ಬಜೆ ನಕ್ಕಿದ್ದು ಸಾಲದ್ದೆ ಬಜೆಟ್ಟು ಹೀಂಗಾದ್ಸೋ?

ಕಳುದ ವಾರಂದ ಓಟಿನ ಗಲಾಟೆಲಿ ಇದ್ದತ್ತು ನಮ್ಮ ನೆರೆಕರೆ. ನವಗೆ ಓಟು ಹಾಕಲೆ ಇಲ್ಲದ್ದರೂ, ಓಟಿನ ಶುದ್ದಿ ಕೇಳುಲೆ ಇದ್ದತ್ತು ಅಪ್ಪೋ.
ರಂಗಮಾವನ ಮನೆಲಿ ಶುದ್ದಿ ನೋಡಿಗೊಂಡೇ ಇದ್ದಿದ್ದವು ಟೀವಿಲಿ. ಶಾಂಬಾವ ಮನೆಲಿದ್ದರಂತೂ ಮೂರು ಹೊತ್ತೂ ಅದೇ.
ಅಂತೂ ಮೊನ್ನೆ ಓಟು ಮುಗಾತು, ರಿಸಳ್ಟು ಬಂತು, ಕೆಲವು ದಿಕ್ಕೆ ಸರ್ಕಾರವೂ ಆತು.

ಬೇರೆ ರಾಜ್ಯದ ಬಗ್ಗೆ ತಲೆಬೆಶಿ ಮಾಡುವಾಗಳೇ, ನಿನ್ನೆಲ್ಲ ಮೊನ್ನೆ ಕರ್ನಾಟಕ ರಾಜ್ಯದ ಶುದ್ದಿಯೂ ಬಂತು.
ಅದೆಂತರ? ಬಜೆಟ್ಟು!!
~
ಅಪ್ಪು, ಮೊನ್ನೆ ಕರ್ನಾಟಕ ರಾಜ್ಯದ ಮುಂಗಡ ಪತ್ರ ಬಜೆಟ್ಟು ಮಂಡನೆ ನೆಡದತ್ತು. ಈ ಮೊದಲು ಹಣಕಾಸು ಮಂತ್ರಿ ಆಗಿದ್ದು, ಮತ್ತೆ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಹನ್ನೆರಡನೇ ಸರ್ತಿ ಬಜೆಟ್ಟು ಓದಿತ್ತಾಡ.
ಹನ್ನೊಂದು ಸರ್ತಿ ನೋಡಿದ ಅನುಭವಲ್ಲಿ ರಂಗಮಾವ ಅಂದೇ ಹೇಳಿತ್ತಿದ್ದವು, ಎಂತೂ ಹೊದುಂಕುಳು ಸಿಕ್ಕ – ಹೇದು.
ನೋಡಿಗೊಂಡು ಹೋದ ಹಾಂಗೇ – ಅದೇ ಆತು.
~
ಆಚೊರಿಶ ಶಾದಿಭಾಗ್ಯ – ಹೇದು ಒಂದು ಸ್ಕೀಮು ಮಾಡಿದ್ಸು ಗೊಂತಿದ್ದೋ. ಸಾಯ್ಬಂಗೊ ಮದುವೆಗೆ ಶಾದಿ ಹೇಳುಸ್ಸು. ಹಾಂಗೆ, ಸಾಯ್ಬಂಗೊ / ಬ್ಯಾರಿಗೊಕ್ಕೆ ಒಟ್ಟಾಗಿ ಅಲ್ಪಸಂಖ್ಯಾತರಿಂಗೆ (ಪ್ರತಿ) ಮದುವೆಗೆ ಧನಸಹಾಯ – ಐವತ್ತು ಸಾವಿರದ ಹಾಂಗೆ.
ಹಾಂಗಾರೆ, ಬಹುಸಂಖ್ಯಾತರ ಮದುವೆಗೆ ಎಂತೂ ಇಲ್ಲೆಯೋ – ಕೇಳಿದವು ಹಲವಾರು ಜೆನಂಗೊ. ಎಂತದೂ ಇದ್ದತ್ತಿಲ್ಲೆ.

ಬಜೆಟ್ಟು ಸುರು ಅಪ್ಪಗಾಳೇ ಜಾತಿ ವಿಂಗಡಣೆ ಕಾಂಬಲೆ ಸುರು ಆತು. ಓದಿ ಓದಿಗೊಂಡು ಹೋದ ಹಾಂಗೇ ಹೆಚ್ಚೆಚ್ಚೇ ಆತು.
ಈಗ, ಅದೇ ಶಾದಿ ಭಾಗ್ಯದ ರೀತಿಯ ಹಲವಾರು ಯೋಜನೆಗೊ ಸುರು ಆತು.

ಅಲ್ಪಸಂಖ್ಯಾತರಿಂಗೆ ೨೦೦೦ ಕೋಟಿ

ಹಜ್ ಭವನಕ್ಕೆ ಹತ್ತು ಕೋಟಿ;

ತಾಲೂಕು ಕೇಂದ್ರಂಗಳಲ್ಲಿ ಶಾದಿ ಮಹಲ್!

ಗಲ್ಫ್ ದೇಶಂಗಳಿಂದ ಹಿಂದಿರುಗಿದ ನಿರುದ್ಯೋಗಿ ಜೆನಂಗೊಕ್ಕೆ ಸಹಾಯಧನ!
ಮಾಂಸ ವ್ಯಾಪಾರಿಗೊಕ್ಕೆ ಒಂದೂಕಾಲು ಲಕ್ಷ ರುಪಾಯಿ ಸಹಾಯಧನ!!

~

ಇದರ್ಲಿ ಹೇಳ್ತರೆ ಹಲವಾರು ದೋಷಂಗೊ ಇದ್ದು. ಮಾಂಸ ಉದ್ಯಮಕ್ಕೆ ಅಷ್ಟೂ ಪ್ರೋತ್ಸಾಹ ಬೇಕೋ? – ಹೇದು ಎಷ್ಟೋ ಗೋ ಭ್ಹಕ್ತರು ಕೇಳುವ ಹಾಂಗಿದ್ದು.
ಆದರೆ, ಎಲ್ಲದಕ್ಕಿಂತ ಮೊದಲಾಗಿ ನಾವು ಗಮನುಸೆಕ್ಕಾದ್ದು- ಈಗ ಇಪ್ಪದು ಕನ್ನಡಿಗರ ಸರ್ಕಾರವೋ, ಅಲ್ಪಸಂಖ್ಯಾತರ ಸರ್ಕಾರವೋ – ಹೇದು.

ಎಲ್ಲಾ ಯೋಜನೆಗಳಲ್ಲೂ ಸಮಾಜಕ್ಕೆ ಬರೆ.
ನೀನು ಬೇರೆ, ಆನು ಬೇರೆ ಹೇಳುವ ಹಾಂಗೆ ಮಾಡ್ತ ಏರ್ಪಾಡು.

ನಿರುದ್ಯೋಗಿ ಅಲ್ಪಸಂಖ್ಯಾತರಿಂಗೆ ಮಾಂತ್ರ ಸಹಾಯಧನ?
ಹಾಂಗಾರೆ ಪಾಪದೋನಿಂಗೆ ಇಲ್ಲೆಯೋ?

ಅಹಿಂದ ವಿಧವೆಗೆ ಧನ ಸಹಾಯ ಆಡ.
ಹಾಂಗಾರೆ ಬಾಕಿದ್ದೋರು ಎಂತ ಮಾಡಿದ್ದವು?
~
ಜಾತ್ಯಾತೀತ ಸರ್ಕಾರ ಹೇದು ಬಾಯಿಲಿ ಹೇಳಿದರೆ ಸಾಲ ಅಲ್ಲದೋ? ಕಾರ್ಯಲ್ಲೂ ಕಾಣೆಡದೋ?
ಬಜೆ ನಕ್ಕಿ ಸಂಸ್ಕಾರ ಬಂದೋರು ಚುನಾಯಿತರಾಗಿದ್ದರೆ ಹೀಂಗೆ ಆವುತಿತಿಲ್ಲೆ. ಬಜೆ ನಕ್ಕದ್ದ ನಾಲಗೆಲೇ ಹೀಂಗೆಲ್ಲ ಬಕ್ಕಷ್ಟೇ – ಹೇದು ರಂಗಮಾವನ ಅನಿಸಿಕೆ.
~

ಒಂದೊಪ್ಪ: ಬಜೆಟ್ಟು ಹೇದರೆ ಇಡಿ ರಾಜ್ಯಕ್ಕೆ. ಒಂದು ನಿರ್ದಿಷ್ಟ ವರ್ಗಕ್ಕೆ ಅಲ್ಲ.

ಒಪ್ಪಣ್ಣ

   

You may also like...

1 Response

  1. ಗೋಪಾಲ ಬೊಳುಂಬು says:

    ಪೋಕಾಲಲ್ಲಿ ಕಡೇಣ ಬಜೆಟ್ಟು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *