ಗೆಣವತಿಯ ಪ್ರತಿಷ್ಟೆ ಮಾಡ್ಳೆ ವಿಷದ ಮೂರ್ತಿಯೋ?

ಚೌತಿ ಬಂತು.
ಗೆಣವತಿಯ ವಿಶೇಷ ಆರಾಧನೆ ಮಾಡ್ತ ದಿನ.
ಹಾಂಗೆ ನೋಡಿರೆ, ಎಲ್ಲ ಕಾರ್ಯಂದಲೂ ಮೊದಲು ಗೆಣಪ್ಪಣ್ಣಂಗೇ ನಮಸ್ಕಾರ ಮಾಡ್ತ ಮರಿಯಾದಿ ನಮ್ಮದು.
ಅದರ್ಲಿಯೂ – ಎಲ್ಲ ದೇವರನ್ನೇ ನೆಂಪು ಮಾಡ್ತರೂ, ಮೊದಲು ಮಾಡುದು ಗೆಣವತಿಯ ಅಪ್ಪೋ.
ಕಾರ್ಯದ ಸುರುವಿಂಗೆ, ಕಾರ್ಯದ ಮಧ್ಯಮಧ್ಯಲ್ಲಿ, ಕಾರ್ಯಾಂತ್ಯಲ್ಲಿ – ಪುನಃ ಪುನಃ ದೈವಚಿಂತನೆ ಮಾಡೇಕು – ಹೇಳ್ತದು ಶಾಸ್ತ್ರ ಆಡ.
ಬೈಲಿನ ಆರಂಭಲ್ಲಿಯೂ ಗೆಣವತಿಗೆ ನಮಸ್ಕಾರ ಮಾಡಿದ್ದು. ಅಂಬಗಂಬಗಳೂ ಮಾಡ್ತಾ ಇದ್ದು.
ಈ ಸರ್ತಿ ಚೌತಿಗಪ್ಪಗ ನಾವು ಮಾತಾಡೇಕಾದ್ಸು – ಗೆಣವತಿ ಮೂರ್ತಿಗಳ ಬಗ್ಗೆ.
ಪೇಟೆಕರೆಲಿ ಆಚರಣೆ ಮಾಡ್ತವಲ್ಲದೋ – ಆ ಮೂರ್ತಿಗಳ ಬಗ್ಗೆ.
~
ಒಪ್ಪಣ್ಣ ಸಣ್ಣ ಇಪ್ಪಾಗ ಬೈಲಕರೆ ದೇವಸ್ಥಾನದ ಜೆಗ್ಲಿಲಿ ಸಣ್ಣಮಟ್ಟಿನ ಗೆಣವತಿ ಆರಾಧನೆ ಸುರು ಆತು.
ಅದರಿಂದ ಮದಲು ಗೆಣವತಿ ಹೋಮ ಇದ್ದತ್ತೇ ವಿನಃ – ಹೀಂಗೊಂದು ಮಣ್ಣಿನ ಮೂರ್ತಿ ಮಾಡಿ ಅದರ ಬೆಳ್ಳಕ್ಕೆ ಬಿಡ್ತ ಗವುಜಿ ನಮ್ಮ ಊರಿಲಿ ಇದ್ದತ್ತಿಲ್ಲೆ.
ಒಪ್ಪಣ್ಣ ಸಣ್ಣ ಇಪ್ಪಾಗ ಅದು ಬಂತು ನಮ್ಮ ಊರಿಂಗೆ.
ದೇವಸ್ಥಾನದ ಜೆಗಿಲಿಲಿ ಗೆಣವತಿ ಮೂರ್ತಿ. ಅದರ ನೋಡುದೇ – ಒಂದು ಹಬ್ಬ.
ಮಣ್ಣಿನ ಬಣ್ಣದ ಇಷ್ಟೆತ್ತರದ ವಿಗ್ರಹ; ಮಣ್ಣಿಲೇ ಮಾಡಿದ್ದು ಹಾಂಗಾಗಿ.
ಸರಿಯಾದ ಸೊಂಡಿಲು, ಕೋರೆಹಲ್ಲು, ಮೋರೆ, ಕಿರೀಟ ಎಲ್ಲ ಕಾಣ್ತ ನಮುನೆ ರಚನೆ.
ಒಂದು ಮರದ ಪೀಠಲ್ಲಿ ಮಡಗಿದ ಮೂರ್ತಿ.
ಉದಿಯಪ್ಪಗ ಗಣೇಶೋತ್ಸವ ಕಮಿಟಿಯವು ಹೋಪದು, ಗೆಣವತಿ ಮೂರ್ತಿ ಮಾಡ್ತ ಕೊಗ್ಗು ಆಚಾರಿಯ ಕೊಟ್ಟಗೆಗೆ.
ಇವು ಹೋಗಿ ಅಲ್ಲಿಗೆ ಎತ್ತಿದ ಮತ್ತೆ ಆ ಕೊಗ್ಗು ಮೂರ್ತಿಗೆ ಕಣ್ಣು ಬರವದು. ಪ್ರಕಾಶಮಾನವಾದ ಕಣ್ಣು – ಬೆಳಿ ಬಣ್ಣಕ್ಕೆ ಕಾಡಿಗೆ ಬೊಟ್ಟು ಹಾಕಿದ ಕಣ್ಣ ಬೊಂಬೆಗೊ.
ಕಣ್ಣು ಮಡಗಿದ ಕೂಡ್ಳೇ ಅದಕ್ಕೆ ದೈವಾಂಶ ಕೂಡುತ್ತಾಡ, ಹಾಂಗಾಗಿ ಕಣ್ಣ ರಚನೆ ಆದ ಮತ್ತೆ ಹೆಚ್ಚು ಪುರುಸೊತ್ತು ಇಲ್ಲೆ ಪ್ರಾಣಪ್ರತಿಷ್ಟೆಗೆ.
ಅಲ್ಲಿಂದ ಒಂದು ಪಿಕಪ್ಪಿಲಿಯೋ, ಜೀಪಿಲಿಯೋ ಮಣ್ಣ ಹಾಕಿಂಡು ಗೆಣವತಿ ಮೂರ್ತಿಯ ದೇವಸ್ಥಾನದ ಗೋಪುರಕ್ಕೆ ತಕ್ಕು.
ಅಲ್ಲಿ ನಮ್ಮ ಬಟ್ಟಮಾವ ಪ್ರಾಣಪ್ರತಿಷ್ಠೆ ಮಾಡಿರೆ – ಮತ್ತೆ ಮೂರೂ ಹೊತ್ತು ಪೂಜೆ.
~

ಸುರುವಿಂಗೆ ಒಂದು ದಿನ ಇದ್ದ ಆಚರಣೆ ಮತ್ತೆ ಮತ್ತೆ ಮೂರು ದಿನ ಆತು.
ಸುರುವಾಣ ದಿನ ಪ್ರತಿಷ್ಠೆ, ಮರದಿನ ಕಳುದು ಮತ್ತಾಣ ದಿನ ವಿಸರ್ಜನೆ – ಹೀಂಗೆ ಗವುಜಿ ಸುರು ಆತು.
ಗೆಣವತಿಯ ಕೂರ್ಸಿ ಈಚೊಡೆಲಿ ಗವುಜಿಯ ಸಾಂಸ್ಕೃತಿಕ ಕಾರ್ಯಕ್ರಮಂಗೊ.
ಒರಿಶಂದ ಒರಿಶ ಈ ಗೌಜಿ ಬೆಳೆತ್ತಾ ಇದ್ದು.
ಅದಿರಳಿ.
~
ಈಗ ಹೇಳುಲೆ ಹೆರಟದು ಎಂಸರ ಹೇದರೆ – ಆ ಗೆಣವತಿ ಮೂರ್ತಿಯ ಬಗ್ಗೆ.
ಆಗ ಹೇಳಿದಾಂಗೆ, ಮದಲಾಣ ಮೂರ್ತಿ – ಕೊಗ್ಗು ಆಚಾರಿಯ ಹಾಂಗೆ ನಮ್ಮ ಊರಿನ ಕಲಾವಿದರು ಮಾಡಿದ್ದದು.
ಅದಕ್ಕೆ ಜಾಸ್ತಿ ಆಯೆತ ಇಲ್ಲೆ. ಮಣ್ಣಿನ ಮೂರ್ತಿ ಹೇದರೆ ಮಣ್ಣು ಮಣ್ಣೇ ಕಾಂಗು.
ಕಾರ್ಯಕ್ರಮ ಎಲ್ಲ ಆದ ಮತ್ತೆ ವಿಸರ್ಜನೆ.
ವಿಸರ್ಜನೆ ಆಗಿ ಕೆಲವು ಗಂಟೆಲಿ ನೀರಿಲಿ ಒಂದಾಗಿ ಕರಗಿ ಹೋಕು.
ಎಷ್ಟಾದರೂ ಮಣ್ಣಲ್ಲದೋ…
~
ಈಗ?
ಆ ಒಂದು ಬೆಳಿ ವಿಷ ಬತ್ತಲ್ಲದೋ – ಪೇರಿಸ್ ಪ್ಲೇಷ್ಟರ್ – ಹೇದು.. ಅದರ್ಲಿ ಮಾಡಿದ ಮೂರ್ತಿಗೊ.
ಕಾಂಬಲೆ ಬೆಳಿ – ಬೆಳಿ; ಹೊರ್ಲೆ ಹಗುರ ಹಗುರ!
ಅದು ಕಾಂಬಲೆ ಬೆಳಿ ಆಗಿಕ್ಕು, ಆದರೆ ಅದು ಮಹಾ ವಿಷ.
ನಮ್ಮ ಆರಾಧ್ಯ ದೇವರ ವಿಷದ ಹೊಡಿಲಿ ಮಾಡಿ ಪೂಜೆ ಮಾಡುದೋ?
ಬೆಳಿ ಬಣ್ಣವ ಚೆಂದ ಮಾಡ್ಳೆ ಅದಕ್ಕೆ ಕೆಂಪು, ಕಪ್ಪು, ಕಂದು ಬಣ್ಣಂಗಳ ಮೆತ್ತುತ್ತ ಕ್ರಮವೂ ಇದ್ದು. ಅದು ಇನ್ನೂ ಹೆಚ್ಚು ವಿಷದ ಪೈಂಟುಗೊ. ಅದರಲ್ಲಿಯೂ ರಾಸಾಯನಿಕ ವಿಷಂಗೊ.
ದೇವರ ಉದ್ವಾಸನೆ ಆಗಿ ನೀರಿಂಗೆ ವಿಸರ್ಜಿಸುದೋ? ಆ ವಿಶ ನೀರಿನ ಮತ್ತೆ ಕುಡಿವದೋ?
ವಿಸರ್ಜನೆ ಆಗಿ ಒಂದು ತಿಂಬಳು ಕಳುದರೂ ಆ ಗೆಣವತಿ ಮೂರ್ತಿ ಹಾಂಗೇ ಹಾಳಾಗದ್ದೆ ಇರ್ತು ಕೆರೆಲಿ. ದೇವರಿಂಗೆ ತೃಪ್ತಿ ಅಕ್ಕೋ ಹಾಂಗಿತ್ತರಲ್ಲಿ?! ಅದರಲ್ಲಿಯೂ ನೀರಿಲಿ ಕರಗದ್ದೆ ದೇಹಂದ ಅಂಗಂಗ ಬೇರೆ ಬೇರೆ ಆಗಿ ತೇಲುದು ಕಾಂಬಗ ನವಗೆ ತಡಕ್ಕೊಂಬಲೆ ಎಡಿತ್ತೋ? ಛೆ!
ಒಟ್ಟಾರೆ ಹೇಳಿ ಸುಕ ಇಲ್ಲೆ.
~

ಈ ಸಂಗತಿ ಹಲವೂ ಸಮಯಂದ ನಮ್ಮ ಬೈಲಿಲಿ ಸುತ್ತುತ್ತಾ ಇದ್ದು.
ವಿಶಯುಕ್ತ ಮೂರ್ತಿಯ ತಪ್ಪಲಾಗ, ಆರಾಧನೆ ಮಾಡ್ಳಾಗ – ಹೇದು.
ಈ ಸರ್ತಿ ಆದರೂ ಅದರ ಪಾಲನೆ ಮಾಡುವನೋ?
ನವಗೆ ಮೊದಲಾಣ ಹಾಂಗೆ ಜೇಡಿಮಣ್ಣಿನ ಮೂರ್ತಿಯೇ ಅಕ್ಕು.
ಅದರ ತಂದು, ಪೂಜೆ ಮಾಡಿ ನೀರಿಂಗೆ ಬಿಟ್ಟಪ್ಪಗ – ಭುವಿಂದ ಸಿಕ್ಕಿದ್ಸು ಪುನಹ ಅಲ್ಲಿಗೇ ಹೋಗಿ ಸೇರ್ತು.
ಅದರಷ್ಟು ನೆಮ್ಮದಿಯ ಆರಾಧನೆ ಬೇರೆ ಇಲ್ಲೆ.
ಗೆಣವತಿಯ ಪೂಜೆ ಮಾಡ್ತ ಲೆಕ್ಕಲ್ಲಿ ನಮ್ಮ ನೆರೆಕರೆಯ ಮಣ್ಣು-ನೀರುಗಳ ಅಶುದ್ಧ ಮಾಡ್ತ ಕೆಲಸ ನಮ್ಮಂದ ಅಪ್ಪದು ಬೇಡ.
ಎಂತ ಹೇಳ್ತಿ?
~
ಎಲ್ಲೋರುದೇ ಸೇರಿ ಈ ಬಗ್ಗೆ ಜಾಗೃತಿ ಉಂಟುಮಾಡುವೊ°.
~
ಒಂದೊಪ್ಪ: ಗೆಣವತಿಗೆ ಎಲಿ ಬೇಕು. ಗೆಣವತಿ ಮೂರ್ತಿ ಮಾಡುವ ಬೆಳಿ ಪ್ಲಾಷ್ಟರ್ ಆಫ್ ಪ್ಯಾರಿಸ್ ಹೊಡಿಲಿ ಎಲಿಪಾಷಾಣ ಮಾಡ್ಳೆ ಆವುತ್ತಾಡ. ಗಣಪತಿ ವಾಹನ ಗಣಪತಿ ಮೂರ್ತಿ ಹತ್ರಂಗೆ ಬಪ್ಪಲೆಡಿಯ.

ಒಪ್ಪಣ್ಣ

   

You may also like...

4 Responses

 1. S.K.Gopalakrishna Bhat says:

  ಗಣೇಶನ ಹಬ್ಬ ಮಣ್ಣಿನ ಮೂರ್ತಿಲೆ ಮಾಡೆಕು.ಪಾರ್ವತಿ ಮಾಡಿದ ಮೂರ್ತಿ ಅವ.ಅವನ ಅಬ್ಬೆ ಅವನ ವಿಷ ಮೂಲಕ ಮಾಡಿದ್ದಿಲ್ಲೆ .

 2. ಸಕಾಲಕ್ಕೊದಗಿದ ವಿಷಯ.
  ಮಣ್ಣಿಲ್ಲಿ ಮಾಡಿದ, ಮಾಡುವ ,ದೇವರು ಗಣಪತಿ. ಹಾಂಗೇ ಮೂಲಾಧಾರಲ್ಲಿ ಕೂದಂಡಿಪ್ಪ ಏಕಮಾತ್ರ ದೇವರು.ನಮ್ಮ ಚಲನ-ವಲನಕ್ಕೆ ಮೂಲಧಾರವೇ ಮೂಲ!.
  ಹಾಂಗೇ ದೊಡ್ಡಕೆಮಿ ಹೆಚ್ಚು ಕೇಳ್ಲೆ, ಅಂತರ್ಮುಖಿಯಾಗು ಹೇಳಿ ಸಣ್ಣ ಕಣ್ಣು. ಮುರಿದ ದಾಡೆ, ಅಹಂಕಾರವ ಮುರಿವ ಸಂಕೇತಾಡ. ಗಣಪತಿಗೆ ಗರಿಕೆ ಶ್ರೇಷ್ಠ ಎಂತಕೇಳಿರೆ;ನಮ್ಮ ಬೆನ್ನುಹುರಿಗೂ ಗರಿಕೆಗೂ ಒಂದೇ ಸಾಮ್ಯ..
  ಹಾವು ಮತ್ತೆ ಇಲಿ ಪರಿಸರ ರಕ್ಷಣೆಯ ಸಂಕೇತ. ಆನೆಯ ತಲೆ ಬುದ್ಧಿಶಕ್ತಿ ಹೆಚ್ಚು ಬೇಕಾದ ಸಂಕೇತ. ಇದೆಲ್ಲಾ ನೀರ್ಚಾಲು ಶಾಲೆಲಿ ಕಿಳಿಂಗಾರು ಕೇಶವ ಮಾಸ್ಟ್ರು ಹೇಳಿದ್ದಿದ್ದವು(ಸಂಸ್ಕೃತ ಪಂಡಿತರು). ಅವು ಹೇಳುಗು.

 3. ಒಪ್ಪಣ್ಣೋ,
  ಗೆಣಪತಿ ಚಾಮಿಯ ಶುದ್ದಿ ಎಷ್ಟು ಸರ್ತಿ ಬರದರೂ ಕಡಮ್ಮೆಯೇ ಅಲ್ಲದೋ?
  ನಮ್ಮ ಹೆರಿಯೋರು ಪ್ರಕೃತಿಲಿ ಒಂದಾಗಿ ಇದ್ದು ನಮ್ಮ ಆಚರಣೆಗಳ ಮಾಡುವ ಬಗ್ಗೆ ನವಗೆ ಹೇಳಿ ಕೊಟ್ಟದು. ಈಗಾಣ ಜನಂಗಳ ಅತಿರೇಕ ಬುದ್ಧಿಂದಾಗಿ ಊಟಲ್ಲಿಯೂ ವಿಷವೇ ತುಂಬಿತ್ತು ನಾವು ಮಾಡುವ ಆಚರಣೆಲೂ ವಿಷವೇ ಆತು. ಇದರಂದ ಹೆರ ಬಂದು ಪುನಾ ಮೂಲಕ್ಕೆ ಹೋಪ ಪ್ರಯತ್ನ ಮಾಡೆಕ್ಕು ಹೇಳಿ ಒಪ್ಪಣ್ಣ ಶುದ್ದಿಲಿ ಹೇಳಿಕೆ ಕೊಟ್ಟದು ಶೋಕಾಯಿದು.
  ಗಣಪತಿ ಚಾಮಿ ಎಲ್ಲೋರಿಂಗೂ ಒಳ್ಳೆದು ಮಾಡಲಿ..

 4. ಬೊಳುಂಬು ಗೋಪಾಲ says:

  ಒಳ್ಳೆ ಶುದ್ದಿ. ಮನ್ನೆ ಮಠಲ್ಲಿ ಗೋಮಯಲ್ಲಿ ಮಾಡಿದ ಗೋ-ಗಣಪತಿಯ ನೆಂಪಾತು. ಅದು ತುಂಬ ಚೆಂದ ಆಗಿತ್ತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *