ್ಕೊಂಗು.

ಅವನ ಮನೆ ಜಾಲಕರೆಲೇ ಇಪ್ಪ ಇನ್ನೊಂದು ಮನೆಲಿ ಮದುವೆ ಕಳಾತಡ ನಿನ್ನೆ.
ಆ ಮದುವೆಗೆ ಬಂದೋನು ಹೀಂಗೇ ಮಾಡಿ ಸುದಾರ್ಸಿಕ್ಕಿ ಹೆರಟಿದ ಹೇದು ರಂಗಮಾವಂಗೆ ಬೇಜಾರು.
ರಂಗಮಾವಂಗೆ ಈಗ ಎಡಿತ್ತಿಲ್ಲೆ, ಎಡಿವಷ್ಟು ಸುದರಿಕೆ ಈಗಳೂ ಮಾಡ್ತವು.
~

ಬೆಳಿಶಾಲು ಭಾವಯ್ಯಂಗೆ ಮಂತ್ರಾಧ್ಯಯನ ಆಯಿದಡ.
ಕ್ರಮಪ್ರಕಾರ ಏಳೊರಿಶ ಆಯಿದಿಲ್ಲೆ, ಆದರೆ ಮಂತ್ರ ಬತ್ತು.
ಅಪುರೂಪಕ್ಕೆ ಶತರುದ್ರವೋ, ಉಪಹೋಮವೋ – ಹೀಂಗೆಂತಾರು ಸಿಕ್ಕುತ್ತು; ಹೋಪ ಕ್ರಮ ಇದ್ದು.
ದರ್ಬೆ ಬಟ್ಟಮಾವನ ಶಿಷ್ಯವರ್ಗ ಆದ ಕಾರಣ, ಅವರ ಹೇಳಿಕೆಗಳೂ ಬಪ್ಪದಿದ್ದು.
ಕಾರ್ಯಕ್ರಮ ಇಡೀ ಕೂದು ಚೆಂದಕೆ ಮಂತ್ರ ಹೇಳಿಕ್ಕಿ ಬಕ್ಕು.
ಓ ಮೊನ್ನೆ ಅವರ ಊರ ದೇವಸ್ಥಾನಲ್ಲಿ ಜಾತ್ರೆ ಕಳಾತು. ದರ್ಶನಬಲಿಗೆ ಸುಮಾರು ಸುತ್ತುಗೊ ಇರ್ತು ಅಪ್ಪೋ – (ದರ್ಶನಬಲಿಯ ಗುರ್ತ ಆಯೆಕ್ಕಾರೆ ಶುದ್ದಿ ಇಲ್ಲಿದ್ದು).
ಆ ಬಲಿಯ ದಿನ ಈ ಭಾವಯ್ಯ ಮನೆಲೇ ಇದ್ದಿದ್ದ ಪುರುಸೋತಿಲಿ.
ಒಂದರಿ ಹೋತಿಕ್ಕಲಾವುತಿತು, ಮಂತ್ರ ಸುತ್ತು ಮಾಡಿ ಕೊಟ್ಟಿಕ್ಕಿ ಬಪ್ಪಲಾವುತಿತು ಅವಂಗೆ – ಹೇಳಿದವು.
ರಂಗಮಾವಂಗೆ ಹಳೆಕಾಲಂದಲೇ ಎಷ್ಟೋ ವೇದವಿದ್ವಾಂಸರ ಧಾರಾಳತನದ ಗುಣನಡತೆ ಕಂಡು ಗೊಂತಿದ್ದಿದಾ.
~

ಭಾವನೆ ಇಲ್ಲದ್ದ ಕಾರ್ಯಲ್ಲಿ ಎಷ್ಟು ಸಂ-ಭಾವನೆ ಸಿಕ್ಕಿರೂ - ಮನೋತೃಪ್ತಿ ಸಿಕ್ಕ!

ನೀಲಿಅಂಗಿ ಭಾವಯ್ಯ ‘ಸಂಪನ್ಮೂಲ ವೆಗ್ತಿ’ ಹೇದು ಹೆಸರಾದೋನು ಅಡ. ಭಾಷಣಲ್ಲಿ ಎತ್ತಿದ ಕೈ ಅಡ.
ದೊಡ್ಡದೊಡ್ಡ ಕೋಲೇಜುಗೊಕ್ಕೆ, ಮಕ್ಕೊಗೆ, ಮಾಷ್ಟ್ರಂಗೊಕ್ಕೆ – ಇವಕ್ಕೆಲ್ಲ ನೀತಿ, ಮನಸ್ಸು, ಶೆಗ್ತಿ ಹೇಳಿಗೊಂಡು ಪಾಟ ಮಾಡ್ತೋನಡ. ಒಂದು ದಿಕ್ಕಂಗೆ ಹೇಳಿಕೆ ಹೇಳಿ ದಿನಿಗೆಳೇಕಾರೆ ರುಪಾಯಿ ದೊಡ್ಡನೋಟು ಕೊಡೆಕ್ಕಡ.
ಈಗೀಗ ಎಷ್ಟಾಯಿದು ಹೇಳಿತ್ತುಕಂಡ್ರೆ, ಕೊಡ್ತಲ್ಲಿಗೆ ಮಾಂತ್ರ ಅಲ್ಲದ್ದೆ, ಬೇರೆದಿಕ್ಕಂಗೆ ಹೋಪಲೂ ಇಲ್ಲೇಡ!
ಹೋದರೂ, ಕಾರ್ಯಕ್ರಮ ಸುರು ಅಪ್ಪದ್ದೇ, ಎನಗೆ ಬೇರೆ ಹೋಪಲಿದ್ದು – ಹೇಳಿಗೊಂಡು ಒಪಾಸು.
~

ಸುದರಿಕೆ ಭಾವಯ್ಯಂಗೆ ಹೋದಲ್ಲಿ ಸಿಕ್ಕುತ್ತ ಸಂಭಾವನೆಯ ಮೇಗೆ ಕಣ್ಣು.
ಅದಿದ್ದರೇ ಅವನ ಭಾವನೆಗೊ ಸರಿಯಾಗಿ ಹೊಂದಿಗೊಂಬದು; ಅಲ್ಯಾಣ ಜೆಂಬ್ರಕ್ಕೆ ಸುದರಿಕೆ ಮಾಡ್ಲೆ ಎಡಿವದು.
ಜೆಂಬ್ರಕ್ಕೆ ಹೋಪಲೆ ಪುರುಸೊತ್ತಿದ್ದರೆ ಸಾಕು, ಮೈ ಮುರುದು ಸುದಾರಿಕೆ ಮಾಡಿ ಗೆಲ್ಲುಸುತ್ತ ನಮ್ಮ ಅಣ್ಣಂದ್ರ ಎದುರು ಈಗಾಣ ಈ ಪೈಶೆ ಮೋರೆ ನೋಡ್ತ ಭಾವಯ್ಯಂದ್ರ ವಿಚಿತ್ರ ಕಾಣ್ತು ಒಂದೊಂದರಿ.

ಬೆಳಿಶಾಲು ಭಾವಯ್ಯಂಗೂ ಹಾಂಗೇ – ದಕ್ಷಿಣೆ ಸಂಭಾವನೆ ಸಿಕ್ಕುತ್ತರೆ ಮಾಂತ್ರ ಮಂತ್ರಂಗೊ ಬಾಯಿಂದ ಉದುರುದು.
ಅದಲ್ಲದ್ದೇ ಧರ್ಮಾರ್ಥವಾಗಿ ಎಲ್ಲಿಯೂ ಸೇವೆಮಾಡಿದ್ದಿರ.
ಆಚಮನೆ ದೊಡ್ಡಣ್ಣಂಗೆ ಶಾಸ್ತ್ರೀಯ ಮಂತ್ರಾಧ್ಯಯನ ಆಯಿದು.
ಮೂಡ್ಳಾಗಿ ಒಂದು ದೇವಸ್ತಾನಲ್ಲಿ ಶಿವರಾತ್ರಿ ನೆಡಿರುಳು ಕೂದು ರುದ್ರ ಹೇಳೇಕಾರೆ ಅವನೇ ಆಯೆಕ್ಕಟ್ಟೆ.
ಹೋದ ಜೆಂಬ್ರಂಗೊಕ್ಕೂ ಹಾಂಗೇ, ಎರಡ್ಣೇ ಹಂತಿಗೆ ಬಳುಸಿಕ್ಕಿಯೇ ಒಂದೊರಕ್ಕು ಒರಗುದು.
ಭಟ್ಟಮಾವ ಬಳುಸುದೋ – ಚೆಚೆ, ಸ್ಥಾನಮಾನ – ಹೇಳಿಗೊಂಡು ಕೂಪಲಿಲ್ಲೆ ಅವ°!

