Oppanna.com

ಚಳಿಯ ಧನುರ್ಮಾಸಲ್ಲಿ ಚಂಪಾ ಶಷ್ಠಿಯ ಉಪವಾಸ..!

ಬರದೋರು :   ಒಪ್ಪಣ್ಣ    on   18/12/2015    4 ಒಪ್ಪಂಗೊ

ಮಾಷ್ಟ್ರುಮಾವನ ಮಗಳ ಮದುವೆ ಬಚ್ಚಲು ತಣಿವದ್ದೇ – ಉಶಾರು ತಪ್ಪಿತ್ತು ಒಂದರಿ. ಬಚ್ಚಲು ಬಿರಿವಗ ಸುರು ಆದ ಜ್ವರ ಈಗಳೂ ಇದ್ದು ಮೈಲಿ. ಮದಲೇ ಚಳಿ, ಇನ್ನು ಅದರ ಮೇಗಂದ ಜ್ವರದ ಚಳಿ – ಕೇಳೇಕೋ! ಕನಿಷ್ಠ ಮೂರು ಕಂಬುಳಿ – ಕಂತುವ ಕಂಬುಳಿ – ಇಲ್ಲದ್ದೆ ನಾಟುತ್ತೇ ಇಲ್ಲೆ- ಹೇದು ಆಯಿದು.ಬಬ್ಬು ಮಾವನ ಕೈಂದ ಕೆಂಪಿನ ಒಂದು ಮಾತ್ರೆಯೂ, ನೀಲಿಯ ಒಂದು ಮಾತ್ರೆಯೂ ತೆಕ್ಕೊಂಡು ಬಯಿಂದೆ. ಮಾತ್ರೆಯಷ್ಟು ಬೇಗ ಜ್ವರ ಕಮ್ಮಿ ಆವುತ್ತಿಲ್ಲೆ ಇದಾ. ಜ್ವರ ಬಿಡುಗು, ಇಂದು ನಾಳೆಲಿ. ಚಳಿ ಬಿಡುಗೋ? ಚಳಿ ಬಿಡೆಕ್ಕಾರೆ ಇನ್ನು ಒಯಿಶಾಕವೇ ಬರೆಕ್ಕಷ್ಟೆ.ಅದಿರಳಿ.
~
ಸುಬ್ರಮಣ್ಯದ ಒರಿಶಾವಧಿ ಜಾತ್ರೆ – ಶಷ್ಠಿ, ನವಗೆಲ್ಲೋರಿಂಗೂ ಗೊಂತಿಪ್ಪದೇ.
ಸರೀ ಚಳಿಗಾಲದ ನೆಡೂಕೆ ಬಪ್ಪ ಈ ಚಳಿಯೂರಿನ ಹಬ್ಬ – ಆ ಒಂದಿನ ಉಪವಾಸವನ್ನೂ ಮಾಡ್ಸಿ ಜೆನರ ನಿಜವಾದ ಭಕ್ತಿಯ ಕಂಡುಗೊಂಡು ಹೋವುತ್ತು. ಆಚರಣೆಗಳ ಬಗ್ಗೆ, ಷಷ್ಟಿಯ ಬಗ್ಗೆ ನಾವೊಂದರಿ ಸೂಕ್ಷ್ಮವಾಗಿ ಬೈಲಿಲಿ ಮಾತಾಡಿದ್ದು ಇದಾ.ತಾರಕಾಸುರ ಹೇಳ್ತ ಮಹಾ ರಾಕ್ಷಸ ದೇವರಿಂಗೆ, ಮುನಿಗೊಕ್ಕೆ, ವೇದಕ್ಕೆ ತೊಂದರೆ ಕೊಡ್ಳೆ ಸುರು ಮಾಡಿದನಾಡ. ಹಾಂಗೆ ಉಪದ್ರ ಕೊಡ್ಲೆ ಒಂದು ಕಾರಣವೂ ಇದ್ದು- ‘ಶಿವನ ಮಗನಿಂದಾಗಿ ನಿನಗೆ ಮರಣ’ – ಹೇದು ಒಂದು ಬ್ರಹ್ಮವಾಣಿ ಆ ರಕ್ಕಸಂಗೆ ಗೊಂತಾಗಿತ್ತಾಡ. ಶಿವ° ಅಂತೂ ತಪಸ್ಸಿಲಿದ್ದ°, ಅವನಿಂದಾಗಿ ಮಗ°, ಅವ° ಬೆಳದು ದೊಡ್ಡಾಗಿ ಬರೆಡದೋ – ಅಷ್ಟು ಸಮಯ ಆನು ಕಾರ್ಬಾರು ಮಾಡುವೆ – ಹೇದು ತಾರಕಾಸುರ ಧೈರ್ಯಲ್ಲಿ ಇದ್ದಿದ್ದ.ಆದರೆ, ಕೃತ್ತಿಕೆ ಹೇಳ್ತ ಹೆಸರಿನ ಮಾತೆ ಶಿವನಿಂದ ಒಂದು ಮಗು ಪಡದತ್ತಾಡ. ಪಾರ್ವತಿಯೇ ಆ ಮಗುವಿನ ಆರೈಕೆ ಮಾಡಿ ಚೆಂದಲ್ಲಿ ಬೆಳೆಶಿದ್ದಾಡ. ಕೃತ್ತಿಕೆಯ ಮಗ ಆದ್ದರಿಂದ ಕಾರ್ತಿಕೇಯ ಹೇಳಿಯೂ, ಇಬ್ರು ಅಮ್ಮನ ಪಡದ ಕಾರಣ ದ್ವೈಮಾತುರ – ಹೇಳಿಯೂ ಹೆಸರಾತಡ ಅವಂಗೆ.
ಆ ಮಾಣಿ ಬೆಳವನ್ನಾರ ಪುರುಸೊತ್ತೂ ತೆಕ್ಕೊಂಡಿದನಿಲ್ಲೆ, ಬಹು ಸಣ್ಣ ಇಪ್ಪಾಗಳೇ – ವಟುವಿನ ರೂಪಲ್ಲೇ ಅಗಾಧ ಶಕ್ತಿವಂತನಾಗಿ ತಾರಕಾಸುರನ ವಧೆ ಮಾಡಿದನಾಡ.
ಆ ಹೆಮ್ಮೆಲಿ ದೇವೇಂದ್ರ ಸ್ವತಃ ಬಂದು ದೇವಸೇನಾ ಹೇಳ್ತ ಕೂಸಿನ ಕೊಟ್ಟು ಮದುವೆ ಆದನಾಡ.
ಆ ಮದುವೆಯ ದಿನವೇ ಶಷ್ಠಿ – ಹೇದು ನಂಬಿಕೆ.ಈ ಚಂಪಾಷಷ್ಠಿಯ ದಿನ ಸುಬ್ರಹ್ಮಣ್ಯ ದೇವಸ್ಥಾನಂಗಳಲ್ಲಿ ಎಲ್ಲವೂ ಗೌಜಿಯೇ ಗೌಜಿ.
ಒರಿಶಾವಧಿ ಜಾತ್ರೆ ಬತ್ತಿದಾ. ಕೂಡ್ಳು, ಕಾಟುಕುಕ್ಕೆ, ಕುಕ್ಕೆ, ಕಾರ್ಪಾಡಿ – ಹೀಂಗಿರ್ಸ ಹತ್ತೂ ಹಲವು ದೇವಸ್ಥಾನಂಗಳಲ್ಲಿ ಷಷ್ಠಿಗೆ ಜಾತ್ರೆ.
~
ಎಲ್ಲಾ ಜಾತ್ರೆಗಳಲ್ಲೂ ಸುದ್ದಿ ಅಪ್ಪದು ಕುಕ್ಕೆ ಸುಬ್ರಮಣ್ಯ ದೇವರದ್ದೇ.
ಏಕೇದರೆ – ಅಲ್ಲಿಪ್ಪ ಒಂದು ಪಾರಂಪರಿಕ ನಂಬಿಕೆ – “ಮಡೆಸ್ನಾನ” – ದ ಬಗ್ಗೆ.
ಬ್ರಾಹ್ಮಣ ಭೋಜನ ಆದ ಮತ್ತೆ ಆ ಜಾಗೆಲಿ ಉರುಳಿ, ಎದುರಿಪ್ಪ ದರ್ಪಣ ತೀರ್ಥಲ್ಲಿ ಮಿಂದು ದೇವರ ಪೂಜೆ ಪ್ರಸಾದ ತೆಕ್ಕೊಂಡ್ರೆ ಚರ್ಮರೋಗಂಗೊ ಪರಿಹಾರ ಆವುತ್ತು – ಹೇದು ಆ ಊರಿನ ಸಂಪ್ರದಾಯ / ನಂಬಿಕೆ ಒಂದು ಬೆಳದು ಬಯಿಂದು.
ನಂಬುಸ್ಸರ ಪ್ರಶ್ನೆ ಮಾಡ್ಳಾಗ – ಪ್ರಶ್ನೆ ಮಾಡ್ತರ ನಂಬುಲಾಗ – ಹೇದು ಶಂಬಜ್ಜ° ಮದಲಿಂಗೆ ಹೇಳುಗು. ಇದೆಲ್ಲ ನಂಬಿಕೆಯ ಪ್ರಶ್ನೆ.
ಈ ನಂಬಿಕೆ ಹೊಂದಿದೋರು ಎಲ್ಲೋರುದೇ ಇದ್ದವು, ಮಲೆಕ್ಕುಡಿಯರಿಂದ ಹಿಡುದು, ಬಟ್ಟಕ್ಕಳ ಒರೆಂಗೆ – ಎಲ್ಲೋರುದೇ.
ಅಲ್ಯಾಣ ಹಂತಿ ಭೋಜನ ಸುರು ಅಪ್ಪಗಳೇ ಮಿಂದು ಶುದ್ಧಲ್ಲಿ ಬಂದು ಚೆಂಡಿ ಹರ್ಕು ಸುತ್ತಿಗೊಂಡು ಕೂರುಗು ಭಕ್ತಾದಿಗೊ. ಮಜ್ಜಿಗೆ ಬಳುಸೆಂಡು ಬರೆಕ್ಕಾರೇ ಅವಕ್ಕೆ ಅಂಬೆರ್ಪು ಬಕ್ಕು.
ಹಂತಿಲಿ ಮಜ್ಜಿಗೆ ಉಂಡು ಏಳುದು ಮದಲೋ – ಉರುಳು ಸೇವೆ ಸುರು ಅಪ್ಪದು ಮೊದಲೋ – ಹೇದು ಕಾದುಗೊಂಡು ಇರ್ತವು.
ಅಂತೂ ಉರುಳು ಸೇವೆ ಸುರು ಆವುತ್ತು – ಹಂತಿಯ ಮೇಗೆ ಭಕ್ತೀಲಿ ಉರುಳಿಗೊಂಡು ಹೋವುತ್ತವು.
ಪ್ರಸಾದ ಭೋಜನದ ಮೇಗೆ ಉರುಳಿಗೊಂಡು ಹೋಗಿ ಹೋಗಿ ಸೀತ ಓ ಆ ತೋಡಿಂಗೆ ಹೋವುತ್ತವು.
ಅಲ್ಲಿ ಮಿಂದು ಮತ್ತೊಂದರಿ ಶುಭ್ರ ಆಗಿ ಸೀತ ದೇವರ ಗುಡಿಯ ಒಳಾಂಗೆ.
ಅಲ್ಲಿ ದೇವರ ಕಂಡು ಪ್ರಸಾದ ತೆಕ್ಕೊಂಡಪ್ಪದ್ದೇ – ಅವು ಮನಸ್ಸಿಲಿ ಸಂಕಲ್ಪಿತ ಕಾರ್ಯಂಗೊ ಸಿದ್ಧಿ ಆವುತ್ತು, ವಿಶೇಷವಾಗಿ ಚರ್ಮರೋಗಂಗಳೂ, ವಾತವೇ ಇತ್ಯಾದಿ ಗೆಂಟು ಬೇನೆಗಳೂ ಕಮ್ಮಿ ಆವುತ್ತು – ಹೇಳ್ತದು ನಂಬಿಕೆ.
~
ಸತ್ಯ ಏನೇ ಇರಳಿ. ನಮ್ಮ ನಂಬಿಕೆಗೊ ಇನ್ನೊಬ್ಬಂಗೆ ತೊಂದರೆ ಆವುತ್ತಿಲ್ಲೆ ಹೇದು ಆದರೆ ಮುಂದುವರುಸುದಕ್ಕೆ ಏನೂ ಸಮಸ್ಯೆ ಇಪ್ಪಲಾಗ ಅಪ್ಪೋ.
ಆದರೆ, ಊರ ರಾಜಕೀಯಂಗೊ ಸೇರಿಗೊಂಡು – ಇದು ಬ್ರಾಮ್ಮರು ಒಳುದೋರ ತೊಳಿವಲೆ ಮಾಡಿದ ಕ್ರಮ – ಹೇದು ಬೊಬ್ಬೆ ಹೊಡದವಾಡ.
ಎತಾರ್ತಕ್ಕೆ – ಬ್ರಾಮ್ಮರ ಹಂತಿ ಹೇಳುದಷ್ಟೇ ಸಂಗತಿ ಹೊರತು, ಬ್ರಾಮ್ಮರು ಬಂದು – ಇದಾ, ಎಂಗೊ ಉಂಡಲ್ಲಿ ಹೊರಳಿ – ಹೇಳಿದ್ದವಿಲ್ಲೆ.
ಹಾಂಗೆ ನೋಡಿರೆ, ಉರುಳು ಸೇವೆ ಮಾಡ್ತದರ್ಲಿ ಬ್ರಾಮ್ಮರೂ ತುಂಬ ಸಂಖ್ಯೆಲಿ ಇದ್ದವು.
ಇರಳಿ, ಇದೆಲ್ಲ ಗೋರ್ಮೆಂಟಿಂಗೆ ಅರ್ತ ಆಗ ಇದಾ.
ಅಂತೂ ಇಂತೂ ಮಡೆಸ್ನಾನ ರದ್ದಾತು.
ಈಗ ಎಡೆಸ್ನಾನ – ಹೇಳ್ತ ಹೊಸ ವಿಧಾನ ತಂದು ಮಡಗಿದವು.
ದೇವರ ಪ್ರಸಾದವ ಹಾಂಗೇ ತಂದು ಬಾಳೆಲೆಲಿ ಮಡಗಿ, ಅದರ ಮೇಗೆ ಉರುಳುದು.
ಬ್ರಾಹ್ಮಣ ಭೋಜನ ಅಲ್ಲ, ದೇವ ಭೋಜನವೇ ಆದ ಕಾರಣ ಆಸ್ತಿಕರಿಂಗೂ ತೊಂದರೆ ಆಯಿದಿಲ್ಲೆ.
ಕಳುದ ಎರಡು ಒರಿಶಂದ ಈ ಕ್ರಮ ನಿರಾತಂಕವಾಗಿ ನೆಡೆತ್ತಾ ಇದ್ದು.
ಇರಳಿ, ಕ್ರಮಂಗೊ ಬದಲಿ ಹೊಸದಾಗಿ, ಹೊಸತ್ತು ಹಳತ್ತಾಗಿ – ಈ ಬದಲಾವಣೆಗಳೇ ನಮ್ಮ ಜೀವನದ ಚಕ್ರಂಗೊ ಇದಾ.
~

ಧನುಷೀ ಧನುರಾಕೃತಿಃ – ಧನುರ್ಮಾಸದ ಚಳಿಗಾಲಲ್ಲಿ ಮನುಷ್ಯರೂ ಧನುಸ್ಸಿನ ಹಾಂಗೆ ಉರುಟಾವುತ್ತವು – ಹೇದು ಜೋಯಿಶಪ್ಪಚ್ಚಿ ಹೇಳುಗು.
ಚಂಪಾ ಷಷ್ಟಿ ಬಪ್ಪದು ಚಳಿಗಾಲಲ್ಲಿ ಇದಾ.
ಅದರ ಮೇಗಂದ ಸ್ರಸ್ಟಿ ಉಪವಾಸವೂ ಇಪ್ಪ ಕಾರಣ – ಆಸ್ತಿಕತೆಯ ನಿಜವಾದ ಪರೀಕ್ಷೇ ಚಂಪಾ ಷಷ್ಠಿಯ ದಿನ ಆವುತ್ತು – ಹೇದರೆ ಸಂಶಯವೇ ಇಲ್ಲೆ.
ಎಂತ ಹೇಳ್ತಿ?

~
ಒಂದೊಪ್ಪ:
ಚಂಪ ಶಷ್ಟಿಗೆ ಸೊಂಪಾದ ಭಕ್ತಿ ಇರಳಿ.

4 thoughts on “ಚಳಿಯ ಧನುರ್ಮಾಸಲ್ಲಿ ಚಂಪಾ ಶಷ್ಠಿಯ ಉಪವಾಸ..!

  1. ಜ್ವರಂದಾಗಿ ಚಳಿಯಪ್ಪದು ಬೇಡ ನವಗೆ. ಧನುಮಾಸದ ನಿಜವಾದ ಚಳಿ ಕಚಗುಳಿ ಕೊಡ್ಳಿ ಅಲ್ಲದೊ ? ಓಹ್, ಚಳಿಗಾಲಲ್ಲಿ ಉದಿಯಪ್ಪಗ ಅಡಕ್ಕೆ ಜಾಲಿಲ್ಲಿ ಕೂದು ಬೆಶಿಲಿಂಗೆ ಬೆಶಿಯಾವ್ತ ಕೊಶಿ ಎಂದೆಂದಿಂಗು ಮರೆಯ. ಮಡೆಸ್ನಾನಕ್ಕುದೆ ರಾಜಕೀಯ ತಲೆ ಹಾಕಿದ್ದು ಬೇಜಾರಿನ ವಿಷಯ.

  2. ಒಪ್ಪಣ್ಣಾ ,
    ಇತ್ತೀಚಿಗೆ ಓದಿದ ಕರಣಂ ಪವನ ಪ್ರಸಾದರ “ಕರ್ಮ” ಹೇಳ್ತ ಕಾದ೦ಬರಿಲಿ ಲೇಖಕರು ಹೇಳಿದ ಕೆಲವು ಮಾತುಗೋ ಮತ್ತೆ ನೆ೦ಪಾವುತ್ತು ” ಶ್ರದ್ಧೆ ಎಂದರೆ ಅಚಲವಾದದ್ದು, ನಂಬಿಕೆ ಚಂಚಲವಾದದ್ದು. ಧರ್ಮದ ಅಸ್ತಿತ್ವ ಮತ್ತು ಆದರ್ಶಕ್ಕೆ ಶ್ರದ್ಧೆ ಮುಖ್ಯವೇ ಹೊರತು ನಂಬಿಕೆಯಲ್ಲ. ನಂಬಿಕೆಗಳು ಬದಲಾಗುತ್ತವೇ ಶ್ರದ್ಧೆ ಬದಲಾಗಲಾರದು. ಹಿಂದೂ ಧರ್ಮ ಶ್ರದ್ಧೆಯ ಮೇಲೆ ನಿಂತಿದೆ ಅದು ಕೇವಲ ನಂಬಿಕೆಯ ಮೇಲೆ ನಿಂತಿದ್ದರೆ ಎಂದೋ ಅಳಿಸಿಹೋಗುತ್ತಿತ್ತು, ಬೇರೆ ನಾಗರಿಕ ಜೀವನ ಶೈಲಿಯ ರೀತಿ”.
    ಎಲ್ಲಾ ಕಾಲಕ್ಕೂ ಅನ್ವಯ ಅಪ್ಪ ಸತ್ಯ ಹೇಳಿ ತಿಳ್ಕೊ೦ಡೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×