Oppanna.com

ಬೇಳೆ ಬೇಷಿದ ಅಟ್ಟುಂಬೊಳ ನೆಂಪಾದ ಚರ್ನೋಬೈಲು..

ಬರದೋರು :   ಒಪ್ಪಣ್ಣ    on   20/02/2015    3 ಒಪ್ಪಂಗೊ

ಪುತ್ತೂರು ಭಾವನ ಎಜಮಾಂತಿಯ ಕೋಡಿ ಮಾಡಿ ಅಪ್ಪನ ಮನೆಗೆ ಕಳುಸಿದ ಮತ್ತೆ ಪುತ್ತೂರು ಬಾವಂದು ಬ್ರಹ್ಮಚರ್ಯ ಜೀವನ.

ಜೆನಿವಾರ ಎರಡು ಆದರೂ, ಅಡಿಗೆ ಒಬ್ಬಂಗೇ ಇದಾ.

ಉದಿಯಪ್ಪಗ ತೂಷ್ಣಿಗೆ ತಿಂಡಿ ತಿಂದು ಬಿಡಾರಂದ ಆಪೀಸಿಂಗೆ ಹೋದರೆ, ಮಜ್ಜಾನದ್ದು ಆಪೀಸಿಲೇ ಆವುತ್ತು.

ಮತ್ತೆ ಒಪಾಸು ಬಪ್ಪದು ಹೊತ್ತೋಪಗಾಣದ್ದು ಕರ್ಕು-ಮುರ್ಕು ಆಪೀಸಿಲೇ ತಿಂದಿಕ್ಕಿ.

ಇರುಳಿಂಗೆ ಎಂತಾರು ಅಡಿಗೆ ಮಾಡಿಗೊಂಡ್ರೆ ಮುಗಾತು.

ಹಾಂಗಾಗಿ, ಒಬ್ಬನೇ ಆದರೂ – ಅಡಿಗೆ ಮಟ್ಟಿಂಗೆ ಸಮಸ್ಯೆ ಆಯಿದಿಲ್ಲೆ ಇಷ್ಟನ್ನಾರ.

ಇಷ್ಟನ್ನಾರ ಸಮಸ್ಯೆ ಆಗದ್ದದು ಓ ಮೊನ್ನೆ ಒಪ್ಪಣ್ಣ ಹೋಗಿಪ್ಪಾಗ ಆಯೇಕೋ!!

ಎಂತಾತು ಹಾಂಗಾರೆ?

~

ಮೊನ್ನೆ ಕೊಳಚ್ಚಿಪ್ಪು ಬಾವ° ಇಂಗ್ಳೇಂಡು ಚೋಕ್ಳೇಟು ಸಿಕ್ಕೇಕಾರೆ ಈಗಳೇ ಪುತ್ತೂರು ಭಾವನ ಮನೆಗೆ ಬರೆಕ್ಕು – ಹೇದು ತಾಕೀತು ಮಾಡಿತ್ತಿದ್ದ°. ಹೋಗದ್ದೆ ನಿಮುರ್ತಿ ಇಲ್ಲೆ, ಹಾಂಗೆ ಹೋದ್ಸು.

ಹೇಂಗೂ ಪೇಟಗೆ ಹೋಪದು ಇದ್ದತ್ತು, ಒಟ್ಟಿಂಗೆ ಈ ಚೋಕ್ಳೇಟುಗಳೂ ಚೀಪೆ ಇದ್ದೋ ನೋಡಿದ ಹಾಂಗಾತು ಹೇದು ಎತ್ತಿದ್ದು ನಾವು ಪುತ್ತೂರು ಭಾವನ ಮನೆಗೆ.

ಒಪ್ಪಣ್ಣ ಎತ್ತುವಾಗ ಕಟ್ಟ ಬಿಡುಸುವ ಮೂರ್ತ ಕಳುದ್ದು. ಕೊಳಚ್ಚಿಪ್ಪು ಬಾವ°, ಪುತ್ತೂರು ಬಾವ° – ಇಬ್ರುದೇ ಅದಾಗಲೇ ಚೋಕ್ಳೇಟು ಕಟ್ಟ ಒಡದು ತಿಂಬಲೆ ಸುರು ಮಾಡಿದ್ದವು, ನಾವುದೇ ಎತಾನುಶಕ್ತಿ ಕೈ ಕೂಡಿಗೊಂಡತ್ತು.

ಒಂದರಿಯಾಣ ಚೋಕ್ಳೇಟು ಸಮಾರಾಧನೆ ಆದಪ್ಪದ್ದೇ, ಪುತ್ತೂರು ಭಾವ° “ಅಡಿಗೆ ಕೋಣೆಗೆ ಕ್ಲೀನು ಮಾಡಿ ಬತ್ತೆ” – ಹೇದು ಎದ್ದಿಕ್ಕಿ ಹೋದ°.

ಹ್ಮ್? ಎಂತಾತು ಕೇಟೆ.

“ಚೆರ್ನೋಬೈಲಿಲಿ ಆದ ಹಾಂಗೆ ಆಯಿದು ನಮ್ಮ ಅಡಿಗೆ ಕೋಣೆಲಿ” – ಹೇದ ಪುತ್ತೂರು ಭಾವ°.

ಕೊಳಚ್ಚಿಪ್ಪು ಬಾವಂಗೆ ಫೋಕ್ಕನೆ ನೆಗೆ ಬಂತು.

ಒಪ್ಪಣ್ಣಂಗೂ – ವಿಷಯ ಅರ್ಥ ಆಗಿದ್ದರೆ ಬತ್ತಿತೋ ಏನೋ

ಅವನ ಹಿಂದೆಯೇ ಹೋದೆ ಅಡಿಗೆ ಕೋಣೆಗೆ. ಅಟ್ಟುಂಬೊಳ ಪೂರಾ ಚೆಲ್ಲಾಪಿಲ್ಲಿ. ಕೊತ್ತಂಬರಿ-ಜೀರಕ್ಕಿ ಕರಡಿಗೆಗೊ, ಸಾಸಮೆ ಒಗ್ಗರಣೆ ಸೌಟುಗೊ, ಚಮ್ಚ ಗ್ಲಾಸು ಬಟ್ಳು ತಪಲೆ ಚೆರಿಗೆಗೊ – ಎಲ್ಲವುದೇ ತೊಳವಲೆ ಹಾಕಿಂಡು ಇದ್ದು!!!

ನೆಲಕ್ಕವ ಉದ್ದಲೆ ತಯಾರು ಮಾಡಿಗೊಂಡು ಇದ್ದತ್ತು.

ಈಗ ಒಂದು ಶ್ಟೂಲು ಮಡಗಿ ಅದರ ಮೇಗೆ ನಿಂದುಗೊಂಡು ದಳಿ, ಕಿಟುಕಿ, ಬಾಗಿಲ ಕರೆ – ಹೀಂಗಿರ್ಸರ ಉದ್ದುತ್ತಾ ಇದ್ದ° ಪುತ್ತೂರು ಭಾವ°.

ಎಂತಾತು ಮಾರಾಯನೇ ಇದು!!? – ಹೀಂಗುದೇ ಅಪ್ಪಲೆ ಎಂತ ಮಾಡಿದೆ ಬೋಂಬು ಹಾಕಿದೆಯೋ ಅಡಿಗೆ ಕೋಣೆಗೆ – ಕೇಟೆ.

ಈಗಾಣ ನಮುನೆ ಕುಕ್ಕರಿಲಿ ಅಡಿಗೆ ಇದಾ ಪುತ್ತೂರು ಭಾವಂದು. ಹಾಂಗೆ ಅಡಿಗೆ ಮಾಡುವಾಗ ಕುಕ್ಕರಿನ ಬಿಗಿಲು ರಟ್ಟಿದ್ಸು.

ಒಳ ಪೂರ್ತ ಇದ್ದಿದ್ದ ಹಬೆ ಒಂದರಿಯೇ ಪುಸೂಲನೆ ಹೆರ ಬಂತು, ಸುಮಾರು ಹೊತ್ತು ಬಂದುಗೊಂಡೇ ಇದ್ದ ಕಾರಣ ಒಳಾಣ ಬೇಳೆಯ ಪಾಕವೂ ಹೆರ ಬಂತು.

ಇಡೀ ಅಟ್ಟುಂಬೋ ಪೂರ ತೊಗರಿಬೇಳೆಯ ಮಂದ ಮಂದ ಪಸೆ ಹಿಡುದ್ದು.

ಬರೇ ಷ್ಟವ್ ಲಿ ಮಾಂತ್ರ ಅಲ್ಲ, ಮೇಗಂತಾಗಿ ರಟ್ಟಿದ ಹಬೆಂದಾಗಿ ಕಿಟುಕಿ ಬಾಗಿಲು, ದಾರಂದ, ಇಲ್ಲಿ ಮಡಗಿದ ಕರಡಿಗೆಗೊ, ಎಲ್ಲದರ ಮೇಲೂ ಪೈಂಟು ಕೊಟ್ಟ ಹಾಂಗೆ ತೊಗರಿ ಗೊಂಪು ಹಿಡುಕ್ಕೊಂಡು ಇದ್ದು – ಇದಾ ನೋಡು..

ಅಲ್ಲೇ ಮಡಗಿದ್ದ ಒಂದು ಕುಪ್ಪಿಯ ಮೇಗೆ ಚೆಂಡಿ ಬೆರಳು ಜಾರ್ತರ ತೋರ್ಸಿದ° ಕೊಳಚ್ಚಿಪ್ಪು ಬಾವ°.

ಬೋಂಬು ಅಲ್ಲ – ಚರ್ನೋಬೈಲು ಗೊಂತಿಲ್ಲೆಯೋ – ಅಲ್ಲಿ ಆದ ಹಾಂಗೆ ಆದ್ಸು – ಹೇದು ಮತ್ತೊಂದರಿ ಹೇದ ಪುತ್ತೂರು ಭಾವ°.

ಸುರುವಾಣ ಸರ್ತಿ ಉದಾಹರಣೆ ಹೇಳುವಾಗ ಮಾತಾಡಿದ್ದಿಲ್ಲೆ, ಎರಡ್ಣೇ ಸರ್ತಿ ಗೊಂತಿಲ್ಲೆಯೋ ಕೇಳುವಾಗ ಗೊಂತಿಲ್ಲೆ ಹೇಳುಲೆ ನವಗೆಂತ ನಾಮೂಸು – “ಚೆರ್ನೋಬೈಲು ಗೊಂತಿಲ್ಲೆ, ನಮ್ಮ ಬೈಲು ಮಾಂತ್ರ ಗುರ್ತ ಇಪ್ಪದು” – ಹೇದೆ.

ದಾರಂದ, ಕಿಟುಕಿ ಉದ್ದಿಗೊಂಡೇ – ಒಪ್ಪಣ್ಣಂಗೆ ಚರ್ನೋಬೈಲು ಸುದ್ದಿ ಹೇಳ್ತೆ ಅಂಬಗ – ಹೇದು ಸುರುಮಾಡಿದ ಪುತ್ತೂರು ಭಾವ°.

~

ರಶ್ಯಾದ ಉತ್ತರ ಭಾಗಲ್ಲಿ ಚರ್ನೋಬೈಲು ಹೇದು ಒಂದು ಪ್ರದೇ. ಆ ಊರಿಂಗೆ ಬೇಕಾದ ವಿದ್ಯುತ್ ಉತ್ಪಾದನಾ ಘಟಕ ಅಲ್ಲಿ ಇದ್ದದು. ನೀರಿಂದಲೋ, ಗಾಳಿಂದಲೋ ಕರೆಂಟು ಉತ್ಪಾದನೆ ಮಾಡ್ತ ನಮುನೆ ಅಲ್ಲ. ಅದು ನೀರು ನೆರಳಿಲ್ಲದ್ದ ಊರು, ಹಾಂಗಾಗಿ ಅಲ್ಲಿ ಅದೆಲ್ಲ ಸಾಧ್ಯ ಇಲ್ಲೆ ಇದಾ!

ಅಲ್ಲಿ ಏನಿದ್ದರೂ ಅಣು ವಿದ್ಯುತ್ ಸ್ಥಾವರವೇ ಆಯೆಕ್ಕಶ್ಟೆ.

ಹೇಳಿದಾಂಗೆ, ನಮ್ಮ ಊರಿನ ಓ ಆ ಕರೇಲಿ, ಕಾರವಾರಲ್ಲಿ ಒಂದಿದ್ದು – ನಮ್ಮ ಉಂಡೆಮನೆ ಕುಮಾರಪ್ಪಚ್ಚಿ ಅಲ್ಲಿ ಇಂಜಿನಿಯರು ಆಗಿ ಇದ್ದವಿದಾ! ಅದಿರಳಿ – ಹಾಂಗೆ ಚರ್ನೋಬೈಲಿಲಿ ಅಣುವಿದ್ಯುತ್ ಸ್ಥಾವರ ಇದ್ದತ್ತು.

~

ಎಲ್ಲಾ ದಿನವೂ ಅಲ್ಲಿ ಮಾಮೂಲಿನಂತೇ ಕೆಲಸ ಆಗಿಂಡು ಇದ್ದತ್ತು.

ಎಷ್ಟೋ ಅಣುಗೊ ಹೊಟ್ಟಿ, ಅದರ ಬೆಷಿಗೆ ಎಷ್ಟೋ ನೀರು ಹಬೆಯಾಗಿ, ಅದು ದೊಡ್ಡಾ ಟರ್ಬೈನಿನ ತಿರುಗಿಸಿ, ಅಲ್ಲಿಂದ ಎಶ್ಟೋ ಕರೆಂಟು ಬಂದು, ಅದು ಆ ಊರುಗಳ ಬೆಳಗಿಂಡು ಇದ್ದತ್ತು.

ಒಂದು ದಿನ – “ಇದರ ಶಕ್ತಿಯ ಇನ್ನೂ ಹೆಚ್ಚು ಮಾಡುವೊ°’ – ಹೇದು ಆಲೋಚನೆ ಮಾಡಿ, ವಿಕಿರಣದ ಮೂಲವಸ್ತುವಿನ ರಜ ಜೊರಾಗಿ ಹೊತ್ತುಸಲೆ ಹೆರಟವಾಡ. ಎಲ್ಲ ಸುಸೂತ್ರಲ್ಲಿ ಮುಂದೆ ಹೋಗಿದ್ದಾರೆ, ಹೆಚ್ಚು ವಿಕಿರಣದ ಬೆಶಿಗೆ ಹೆಚ್ಚು ನೀರು ಕೊದುದು, ಹೆಚ್ಚು ಆವಿ ಆಗಿ, ಟರ್ಬೈನು ಜೋರು ತಿರುಗಿ, ಹೆಚ್ಚು ಕರೆಂಟು ಬಂದು ಹೆಚ್ಚು ಜಾಗೆಗೆ ಕರೆಂಟು ಬತ್ತಿತು.

ಆದರೆ, ದುರದೃಷ್ಟವಶಾತ್, ಆದ್ದದು ಬೇರೆಯೇ.

ಹೆಚ್ಚು ವಿಕಿರಣ ಬಂತು.

ಆದರೆ, ಆ ಬೆಷಿ ಕಂಡಾಬಟ್ಟೆ ಜಾಸ್ತಿ ಆಗಿ ನೀರಿಂದ ತಣಿಶುಲೆ ಎಡಿಗಾಯಿದಿಲ್ಲೆ!

ತಣುಶುಲೆ ಇಪ್ಪ ವೆವಸ್ತೆಗೂ ಎಡಿಗಾಗ!

ಬೆಶಿ ಏರಿಂಡೇ ಹೋತು.

ಏರಿ ಏರಿ, ಅದರ ಮಡಗಿಂಡು ಇದ್ದ ಕೋಣೆಲಿ ಬೆಶಿ ಗಾಳಿ ಉಂಟಾಂತು.

ಅಷ್ಟೇ ಅಲ್ಲ, ಕಾದು ಕೆಂಫಾತು.

ಕೆಂಪಿಂದಲೂ ಬೆಶಿ ಆಗಿ ಕರಗಿತ್ತು. ಗೋಡೆ ಒಡದತ್ತು.

ತಣಿಶಲೆ ಮಡಗಿದ ನೀರು ಜೊಯಿಂಕನೆ ಈ ವಿಕಿರಣಕ್ಕೆ ತಾಗಿತ್ತು.

ಇಡೀ ಕೋಣೆಯೇ ಗೋಡ ಒಡದು ಬಿರುದತ್ತು.

ಅದಾ – ಒಂದರಿಯೇ ಕುಕ್ಕರಿನ ಬಿಗಿಲು ರಟ್ಟಿದ ಹಾಂಗೆ ಒಡದತ್ತು.

ಯೇವದು ಅತ್ಯಂತ ಅಪಾಯವೋ, ಯೇವದರ ಸೀಸದ ಪೆಟ್ಟಿಗೆಲೇ ಮಡಗಿ ಮುಚ್ಚಿರ್ತವೋ, ಯೇವದರ ಒಂದು ಕ್ಷಣ ನೋಡಿರೆ ಜೀವಿ ಜಂತುಗಳ ಚರ್ಮಕ್ಕೆ ಅಪಾಯ ಇದ್ದೋ – ಅಂತಾದ್ದು ಒಂದರಿಯೇ ಕಟ್ಟೆ ಒಡದು ಪಿಸೀಲನೆ ಕಾರಂಜಿಯ ಹಾಂಗೆ ಹಾರಿತ್ತು.

ಅಸಾಧಾರಣ ಶೆಗ್ತಿ ತುಂಬಿಗೊಂಡ ಆ ಕಾರಂಜಿ ಅದೆಷ್ಟೋ ಎತ್ತರಕ್ಕೆ ಹಾರುವಾಗ ಆ ಅನಿಷ್ಟವ ಇಡೀ ಊರಿಂಗೇ ಎತ್ತಿ ಕೊಟ್ಟತ್ತು – ಹೇದ ಪುತ್ತೂರು ಭಾವ°!

~

ಅಲ್ಲಿಂದ ಹಾರಿದ ಬೂದಿ, ಸಿಮೆಟು, ಇತರ ಹನಿ ವಸ್ತುಗೊ ಎಲ್ಲವುದೇ ಬಾನೆತ್ತರಕ್ಕೆ ಹೋಗಿ, ಒಪಾಸು ಬಂದು ಬಂದು ಬಂದು ಭೂಮಿಯ ಮೇಲ್ಮೈ ಲಿ ಕೂದುಗೊಂಡತ್ತು ಅಲ್ಲದೋ – ಅದೆಲ್ಲವೂ ವಿಕಿರಣದ ವಸ್ತುಗಳೇ!

ಎಲ್ಲವೂ ಅಪಾಯ.

ಪ್ರತಿಯೊಂದರಿಂದಲೂ ಜೀವಿಗಳ ಚರ್ಮ ಸುಡುವ, ಸುಟ್ಟು ಕ್ಯಾನ್ಸರ್ ಬರುಸುವ ಅಪಾಯಕಾರೀ ವಿಕಿರಣಂಗೊ ಇರ್ತು.

ಅದೆಲ್ಲವನ್ನೂ ಉದ್ದಿ ತೆಗೇಕಾರೆ ಅದಕ್ಕೆ ಸೀಸ ತುಂಬಿದ ಬ್ರೆಷ್ಷು ಬೇಕು.

ಹಾಂಗೆ, ಈ ವಿದ್ಯಾಗರ ಹೊಟ್ಟಿದ ಮತ್ತೆ ಐದಾರು ತಿಂಗಳು ಇಡೀ ಊರಿಂಗೆ ಊರೇ ಈ ಕೆಲಸ ಮಾಡಿದ್ದಾದ. ಪ್ರತಿ ನಿಮಿಷ, ಪ್ರತಿ ಘಂಟೆ, ಪ್ರತಿ ದಿನ – ಈ ವಿಕಿರಣ ಸೂಸುವ ವಸ್ತುಗಳ ತೆಗವದು.

ಅಲ್ಲದ್ದರೆ ಮುಂದಾಣ ತಲೆಮಾರು ಒಳಿಯ!!

ಎಷ್ಟೋ ಸಾವಿರ ಮೈಲಿಂಗೆ ಈ ವಿಕಿರಣ ಎತ್ತಿರೂ, ಆ ಪರಿಸರಲ್ಲಿ ಅಂತೂ ಗಂಭೀರ ಸ್ವರೂಪಲ್ಲಿ ಇದ್ದತ್ತಡ.

ಆ ದಿನ ಅಲ್ಲಿ ವಿಕಿರಣ ಸೂಸುವ ವಸ್ತುಗೊ ಹೇಂಗೆ ಹಾರಿಕ್ಕು – ಹೇದು ಕಲ್ಪನೆ ಮಾಡ್ಳೆ ಪುತ್ತೂರು ಭಾವನ ಕುಕ್ಕರು ವಿಸಿಲು ಹಾರಿ ತೋವೆ ರಟ್ಟಿದ್ದು ಕಂಡು – ಕಲ್ಪನೆಗೆ ಸುಲಭ ಆತು!

~

ಚರ್ನೋಬೈಲಿಲಿ ಈ ಘಟನೆ ಆದ್ಸು ಸುಮಾರು ಇಪ್ಪತ್ತೆಂಟು ಮೂವತ್ತು ಒರಿಶ ಹಿಂದೆ ಅಡ.

ಆದರೂ – ಅಂಬಗ ಉಂಟಾದ ಹಾನಿ ಇಂದಿಂಗೂ ಇದ್ದಾಡ.

ಪುತ್ತೂರು ಭಾವನೂ ಹಾಂಗೇ, ಇಂದು ಎಷ್ಟೇ ಉದ್ದಿರೂ – ತೊಗರಿ ಗೊಂಪು ಒಂದು ರಜ್ಜ ಆದರೂ ಒಳಿಯದ್ದಿರ ಸಂದುಸಂದುಗಳಲ್ಲಿ.

ಆದರೆ ವಿಕಿರಣಲ್ಲಿ ಆರೋಗ್ಯ ಸಮಸ್ಯೆಗಳೂ ಬತ್ತನ್ನೇ!

ಭ್ರೂಣಕ್ಕೇ ತೊಂದರೆ ಆಗಿ ವಿಚಿತ್ರ ಸ್ವರೂಪದ ಮಕ್ಕೊ ಹುಟ್ಟುದು, ಹುಟ್ಟಿದ ಮತ್ತೆ ಬೇಗ ಸಾವದು, ಸಾಯದ್ರೂ ಮೈಲಿ ಕೈಲಿ ಗುಳ್ಳೆ ಏಳುದು, ಕೇನ್ಸರಿನ ಹಾಂಗಿರ್ತ ಮಹಾ ಮಾರಿಗೊ ಉಂಟಪ್ಪದು – ಇದೆಲ್ಲವೂ ಸಮಸ್ಯೆಗಳೇ.

~

ಮನುಷ್ಯನ ಒಂದೊಂದು ಹುಡ್ಕಾಣಲ್ಲಿ ಅಪ್ಪ ಅಪಾಯವ ಆ ಭೂಮಿತಾಯಿಯೇ ತಿನ್ನೇಕಾವುತ್ತು.

ಇದೆಲ್ಲವನ್ನೂ ಗರ್ಭಲ್ಲಿ ಹಾಕಿ ಸಹಿಸಿ ಕ್ಷಮೆ ಕೊಡ್ತ ಕಾರಣ “ಕ್ಷಮಯಾ ಧರಿತ್ರೀ” – ಹೇದು ಹೇಳುಸ್ಸು. ಅಲ್ಲದೋ?

~

ಪುತ್ತೂರು ಭಾವನಲ್ಲಿಂದ ಚೋಕ್ಲೇಟು ತಿಂದಿಕ್ಕಿ ಹೆರಡುವಾಗ ಇದೇ ಆಲೋಚನೆ ತಲೆಲಿ ತಿರುಗೆಂಡು ಇದ್ದತ್ತು.

ಮುಂದಕ್ಕಾದರೂ ಜಾಗ್ರತೆ ಮಾಡೇಕು – ಹೊಸ ಅನ್ವೇಷಣೆಗೊ ನಮ್ಮ ಮನುಕುಲಕ್ಕೆ ತೊಂದರೆ ಆಗದ್ದೆ ಇಪ್ಪ ಹಾಂಗೆ.

ಎಂತ ಹೇಳ್ತಿ?

~

ಒಂದೊಪ್ಪ: ಚರ್ನೋಬೈಲಿನ ದುರಂತ ಘಟನೆ ಇತರ ಬೈಲಿನೋರಿಂಗೆ ಪಾಠಕ್ಕಾತು. ಅಲ್ಲದೋ?

~

ಚೆರ್ನೋಬೈ ದುರಂತದ ಬಗ್ಗೆ ಹೆಚ್ಚಿನ ಮಾಹಿತಿ:

– ಲಿಂಕ್ ೧: ವಿಕಿಪೀಡಿಯಾ (http://en.wikipedia.org/wiki/Chernobyl)

-ಲಿಂಕ್ ೨ (http://en.wikipedia.org/wiki/Chernobyl_disaster)

3 thoughts on “ಬೇಳೆ ಬೇಷಿದ ಅಟ್ಟುಂಬೊಳ ನೆಂಪಾದ ಚರ್ನೋಬೈಲು..

  1. ಶುದ್ದಿ ಲಾಯಿಕಾಯಿದು, ಛೆರ್ನೋಬಿಲ್ ..ತೊಗರಿ ಗೊಂಪು

  2. ಒಹ್.. ವಿಷಯ ಮಂಡನೆ… ಎಂಥಾ ಒಕ್ಕಣೆ… ಲಾಯಿಕ ಆಯಿದು ಇದರೆಡಿಲಿಯೂ ಪುತ್ತೂರು ಭಾವನ ಅವಸ್ಥೆ ಕಂಡು ಭಾರೀ ಬೇಜಾರಾತು.. ಪುತ್ತೂರು ಭಾವನ ಅವಸ್ಥೆ ಕಂಡು ನೆಗೆ ಬಯಿಂದಿಲ್ಲೆ .. ಇನ್ನೊಬ್ಬನ ದುಃಖಲ್ಲಿ ನೆಗೆ ಮಾಡ್ಲಾಗಡ್ಡ ಹ್ಹ ಹ್ಹ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×