ನೀಲಿಅಂಗಿ ಭಾವಯ್ಯಂಗೂ ಹಾಂಗೆಯೇ, ಸಂಭಾವನೆ ಕೊಟ್ಟು ಕೂರುಸಿರೆ ಅಲ್ಲಿಪ್ಪ ಮಕ್ಕೊ ಸ್ವಂತ ಮಕ್ಕಳ ಹಾಂಗೆ ಭಾವನೆ ಬಂದುಬಿಡುಗು.
ಅವಕ್ಕೆ ನಿಂಗೊ ಹೇಂಗಿರೆಕ್ಕು, ಹೇಂಗೆ ಬದ್ಕೇಕು – ಹೇದು ಮುಕ್ಕಾಲುಗಂಟೆ ಪಾಟ ಮಾಡುಗು.
ಕೊಟ್ಟ ಸಂಭಾವನೆಯ ತೆಕ್ಕೊಂಡು ಮನಗೆ ಹೋಕು.
ಏನೂ ಸಿಕ್ಕದ್ದರೆ ಭಾವನೆಯೇ ಇಲ್ಲೆ. ಅವರ ದಾರಿ ಅವಕ್ಕೆ.
~
ನಮ್ಮ ಊರಿಲಿ ಎಲ್ಲೋರುದೇ ಹೀಂಗೇ ಮಾಡಿರೆ ಸಮಾಜ ನೆಡಗೋ – ಹೇಳ್ತದು ರಂಗಮಾವನ ಪ್ರಶ್ನೆ.
ಹೆತ್ತಬ್ಬೆ ಹಾಲು ಕೊಡ್ತು, ಅದಕ್ಕೆ ಸಂಭಾವನೆ ನಿರೀಕ್ಷೆ ಮಾಡ್ತೋ?
ಅಪ್ಪ ದುಡುದು ಅಕ್ಕಿ ತಂದು ಹಾಕುತ್ತವು, ಅದಕ್ಕೆ ಒಪಾಸು ಪೈಶೆ ನಿರೀಕ್ಷೆ ಮಾಡ್ತವೋ?
ಅಪ್ಪಚ್ಚಿ, ದೊಡ್ಡಪ್ಪ, ಅಕ್ಕ, ಅಣ್ಣ, ತಮ್ಮ, ಬಾವಂದ್ರು – ಎಂತದೂ ನಿರೀಕ್ಷೆ ಇಲ್ಲದ್ದೆ ನಿಸ್ವಾರ್ಥವಾಗಿ ಒಂದಲ್ಲೊಂದು ಉಪಕಾರಂಗಳ ಅತ್ತಿತ್ತೆ ಮಾಡಿಗೊಂಬದು ಇದ್ದು.
ಅವೆಲ್ಲೊರೂ ಸಂಭಾವನೆ ಕೊಟ್ರೆ ಮಾಂತ್ರ ಕೆಲಸ ಮಾಡ್ತದು ಹೇಳಿಗೊಂಡು ಕೂದರೆ ನಾವು ಇರ್ತಿತೇ ಇಲ್ಲೆ! ಅಪ್ಪೋಲ್ಲದೋ?
ಹಾಂಗಾಗಿ, ಸಂಭಾವನೆಯನ್ನೇ ನೋಡಿಗೊಂಡು ನಮ್ಮ ಕೆಲಸ ಮಾಡ್ತದಲ್ಲ, ರಜ್ಜ ಭಾವನೆಯನ್ನೂ ಬೆಳೆಶಿಗೊಂಡ್ರೆ ಚೆಂದ ಅಕ್ಕು – ಹೇಳ್ತದು ಇದರ ತಾತ್ಪರ್ಯ.
~
ಇದರ ಬೈಲಿಂಗೆ ಹೇಳಿಕ್ಕುವೊ – ಹೇದು ಕಂಡದೆಂತಕೆ ಗೊಂತಿದ್ದೋ?
ಮೊನ್ನೆ ಶರ್ಮಪ್ಪಚ್ಚಿ ಕಾಟಿಪ್ಪಳ್ಳದ ಮದುವೆಲಿ ಒಬ್ಬ ಭಾವಯ್ಯ° ಸಿಕ್ಕಿದನಡ.
ಅವನ ಹೆಸರು ಪೇಪರಿಲಿ ಅಂಬಗಂಬಗ ಕಾಂಬಲೆ ಸಿಕ್ಕುತ್ತು, ಸಣ್ಣಸಣ್ಣ ಕವಿತೆ, ನೀತಿಕತೆಗಳ ಬರದ್ದರ್ಲಿ.
ಅಪ್ಪಚ್ಚಿ ಹೀಂಗೇ ಪರಿಚಯ ಮಾಡಿ ಮಾತಾಡಿ ಅಪ್ಪದ್ದೇ – ‘ನಮ್ಮದೇ ಒಂದು ಬೈಲು ಇದ್ದು, ನಿಂಗೊ ನೀತಿಕತೆಗಳ ಶುದ್ದಿ ಹೇಳುಲೆ ಸುರುಮಾಡ್ತಿರೋ?’ ಕೇಳಿದವಡ.
ಸಂಭಾವನೆ ಎಷ್ಟು ಕೊಡ್ತವು? ಕೇಳಿದನಡ ಭಾವಯ್ಯ°!
ಇಲ್ಲಿ ಸಂಭಾವನೆ ಹೇಳಿ ಪೈಸೆ ಎಂತೂ ಇಲ್ಲೆ. ನಮ್ಮದೇ ಬೈಲು, ಹಾಂಗಾಗಿ ಒಪ್ಪಂಗೊ ಸಿಕ್ಕುತ್ತು – ಹೇಳಿದವಡ.
ಆನು ಸಂಭಾವನೆ ಇಪ್ಪಲ್ಲಿ ಮಾಂತ್ರ ಬರವದು – ಹೇಳಿದವಡ, ಮೋರಗೆ ಬಡುದ ಹಾಂಗೆ.
ಶರ್ಮಪ್ಪಚ್ಚಿ ಆತಂಬಗ ಹೇಳಿಗೊಂಡು ಜೆಂಬ್ರಲ್ಲಿ ಸುದರಿಕೆ ಮಾಡಿಕ್ಕಿಯೇ ಉಂಡಿಕ್ಕಿ ಬಂದವು.
~
ಕಂಡತ್ತೋ – ನೀತಿಕತೆಗಳ ಹೇಳೇಕು ಹೇಳ್ತ ಭಾವನೆ ಬರೇಕಾರೆ ಸಂಭಾವನೆ ಸಿಕ್ಕೇಕಡ.
ಅಂಬಗ ವಿಜ್ಞಾನ, ಜ್ಞಾನಂಗ ಇಪ್ಪ ಶರ್ಮಪ್ಪಚ್ಚಿಯ ಶುದ್ದಿಗೊಕ್ಕೆ ಎಷ್ಟು ಸಂಭಾವನೆ ಕೊಡೆಕ್ಕು?
ವಿದ್ವಾನಣ್ಣ ಸ್ವತಃ ಅವ್ವೇ ಹೇಳಿದ ರಾಮಸಹಸ್ರನಾಮ ಬೇರೆಲ್ಲಿಯಾರು ಸಿಕ್ಕುಗೋ? ಅವಕ್ಕೆಷ್ಟು ಕೊಡೆಕ್ಕಾತು?
ಚೆಂದದ ಭಾಮಿನಿಯ ಥಕಥೈ ಕೊಣುಶಿ ಬೈಲಿಲಿ ಶುದ್ದಿಹೇಳುವ ಮುಳಿಯಭಾವಂಗೆ ಸಂಭಾವನೆ ಎಷ್ಟೂ ಕೊಡೆಕ್ಕಾತು?
ಸಂಸ್ಕೃತ, ಸಂಸ್ಕಾರ, ಸಂಸ್ಕೃತಿಗಳ ಶುದ್ದಿ ಹೇಳ್ತ ಡಾಮಹೇಶಣ್ಣ, ಚೆನ್ನೈಭಾವ, ಶ್ರೀಅಕ್ಕ°, ಗೋಪಾಲಣ್ಣಂಗೆಲ್ಲ ಹೇಂಗೆ ಅಂಬಗ?
ಇರ್ತಲೆ ಹಿಡುದ ಸುಭಗಣ್ಣಂಗೆ ಎಂತ? ಪದಬಂದ ಕಟ್ಟಿದ ಬೊಳುಂಬುಮಾವ?
ಬೈಲಿಲಿ ಬೈಕಿಲ್ಲಿ ಹೋಪಗ ಬಿದ್ದು ಕೈ ಮುರುದರೂ ಬೈಲಿಲೇ ಇಪ್ಪ ಕೆಪ್ಪಣ್ಣಂಗೆ ಎಂತರ?
ಪಾರುಅತ್ತೆ ಒಟ್ಟಿಂಗೇ ಬೈಲಿಲಿ ಶುದ್ದಿ ಬರವ ತೆಕ್ಕುಂಜ ಕುಮಾರ ಮಾವಂಗೆ ಏನು ಕೊಡೆಕ್ಕಾತು?
ತಪಃಸಿದ್ಧಿ ಮಾಡಿಗೊಂಡು ಬೈಲಿಂಗಿಳುದು, ತಾನೂ ಓಡಾಡಿ ಕುಣುದು, ಬಾಕಿದ್ದೋರನ್ನೂ ಕುಣಿಶಿದ ಬೋಚ ಬಾವಂಗೆ?
ಚೆಂದಚೆಂದದ ಪಟ ಪ್ರೀತಿಲಿ ನೇಲುಸುತ್ತ ಕೆಮರದ ಅಣ್ಣಂದ್ರು?
ರುಚಿಯಾದ ಅಡಿಗೆ ಶುದ್ದಿ ಹೇಳ್ತ ಹೆಮ್ಮಕ್ಕೊ, ಆರೋಗ್ಯದ ಬಗ್ಗೆ ಮಾಹಿತಿ ಕೊಟ್ಟ ಡಾಗುಟ್ರಕ್ಕೊ – ಇವಕ್ಕೆ!
ಎಲ್ಲೆಲ್ಲಿಂದ ಶುದ್ದಿ ಹೆರ್ಕಿ ಬೈಲಿಂಗೆ ತತ್ತ – ಪೆಂಗಣ್ಣಂಗೆ ಎಷ್ಟಂಬಗ!?
ಮತ್ತೂ ಸುಮಾರು ಜೆನ ಇದ್ದವಲ್ಲದೋ, ಅವಕ್ಕೆಲ್ಲ?
ಬೈಲಿಲಿ ದರ್ಖಾಸು ರಿಜಿಸ್ತ್ರಿಮಾಡಿಗೊಂಡು ಶುದ್ದಿ ಹೇಳ್ತ ಎಷ್ಟೋ ಅಕ್ಕ-ಭಾವಂದ್ರಿಂಗೆ ಎಂತರ ಅಂಬಗ?
ಎಂತದೂ ಇಲ್ಲೆಯೋ? ಇದ್ದು –
ಇವಕ್ಕೆಲ್ಲೋರಿಂಗೂ ಸಂಭಾವನೆ ಸಿಕ್ಕುತ್ತು – ಎಂತರ:
ಶುದ್ದಿ ಕೇಳಿ ಕೊಶಿಪಟ್ಟ ಎಷ್ಟೋ ಬೈಲ ಅಕ್ಕಭಾವಂದ್ರ ಪ್ರೀತಿಯ ಭಾವನೆಯ ಒಪ್ಪಂಗೊ.
ಇದುವೇ ಸಂಭಾವನೆ.
~
ನಮ್ಮ ಭಾಶೆಯನ್ನೇ ಮಾತಾಡ್ಳೆ ನಾಮಾಸು ಮಾಡಿಗೊಂಡಿದ್ದ ಈ ಅಂತರ್ಬೈಲಿಲಿ ಧೈರ್ಯವಾಗಿ ನಮ್ಮ ಭಾಶೆಯ ಶುದ್ದಿಗೊ ರಾರಾಜಿಸೆಂಡಿದ್ದು! ಇದು ಕೊಶಿ ಅಲ್ಲದೋ?
ಕೆಲವು ಶುದ್ದಿಗೊಕ್ಕೆ ಗುರುಗಳೇ ಸ್ವತಃ ಒಪ್ಪ-ಆಶೀರ್ವಾದ ಮಾಡಿದ್ದವು – ಇದರಿಂದಲೂ ಸಂಭಾವನೆ ಬೇಕೋ?
ದೀಪಿಅಕ್ಕ° ಕನ್ನಡ ಬರವಲೆ ಕಲ್ತಿದವು ಹೇಳ್ತದು ಮೊನ್ನೆ ಗೊಂತಾತು, ಬೇರೆ ಸಂಭಾವನೆ ಬೇಕೋ?
ನೀರಮೂಲೆ ಅಕ್ಕಂಗೆ ಹುಡ್ಕುತ್ತ ನಮುನೆ ಬೈಲೇ ಸಿಕ್ಕಿದ್ದಡ, ಕೊಶೀಲಿ ಹೇಳಿದವು. ಇದರಿಂದ ಹೆಚ್ಚಿಂದು ಬೇಕೋ?
ಮನೆ ಜೆಂಬ್ರದ ಹಾಂಗೇ – ಅಪ್ಪಚ್ಚಿ, ಚಿಕ್ಕಮ್ಮ, ಅತ್ತೆ, ಮಾವ, ಅಣ್ಣ ತಮ್ಮ, ಅಕ್ಕ ತಂಗೆಕ್ಕೊ ಸುಮಾರು ಜೆನ ಸಿಕ್ಕಿದವು. ಇದು ಕೊಶಿಯೇ ಅಲ್ಲದೋ?
ಹೀಂಗಿರ್ಸ ಕೊಶಿಗೊ ಎಷ್ಟೂ ಸಿಕ್ಕುಗು ಒಪ್ಪಣ್ಣಂಗೆ.
ಆರೋ ಕೊಡ್ತ ನೂರಿನ್ನೂರು ರುಪಾಯಿಗೆ – ಇಲ್ಲದ್ದ ಭಾವನೆಗಳ ಉಂಟುಮಾಡಿ – ಶುದ್ದಿ ಹೇಳ್ತದಕ್ಕೂ, ಆಂತರ್ಯಂದ ಬಂದ ಭಾವನೆಗಳ ಹೆರಮಾಡಿ ಬೈಲಿಲಿ ಶುದ್ದಿ ಹೇಳ್ತದಕ್ಕೂ ಎಷ್ಟು ವಿತ್ಯಾಸ ಇದ್ದಲ್ಲದೋ?

ಮಾತಾಡಿಗೊಂಡಿದ್ದ ಹಾಂಗೇ ಬೈಲು ಎತ್ತಿದ್ದಕ್ಕೆ, ರಂಗಮಾವ ಆಚಗೆದ್ದೆಪುಣಿ ಹಿಡುದವು, ನಾವು ಇತ್ಲಾಗಿ ತಿರುಗಿತ್ತು.
ತಲೆಲಿ ರಂಗಮಾವ ಹೇಳಿದ್ದೇ ತಿರುಗೆಂಡಿತ್ತು.
ರಂಗಮಾವನ ಮಾತುಗಳೂ, ಶರ್ಮಪ್ಪಚ್ಚಿಯ ಅನುಭವಂಗಳೂ ಒಟ್ಟಾಗಿ, ಈ ವಾರ ಈ ಶುದ್ದಿಯನ್ನೇ ಹೇಳುವೊ ತೋರಿತ್ತು.

ಬೈಲು ಹಾಂಗೆ ಬೆಳತ್ತಿದಾ. ಈಗ ನಾಕೊರಿಶ. ಆಪ್ತೇಷ್ಟರು ಬತ್ತಾ ಇರಳಿ, ಶುದ್ದಿ ಹೇಳಿಗೊಂಡಿರಳಿ, ಸಂ-ಭಾವನೆ ಪಡೆಯಲಿ.
ಬೈಲು ಬೈಲಾಗಿ ಶುದ್ದಿಗಳ ನಿರಂತರ ಬಯಲು ಮಾಡ್ತಾ ಇರಲಿ.
ನಾಕೊರಿಶ ಆದ ಮಕ್ಕೊ ತೀರಾ ಬಾಲ್ಯಕಾಲದ ಬಾಲಿಶಂಗಳ ಬಿಟ್ಟು, ಒಂದಾವರ್ತಿ ಗಂಭೀರ ಅಪ್ಪಲೆ ಸುರು ಆವುತ್ತವು.
ಸಿಕ್ಕಿದ್ದಕ್ಕೆ ಮುಟ್ಟಿದ್ದಕ್ಕೆ ಪ್ರಶ್ನೆಗಳ ಕೇಳ್ತವು, ಸಂಶಯ ಪರಿಹಾರಂಗಳ ಮಾಡಿಗೊಳ್ತವು – ಹೇಳ್ತದು ಅಮ್ಮಂದ್ರ ಅಭಿಪ್ರಾಯ.
ನಮ್ಮ ಬೈಲೂ ಹಾಂಗೇಯೇ, ಪ್ರಶ್ನೆ ಕೇಳ್ತ ಬಾಬೆ ಆಗಲಿ, ಎಲ್ಲಾ ಸಂಶಯಂಗಳ ತೀರುಸುವ ಅಬ್ಬೆ ಆಗಲಿ.

ಒಂದೊಪ್ಪ: ಸಂಭವಾಮಿ ಯುಗೇ ಯುಗೇ – ಹೇಳಿದ ಕೃಷ್ಣನೂ ಸಂಭಾವನೆ ಕೊಡು ಹೇಳಿರೆ ನಾವೆಲ್ಲಿಗೆ ಹೋವುತ್ಸು!

ಸೂ:
ಒಪ್ಪಣ್ಣನ ಶುದ್ದಿಗೊ ತುಂಬ ಉದ್ದ ಆವುತ್ತು ಹೇದು ಕೆಲವು ಜೆನರ ಅಭಿಪ್ರಾಯ.
ಹಾಂಗಾಗಿ ರಜ ತೂಷ್ಣಿಲಿ ವಿವರುಸಿ ನಿಲ್ಲುಸಿದ್ದು. ಹೇಂಗೆ? 🙂

ಒಪ್ಪಣ್ಣ

   

You may also like...

28 Responses

 1. ಶರ್ಮಪ್ಪಚ್ಚಿ says:

  ಈ ಒಪ್ಪಣ್ಣ ಬೈಲು, ಎನ್ನ ಹಾಂಗಿಪ್ಪ ಅದೆಷ್ಟೋ ಜೆನಂಗೊಕ್ಕೆ ಅವರವರ ಭಾವನೆಗಳ ಹಂಚಲೆ, ಜ್ಞಾನ ಪಡಕ್ಕೊಂಬಲೆ ಸಹಕಾರಿ ಆಯಿದು. ಇಲ್ಲಿ ಎಲ್ಲರೂ ಕೂಡು ಕುಟುಂಬದ ಸದಸ್ಯರು.
  ಸಂಭಾವನೆಗಾಗಿ ಪತ್ರಿಕೆಲಿ ಬರೆತ್ತವರಲ್ಲಿ ಎಷ್ಟು ಜೆನಂಗೊಕ್ಕೆ ಅದೇ ಪತ್ರಿಕೆಲಿ ಬರೆತ್ತ ಇತರ ಲೇಖಕರ ಪರಿಚಯ ಇಕ್ಕು?. ಇದರೂ ಎಷ್ಟು ಆತ್ಮೀಯತೆ ಇಕ್ಕು?. ಅಲ್ಲಿ ಭಾವನೆಗೊ ಎಲ್ಲಿದ್ದು?. ಸಂಬಾವನೆಯೇ ಮುಖ್ಯ ಆಗಿಪ್ಪಲ್ಲಿ ಭಾವನೆಗೊಕ್ಕೆ ಬೆಲೆ ಎಲ್ಲಿದ್ದು?
  ಆದರೆ ಇಲ್ಲಿ ಪ್ರತಿಯೊಬ್ಬನೂ ಇನ್ನೊಬ್ಬನ ತನ್ನ ಕುಟುಂಬದ ಸದಸ್ಯ ಹೇಳಿಯೇ ತಿಳ್ಕೊಂಬ ಭಾವನೆ ಖಂಡಿತಾ ಇದ್ದು. ಬೇರೆ ದಿಕ್ಕೆ ಇಪ್ಪದು ಇಲ್ಲಿ ಇಕ್ಕು, ಆದರೆ ಇಲ್ಲಿ ಸಿಕ್ಕುವ ಸಂತೋಷ ತೃಪ್ತಿ ಬೇರೆ ದಿಕ್ಕೆ ಖಂಡಿತಾ ಸಿಕ್ಕ. ನಮ್ಮ ಭಾಷೆಲಿ ಮರತು ಹೋವ್ತಾ ಇಪ್ಪ ಹಲವಾರು ಶಬ್ದಂಗಳ ಪರಿಚಯ ಎನಗೆ ಇಲ್ಲಿಯೇ ಆದ್ದು. ಸಂಸ್ಕಾರಂಗಳ ಬಗ್ಗೆ ಇಲ್ಲಿ ಸಿಕ್ಕಿದ ಮಾಹಿತಿ ಬಹುಷಃ ಬೇರೆ ಎಲ್ಲಿಯೂ ಈ ರೀತಿ ಸಂಗ್ರಹಲ್ಲಿ ಸಿಕ್ಕಲೆ ಕಷ್ಟ ಸಾಧ್ಯವೇ ಸರಿ.
  ಭಾಷೆ, ಸಂಸ್ಕೃತಿ, ಭಾವನಾತ್ಮಕ ಸಂಬಂಧಂಗಳಿಂದ ಬೆಸೆದ ಈ ಬೈಲು ಇದೇ ಹಾದಿಲಿ ಇನ್ನು ಮುಂದೆಯೂ ನೆಡೆಯಲಿ ಹೇಳುವದೇ, ಈ ಶುಭ ಸಂದರ್ಭಲ್ಲಿ ಎನ್ನ ಹಾರೈಕೆಗೊ

 2. ಒಪ್ಪಣ್ಣಾ,
  ತೂಷ್ಣಿಲಿ ವಿವರುಸಿ ನಿಲ್ಲುಸೆಕ್ಕು ಹೇಳಿ ಏನೂ ಇಲ್ಲೆ ಆತಾ??
  ಹಾಂ…!!
  ಎಡಕ್ಕಿಲ್ಲಿ ಬೇಕಾರೆ ಸಣ್ಣ ಸಣ್ಣ ಸುದ್ದಿ ಇರಳಿ, ಆದರೆ ನಿನ್ನ ಶೈಲಿ ಬದಲಪ್ಪಲಾಗ…

 3. ಬೊಳುಂಬು ಮಾವ says:

  ನಮ್ಮ ಬೈಲು ಹೇಳಿರೆ, ನಮ್ಮದೇ ಬೈಲು, ಬಾವಂದ್ರು, ಅಣ್ಣಂದ್ರು, ಅಕ್ಕಂದ್ರು, ಅತ್ತಿಗೆಕ್ಕೊ, ಅಪ್ಪಚ್ಚಿ, ದೊಡ್ಡಪ್ಪ, ಅತ್ತೆ, ಮಾವ, ಅಜ್ಜ, ಅಜ್ಜಿ ಪುಳ್ಯಕ್ಕೊ ಸೇರುತ್ತ ಕೂಡು ಕುಟುಂಬ. ಹಾಂಗಾಗಿ ಇಲ್ಲಿ ಸುದರಿಕೆ ಮಾಡುವಗ ಸಂಭಾವನೆ ಪ್ರಶ್ಣೆ ಬಪ್ಪಲೇ ಆಗ. ಮನೆಲೇ ಪೈಸೆ ತೆಕೊಂಡು ಕೆಲಸ ಮಾಡ್ತ ಕ್ರಮ ಇದ್ದೊ. ಸುದರಿಕೆ ಮಾಡ್ತ ಉದ್ಯೋಗವನ್ನೇ ಮಾಡ್ತವನುದೆ, ಅವನ ಮನೆಲಿ, ಅವನ ಹತ್ರಾಣ ನೆಂಟ್ರ ಮನೆಲಿ ಸಂಬಾವನಗೆ ಅಪೇಕ್ಷ್ಸೆ ಮಾಡ್ತದು ತಪ್ಪೇ. ಭಾವಂಗುದೆ, ಸಂಭಾವನೆಗುದೆ ಹೊಂದಾಣಿಕೆ ಖಂಡಿತಾ ಬಾರ.
  ಸೂಕ್ಷ್ಮ ವಿಷಯವೊಂದರ ನವಿರಾಗಿ ಮನಸ್ಸಿಂಗೆ ತಟ್ಟುವ ಹಾಂಗೆ ವಿವರುಸಿದ್ದ° ಒಪ್ಪಣ್ಣ°. ಬೈಲಿನ ಎಲ್ಲೋರಿಂಗೂ ಸೇರ್ಲೆ ಒಂದು ವೇದಿಕೆ ಆಗಿ ಮಾಡಿ ಕೊಟ್ಟು ಎಲ್ಲೊರಿಂಗು ಅತ್ಲಾಗಿತ್ಲಾಗಿ ಪರಿಚಯ ಮಾಡೆಂಬಲೆ, ತಮ್ಮ ಪ್ರತಿಭೆಯ ತೋರುಸಲೆ, ಹಾಂಗೇ ಬೆಳವಲೆ ಅವಕಾಶ ಮಾಡಿ ಕೊಡ್ತಾ ಇಪ್ಪ ಒಪ್ಪಣ್ಣಂಗೆ ನಾವು ಎಂದೆಂದೂ ಋಣಿಗೊ.

  ಊರಿಲ್ಲಿ ಪ್ರಚಲಿತ ವಿಷಯವೊಂದು ಈ ಸಂದರ್ಭಲ್ಲಿ ನೆಂಪ್ಜು ಆವ್ತು. ಊರಿನ ಒಬ್ಬ, ಗಣ್ಯನೊ, ನಗಣ್ಯನೋ ವ್ಯಕ್ತಿ, ಅವ ನೆರೆಕರೆಗೆ ಸುದರಿಕೆಗೆ ಬತ್ತ ಕ್ರಮ ಇಲ್ಲೆ, ಹಾಂಗಾಗಿ ಅವನ ಮನಗೆ ಬೆಂದಿಗೆ ಕೊರವಲೆ/ ಸುದರಿಕೆಗೆ ನೆರೆಕರೆಯವು ಹೋಪಲೆ ಉದಾಸನ ಮಾಡ್ತವು. ನೀ ನನಗಿದ್ದರೆ ನಾ ನಿನಗೆ ಹೇಳಿ. ಇದು ನಮ್ಮ ಬೈಲಿಲ್ಲಿ ಇಲ್ಲೆ ಹೇಳ್ತದು ಸಂತೋಷದ ಸಂಗತಿ.

  ಒಪ್ಪಣ್ಣನ ಶುದ್ದಿಗೊ ತುಂಬ ಉದ್ದ ಆವುತ್ತು ಹೇದು ಕೆಲವು ಜೆನರ ಅಭಿಪ್ರಾಯ ಆಡ. ಚೆ. ಈ ಮಾತು ಕಂಡಿತಾ ಆನು ಒಪ್ಪೆ. ಅದು ಎಷ್ಟು ಉದ್ದ ಇದ್ದರುದೆ ಓದುಸೆಂಡುದೆ ಹೋವುತ್ತು, ಒಳ್ಳೆ ಭಾಷೆ, ವಿಷಯಂಗಳುದೆ ಇರ್ತು, ತಮಾಷೆ, ವ್ಯಂಗ್ಯ, ಎಲ್ಲವುದೆ ಇರ್ತು. ಹಾಂಗೆ ತೂಷ್ಣಿ ಮಾಡಿಕ್ಕೆಡ ಒಪ್ಪಣ್ಣಾ. ಒಪ್ಪ ಕೊಡುವಗ ರಜಾ ಬೇಗ/ತಡ ಆಗಿ ಹೋತಿಕ್ಕುಗು, ಅದಕ್ಕೆ ಹೀಂಗಿಪ್ಪ ಬೇಜಾರಿನ ಮಾತುಗೊ ಬೇಡ ಆತೊ ?!!

 4. ಉಂಡೆಮನೆ ಕುಮಾರ° says:

  ಈ ಬೈಲಿನ ಆಕರ್ಷಣೆಯೇ ಆತ್ಮೀಯ ಸಂಬಂಧ..ಪ್ರತಿಯೊಬ್ಬಂಗೂ ಅಣ್ಣ, ಅಕ್ಕ°, ಅಪ್ಪಚ್ಚಿ, ಮಾವ ಹೇಳುವ ಸಂಬೋಧನೆ, ಇಲ್ಲಿ ಬಪ್ಪ ತಮಾಷೆ, ನಮ್ಮದೇ ಪದಂಗಳ ಬಳಕೆ (ಇತ್ತೀಚೆಗೆ ಮಾತಿಲ್ಲಿ ಕಮ್ಮಿ ಆದ್ದ ಶಬ್ದಂಗೊ) ಗಹನವಾದ ವಿಚಾರಂಗೊ, ಮರೆತ್ತಾ ಇಪ್ಪ ನಮ್ಮ ಸಂಸ್ಕೃತಿ-ಸಂಸ್ಕಾರಂಗಳ ಸ್ಮರಣೆ ಮತ್ತೆ ಪರಿಷ್ಕರಣೆ ನಿಜವಾಗಿಯೂ ಅದ್ಭುತ ಪ್ರಯತ್ನ. ಪ್ರತಿಯೊಬ್ಬರ ಬರವಣಿಗೆಲಿಯೂ ಒಂದೊಂದು ಹೊಸ ವಿಷಯಂಗೊ ಸಿಕ್ಕುತ್ತು. ಒಪ್ಪಣ್ಣ°..ನಿನ್ನ ಬರಹ ಉದ್ದ ಆವ್ತು ಹೇಳಿದ್ದಾರು? ಅದೇ ಸ್ವಾರಸ್ಯಲ್ಲಿ ಕುತೂಹಕಲಲ್ಲಿ ಓದಿಸಿಕೊಂಡು ಹೋವುತ್ತು ..ಭಾಷೆಯೂ ಶೈಲಿಯೂ ಎಲ್ಲವೂ ಖುಷಿ ಕೊಡ್ತು..ಸಾಕಷ್ಟು ತಿಳುವಳಿಕೆ ಕೊಡ್ತು..ಹೀಗೇ ಮುಂದುವರಿಯಲಿ..

 5. ಒಪ್ಪಣ್ಣ,
  ಈ ವಾರದ ಶುದ್ದಿ ಈ ವರ್ಷದ ಶುದ್ದಿ ಆತು ಮಾತ್ರ ಅಲ್ಲ, ಎಲ್ಲರಿಂಗೂ ಒಂದು ಧ್ಯೇಯ ವಾಕ್ಯದ ಹಾಂಗೆ ಆತು. ಲಾಯ್ಕಾಯಿದು ಶುದ್ದಿ.

  ಸಂಭಾವನೆ ಹೇಳಿದರೆ ಗೌರವ ಹೇಳಿ ಅರ್ಥ. ಬಾಕಿ ದಿಕ್ಕೆ ಬರವೋರಿಂಗೆ ಅದರ ಪೈಸೆಯ ರೂಪಲ್ಲಿ ಕೊಡ್ತವು. ಅಲ್ಲಿ ಪೈಸೆಯ ಬೆಲೆಯಷ್ಟೇ ಆ ಸಂಬಂಧ ಇಪ್ಪದು. ಬರದವನ ಬಗ್ಗೆ ಪ್ರಕಟ ಮಾಡುವವಂಗೆ ಎಂತದೂ ಗೊಂತಿರ್ತಿಲ್ಲೇ. ಯಾವ ಊರಿನವ°? ಎಂತ ಮಾಡ್ತ°? ಯಾವುದೂ ಅರಡಿಯ. ಅದೇ ಬರವವಂಗೆ ಕೂಡಾ…!! ತಾನು ಬರವದರ ಆರು ನೋಡಿ ಪ್ರಕಟ ಮಾಡ್ತ° ಹೇಳುದು ಅರಡಿಯ. ಅವರ ಒಳ ಇಪ್ಪದು ಪೈಸೆಗೆ ತಕ್ಕಿತ ಬರವ ಸಂಬಂಧವೂ..!! ಅದಕ್ಕೆ ತಕ್ಕಿತ ಭಾವನೆಯೂ..!!

  ಆದರೆ ಬೈಲು ಹಾಂಗಲ್ಲ. ಎಲ್ಲಾ ರೀತಿಲೂ ಭಿನ್ನ. ಇಲ್ಲಿ ಎಲ್ಲೋರೂ ಅವರವರ ಗುರುತಿಸಿಗೊಂಬದು ಒಪ್ಪಣ್ಣ ಮಡಗಿದ ಒಂದು ಒಪ್ಪ ಹೆಸರಿಲಿ. ಆ ಹೆಸರಿಲಿ ಇಪ್ಪ ಸಂಬಂಧವಾಚಕ ಆ ವ್ಯಕ್ತಿಯ ಒಟ್ಟಿಂಗೆ ಎಲ್ಲರ ಅದೇ ಭಾವನೆಲಿ ಬಂಧಿಸಿ ಬಿಡ್ತು. ಅದರಲ್ಲಿ ಪ್ರಾಯದ ಲೆಕ್ಕ ಇಲ್ಲೆ. ಇಲ್ಲಿ ಪ್ರತಿಯೊಬ್ಬನೂ ಕೂಡಾ ಈ ಪ್ರೀತಿಯ ನೂಲಿಲಿ ಜೀಕಿಗೊಂಡು ಬೈಲ ಸಂಚಾರಲ್ಲಿ ಇರ್ತವು. ಒಂದು ಕೂಡು ಕುಟುಂಬದ ಆತ್ಮೀಯತೆ ಇಲ್ಲಿದ್ದು.

  ಈ ಬೈಲಿಂದಾಗಿಯೇ ಬರವಲೆ ಸುರು ಮಾಡಿ ಶ್ರೀಅಕ್ಕ° ಆಗಿ ಗುರುತಿಸಿಗೊಂಡೋಳು ಆನು. ಇದು ಬೆಳೆತ್ತಾ ಇಪ್ಪಗ ಸಂತೋಷವೂ ಆಯಿದು. ಬೈಲಿಂದಾಗಿ ಸಿಕ್ಕಿದ್ದದರ ಲೆಕ್ಕ ಹಾಕುಲೆ ಕಷ್ಟ! ಅದಕ್ಕೆ ಬೆಲೆ ಕಟ್ಟುಲೇ ಅಸಾಧ್ಯ!!

  ♦ ಬೈಲಿಲಿ ಒಬ್ಬ ಪ್ರೀತಿಯ ತಮ್ಮ ಸಿಕ್ಕಿದ್ದದೇ ಒಂದು ದೊಡ್ಡ ಸಂಭಾವನೆ ಎನಗೆ!! ಅದು ಪೂರ್ವ ಜನ್ಮದ ಪುಣ್ಯಲ್ಲಿಯೇ ಸಿಕ್ಕಿದ್ದದು! ಈ ತಮ್ಮನ ಮೂಲಕ ಸಿಕ್ಕಿದ ಗುರು ಸೇವೆಯ ಭಾಗ್ಯ, ಗುರು ಅನುಗ್ರಹದ ಧಾರೆ ಈ ಜೀವಮಾನದ ದೊಡ್ಡ ಉಳಿಕೆ, ಗಳಿಕೆ. ಇದಕ್ಕಿಂತ ದೊಡ್ಡ ಸಂಭಾವನೆ ಇದ್ದಾ?
  ಆ ತಮ್ಮನ ಮದುವೆಗೆ ಹೇಳಿ ಅಪ್ಪನ ಮನೆಂದ ಸೀರೆ ಸಿಕ್ಕುವ ಹಾಂಗೆ ಬೈಲಿನ ತಮ್ಮ ಮಾಮಾಸಮನ ಮದುವೆಗೆ ಸೀರೆ ಸಿಕ್ಕಿದ್ದು. ಅದುದೇ ಖುದ್ಧಾಗಿ ಅಪ್ಪಚ್ಚಿ, ಚಿಕ್ಕಮ್ಮ ಮನೆಗೆ ಬಂದು ಕೊಟ್ಟು ಗೌರವಿಸಿದ್ದು. ಈ ಪ್ರೀತಿಯ ಭಾವನೆಗೆ ಎಂತ ಹೇಳುದು? ಬೈಲಿನ ಎಲ್ಲೋರ ಒಟ್ಟಿಂಗೆ ಮದುವೆ ತಯಾರಿಗೆ ಓಡಾಡಿದ್ದದು.. ಆ ನೆನಪುಗ ಶಾಶ್ವತ!! ಬಹುತೇಕ ಎಲ್ಲರ ಸುರೂ ಮುಖತಃ ಕಂಡದೂ ಅಲ್ಲಿಯೇ!!! ಆ ಸಂತೋಷ ಯಾವಾಗಲೂ ಹಸುರು.

  ♦ಪ್ರತಿ ವರ್ಷ ಚಾತುರ್ಮಾಸ್ಯಲ್ಲಿ ಅಶೋಕೆಗೆ ಹೋಪಲಿದ್ದನ್ನೇ! ಈ ಸರ್ತಿ ಹೋಪಗ ದೊಡ್ಡಜ್ಜ°, ಸುಭಗಣ್ಣನ ಒಟ್ಟಿಂಗೆ ಒಂದೇ ಮನೆಯವರ ಹಾಂಗೆ ಹೋಪಲೆ, ಅಲ್ಲಿ ಹೋಗಿ ಗುರಿಕ್ಕಾರ್ರು, ಮಾಮಾಸಮ, ಅಭಾವ, ಕೆಪ್ಪಣ್ಣ, ಪೆಂಗಣ್ಣನ ಒಟ್ಟಿಂಗೆ ಶ್ರೀ ಮಹಾಬಲೇಶ್ವರ ಸನ್ನಿಧಿಗೆ ಹೋಗಿ, ಗುರು ಭೇಟಿ ಮಾಡಿ ಶ್ರೀ ಪೀಠದ ಮಂತ್ರಾಕ್ಷತೆ ಪಡಕ್ಕೊಂಡ ಈ ಕೊಶಿಗೆ ಬೆಲೆ ಕಟ್ಟುದು ಹೇಂಗೆ?
  ವಾಪಾಸು ಬಪ್ಪಗ ಇರುಳು ಹತ್ತೂವರೆ ಆದರೂ ಕೂಡಾ ಸುಮಾರು ಬಗೆ ಮಾಡಿ ಕಾದು ಕೂದು ಬೆಶಿ ಬೆಶಿ ಬಳ್ಸಿ ಹೊಟ್ಟೆ, ಮನಸ್ಸು ಎರಡೂ ತುಂಬುಸಿ, ಮರದಿನಕ್ಕೆ ಮನೆಗೂ ತಿಂಡಿ ಕಟ್ಟಿ ಕೊಟ್ಟ ಶರ್ಮಪ್ಪಚ್ಚಿ, ಚಿಕ್ಕಮ್ಮ, ತಂಗೆಯ ಪ್ರೀತಿಗೆ ಎಷ್ಟು ಬೆಲೆ ಕಟ್ಟುಲೆಡಿಗು? ಅಪ್ಪಚ್ಚಿಯ ಮನೆಯ ಗುರ್ತ ಆದ್ದದೂ .. ಅಪ್ಪಚ್ಚಿಯ ಆ ಪ್ರೀತಿಯ ಪಡಕ್ಕೊಂಬಲೆ ಎಡಿಗಾದ್ದದೂ ಬೈಲಿಂದಾಗಿಯೇ ಅಲ್ಲದ?

  ♦ಮಾಷ್ಟ್ರುಮಾವನ ಒಟ್ಟಿಂಗೆ ಬೆಂಗ್ಲೂರಿಂಗೆ ಹೋಗಿ ಬಪ್ಪಗ ಅವರ ಪ್ರೀತಿ, ಅವರ ಮಾತಿನ ಪ್ರತಿಯೊಂದು ಗೆರೆಲಿಯೂ ಸಿಕ್ಕಿದ ಆಳವಾದ ಜ್ಞಾನಕ್ಕೆ, ಗಂಭೀರ, ಗಹನವಾದ ವಿಷಯಕ್ಕೆ ಪೈಸೆ ಲೆಕ್ಕ ಹಾಕಿ ಪೂರೈಸುಗಾ?

  ♦ವಿದ್ವಾನಣ್ಣ ಎಲ್ಲಿಯೇ ಆದರೂ ಎದುರು ಸಿಕ್ಕಿ ನೆಗೆ ನೆಗೆ ಮಾಡಿ ಬೈಲಿನ ಆತ್ಮೀಯತೆಲಿ ಮಾತಾಡ್ಸುವಾಗ ಸಿಕ್ಕುವ ಕೊಶಿಗೆ ಯಾವ ಲೆಕ್ಕ?

  ♦ಮೊನ್ನೆ ಮೊನ್ನೆ ಮಾಷ್ಟ್ರುಮಾವನ ಮನೆಲಿ ಪೂಜೆಗೆ ಅರ್ಧಕರ್ಧ ಬೈಲಿನ ಬಂಧುಗ ಸೇರಿ ಮಾಡಿದ ಗೌಜಿಲಿ ಸಿಕ್ಕಿದ ದೇವರ ಆಶೀರ್ವಾದದ ಒಟ್ಟಿಂಗೆ ಪ್ರೀತಿಯ ರಕ್ಷೆಗೆ ಎಷ್ಟು ಬೆಲೆ?

  ♦ಅಂದು ಮೂಡಬಿದಿರೆಗೆ ಹೋಗಿಪ್ಪಗ ಸುವರ್ಣಿನಿ ಡಾಗುಟ್ರಕ್ಕನ ಕಂಡು ಮಾತಾಡಿ, ಗಮ್ಮತ್ತು ತಿಂದು ಬಂದದು ಈ ಪ್ರೀತಿಯ ಭಾವನೆಲಿಯೇ ಅಲ್ಲದ?

  ♦ಡಾಮಹೇಶನ ಸನ್ಮಾನಕ್ಕೆ ಹೋಗಿ ಬದಿಯಡ್ಕಲ್ಲಿ ದೊಡ್ಡಭಾವ°, ಡಾಮಹೇಶ°, ಯೇನಂಕೂಡ್ಳು, ಬಲ್ನಾಡು ಮಾಣಿ, ಗಣೇಶ ಮಾವ° ‘ಆನಂದ ಸಾಗರ’ದ ಆನಂದಲ್ಲಿ ಮುಳುಗಿದ್ದದಕ್ಕೆ ಲೆಕ್ಕವ ಯೇನಂಕೂಡ್ಲಣ್ಣ ಚುಕ್ಕು ಕಾಪಿ ಪೈಸೆಯ ಒಟ್ಟಿಂಗೆ ಕೊಟ್ಟಿಕ್ಕಾ?

  ♦ಏನಂಕೂಡ್ಳಿಲಿ ಬೈಲಿನ ಮಿಲನ ಆದ್ದದರ ಮಧುರತೆ ಇನ್ನೂ ಮರದ್ದಿಲ್ಲೇ. ಆ ಮನೆಯ ಅಪ್ಪಚ್ಚಿ ಚಿಕ್ಕಮ್ಮನ ಪ್ರೀತಿಲಿ ಇದ್ದ ಭಾವನೆ ಯಾವುದಾದರೂ ಹಾಲಿಲಿ ಸೇರಿದರೆ ಅಥವಾ ಯಾವುದಾದರೂ ಜಾಗೆಗೆ ಹೋದರೆ ಸಿಕ್ಕುಗಾ? ಅವರ ಪ್ರೀತಿಗೆ ಅಭಿಮಾನಕ್ಕೆ ಬೆಲೆ ಎಷ್ಟು?

  ♦ಮುಳಿಯ ಭಾವನ ಮನೆಲಿ ಸೇರಿ ಮಾಡಿದ ಗೌಜಿಗೆ ಹೇಂಗೆ ಲೆಕ್ಕ ಹಾಕುದು?

  ♦ ನಿತ್ಯ ಮೂರು ಹೊತ್ತೂ ಬೈಲ ಚಾವಡಿಯ ಗಲಗಲಲ್ಲಿ ನಮ್ಮ ಚಿಂತೆಗ ಸಾವಿರ ಇಪ್ಪದು ಮರದು ನೆಗೆಯ ಆವರಣಲ್ಲಿ ದಿನ ಮುಗಿತ್ತು. ಈ ಪ್ರೀತಿಯ ಬಂಧಕ್ಕೆ ಹೇಂಗೆ ಬೆಲೆ ಕಟ್ಟುದು? ಯಾವ ಜೆಂಬರಕ್ಕೆ ಹೋಗಲಿ ಆರ ಹತ್ತರೆ ಮಾತಾಡಲಿ. ಬೈಲ ನೆರೆಕರೆಯ ಬಂಧುಗ ಸಮೋಸಲ್ಲಿ ಒಟ್ಟಿಂಗೆ ಇರ್ತವು. ಯಾವ ಸಂಬಂಧದ ಮದುವೆ, ಪೂಜೆ, ಯಾವ ಸಂದರ್ಭ ಆದರೂ ಕೂಡಾ!!! ಯಾವ ಹೊಡೆಂಗೆ ಹೋದರೂ ಕೂಡಾ ನೆರಳಿನ ಹಾಂಗೆ ಬತ್ತ ಈ ಪ್ರೀತಿಯ ಬಂಧುಗಳ ಪ್ರೀತಿಗೆ ಎಷ್ಟು ಲೆಕ್ಕ ಹಿಡಿವದು?

  ♦ಯಾವ ಊರಿಂಗೆ ಹೋಗಲಿ ಎಂತ ತೊಂದರೆ ಬಂದರೂ ಬೈಲಿನ ಬಂಧುಗ ಆರಾರು ಇದ್ದೇ ಇದ್ದವು ಹೇಳುವ ಧೈರ್ಯ ಬೇರೆ ಆರಿಂಗಾದರೂ ಸಿಕ್ಕುಗಾ?ಅದು ಬೈಲಿಲಿ ಇಪ್ಪ ಪ್ರತಿಯೊಬ್ಬನೂ ಎಲ್ಲೆಲ್ಲಿ ಇದ್ದವು ಹೇಳುವ ಅರಿವಿದ್ದ ಕಾರಣ ಅಲ್ಲದಾ? ಆ ಆತ್ಮೀಯತೆ ಇದ್ದ ಕಾರಣ ಬೈಲಿನ ಆರ ಮನೆಗೆ ಸುರು ಹೋದರೂ ಕೂಡಾ ಆ ಮನೆ ಸುಮಾರು ಸರ್ತಿ ಬಂದು ಅಭ್ಯಾಸ ಇದ್ದ ಮನೆಯ ಹಾಂಗೆ ಆವುತ್ತು. ಯಾವ ಸಂಕೋಚ ಅಲ್ಲಿ ಇರ್ತಿಲ್ಲೆ. ಒಂದೇ ಮನೆಯೋರ ಭಾವನೆಲಿ ಕಂಡು ಮಾತಾಡಿ ಸುಖ ದುಃಖ ಹಂಚಿ ಮನಸ್ಸು ತುಂಬಿ ವಾಪಾಸು ಬತ್ತು. ಈ ಭಾವನೆ ಬೇರೆ ಎಲ್ಲಿ ಇಕ್ಕು?

  ♦ಇಲ್ಲಿ ಒಬ್ಬ ಅಷ್ಟು ಬರದ°, ಇಷ್ಟು ಬರದ° ಹೇಳ್ತ ಮಾತ್ಸರ್ಯ ಇಲ್ಲೆ. ಇನ್ನೊಬ್ಬ ಬರವೋರ ಮನದಾಳಂದ ಪ್ರೋತ್ಸಾಹ ಮಾಡ್ತ ಎಲ್ಲಾ ಸಹೃದಯ ಬಂಧುಗ ಇಪ್ಪಗ, ಬರದ್ದದರ ಪ್ರೀತಿಲಿ ತಿದ್ದುತ್ತ ಅಣ್ಣ, ತಮ್ಮ, ಅಪ್ಪಚ್ಚಿ , ಭಾವಂದ್ರು ಇಪ್ಪಗ ಮನಸ್ಸಿಲಿ ಇಪ್ಪದರ ಬರವಲೆ ಅಳುಕಿಲ್ಲೆ. ಮನೆದೋ, ಸ್ವಂತದ್ದೋ ಎಂತದೇ ಸಂತೋಷದ ಸುದ್ದಿ, ಎಂತದೆ ಸಮಸ್ಯೆ ಬಂದರೂ ಕೂಡಾ ಮೊದಾಲು ನೆಂಪಪ್ಪದು ಬೈಲಿನ ಬಂಧುಗಳ.

  ♦ಪ್ರತಿ ಜೆಂಬರಕ್ಕೆ ಹೋದಪ್ಪಗಳೂ ಬೈಲಿನವ್ವು ಆರಾರು ಇದ್ದವಾ ಹೇಳಿ ಹುಡುಕ್ಕಿ ಹೋಪದು ಎಂತಕ್ಕೆ? ಅಲ್ಲಿಪ್ಪವ್ವು ಎಲ್ಲೋರೂ ಸಂಬಂಧಿಕರೇ ಆಗಿದ್ದರೂ ಕೂಡಾ ಹೃದಯ ಸಂಬಂಧದ ಬೈಲಿನ ಬಂಧುಗಳ ಮನಸ್ಸು ಹುಡುಕ್ಕಿ ಹಿಡಿತ್ತು ಅಲ್ಲದಾ?

  ಒಪ್ಪಣ್ಣ,
  [ಎಲ್ಲೋರಿಂಗೂ ಇದೊಂದು ನಿತ್ಯ ಮನೆಜೆಂಬ್ರ ಅಲ್ಲದೋ!]

  ಒಪ್ಪಣ್ಣನ ಬೈಲು ನೀನು ಹೇಳಿದ ಹಾಂಗೆ ನಿತ್ಯ ಮನೆ ಜೆಂಬರದ ಹಾಂಗೆ!!! ಇಲ್ಲಿ ನಿತ್ಯ ಸುದರಿಕೆ ಆಯೆಕ್ಕು. ಅವ° ಮಾಡಲಿ, ಇವ° ಮಾಡಲಿ ಹೇಳಿ ಇಲ್ಲೆ. ಎಲ್ಲೊರೂ ಸೇರಿ ಮಾಡುವ ನಿತ್ಯ ಹಸಿರಿನ ಬೈಲು ಇದು. ಇಲ್ಲಿ ಯಾವಾಗಲೂ ಕೊಯ್ಲು ಇದ್ದೇ ಇದ್ದು.
  ಈ ಬೈಲಿನ ಅಂತರ್ಬೈಲು ಹೇಳಿ ನೀನು ಹೇಳಿದೇ.. ಈ ಅಂತರ್ಬೈಲಿನ ವಿಸ್ತಾರ ಅನಂತ ಅಲ್ಲದಾ? ಈ ಅನಂತತೆಯ ಒಂದು ಕಣ ಆಗಿಪ್ಪಲೇ ತುಂಬಾ ತುಂಬಾ ಖುಷಿ ಇದ್ದು. ಬೈಲಿನ ಪ್ರೀತಿಯ ಭಾವನೆಯ ಸಂಭಾವನೆ ದಿನಂದ ದಿನಕ್ಕೆ ವೃದ್ಧಿ ಆವುತ್ತು. ಈ ಸಂಭಾವನೆ ಯಾವುದೇ ಬ್ಯಾಂಕ್ ಲಿ ಮಡುಗದ್ದೆ ಬಡ್ಡಿ ಸಮೇತ ಇಮ್ಮಡಿ, ಮುಮ್ಮಡಿ ಆಗಿ ಸಿಕ್ಕುತ್ತು.

  ಈ ಲಾಭದ ಲೆಕ್ಕಕ್ಕೆ ಎಲ್ಲೋರೂ ಶುದ್ಧ ಮನಸ್ಸಿಲಿ ಸೇರಿದರೆ, ಸಂಬಂಧ ಬೆಳದು, ಭಾವನೆಯ ಮರ ಚಿಗುರಿ ಸಂಭಾವನೆ ಎಲ್ಲರ ಮನಸ್ಸು ತುಂಬಲಿ…
  ಬೈಲಿಲಿ ಎಲ್ಲರ ಮನಸ್ಸು ಒಂದೇ ಆಗಿ ಇರಲಿ…
  ಈ ಜನ್ಮದ ಸರಸ್ವತೀ ಸೇವೆಯ ಭಾಗ್ಯ ಒದಗಿಸಿದ ನಿನಗೆ ಎಲ್ಲಾ ಸೌಭಾಗ್ಯಂಗ ಒಲಿದು ಬರಲಿ..
  ಬೈಲು ಭಾವನೆಯ ಸಂಭಾವನೆಲಿ ತುಂಬಿ ತುಳುಕಲಿ..

 6. ಸುಮನ ಭಟ್ ಸಂಕಹಿತ್ಲು. says:

  ಆನು ಮೊನ್ನೆ ಮೊನ್ನೆ ಓದುಲೆ ಸುರು ಮಾಡಿದ “ಒಪ್ಪಣ್ಣ” ವೆಬ್ಸೈಟ್ಂಗೆ ಈಗ ನಾಲ್ಕನೇ ವರ್ಷ ಹಿಡುದತ್ತು ಹೇಳಿ ತುಂಬಾ ಖುಶಿ ಆತು.
  ಎಷ್ಟೊಂದು ಜನರ ಇಲ್ಲಿ ಒಂದೆ ಮನೆಯವರ ಹಾಂಗೆ ಭೇಟಿ ಮಾಡಿ ಎಷ್ಟೆಲ್ಲ ಸುದ್ದಿಗಳ ಹಂಚಿಗೊಂಬಲೆ ಆವ್ತು, ಅದ್ರಲ್ಲಿ ಸಿಕ್ಕುವ ಸಂತೋಷ ಎಷ್ಟು ಹೇಳಿ ಎನಗೆ ವಿವರುಸುಲೆ ಎಡಿಯ. ಹೀಂಗೆ ಎಲ್ಲರಿಂಗೂ ತುಂಬ ಖುಷಿ ಕೊಡುವ ಈ ಬೈಲಿಲ್ಲಿ ಸಂಭಾವನೆಯ ಬಗ್ಗೆ ನೆಂಪೇ ಆವ್ತಿಲ್ಲೆ. ಬೈಲಿನ ಬಗ್ಗೆ ಬರೇ ಪ್ರೀತಿಯ ಭಾವನೆ ಬತ್ತಷ್ಟೆ ಮನಸಿಲ್ಲಿ ಯಾವಾಗಲುದೆ.
  ~ ಸುಮನಕ್ಕ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *