ಬಿದಿಗೆ ರಟ್ಟೆ ಸಂತೆ – ಮಂತ್ರ ಬಾರ ಅಂತೆ ಅಂತೆ!

ಬೈಲಕರೆ ಜೋಯಿಶಪ್ಪಚ್ಚಿ ಮನೆಲಿ ತಿತಿ ಕಳಾತು, ಕಳುದ ವಾರ!
ಈ ಅದಿಕಮಾಸಲ್ಲಿ ಎಲ್ಲಿಯೂ ಜೆಂಬ್ರ ವಿಶೇಷ ಇಲ್ಲೆ, ಹಾಂಗಿರ್ತಲ್ಲಿ ಒರಿಶಾವದಿ ಬತ್ತ ತಿತಿಯೋ, ಪೂಜೆಯೋ ಮತ್ತೊ ಮಾಂತ್ರ ಇಕ್ಕಷ್ಟೆ ಇದಾ!
ಬೈಲಿಂದ ಕೆಲವು ಹೋಗಿತ್ತಿದ್ದೆಯೊ°, ಊರಿಲೇ ಇದ್ದಂಡು ಪುರುಸೋತಿಲಿಪ್ಪವು.
ಹೋಪಗ ದಾರಿಗೆ ಹೀಂಗೇ ಶುದ್ದಿ ಮಾತಾಡಿಗೊಂಡು ಹೋದ್ದು, ನೇರಂಪೋಕು – ಅದರ ಬಗ್ಗೆ ಕಳುದ ವಾರ ಮಾತಾಡಿದ್ದು ಇದಾ, ನೀರಿನ ವಿಶಯ!

ತಿತಿ ದಿನ ಮಾತು ಕಂಡಾಬಟ್ಟೆ, ಈ ಸರ್ತಿಯುದೇ ಹಾಂಗೇ ಇತ್ತು.
ಆಚಕರೆ ತರವಾಡು ಮನೆಲಿ ಆದರೆ ಪಿಡಿ ಆಡಿ ಹೊತ್ತುಕಳಗು, ಜೋಯಿಶಪ್ಪಚ್ಚಿಯಲ್ಲಿಗೆ ಈಗ ಪಿಡಿ ತತ್ತವಿಲ್ಲೆ – ಮಕ್ಕೊ ಹಾಳಾವುತ್ತವು ಹೇಳಿಗೊಂಡು!
ಹಾಂಗಾಗಿ, ಬಂದ ಹೊತ್ತೋಗದ್ದವು ಕೂದುಗೊಂಡು ಪಂಚಾತಿಗೆ – ಹೊತ್ತು ಹೋಗೆಡದೋ!!
ಶುದ್ದಿ ಮಾತಾಡುವಗ ಅಂತೇ ಕೂದಂಡು ಲೊಟ್ಟೆಪಂಚಾತಿಗೆಲಿ ಹೊತ್ತು ಕಳವದಕ್ಕೆ, ಊರಿಂಗೆ ಉಪಕಾರ ಅಪ್ಪದರ ಏನಾರು ಮಾತಾಡ್ಳಾಗದೋ – ಹೇಳಿ ರಂಗಮಾವ° ಹೇಳುಗು, ಅಂಬಗಂಬಗ!
~

ಪಂಜಚಿಕ್ಕಯ್ಯನ ಮಗ° ಮಂತ್ರಪಾಟ ಶಾಲಗೆ ಹೋಪದಡ – ಮಾತಾಡಿಗೊಂಡು ಹೋಪಗ ಈ ಶುದ್ದಿ ಬಂತು.
ಅವರ ಊರಿಲೇ ಮಂತ್ರಪಾಟ ಶಾಲೆ ಅಡ. ಮಕ್ಕೊಗೆ ಹೇಳಿ ಮಾಡ್ತ ನಮುನೆದು ಇದ್ದಲ್ಲದೋ –
– “ವಸಂತ ವೇದಪಾಟ ಶಾಲೆ”ಗೊ, ಮದೂರಿಲಿ ಇದ್ದಿದಾ, ಅದೇ ನಮುನೆದು!
ಮೂರು ಒರಿಶ ಕೋರ್ಸು ಇದಾ, ಸಾಮಾನ್ಯ ನಮ್ಮೋರಿಂಗೆ ನಿತ್ಯಬಳಕ್ಕೆಗೆ ಎಷ್ಟು ಮಂತ್ರ ಬೇಕಾವುತ್ತೋ – ಅಷ್ಟರ ಕಲುಶಿಕೊಡ್ತವಡ.
ಅವರ ಮನೆಲಿ ದೇವರಿದ್ದ ಕಾರಣ, ದಿನಾಗುಳೂ ರುದ್ರ ಹೇಳಿ ದೇವರ ತಲಗೆ ನೀರು ಎರೇಕು ಇದಾ, ಹಾಂಗಾಗಿ ಮಗಂಗೆ ರುದ್ರ ಬಪ್ಪಲೇ ಬೇಕು – ಹೇಳಿ ಅಪ್ಪಮ್ಮ ವೇದಪಾಟಶಾಲಗೆ ಕಳುಸಿದ್ದಡ.

ಇದರೆಡಕ್ಕಿಲಿ ಮಗ° ಒಂದು ದಿನಕ್ಕೆ ಮನಗೆ ಬಂದು ಹೋದನಡ. ರಜಾ ದೊಂಡೆಬೇನೆ ಆದ ಕಾರಣ ಗೆಣಮೆಣಸು ಕಷಾಯ ಮಾಡಿ ಕೊಟ್ಟತ್ತಡ, ಮಾಲಚಿಕ್ಕಮ್ಮ.
ಅಡಕ್ಕೆ, ಗೆಣಮೆಣಸಿಂಗೆ ಈಗ ಕ್ರಯವೇ ಇಲ್ಲೆ! ಒಂದೊಂದರಿ ತಲೆಬೆಶೀ ಆವುತ್ತು ಕೊಳಚ್ಚಿಪ್ಪು ಬಾವಂಗೆ. ಹ್ಮ್, ಅದಿರಳಿ!

ಅವ ಈಗ ಬರೇ ಐದನೇ ಕ್ಲಾಸು, ರುದ್ರ ಪಾಟ ಸುರು ಆಯಿದಡ. ಅಷ್ಟು ಸಣ್ಣ ಮಕ್ಕೊಗೆ ರುದ್ರ ಕಲಿಶುದೋ ಹೇಳಿಗೊಂಡು ಮಗುಮಾವಂಗೆ ತಲೆಬೆಶಿ ಅಪ್ಪಲೆ ಸುರು ಆತು.
ಅಷ್ಟಪ್ಪಗ ಅಲ್ಲೇ ಕೂದಿದ್ದ ಪಳನ್ನೀರುಮಾವ° ಮಂತ್ರಕಲಿಶುತ್ತ ಕ್ರಮವ, ಅದು ಹೊರೆ ಆಗದ್ದ ಗುಟ್ಟಿನ ವಿವರುಸುಲೆ ಸುರು ಮಾಡಿದವು.
ಪಳನ್ನೀರುಮಾವ° ಜೋಯಿಶಪ್ಪಚ್ಚಿಗೆ ತುಂಬ ಹತ್ತರೆ! ಹಾಂಗಾಗಿ ತಿತಿಊಟಕ್ಕಪ್ಪಗ ಬಂದು ಎತ್ತಿಗೊಂಡಿದವು.
~

ಪಳನ್ನೀರುಮಾವಂಗೆ ಮಂತ್ರ ಅರಡಿಗು. ಅರಡಿಗು ಹೇಳಿರೆ ಒಳ್ಳೆತ ಅರಡಿಗು – ಮಂತ್ರಪಾಟಶಾಲಗೆ ಹೋಗಿ ಕಲ್ತಿದವು, ದೊಡ್ಡದೊಡ್ಡ ಬಟ್ಟಮಾವಂದ್ರ ಒಟ್ಟಿಂಗೆ ಮಣೆಮಡಿಕ್ಕೊಂಡು ಮಂತ್ರವುದೇ ಹೇಳ್ತವು.
ಅವು ಬರೇ ಕಲ್ತದು ಮಾಂತ್ರ ಅಲ್ಲ, ಕಲಿಶುತ್ತವುದೇ, ಆಸಕ್ತಿ ಇದ್ದೋರಿಂಗೆ! ಅವರಷ್ಟೇ ನಮ್ಮ ಗಣೇಶಮಾವಂಗೂ ಅರಡಿಗು- ಅವು ಚೆಂಙಾಯಿಗೊ ಇದಾ!
(ಒಪ್ಪಣ್ಣಂಗೂ ರಜ ರಜ ಮಂತ್ರ ಅರಡಿಗು, ಗಾಯತ್ರಿಮಂತ್ರಕ್ಕೆ ಸೊರ ಹಾಕಲೆ ತಕ್ಕ ಆದರೂ!)
ಹಾಂಗೆ ಪಳನ್ನೀರು ಮಾವನೇ ಸ್ವತಃ ವಿವರುಸುವಗ ಅದರ್ಲಿ ಎಷ್ಟೋವಿಶಯಂಗೊ ಬಂತು, ಒಪ್ಪಣ್ಣನ ಒಂದು ಶುದ್ದಿಗೆ ಸಾಕಪ್ಪಷ್ಟು!
~

ಮಂತ್ರ / ವೇದಪಾರಾಯಣಲ್ಲಿ ಶಬ್ದಂಗಳಷ್ಟೇ ಸ್ವರವೂ ಪ್ರಾಮುಖ್ಯ.
ಮಂತ್ರಂಗಳ ಬಾಯಿಪಾಟ ಮಾಡುಸುತ್ತ ವಿಧಾನಲ್ಲಿ ವಿದ್ಯಾರ್ಥಿಗೆ ನೆಂಪೊಳಿಯೇಕಾರೆ – ಅಂತೇ ಶಾಲೆಲಿ ಹೇಳಿ ಕೊಟ್ಟ ಹಾಂಗೆ ಹೇಳಿಕೊಟ್ರೆ ಸಾಲ! ಆ ಮಂತ್ರದ ಅಕ್ಷರಂಗಳ ಸ್ಪಷ್ಟವಾಗಿ
ಓದುತ್ತದರಿಂದ ಹಿಡುದು, ಆ ಅಕ್ಷರ ಓದುವಗ ನಮ್ಮ ಸ್ವರಲ್ಲಿ ಆಯೇಕಾದ ಏರಿಳಿತಂಗೊ, ಆ ಮೂಲಕ ಮಂತ್ರದ ಧಾಟಿಗೆ ತರೆಕಾದ ಲಯ, ಇಂಪು, ಇತ್ಯಾದಿಗಳನ್ನುದೇ ಸೇರಿ ಹೇಳಿಕೊಡುದಡ.

ಮಂತ್ರ ಸ್ವರದ ಬಗೆಗೆ ಗೊಂತಿದ್ದನ್ನೇ!?
ಮಂತ್ರ ಹೇಳುವಗ ಗಾಡಿಎತ್ತು ಹೊಯಿದಹಾಂಗೆ ಉದಾಕೆ ಹೇಳುದಲ್ಲ, ಬದಲಾಗಿ ನಿರ್ದಿಷ್ಟ ಅಕ್ಷರಕ್ಕೆ ನಿರ್ದಿಷ್ಟ ಸ್ವರಸ್ಥಾನ ಇರೆಕ್ಕು – ಹೇಳ್ತದರ ನಮ್ಮ ಅಜ್ಜಂದ್ರು ನಿಜ ಮಾಡಿದ್ದವು.
ನಾವು ಹೇಳುವಗ ಅದನ್ನೇ ಹೇಳೆಕ್ಕು..
(ಹೃಸ್ವ, ದೀರ್ಘ, ಉದಾತ್ತ, ಅನುದಾತ್ತ, ಸ್ವರಿತ, ದೀರ್ಘಸ್ವರಿತ, – ಹೇಳಿ ಎಂತೆಂತದೋ ಹೇಳಿದವು, ಪಳನ್ನೀರುಮಾವನೋ ಗಣೇಶಮಾವನೋ ಮಣ್ಣ ಇನ್ನೊಂದರಿ ಪುರುಸೋತಿಲಿ ವಿವರುಸುಗು, ಆತಾ?)
ಒಟ್ಟಿಲಿ, ಸ್ವರಮುಖಾಂತರ ಹೇಳುವಗ ಬಾಯಿಪಾಟ ಬೇಗ ಬತ್ತು – ಹೇಳಿದವು ಪಳನ್ನೀರುಮಾವ°.
~

ಮದಲಿಂಗೆ ಬಾಯಿಪಾಟ ಮುಖಾಂತರವೇ ಒಳಿಶಿಗೊಂಡಿದ್ದದು. ಒಂದೇ ಒಂದು ಅಕ್ಷರವಿತ್ಯಾಸ, ಚುಕ್ಕಿ – ಬೊಟ್ಟುದೇ ವಿತ್ಯಾಸ ಇಲ್ಲದ್ದೆ ಈ ಮಂತ್ರಂಗೊ ಸಾವಿರಾರು ಒರಿಶ ಒಳುಕ್ಕೊಂಡು ಬಯಿಂದು – ಹೇಳಿದವು ಎಲೆಮರಿಗೆ ಹತ್ತರೆ ಕೂದ ಮಾಷ್ಟ್ರುಮಾವ°.
ಈಗಾಣ ಮಕ್ಕೊಗೆ ಒಂದು ಪ್ರಶ್ನೆಗೆ ಉತ್ತರ ಬಾಯಿಪಾಟ ಮಾಡ್ಳೆ ಹೇಳಿರೆ ಕಷ್ಟ ಆವುತ್ತು, ಅದರ್ಲಿ ನಮ್ಮ ಅಜ್ಜಂದ್ರು ಹೇಂಗೆ ಇಷ್ಟೆಲ್ಲ ಬಾಯಿಪಾಟ ಮಾಡಿಗೊಂಡಿತ್ತಿದ್ದವಪ್ಪಾ!! ಕೇಳಿದೆ.
ಪಳನ್ನೀರುಮಾವ° ಸಮದಾನಲ್ಲಿ ಉತ್ತರ ಕೊಟ್ಟವು, ಕೊಶೀ ಆತು.
~

ಮಂತ್ರವ ಬಾಯಿಪಾಟ ಮಾಡುಸುವಗಳೂ ಹಾಂಗೇಡ, ಒಂದು ನಿರ್ದಿಷ್ಟ ವಿಧಾನಲ್ಲಿ ಮಾಡುಸುದಡ.
ಅಷ್ಟಪ್ಪಗ ಎಷ್ಟೇ ಕಷ್ಟದ ಮಂತ್ರ ಆದರೂ, ಎಂತದೇ ನಿಧಾನಗತಿಯ ವಿದ್ಯಾರ್ಥಿ ಆದರೂ ಮಂತ್ರ ಕಲಿವಲೆಡಿತ್ತಡ.
ಅದರಿಂದಾಗಿಯೇ, ಶಾಲೆಲಿ ಕಲಿವಲೆ ಉಶಾರಿ ಅಲ್ಲದ್ದ ಸುಮಾರು ಜೆನ ವಿದ್ಯಾರ್ಥಿಗೊ ಮಂತ್ರವ ಬೇಗ ಕಲ್ತುಗೊಳ್ತವಡ.

ವಿಧಾನ:
ಮಂತ್ರವ ಕಲಿಶುವಗ ಒಂದೇ ಸರ್ತಿ ತಲೆ ಒಳಂಗೆ ತುರುಕ್ಕುಸುಲೆ ಇಲ್ಲೆಪ್ಪ!
ಮನಸ್ಸು ಹೇಂಗೆ ಒಂದು ಪರಿಸರವ ಅಭ್ಯಾಸ ಮಾಡ್ತೋ – ಹಾಂಗೇ ರಜರಜವೇ ಕಲಿಶುದು ಹೇಳಿದವು ಪಳನ್ನೀರುಮಾವ°.
ಮಂತ್ರಪಾಟಶಾಲೆಲಿ ಕಷ್ಟದ ಒಂದು ಗೆರೆಯ ಮಕ್ಕೊಗೆ ಹೇಂಗೆ ಹೇಳಿಕೊಡುಗು ಹೇಳ್ತದರ ಉದಾಹರಣೆ ಸಹಿತ ವಿವರುಸಿದವು.
ಆ ಉದಾಹರಣೆಗೆ ರುದ್ರದ ಒಂದು ಗೆರೆ ತೆಕ್ಕೊಂಡವು:
ಮೃಡಾಜರಿತ್ರೇ ರುದ್ರಸ್ತವಾನೋ ಅನ್ಯಂತೇ ಅಸ್ಮನ್ನಿವಪಂತು ಸೇನಾಃ ||
(ಈ ಗೆರೆಗೆ ಸ್ವರ ಇದ್ದು, ಗಣೇಶಮಾವಂಗೆ ಗೊಂತಿದ್ದು)

ಮಂತ್ರ ಕಲಿಶುತ್ತ ವಿಧಾನವ ವಿವರುಸಿದವು:

ಬಿದಿಗೆ:
ಬಿದಿಗೆ ಹೇಳಿರೆ ಎರಡ್ಣೇದು / ಎರಡು ಹೇಳ್ತ ಅರ್ತ ಬತ್ತು – ಪಾಡ್ಯ-ಬಿದಿಗೆ-ತದಿಗೆ ಹೇಳಿ ಶಾಂತತ್ತೆ ಅಂದೇ ಹೇಳಿಕೊಟ್ಟಿದವು ನವಗೆ.

Gurukula ಗುರುಕುಲ

ಯೇವದೋ ಹೊಳೆಕ್ಕರೆಲಿ ವೇದಪಾಟ ನೆಡೆತ್ತಾ ಇಪ್ಪದು! ಮದಲಿಂಗೆ ಬಾರತಲ್ಲಿ ಎಷ್ಟು ದಿಕ್ಕೆ ಹೀಂಗೆ ನೆಡಕ್ಕೊಂಡು ಇತ್ತೊ..!

ಇಲ್ಲಿಯೂ ಬಿದಿಗೆ ಹೇಳಿರೆ ’ಎರಡು’ ಹೇಳಿಯೇ ಲೆಕ್ಕ. ಗುರುಗೊ ಒಂದು ಸರ್ತಿ ಹೇಳಿಕೊಟ್ಟದರ ಮಕ್ಕೊ ಎರಡುಸರ್ತಿ ಹೇಳೆಕ್ಕು.
ಒಟ್ಟು ಹತ್ತು ಬಿದಿಗೆ ಇದ್ದು. – ಹತ್ತು ಸರ್ತಿ ಹೀಂಗೆ ಹೇಳಿಕೊಡ್ಳಿದ್ದು.

ಗುರುಗೊ ಹೇಳಿಕೊಡುವಗಳೂ ಹಾಂಗೆಯೇ, ಸುರೂವಾಣ ಬಿದಿಗೆಗಳಲ್ಲಿ ಉದ್ದ-ಉದ್ದ ಮಂತ್ರದ ಗೆರೆಗಳ ಸಣ್ಣಸಣ್ಣ ತುಂಡು ಮಾಡುದು, ಅರ್ತವತ್ತಾಗಿ.

ತುಂಡು ಮಾಡುವಗ ಕೆಲವೆಲ್ಲ ವಿಶಯ ಗಮನುಸೆಕ್ಕು – ಆ ಶಬ್ದಕ್ಕೆ ಅರ್ತ ಇರೆಕ್ಕು, ಸ್ವರ ಇರೆಕ್ಕು, ಮಧ್ಯಮ ಸ್ವರಲ್ಲಿ ಮುಗಿಯೇಕು ಹೇಳಿಗೊಂಡು!

ಹೇಳಿತೋರುಸಿದವು:
ಮೃಡಾಜರಿತ್ರೇ -ರುದ್ರಸ್ತವಾನೋ – ಅನ್ಯಂತೇ ಅಸ್ಮನ್ – ಅಸ್ಮನ್ನಿವಪನ್ತು – ಇವಪನ್ತು ಸೇನಾಃ ||

ಆದಷ್ಟು ಸಂಧಿ ಶಬ್ದಂಗಳ ತುಂಡುಸಿ, ಮಕ್ಕೊಗೆ ಹೇಳುಲೆ ಸುಲಾಬ ಅಪ್ಪ ಹಾಂಗೆ ಮಾಡಿಕೊಡುದು.
(ಬೆಶೀಮಣ್ಣಿಯ ಪಾತ್ರಂದ ಸಣ್ಣ ಚಮ್ಚಲ್ಲಿ ತಣಿಶಿತಣಿಶಿ ಅಮ್ಮ ಬಾಬೆಗೆ ಕೊಡುದು ಅನುಸಿ ಹೋತು ಒಪ್ಪಣ್ಣಂಗೆ!)

ಉದಾ:
ಗುರು: ಮೃಡಾಜರಿತ್ರೇ
ಮಕ್ಕೊ: ಮೃಡಾ ಜರಿತ್ರೇ, ಮೃಡಾ ಜರಿತ್ರೇ
ಗು: ರುದ್ರ ಸ್ತವಾನೋ
: ರುದ್ರಸ್ತವಾನೋ, ರುದ್ರ ಸ್ತವಾನೋ

ಸುರೂವಾಣ ಬಿದಿಗೆಗೊ ಸಣ್ಣ ಸಣ್ಣ ತುಂಡುಗಳ ಒಳಗೊಂಡಿರ್ತಡ. ಒಟ್ಟು ಹತ್ತು ಬಿದಿಗೆ.
ಹತ್ತನೇದಕ್ಕಪ್ಪಗ ಇಡೀ ಗೆರಯನ್ನೇ ಹೇಳುಸುದಡ. ಒಟ್ಟು ಇಪ್ಪತ್ತು ಸರ್ತಿ ಸರೀ ಅರವಗ ಮಕ್ಕೊಗೆ ತಲಗೆ ಹೋಗದ್ದೆ ಇಕ್ಕೋ!
ಬಿದಿಗೆ ಆದ ಹಾಂಗೆ ಮಕ್ಕೊಗೆ ಓದಲೆ ಅಭ್ಯಾಸ ಆಯ್ಕೊಂಡು ಬತ್ತು. ಮಂತ್ರದ ಹಿಂದೆ ಇಪ್ಪ ಲಯ ಅಭ್ಯಾಸ ಆಗಿರ್ತು.
ಗಮನ ಮಡುಗಿ ಪುಸ್ತಕ ನೋಡ್ತ ಕಾರಣ ಶಬ್ದಂಗಳ ಸ್ವರಸ್ಥಾನವುದೇ ಅರಡಿತ್ತು.

ರಟ್ಟೆ:
ಹತ್ತು ಬಿದಿಗೆ ಮುಗುದಿರ್ತು. ಮಂತ್ರ ಸರಾಗ ಓದಲೆ ಅರಡಿರ್ತು. ಕೆಲವು ಗೆರೆಗಳ ಒಟ್ಟಿಂಗೆ ಸೇರುಸಿ ಹೇಳುದು ಬಾಕಿ ಇಪ್ಪದು!

ಕೆಲವು ಗೆರೆಗಳ ಗುಚ್ಛಕ್ಕೆ – ಒಂದು ಪೇರಗ್ರಾಪಿನಷ್ಟಕೆ – ಹನುಸ್ಸು / ಹನಸ್ಸು ಹೇಳ್ತದು.
(ಶಂಬಜ್ಜ ಹನ್ನಾಸು ಹೇಳಿಗೊಂಡಿತ್ತಿದ್ದವು – ಹೇಳಿದವು ರಂಗಮಾವ°) ಹತ್ತರತ್ತರೆ ಐವತ್ತು ಶಬ್ದಂಗೊ ಇರ್ತಡ್ಡ. ಮಂತ್ರವ ಪಾರಾಯಣಕ್ಕೆ ಅಲ್ಲ – ಅಧ್ಯಯನಕ್ಕಾಗಿ ಹೇಳುವಗ ಒಂದು ಹನ್ನಾಸಿಲಿ ನಿಲ್ಲುಸೆಕ್ಕಡ.
ಇಡೀ ವೇದಲ್ಲಿ ಎಷ್ಟು ಹನ್ನಾಸುಗೊ ಇಕ್ಕೋ – ಅದರ ಎಲ್ಲ ನೆಂಪುಮಡಿಕ್ಕೊಂಡ ಬಟ್ಟಮಾವಂದ್ರು ಬಯಂಕರ ಅಪ್ಪ!
ಅದಿರಳಿ,

ಒಂದು ಹನ್ನಾಸು ಮಂತ್ರವ ಈಗ ಮಕ್ಕೊಗೆ ಹೇಳಿಕೊಡುದು. ಗುರುಗೊ ಒಂದರಿ ಹೇಳ್ತವು, ಮಕ್ಕೊ ಅದರ ಐದು ಸರ್ತಿ ಹೇಳೆಕ್ಕಡ.
ಪುಸ್ತಕ ನೋಡಿ ಹೇಳ್ತಕಾರಣ ಗೆರೆಗೊ ಒಂದಾದಮೇಲೆ ಇನ್ನೊಂದು ಯೇವದು ಹೇಳ್ತದರ ಮನಸ್ಸು ರಜರಜ ಅರ್ತ ಮಾಡಿಗೊಂಬಲೆ ಸುರುಮಾಡ್ತು.
ಅತ್ಲಾಗಿ ಬಿದಿಗೆಯ ಹಾಂಗೆ ತುಂಡುತುಂಡೂ ಅಲ್ಲ, ಇತ್ಲಾಗಿ ಪೂರ್ತಿ ಮಂತ್ರದ ಹಾಂಗೆ ಉದಾಕೆ ಹೇಳುದೂ ಅಲ್ಲ, ಎರಡರ ಮದ್ಯದ್ದು.
ಹತ್ತು ತಿಂಗಳ ಬಾಬೆಯ ಅಪ್ಪ ಕೈ ಹಿಡುದ ನಡೆಶುತ್ತದು ನೆಂಪಾತು ಒಪ್ಪಣ್ಣಂಗೆ…
ಮುಂದೆ ಮಂತ್ರ ದೊಡ್ಡದಿದ್ದು, ಸೀತ ನೆಡಕ್ಕೊಂಡು ಹೋಪಲೆ ಅಬ್ಯಾಸ ಆಗಲಿ ಹೇಳಿ ಗುರುಗೊ ಕೈ ನೀಡಿ ಕರಕ್ಕೊಂಡು ಹೋಪದು…

ಇಷ್ಟಪ್ಪಗ ಸಾಮಾನ್ಯ ಯೇವ ವಿದ್ಯಾರ್ಥಿಗೂ ಮಂತ್ರವ ಸರಾಗ ಓದಲೆ ಬತ್ತು – ಹೇಳಿದವು ಪಳನ್ನೀರುಮಾವ°.

ಸಂತೆ:
ಹತ್ತು ಬಿದಿಗೆ – ಇಪ್ಪತ್ತು ಸರ್ತಿ, ಒಂದು ರಟ್ಟೆ- ಐದು ಸರ್ತಿ ಹೇಳಿದ ಮತ್ತೆ ಮಕ್ಕೊಗೆ ಗುರುಗಳಿಂದ ಸಿಕ್ಕುವ ಹೆಚ್ಚಿನ ಪಾಲು ಮುಗಾತು.
ಇನ್ನು ಏನಿದ್ದರೂ ಸ್ವಂತ ಪ್ರಯತ್ನಲ್ಲಿ ಮುಂದುವರಿಯೆಕ್ಕು.
ಬಾಬೆಗೆ ನಡವಲೆ ಕಲಿಶಿ ಆತು, ಇನ್ನು ಬಾಬೆಯೇ ನಡೇಕು – ಅಪ್ಪಮ್ಮ ಆಯ ತಪ್ಪಿದಲ್ಲಿ ಹಿಡ್ಕೊಂಬದು ಮಾಂತ್ರ!

ಅದೇ ಹನಸ್ಸುಗಳ ಹತ್ತತ್ತು ಸರ್ತಿ ಹೇಳುದಕ್ಕೆ “ಸಂತೆ” ಹೇಳುದು. ಸುರೂವಾಣ ಸಂತೆಗಳಲ್ಲಿ ಗುರುಗೊ ಕೈಲಿ ಒಂದು ದಾಸನಕೋಲು ಹಿಡ್ಕೊಂಡು ಸ್ವರ ತಿದ್ದುಗಡ..
ಮಕ್ಕೊಗೆ ಒಂದು ಹಿಡಿತ ಸಿಕ್ಕುವನ್ನಾರ..
ಒಂದು ಹನಸ್ಸಿನ ಹತ್ತುಸರ್ತಿ ಹೇಳಿದಮತ್ತೆ ಮತ್ತಾಣ ಹನಸ್ಸು – ಹೀಂಗೆ ಇಡೀ ಮಂತ್ರವ ಹತ್ತು ಸರ್ತಿ ಹೇಳಿಪ್ಪಗ ಒಂದು ಸಂತೆ ಆತು! ಒಟ್ಟು ಹತ್ತು ಸಂತೆ ಹೇಳುಲಿದ್ದು.

ರಜ ಉಶಾರಿಲಿ ಗಮನಮಡೂಗಿ ಕಲ್ತ ಮಕ್ಕೊಗೆ ಎರಡು-ಮೂರು ಸಂತೆಗಳಲ್ಲಿ ಕಂಠಸ್ಥ (ಬಾಯಿಪಾಟ ಹೇಳ್ತದಕ್ಕೆ ಬಟ್ಟಮಾವಂದ್ರ ಶೆಬ್ದ) ಬಕ್ಕಡ.
ಮನೆನೆಂಪಾಗಿಯೊಂಡು ಉದಾಸಿನ ಮಾಡ್ತ ಮಕ್ಕೊಗೆ ಏಳು -ಎಂಟು ಸಂತೆ ಆಯೆಕ್ಕಾವುತ್ತಡ ಬಾಯಿಪಾಟ ಬಪ್ಪಲೆ!
~

ಹತ್ತು ಬಿದಿಗೆಲಿ ಇಪ್ಪತ್ತು ಸರ್ತಿ, ಒಂದು ರಟ್ಟೆಲಿ ಐದು ಸರ್ತಿ, ಹತ್ತು ಸಂತೆಲಿ ನೂರು ಸರ್ತಿ – ಒಟ್ಟು ನೂರಿಪ್ಪತ್ತೈದು ಸರ್ತಿ ಒಂದು ಮಂತ್ರವ ಹೇಳುಲಿದ್ದು.
ಈಗಾಣ ಇಂಗ್ರೋಜಿಕೋನ್ವೆಂಟಿಲಿ ಕಲಿಶುತ್ತ ಹಾಂಗೆ ಒಂದೇ ಸರ್ತಿ ಏಬೀಸೀಡೀ ತುರುಕ್ಕುಸುದಲ್ಲ, ಹಂತಹಂತವಾಗಿ ರಜರಜವೇ ಉಣುಸುದು.
ಕಷ್ಟಾತಿಕಷ್ಟ ಮಹಾಪ್ರಾಣ ಸಂಧಿಗಳನ್ನುದೇ ಇದೇ ವಿಧಾನಲ್ಲಿ ಕಲಿಶಿ ಗೊಂತುಮಾಡುಸುದು. ಬಿದಿಗೆ, ರಟ್ಟೆ, ಸಂತೆ – ವಿಧಾನಲ್ಲಿ ಕಲಿತ್ತ ಕಾರಣ ಇದು ಸಾಧ್ಯ ಆತು.
ಈಗಾಣ ಆಧುನಿಕ ವಿದ್ಯಾಭ್ಯಾಸ ವೆವಸ್ತೆಗೆ ನಮ್ಮ ಮಂತ್ರಪಾಟ ವಿಧಾನಂಗಳಿಂದ ತೆಕ್ಕೊಂಬದು ಬಹಳಷ್ಟು ಇದ್ದು – ಹೇಳಿದವು ಮಾಷ್ಟ್ರುಮಾವ°.
~

ನಮ್ಮ ಸಂಸ್ಕೃತಿಲಿ ಮಂತ್ರಂಗಳ, ವೇದಂಗಳ, ಶ್ಲೋಕಂಗಳ ಪುಸ್ತಕರೂಪಕ್ಕೆ ಇಳುಸಿದ್ದು ತೀರಾ ಇತ್ತೀಚೆಗೆ.
ತಾಳೆಗರಿ, ಓಲೆಗರಿ – ಇತ್ಯಾದಿಗಳ ಹದಮಾಡಿ, ಕಬ್ಬಿಣದ ಕಂಟವ (ಜೋಯಿಷಪ್ಪಚ್ಚಿಯ ಹತ್ತರೆ ಇಪ್ಪ ನಮುನೆದು), ಮುಷ್ಟಿಲಿ ಹಿಡುದು ಬರಕ್ಕೊಂಡಿತ್ತಿದ್ದವು, ಆದರೆ ಅದು ಸದ್ಯ…
ಬೌಷ್ಹ ಸಾವಿರ – ಎರಡು ಸಾವಿರ ಒರಿಷ ಮದಲಾಯಿಕ್ಕು. ಅದರಿಂದ ಮದಲಿಂಗೆ ಅಂಬಗ ಹೇಂಗೆ ವಿಶಯಂಗಳ ಒಳಿಶಿಗೊಂಡಿತ್ತಿದ್ದವು?!!
ಆಶ್ಚರ್ಯ ಆವುತ್ತಲ್ಲದೋ!
ಲಕ್ಷಾಂತರ ಶ್ಲೋಕಂಗೊ ಇಪ್ಪ ರಾಮಾಯಣ, ಮಹಾಭಾರತ, ಸಾವಿರಾರು ಹನಸ್ಸುಗೊ, ಮತ್ತು ಅನೇಕಾನೇಕ ಪುರಾಣ, ಇತಿಹಾಸ, ಶಾಸ್ತ್ರ, ಇತ್ಯಾದಿ ವಿಶಯಂಗೊ – ಅದರ ಹೇಂಗೆ ನೆಂಪು ಮಡಿಕ್ಕೊಂಡವು?!
ಮಕ್ಕಳಿಂದ ಮಕ್ಕೊಗೆ, ಪುಳ್ಯಕ್ಕೊಗೆ ಆ ವಿಶಯಂಗೊ ಹೇಂಗೆ ಹರುಕ್ಕೊಂಡು ಬಂತು?!
ಅಜ್ಜ° ಹೇಳಿದ ಅದೇ ಪಾಟ ಪುಳ್ಳಿ ಒರೆಂಗೆ ಹೇಂಗೆ ಒಳುದಿಗಿತ್ತು?! – ಅದುದೇ ಒಂದೇ ಒಂದು ಬಿಂದುವಿಸರ್ಗ ವಿತ್ಯಾಸ ಇಲ್ಲದ್ದೆ!!!
ಆಶ್ಚರ್ಯ!
~

ಮದಾಲು ವೇದ ಮಂತ್ರ ಮಾಡಿದ್ದು ನಾವಾದರೂ, ಮದಾಲು ಪುಸ್ತಕ ಪ್ರಿಂಟು ಮಾಡಿದ್ದು ನಾವಲ್ಲಡ.
ವೇದ ಮಂತ್ರಂಗಳಿಂದ ಎಷ್ಟೋ ಸಾವಿರ ಒರಿಶ ಮತ್ತೆ ಹುಟ್ಟಿದ ಪುರ್ಬುಗಳ ಬಯಿಬಲು ಪುಸ್ತಕ ಸುರೂವಿಂಗೇ ಆಯಿದು.
ಅವಕ್ಕೆ ಅಷ್ಟು ದೊಡ್ಡ ಮಹಾಗ್ರಂಥವ ನೆಂಪುಮಡುಗಲೆ ಎಡುಕ್ಕೊಂಡಿತ್ತಿಲ್ಲೆ, ಬರದುಮಡಿಕ್ಕೊಂಡವು – ನಮ್ಮದರ್ಲಿ ಪುಸ್ತಕದ ಅಗತ್ಯವೇ ಇತ್ತಿಲ್ಲೆ.
ಈ ವೈಶಿಷ್ಟ್ಯಪೂರ್ಣ ವಿದ್ಯಾಭ್ಯಾಸದ ವೆವಸ್ತೆಂದಾಗಿ ಬರದು ಮಡುಗುತ್ತ ಪ್ರಶ್ನೆಯೇ ಬಯಿಂದಿಲ್ಲೆ.ಕೈಯಾನಕೈ ದಾಂಟಿ ತಲೆಮಾರುಗಳ ಮೂಲಕ ದಾಂಟಿ ಬಂದು ಮುಟ್ಟಿದ್ದು.
ಆ ಕಾಲಲ್ಲಿ ಭರತಖಂಡಲ್ಲಿ ಚತುರ್ವೇದ ಕಂಟಸ್ತ ಇಪ್ಪವು ಎಷ್ಟೋ ಜೆನ ಇತ್ತಿದ್ದವು. ಹಾಂಗೆ ನೋಡಿರೆ ಪುಸ್ತಕ ಬಂದಮತ್ತೆಯೇ ವೇದ ಕಂಟಸ್ತ ಇಪ್ಪವರ ಸಂಕೆ ಕಮ್ಮಿ ಆದ್ದು – ಹೇಳಿದವು ಬಟ್ಟಮಾವ°.
ಒಳ ಕ್ಷಣುವಿನವು ಉಂಡಿಕ್ಕಿ ಕೈತೊಳವಲೆ ಹೆರಬಂದಿತ್ತಿದ್ದವು..
~

ಅಂತೂ ಪಂಜಚಿಕ್ಕಯ್ಯನ ಮಗ° ಮಂತ್ರ ಕಲಿತ್ತಾ ಇದ್ದ, ಬಾರೀ ಕೊಶಿಲಿ!
ಅವರ ಮಗ° ಈ ಸರ್ತಿ ಎರಡ್ಣೇ ಒರಿಶಕ್ಕೆ ಅಡ, ರುದ್ರಪಾಟ ಆಯ್ಕೊಂಡು ಇದ್ದಡ.
ಮಾಡಾವಿನ ಹೊಡೇಣ ಗುರುಗೊ ಅಡ, ಬಾರೀ ಚೆಂದಕೆ ಹೇಳಿಕೊಡ್ತವಡ.

ಆಗಲಿ, ಎಲ್ಲ ಮನೆಯ ಮಕ್ಕಳುದೇ ಮಂತ್ರ ಕಲಿಯಲಿ, ಬೇಸಗೆ ರಜೆಲಿ ಹಾಂಗೊಂದು ಸದ್ವಿನಿಯೋಗ ಆಗಲಿ – ತುಂಬಾ ಒಳ್ಳೆದು, ಎಂತ ಹೇಳ್ತಿ?
ಕ್ರಿಕೇಟು ಟ್ರೈನಿಂಗು, ಈಜುಲೆ ಟ್ರೈನಿಂಗು ಹೇಳಿ ಹೊತ್ತು ಕೊಲ್ಲುದರ ಬದಲು ನಾವೇ ಕಲಿಯೆಕ್ಕಾದ ನಮ್ಮ ಮಂತ್ರಂಗಳ ಒಳುಶಿ ಬೆಳೆಶಿರೆ ಎಷ್ಟು ಒಳ್ಳೆದು! ಅಲ್ಲದೋ?

ಒಂದೊಪ್ಪ: ಸಾವಿರಾರು ಒರಿಶಂದ ಬಿದಿಗೆ ರಟ್ಟೆ ಸಂತೆಯೇ ಮಂತ್ರಂಗಳ ಒಳುಶಿದ್ದು. ಇನ್ನು ಸಾವಿರ ಒರಿಶಲ್ಲಿ ಮಂತ್ರಂಗಳೇ ಸಂತೆಗೆ ಎತ್ತುಗೋ ಹೇಳಿ ಒಂದು ಕನುಪ್ಯೂಸು ಬಪ್ಪದು ಹೇಳಿ ರಾಮಮಾವ° ಹೇಳಿದವು!

ಒಪ್ಪಣ್ಣ

   

You may also like...

19 Responses

  1. ಅಮ್ಮ says:

    laikaidu oppanno…mastru mavana sanna maga koteli vasantha veda pata shaleli kalthadu nempathu.
    elladarottinge idarannu kaliyekkappa.upanayana aada mele maneli mantra bappa ajjandru iddare pulliyakkoge heli kodtavu.
    alladre vasantha veda pata shalage kalusuttavu….
    astadaru kaltu mantra barali heli……..

  2. ಪೆರಡಾಲ ಉದನೇಶ್ವರ ದೇವಸ್ಥಾನಲ್ಲೂ ಕಳೆದ ಸುಮಾರು ವರ್ಷಂದ ವಸಂತ ವೇದ ಪಾಠ ಶಾಲೆ ನಡೆತ್ತಾ ಇದ್ದು. ಶ್ರೀ. ಸತ್ಯೇಶ್ವರ ಭಟ್ರ ಸಮರ್ಥ ನಿರ್ದೇಶನಲ್ಲಿ ಹಾಗು ಗುರುತ್ವಲ್ಲಿ ಯಶಸ್ವಿಯಾಗಿ ನಡೆತ್ತಾ ಇದ್ದು . ಎಂಗೋ ಎಲ್ಲ ಕಲಿವಾಗ ಮದ್ಯಾನ ಊಟದ ವ್ಯವಸ್ಥೆಗೆ ಒಂದೊಂದು ಕುಡ್ತೆ ಅಕ್ಕಿ +೨೫ ಪೈಸೆ ಕೊಡಲೇ ಇಟ್ಟು. ಈಗ ಅದೆಲ್ಲ ಹೋಗಿ ಶ್ರೀಮಠದ ವತಿಂದ ಊಟದ ವ್ಯವಸ್ಥೆ ನಡೆತ್ತು .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *