Oppanna.com

ಭೋಜನಕಾಲೇ, ನಮಃ ಪಾರ್ವತೀಪತೇ ಹರಹರಾ…!!

ಬರದೋರು :   ಒಪ್ಪಣ್ಣ    on   02/07/2010    23 ಒಪ್ಪಂಗೊ

ಮಾದೇಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏವಾ!

~
ಅಬ್ಬ, ಈ ಜೆಂಬ್ರಂಗೊಕ್ಕೆ ಹೋಗಿ ಹೋಗಿ ಒರಕ್ಕಿಲಿದೇ ಇದೇ ಬತ್ತಿದಾ! 🙂
ಅಪ್ಪೂಳಿ, ಹತ್ತರಾಣ ಜೆಂಬ್ರಂಗೊ, ಹೋಗದ್ದೆ ನಿಮುರ್ತಿ ಇಲ್ಲೆ, ಪ್ರೀತಿಲಿ ಕಾಗತ ಪೋಷ್ಟು ಮಾಡಿರ್ತವು, ನವಗೇ ಹೇಳಿ ಒಂದು ಬಾಳೆ ಕಟ್ಟಿರ್ತವು, ಎರಡು ಹೋಳಿಗೆ ಮಡುಸಿರ್ತವು; ಮುಗುಶದ್ರೆ ಆವುತ್ತಾ; ಚೆ ಚೆ!?
ಸರ್ಪಮಲೆ ಮಾವ° ಪರಂಚುತ್ತವು, ಹಾಂಗೆ ತಾರಾಮಾರಾ ಜೆಂಬ್ರಂಗೊಕ್ಕೆ ಹೋಗೆಡ ಮಿನಿಯಾ, ಹೊಟ್ಟೆಹಾಳಕ್ಕೂ – ಮನೆಲಿ ಅತ್ತೆ ಕೊಟ್ಟಿಗೆಮಾಡಿದ್ದು, ಪುರುಸೋತು ಮಾಡಿ ಬಾ, ತಿನ್ನು – ಹೇಳಿ.
ಕಳೆಯತ್ತೋಡಿ ಅತ್ತೆ ತಂದ ಹಲಸಿನಣ್ಣಿಂದಡ! ಜೇನಬರಿಕ್ಕ°. ಕೊಟ್ಟಿಗೆ ಇರುಳಿಂಗೂ ತಿಂಬಲಕ್ಕು, ಜೆಂಬ್ರದೂಟ ಮದ್ಯಾನ್ನಕ್ಕೇ ಆಗೆಡದೋ – ಹೇಳಿಗೊಂಡು ಒಪ್ಪಣ್ಣಂಗೆ ಕನುಪ್ಯೂಸು ಬಪ್ಪದಿದಾ..!!
ಹಾಂಗೇಳಿಗೊಂಡು ಅವುದೇ ಜೆಂಬ್ರಕ್ಕೆ ಹೋಗದ್ದೆ ಕೂರವು!
ಅವಕ್ಕುದೇ ಇನ್ನು ನಾಲ್ಕು ದಿನ ಬಿಡದ್ದೆ ಹೋಪಲೆ ಇದ್ದು. ಮದುವೆ, ಸಟ್ಟುಮುಡಿ, ಬದ್ಧ, ತಿಥಿ, ನಾಗ ಪ್ರತಿಷ್ಟೆ, ಬ್ರಮ್ಮ ಕಲಶ, ಹೀಂಗೆ.
ಈ ಮಳಗೆ ಎಲ್ಲಿಗೂ ಹೋಯೆಕು ಹೇಳಿ ಕಾಣುತ್ತಿಲ್ಲೆ. ಹೋಗದ್ದೆ ಆವುತ್ತೂ ಇಲ್ಲೆ – ಹೇಳಿದವು.
ಅತ್ತೆಗೆ ಪರಂಚಿ ಪರಂಚಿ ಸೊರವೇ ಬಿದ್ದು ಹೋಯಿದು!!
– ರಜ್ಜ ಗೆಣಮೆಣಸು ತೆಕ್ಕೊಂಬಲೆ ಹೇಳಿದ್ದವು ಕಳೆಯತ್ತೋಡಿ ಅತ್ತೆ – ಇನ್ನು ಎಲ್ಲ ಸರಿ ugg boots forum ಅಕ್ಕು!
~

ಓ – ಅದಿರಳಿ, ಎಂತದೊ ಮಾತಾಡ್ಳೆ ಹೆರಟು ಎಲ್ಲಿಯೋ ಬಾಕಿ ಆದ ಈ ಒಪ್ಪಣ್ಣ. 🙁
ಈಗ ಜೆಂಬ್ರಂಗೊ ಇದಾ! ಜೆಂಬ್ರದ ಶುದ್ದಿಯನ್ನೇ ಇನ್ನೊಂದರಿ ಮಾತಾಡುವೊ ಹೇಳಿ ಕಂಡತ್ತು.
ಓ ಮೊನ್ನೆ ನೆರಿಯದೊಡ್ಡಪ್ಪನಲ್ಲಿ ಒರಿಶಾವಧಿ ಪೂಜೆ. ಯೇವತ್ರಾಣ ಹಾಂಗೆ ಶಿವಪೂಜೆ-ಸತ್ನಾರಣ ಪೂಜೆ. ಜೆನ ಹದಾ ಮಟ್ಟಿಂಗೆ ಅಕ್ಕು, ಆಪ್ತೇಷ್ಟರು, ನೆಂಟ್ರು-ನೆರೆಕರೆ. ದೊಡಾ ಗವುಜಿ ಏನಲ್ಲ ಇದಾ! ಸೇರಿದವೆಲ್ಲೊರುದೇ ಹತ್ತರಾಣೋರೇ.
ಒಂದೋ ಮನೆ ಹತ್ತರೆ, ಅಲ್ಲದ್ರೆ ಮನಸ್ಸು ಹತ್ತರೆ..
ಆಚಮನೆ ದೊಡ್ಡಣ್ಣನ ಮೇಲುಸ್ತುವಾರಿ! ಆದಿಕ್ಷಾಂತ (A to Z)!

ಹತ್ತರಾಣೋರು ತಡವಾಗಿ ಹೋಪದಡ, ಅಪ್ಪೋ..
ಹಾಂಗೇ ಆಯಿದು ಇಲ್ಲಿಯುದೇ. ಎಂಗೊ ನೆರೆಕರೆಂದ ಎತ್ತುವಗ ಅಲ್ಲಿಗೆ ನೆಂಟ್ರುಗೊ ಅದಾಗಲೇ ಎತ್ತಿ ಆಯಿದು.
ಇಷ್ಟು ಹತ್ತರೆ ಮನೆ ಇದ್ದುಗೊಂಡು ಇದೆಂತಪ್ಪಾ ಇಷ್ಟು ತಡವಾಗಿ ಬತ್ತವಿವು – ಹೇಳಿ ಬೈತ್ತಡ್ಕ ಪುಳ್ಳಿ – ಅಲ್ಲಿಗೆ ಬಂದಿದ್ದೋನು ಪಿಳಿಪಿಳಿ ನೋಡಿದ! ಅವಂಗೆಂತ ಗೊಂತು, ನವಗೆ ಒಯಿವಾಟುಗೊ ಸುಮಾರಿದ್ದು – ಹೇಳಿ.
ಅಂತೂ ಕೇಳ್ತ ಕ್ರಮಕ್ಕೆ ನಮ್ಮ ಅಜ್ಜಕಾನಬಾವನತ್ರೆ ಕೇಳಿದೆ, ಎಂತ ಬಾವ -ಜೆಂಬ್ರಂಗೊಕ್ಕೆ ಇಷ್ಟು ತಡವಾಗಿ ಬಪ್ಪದಾ – ಹೇಳಿ.
ಮುನ್ನಾದಿನ ಗುರುವಾಯನಕೆರೆಲಿ ಮಿತ್ತೂರಿನ ಜೆಂಬ್ರ ಕಳಿಶಿಗೊಂಡು ಬಂದದಡ ಅವ°!
ಒಬ್ಬೊಬ್ಬಂದು ಒಂದೊಂದು ತಾಪತ್ರೆ!
~

ಒಳ ಶಿವಪೂಜೆಯ ರುದ್ರಾಭಿಶೇಕ ಮುಗಾತು, ಬಡಕ್ಕೋಡಿ ಗೋಪಣ್ಣ ಒಂದರಿ ಬಂದು ಮಾತಾಡುಸಿಕ್ಕಿ ಹೋದವು.
ಇನ್ನು ಪುರುಷಸೂಕ್ತ ಅಭಿಶೇಕ ಇದ್ದಡ, ಅದಾದರೆ ಮಂಗ್ಳಾರತಿ!
ಅದಿರಳಿ, ಬೈಲಿನೋರು ಎಲ್ಲ ಒಟ್ಟಾದ ಮತ್ತೆ ಎಲೆಡಕ್ಕೆ ತಿಂದೊಂಡು ಮಾತಾಡಿಗೊಂಡು ಕೂದ್ದದು!
ಮಾಷ್ಟ್ರುಮಾವನ ಎಲೆಮರಿಗೆ ಇದ್ದನ್ನೆ, ಈಗಾಣೋರ ಕೈಲಿ ಮೊಬಯಿಲು ಇಪ್ಪ ಹಾಂಗೆ! ಗೆನಾ ಕುಣಿಯ ಇರ್ತು ಯೇವತ್ತೂ.

ಅಜ್ಜಕಾನಬಾವಂಗೆ ಸೊರ ಹೋಗಿತ್ತು! – ಸರ್ಪಮಲೆಅತ್ತೆಯ ಹಾಂಗೆ.
ಆದರೆ ಇವಂಗೆ ಪರಂಚಿ ಹೋದ್ದಲ್ಲ, ಮುನ್ನಾಣ ದಿನ ಚೂರ್ಣಿಕೆ ಹೇಳಿ. ಚೆಂಙಾಯಿಗೊ ಪೂರ ಸೇರಿ ಅಪ್ಪಗ ಬೊಬ್ಬೆಯೇ ಬೊಬ್ಬೆ ಅಡ.
ಇಂದು ಕೇಳಿದ್ದಕ್ಕೆ ಪೂರ ಹೇಂ, ಹೇಂ ಹೇಳ್ತ°, ಸೊರ ಹೆರಡದ್ದೆ. ಎಂಗಳ ಲೊಟ್ಟೆಪಂಚಾತಿಗೆಗೆ ಇದೇ ಒಂದು ಕಾರಣ ಆತು!

ಅದು ಎಂತರ ಹೇಳಿತ್ತುಕಂಡ್ರೆ –

~
ನಮ್ಮೋರ ಜೆಂಬ್ರಂಗಳಲ್ಲಿ ಪಾಯಸ ಹೆರಟಕೂಡ್ಳೇ ಎಲ್ಲಿಂದಾರು ಒಂದು ಸೊರ ಸುರು ಆವುತ್ತು –
ಭ್ಹೋಜನಕಾಲೇ, ನಮಫ್‌ಪಾರ್ವತೀಪತಯೇ ಹ್ಹರಹರಾ…. ಹೇಳಿಗೊಂಡು.

ಪೇಂಟಿನ ಮಾಣಿ ಚೂರ್ಣಿಕೆ ಹೇಳುದು! ಒಳುದವೆಲ್ಲ ಕೊಶೀಲಿ ಉಂಬದು!!

ಪಾಯಸ ಕಂಡ ಕೊಶಿಯೋ, ಜೆಂಬ್ರದ ಗೌಜಿಲಿ ಸೇರುವ ಉತ್ಸಾಹವೋ, ಹಳಬ್ಬರ ಕ್ರಮ ಮುಂದರುಶುವ ಮನಸ್ಸೋ – ಎಲ್ಲವೂ ಒಟ್ಟಾಗಿ ಇದು ಬಪ್ಪದು.
ಒಬ್ಬ° ಗಟ್ಟಿಸೊರಲ್ಲಿ ಹೀಂಗೆ ಹೇಳಿದ ಕೂಡ್ಳೇ ಒಳುದವೆಲ್ಲ ಬಾಯಿಲಿ ಪಾಯಸ ತುಂಬಿದ್ದರೂ ಅಂಬೆರುಪು ಅಂಬೆರ್ಪಿಲಿ ನುಂಗೆಂಡು – ಮಾದೇವ, ಹೇಳುಗು..
ಅದು ಆರಂಭ.
ಅದರ ಹಿನ್ನೆಲೆ ಎಂತಾದಿಕ್ಕು? ಎಂತಕೆ ಅದು ಬಂದಿಕ್ಕು?! ಹೇಳಿ ಮಾಷ್ಟ್ರುಮಾವ° ವಿವರುಸುಲೆ ಸುರು ಮಾಡಿದವು.

~
ಒಗ್ಗಟ್ಟಿಲಿ ಕೆಲಸಮಾಡೆಕ್ಕಾದ ಪರಿಸ್ಥಿತಿಲಿ ಹುರುಪು, ಉತ್ಸಾಹ ಬಪ್ಪಲೆ ಬೇಕಾಗಿ ಒಟ್ಟಾಗಿ ಒಂದು ಜೈಕಾರ ಹೇಳುಗಡ.
ಬಚ್ಚಲು ದೂರ ಮಾಡಿ, ಮನಸ್ಸಿಂಗೆ ಧೈರ್ಯ ತುಂಬಲೆ ಇಂತಾ ಜೈಕಾರಂಗೊ ಉಪಕಾರ ಮಾಡ್ತಡ.
ನಮ್ಮ ಆಳುಗೊ ಹತ್ತು ಜೆನ ಸೇರಿ ದೊಡ್ಡಮರ ಎಳವಗ “ಒಬೇಲೆ”, “ಒಯಿ..ಸ್ಸ!” ಹೇಳುದು ಕೆಮಿಲಿ ಅಜನೆ ಅಪ್ಪಲೆ ಸುರು ಆತು..!
ನೆರಿಯದಜ್ಜಂಗೆ ಬೆಶಿ ಆದರೆ “ಅಜ್ಜಸುರಿಯ” ಹೇಳುದುದೇ ಅನುಸಿ ಹೋತು..!

ಇತಿಹಾಸಲ್ಲೇ ಹಾಂಗೆ ಇತ್ತಡ, ಮಾಷ್ಟ್ರುಮಾವ ಹೇಳಿದವು..
ಗೂರ್ಕರ ಸೈನ್ಯ “ಅಘೋರ್..ಕಾಲೀ”… ಹೇಳುಗಡ. (ಅದಕ್ಕೇ ಅವರ ಗೋರ್ಕಂಗೊ ಹೇಳುದಡ)
ಮೊಘಲರ ಸೈನ್ಯ “ಅಲಾಹೋ… ಅಕುಬರ್..” ಹೇಳಿಗೊಂಡು ಇತ್ತಡ, ಅದರ ಸಂತಾನ ಈಗಳೂ ಹೇಳ್ತು, ಮಾರ್ಗದಕರೆಂಗೆ ಹೋದರೆ ಕೆಮಿ ಬಿಡ್ಳೆಡಿಯ!
ಶಿವಾಜಿಯ ಸೇನೆಯವು “ಹರಹರ- ಮಹದೇವ್!” ಹೇಳಿಗೊಂಡು ಇದ್ದದಡ
(ಸೊತಂತ್ರ ಕಾಲದವು “ವಂದೇ ಮಾತರಂ..” ಹೇಳುದಿದಾ – ಇದು ದೇಶದ ಜನರ ಹುರುಪಿನ ನೂರ್ಮಡಿ ಮಾಡಿದ್ದು ಗೊಂತೇ ಇದ್ದು ನಿಂಗೊಗೆ!)
ಅಂಬಗ ಇದಕ್ಕೆಲ್ಲ ದೈವಭಕ್ತಿ ಮಾಂತ್ರವೇ ಕಾರಣ ಅಲ್ಲದ್ದೆ, ಜೀವದ ಮೇಗೆ ಇದ್ದ ಅಭದ್ರತೆಯೂ ಕಾರಣ ಆಗಿತ್ತಡ..

ಅದಿರಳಿ!
~
ನಮ್ಮ ಅಜ್ಜಂದ್ರು ಎಂತ ಮಾಡ್ತರೂ ದೇವರ ನೆಂಪು ಮಾಡಿಗೊಂಗು. ಉಂಬಗಳುದೇ! ಉಂಬದು ಹೇಳಿತ್ತು ಕಂಡ್ರೆ, ಅದು ಕೃಷ್ಣಪರಮಾತ್ಮ ಉಂಬದು ಹೇಳಿ ಲೆಕ್ಕ ಇದ್ದಡ.
ಅಹಂ ವೈಶ್ವಾನರೋ ಭೂತ್ವಾ – ಪ್ರಾಣಿನಾಂ ದೇಹಮಾಶ್ರಿತಃ – ಹೇಳಿದ್ದನಡ, ಕೃಷ್ಣ, ಭಗವದ್ಗೀತೆಲಿ, ಮಾಷ್ಟ್ರುಮಾವ ಹೇಳಿದವು!ಹಾಂಗೆ, ಉಂಬಗಳೂ ಅದು ಕೃಷ್ಣನೇ ಉಂಬದು ಹೇಳ್ತ ಕಲ್ಪನೆ ನಮ್ಮೋರದ್ದು!
ಅದರಿಂದಾಗಿ, ಉಂಡೊಂಡುದೇ ದೇವರ ಸ್ಮರಣೆ ಮಾಡ್ತದು ನಮ್ಮ ಕ್ರಮ ಆಗಿ  ಹರಹರ – ಮಹದೇವಾ! ಹೇಳುದು ಒಂದು ಕ್ರಮ ಆಗಿ ಬಿಟ್ಟತ್ತು ನವಗೆ.~
ಶಿವಾಜಿಯ ಮರಾಟ ರಾಷ್ಟ್ರ ಹೇಳಿತ್ತು ಕಂಡ್ರೆ ನವಗೆಂತ ಬಾರೀ ದೂರ ಅಲ್ಲಪ್ಪ!
ನಮ್ಮ ನೆರೆಯೇ ಅಲ್ಲದೋ? – ಸಾಗರದ ಸತ್ಯಮಾವಂಗೆ ಎರಡುಗಂಟೆ ದಾರಿ!
ಹಾಂಗಾಗಿ, ನಮ್ಮ ಜೆನಜೀವನಲ್ಲಿ ಮರಾಟಿ ಜೀವನಶೈಲಿ ತುಂಬ ಪ್ರಭಾವ ಬೀರಿದ್ದಡ.

ನಾವು ಗೋಕರ್ಣ ಹೊಡೆಂದ ಕೊಡೆಯಾಲ ಹೋಬಳಿಗೆ ಬಂದು ಉಡುಗೆ ತೊಡುಗೆ, ಊಟಲ್ಲಿ ರಜರಜ ತುಳು-ಮಲೆಯಾಳ ಸಂಸ್ಕೃತಿ ಇದ್ದರೂ, ಕೆಲವೆಲ್ಲ ನಮ್ಮ ಹಳೇ ಪ್ರಭಾವಂಗೊ ಹಾಂಗೇ ಒಳುದ್ದಿದಾ – ಅದರ್ಲಿ ಇದುದೇ ಒಂದು; ಹೇಳಿ ಹೇಳಿಕ್ಕಿ ಮಾಷ್ಟ್ರುಮಾವ ಬಾಯಿಮುಕ್ಕುಳುಸುಲೆ ಹೋದವು. ಉಂಬಲಾತಿದಾ! 😉

~
ಸಾಗರದ ಹೊಡೆಲಿ “ಗ್ರಂಥ” ಹೇಳುದು, ನಾವು “ಚೂರ್ಣಿಕೆ” ಹೇಳುದು. ಎರಡೂ ಒಂದೇ!ಚೂರ್ಣ ಹೇಳಿರೆ ’ಸಣ್ಣ’ದು ಹೇಳಿ ಅರ್ತ ಅಡ! ಚೌಕ್ಕಾರು ಮಾವಂಗೆ ಇದರ ಬಗ್ಗೆ ಹೆಚ್ಚು ಅರಡಿಗು, ನವಗೆ ಗೊಂತು ಸಾಲ! ಅವು ಈಗ ಮನೆ ಹೆರಡುದು ಕಮ್ಮಿ!
ಓ ಮೊನ್ನೆ ಡಾಗುಟ್ರಕ್ಕನತ್ರೆ ಅಪ್ಪೋ ಕೇಳಿದೆ, ಎನಗೆ ಪರೀಕ್ಷೆ ಜೋರಿದ್ದು – ಹೇಳಿಕ್ಕಿ ಮೋರೆ ತರುಗಿಸಿತ್ತು! 🙁
ಹ್ಮ್, ಅದಿರಳಿ, ಚೂರ್ಣ ಹೇಳಿರೆ ಸಣ್ಣದು ಹೇಳಿ ಅರ್ತ. ಚೂರ್ಣಿಕಾ – ಹೇಳಿರೆ ಸಣ್ಣದೇ! ಚೂರ್ಣಿಕೆ ಇಡೀ ವೇದ, ಶ್ಳೋಕ, ಪುರಾಣ ಹೇಳ್ತವಿಲ್ಲೆ..
ಹೆರ್ಕಿದ ಒಂದೊಂದು ಭಾಗಂಗಳ ಹೇಳುದಿದಾ!
~ನರಿಯ ದೊಡ್ಡಪ್ಪ ನೀರುಮಡಗಿದವು – ಊಟಕ್ಕೆ ಆತು, ಹೇಳ್ತ ಲೆಕ್ಕಲ್ಲಿ.
ಹೇಂಗೂ ಬಳುಸುಲೆ ಜೆನ ದಾರಾಳ! ಒಪ್ಪಣ್ಣಂಗೆಂತ ಕೆಲಸ – ಉಂಬದೊಂದೇ!
ಎಂಗೊ ಎಲ್ಲ ಒಟ್ಟಿಂಗೆ ಉಂಬಲೆ ಕೂದೂ ಆತು.

~
ನಮ್ಮ ಈ ಚೂರ್ಣಿಕೆಯ ಕ್ರಮ ತುಂಬಾ ವೈವಿಧ್ಯವೇ. ಉಂಬಲೆ ಕೂದು, ಹತ್ತರೆ ಇಪ್ಪವನ ಗುರ್ತ ಇಲ್ಲದ್ರೆ ಗುರ್ತ ಮಾಡಿ, ಏನು-ಒಳ್ಳೆದು-ಅಡಕ್ಕೆ ಕ್ರಯ, ಮಳೆಯ ಶುದ್ದಿ ಎಲ್ಲ ಮಾತಾಡಿ ಆಗಿರ್ತು..
ಇನ್ನೇನು ಲೊಟ್ಟೆಪಂಚಾತಿಗೆ ಸುರು ಆವುತ್ತು – ಹೇಳುವಗ ಓ ಮೂಲೆಲಿ ಕೂದ ದಪ್ಪ ಶಾಲಿನವು ಸುರು ಮಾಡ್ತವು – “ಭೋಜನಕಾಲೇ…”
ಎಲ್ಲೊರದೇ “ಮಾದೇ…ವ” ಹೇಳ್ತವು.ಪಂಚಾತಿಗೆಗೊ ಎಲ್ಲ ಒಂದರಿ ಸ್ತಬ್ದ! ಗಲಗಲದ ಗದ್ದಲದ ಊಟದ ಮನೆಲಿ ಈಗ ಸಂಪೂರ್ಣ ಮವುನ! ಎಂತ ಇದ್ದರೂ ಪಾಯಸ ಎಳವದು ಮಾಂತ್ರ ಶೆಬ್ದ ಇದಾ. 😉
ಸೇಮಗೆ ಸೀವು ಇದಾ – ಬಾರೀ ಲಾಯಿಕ ಆಯಿದು. ಸಕಲೇಶಪುರಲ್ಲಿಪ್ಪ ಅವರ ಅಳಿಯ ಏಲಕ್ಕಿ ತಯಿಂದನೋ ತೋರುತ್ತು!ಬಟ್ಟಮಾವ ಒಂದು ಶ್ಳೋಕ ಸುರು ಮಾಡಿದವು.
ನಿತ್ಯಾನಂದಕರೀ ವರಾಭಯಕರೀ…” – ಹೇಳಿ ಬಟ್ಟಮಾವಂದೇ ಶೈಲಿಲಿ!
ಎಡೆಡೆಲಿ ಮಾತಾಡಿಗಂಡು ಇದ್ದಿದ್ದ ಕೆಲವು ಜೆನವುದೇ ಮವುನ ಆದವು. ನಾಕು ಗೆರೆಯ ಶ್ಳೋಕ ಮುಗುದ ಕೂಡ್ಳೇ ಆಚಮನೆದೊಡ್ಡಣ್ಣ “ಭೋಜನಕಾಲೇ…” ಹೇಳಿದ, ಎಲ್ಲೊರುದೇ ಮಾದೇವ ಹೇಳಿ ಸೊರ ಸೇರುಸಿದವು.

ಬಟ್ಟಮಾವನ ಶ್ಳೋಕ ಆದ ಮತ್ತೆ ಆರು?
ಬಡೆಕ್ಕೋಡಿ ಗೋಪಣ್ಣ! ಅವುದೇ ನಮ್ಮ ಆಚಮನೆ ದೊಡ್ಡಣ್ಣಂದೇ ಒಟ್ಟಿಂಗೇ ಕಲ್ತದಡ. ಹಾಂಗಾಗಿ ಒಳ್ಳೆ ಚೆಂಙಾಯಿಗೊ ಇದಾ.
ಅವಿಬ್ರುದೇ ಒಟ್ಟಿಂಗೆ “ಗೋಪಾಲಮ್- ಭೂ -ಲೀಲಾ…” ಚೂರ್ಣಿಕೆ ಹೇಳ್ತದು ಸಣ್ಣ ಕಾಲಂದಲೇ ಪೇಮಸ್ಸು!
ಹಾಂಗೆ ಅವಿಬ್ರು ಸುರು ಮಾಡಿದವು, ಎಂತದೋ  – ಉದ್ದ ಇದ್ದು, ಒಪ್ಪಣ್ಣಂಗರಡಿಯ. ಲಾಯಿಕಿತ್ತು ಮಾಂತ್ರ!
ಪರಕ್ಕಜೆ ಅಣ್ಣ ಇದ್ದಿದ್ದರೆ ಒಂದು ಗದ್ಯ ಬಿಡ್ತಿತವು – ಹೇಳಿ ಅನುಸಿ ಹೋತು!
ಅಪ್ಪು, ಅವು ಎಲ್ಲಿ ಹೋದರೂ ಚೂರ್ಣಿಕೆ ಕ್ರಮ ತಪ್ಪುಸುತ್ತವಿಲ್ಲೆ, ಆರಿಂಗೂ ಗೊಂತಿಲ್ಲದ್ರೂ ಸಮ, ಅವು ಯೇವದಾರು ಒಂದು ಗದ್ಯವ ಇಂಪಾಗಿ ಹೇಳಿಯೇ ಹೇಳುಗು.

ಅಂತೂ, ಒಂದು ಚೂರ್ಣಿಕೆ ಆದ ಕೂಡ್ಳೇ, ಭೋಜನ ಮಾಡುವ ಕಾಲಲ್ಲಿ, ಪಾರ್ವತಿ ಪತಿ ಶಿವನ ನೆಂಪು ಮಾಡ್ತೆಯೊ – ಹೇಳಿ ಒಂದರಿ ಮಹದೇವನಾಮ ಸ್ಮರಣೆ ಮಾಡುದು. ನಾವು ಉಂಬದೆಲ್ಲವೂ ಅಕೇರಿಗೆ ಭಸ್ಮವೇ ಆಯೆಕ್ಕಾದ್ದು, ಅಲ್ಲದೋ..
ಒಬ್ಬ: ಭೋಜನಕಾಲೇ, ನಮಃ ಪಾರ್ವತೀ ಪತಯೇ – ಹರಹರಾ…
ಜೆನಂಗೊ:
ಮಾದೇವ! (ಮಹದೇವ..)
~
ಮತ್ತಾಣದ್ದು ಆರು-ಆರು – ಹೇಳಿ ಒಂದರಿ ಗಡಿಬಿಡಿ ಆತು.
ಅದೂ ಒಂದು ಕೊಶಿಯೇ ಅಲ್ಲದೋ – ದೊಡ್ಡ ಸೊರಲ್ಲಿ – ಹಾಂ, ಈಗ ಅಜ್ಜಕಾನಬಾವನ ಚೂರ್ಣಿಕೆ – ಹೇಳಿಬಿಡುದು.
ಪಾಪ, ಗೊಂತಿಲ್ಲದ್ದೆ ಸಬೆಲಿ ನಮ್ಮ ಹೆಸರು ದಿನಿಗೆಳುವಗ ಗೋಣನ ಮೇಗಂಗೆ ಪಕ್ಕನೆ ಬೆಳುಲುಸೂಡಿ ಬಿದ್ದಾಂಗೆ – ಗಾಬೆರಿ ಆವುತ್ತು!
ಆ ಗಾಬೆರಿಯ ನೋಡಿಗೊಂಡೇ ಉಂಬದು, ಕೊಶಿಕೊಶೀಲಿ.
ಈ ಸರ್ತಿ ಅವಂಗೆ ಸೊರವೇ ಇತ್ತಿಲ್ಲೆ, ಬಿಡಿ!

ಅಂತೂ ಅವನೋ – ಇವನೋ – ಆ ಹೆಮ್ಮಕ್ಕಳೋ – ಈ ಕೂಸೋ – ಆಚಮನೆ ದೊಡ್ಡಣ್ಣಂಗೆ ಪುರುಸೊತ್ತೇ ಇಲ್ಲೆ!
ಕಂಡವಕ್ಕೆಲ್ಲ ಗಾಳ ಹಾಕಿದ, ನೆಗೆನೆಗೆಮೋರೆಲಿ. “ಅಪ್ಪಚ್ಚಿ, ಒಂದು ಬರಳಿ”, “ಅಕ್ಕಾ, ಚೆ ಚೆ – ಒಂದು ಸಂಗೀತ..!” – ಹೀಂಗೆ!

ದೊಡ್ಡಣ್ಣ ಹೀಂಗೆ ವೆವಸ್ತೆ ಮಾಡಿಗೊಂಡು ಇಪ್ಪಗಳೇ, ಕಂಪದ ಕೂಸು ಮೆಲ್ಲಂಗೆ ಎದ್ದು ನಿಂದತ್ತು.
ಶಾಲೆಲಿ ಕಲುಶಿದ ಯೇವದೋ ಶ್ಳೋಕ – ಪರ್ತಾಯ ಪ್ರತಿಬೋಧಿತಾಮ್ ಆಗಿರೇಕು- ಅದರ ರಾಗಲ್ಲಿ ಹೇಳುಲೆ ಸುರು ಮಾಡಿತ್ತು.
ಶಾಲೆಲಿ ಎದ್ದುನಿಂದು ಹೇಳೆಕ್ಕಿದಾ, ಚೂರ್ಣಿಕೆಯನ್ನುದೇ ಹಾಂಗೇ ಹೇಳಿ ಕೂದತ್ತು.
ಚೆಂದಕ್ಕೆ ಎಲ್ಲೊರುದೇ ಮಾದೇವ – ಹೇಳುವಗ ಆ ಕೂಚಿಂಗೆ ಕುಚಿಯೋ ಕುಚಿ! ಚೆ ಚೆ!! 🙂
~

ನಮ್ಮ ಹಳಬ್ಬರು ಎಲ್ಲೊರುದೇ ಪ್ರತಿಭಾವಂತರೇ ಆಗಿದ್ದಿದ್ದವು.
ಅವರವರತ್ರೆ ಇಪ್ಪ ಪ್ರತಿಭೆಯ ಹೆರ ಹಾಕಲೆ ಇದ್ದ ಸುಸಮಯ – ಜೆಂಬ್ರದ್ದಿನ.

ಮಂತ್ರ ಕಲ್ತೋರಿಂಗೆ ಹಳೇ ಶ್ಳೋಕಂಗೊ ಮರದು ಹೋಗದ್ದ ಹಾಂಗೆ, ಸಂಗೀತ ಕಲ್ತ ಹೆಮ್ಮಕ್ಕೊಗೆ ಆಲಾಪನೆ ಮರೆಯದ್ದ ಹಾಂಗೆ, ಗಮಕ ಕಲ್ತ ಮಾವಂಗೆ ಪದ್ಯಂಗೊ ಮರೆಯದ್ದ ಹಾಂಗೆ, ಬಾಗೊತಿಕೆ ಕಲ್ತು ಮನೆಲೇ ಇದ್ದವಂಗೆ ಹಳೆಮರಪ್ಪು ಬಾರದ್ದಾಂಗೆ..
ಎಲ್ಲದಕ್ಕೂ ಅವಕಾಶ ಈ ಚೂರ್ಣಿಕೆಯೇ..
ಅಂತೇ ನಿತ್ಯ ಬಳಕ್ಕೆಲಿ, ತೋಟಲ್ಲಿ ಅಡಕ್ಕೆ ಹೆರ್ಕುವಗ, ಮನೆಕೆಲಸಲ್ಲಿ ಅಂಬೆರ್ಪು ಇಪ್ಪಗ – ಈ ಶ್ಳೋಕಂಗೊ, ಮಂತ್ರಂಗೊ, ಸಂಗೀತಂಗೊ ನೆಂಪೊಳಿಗೋ – ಇಲ್ಲೆಪ್ಪ.ನಮ್ಮ ಸಭಾಕಂಪನ ಹೋಗುಸುಲೆ ಮೊದಲನೇ ಜಾಗೆಯುದೇ ಇದೇ ಜೆಂಬ್ರದ್ದಿನದ ಚೂರ್ಣಿಕೆ.
ಒಬ್ಬ ಚೂರ್ಣಿಕೆ ಸುರುಮಾಡುವಗ ಹಂತಿಲಿ ಕೂದವು, ಕರೆಲಿ ಕೂದವು, ನಿಂದವು, ಬಳುಸುವವು – ಅವು ಇವು – ಎಲ್ಲೊರುದೇ ನೋಡ್ಳೆ ಸುರು ಮಾಡ್ತವು, ಅದಾರು, ಅದಾರು – ಹೇಳಿ. ಎಲ್ಲೊರ ಕಣ್ಣುದೇ ಅವನ ಹೊಡೇಂಗೇ!! ಬೆಳಿಬೆಳಿ – ಪಿಳಿಪಿಳಿ ಕಣ್ಣುಗೊ!!

ಹೊಸಬ್ಬಂಗೆ ಅಂತೂ ದಬ್ಬಣದ ಸಾಲಿನ ಹಾಂಗೆ ಕಾಂಗು! ದಬ್ಬಣ ಮಾಲೆಲಿ ಕುತ್ತಿದ ಹಾಂಗೆ ಅಕ್ಕು!

ಆ ದಬ್ಬಣಂಗಳ ಹೂಗಿನ ಮಾಲೆ ಮಾಡುದೇ ಅವ ಪಡಕ್ಕೊಂಬ ಅನುಭವ!
ಚೂರ್ಣಿಕೆ ಹೇಳಿ ಹೇಳಿ ಅನುಭವ ಆದ ಹಾಂಗೆ, ಎಲ್ಲೊರುದೇ ನೋಡಿರೆ – ಆ ಕಣ್ಣುಗೊ ಹೂಗಿನ ಮಾಲೆಯ ಹಾಂಗೆ ಕಾಂಗು!
ಅಲ್ಲದೋ?
ಅದಕ್ಕೇ ಈ ಜೆಂಬ್ರದ್ದಿನದ ಚೂರ್ಣಿಕೆಯ ಎಲ್ಲೊರುದೇ ಇಷ್ಟಪಡ್ತವು.
~
ಓ ಮೊನ್ನೆ ಬೈಲಕರೆಯ ಉಪ್ನಾನಕ್ಕೆ, ಬೆಂಗುಳೂರಿನ ಮಕ್ಕೊ ಬಂದಿತ್ತಿದ್ದವು. ಹಂತಿಲಿ ಕೂದು ಚೂರ್ಣಿಕೆ ಹೇಳುವ ಉತ್ಸಾಹ ಕಂಡು, ಅತ್ತಿಬೆಲೆ ಮಾಣಿ, ಅವನ ಅತ್ತಿಗೆಯ ಒಟ್ಟಿಂಗೆ ಕಲ್ತ ಜಾನಪದ ಪದ್ಯ ಒಂದರ ಹಾಡಿದ, ಭಾರೀ ಲಾಯಿಕಾಯಿದು!
ಮೂಗುತಿ..ಮುತ್ತು – ಹೇಳಿದ, ಉಂಬಗ ಎಂತಪ್ಪಾ – ನೋಡಿರೆ ಅದೊಂದು ದಾಸರ ಕೀರ್ತನೆ! – ನವಗೆ ಚೂರ್ಣಿಕೆ!!
ಮತ್ತೊಂದು ಕೂಸು “ವೇಂಕಟ ರಮಣನೆ ಬಾರೋ..” ಹೇಳಿ ಸುರು ಮಾಡಿತ್ತು!  ಇನ್ನೊಂದು ಕೂಸು ಸಾಯಿ ಭಜನ್, ಶ್ರೀ ಶ್ರೀ ಭಜನ್ – ನ ಹಾಡಿತ್ತು, ಸುಶ್ರಾವ್ಯವಾಗಿ. ಬೈಲಿನ ಕೆಲವು ಜೆನಕ್ಕೆ ಅಮೇಯಿ ಅತ್ತೆಯ ಸಂಗೀತ ನೆಂಪಾತು!
ಎಂಗೊಗೆಲ್ಲ ಮಾದೇವ ಹೇಳುದೇ ಮರವಷ್ಟು ಚೆಂದಕೆ..!
~ಚೂರ್ಣಿಕೆ ಹೇಳಿರೆ ಗದ್ಯ, ಮಂತ್ರ, ಸಂಗೀತ – ಇದುವೇ ಆಯೆಕ್ಕೂಳಿ ಏನಿಲ್ಲೆ.
ಕೆಲವು ಕುಶಾಲಿನ ಜೆನಂಗೊ ಇರ್ತವು – ಪಾರೆ ಮಗುಮಾವನ ಹಾಂಗಿಪ್ಪವು – ಅವು ಎಂತೆಲ್ಲ ಚೋದ್ಯಂಗಳ ಪದ ಕಟ್ಟಿದ್ದರ ಹಾಡುಗು..
ಕುಡ್ಪಲ್ತಡ್ಕ ಬಾವ ಬಲಿಪ್ಪಜ್ಜನ ಸೊರಲ್ಲಿ ಚೂರ್ಣಿಕೆ ಹೇಳಿರಂತೂ – ಒಂದರಿ ತಿರುಗಿ ನೋಡುಗು ಎಲ್ಲೊರುದೇ!
ಅರ್ತ್ಯಡ್ಕ ಮಾಣಿಗೆ ಅವನ ದೊಡ್ಡಪ್ಪ ಬರದುಕೊಟ್ಟ ಒಂದು ಹವ್ಯಕ ಶ್ಲೋಕ ಇದ್ದು, ಒಪ್ಪಣ್ಣಂಗೆ ಸರೀ ಬತ್ತಿಲ್ಲೆ – ಮಾಣಿ ಇಲ್ಲಿ ಒಪ್ಪ ಬರೆತ್ತನೋ ಏನೋ!ಇನ್ನೊಂದು ವಿಶಯ, ಗುಟ್ಟಿಲಿ ಹೇಳ್ತೆ; ಕೆಲವು ಪೆರಟ್ಟು ಶ್ಲೋಕಂಗಳುದೇ ಇರ್ತದಾ..
ಕುಶಾಲಿನ ಚೆಂಙಾಯಿಗೊ ಒಟ್ಟಿಂಗೆ ಸಿಕ್ಕಿರೆ ಕೆಲಾವು ಸರ್ತಿ ನಮ್ಮ ಪಾರೆ ಮಗುಮಾವಂಗೆ ಎಳಗುಲಿದ್ದು!
ಒಂದೇ ಸರ್ತಿಗೆ ಮೂರು ಲಾಡು ಜಡಿದಂ..
(ಮೂಲಪಾಟ: ವಂದೇ ಶಂಭುಮುಮಾಪತಿಂ ಸುರಗುರುಂ )
ಹೇಳಿ ಒಂದು ಲೊಟ್ಟೆಚೂರ್ಣಿಕೆ ಸುರು ಮಾಡಿರೆ, ಹೇಳ್ತ ಗಾಂಭೀರ್ಯತೆ ನೋಡಿ ಕೆಮಿ ಕೇಳದ್ದವಂಗೂ ನೆಗೆಬಕ್ಕು!
ಆಚಮನೆ ದೊಡ್ಡಣ್ಣ ಇದ್ದರೆ ನೆಗೆಮಾಡಿಗೊಂಡು ಇದಕ್ಕೂ ಸೊರ ಸೇರುಸುಗು!
~

ಚೂರ್ಣಿಕೆ ಆದಕೂಡ್ಳೇ ಮಾದೇವ ಹೇಳಿಯೇ ಹೇಳುಗಿದಾ! ಬಿಂಗಿ ಮಕ್ಕೊ ಅಲ್ಲಿಯೂ ಬಿಡವು.
ಮಾದೇ…………………… ಹೇಳುದು, ಏ ಕಾರ ಒಬ್ಬಂಗೆ ಬಚ್ಚುವಗ ಇನ್ನೊಬ್ಬ ಸುರು ಮಾಡುದು.
ಅಕೇರಿಗೆ ಎಲ್ಲೊರಿಂಗೂ ಬಚ್ಚುವಗ ….ಏವಾ! ಹೇಳುದು. 😉
ಹಾಂಗೊಂದು ಪೆರಟ್ಟು, ಕೆಲವು ಮಕ್ಕಳದ್ದು!!
(ಅಜ್ಜಕಾನ ಬಾವಂಗೆ ಸೊರ ಹೋದ್ದುದೇ ಹಾಂಗೇ ಇದಾ! 😉 )
~

ಮಹದೇವನ ಸ್ಮರಣೆಲೇ ಉಂಡೊಂಡು, ದೇವರ ನೆಂಪಿನೊಟ್ಟಿಂಗೇ ಆಹಾರ ತೆಕ್ಕೊಂಡು, ಅಕೇರಿಗೆ ಶ್ರೀಕೃಷ್ಣನ ನೆಂಪು ಮಾಡಿಗೊಂಡು ಏಳುದು. ಮಜ್ಜಿಗೆ ಹೆರಟಪ್ಪಗ ಆಚಮನೆ ದೊಡ್ಡಣ್ಣನ ಇನ್ನೊಂದು ಚೂರ್ಣಿಕೆ ಹೆರಟತ್ತು..
ಮಜ್ಜಿಗೆಯವ ಕೊಡಿಂಗೆ ಎತ್ತುದು ಮಾಂತ್ರ ಅಲ್ಲದ್ದೆ, ಎಲ್ಲೊರುದೇ ಉಂಡು, ಕೈನ್ನೀರು ತೆಗದು, ಉಪ್ಪು-ಮೆಣಸು-ಬೇನುಸೊಪ್ಪಿನ ಬಾಳೆನೆಡುಕಂಗೆ ತಂದಾಯಿದು. ಅಷ್ಟು ಹೊತ್ತಿನ ಊದ್ದದ ಚೂರ್ಣಿಕೆ ಅದು!

ಚೂರ್ಣಿಕೆ ಮುಗಿವಗ ಎಲ್ಲೋರ ಊಟವೂ ಆಯಿದಿದಾ –
ಒಬ್ಬ: ಭೋಜನಾಂತೇ, ಶ್ರೀ ವೇಣುಗೋಪಲ ಸ್ಮರಣ; ಗೋವಿಂದಾ..
ಎಲ್ಲೊರು: ಗೋವಿಂದಾ..
ಹೇಳಿಗೊಂಡು ಕೈ ಬೆರಳ ಎಡೆಲಿ ಒಳುದ್ದರ ರುಚಿ ನೋಡಿಗೊಂಡು ಎದ್ದವು.
~

ಹೆದರಿ ಹೆದರಿ ಕೂದಿದ್ದ ಮಕ್ಕಳ ಎದುರು ತಂದು, ಅವರ ಕೈಲಿ ಹೇಳುಸಿದ್ದು!! ಅಕೇರಿಗೆ ಇಡೀ ಹಂತಿಯೇ ಅವರದ್ದು!!
ಎಂಗೊ ಎಲ್ಲ ನೋಡಿಯೇ, ಕಾದೇ ಬಾಕಿ.
ಆಚಮನೆ ದೊಡ್ಡಣ್ಣನ ಆ ವಿಶಯಲ್ಲಿ ಮೆಚ್ಚಲೇ ಬೇಕು!
ನೆರಿಯ ದೊಡ್ಡಪ್ಪನಲ್ಲಿ ಒಪ್ಪಣ್ಣಂಗೆ ಚೂರ್ಣಿಕೆ ಹೇಳುಲೆ ಕಾಲವೇ ಸಿಕ್ಕಿದ್ದಿಲ್ಲೆ, ಇದ್ದಾ ಹೊಡಿ ಮಕ್ಕಳದ್ದೇ ಕಾರ್ಬಾರು.
ಕೋಳಿಕ್ಕಜೆ ಪುಳ್ಳಿಗಂತೂ ಕಲಿಶಿದ ಶ್ಲೋಕ ಪೂರ ಪುನಾ ನೆಂಪಾಗಿಕ್ಕು.

ತೊಂದರಿಲ್ಲೆ, ನಾಳ್ತು ಒಂದೇ ದಿನ ಬೈಲಿಲಿ ಎರಡೆರಡು ಮದುವೆ ಇದ್ದು. ಒಪ್ಪಣ್ಣಂಗೆ ಎರಡು ಚೂರ್ಣಿಕೆ ಬಾಯಿಪಾಟ ಮಾಡಿ ಆತು!
ಕೆದೂರಿನ ಮದುವೆಲಿ ಒಂದು, ಚೆನ್ನಬೆಟ್ಟಿನ ಸಟ್ಟುಮುಡಿಲಿ ಇನ್ನೊಂದು – ಈ ಸರ್ತಿ ಸೊರ ಹೋದರೂ ತೊಂದರಿಲ್ಲೆ! 🙂
ಚೌಕ್ಕಾರುಮಾವನತ್ರೆ ತಾಲೀಸಾದಿ ಚೂರ್ಣ ಇಕ್ಕು!
~

ಹಳಬ್ಬರ ಕ್ರಮಂಗಳಲ್ಲಿ ಎಂದೆಂದಿಂಗೂ ಪ್ರಸ್ತುತ ಆಗಿಪ್ಪ ಆಚರಣೆಗಳಲ್ಲಿ ಚೂರ್ಣಿಕೆಯೂ ಒಂದು.
ಬೇರೆದಿಕ್ಕಾಣ ಪ್ರಶ್ನೆ ಬಿಡಿ, ನಮ್ಮ ಜೆಂಬ್ರಂಗಳಲ್ಲಿ ಆ ಚೂರ್ಣಿಕೆಯ ಮದಾಲು ಒಳುಶುವ. ನಮ್ಮಲ್ಲಿಗೆ ಬಂದೋರ ಕೈಲಿ ಹೇಳುಸುವ, ಅವರಲ್ಲಿಪ್ಪ ಪ್ರತಿಭೆಯ ಒಟ್ಟಿಂಗೆ ಚೂರ್ಣಿಕೆಯನ್ನೂ ಬೆಳೆಶುವ. ಎಂತ ಹೇಳ್ತಿ?

ದೊಡ್ಡೋರ ಕೈಲಿ ಚೂರ್ಣಿಕೆ ಹೇಳುಸಿ, ಸಣ್ಣೋರು ಅವ್ವಾಗಿಯೇ ಹೇಳ್ತವು! 🙂

ಏ°?
ಒಂದೊಪ್ಪ: ಕೂದೊಂಡು ಉಂಬ ಹಂತಿಲಿ ಇದೆಲ್ಲ ಇದ್ದು. ಇನ್ನಾಣ ಓಡಿಗೊಂಡು ಉಂಬ ಕಾಲಲ್ಲಿ ಈ ಚೂರ್ಣಿಕೆಗೊ ಎಂತಕ್ಕೋ ಏನೋ!
ಗೋವಿಂದಾ..!

23 thoughts on “ಭೋಜನಕಾಲೇ, ನಮಃ ಪಾರ್ವತೀಪತೇ ಹರಹರಾ…!!

  1. eega bhava aati thingalu suruvaayidu. jembara elle. rajaa restu. chalige muruti manuguvo.bere harate eppalaaga. gontato oppanna.

    1. ಚೆ ಚೆ, ರಾಜಣ್ಣಾ..
      ನಿಂಗೊ ಹೀಂಗೆ ಹೇಳಿರೆ ಅಕ್ಕೋ?
      ಶುದ್ದಿ ಹೇಳದ್ದರೆ ಎಷ್ಟು ಮುರುಟಿರೂ ಒಪ್ಪಣ್ಣಂಗೆ ಒರಕ್ಕು ಬಾರ ಇದಾ… 😉 🙁

  2. ಆನು ನಿನ್ನ ಒಳ್ಳೆದಕ್ಕೆ ಹೇಳಿದ್ದರ ಪರಂಚೊದು ಹೇಳಿ ಹೇಳ್ಳೆ ಅಕ್ಕೊ ಒಪ್ಪಣ್ಣ? ನೀನು ಬಪ್ಪೆ ಹೇಳಿ ತೆಗದು ಮಡಿಗಿದ ಕೊಟ್ಟಿಗೆಯ ಮರದಿನ ಇಡುಕ್ಕಿದ್ದು.
    ಒಪ್ಪಣ್ಣ ಮಾದೇಏಏಏಏಏಏಏಏಏಏಏಏಏಏಏಏಏವಾ…. ..ಹೇಳಿದ್ದು ಇಡೀ ಊರಿಂಗೇ ಕೇಳಿದ್ದು! ಜೆಂಬ್ರಕ್ಕೆ ಹೋಗದ್ದರೂ, ಒಪ್ಪಣ್ಣನ ಮಾದ್ವೇಏಏಏಏಏಏಏಏಏಏವಾಆಆಆಆಆಆಆ ಕೇಳಿ (ಓದಿ?) ಹೊಟ್ಟೆ ತುಂಬ ಉಂಡಷ್ಟು ಕೊಶಿ ಆತು!!

  3. ಆನು ನಿನ್ನ ಒಳ್ಳೆದಕ್ಕೆ ಹೇಳಿದ್ದರ ಪರಂಚೊದು ಹೇಳಿ ಹೇಳ್ಳೆ ಅಕ್ಕೊ ಒಪ್ಪಣ್ಣ? ನೀನು ಬಪ್ಪೆ ಹೇಳಿ ತೆಗದು ಮಡಿಗಿದ ಕೊಟ್ಟಿಗೆಯ ಮರದಿನ ಇಡುಕ್ಕಿದ್ದು.
    ಒಪ್ಪಣ್ಣ ಮಾದೇವಾಆಆಆಆಆಆಆಆಆಆ ಹೇಳಿದ್ದು ಇಡೀ ಊರಿಂಗೇ ಕೇಳಿದ್ದು! ಜೆಂಬ್ರಕ್ಕೆ ಹೋಗದ್ದರೂ, ಒಪ್ಪಣ್ಣನ ಮಾದೇವಾಆಆಆಆಆಆಆ ಕೇಳಿ (ಓದಿ?) ಹೊಟ್ಟೆ ತುಂಬ ಉಂಡಷ್ಟು ಕೊಶಿ ಆತು!!

  4. ಒಪ್ಪಣ್ಣನ ಭಾಷೆಯ ಬಳಕೆ ಆದ್ಭುತವಾಗಿದ್ದು. ಕಲ್ಪನೆಗೋ, ಕಥೆಯ ಬೆಳಸುವ ಶೈಲಿ ಲಾಯಕಿದ್ದು. ಓದಿಕೊ೦ಡು ಹೋಪಗ ಸನ್ನಿವೇಶ ಕಣ್ಣಿ೦ಗೆ ಕಟ್ಟಿದ ಹಾ೦ಗೆ ಆವುತ್ತು.

  5. ಲೇಖನ ಭಾರೀ ಚೆಂದ ಆಯಿದು…………
    ಊಟ ಮಾಡುವಗಳುದೇ ದೇವರ ನೆನೆಸಿಗೋಂಬ ನಮ್ಮ ಸಂಸ್ಕೃತಿ– ಎಲ್ಲೋರುದೇ ಒಟ್ಟಿಂಗೇ ಮಾದೇವ ಹೇಳುದು—
    ಈಗಾಣ ಬೈಪ್ಪಾಣೆ ಊಟದ(ಬಫೆ) ದಿನಂಗಳಲ್ಲಿ ಈ ಲೇಖನ ಬಹಳ ಪ್ರಸ್ತುತ.
    ಹಿಂದೆ ಮನೇಲಿ ಜೆಂಬ್ರಂಗೊ ಅಪ್ಪಗ ಊರೋರು ನೆಂಟರು ಇಷ್ಟರು ಸೇರಿಗೋಂಡು ಅನುಪತ್ಯಂಗಳ ಸುದಾರ್ಸುಗು. ಈಗ?????

  6. ಒಪ್ಪಣ್ಣ, ಸರ್ಪಮಲೆ ಮಾವ° ಅನುಭವಸ್ತರಲ್ಲದಾ? ತಾರಾಮಾರ ಹೋಗಿ ಹೊಟ್ಟೆ ಹಾಳು ಮಾಡಿಗೊಳ್ಳೆಡಾ ಹೇಳಿ ಪ್ರೀತಿಲಿ ಹೇಳಿದ್ದಾಯಿಕ್ಕು… ಮನೆಲಿ ಮಾಡಿದ್ದೆ ಒಳ್ಳೇದು ಹೇಳಿ… ನೋಡು, ಬೈಲಿಂಗೂ ಬಯಿಂದವಿಲ್ಲೇ…
    ಬೇರೆ ಹೋಪಲಿತ್ತಾ ಏನೋ..? ಆಚಮನೆ ದೊಡ್ಡಣ್ಣ ಎಲ್ಲಾ ದಿಕ್ಕೆದೆ ಆದಿಕ್ಷಾಂತವೇ ಅಲ್ಲದಾ ಕೆಲಸ ವಹಿಶುದು ನಮ್ಮ ದೊಡ್ದಭಾವನ ಹಾಂಗೆ!!! ಶುದ್ದಿ ಲಾಯಕ ಆಯಿದು.. ನಮ್ಮ ಊಟದ ಕ್ರಮವೇ ಒಳ್ಳೆದಲ್ಲದಾ? ಖಾರದ ಅಡಿಗೆಗಳ ನಂತರ ಬಪ್ಪ ಸೀವಿಂಗೆ ಅಪ್ಪಗ ನಮ್ಮಲ್ಲಿ ಚೂರ್ಣಿಕೆ ಹೇಳುದಲ್ಲದಾ.. ಅದು ಬಹುಷಃ ನೀನು ಹೇಳಿದ ಹಾಂಗೆ ದೇವ ಸ್ಮರಣೆ ಮಾಡುಲೂ, ಚೂರ್ಣಿಕೆ ಹೇಳ್ತಾ ಹೇಳ್ತಾ ನವಗೆ ಧೈರ್ಯ ಬಪ್ಪಲೂ ಆದಿಕ್ಕು… ಏನೋ ನಮ್ಮ ಹಿರಿಯರು ಒಳ್ಳೆ ಪರಿಪಾಠ ಮಡುಗಿದ್ದವು… ಒಂದೊಪ್ಪ ಲಾಯಕ ಆಯಿದು.. ಇನ್ನು ಮುಂದೆ ಹಂತಿ ಊಟ ಬಟ್ಟ ಮಾವಂದ್ರಿನ್ಗೂ , ಹಸ್ತೋದಕ ಹಾಕುಲೇ ತಕ್ಕ ಕೂರ್ಸಿದವಕ್ಕೂ ಆದರೆ ನಮ್ಮ ದೇವಸ್ಮರಣೆ ಮಾಡಿ ಚೂರ್ಣಿಕೆ ಹೇಳ್ತ ಕ್ರಮ ಮಾಯ ಆಗಿ ಹೋಕೋ ಹೇಳ್ತ ಸಂಶಯ….!!!!!

  7. ಭಾರೀ ಲಾಯ್ಕಾಯಿದು ಬರದ್ದು. ಎನ್ನ ತಮ್ಮ ಭಾರಿ ಲಾಯ್ಕು ಚೂರ್ಣಿಕೆ ಹೇಳ್ತ. ಆನುದೆ ಒಂದರಿ ಚೂರ್ಣಿಕೆ ಹೇಳುಲೆ ಪ್ರಯತ್ನ ಮಾಡಿತ್ತಿದ್ದೆ. ಆದರೆ ಅದು flop show ಆಗಿತ್ತಿದ್ದು ಅಂಬಗ :).

    ನಮಸ್ಕಾರ,
    ಮುರಳಿ

  8. ಲೇಖನ ಲಾಯಿಕ ಆಯಿದು. ಚೂರ್ಣಿಕೆ ಹೇಳುವ ಕ್ರಮ ನಮ್ಮ ಹವ್ಯಕಲ್ಲಿ ಮಾತ್ರ ಇಪ್ಪದಾ?

    1. ಹೆಚ್ಚೂ-ಕಡಮ್ಮೆ ಎಲ್ಲ ಬ್ರಾಹ್ಮರ ಶುಭ ಸಮಾರಂಭಗಳಲ್ಲಿ ಈ ಪದ್ಧತಿ ಇದ್ದು. ಆನು ನೋಡಿದ ಹಾಂಗೆ… ಎಲ್ಲಾ ದಕ್ಷಿಣ ಕನ್ನಡ- ಉತ್ತರ ಕನ್ನಡ- ಮೈಸೂರು ಪ್ರಾಂತ್ಯಲ್ಲಿ…

  9. Oppanna.com thumba olle website…
    olle olle barahanga batta iddu…
    mahesh elyadka thumba olle kelasa madtha iddavu..
    namma basheya shuddavagi ulushi beleshudu astu sulabada kelasa alla…
    adara oppanna yavude phalapekshe illadde niswarthatheinda madtha iddavu…
    avakke enna shubhashayango….
    hats off to u mahesh….

    best regards,
    Raghunandan Berkadavu

  10. laikaidu oppanno….bhojanakale joru nempu aavuttu oppannange
    entha heli gontille.eno vishesha iddo heli oppanna sikkire kelekku.
    eega raja aparoopa aida.kelire tumba kelasa matte sikkutte helta.
    padlagi monne ondu functionli oppannana choornike kelidde.
    santosha aatu.ambaga sarigattu matadle aidille avanatre.
    avana dari nodta irthe…..
    good luck.

  11. ಒಪ್ಪಣ್ಣ..ಲಾಯ್ಕ ಬರದ್ದೆ …
    ಎನಗೆ ನೆರಿಯ ದೊಡ್ಡಪ್ಪನ ಮನೆ ಪೂಜೆ ದಿನ ಪರೀಕ್ಷೆ ಇತ್ತು…. 🙁 ಹೊಪಲಾಯ್ದಿಲ್ಲೇ …
    ನೀನು ಹೇಳಿದ ಶುದ್ದಿ ಕೇಳಿ ಪೂಜಗೆ ಹೋದ ಹಾಂಗೆ ಆತು….
    ಕಿರಣ ಹೇಳಿದಾಂಗೆ ದ್ವಾರಕದಣ್ಣನುದೆ ನೀನುದೆ ಸೇರಿರೆ ಭಾರೀ ಲಾಯ್ಕ ಚೂರ್ಣಿಕೆ…..ಅದರ ಕೇಳುಲೇ ಒಂದು ಖುಷಿ ….

    ಇನ್ನಾಣ ಶುದ್ದಿಗೆ ಕಾದೊಂಡಿರ್ತೆ…….

  12. ಒಪ್ಪಣ್ಣನ ಚೂರ್ಣಿಕೆ ಹೇಳುವುದರ ಬಗ್ಗೆ ವಿಶೇಷ ಲೇಖನ ಲಾಯಕಿತ್ತು. ಒಟ್ಟಿಂಗೆ ಬಟ್ಟ ಮಾವನ ಚೂರ್ಣಿಕೆಗಳು ಬಂದದು ಬಾಳೆ ಹಣ್ಣಿನ ಪ್ರಥಮ (ಪಾಯಸ) ದೊಟ್ಟಿಂಗೆ ಮಾವಿನ ಹಣ್ಣಿನ ರಸಾಯನವೂ ಬಂದ ಅನುಭವ ಕೊಟ್ಟತ್ತು. ನಾಳಂಗೆ ಒಂದು ಮದುವೆಗೆ ಹೋಪಲಿದ್ದು. ಆದಿತ್ಯವಾರ ಆದ ಕಾರಣ ಗಡಿಬಿಡಿ ಏನಿಲ್ಲೆ. ಲಾಯಕಿಲ್ಲಿ ಹಂತಿಲಿ ಕೂದು “ಮಾ…ದೇವ” ಹೇಳೆಕೂ ಹೇಳಿ ಇದ್ದೆ.

  13. ಓದಿ ತುಂಬ ಸಂತೋಷ ಆತು! ಹಾಂಗಾಗಿ ಇದಾ…

    ವಾಚನಕಾಲೇ, ನಮಸ್ತೇ ಒಪ್ಪಣ್ಣಾಯ ಜಯ ಜಯ …… ಮಹಾದೇ….!!

    ಎಲ್ಲೋರು ಸ್ವರ ಸೇರುಸಿ ಆತಾ… 🙂

  14. ಒಪ್ಪಣ್ಣ ಯಾವದಾದರೂ ಕಥೆ ,ಲೇಖನ ಬರದ್ದು ಅಥವಾ ಬರವ ಅಭ್ಯಾಸ ಇದ್ದೋ?ಬರವಣಿಗೆ ಲಾಯಕಿದ್ದು.ಕಲ್ಪನೆ ಮತ್ತೆ ಭಾಷೆಯ ಮೇಗಾಣ ಹಿಡಿತ ಸರಿಯಾಗಿಪ್ಪಗ ಬರೀ ಕಂಪ್ಯೂಟರಿನ ಮುಂದೆ ಇದ್ದರೆ ಹೆಚ್ಚು ಜೆನ ಓದವು.ಅಂಬಗ ಒಳ್ಳೆ ಬರಹ ಹೆಚ್ಚು ಜೆನ ಓದೆಕ್ಕು ಹೇಳುತ್ತ ಉದ್ದೇಶ ಎನ್ನದು ಅಷ್ಟೇ.

  15. ಮಹಾ ದೇ..ವ…
    ಆಫೀಸಿಂದ ಬಂದು ಓದಿದವಂಗೆ, ಬಚ್ಚಲು ಪೂರಾ ಹೋತು. ಜಂಬ್ರದ ಮನೆಲಿ ಕೂದು ಉಂಡ ಹಾಂಗೇ ಆತು.
    ಈಗ ಹಾಲ್ (hall) ಗಳಲ್ಲಿ ಮದುವೆ, ಬಫೆ ಎಲ್ಲ ಸುರು ಆದ ಮತ್ತೆ ಈ ಸಂಸ್ಕೃತಿ ಕಮ್ಮಿ ಆಯಿದು. ಪೇಟೆಗಳಲ್ಲಿ ಅಂತೂ ಇಪ್ಪಲೇ ಇಲ್ಲೆ ಹೇಳ್ಲಕ್ಕು.
    ಸಮಯಕ್ಕಪ್ಪಗ ಬಂದು ಬಫೆಲಿ ಮುಕ್ಕಿಕ್ಕಿ ಓಡುತ್ತವಕ್ಕೆ “ಚೂರ್ಣಿಕೆ” ಎಲ್ಲ ಕೇಳ್ಲೆ ಕೂಡಾ ಪುರುಸೊತ್ತು ಬೇಕನ್ನೆ.
    ಒಂದೆರಡು ಘಟನೆಗೊ ನೆಂಪು ಆವುತ್ತಾ ಇದ್ದು
    ಒಂದು ಜೆಂಬಾರಲ್ಲಿ ಮಹಾ ದೇವಾ…. ಹೇಳಿ ನಿಲ್ಲಿಸಿ ಮೌನ ಅಪ್ಪ ಸಮಯಲ್ಲಿ, ಒಬ್ಬ ದೊಡ್ಡ ಸ್ವರಲ್ಲಿ ” ಬಿಸಿ ನೀ,,,ರೂ……” ಹೇಳಿ ನೀರು ತೆಕ್ಕೊಂಡು ಹೆರಟ. ನಿಂಗೊ ಯಾವುದಾರೂ ಜಂಬಾರಂಗಳಲ್ಲಿ ಇದರ ಪ್ರಯೋಗ ಮಾಡಿ. ನೆಗೆಯೋ ನೆಗೆ ಎಲ್ಲರದ್ದೂ.
    ಇನ್ನೊಂದು ಜೆಂಬಾರಲ್ಲಿ ಸುರುವಾಣ ಹಂತಿಗೆ, “ಭೋಜನ ಕಾಲೇ…..” ಹೇಳಿ ಒಬ್ಬ ಸುರು ಮಾಡಿದ. “ಮಹಾ ದೇವಾ…” ಹೇಳಿ ಒಂದೆರಡು ಜನಂಗೊ ಅವನ ಒಟ್ಟಿಂಗೆ ಸ್ವರ ಸೇರ್ಸಿದವು. ಮತ್ತೆ ಆರದ್ದೂ ಶುದ್ದಿ ಇಲ್ಲೆ. ಎಲ್ಲರೂ ಪಾಯಸ ಸುರಿವದರಲ್ಲೇ ಬಾಕಿ. ಅವನೇ ಪುನಃ ಇನ್ನೊಂದು ಶ್ಲೋಕ ಹೇಳಿದ. ಉಹುಂ.. ಇದಕ್ಕೂ ಮೌನವೇ ಪ್ರತಿಕ್ರಿಯೆ. ಬೌಷ: ಆ ಹಂತಿಲಿ ಎಲ್ಲರೂ ಪ್ರತಿಷ್ಟಿತರೇ ಕೂದಿತ್ತಿದ್ದವು ಹೇಳಿ ಕಾಣ್ತು. ಮಹಾ ದೇವಾ…. ಹೇಳ್ಲೆ ಕೂಡಾ ಕೆಲಾವು ಜೆನಂಗೊಕ್ಕೆ ಅವರ ಪ್ರತಿಷ್ಟೆ ಬಿಡ್ತಿಲ್ಲೆ ಇದಾ. 🙂
    ಎರಡನೆ ಹಂತಿ ಸುರು ಆತು. ಮೊದಲಾಣ ಹಂತಿ ಬಳುಸಿದವಕ್ಕೆ ಮೊದಲಾಣ ಹಂತಿ ಪ್ರತಿಕ್ರಿಯೆ ನೋಡಿ ಬೇಜಾರು ಆಗಿತ್ತಿದ್ದು. ಕೆಲವು ಜೆನ ಜೌವ್ವನಿಗರು ಒಟ್ಟಿಂಗೆ ಕೂದವು. ಊಟ ಸುರು ಆತು.
    ಮೇಲಾರ ಮತ್ತೆ ಸಾಕು, ಪಾಯಸ ಮೊದಾಲು ಬರಲಿ ಹೇಳಿ ಆತು. ಆಚ ತಲೇಂದ ಕವಂಗ ಬಂದಪ್ಪಗಳೆ ಒಬ್ಬ ” ಭೋಜನ ಕಾಲೇ…” ಸುರು ಮಾಡಿದ.
    ಕೇಳೆಕ್ಕೋ… ಒಬ್ಬ ನಿಲ್ಸಲೆ ಪುರುಸೊತ್ತು ಇಲ್ಲೆ, ಇನ್ನೊಬ್ಬನ ಚೂರ್ಣಿಕೆ. ಗೌಜಿಯೋ ಗೌಜಿ. ಚೆಪ್ಪರಲ್ಲಿ ಕೂದ ಕಾರಣ ಬಚಾವ್!!! ಇಲ್ಲದ್ದರೆ ಮಾಡಿನ ಹಂಚು ಹಾರಿ ಹೋವ್ತಿತ್ತು. ಕಡೇಂಗೆ ಮಜ್ಜಿಗೆ ಬಪ್ಪ ಸಮಯ. ಚೂರ್ಣಿಕೆ ಮುಗುದ್ದಿಲ್ಲೆ. ಹೋಳಿಗೆ ಇನ್ನೂ ಬಾಳೆ ಎಲೆಲೇ ಇದ್ದಷ್ಟೆ. ಮಜ್ಜಿಗೆ ತಪ್ಪವಂಗೆ ರಜೆ ತಡವು ಮಾಡು ಹೇಳಿ ಒಬ್ಬ ಸೂಚನೆ ಕೂಡಾ ಕೊಟ್ಟ. ಎಲ್ಲರೂ ಒಟ್ಟು ಸೇರಿ, ಬಳುಸಿದವಕ್ಕೂ ಉಂಬವಕ್ಕೂ, ಇದರ ಎಲ್ಲಾ ಕರೇಲಿ ಕೂಡು ನೋಡಿಂಡು ಇಪ್ಪವಕ್ಕೂ ಕೊಶಿಯೇ ಕೊಶಿ. ಸಟ್ಟುಮುಡಿ ಮನೆ ಹೇಳಿ ಅಂಬಗ ಊರಿಂಗೇ ಗೊಂತಾದಿಕ್ಕು
    ಈಗಲೂ ಕೆಮಿಲಿ ಮಹಾದೇವಾ…. ಕೇಳ್ತಾ ಇದ್ದು.
    ಊಟ ಮಾಡುವಾಗ ಯಾವಗಲೂ ನಮ್ಮ ಮನಸ್ಸು ಸಂತೋಷಲ್ಲಿ ಇರೆಕ್ಕು. ಹಾಂಗಿದ್ದರೆ ಮಾತ್ರ ಉಂಡ ಅಷನ ಶರೀರಕ್ಕೆ ಹಿಡಿಗು.
    ಯಾವಗಲೂ ತಲೆ ಬೆಶಿ ಮಾಡಿಂಡು ಇಪ್ಪವು ಎಷ್ಟು ಉಂಡರೂ ಅವರ ಆರೋಗ್ಯ ಸರಿ ಇರ್ತಿಲ್ಲೆ. ಈ ಸೂತ್ರ ನಮ್ಮ ಹಿಂದಿನವಕ್ಕೆ ಸರಿಯಾಗಿ ಗೊಂತಿತ್ತಿದ್ದು. ಊಟದ ಸಮಯಲ್ಲಿ ಮನಸ್ಸಿಂಗೆ ಸಂತೋಷ ಕೊಡುವ ಹಾಂಗೆ ದೇವರ ಸ್ಮರಣೆ ಮಾಡಿಂಡು ಉಂಬ ಕ್ರಮ ನಮ್ಮಲ್ಲಿ ಬಂದದು ಹಾಂಗಾಗಿ ಆದಿಕ್ಕು.
    ಲೇಖನಲ್ಲಿ ಕೊಶಿ ಕೊಟ್ಟ ಕೆಲವು ತಮಾಶೆ ಸಾಲುಗೊ:
    ಓ ಮೊನ್ನೆ ಡಾಗುಟ್ರಕ್ಕನತ್ರೆ ಅಪ್ಪೋ ಕೇಳಿದೆ, ಎನಗೆ ಪರೀಕ್ಷೆ ಜೋರಿದ್ದು – ಹೇಳಿಕ್ಕಿ ಮೋರೆ ತಿರುಗಿಸಿತ್ತು! 🙂
    ಇದ್ದರೂ ಪಾಯಸ ಎಳವದು ಮಾಂತ್ರ ಶೆಬ್ದ ಇದಾ. 🙂
    ಗೋಣನ ಮೇಗಂಗೆ ಪಕ್ಕನೆ ಬೆಳುಲುಸೂಡಿ ಬಿದ್ದಾಂಗೆ – ಗಾಬೆರಿ ಆವುತ್ತು! 🙂
    ಲೇಖನಲ್ಲಿ ಕೊಶಿ ಕೊಟ್ಟ ಅನುಭವದ ಮಾತು:
    ಆ ದಬ್ಬಣಂಗಳ ಹೂಗಿನ ಮಾಲೆ ಮಾಡುದೇ ಅವ ಪಡಕ್ಕೊಂಬ ಅನುಭವ!
    ಹೆದರಿ ಹೆದರಿ ಕೂದಿದ್ದ ಮಕ್ಕಳ ಎದುರು ತಂದು, ಅವರ ಕೈಲಿ ಹೇಳುಸಿದ್ದು!! ಅಕೇರಿಗೆ ಇಡೀ ಹಂತಿಯೇ ಅವರದ್ದು!!
    ಒಂದು ಹೊಸ ಶಬ್ದದ ಪರಿಚಯ:
    ಆದಿಕ್ಷಾಂತ (A to Z)!
    ಒಪ್ಪಣ್ಣಾ…. ಹೀಂಗಿಪ್ಪ ಚೂರ್ಣಿಕೆಗೊ ನಿನ್ನ ಲೇಖನಿಂದ ಬತ್ತಾ ಇರಲಿ. ಎಂಗೊ ಎಂತ ಎಡಿಯದ್ದರೂ ಮಹಾದೇವಾ……… ಸ್ವರ ಖಂಡಿತಾ ಸೇರ್ಸುತ್ತೆಯೊ

  16. ಭಾರಿ ಲಾಯಿಕಾಯಿದು….ಒಪ್ಪಣ್ಣ…ಜಂಬರಂಗಳಲ್ಲಿ ಊಟದ ಸಮಯಲ್ಲಿ ಪಾಯಸ ಬಂದಪ್ಪಗ ಹಂತಿಗೆ ಬಪ್ಪ ಕಳೆಯೇ ಬೇರೆ….ಅಲ್ಲದ….
    ಕೆಲವು ಜಂಬರಂಗಳಲ್ಲಿ ಆರಿಂಗರು ಇಬ್ರಿಂಗೆ ಶ್ಲೋಕ ಹೇಳಲೆ ಕಾಂಪಿಟೀಷನ್ ಶುರು ಆವುತ್ತು…ಅವಗ ಒಳುದವಕ್ಕೆ ಮಾದೇವ ಹೇಳುದೊಂದೇ ಕೆಲಸ…
    “ಗೋಪಾಲಂ….” ಶ್ಲೋಕ ಹೇಳುದರಲ್ಲಿ ದ್ವಾರಕ ಗೋಪಣ್ಣ,ಒಪ್ಪಣ್ಣ ನ ಜೋಡಿಯು ಫೇಮಸ್ಸು ಆಗಿತ್ತು ಅಲ್ಲದೊ….
    ಏನೇ ಆದರೂ ಈಗೀಗ ನಮ್ಮೂರಿನ ಜಂಬರಂಗಳಲ್ಲಿ ಶ್ಲೋಕ ಹೇಳುವ ಬಗ್ಗೆ ತಾತ್ಸಾರ ಮನೋಭಾವ ಶುರು ಆಯಿದು ಹೇಳಿ ಎನಗನ್ಸುತ್ತು…ಶ್ಲೋಕ ಹೇಳುದರ ನಿಲ್ಸಿ ಎಷ್ಟು ಹೊತ್ತಾದರೂ “ಭೋಜನಕಾಲೇ…..”, “ಮಾದೇವ….” ಹೇಳುವವು ಆರು ಇರ್ತವಿಲ್ಲೆ… ಉಂಬದೊಂದೇ ಕೆಲಸ…ಮತ್ತೆ ಶ್ಲೋಕ ಹೇಳಿದವ ಒಬ್ಬನೆ ಎಲ್ಲವನ್ನು ಹೇಳಿಗೊಂಬದು, ಇನ್ನು ಕೆಲವರಿಂಗೆ ಉಂಡಿಕ್ಕಿ ಏಳಲೆ ಅರ್ಜೆಂಟು….
    ನಿಂಗಳ ಈ ಲೇಖನ ಓದಿ ಆದರೂ “ಮಾದೇವ… ” ಹೇಳುವವರ ಸಂಖ್ಯೆ ಹೆಚ್ಚಾಗಲಿ ಹೇಳುದು ಎನ್ನ ಆಶಯ…
    (ಎನಗೆ ದೊಡ್ಡಪ್ಪ ಬರದು ಕೊಟ್ಟ ಶ್ಲೋಕ “ಬಾಳೆ ಎಲೆ ಹಾಕಿ….” ಈ ಶ್ಲೋಕವ ಆನು ಹೇಳುದರ ಕೇಳಿ ಅಭ್ಯಾಸ ಆಗಿ ಊರಿಲಿ ಕೆಲವರಿಂಗೆ ಬಾಯಿಗೆ ಬಂದೊಂಡಿತ್ತು…:-P)

  17. ಏ ಒಪ್ಪಣ್ಣ,,ಆನುದೆ ನಮ್ಮ ಜೆಂಬ್ರಂಗಳಲ್ಲಿ ವರುಶ ಹೋದ ಹಾಂಗೆ ಕಮ್ಮಿ ಆವುತ್ತ ಚೂರ್ಣಿಕೆಯ ವಿಷಯವನ್ನೆ ಅಲೋಚನೆ ಮಾಡಿತ್ತಿದ್ದೆ, ಕೆಲಾವು ದಿನದ ಹಿಂದೆ ಎನ್ನ ಅಣ್ಣನ ಮದ್ವೆ ಕಳಾತು,, 🙂 ಅರ್ಧಾಂಶ ಜೆನ ಬೈಪಣೆಲಿ ಅಂಬೆರ್ಪಿಲಿ ಉಂಡಿಕ್ಕಿ ಕೈತೊಳಕ್ಕೋಂಡು ಕಾರಿನ ಹತ್ರಂಗೆ ಓಡಿದ್ದು ಕಂಡತ್ತು.. ಇನ್ನು ಕೂದ ಜೆನ ಚೂರ್ಣಿಕೆ ಕೇಳಿದವಾ ಇಲ್ಲೆಯಾ, ಆದರೆ ಮಾದೇವ ಹೇಳುವ ಹುಮ್ಮಸ್ಸೇ ಕಾಣದ್ದೆ ಹಾಡಿದವಂಗು ಬೇಜಾರಾಪ್ಪ ಪರಿಸ್ಥಿತಿ ಆತು.. ಎನ್ನ ಹಾಂಗಿಪ್ಪ ಕೆಲವು (ಜೆಂಬ್ರಲಿ ಗೌಜಿ ಮಾಡಿ ಅಭ್ಯಾಸ ಇಪ್ಪ) ಜೆನ ಸೇರಿ ಎಡಿಗಾದಷ್ಟು ಗಟ್ಟಿಗೆ ಮಾದೇವ ಹೇಳಿದೆಯಾ,, ಆದರುದೆ ಅದರಲ್ಲಿ ಆನು ಸಣ್ಣಾಗಿಪ್ಪಾಗ ಕಂಡ ಗಮ್ಮತಿತ್ತಿಲ್ಲೆ. 🙂 ನಮ್ಮ ಸಂಸ್ಕ್ರತಿಯ ನಾವೆ ಒಳುಶೆಕ್ಕು ಹೇಳುವ ನಿನ್ನ ಮಾತು ಸತ್ಯ 🙂 ಸಾಂದರ್ಭಿಕ ಲೇಖನ..

  18. ಬರದ್ದರ ಓದಿ ಅಪ್ಪಗ ಎನಗೆ ಈಗಲೇ ಒಂದು ಮದುವೆಗೆ ಹೋಪ ಹೇಳಿ ಆಶೆ ಆತು ಒಪ್ಪಣ್ಣ . ಯಾವಾಗಿನ ಹಾಂಗೆ ಈ ಸರ್ತಿದೆ ಒಳ್ಳೆದಿದ್ದು ಬರದ್ದು. ಇದು ನಮ್ಮ ಹಿಂದಾಣವು ಉಳುಸಿ ಬೆಳಸಿಗೊಂಡು ಬಂದ ಒಳ್ಳೆ ಕ್ರಮ, ಸಾಗರ ಶಿರಸಿ ಕಡೇಲಿ ಎಲ್ಲ ಈಗಲೂ ಮದುವೆ ಇತ್ಯಾದಿ ಶುಭ ಸಮಾರಂಭಲಿ ಸುಮಾರು ಪದ್ಯ ಶ್ಲೋಕಂಗಳ ಹಾಡ್ತವು. ನಮ್ಮಲ್ಲಿದೆ ‘ಎಮ್ಮ ಮನೆಯಂಗಳದಿ’ ಪದ್ಯಂಗೋ ಎಲ್ಲ ಎಷ್ಟು ಅರ್ಥ ಪೂರ್ಣವಾಗಿ ಇದ್ದಲ್ದ? ಆದ್ರೆ ಈಗ ಮದುವೆಗೆ ಬಂದ ಜನಕ್ಕೆಲ್ಲ ಊಟ ಮಾಡಲೇ, ಬೇರೆಯವರ ಹತ್ರೆ ಮಾತಾಡಲೇ, ಬೇಡ ನೆಗೆ ಮಾಡಲೇ ಪುರುಸೊತ್ತಿಲ್ಲೆ!! ಮತ್ತೆ ಚೂರ್ಣಿಕೆ ಹೇಳುಲೇ ಕೇಳಲೇ ಎಲ್ಲ ಎಲ್ಲಿದ್ದು ಪುರುಸೊತ್ತು? ರಜ್ಜ ಏನಾರು ಕೇಳುವ ಹೇಳಿ ಅಪ್ಪಗ ಮೊಬೈಲ್ ಶಬ್ದ ಮಾಡ್ತನ್ನೇ? ಆದರೆ ಚೂರ್ಣಿಕೆ ಹೇಳುವ, ಕೇಳುವ ಬೊಬ್ಬೆ ಹಾಕಿ ಮಾದೇವ ಹೇಳುವ ಖುಷಿ ಕಂಪ್ಯೂಟರ್ ಲಿ cd ಹಾಕಿ ಶ್ಲೋಕ ಕೇಳುವಾಗ ಸಿಕ್ಕುತ್ತಿಲ್ಲೇ ಅಲ್ಲದ. ಈ ರೀತಿಯ ಚುರ್ನಿಕೆಗೋ ಎಲ್ಲ ಪರಸ್ಪರ ಜನಂಗೋ ಬೆರವಲೆದೇ ಸಹಕಾರಿ ಅಲ್ದಾ? ಈ ರೀತಿಯ ಲೇಖನಂಗೋ ಅಂತ ಕ್ರಮಂಗಳ ಉಳುಸಿ ಬೆಳಸುಲೆ inspiration ಅಕ್ಕು ಹೇಳಿ ಗ್ರೆಶುತ್ತೆ .

  19. ಜೆಂಬ್ರದ ಸಮಯಕ್ಕೆ ಸರಿಯಾದ ಶುದ್ದಿ. ಒಪ್ಪಣ್ಣನ ಬೈಲು ನಮ್ಮ ಸಂಸ್ಕೃತಿಯ ಪ್ರತಿಬಿಂಬ ಹೇಳುದಕ್ಕೆ ಇನ್ನೊಂದು ಉದಾಹರಣೆ.
    ಚೂರ್ಣಿಕೆಯ ಹಿನ್ನೆಲೆ, ಮಹತ್ವ ಎಲ್ಲವನ್ನುದೇ ಚೆಂದಲ್ಲಿ ವಿವರುಸಿದ್ದಿ.
    ಅಪ್ಪು ನಿಂಗ ಹೇಳಿದ ಹಾಂಗೆ ಇದು ಎಂದೆಂದಿಂಗೂ ಪ್ರಸ್ತುತ, ಪ್ರಬುದ್ಧ ಆಚರಣೆ. ಭೋಜನದ ಹೊತ್ತಿಲಿ ಪ್ರತಿಭೆಯ ಅನಾವರಣಕ್ಕೆ ಭಗವನ್ನಾಮ ಸ್ಮರಣೆಯ ಪ್ರೇರಣೆ.
    ಇಷ್ಟೊಳ್ಳೆ ಆಚರಣೆಯ ಒಳಿಶೆಕ್ಕಾದ್ದು ನಮ್ಮ ಎಲ್ಲೊರ ಕರ್ತವ್ಯ. ಸಕಾಲಲ್ಲಿ ಈ ಲೇಖನ ಬಂದದು ಭಾರೀ ಒಳ್ಳೆದಾತು.
    ಚೂರ್ಣಿಕೆ ಹೇಳುಲೆ ಎಡಿಯದ್ದರೂ ಹೇಳುವೋರಿಂಗೆ, ಹೇಳುವ ಸಾಮರ್ಥ್ಯ ಇಪ್ಪೋರಿಂಗೆ ಪ್ರೋತ್ಸಾಹ ಕೊಡುವೊ.

    ಬಟ್ಟಮಾವನ ಮಾಹಿತಿಗೂ ಧನ್ಯವಾದಂಗೊ.
    ಪುರುಸೋತಿಲಿ ಇದರ ಎಲ್ಲ ರಿಕಾರ್ಡು ಮಾಡಿ ಕೇಳುಸಿ ಬಟ್ಟಮಾವ. ಬೈಲಿನೋರೆಲ್ಲ ಉಂಡೋಂಡು ಕೇಳ್ತೆಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×